ತಾನೂ ಒಡನೋಗಿ ಒರುಗಾಳು |
ತಾನೂ ಒಡನೋಗಿ ಒರುಗುದ್ನು ಮಂದುರಿಯ
ಮೊವದಸರ ಕಡ್ದ ಮಣಿಚೆಲ್ಲಿ | ಮಂದೂರಿ
ಆ ಮಣಿ ಹೆಕ್ಕಿ ಸುರದಾಳೆ |
ಕಡ್ದಿ ಚೆಲ್ಲಿದ ಮನಿಯ ಹೆಕ್ಕಿ ಸುರಿಯಲ್ಬಾರ
ಗರ್ತಿಲಕ್ಷಣಕೆ ಇದು ಸಲ್ಲ | ಮಂದೂರಿ
ಮಂಚಕೇ ಹಾಸ ಬಿಡಿಸೆಂದ | ಮಂದೂರಿ
ಮಂಚಕೇ ಹಾಸ ಬಿಡಿಸಾಳೆ | ಅಗಮಂಜು
ಮಂಚದ ಮೆನೆ ಒರುಗಾನೆ | ಮಂದೂರಿ

ತಾನೊಡನೋಗಿ ಒರಗಾಳೆ |
ತಾನೊಡನೋಗಿ ಒರಗುದ್ನು ನಾರ್ಣದೇವ
ತಾ ಕೋಳಿಯಾಗಿ ಸರಗಯ್ದು |
ಕೋಳಿ ಕೂಗಿದ ಮೆನೆ ಹಿಂಡರ ಹಾಸಿಗೆ ಸಲ್ಲ
ಗಂಡಸು ತನಕೇ ಇದು ಸಲ್ಲ | ಮಂದೂರಿ
ದಂಡೀಗಾರತಿ ಕಳುಗೀಸು |

ಊರ್ಕೋಳಿಯಾಗೆ ಲೋಕೆಲ್ಲ ಬೆಳಗಾಯ್ತಿತ್ತು
ಊರ್ಕೋಳಿಯಲ್ಲ ಸಿಂಹ ಕೋಳಿ | ನಿನ್ನಪ್ಪ
ತಾ ಕೋಳಿಯಾಗಿ ಸರಗಯ್ದ |
ಒಂದು ದಿನ ಒಡ್ನೆ ಇರುವೆನೆಂದರೆ
ಇರ್ಗುಡ ನನ್ನಹಗೆಯವ | ಮಂದೂರಿ
ದಂಡೀಗಾರರಸಿ ಕಳೂಗೀಸು |
ದಂಡೀಗ್ಹೋಗ್ವಕೆ ಬಂದದ್ದು ಮತ್ತೇನು

ದಂಡಗರು ಕೊಡ್ವ ಹಗೆಯವ್ಗೆ
ದಂಡ ಕೊಟ್ಟರೆ ಸಿರಿಯರಸು ನೆಗಿಯಾಡ್ವ
ಬಂದಟ್ಟು ಬರಲಿ ನಿಜಕರ್ಣ|ಮಂದೂರಿ
ದಂಡೀಗಾರರಸಿ ಕಳುಗೀಸು|
ಹನ್ನೆಯ್ಡು ವರುಸೆ ಎಣ್ಣಿಯುಂಡವ ಕೋಟೆ
ರಕ್ಕಸಕೋಟೆ ರಣಗೋಟೆ| ನಲ್ಲರೆ
ಕೋಟಿ ಗೋದವ್ರು ಬರುದಿಲ್ಲ| ನಲ್ಲರೆ
ದಂಡನರು ಕೊಡ್ವ ಹಗೆಯವ್ಗೆ
ದಂಡ ಕೊಟ್ಟರೆ ಹಗೆಯುವ ನೆಗ್ಗೀಯಾಡೂವ
ಬಂದುಟ್ಟ ಬರಲಿ ನಿಜಕರ್ಣ| ಮಂದೂರಿ
ದಂಡೀಗಾರರಸಿ ಕಳುಗೀಸು |

