ಸಣರೆ ಸ್ತೋತ್ರ ಸತ್‌ಗುರು ಕರ್ಲೇನ
ಗುರು ಭೀನಾ ಮಾರ್ಗ ಛೇನಿ ಗಪ್‌ಚುಪ್ ನ ರೇಣುರಾಂ
ಈ ಮಾದೇವಜಿ ಮನಕ್ಯಾ ಬಣಾಯೋ
ಆನ್‌, ಧನ್, ದೇನ ಸಾರಿ ಬಣಾಯೋ ರಾಂ,
ಸೇರೇಪರ್ ರೇಣುರಾಂ, ಸಣರ್ ಸ್ತೋತ್ರ ಸತ್‌ಗುರು ಕರಲೇನ”

ಅರ್ಥ: ಕೇಳು ಸ್ತೋತ್ರ, ಗುರುವಿಲ್ಲದ ಮಾರ್ಗ ಸಿಗದು. ಸುಮ್ಮನೆ ಕೂಡ್ರದೆ ಗುರುವಿನ ಧ್ಯಾನ ಮಾಡು. ಮಹಾದೇವನು ಮನುಷ್ಯರಿಗೆ ಸೃಷ್ಟಿಸಿದ, ರಾಮನು ಹಗಲು ರಾತ್ರಿ ಎನ್ನದೆ ಪಿಂಡಾತ್ಮ ತಯಾರಿಸಿದನು. ಸತ್ ಗುರುವಿಗೆ ಭಜಿಸು ಅದರಲ್ಲಿ ಮುಕ್ತಿ ಸಿಗುವುದು.

“ಈ ಮಾದೇವಜಿ ಮನಕ್ಯಾ ಬಣಾಯೋ
ತೀನ ಹಾತೇರೋ ಉಂಚೋ ಪೂರೋ
ಹಾತ ಪಗೇಮ ತಾಕತ ವತಾರೋ
ಭಲೋ ತಾಕತ ವತಾರೋ ರಾಂ
ನಗೋರೇ ನಹೀ ರೇಣಾರೇ ಸತ್ ಗುರು ಭಜಲೇನ”

ಅರ್ಥ : ಮಹಾದೇವನು ಮನುಷ್ಯರಿಗೆ ಸೃಷ್ಟಿಸಿದ. ಮೂರು ಮೊಳ ಎತ್ತರ ಕೈ ಕಾಲುಗಳಲ್ಲಿ ಶಕ್ತಿ ತುಂಬಿ ಒಳ್ಳೆಯದನ್ನೇ ಮಾಡಿದ. ಸುಮ್ಮನೆ ಕೂಡ್ರದೆ ಸತ್‌ಗುರುವಿಗೆ ಭಜಿಸು.

“ಈ ಮಾದೇವಜಿ ಮನಕ್ಯಾ ಬಣಾಯೋ
ಆಟ ವೇತೇರೋ ಮನಕ್ಯಾ ಬಣಾಯೋ
ಸೋಳ ಪಾಗಡಿ ಬಾಹತ್ತರ ಕೊಠಡಿ
ಸತ್ರ ವಿದ್ಯಾರಿ ಕಲಾ ಬಣಾಯೋ

ಸೈಪನೆರೋ ಧಾಗ ಬಣಾಯೋ
ಏಕೇವೀಸ ಖಾಸೇರೋ ಖಾಮಲ ಗಾಯೋ
ನಿರಂಜನೇಮ ಬೇಟೋ ರಾಂ
ನಗೋರೇ ನಹೀ ರೇಣಾರೇ ಸತ್‌ಗುರು ಭಜಲೇನ”

