“ಹರಘಡಿ ರಾಮೇನ ಭಜೋ
ಕೂಂ ಬೇಟೆ ಗಪ್‌ಚುಪರ
ಧರಮಕರೇನ ಹಾತದಿನೋ ರಾಂ
ಭಜೇನ ಮೂಕರ ಅಂಥಃಕರಣ
ಸೋಚತೋ ವೈಕುಂಠೀರಿ ವಾಟ”   || ೧ ||

ಅರ್ಥ: ಪ್ರತಿ ಕ್ಷಣದಲ್ಲೂ ರಾಮನಿಗೆ ಭಜಿಸದೆ ಏಕೆ ಕುಳಿತಿರುವಿರಿ? ದಾನ-ಧರ್ಮ ಮಾಡಲಿಕ್ಕೆ ಕೈ ಕೊಟ್ಟಿದ್ದಾನೆ. ಮೂಕರ ಹಾಗೆ ಕುಳಿತುಕೊಂಡರೆ ಪ್ರಯೋಜನವೇನು? ಒಳ್ಳೆಯದನ್ನು ಮಾಡಿದರೆ ವೈಕುಂಠಕ್ಕೆ ಮಾರ್ಗವಿದೆ.

“ಮಾ-ಬಾಪೇನ ದೋಯಿ ಹಾತ ಜೋಡುನಿರೇ
ಬೋಲ ಸೇವಾಲಾಲರೇ…. ಬಾವಾಲಾಲ
ಕಸೇನವಿಯ ಏ ಜೀವೇರೋ ಹಾಲರ
ಆಂಕಿರೇನ ಆಂದಿವೇಗಿ, ಕಾನರೇನ ಬೇರೇವೇಗೆ
ಜ್ಞಾನಿವೇನ ಪಶು ಬಣಗೋ ಕರಮೇರಿ ಗಾತಾರ
ಛಟ್ಟಿ ಲಕಿ ಲಕಣಿ ತೋ, ಬ್ರಹ್ಮಾ ಮಾರದಿನೋ ಟಾಂಕ” || ೨ ||

ಅರ್ಥ: ತಾಯಿ-ತಂದೆಗೆ ಕರ ಮುಗಿಯುವೆ. ಓ…… ಕುಲಗುರು ಸೇವಾಲಾಲ ಏತಕ್ಕೆ ಈ ಶರೀರದ ಅವಸಾನ. ಕಣ್ಣಿದ್ದರೂ ಕುರುಡನಾದೆ, ಕಿವಿಯಿದ್ದರೂ ಕಿವುಡನಾದೆ, ಜ್ಞಾನಿಯಿದ್ದು ಪಶುವಂತೆ ವರ್ತಿಸಿದೆ. ಇದು ಕರ್ಮದ ಫಲ. ಶೆಟವಿ ಬರೆದ ಹಣೆಬರಹಕ್ಕೆ ಬ್ರಹ್ಮನ ಮುದ್ರೆ ಒತ್ತಿದೆ.

“ಮಾರೇ ಪ್ರಭೂನ ಹಾತ ಜೋಡುನಿರೇ
ಅಗ್ನಿ ಹೋತ ಮರ್ಯಾಮಾ ನರಧಾರಿ ಆಯಿವಾಳೋ
ಚಾರವೇದ ನಮಖಂಡೇಮ ಬೇಟೋ ಸೇವಾಭಾಯಾ
ಕಾಯಾಗಡೇತಿ ನಳ ಮಂಗಾಯೇ
ನರಮಳ ವೇಗಿ ಕಾಯ
ಹರದೇಮ ಧೂಂಡಲ ದಯಾಳ ಸೇವಾಭಾಯಾನ”    || ೩ ||

ಅರ್ಥ: ಸೇವಾಲಾಲನಿಗೆ ಕರ ಮುಗಿಯುವೆ. ಅಗ್ನಿಯಂತೆ ಪ್ರತಿಬಿಂಬಿಸುವ ಮರಿಯಮ್ಮಳ ಭಕ್ತ ನೀನು. ನಾಲ್ಕು ವೇದ ನವಖಂಡದಲ್ಲಿ ಹೋಗಿ ಕುಳಿತಿರುವಿ. ಕಾಯಾಗಡದಿಂದ ವಸ್ತು ತರಿಸಿದ ಸಿದ್ಧಿ ಪುರುಷ. ಮನಸ್ಸಿನಲ್ಲಿ ವಿಚಾರಿಸಿ ಭಕ್ತರಿಗೆ ಕರುಣೆ ತೋರು.