ಏನು ಹೇಳಿದ್ರು ಕೇಳರು ಅಂದೇಳಿ
ಏನಾಳು ಒಳುಗೆ ನೆಡುದಳೆ | ಮಂದೂರಿ
ತಾನುಟ್ಟ ಪಟ್ಟೀ ನೆಗದಾಳೆ | ಮಂದೂರಿ
ಮಾಳೂಗಿಲಿಂದ್ಹೆರಗೆ ಬರುವಾಳು | ಮಂದೂರಿ
ಅಗಮಂಜುನೊಡನೋಗಿ ನಿಲ್ವಾಳು | ಮಂದೂರಿ
ಅಗಮಂಜುಗೆ ಪಟ್ಟೀ ಕೊಡುವಾಳು | ಅಗಮಂಜು
ಎಯ್ಡ ಕಯ್ಯೊಡ್ಡಿ ತಡದಾನೆ |

ಹೆಂಗಸರುಡು ಪಟ್ಟಿ ದಂಡೀಲಿಡಾಡ್ವದು
ದಂಡೀನಲ್ಲೊಬ್ಬ ಸಿರಿಯರಸು | ಕೇಳಿದ್ರೆ
ತೋಳು ತೊಡಿ ಹೊಯ್ದು ನೆಗಿಯಾಡ್ವ | ಎಂದೇಳಿ
ಹೀತ್ರಕೆ ಪಟ್ಟೀ ಒಗದಾನೆ | ಏನಂದಿ
ಮಂದೂರಿ ಅತ್ತೂಗ್ ದೀರುಟ್ಟಿ ಹರಿಯಾಲಿ | ಅಂದ್ಹೇಳಿ
ಮಳುಗ್ಗಿಂದೆರುಗೇ ಬರುವವಾನೆ | ಮಂದೂರಿ

ಮುತ್ತೀನ ಕಣ್ಣೀರ ಸೆಡದಾಳೆ |
ಮುತ್ತೀನ ಕಣ್ಣೀರ ಸೆಡ್ವದ್ನು ಅಗಮಂಜು
ಬೀಸಿ ಬೆನ್ನಟ್ಟಿ ನೆಡದಾನೇ ಅಗಮಂಜು
ಬೋಂ ಆನೆ ಆನೀ ನೆಗೆದತ್ತಿ|
ಆನೆ ಕುದ್ರೀಯೋ ಮಂದೀ ಮಾರ ಬಲವೋ
ದಂಡೀನ ಕಾಳಿ ಕರ್ಕಾಳಿ | ಸಯ್ವಾಗಿ

ದಂಡೀನ ಕಲಿಗಳು ನೆಡದಾರೇ | ಅಗಮಂಜು
ರನ್ನದ ಕೋಟಿಗಾಗೇ ನಡೆದಾನೆ | ಅಗಮಂಜು
ಚಿನ್ನದ ಕೋಟೀಗಾಗೇ ನಡೆದಾನೆ | ಅಗಮಂಜು
ಕೆಂಡದ ಕೋಟೆಗಾಗಿ ನಡೆದಾನೆ | ಅಗಮಂಜು
ಕೆಂಡದ ಕೋಟೆಯಲ್ಲೆ ನಿಲೂವಾನೇ |
ಕೆಂಡದ ಕೋಟೆಯಲ್ಲೆ ನಿಲ್ಲವದ್ನು ನಾರ್ಣದೆವ
ಗಿಳಿಯಾಗೇ ಮಿಳಿಯಾ ಸಿಗದಾನೇ | ಅಗಮಂಜು
ಆಗೊಂದು ಮಾತಾ ನುಡಿದಾನೆ |

ಅಕ್ಕ ತಂಗ್ದೀರ ಮಕ್ಕಳ್ರ ಲಕ್ಷ್ಮೀಯ ಕೊಮರ್ರ
ಮಿಂಚಿನ ಕಾಳಗಕ್ಕೆ ನಿಲಬೇಕು | ಅಂದೇಳಿ
ತನ್ನ ಆಯುದವ ತಡದಾನೆ | ಅಗಮಂಜು
ಒಂದು ಸುತ್ತನ ಮಂದೀ ಸವರಾನೆ |
ಒಂದು ಸುತ್ತನ ಮಂದಿ ಸವರುದ್ನು ಅಗಮಂಜುಗೆ
ಕಯ್ಯಾಗನ ಕತ್ತೀ ತಡೆದದೆ | ಅಗಮಂಜು
ನಿಂಬೀ ಹುಳಿಯಲ್ಲೇ ಬಿಡಸಾನೆ |

