ನರಿಯ ಕಥೆ

ಅಡವಿ ೧ *ಯೊಳ್* ಒಂದುನರಿಯಾಹಾರಂಬಡೆಯದೆ ಬರಬರತ್ತೆ ಒಂದು ಸತ್ತ ಎತ್ತಂ ಕಂಡು ಸಡಗರಿಸಿ ಅದರ ಪೃಷ್ಠನಾಳದಿನೊಡಲೊಳಪೊಕ್ಕು ತಿನುತಿರ್ಪನ್ನೆವರಂ ನಿರ್ದ್ರವಮಪ್ಪುದೇ ಕಾರಣಮಾಗಿ ಕಡುವಿಸಿಲಿಂಗೆ ತಟ್ಟಾರಿದ ಚರ್ಮದಿಂ ಪೃಷ್ಠದ್ವಾರಂ ಮುಚ್ಚಲಾ ಜಂಬುಕಂ ತನಗೆಲ್ಲಿಯುಂ ಪೋಗಲಿಂಬಿಲ್ಲದೆ ಚಿಂತಾಕ್ರಾಂತನಾಗಿರಲನಿತರ್ಕೆ ಆವೂರ ಅಂತ್ಯಜರ್ ಸಾರಮೇಯಂಗಳಿನೆಯ್ತಂದು ಸತ್ತಿರ್ದಡ್ವಾಹನಂ ಕಂಡದಱ ಪೊಡೆಯಂ ಡಾಣೆಯಿಂ ಪೊಯ್ಯಲ್ಕೆ ಯಾಕ್ರೋಷ್ಟು ನಿರ್ವೋದಂಗೊಂಡೊಂದುಪಾಯಮಂ ಕಂಡು, ಎಲವೊ ಮ್ಲೇಚರುಗಳಿರಾ ! ಬ್ರಾಹ್ಮಣೋತ್ತಮನಪ್ಪ ನಾವೊಂದು ಪಾಪನಿವಾರಣಾರ್ಥವಾಗಿ ಗೋವಿನ ಜಠರಮಂ ಪೊಕ್ಕಿರ್ದೆವು. ನೀವೀ ಪಶುವಿನ ವೃಷ್ಟಕುಷ್ಣೋದಕಮಂ ತಂದೆರೆದು ದೂರಂ ಪೋಗಿಮೆನಲಾ ಶ್ವಪಚಕರ್ ಬೆದರಿಯಾ ಗೋವಿನ ಪೃಷ್ಠಭಾಗಕ್ಕೆ ಕಾಯ್ದನೀರಂ ತಂದೆಱೆದು, ಎಲೈ ಸ್ವಾಮೀ, ನಿವತ್ತಂ ಪೋ*ಗಿಮೆ*ನಲಾ ಸೃಗಾಲಂ, ಎಲೆ ಅಂತ್ಯಜರುಗಳಿರಾ, ನಾವು ಪೊಸಲಾಂಛನಧಾರಿಗಳಪ್ಪುದರಿಂ ನಿಮ್ಮೊಡನಿರ್ಪ ಜಾಯಿಲಂಗಳ್ ಕಂಡು ತಗುಳ್ದು ಬಂದೆಮ್ಮಂ ಕಡಿದುವಾದೊಡಾಂದೋಷಂ ನಿಮಗಪ್ಪುದಾಗಿಯಾ ಕುಕ್ಕುರಂಗಳಂ ಕಟ್ಟಿರ್ದ ಪಾಸಿನ ನೇಣಂ ನಿಮ್ಮ ಕರ್ಣದ್ವಾರದೊಳ್ ಬಂಸಿಕೊಳ್ಳಿಮೆನಲ ಕುನ್ನಿಗಳಂ ತಮ್ಮ ಶ್ರೋತ್ರನಾಳದೊಳ್ ತೊಡರ್ಚಿಕೊಂಬುದುಂ, ಬಳ್ಳು ಎತ್ತಿನುದರದಿಂ ಪೊಱಮಟ್ಟು ಓಡುವುದುಂ, ಶ್ವಾನಂಗಳ್ ಕಂಡು ತೂನುತ್ತಿರಲಾ ಚಂಡಾಲರ್ ತಮ್ಮ ಕಿವಿಗಳ್ ಪಱ*ಗುಮೆಂದು ಪಿಂದಕ್ಕೆ ತೆಗೆವುದೆ ಪೊತ್ತಾಗಲ್ ಬಳ್ಳುವತ್ತಂ ಪೋಗಿ ಗುಡ್ಡಮಂ ಪೊಕ್ಕುದು.