“ಗುರುಲಾಲೇನ ದೋಯಿ ಹಾತ ಜೋಡುನಿರೇ
ಖೀರ ಪ್ರಸಾದ ಧೂಣಿ ಭಗವಾನ
ಪೋರಿಯಾಗಡೇಮ ಅವತಾರ, ಪಲಂಗೇಪರ ಬೇಟೋರ
ರಾಂ ತೇರೆ ಹಾತರೇ, ಮಹಾಕಲಿ ಅವತಾರ
ಧೂಜಾಯೋ ತೀನಿ ತಾಲರ
ಭೀರು ಜೋಗಣಿ ಛಾಬಾ, ಲಗೀಜನ ಮನ ತೋಳಾರಾಮ
ಸೇರೆ ಮಾತೇಪರ ಹಾತ, ಗೋರ ಜೋವರೇಜ ವಾಟರ”         || ೪ ||

ಅರ್ಥ: ಸೇವಾಲಾಲನಿಗೆ ಖೀರ ಪ್ರಸಾದದಿಂದ ಪೂಜಿಸಿ ಕೈ ಜೋಡಿಸುವೆ. ಪೋಹರಾ ದೇವಿಯಲ್ಲಿ ನಿಮ್ಮ ಅವತಾರ. ಆಸನದ ಮೇಲೆ ಕುಳಿತಿರುವಿರಿ. ರಾಮನು ನಿಮ್ಮ ಕೈಯಲ್ಲಿ, ಮಹಾಕಲಿ ಅವತಾರ, ಕುದುರೆಯ ಮೇಲೆ ಸವಾರಿ, ಮೂರು ಲೋಕವನ್ನೇ ನಡುಗಿಸಿದೆ. ಮಾಟ-ಮಂತ್ರಗಾರರು ಬೆರಗಾದರು. ಎಲ್ಲರ ತಲೆಯ ಮೇಲೆ ಕೈ, ಬಂಜಾರುಗಳು ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದಾರೆ.

“ಸೇವಾಲಾಲ ಜಲಮಲಿದೋ ಸಿಕೇರೋ ಅವತಾರ
ಜಲಮೋಚಿ ಅವತಾರಿರೇ ಗೋರವಟೇರ ಮಾಯಿ
ಚಕ್ರ ಪದ್ಮ ಸೋಳ ತಾರೇ ಹಾತೇಮಾಯಿ
ತೀನ ತಾಲೇಮ ಚಕ್ರ ಘೇರಾಯೋ, ವಿಷ್ಣು ಸೇವಾಲಾಲರ
ಅಂತರ ಜಮಿಮಾಳ ಜಪಗೋರ ಆಯಿವಾಳೋ”       || ೫ ||

ಅರ್ಥ: ಸೇವಾಲಾಲ ಸೀಖ ಧರ್ಮದಲ್ಲಿ ಜನಿಸಿರುವಿ. ಬಂಜಾರುಗಳಲ್ಲಿ ಅವತಾರಿ ಪುರುಷ ನೀವು. ನಿಮ್ಮ ಕೈಯಲ್ಲಿ ಹದಿನಾರು ಚಕ್ರ ಪದ್ಮಗಳಿವೆ. ಮೂರು ಲೋಕದಲ್ಲಿ ಚಕ್ರ ತಿರುಗಿಸಿದೆ ವಿಷ್ಣು ಸೇವಾಲಾಲ. ಎಲ್ಲಿ ಅಡಗಿರುವಿಯೋ ನಿಮ್ಮ ಲೀಲೆ ಯಾರಿಗೂ ತಿಳಿಯದಾಗಿದೆ.

“ವಡತೋ ಪಂಕಿಯಾರ ಛೇನಿ ಈ ದರಬಾರ
ನವಖಿಡಕಿರೋ ಬಣೋ ಪಿಂಜರೋ, ಕುಲಪತಿ ಪಡ ದರವಾಜ
ಆಯೇನ ಕಠೀಣ ಲಾಗೋ, ಜಾಯೇನ ದರವಾಜ ಸರಳ
ರೋಜ  ಭೋಜನ ಖರಾವು, ಪರಾಂಪು ಸಣಗಾರರ ಮಲಮಲ
ಅಂತರಫೂಲ ಲಗಾಂವು ಮಾನೇನಿ ಉಪಕಾರರ
ಕೋಟ ಭಂದಾಯೋ ಕಿಲೋ ಭಂದಾಯೋ ಭಂದಾವ ಹಜಾರರ
ಸೇವಾಲಲ ಕೆಗೋಜೇನ ಭುಲಗೋ ಭಗವಾನರ”  || ೬||