ಅಕ್ಕ ತಂಗ್ದೀರ ಮಕ್ಕಳ್ರೆ ಲಕ್ಷ್ಮೀಯ ಕೊಮರ‍್ರ
ಈಗಿನ ಕಾಳಗಕ್ಕೆ ನಿಲಬೇಕು | ಅಂದೇಳಿ
ಎಯ್ಡು ಸುತ್ತನ ಮಂದಿ ಸವರಾನೇ | ಅಗಮಂಜೂಗೆ
ಕಯ್ಯಗನ ಕತ್ತೀ ತಡದದೆ |
ಕಯ್ಯಗನ ಕತ್ತಿ ತಡವದ್ನು ಅಗಮಂಜು
ಕಂಚೀ ಹುಳಿಯಲ್ಲೇ ಬಿಡಿಸಾನೆ |
ಆನೀ ಕುದ್ರೀಯೋ ಮಂದೀ ಮಾರಾಬಲವೋ

ದಂಡೀನ ಕಾಳಿ ಕರ್ಕಾಳಿ | ಸೆಯ್ವಾಗೇ
ದಂಡೀಗ್ ಕಲಿಯಾಗಿ ನಿಲಬೇಕು | ಅಗಮಂಜು
ಮೂರು ಸುತ್ತನ ಮಂದಿ ಸವರಾನೇ |
ನಾರ್ಣದೆವ ಕೆದೂಗಿ ಬನವ ಇಳಿದು
ಕೆದೂಗೊಂದೊಲಿ ಒಗದಾನೇ | ನಾರ್ಣದೇವ
ಸೆಳ್ಳುಗುರಲ್ ವಾಲೀ ಬರದಾನೆ| ನಾಣದೆವ
ತನ್ನ ಗಿಳಿಗೋಳ ದೆನೀದೂರಿ |
ತನ್ನ ಗಿಳಿಗೋಳ ದೆನಿದೂರುದ್ನು ಗಿಳಿಗೋಳು

ಓಯ್ಗುಂಡೇ ಒಡನೆ ಬರುವಾವೇ |
ಹಾಳವಾದ ಪಟ್ಣ ದೂಳವಾದ ಪಟ್ಣ
ನಾರ್ಣದೆವ್ನ ಪಟ್ಣೆಲ್ಲ ಹಾಳಾಗೋಯ್ತು | ಕರ್ಣನ ಕಯ್ಲಿ
ಕಡಚಕ್ರ ಕೋವೀ ಉಗರಲ್ಲಿ | ಅಡಗಸ್ ಕಂಡೇ
ಕರ್ಮುಗುಲೊಳ್ಗೆ ಬರಬೇಕು | ಕರ್ಣನ ಕಯ್ಲೆ
ಕೋಟೀಗೆ ಮರಸೇರೆ ನಿಲಬೇಕು | ಕರ್ಣನ ಕಯ್ಲೆ
ಒಂದು ಬಾಣಾದಲ್ಲಿ ಹೊಡಿಬೇಕು | ಅಂದೇಳಿ
ಕೊಟ್ಟಾನೆ ಕಯ್ಯಾ ಬರದೋಲೆ |
ಕೊಟ್ಟ ವಾಲೀಯ ರಟ್ಟೀ ಲಡಗಸಕಂಡೇ