ಅಡವಿಯಲ್ಲಿ ಒಂದು ನರಿ ಆಹಾರವನ್ನು ಪಡೆಯದೆ ಅಡ್ಟಾಡುತ್ತಿರಲು ಒಂದು ಸತ್ತ ಎತ್ತನ್ನು ಕಂಡು ಸಡಗರಿಸಿ ಅದರ ಪೃಷ್ಠನಾಳದ ಮೂಲಕ ಒಳಹೊಕ್ಕು ತಿನ್ನತೊಡಗಿತು. ಬೇಸಗೆಯ ಕಡುಬಿಸಿಲಿಗೆ ಆ ಚರ್ಮ ನಿರ್ದ್ರವವಾಗಲು ಒಣಗಿದ ಚರ್ಮದಿಂದ ಅದರ ಪೃಷ್ಠದ್ವಾರವು ಮುಚ್ಚಿಹೋಯಿತು. ಆ ಜಂಬುಕವು ತನಗೆ ಎಲ್ಲಿಯೂ ಹೊಗಲು ದಾರಿಕಾಣದೆ ಚಿಂತಾಕ್ರಾಂತನಾಗಿರಲು ಅಷ್ಟರಲ್ಲಿ ಆ ಊರಿನ ಅಂತ್ಯಜರು ನಾಯಿಗಳೊಡನೆ ಅಲ್ಲಿಗೆ ಬಂದರು. ಆ ಸತ್ತ ಎತ್ತನ್ನು ಕಂಡು ಅದರ ಉಬ್ಬಿದ ಹೊಟ್ಟೆಗೆ ತಮ್ಮ ದೊಣ್ಣೆಯಿಂದ ಬಡಿದರು. ಒಳಗಿದ್ದ ನರಿಯು ನಿವೇದಗೊಂಡು ಒಂದು ಉಪಾಯವನ್ನು ಮಾಡಿತು. ಎಲವೋ ಮ್ಲೇಚರುಗಳಿರಾ ! ಬ್ರಾಹ್ಮಣೋತ್ತಮನಾದ ನಾವು ಒಂದು ಶಾಪನಿವಾರಣಾರ್ಥವಾಗಿ ಈ ಗೋವಿನ ಜಠರವನ್ನು ಹೊಕ್ಕಿರುವೆವು. ನೀವು ಈ ಪಶುವಿನ ಪೃಷ್ಠಕ್ಕೆ ಉಷ್ಣೋದಕವನ್ನು ತಂದು ಎರೆದು ದೂರ ತೊಲಗಿರಿ ಎಂದಿತು. ಆ ಶ್ವಪಚಕರು ಹೆದರಿ ಆ ಗೋವಿನ ಪೃಷ್ಠಭಾಗಕ್ಕೆ ಕಾದ ನೀರನ್ನು ತಂದೆರೆದು, “ಎಲೆ ಸ್ವಾಮೀ, ನೀವು ಅತ್ತ ಹೋಗಿರಿ”

ಯಲ್ಲಿ (ಕ.ಕಾ.)

ಗೆ (ಕ.ಕಾ.)

ಎಂದರು. ಆ ಸೃಗಾಲವು, “ಎಲೆ ಅಂತ್ಯಜರುಗಳಿರಾ ! ನಾವು ಹೊಸಲಾಂಛನಧಾರಿ ಗಳಾಗಿರುವುದರಿಂದ ನಿಮ್ಮೊಡನೆ ಇರುವ ನಾಯಿಗಳು ನಮ್ಮನ್ನು ಕಂಡು ಓಡಿಸಿಕೊಂಡು ಬಂದು ಕಚ್ಚಿದರೆ ಆ ದೋಷ ನಿಮಗೆ ; ಆ ನಾಯಿಗಳನ್ನು ಕಟ್ಟಿದ ಹಗ್ಗವನ್ನು ನಿಮ್ಮ ಕರ್ಣದ್ವಾರದಲ್ಲಿ ಬಂಸಿಕೊಳ್ಳಿರಿ“ ಎಂದಿತು. ಅವರೆಲ್ಲ ಹಾಗೆಯೇ ಮಾಡಲು, ಆ ಬಳ್ಳು ಎತ್ತಿನ ಉದರದಿಂದ ಹೊರ ಹೊರಟು ಓಡಲು, ಶ್ವಾನಗಳು ನರಿಯನ್ನು ಕಂಡು ಹಗ್ಗವನ್ನು ಎಳೆದಾಡಲು, ಚಂಡಾಲರು ತಮ್ಮ ಕಿವಿಗಳು ಹರಿಯುವುವು ಎಂದು ಹಿಂದೆ ತೆಗೆಯುವುದೇ ಹೊತ್ತಾಗಲು ನರಿಯು ಅತ್ತ ಓಡಿ ಗುಡ್ಡವನ್ನು ಸೇರಿತು.*