ನನ್ನ ಕವಿತೆಗಳ ಸಂಕಲನ ಹೊರಬಂದು ಹಲವು ವರ್ಷಗಳೇ ಆದವು. ಮಿಥುನ ಸಂಕಲನದ ನಂತರ ಬರೆದ ಕೆಲವು ಕವಿತೆಗಳನ್ನು ಇತ್ತೀಚಿಗಿನ ಪದ್ಯಗಳೆಂದು ೨೦೦೨ರಲ್ಲಿ ಪ್ರಿಸಂನವರು ಹೊರತಂದ ‘ಇಲ್ಲಿಯವರೆಗಿನ ಕವಿತೆಗಳು’ ಸಂಕಲನದಲ್ಲಿ ಸೇರಿಸಿದ್ದೆ. ಈ ಮಧ್ಯೆ ನಾನು ಅನುವಾದಿಸಿದ ಯೇಟ್ಸ್‌, ಬ್ರೆಕ್ಟ್‌ ಮತ್ತು ರಿಲ್ಕೆಯ ಕವಿತೆಗಳ ಪ್ರತ್ಯೇಕ ಸಂಕಲನಗಳು ಹೊರಬಂದಿವೆ.

ಈ ಸಂಕಲನದಲ್ಲಿ ೧೮ ಪದ್ಯಗಳಿವೆ.

ಎಡ್ವಿನ್‌ ಮುಯಿರ್ ಬರದ ಕುದುರೆಗಳು ಪದ್ಯವನ್ನು ನಾನು ಓದಲು, ವಿಮರ್ಶಿಸಲು ಗೆಳೆಯ ಗಿರೀಶ್‌ ಕಾರ್ನಾಡರಿಗೆ ಕಳುಹಿಸಿದೆ. ಅವರು ಕೂಡಲೇ ಪ್ರತಿಕ್ರಿಯಿಸಿದರು. ಅವರು ಸೂಚಿಸಿದ ತಿದ್ದುಪಡಿಗಳಲ್ಲಿ ಅವರ ಪ್ರತಿಭೆ ಪ್ರೀತಿ ಎರಡೂ ನಿಚ್ಚಳವಾಗಿ ಇತ್ತು. ಇವರಿಗೆ ನಾನು ಕೃತಜ್ಞ.

ಈ ಹಿಂದೆ ನನ್ನನ್ನು ಕವಿಯೆಂದು ಗುರುತಿಸಿದವರು ಹಿರಿಯರಾದ ಡಾ. ಆಮೂರ್, ಗೆಳೆಯ ವೆಂಕಟೇಶಮೂರ್ತಿ ಮತ್ತು ಗೆಲೆಯ ತಿರುಮಲೇಶ್‌. ಇವರ ಮಾತುಗಳು ಮತ್ತು ವಿಮರ್ಶೆ ನನಗೆ ಮುಖ್ಯವಾಗ ಈಗ ಬರೆಯುವಾಗಲೂ ಉಳಿದಿವೆ.

ನನ್ನ ಕೆಲವು ಕವನಗಳನ್ನು ಪ್ರಕಟಿಸಿದ ‘ದೇಶ ಕಾಲ’ದ ವಿವೇಕ ಶಾನಭಾಗರಿಗೂ, ‘ಕೆಂಡ ಸಂಪಿಗೆ’ಯ ರಶೀದರಿಗೂ, ‘ಉದಯವಾಣಿ’ಯ ಶ್ರೀಮತಿ ಪೂರ್ಣಿಮಾರಿಗೂಫ, ‘ಮಯೂರ’ದ ಚ.ಹ. ರಘುನಾಥರಿಗೂ ಅಭಾರಿ.

ಪುಸ್ತಕ ಹೊರತರುತ್ತಿರುವ ಅಭಿನವದ ಗೆಳೆಯರಿಗೂ, ಅರ್ಥಪೂರ್ಣ ಮುಖಪುಟ ಮಾಡಿಕೊಟ್ಟಿರುವ ಚನ್ನಕೇಶವ ಅವರಿಗೂ ಅಚ್ಚಿನ ಮನೆಯವರಿಗೂ ನಾನು ಋಣಿ.

ಈ ಸಂದರ್ಭದಲ್ಲಿ ನನಗೆ ಬೇಕಾದ ಕೆಲಸವನ್ನು ಮಾಡಲೆಂದು ಫೆಲೋಶಿಪ್‌ ಕೊಟ್ಟ ಭಾರತ ಸಾಹಿತ್ಯ ಅಕಾದೆಮಿಯನ್ನೂ, ಅದರ ಕಾರ್ಯದರ್ಶಿಗಳಾದ ಶ್ರೀ ಅಗ್ರಹಾರ ಕೃಷ್ಣಮೂರ್ತಿಗಳನ್ನೂ ಕೃತಜ್ಞತೆಯಿಂದ ನೆನೆಯುತ್ತೇನೆ.

ಯು.ಆರ್. ಅನಂತಮೂರ್ತಿ
೧೫.೮.೨೦೦೯
೪೯೮, ೬ ನೆಯ ‘ಎ’ ಮುಖ್ಯರಸ್ತೆ
ರಾಜಮಹಲ್‌ ವಿಲಾಸ ಎರಡನೆಯ ಹಂತ
ಬೆಂಗಳೂರು-೫೬೦೦೯೪
urananthamurthy@gmail.com