ಹಾರದಂಬರಕೇ ಸೆರಿಯಾಗಿ | ಗಿಳಿಗೋಳು
ನಾರ್ಣದೇವ್ನ ಪೂರ್ವಾ ಗಳದಾರೇ | ಗಿಳಿಗೋಳು
ಕರ್ಣನ ಪುರಕೇ ಅರಗಾರೆ | ಗಿಳಿಗೋಳು
ಹೋಗಿ ನೋಡಾರೆ ಒಳಗೊಮ್ಮೆ |
ಒಂದ್ಹೂಗ ಕೊಯ್ದಿ ಒಂಬತ್ ಜಪಮಾಡು ಕರ್ಣನೆ
ಕೇಳ ಬಾರೊಂದು ಹೊಸ ಸುದ್ಧಿ |
ಅಟ್ಟಂಬು ಮಾತನೇ ಕೇಳಾನೆ ಕರ್ಣನು
ಮಾಳಗ್ಗಿದ್ಹೆರಗೇ ಬರುವಾನೇ | ಕರ್ಣನು

ಗಿಳಿಗೋಳೊಡನೋಗಿ  ನಿಲವಾನು |
ಯಾವೂರ ದಂಡೋ ಯಾವುರ ದಾವುರಿಯೋ
ನಾರ್ಣದೇವ್ನ ಪಟ್ಟೆ ಪಟ್ಣೆಲ್ಲ ಬರುವಾದೂ |
ಕರ್ಣನ ಕಯ್ಲಿ ಕರ್ದೊಂದುಂಟ್ ಕಂಡಿ ಕರ್ದೊಂದ್ ತಟ್ ಕಂಡಿ
ಕಡ ಚಕ್ರ ಕೋವಿ ಉಗುರಲ್ಲಿ | ಅಡಗ್ ಕಂಡೇ
ಕರಿಯದರಗಾಗಿ ಬರಬೇಕು | ಕರ್ಣನಕಯ್ಲಿ
ಕೋಟೀಗ್ ಮರಸಾರಿ ನಿಲಬೇಕು | ಕರ್ಣನ ಕಯ್ಲಿ
ಒಂದು ಬಾಣದ್ಲೇ ಹೊಡೀಬೇಕು | ಅಂದೇಳಿ

ಕೊಟ್ಟವೇ ಕಯ್ಲಿ ಬರದೋರಿ |
ಕೊಟ್ಟ ವಾಲೀಯ ದುಟ್ಟೀಸಿ ನೋಡಾನೇ
ಪನ್ನೀ ಮರಿಯಲೇ ಮುಗಳ್ನಗೆ | ಆಡೀತಾ
ಮಾಳೂಗಿ ಒಳಗೇ ನೆಡದಾನೇ
ಕರ್ದೊಂಟ್ಟಾನೇಕೆರ್ದೂಂದ್ ತೊಟ್ಟಾನೇ

ಕಡಚಕ್ರ ಕೋವಿ ಉಗರಲ್ಲಿ | ಅಡಗಸ್ ಕಂಡೇ
ಕೆಂಡದ ಕೊಟೀಗೇ ಹೊರಟಾನೆ | ಕರ್ಣನು
ಕೊಟೀಗ್ ಮರಸಾರೇ ನಿಲವಾನೇ | ಕರ್ಣನು
ಒಂದು ಬಾಣದ್ಲೇ ಹೊಡದಾನೆ | ಅಗಮಂಜು
ಮೇಟಿಕತ್ತರಿಸಿ ವುಪುಡಿ | ಅಗಮಂಜು
ಗಡಗಡನಲ್ಲಿ ಹೆದರಾನೇ |
ಅಯ್ಯ ದೊಡ್ಡಪ್ಪ ನೀನಂಬುದ್ನ ನಾನರಿಯೆ
ಮೊಸಾದಲ್ ನನ್ನಾ ಕೊಲ ಬಂದಿಯಾ |

ಆಳೀಗೇ ಆಳು ಸೆರಿಯಾಗೇ ಬಂದೀರೆ
ನೋಡ್ತಿದ್ದೆ ದೊಡ್ಡಪ್ನ ಬಗಿಯಾವಾ | ದೊಡ್ಡಪ್ಪ
ಮೊಸದಲ್ ನನ್ನ ಕೊಲ ಬಂದ್ಯ
ಅಯ್ಯನನ್ ಮಗನೆ ನೀನಂಬುದ್ ನಾನರಿಯೆ
ಕಳ್ಳ ನಾರ್ಣದೆವ ಸುಳ್ಳೊಂದ | ಬರ್ದೀದಾ
ಮೊಸದಲ್ ನಾನು ಹೊಡೆದೀದೆ | ಮಗನೆ ಕೇಳು
ಆರಗೆಯದ್ರ ನೀನು ಬದ್ಕೂವೆ |
ಎಳ್ಳೂ ಕಾಳೀನಟ್ಟು ಮುಳ್ಳು ಮೊನೆಯುಟ್ಟು

