ಅಪ್ಪ ನಿನ್ನಂತರು ಅರಸಗೇ ಹರಸದ್ರೆ
ಪುರಸರ್ಗೆ ಆಯಿಸವೇ ಹರ್ದಕ್ಕು |
ಪುಟ್ಟೀನ ಉಟ್ಕಂಡೇ ಮುತ್ತೀನ ಬಟ್ಟಿಟ್ಕಂಡೇ
ಗಟ್ಟೋ ಮಲ್ಲೂಗಿ ಮುಡ್ಕಂಡೇ | ಮಂದೂರಿ
ಗಟ್ಟೂ ಬಟ್ಟಲವ ತಡಕಣೆ | ಮಂದೂರಿ      
ಪಚ್ಚದ ಕಂಬಕೆ ಮರಸಾರೆ |
ಸಾಲೀಯ ಉಟ್ಕಂಡೇ ಸಾಜನ ಬಟ್ಟಿಟ್ಕಂಡೇ
ಜಾಜಿ ಮಲ್ಲೂಗಿ ಮುಡ್ಕಂಡಿ | ಮಂದೂರಿ
ಪಚ್ಚದ ಕಂಬ ಮರಸಾರು |
ಸಾಲೀಯುಟ್ಟಾಳೆ ಸಾಜೀನ ಬಟ್ಟೀಟ್ಟಾಳೆ
ಜಾಜೀ ಮಲ್ಲೂಗಿ ಮುಡದಾಳೆ ಮಂದೂರಿ
ಪಚ್ಚದ ಕಂಬ್ಗೆ ಮರಸಾರಿ ನಿಲುವಾಳೆ |
ಪಟ್ಟೀಯನುಟ್ಟಾಳೆ ಮುತ್ತಿನ ಬೊಟ್ಟೀಟ್ಟಾಳೆ
ಗಟ್ಟೂ ಮಲ್ಲೂಗಿ ಮುಡದಾಳೆ | ಮಂದೂರಿ
ಗಟ್ಟಿ ಬಟ್ಟಲವ ತಡದಾಳೆ | ಮಂದೂರಿ
ದಾರಂದ್ರಕೆ ಮರಸಾರಿ ನಿಲೂವಾಳೆ |
ದಾರಂದ್ರಕೆ ಮರಸಾರಿ ನಿಲುವದ್ನು ನಾರ್ಣಸೊಮಿ

ಮಂದೂರಿಗ್ ಸಾಪಾ ಇಡೂವಾನೆ | ಏನಂದಿ
ನಿಡ್ ನಾಲಗೆ ಕುಂದಿ ಆರಗಾಲಿ |ಮಂದೂರಿ
ಬಲದ ದ್ಯಾಮಟಿಯೆ ತೊಲಗಾಲಿ | ಅಂದೇಳಿ
ಮಂದೂರಿಗ್ ಸಾಪ ಇಡುವಾನೆ |
ಕಾಳಗ ಅಂದರೆ ಕಲಿಯಾದೆಯಾ ಮಗನೆ
ಹಾಳಾದೆಯೋ ನೀನು ಅರಸಾದ್ಯಾ | ಮಗನೆ ಕೇಳು
ಮಾವನ ಮಗಳಲ್ಲಿ ನೆರದದೆ |
ಮಾವನ ಮಗಳಲ್ಲಿ ನೆರದರೆ ತಾಯೆ ಕೇಳು
ಬೋಗಸಲೆ ನಾನು ಬರಲೆ ಕಾಣಿ | ತಾಯವ್ವ
ದಂಡೀನೂಟಕೆ ಅನುಮಾಡೆ |

ಕಂಚೀ ಹುಳಿಯಲ್ಲ ಮಿಂಚೊಂದ ಮಸದೇ ಇಡುವೆ
ಹಗೆಯವನ ತಲೆಯ ಹಗಲ್ತಿರಿವೆ | ತಾಯೆ  ಕೇಳೇ
ನೀನು ಚಿಂತೆಯ ಬಿಡಬೇಡ |ತಾಯೆ ಕೇಳೆ
ದಂಡೀನೂಟಕೆ ಅನುಮಾಡೇ |
ಕಂಚೀ ಹುಳಿಯಲ್ಲಿ ಮಿಂಚೊಂದು ಮಸದೇ ಜಡುವೆ
ಹಗೆಯವನ ತಲೆಯ ಹಗಲ್ತಿರೆವೆ | ಅಜ್ಜೀ ಕೇಳು
ನೀನು ಚಿಂತೆಯ ಬಿಡಬೇಡ | ಅಜ್ಜಿ ಕೇಳು
ದಂಡೀನ ಮೀಯಣಕೆ ಅನುಮಾಡಿ |
ಅಟ್ಟುಂಬು ಮಾತಾ ಕೇಳಾಳೆ ತಾಯವ್ವಿ
ಮಾಳೂಗಿ ಒಳಗೆ ನೆಡುದಾಳೆ |

