ಅತನೂರು

ತಾ. ಅಫಜಲಪೂರ
ದೂರ: ೧೪ ಕಿ.ಮೀ.

ಅತನೂರು ತಾಲೂಕಾ ಕೇಂದ್ರವಾದ ಅಫಜಲಪೂರದಿಂದ ಈಶಾನ್ಯಕ್ಕೆ ೧೪ ಕಿ.ಮೀ ಗುಲಬರ್ಗಾದಿಂದ ನೈರುತ್ಯಕ್ಕೆ ೪೧ ಕಿ.ಮೀ ದೂರದಲ್ಲಿ ಗುಲಬರ್ಗಾ ಅಫಜಲಪೂರ ರಸ್ತೆಯಲ್ಲಿರುವ ಮಹತ್ವದ ಕೇಂದ್ರವಾಗಿದೆ.

ಅತನೂರು ಗ್ರಾಮವು ಅಫಜಲಪೂರ ತಾಲೂಕಿನ ಅತ್ಯಂತ ಪ್ರಾಚೀನ ಗ್ರಾಮಗಳಲ್ಲಿ ಒಂದಾಗಿದೆ. ಇಲ್ಲಿ ಪ್ರಾಚೀನ ಅಗ್ರಹಾರ ಶಿಲಾಹಾರಕ ಶೆಖೆಯ ಮಂಡಲಾಧಿಕಾರಿಗಳು ಶಾಸನ ನಡೆಸಿದ ಕುರುಹುಗಳಿವೆ. ಅತನೂರು ಆಲಂದೆ ಸಾಸಿರ ನಾಡಿನ ಒಂದು ಆಡಳಿತ ಭಾಗವೂ ಆಗಿತ್ತು. ಅಂದಿನ ಅಭಿನವ ಕೈಲಾಸವೆಂದು ವರ್ಣಿತವಾದ ಚಿನಮಳ್ಳಿ ಈ ಅತನೂರು ಪರಗಣಕ್ಕೆ ಸೇರಿತು.

ಇಲ್ಲಿ ಜೈನಬಸದಿ, ಅದರೊಳಗಿರುವ ತೀರ್ಥಂಕರ ವಿಗ್ರಹಗಳು ಮತ್ತು ಹೊಡೆ, ದೊಡ್ಡದಾದ ಗುಹೆ ಮತ್ತು ಬಸವೇಶ್ವರ ದೇವಾಲಯಗಳು ಇಂದಿಗೂ ನೋಡಲು ಭವ್ಯ ಸ್ಮಾರಕಗಳಾಗಿ ಕಂಗೊಳಿಸುತ್ತವೆ. ಇಲ್ಲಿ ಸೂಫಿ ಸಂತ ಮೌಲಾಲಿ ದರ್ಗಾ ಪ್ರಸಿದ್ಧವಾಗಿದೆ.

 

ದೇವಲ ಗಾಣಗಾಪೂರ

ತಾ. ಅಫಜಲಪೂರ
ದೂರ: ೨೫ ಕಿ.ಮೀ

ಸುಕ್ಷೇತ್ರ ದೇವಲಗಾಣಗಾಪೂರ ಶ್ರೀ ದತ್ತಾತ್ರೇಯ ತಾಲೂಕು ಕೇಂದ್ರವಾದ ಅಫಜಲಪುರದಿಂದ ಪಶ್ಚಿಮಕ್ಕೆ ೨೫ ಕಿ.ಮೀ ಗುಲಬರ್ಗಾದಿಂದ ನೈರುತ್ಯಕ್ಕೆ ೪೦ ಕಿ.ಮೀ. ದೂರದಲ್ಲಿ ಗುಲಬರ್ಗಾ ಅಫಾಜಲಪೂರ ರಸ್ತೆಯಲ್ಲಿ, ಗಾಣಗಾಪೂರ ರೈಲು ನಿಲ್ದಾಣದಿಂದ ನೈಋತ್ಯಕ್ಕೆ ಸುಮಾರು ೨೦ ಕಿ.ಮೀ. ದೂರದಲ್ಲಿ ಭೀಮಾ ನದಿಯ ಎಡ ದಂಡೆಯ ಮೇಲಿರುವ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.

ದತ್ತಾತ್ರೇಯ ದೇವಾಲಯವು ಯಾತ್ರಿಕರ ಆಕರ್ಷಣಾ ಕೇಂದ್ರವಾಗಿದ್ದು, ಸುಂದರವಾದ ರಚನೆಯಾಗಿದೆ. ದೇವಾಲಯದ ಭಿತ್ತಿಯ ಮೇಲೆ ಪೌರಾಣಿಕ ಕಥನಗಳ ಕೆತ್ತನೆಯನ್ನು ಕಾಣಬಹುದಾಗಿದ್ದು, ಬರುವ ಯಾತ್ರಿಕರಿಗೆಂದು ಇಲ್ಲಿರುವ ಹಲವಾರು ಮಠ, ಧರ್ಮ ಶಾಲೆಗಳಲ್ಲಿ ವಸತಿ ಸೌಕರ್ಯವಿದೆ. ವರ್ಷದುದ್ದಕ್ಕೂ ಅದರಲ್ಲೂ ವಿಶೇಷವಾಗಿ ಗುರುವಾರ ಮತ್ತು ಅಮವಾಸ್ಯೆ ದಿನಗಳಂದು ಯಾತ್ರಿಕರನ್ನು ಆಕರ್ಷಿಸುವ ಈ ಪುಣ್ಯ ಕ್ಷೇತ್ರಕ್ಕೆ ಮಹಾರಾಷ್ಟ್ರದಿಂದ ವಿಶೇಷವಾಗಿ ಭಕ್ತರು ಬಂದು ಹೋಗುವುದು ಗಮನಾರ್ಹವಾಗಿದೆ. ಈ ದೇವಸ್ಥಾನದ ಆಡಳಿತ ಮಂಡಳಿಯು ಸರ್ಕಾರದ ನಿಯಂತ್ರಣದಲ್ಲಿದೆ. ಮಠವು ಸಂಸ್ಕೃತ ವೇದ ಪಾಠಶಾಲೆಯನ್ನು ನಡೆಸುತ್ತಿದೆ.