ಕಲಿಯಾದ್ರ ನಾನು ಬದಕ್ಲಾರೆ | ದೊಡ್ಡಪ್ಪ
ಮೊಸದಲ್ ನನ್ನ ಕೊಲಬಂದ್ಯ |
ಸರಿಯಾ ಸರಿಯೋರು ಸೆರ್ ಪಗಡೀ ಆಡ್ವಂಗೆ
ತೋಳ ಮೆನೆಂತಾ ಕಲಿಹುಣ್ಣು | ಕೇಳೀದ್ರೆ
ಸತ್ತ ಬಾಳುಮಿಯೇ ತನಗಕ್ಕು |
ಆಗಮಂಜು ಬಿದ್ದಲ್ಲಿ ಹನ್ನೆಯ್ಡು ಸುತ್ತನ ಕೋಟೆ
ಹನ್ನೆಯ್ಡು ಸುತ್ತೀನಾ ಅರಮನೆ | ಆಗಲಂದೇ
ದೊಡ್ಡಪ್ಪ ಸಾವಿರದ ಹರಸಾಹಸ |

ಅಕ್‌ತಂಗೀ ಮಕ್ಕಳ್ಗೇ ಲಕ್ಷ್ಮೀ ಕೋರ್ಮಗಳ
ಅವರೆಲ್ಲರ್ಗಿಲ್ಲಿ ನೆರಳಲ್ಲಿ
ಸಿಗೋರರ ಬಂಟ್ರಲ್ಲಿ ಅಯ್ವರ್ಗೆ ನೆರಳಿಲ್ಲ
ದೊಡ್ಡಪ್ಪ ಸಾವಿರವಾ ಹರಸಾನೆ.
ದೊಡ್ಡಪ್ಪ ಸಾವಿರವ ಹರಸುದ್ನು ಅಗಮಂಜು
ಬಿದ್ದಲ್ ಒಂದೋಲಿ ಬರವಾನೆ| ಅಗಮಂಜು

ತನ್ನ ಗಿಳಿಗಳ ಕರೆದಾನೆ | ಗಿಳಿಗೋಳು
ಓಯ್ಗುಂಡೇ ಒಡನೇ ಬರುವಾದು |
ಹೋಗೇಳಿ ಅಜ್ಜಮ್ಗೆ ಹೋಗೇಳಿ ತಾಯಮ್ಗೆ
ಹೋಗೇಳೀ ಅಯ್ವರು ಮಡದೀರ್ಗೆ |ನಿಮ್ಮಾಲಾ
ಗಂಡಾ ಕಾಲಗ್ಲೆ ಮಡದಾನೇ| ಅಂದೇಳೆ
ಕೊಟ್ಟಾನೇ ಕಯ್ಲೇ ಒರದೋಲಿ |
ಕೊಟ್ಟವಾಲೀಯಾ ರಟ್ಟೀಯಲ್ಲಡಗಿಸಿಕಂಡೇ
ಹಾರಿದಂಬರಕೇ ಸೆರಿಯಾಗೇ | ಗಿಳಿಗೋಳು