ಅರ್ಥ: ಹಾರಾಡುವ ಪಕ್ಷಿಗಳ ದರ್ಬಾರಲ್ಲ, ಒಂಬತ್ತು ಕಿಡಕಿಗಳಿಂದ ಕೂಡಿದ ಪಿಂಜರ; ಅದಕ್ಕೆ ಬೀಗ ಹಾಕಿದೆ. ಬರುವ ದಾರಿ ಸುಲಭವಲ್ಲ; ಹೋಗುವ ದಾರಿ ಸುಲಭ. ನಿತ್ಯವೂ ಒಳ್ಳೆಯ ಆಹಾರ-ಪಾನೀಯಗಳನ್ನು ಶರೀರಕ್ಕೆ ಶೃಂಗಾರ. ಮನಸ್ಸಿಗೆ ಆನಂದ ಹಲವಾರು ಮನೆ-ಮಠಗಳನ್ನು ಕಟ್ಟಿಸಿದೆ. ಸೇವಾಲಾಲರು ಹೇಳಿದ ಹಿತನುಡಿಗಳನ್ನು ಮರೆತಿದ್ದಾರೆ ಭಗವಂತನೆ.

“ಪಕಟಿ ವಾಚಲೇನ ಪಪಸೋಬತ ಲಾಯೋ
ಯಮಘರೇರೋ ಫಾಂಸಿ ತಾರೇಗಳೇಮ ಪಡಜಾಯ
ನವರತನ ದೇಹೀಕ ತಾರೆ ನರಕೇನ ಜಾಯ
ಲಕ ಚೌರಾಸಿ ಫೇರೋ ಫೇರಾಯೋ ಗಾದಿವಾಳೋ ” ||೭||

ಅರ್ಥ: ದುಷ್ಟನಿಗೆ ಪಾಪ ಬೆನ್ನಟ್ಟುವುದು ಮರೆಯಬೇಡ. ಯಮನ ಮನೆಯ ಹಗ್ಗ ಕೊರಳಿಗೆ ಬೀಳುವುದು ಮರೆಯಬೇಡ. ಪಾಷಿಷ್ಟನಿಗೆ ನರಕ ತಪ್ಪದು. ಸೇವಾಲಾಲ ಸ್ಮರಣೆಯಿಂದ ಭಕ್ತಿಮಾರ್ಗ ಹಿಡಿದು, ಸ್ವರ್ಗದ ದಾರಿ ಕಾಣು.

” ಆತಂಜೋತಿ ನಂಜರ ನಹಿ, ಆಯಿಭಾಯಾರಿ ಚಮಕಚ ಮೋತಿ
ನಂಜರ ನಹಿಯಾವ, ತೇಲನಹಿ ಬತ್ತಿಬಿಜತೆ ಸಹಿಯಾವ
ಚಾರವೇದ ನವಖಂಡ ಭವನೇಮ ಬೇಟೋ ಸೇವಾಭಾಯಾರ
ದೇವಳೇಮಾಯಿ ನಂಗಾರಾವಾಜ ಶ್ರೀ ಸೇವಾಭಾಯರ ” ||೮||

ಅರ್ಥ: ಆತ್ಮಜ್ಯೋತಿಗೆ ದೃಷ್ಟಿಯಿಲ್ಲ. ಸೇವಾಭಾಯಾನ ಕಿರೀಟದ ಮಣಿ ಮಿನುಗುತ್ತಿದೆ. ದೃಷ್ಟಿ ತಾಕುವುದಿಲ್ಲ. ಎಣ್ಣೆಯಿಲ್ಲದೆ ಉರಿಯುವ ಜ್ಯೋತಿ ವೇದಾಂತಿಯಾದ ನೀನು ನವಖಂಡ ಭುವನದಲ್ಲಿ ಕುಳಿತಿರುವಿ. ಮೂರು ಲೋಕದ ಸೂತ್ರಧಾರ ನಿನ್ನ ಮಠದಲ್ಲಿ ಭಜನೆಯ ಮೇಳ, ಭಾರಿ ನಗಾರಿಗಳ ವಾದ್ಯ ಮೊಳಗುತ್ತದೆ.


[1]      ಕರ್ನಾಟಕ ಭಾರತಿ : ಸಂಪಾದಕರು, ಡಾ.ವೀರಣ್ಣ ರಾಜೂರ, ಡಾ.ಅಶೋಕ ಶೆಟ್ಟರ, ಸಂ.೩೭, ಸಂಚಿಕೆ ೧-೨ (ಜನೇವರಿ ಮತ್ತು ಜುಲೈ ೨೦೦೦), ಪ್ರಸಾರಾಂಗ, ಕ.ವಿ.ವಿ. ಧಾರವಾಡ, ನಿಯತ ಕಾಲಿಕೆಯಲ್ಲಿ ಪ್ರಕಟವಾದ ಲೇಖನದ ವಿಸ್ತೃತರೂಪ.