“ಆದ್ಯಾವಂತಿ ರಾಜಾ, ರಾಜಪ್ ಮೋಹನ್
ಲಗೇ ಖಾಕ್, ಹುಯೇ ದಿಲ್‌ಪಾಕ್
ಹುಯೋ ಆಪೋ ಆಪ್ ಸತ್ ಸ್ರೀ ರಾಂ…
ಪಾಪ ಗಯ, ಪುನ್ಯ ಆಯ್
ಅನ್, ಧನ್, ಮನ್, ತನ್….”

ಅರ್ಥ : ಸರ್ವರಿಗೂ ಪ್ರಿಯವಾದ ಶ್ರೀರಾಮನೆ, ನಿಮ್ಮ ಸ್ಮರಣೆಯಿಂದ ಮನಸ್ಸು ಹಗುರಾಗಿದೆ. ಪಾಪ ಹೋಗಿ ಪುಣ್ಯ ಬಂತು. ಸಿರಿ ಸಂಪತ್ತು, ಐಶ್ವರ್ಯ ಲಭಿಸಿ ಆತ್ಮ ಪುಳಕಿತವಾಯಿತು.

“ಮಾಯೇಜಾವ ಬಾಪೇಜಾವ, ಕಾಯಿತಾರಿ ಜಿನಗಾನೀರೆ
ಕಾಯಗಡೇಮ ನಾಸ ವೇಗೊ, ಕಾ ಬಣೋ ಅಭಿಮಾನೀರೆ
ಏ ಅಹಂಕಾರೇತಿ ಕುಣ ಕುಣ ಡುಬಗೆ ಜೇನ ಸಣಲಸಕಾನೀರೆ
ರಾಜಾ ಕಂಸ, ರಾವಣ ಡುಬಗೋ, ಜೇರ ಪತ್ತೋಛೇನೀರೆ
ಹರಿ ಭಜನೇತಿ ಕುಣ ಕುಣ ತರಗೆ ಜೇನ ಸೋಚಸಕಾನೀರೆ
ಬಸವೇಶ್ವರ, ತುಳಸಿದಾಸ, ಹರಿಚಂದರಾಜಾ ಸತ್ತೇಧಾರೀರೆ
ಸೇವಾಲಾಲ ಬಚನೇಮ ಬೋಲೊ ಸೆಣಲೋ ಗೋರವಾತರೆ
ವೊರೆ ಬಚನೇಮ ಅಮೃತಭರೋ ಜೇನ ಪೀವಸಕಾನಿರೆ”

ಅರ್ಥ: ತಾಯಿ-ತಂದೆ ಹೋದರು. ಏನು ನಿನ್ನ ಅಸ್ತಿತ್ವ; ಸರ್ವಸ್ವವನ್ನೇ ಕಳೆದುಕೊಂಡಿರುವಿ, ಏತಕ್ಕೆ ಅಭಿಮಾನಿಯಾದೆ. ಈ ಅಹಂಕಾರದಿಂ ಯಾರ್ಯಾರು ಮುಳುಗಿ ಹೋದರು. ಗೊತ್ತಿಲ್ಲವೇ? ರಾಜಕಂಸ, ರಾವಣ ಹೆಸರಿಲ್ಲದೆ ಮುಳಗಿ ಹೋದರೂ, ಹರಿಯ ಸ್ಮರಣೆಯಿಂದ ಯಾರ್ಯಾರೂ ಪ್ರಸಿದ್ಧರಾದರು. ಅಂಥವರನ್ನು ನೆನೆದುಕೋ, ಬಸವೇಶ್ವರ, ತುಳಸಿದಾಸ, ಸತ್ಯವಂತ ಹರಿಶ್ಚಂದ್ರರಾಜ ಮುಂತಾದವರು. ಲಂಬಾಣಿ ಬಂಧುಗಳೇ ಸೇವಾಲಾಲ ಹೇಳಿದ ವಚನವನ್ನು ಸ್ಮರಿಸಿಕೊಳ್ಳಿ. ಅವರ ವಚನದಲ್ಲಿ ಅಮೃತ ತುಂಬಿಕೊಂಡಿದೆ ಅದನ್ನು ಪಾಲಿಸಿರಿ.

“ಮಾರೆ ಗುರೂನ ದೋಯಿ ಹಾತ ಜೋಡುನೀರೆ
ನೇಕಿನ ಬದಿ ದೋಯಿ ಬಡತೀರೆ ಆವ
ಸಾಸೋ ಬೋಲ ನೇಕಿ ರಾಂ……..
ಆಡಣಯಾವ ಜೂಟಮತ ಬೋಲ ನೇಕಿ ರಾಂ……
ಗೋದರ ಜಾವ ಸೇವಾಲಾಲೇರಿ
ಮರಿಯಾಮಾ ಸೋಟ ತೋಲತಿ ಆವ”

ಅರ್ಥ: ನನ್ನ ಗುರುವಿಗೆ ಕರ ಮುಗಿಯುವೆ. ಒಳ್ಳೆಯದು ಕೆಟ್ಟದ್ದು ಎರಡು ಬೆಳೆಯುತ್ತ ಹೋಗುತ್ತದೆ. ಸಂದರ್ಭ ಬಂದಾಗ ಸತ್ಯವನ್ನೇ ನುಡಿ, ಸುಳ್ಳಾಡಬೇಡ. ಒಂದು ವೇಳೆ ಸುಳ್ಳಾಡಿದರೆ ಸೇವಾಲಾಲನಿಗೆ ದ್ರೋಹ ಬಗೆದಂತೆ. ಮರಿಯಮ್ಮ ಕಾಯುತ್ತ ಕುಳಿತಿದ್ದಾಳೆ.