ಅರ್ಥ : ಮಹಾದೇವನು ಮನುಷ್ಯರಿಗೆ ಸೃಷ್ಟಿಸಿದ. ಎಂಟು ಗೇಣ ಎತ್ತರದ ಮನುಷ್ಯನಿಗೆ ಸೃಷ್ಟಿಸಿದ. ತಲೆಗೆ ಹದಿನಾರು ಮೊಳದ ರುಮಾಲು(ಪೇಟ) ಸುತ್ತಿದ. ಎದೆಯೊಳಗೆ ಎಪ್ಪತ್ತೆರಡು ಪಕ್ಕೇಲುಬು ಜೋಡಿಸಿದ. ಹದಿನೇಳು ವಿದ್ಯೆಗಳನ್ನು ತುಂಬಿದ. ಕರಳುಗಳನ್ನು ದಾರದಂತೆ ಹಣೆದ. ಇಪ್ಪತ್ತೊಂದು ಗುಣಗಳನ್ನು ತುಂಬಿದ. ನಿರಂಜನದಲ್ಲಿ ಬೆಳೆಯುವ ಮಾನವ ಸುಮ್ಮನೆ ಕೂಡ್ರದೆ ಸತ್ ಗುರುವಿಗೆ ಭಜಿಸು.

“ಮಾದೇವಜಿ ಮನಕ್ಯಾ ಬಣಾಯೋ
ದಯಾ ಗಾಮೇಪರ, ಕಾಚೋ ಕಚನೆರೋ ಬಂಗಲಾತಾರೋ
ಏ ಬಂಗಲಾಮ ಜೀವ ನಾಯಕ, ಮನು ಕಾರಭಾರಿ
ಪಾಂಚಿ ತತ್ವೇರಿ ವತಾರೋ ರಾಂ…
ನಗೋ ನಗೋ ನಹಿ ರೇಣಾರೇ ಸತ್‌ಗುರು ಭಜಲೇನ”

ಅರ್ಥ : ಮಹಾದೇವನು ಮನುಷ್ಯರಿಗೆ ಸೃಷ್ಟಿಸಿದ. ಶರೀರ ಅನ್ನುವಂತ ಊರೊಳಗೆ ಅರೆಬರೆಯಾದ ಒಂದು ಮನೆ. ಆ ಮನೆಯಲ್ಲಿ ಜೀವಾತ್ಮನೆ ನಾಯಕ. ಮನಸ್ಸೇ ಕಾರ್ಯದರ್ಶಿ. ಐದು ತತ್ವದ ಮಾರ್ಗದರ್ಶನ, ಶಕ್ತಿ-ಸಾಮಾರ್ಥ್ಯ ಒದಗಿಸಿದ ರಾಂ…. ಸುಮ್ಮನೆ ಕೂಡ್ರದೆ ಸತ್‌ಗುರುವಿಗೆ ಭಜಿಸು.

“ಮಾದೇವಜಿ ಮನಕ್ಯಾ ಬಣಾಯೋ
ಏ ಮನಕ್ಯಾನ ಅಹಂಕಾರ ಭಾರಿ
ಧನ್ ಸಂಪತ್ ವೇಜಾವ ಸಾರಿ
ಮಾ ಬಾಪೇತಿ ಛೇಟಿ ವಾಸ
ನರಕೇನ ಜಾಣೋ ಲಾಗೋ ರಾಂ.
ಗಪ್‌ಚುಪ್ ನರೇಣೂರೇ ಸತ್‌ಗುರು ಭಜಲೇನ”

ಅರ್ಥ: ಮಹಾದೇವನು ಮನುಷ್ಯರಿಗೆ ಸೃಷ್ಟಿಸಿದ. ಮನುಷ್ಯರಿಗೆ ಅಹಂಕಾರ ಬಹಳ. ಧನ-ಧಾನ್ಯ ಸಂಪತ್ತೆಲ್ಲ ಗಳಿಸಿದ. ತಾಯಿ-ತಂದೆಯರಿಗೆ ನೋಡದಿದ್ದರೆ ನರಕಕ್ಕೆ ಹೋಗಬೇಕಾಗುವುದು. ಸುಮ್ಮನೆ ಕೂಡ್ರದೆ ಸತ್‌ಗುರುವಿಗೆ ಭಜಿಸು.