ಮಾಳೂಗಿ ಒಳುಗೇ ನೆಡದಾವೇ |
ಮಾಳೂಗಿ ಒಳಗೇಹಾಲ್ಕಾಸು ಉತ್ತೂರಿ
ಕೇಳೀ ಬಾರೊಂದು ಹೊಸ ಸುದ್ಧಿ     |
ಅಟ್ಟಂಬು ಮಾತಾ ಕೇಳೀತೇ ಉತ್ತೂರಿ
ಮಾಳ್ಳುಂಗಿದೆರುಗೇ ಬರುವಾಳೇ | ಉತ್ತೂರಿ
ಗಿಳಿಗೋಳೋಡನೋಗಿ ನಿಲೂವಾಳೂ
ಗಿಳಿಗೋಳೊಡನೋಗಿ ನಿಲುವದ್ನು ಗಿಳಿಗೊಳು
ಕೊಟ್ಟಾರೆ ಕಯ್ಯ ಬರದೋಲಿ | ಗಿಳಿಗೋಳು
ಹಾರಿದವೇ ಅಂಬರಕೆ ಸೆರಿಯಾಗಿ |
ಕೊಟ್ಟ ವಾಲೀಯಾ ದುಟ್ಟೀಸಿ ನೋಡಾಳೇ
ಮಾಳೂ ಒಳುಗೇ ನೆಡದಾಳೇ | ಉತ್ತೂರಿ

ಹೊಂಗಿನ ಚಬ್ಬಿ ತಡದಾಳೇ ಉತ್ತೂರಿ
ಮಾಳೂಗಿ ಲಿಂದೆರಗೇ ನೆಡದಾಳೇ | ಉತ್ತೂರಿ
ಹೊಂಗಿನಕ್ಕಲಕೇ ನೆಡದಾಳೇ | ಉತ್ತೂರಿ
ಹೊಂಗಿನಕ್ಕಲ ಒಳಗೇ ನೆಡದಾಳೇ | ಉತ್ತೂರಿ
ಮೊಲ್ಲೆ ಮಲ್ಲುಗಿಯ ಕೊಯ್ದಾಳೆ | ಉತ್ತೂರಿ
ಸುರಗೇ ಸಾವಂತಗಿಯಾ ಕೊಯ್ದಾಳೆ | ಉತ್ತೂರಿ

ಹೊಂಗಂಬಂ ಹೊಂಗೆಲ್ಲ ಕೊಯ್ದಾಳೆ |
ಹೊಂಗಂಬುಹೊಂಗೆಲ್ಲ ಕೊಯ್ದಿ ದಂಡೀಕಟ್ಟಿ
ಹೂಂಗ್ನ ಚಬ್ಬೀಯಲ್ಲೇ ಮಡಗಾಳೆ | ಉತ್ತೂರಿ
ಹೂಂಗ್ನ ಹಕ್ಲೆರಗೇ ಬರುವಳೇ | ಉತ್ತೂರಿ
ಕೆದೂಗಿ ಬನಕೇ ಬರುವಾಳೇ | ಉತ್ತೂರಿ

ಕೆದೂಗಿ ಹೂಂಗ ಒಗದಾಳೇ | ಉತ್ತೂರಿ
ತನ್ನಾಲರಮನಿಗೇ ಬರುವಾಳೆ | ಉತ್ತೂರಿ
ಮಾಳೂಗಿ ಒಳಗೆ ನೆಡದಾಳೇ | ಉತ್ತೂರಿ
ಹೂಂಗನ ಚಬ್ಬಿ ಮಡಗಾಳೇ | ಉತ್ತೂರಿ
ಸಿಕ್ಕದ ಕಣ್ಣ ಸೆಡೋಲಿಸಿ |
ತಂಪೀಗೆಳ್ಳೆಣ್ಣೇ ತಂಪೀಗ್ ಹಳ್ಳೆಣ್ಣೇ
ಎಳ್ಳು ಕಾಳೆಣ್ಣೆ ಹನಿಯಣ್ಣೆ | ಉತ್ತೂರಿ
ನೆತ್ತಿ ತುಂಬೆಣ್ಣೆ ಎರದಾಳೆ | ಉತ್ತೂರಿ
ರನ್ನದ ಬಾಚಣಗಿ ತಡದಾಳೇ | ಉತ್ತೂರಿ

