ಬರ್ಟೋಲ್ಟ್ ಬ್ರೆಕ್ಟ್

ಅನಿವಾರ್ಯ ಎಂದು ನಾವು ಭಾವಿಸುವ ಈ ಮಹಾಮಹಿಮ ಕುಪಿತನಾದರೆ
ಎರಡು ಸಾಮ್ರಾಜ್ಯಗಳು ತಲ್ಲಣಿಸುತ್ತವೆ
ಈ ಅನಿವಾರ್ಯ ಮನುಷ್ಯ ಅಕಸ್ಮಾತ್‌ ಸತ್ತೇಬಿಟ್ಟ ಎನ್ನಿ
ಕೂಸಿಗೆ ಮೊಲೆಯಲ್ಲೆ ಹಾಲಿಲ್ಲದ ತಾಯಿ ದಿಕ್ಕೆಟ್ಟಂತೆ
ಪ್ರಪಂಚವೇ ದಿಕ್ಕೆಡುತ್ತದೆ
ಸತ್ತಮೇಲೆ ಈ ಅನಿವಾರ್ಯ ಮನುಷ್ಯ
ಒಂದೇ ಒಂದು ವಾರದ ನಂತರ ಹಿಂದಕ್ಕೆ ಬಂದ
ಎಂದು ಊಹಿಸಿಕೊಳ್ಳಿ-ಆಗ?

ಇಡೀ ನಾಡಿನಲ್ಲಿ ಅವನಿಗೆ ಒಂದು ಕಾವಲುಗಾರನ ಕೆಲಸವೂ ಸಿಗಲ್ಲ