ಅಟ್ಟದ ಮೇನೆನ ಜೇರಗ ಸಾಲಕ್ಕಿಯ
ಅನ್ನ ಮೇಗ್ರಕೆ ಅನುಮಾಡಿ |
ಬೇಲೀಯ ಮೆನನ ದಾರಿ ಹಿರೇಕಾಯಿ
ದಾರೀಯ ಒರದಿ ಮಿಣಸಿಕ್ಕಿ
ಹಿತ್ಲ ಕಣಕೀನ ಬೊಟ್ಟು ಕೆಂಬರ್ಗಿಯ
ಬೊಟ್ಟೆಣ್ಗೆ ಕಿಟ್ಟೇ ಮಿಣ್ಸೆಟ್ಟಿ |
ಎಲಿಮರ್ ಒಂಬತ್ ಬಗೆ ಕಾಯ್ ಮೇರ್ ಒಂಬತ್ ಬಗೆ
ನೂರೊಂದು ಬಗೆಯ ಅಡಗೀಯೆ | ಯ| ಕಜ್ಜಾಯ
ಅನು ಮಾಡಿದಳೊಂದು ಗಳಿಗೇಲಿ | ಅಜ್ಜಮ್ಮ
ಜೋಡೇಲಿ ಕೊಡ್ಪನ ತಡದಾಳೆ | ಅಜ್ಜಮ್ಮ

ಬಚ್ಚಲರ ಮನೆಗೆ ನೆಡದಾಳೇ | ಅಜ್ಜಮ್ಮ
ಬಚ್ಚಲಗೆ ನೀರ ಎರದಾಳೆ | ಅಜ್ಜಮ್ಮ
ಬಚ್ಚಲಿಗೆ ಕಿಚ್ಚ ಹುರದಾಳೆ | ಅಜ್ಜಮ್ಮ
ಸೀಗೆ ಬಾಗವ ಅರ್ದಾಳೆ |
ಅಗಮಂಜು ಕೂತ ಗದ್ದುಗೆಯ ಜಡಿದೆದ್ದು
ಆನೆ ಸಾಲೀಗೆ ನೆಡದಾನೆ |
ಅಂದುಳ್ಳ ಆನೀಯ ಅಂಗಕ್ಕೆ ಹೊಡ್ತಂದಿ
ಅಂದ ಚೆಂದದಲೇ ಹುಡಿಯುದ್ದಿ | ಪುಡಿಯುದ್ದಿ
ಗಂದದ ಗರುಡ ಬಿಗದಾನೆ | ಅಗಮಂಜು
ಬಾಲಕ್ಕಿ ಕ್ಕಾನೆ ಚವುಲವ | ಅಗಮಂಜು

ಕುಳ್ಳಿಗಿಕ್ಕಾನೆ ಸೆರಗಂಟೆ | ಅಗಮಂಜು
ಕಾಲೀಗಿಕ್ಕಾನೆ ಉರಗಿಜ್ಜಿ | ಅಗಮಂಜು
ತಿಂಬೂಕಿಕ್ಕಾನೆ ಕಡ್ಲೀಯ | ಅಗಮಂಜು
ಅಕ್ಕ ತಂದ್ದೀರ್ ಮನೆಗೆ ನೆಡದಾನೆ |
ಅಕ್ಕ ತಂಗೀ ಮಕ್ಳು ಲಕ್ಷವೇ ಕೊಮುರಾರು
ಮಿಂಚಿನ ಕಾಳಗಕ್ಕೆ ಸವ್ನಿಬೇಕು |
ಮಿಂಚೀನ ಕಾಳಗಕ್ಕೆ ಸವ್ನಿ ಸುಂಗಾರಾಗಿ
ಬಂದೀ ಬೀದಿಯಲ್ಲಿ ನಿಲ್ಬೇಕು | ಅಂದೇಳಿ
ಸಿಗ್ರೋರರಮನೆಗೆ ನೆಡದಾನೆ |
ಅಕ್ಕ ತಂಗೀ ಮಕ್ಳ ಸೀಗ್ರೋರ ಕೊಮುರರಾ

ಕತ್ತೀ ಕಾಳಗಕ್ಕೆ ಸವ್ನಬೇಕು |
ಕತ್ತೀಕಾಳಗಕ್ಕೆ ಸವ್ನಿ ಸುಂಗಾರಾಗಿ
ಬಂದೀ ಬೀದಿಲಿ ನಿಲ್ಬೇಕು | ಅಂದೇಳಿ
ಪಟ್ಟಣ ಮಾರ್ಗಲ್ಲೇ ನೆಡದಾನೆ | ಅಗಮಂಜು
ಪಟ್ನಕೆ ದಂಗುಲವ ಹೊಯ್ದಾನೆ |
ಆನಿ ಕುದರೀಯೋ ಮಂದೀ ಮಾರ ಬಲವೋ
ದಂಡೀನ ಕಾಳಿ ಕರ್ಕಾಳಿ | ಸಯ್ವಾಗಿ
ದಂಡೀಗೆ ಕಲಿಗಳು ಸವ್ನಾಲಿ |
ದಂಡೀಗೆ ಕಲಿಗಳು ಸವ್ನಿ ಸುಂಗಾರಾಗಿ
ಬಂದೀ ಬೀದೀಲಿ ನಿಲ್ಬೇಕು | ಅಂದೇಳಿ
ತನ್ನಲರಮನೆಗೆ ಬರುವಾನೆ |ಅಗಮಂಜು
ಬಚ್ಚಲರಮನಿಗೆ ನೆಡದಾನೆ |

ಕಂಚೀನ ತಟ್ಟೀಲಿ ಸಂಪ್ಲಿ ಹೂಂಗಿನ ಎಣ್ಣೆ
ಹೊನ್ನ ಮಣೆಯೊಂದ ತಡದಾಳೆ | ತಾಯವ್ವಿ
ಬಚ್ಚಲರ ಮನೆಗೆ ನೆಡದಾಳೆ |ತಾಯವ್ವಿ
ಹೊನ್ನ ಮಣೆಯೊಂದ ಮಡುಗಾಳೆ | ಅಗಮಂಜೂನ
ಮಣೆಯ ಮೆನೋಗಿ ಕುಳಿತಾನೆ |
ಬೆನ್ನು ತಿಕ್ಕುವರು ಹದಿನೆಂಟು ಸಾವಿರ ಮಂದಿ
ಕಾಲ ತಿಕ್ಕುವರೀಗ್ ಗಡಿಯಿಲ್ಲ | ಅಗಮಂಜೂನ
ಎಣ್ಣೀಯ ಜಳಕವೇ ಹುರದದೆ | ಅಗಮಂಜು

ಬಚ್ಚಲ ಕಲ್ಮೆನೆ ಕುಳಿತಾನೆ |
ಕಾಮನೆ ಗುಂಡೀ ನೀರ ಬೀಮನ ಗುಂಡೀಗ್ ಬಿದ್ದಿ
ಅರ್ಜೀಣ ಗುಂಡೀಲೇ ಹದಮಾಡಿ | ತಾಯವ್ವಿ
ಮುತ್ತೀನಾಯರದ ಮಣಿ ತೆಂಗು | ತಡಕಂಡಿ
ಕೇಸೀಗೆ ನೀರ ಎರದಾಳೆ |
ಕೇಸ ಬಿಡಿಸಿದರೆ ಸೂಸಿದವೊ ಮಲ್ಲೂಗೆ
ಗಂಗೀಲಿದ್ದೇಳು ಗಿಳಿ ಬಂದಿ | ಅಗಮಂಜೂಗೆ
ಚೆಲ್ಲಿದವೆ ಮಲ್ಲುಗೆಯ ಕುಸುಮವ |
ಚಿಂಡ ಬಿಡಿಸಿದರೆ ಚೆಲ್ಲಿದವೋ ಮಲ್ಲೂಗೆ
ಗೋವಿಲಿದ್ದೇಳು ಗಿಳಿ ಬಂದು |ಅಗಮಂಜೂಗೆ

ಚೆಲ್ಲಿದವೆ ಮಲ್ಲಿಗೆಯ ಕುಸುಮವ |ಅಗಮಂಜು
ಮಿಂದೋಗೆದನೊಂದು ಗಳಿಗೇಲಿ |
ಮಿಂದೊಗೆದಾನೆ ಮಿಂದೀ ಮುಡಿಯುಟ್ಟಾಣೆ
ಮಿಂದೀ ಚೆಂಡಕಿಯ ಕುಡಗಾನೆ | ಅಗಮಂಜು
ತನ್ನ ಅರಮನೆಗೆ ನೆಡದಾನೆ | ಅಗಮಂಜು
ದೆವರ ಬುಡಕೋಗಿ ನಿಲ್ವಾನೆ | ಅಗಮಂಜು
ತುಳಚೀ ತೀರ್ತವ ಕುಡದಾನೆ  | ಅಗಮಂಜು
ತುಳಚೀಗೆ ಕಯ್ಯ ಮುಗದಾನೆ | ಅಗಮಂಜು
ಮಾಳೂಗಿ ಒಳೂಗೆ ನೆಡುದಾನೆ | ತಾಯವ್ವಿ
ಹೊನ್ನ ಮಣೆಯೊಂದ ಮಡಗಾಳೆ | ಅಗಮಂಜು

ಮಣೆಯ ಮೆನೋಗೆ ಕುಳಿತಾನೆ ತಾಯವ್ವಿ
ಕಿರಳ ಬಾಳೆಲೆಯ ತೊಳದಾಸಿ | ತಾಯವ್ವಿ
ಅನ್ನ ಮೆಗ್ರವ ಬಡಸಾಳೆ  | ತಾಯವ್ವಿ
ಹಾಲ ಪಾಯಸವ ಬಡಸಾಳೆ | ತಾಯವ್ವಿ
ತುಪ್ಪ ಸಕ್ಕರೆಯ ಎರದಾಳೆ | ಅಗಮಂಜು
ಲಾಗೊಂದು ಮಾತಾ ನುಡಿದಾನೆ |
ನನ್ನಮ್ಮ ಬಡಸಾಳೆ ಹೊಸ ಕಂಪನ ತುಪ್ಪದ
ದೆಸೆನಾಕೋ ದಿಕ್ಕೇ ಎಸದದೆ | ನನ್ನ ತಾಯಿ
ಹುಗಳೂವೇ ಕೂಟಕೊಡ್ದಲ್ಲಿ | ಅಂದೇಳಿ
ಉಂಡೆದ್ದ ನೊಂದು ಗಳಿಗೇಲಿ |

ಉಂಡಾನೂಟವ ತೊಳ್ದಾನೆ ಕಯ್ಯಾಯಿ
ತೂಗು ಮಂಚದಲ್ಲೇ ಕುಳಿತಾನೆ | ತಾಯವ್ವಿ
ತಮ್ಮೂಟಕೆ ತಾವೇ ಎಡೆಮಾಡಿ | ಅವ್ರಯ್ವರು
ಊಟಕೆ ಹೋಗಿ ಕುಳಿತಾರೆ |
ಉಂಡರೂಟವ ತೊಳದರೆ ಕಯ್ಯಾಯಿ
ಎಂಜಲು ಮಯ್ಲಿಗೆಯ ತೆಗದಾರೆ |
ಅಯುಳ್ಳ ಹಣ್ಣಡಕೆ ಸೋದಿಸಿದ ಬೆಳೆಯೆಲೆ
ಹಾಲಿನಲಿ ಬೆಂದ ತೆನಿ ಸುಣ್ಣ |ತಡಕಂಡಿ
ಮಳೂಗಿಲಿಂದೆರಗೆ ಬರುವರು | ತಾಯ್ ಸೋದೂರಿ
ಅಗಮಂಜೂಗೊಂದೀಳ್ಯ ಕೊಡುವಳು |

ಎಲಿಯೊಂದೆ ತಿಂದಾನೆ ರಜವಲ್ಲೇ ಉಗುಳಾನೆ
ಆಗೊಂದು ಮಾತ ನುಡಿದಾನೆ |
ಉತ್ತರಿಗೆ ಒಂಬರ್ಗು ಮಂದ್ರಿಗೆ ಬಳಿಬುರ್ಗ
ರಸಾಳಿರ ಮಗು ಹಸಬಾಲಿ |
ಅರ್ದ ಹಿತ್ಲಕೊಡು ಬರ್ದು ಬಂಡಾರ ಕೊಡು
ಮುಟ್ಟೀಸಿ ಕೊಡದರ ತೊಗರೀಗೆ |

ಅಟ್ಟಂಬು ಮಾತ ಕೇಳಿತು ತಾಯವ್ವಿ
ಅರ್ದ ಹಿತ್ಲ ಕೊಟ್ತು ಅರ್ದ ಬಂಡಾರ ಕೊಟ್ತು
ಮುಟ್ಟೀಸಿ ಕೊಟ್ತದರ ತೊಗರೀಗೆ . ಅಗಮಂಜು
ಕುಳಿತ ಗದ್ದುಗೆಯ ಜಡಿದೆದ್ದು | ಅಗೆಮಂಜು
ಮಾಳೂಗೆ ಒಳುಗೆ ನೆಡುದಾನೆ | ಅಗಮಂಜು
ತನ್ನ ಪಟ್ಟೀಯ ನೆರ್ದೂಟ್ಟಿ | ಅಗಮಂಜು
ತನ್ನ ಆಯುಧವ ತಡದಾನೆ | ಅಗಮಂಜು
ತನ್ನ ಕಡ್ಗವ ತಡದಾನೆ | ಅಗಮಂಜು
ತನ್ನ ಕಯ್ ಚೆಂಜೀ ತಡದಾನೆ | ಅಗಮಂಜು
ಮಾಳೂಗಿಂದೆರಗೆ ಬರುವಾನೇ | ಅಗಮಂಜು
ಮಾಳುಗಿಂದೆರುಗಿ ಬರುವುದ್ನು ಸೋದೂರಿ
ಮುತ್ತನೆ ಕುಟ್ಟಿ ಹುಡಿಮಾಡಿ | ಪುಡಿಮಾಡಿ
ಮುತ್ತಿನ ಆರುತಿಯ ಗೆಯ್ದಾಳೆ | ಸೋದೂರಿ
ಹಗಳನೇ ಕುಟ್ಟಿ ಪುಡಿ ಮಾಡಿ | ಹುಡಿಮಾಡಿ

ಹಗಳದಾರುತಿಯ ಗೆಯ್ದಾಳೆ | ಸೋದೂರಿ
ಆರುತಿಯ ತಕ್ಕಂಡೇ ಬರುವಳು | ಸೋದೂರಿ
ಆಗಮಂಜುಗಾರತಿಯ ಬೆಳಗಾಳೆ | ಏನಂದಿ
ಈರನಿಗಿಂದ ಸೂರ ಕಲಿಯಾಲಿ |ಗಿ| ಕಾದಲಿ
ನೂರಾಳ ಸೋಲ್ಸಿ ತಲೆತರ್ಲಿ |ಅಂದೇಳಿ
ದಂಡೀನಾರತಿಯ ಬೆಳಗಾಳು |
ದಂಡೀನಾರತಿಯ ಬೆಳಗುದ್ನು ಅಗಮಂಜು
ಬೋರಿನೇ ಆನೀ ನೆದತ್ತಿ | ಅಗಮಂಜು
ರಾಜ ಮಾರ್ಗದಲ್ಲಿ ಹೊಡೆದಾನೆ | ಅಗಮಂಜು
ತನ್ನ ರಾಜ್ಯವ ಗಳದಾನೆ | ಅಗಮಂಜು

ಅಕ್ಕ ತಂಗ್ದೀರ ರಾಜ್ಯಕೆ ನೆಡದಾನೆ | ಅಗಮಂಜು
ಅವರಲ್ಲೋರ್ನನಲ್ಲಿ ಒಡಗುಂಡಿ | ಅಗಮಂಜು
ಸಿಗ್ರೋರ ಕೇರಿಗೆ ನೆಡುದಾನೆ | ಅಗಮಂಜು
ಅವರೆಲ್ಲೋರ್ನನಲ್ಲಿ ಒಡಗೊಂಡ |
ಅನಿ ಕುದುರಿಯೋ ಮಂದೀ ಮಾರ್ಬಲವೋ
ದಂಡೀನ ಕಾಳಿ ಕರ್ಕಾಳೀ | ಸಯ್ವಾಗಿ
ದಂಡೀನ ಕಲಿಗಳು ಸವ್ನಾರೇ |
ದೆಂಡೀನ ಕಲಿಗಳು ಸವ್ನಿ ಸುಂಗಾರಾಗಿ

ರಾಜ ಮಾರ್ಗದಲ್ಲಿ ನೆಡದಾರ | ಅಗಮಂಜು
ಬಾಳೀಯ ಬನವ ಎಳದಾನೆ | ಅಗಮಂಜು
ಆನಿಯಿಂದ ಕೆಳಗೆ ಎಳೆದಾನೆ | ಅಗಮಂಜು
ಅವರೆಲ್ಲರಲ್ಲೇ ಇರರ್ಭೇಕು ಅಂದೇಳ
ರಾಜಬೀದಿಗಾಗಿ ನೆಡದಾನೆ | ಅಗಮಂಜು
ರಸರಾಳಿರ ಮನೆಗೆ ನೆಡದಾನೆ | ಅಗಮಂಜು
ಹೋಗಿ ಬಾಗ್ಲಲ್ಲೇ ನಿಲೂವಾನೇ | ರಸರಾಳಿ
ತಡದಾಳೆ ತಂಬುಗೀಲ್ ಉದಕವ |

ಅತ್ತಿ ಕೊಟ್ಟುದಕವ ಬ್ಯಾಗದಲ್ ತಡದಾನೆ
ಕಾಲುಸಿರಿಮೊಕವ ತೊಳೆದಾನೆ | ಅಗಮಂಜು
ಮಾಳೂಗಿ ಒಳಗೆ ನೆಡುದಾನೆ | ಅತ್ಯಮ್ಮ
ಅಗಮಂಜೂಗೊಂದೀಳ್ಯ ಕೊಡುವಾಳೇ | ಅಗಮಂಜು
ಅಯಾಕೊಂದೀಳ್ಯ ಮೆಲುವಾನು |
ಅಯಾಕೊಂದೀಳ್ಯ ಮೆಲುವುದ್ನು ರಸರಾಳಿಮಗ್ಳು.
ಓಡ್ ಬಂದೇ ತೊಡೆ ಮೆನೇ ಕುಳಿತಾಳೆ | ಅಗಮಂಜು

ನೆತ್ತೀಯಕಿಟ್ಟೀ ಅಳಗಾನೆ | ಅಗಮಂಜು
ಕೊಳ್ಳನ ಪಾವ್ನ ಸರ ತಗೆದಾನೆ | ಅಗಮಂಜು
ಇಟ್ಟಾನೆ ರಸರಾಳೀ ಮಗಳೀಗೆ  | ಅಗಮಂಜು
ತಾ ಬೆನ್ನಗಾಗೇ ಕುಳಿತಾನೇ |
ತಾ ಬೆನ್ನಗಾಗೇ ಕುಳುವುದ್ನು ರಸರಾಳೇರ ಮಗ್ಳು
ತೊಡಿಗಿಂದ ಕೆಳಗೇ ಇಳೀದಾಳೆ | ರಸರಾಳಿಮಗ್ಳು

ತಪ್ಪು ತಳಕೋಗಿ ಕುಳಿತಾಳೇ |
ತಪ್ಪು ತಳಕೋಗಿ ಕುಳುವುದ್ನು ಅಗಮಂಜು
ಕೂತಗದ್ದುಗೆಯ ಜಡಿದೆದ್ದು | ಅಗಮಂಜು
ರಾಜಂಗಳ ಮೆಟ್ಟ ಎಳದಾನೆ | ಅಗಮಂಜು
ಬಾಗ್ಲೋರ ಬಾಗಲ್ಕೇ ನೆಡದಾನೆ | ಅಗಮಂಜು
ಬಾಲ್ಗೋರ ಎಂದೂ ದೆನಿದೂಗಿ | ಕರೆವುದ್ನು
ಓಯ್ಗುಂಡೇ ಬಾಗ್ಲೋರು ಬರುವರು | ಬಾಗ್ಲೋರು

ಏನು ಕಾರಣ್ಲಿ ಕರೆದೀರಿ |
ಕರ್ದಂ ಕಾರ್ಯ ಸಯ್ ಕಿರ್ದಂಬ ಬೆಸರವಿಲ್ಲ
ತಡದ ಬಾಗ್ಲವ ಬಿಡ್ಬೇಕು |
ತಡದ ಬಾಗ್ಲವ ನಾವ ಹೀಂಗೇ ಬಿಡೂದಿಲ್ಲ
ನೀನುಟ್ಟ ಪಟ್ಟೀ ಉಡ್ಗೇರೆ | ಕೊಟ್ಟಂಕು
ತಡದ ಬಾಗ್ಲವ ಬಿಡುರಿಲ್ಲ |
ನಾರ್ಣದೆವ್ನ ಅಳಿಯ ನಾನು ಮಂದ್ರಿ ಪುರುಸ ನಾನು
ಉಟ್ ಪಟ್ಟೀ ನಿಮ್ಗೆ ಕೊಡುದಿಲ್ಲ |

ನಾರ್ಣದೆವ್ನ ಅಳಿನಾದ್ರೇನು ಮಂದ್ರಿ ಪುರುಸನಾದ್ರೇನು
ನೀನುಟ್ಟ ಪಟ್ಟೇ ಉಡ್ಗೇರ ಕೊಟ್ಟಂಕು
ತಡದ ಬಾಗ್ಲವ ಬಿಡುವಿಲ್ಲ |
ಏನೂ ಹೆಳಿದ್ರೂ ಕೇಳೂವರಲ್ಲಂದೇಳಿ
ಒಂದುಸುತ್ ಪಟ್ಟೇ ಬಿಡಸಾನೆ | ಅಗಮಂಜು
ಬಾಗ್ಲೋರ್ಗೆ ಉಡುನೆರೆಯ ಕೊಡುವಾನೇ
ಬಾಗ್ಲೋರ್ಗೆ ಉಡುಗೆರೆಯ ಏನಂದಿ ಕೊಡುವಾನೆ
ನನ್ನಾಯಿಸ ಸರಿಯೇ ತೊಲಗೀತು | ಅಂದೇಳಿ

ಮುಂದೀನ ಬಾಗ್ಲಕೆ ನೆಡದಾನೆ | ಬಾಗ್ಲೋರು
ನೀನುಟ್ಟ ಪಟ್ಟೀ ಉಡಗೇರಿ | ಕೊಟ್ಟಂಕು
ತಡ್ದ ಬಾಗ್ಲವ ಬಿಡುದಿಲ್ಲ |
ನಾರ್ಣದೇವ್ನ ಅಳಿಯ ನಾನು ಮಂದ್ರಿ ಪುರಿಸನಾಮ
ಉಟ್ ಪಟ್ಟೇ ನಿಂಗೇ ಕೊಡೂದಿಲ್ಲ |
ನಾರ್ಣದೇವ್ನ ಅಳಿನಾದ್ರೇನು ಮಂದ್ರಿ ಪುರಿಸನಾದ್ರೇನು

ಊರ ಆಳೂವ ಅಗಮಂಜು | ದೊರೆಯಾದ್ರೇನು
ನೀನುಟ್ಟ ಪಟ್ಟೀ ಉಡಗೆರೆ | ಕೊಟ್ಟಂಕು
ತಡದ ಬಾಗ್ಲವ ಬಿಡೂದಿಲ್ಲ |
ಏನು ಹೇಳದ್ರೂ ಕೂಳೂದಿಲ್ಲಂದೇಳಿ
ಎಯ್ಡು ಸುತ್ ಪಟ್ಟೀ ಬಿಡ್ಸಾನೆ | ಅಗಮಂಜು
ಬಾಗ್ಲೋರಿಗ್ ಉಡಗೆರೆಯ ಕೊಡುವಾನೆ | ಏನಂದಿ
ತನ್ನಾಯಿಸ ಸಿರಿಯೇ ತೊಲಗೀತೇ | ಅಂದೇಳಿ
ಕೊಲ್ಕಾರರ ಬಾಗ್ಲಕೆ ನೆಡದಾನೆ | ಅಗಮಂಜು

ಕಣ್ಣೀಗ್ ಕತ್ತಲೆಯೆ ಕಮದದೆ |
ಕಣ್ಣೀಗೆ ಕತ್ತಲೆಯೇ ಕಮವದ್ನು ನಾರ್ಣದೇವ್ನ ಮನಿಯ
ಗಿಂಡೀಕಾಲ್ ಸಣ್ಣಕ್ಕ ಬರುವಳು | ಬಂದೀನ್ನೇ
ಅಗಮಂಜುಗಿಟ್ಟ ಅಮ್ರತ ತಳದಾಳೆ |
ಅಗಮಂಜುಗಿಟ್ಟ ಅಮೃತ ತಳವದ್ನು ಅಗಮಂಜು
ಕಣ್ಣನ ಕತ್ತಲೆಯೇ ತೊಲಗದೆ | ಅಗಮಂಜು
ಮಾಳೂಗಿ ಒಳಗೇ ನೆಡದಾನೆ |
ಮಾಳೂಗೀ ಒಳುಗೆ ನೆಡವದ್ನು ಅಗಮಂಜುಬಾವಾ

ಮದಣಯ್ಯ ಎದ್ರು ಬಂದಾನೆ | ಅಗಮಂಜು
ಲಾಗೊಂದು ಮಾತ ನುಡದಾನೆ |
ಬಾವ ನಿನ್ ಮಲ್ಲಿ ಸಕಲ ಸಾವ್ರ ಮಂದಿ
ಯಾವೋಳು ನಿನ್ನ ಕಿರ್ದಂಗಿ |
ಪಟ್ಟೇ ಉಟ್ಯಿರ್ಗು ಮುತ್ತಿನ ಬಟ್ಟಟ್ಟಿರ್ಗು
ಬೆಳ್ಳಿ ಸಂಬಳಗಿ ತಡದಿರ್ಗು | ಬಾವಕೇಳು
ಪಚ್ಚದ ಕಂಬ್ಗೆ ಮರೆಸಾರೇ | ನಿಲ್ವಾಳು
ಆಕೆಯ ಸೆರ್ಗ ತಡೆಹೋಗು |

ಅಟ್ಟಂಬು ಮಾತಾ ಕೇಳಾನೆ ಅಗಮಂಜು
ಅದಕಿಂದು ಮುಂದೆ ನೆಡದಾನೇ | ಅಗಮಂಜುಗೆ
ನೆಂಟ ಮಸಣಯ್ಯ ಎದ್ರ ಬಂದ |
ನೆಂಟ್ ನಿನ್ ಮಲ್ಲಿ ಸಕಲೋರು ಸಾವಿರ ಮಂದಿ
ಯಾವೋಳು ನಿನ್ನ ಹೆರಿಯಕ್ಕ |
ಸಾಲಿಯುಟ್ಟಾಳೆ ಸಾಜನ ಬಟ್ಟಿಟ್ಟಾಳೆ.

ದಾರಂದ್ರ ಮರಸಾರಿ ನಿಲ್ವಾಳು | ಬಾವಕೇಳು
ಆಕೆಯ ಸೆರ್ಗ ತಡಿಹೋಗು.
ಅಟ್ಟಂಬು ಮಾತಾ ಕೇಳಾನೇ ಅಗಮಂಜು
ನಾರ್ಣದೇವ್ನರಮನ್ಗೆ ಬರುವಾನೆ |
ನಾರ್ಣದೇವ ನಿನ್ನಪ್ಪ ನಾಡಿಗಪ್ಪಂತವ
ದಾರಂದ್ರಕೆ ದಾರಿ ಎರ್ದಾನೆ |
ನಾರ್ಣದೆವ ನಿನ್ನಪ್ಪ ಊರಿಗಪ್ಪಂತವ
ಪಚ್ಚದ ಕಂಬ್ಗೆ ದಾರಿ ಎರ್ದಾನ |

ನೆಗ್ಗಿಯಾಡು ಹೆಣ್ಣೆ ನೆಗ್ಗಿಯಾಕೆ ಆಡೀಯೇ
ನೆಗ್ಗಿಯಾಡಿದ್ರೆ ಮುತ್ತು ಒಡವದ |
ಮಾತಾಡು ಹೆಣ್ಣೆ ಮಾತ್ಯೇಕೆ ಆಡ್ಲಿಲ್ಲ |
ಮಾತಾಡಿದ್ರೆ ಹಗ್ಳ ಒಡದವ |
ಅಳೀಯ ಮಾವಗೆ ಹೇಮಸ ಮಾತಾಡಿದ್ನು
ಮಂದ್ರಿಗಿಟ್ ಸಾಪ ಬಿಡುವಾನೆ|
ಕುನ್ನಾಲಗೆಲ್ಲ ಸಮನಾಲಿ | ಅಂದೇಳಿ

ಮಂದ್ರಿಗಿಟ್ ಸಾಪ ಬಿಡುವಾನೆ |
ಮಂದ್ರಿಗಿಟ್ ಸಾಪ ಬಿಡುವುದ್ನು ಮಂದೂರಿ
ಮಾತಗ್ ಮಾತಾಡಿ ನೆಗಿಯಾಡಿ | ಮಂದೂರಿ
ಸೆಣ್ಣ ಗಿಂಡೀಯಲ್ಲಿ ಉದ್ಕವೇ |ವ| ತಡಕಂಡಿ
ಅಗಮಂಜು ಒಡ್ನೋಗಿ ನಿಲ್ವಾಳು | ಮಂದೂರಿ
ಆಗಮಂಜುಗುದಕಾವ ಕೊಡುವಳು | ಅಗಮಂಜು
ಕಾಲು ಸಿರಿಮೊಕವ ತೊಳೆದಾನೆ | ಅಗಮಂಜು

ಮಾಳೂಗಿ ಒಳಗೆ ನೆಡದಾನೆ| ಅಗಮಂಜು
ತೂಗು ಮಂಚದಲ್ಲೇ ಕುಳಿತಾನೆ| ಮಂದೂರಿ
ಮಾಳೂಗಿ ಒಳುಗೇ ನೆಡದಾಳೆ |
ಆಯುಳ್ಳ ಹಣ್ಣಡಕೆ ಸೋದಿಸಿದ ಬೆಳಿಯಲೆ
ಹಾಲಿನಲ್ಲಿ ಬೆಂದ ತೆನಿಸುಣ್ಣ| ತಡಕಂಡ
ಮಾಳೂಗೀಲಿಂದೆರುಗೆ ಬರುವಳು | ಮಂದೂರಿ
ಅಗಮಂಜುಗೊಂದೀಳ್ಯ ಕೊಡುವಳು | ಅಗಮಂಜು

ಆಯಕೊಂದೀಳ್ಯ ಮೆಲುವಾನೆ | ಅಗಮಂಜು
ಆಗೊಂದು ಮಾತ ನುಡಿದಾನೆ |
ಆಂದೀಗಿಂದೀಗು ಹೀಂಗೆ ಇರ್ಲುಬಾರ
ಮಾಳ್ಗಲೇ ಹಾಸ ಬಿಡಿಸೆಂದ | ಮಂದೂರಿ
ಮಾಳೂಗಿ ಒಳಗೆ ನೆಡದಾಳೆ | ಮಂದೂರಿ
ಮಾಳಗಿಲಿ ಹಾಸ ಬಿಡಿಸಾಳೆ | ಅಗಮಂಜು
ಹಾಸಗಲ್ಲೋಗಿ ಒರುಗನೆ | ಮಂದೂರಿ