ತೂಗು ಮಂಚಲ್ಲೇ ಕುಳತಾಳೆ |
ಕೆನ್ನೀಯ ನಿಗ್ರ ಎಡಕೊತ್ತೆ ಬಲಕೊತ್ತೆ
ಬಲ್ಲಾಲನೆಂಬ ಬಗತಾಲೇ | ಬಾಮಕೆ
ಹಿಕ್ಕೀ ಕಟ್ಟಳಿಯೇ ಸೆರಮುಡಿ | ಬಾಮಕೆ
ಎಳಿಯ ಸಿಂಗರವ ಮೊಡದಾಳೆ |
ಮೊಲ್ಲೆ ಮಲ್ಲೂಗೆ ಸುರಗೆ ಸಾವಂತೂಗೆ
ಹೊಗಂಬು ಹೂಗೆಲ್ಲ ಮುಡದಾಳೆ | ಉತ್ತೂರಿ
ಕೆನ್ನೆಗೆ ಕೆದುಗಿಯ ಮುಡದಾಳೇ | ಉತ್ತೂರಿ

ಕಣ್ಣೀಗೆ ಕಪ್ಪ ಇಡುವಾಳೆ | ಉತ್ತೂರಿ
ನೊಸಲಿಗೇ ಸಿರಿಗಂದ ಇಡುವಾಳೆ | ಉತ್ತೂರಿ
ಚಿನ್ನೆಲ್ಲ ಕೆಮಿದುಂಬಿ ಇಡುವಾಳೇ | ಉತ್ತೂರಿ
ತನ್ನ ಹೂಬಣ್ಣ ನೆರ್ದುಟ್ಟಿ | ಉತ್ತೂರಿ
ಮಾಳೂಗಿ ಒಳೂಗೆ ನೆಡದಾಳೇ | ಉತ್ತೂರಿ
ತೊಟ್ಲನ ಕಂದನ ನೆಗ್ದಾಳೆ |
ಬಿದ್ದ ಮೊಲಿಮೆನೆ ಬೆಳ್ಳಿಯ ಸಮದರ

ಮುದ್ದಯ್ಯ ಬಾರೋ ಮೊಲಿಉಣ್ಣೋ | ಅಂದುತ್ತೂರಿ
ಅತ್ತೀಕಯ್ಲದ್ರ ಕೊಡುವಾಳು |
ಕಂಬ್ಳೀ ಹೊದಿಸ್ಬೇಡ ಅಂಬ್ಲಿ ಉಣಸ್ಬೇಡಿ
ರಂಡೀ ಕೂಸೆಂದಿ ಕರಿಬೆಡಿ| ಅತ್ತಿಯೋರೆ
ಮುದ್ದೀಗೆ ಹೆರಿಯ ಮಗ್ನನ್ನಿ | ಅಂದೇಳಿ
ಅತ್ತೀ ಕಯ್ಲಿ ಮಗನ ಕೊಡುವಾಳು | ಉತ್ತೂರಿ

ಮಾಳುಗ್ಗಿದೆರಗೆ ಬರುವಾಳೂ | ಉತ್ತೂರಿ
ರಾಜಂಗ್ಳ ಮೆಟ್ಟ ಇಳ್ದಾಳೆ | ಉತ್ತೂರಿ
ರಾಜಬೀದಿಗಾಗಿ ನೆಡದಾಳೇ | ಉತ್ತೂರಿ
ರನ್ನದ ಕೊಟೆಗಾಗಿ ನೆಡದಾಳೆ | ಉತ್ತೂರಿ
ಚಿನ್ನದ ಕೊಟೆಗಾಗಿ ನೆಡದಾಳೆ | ಉತ್ತೂರಿ
ಕೆಂಡದ ಕೊಟೆಗಾಗಿ ನೆಡದಾಳೆ | ಉತ್ತೂರಿ

ಅಗಮಂಜು ಒಡನೋಗಿ ನಿಂತಾಳೆ | ನಾರ್ಣದೆವ
ಗಿಳಿಯಾಗೇ ಮಿಳಿಯಾ ಎಳದಾನೆ | ನಾರ್ಣದೆವ
ತನ್ನಾಲರಮನ್ಗೆ ನೆಡದಾನೆ | ನಾರ್ಣದೆವ
ಮಾಳೂಗಿ ಒಳುಗೆ ನೆಡದಾನೆ | ನಾರ್ಣದೆವ
ತೂಗುಮಂಚದಲ್ಲೆ ಕುಳತಾನೆ | ಮಂದೂರಿ
ಓಡ್ಬಂದ್ ತೊಡಿಮೆನೆ ಕುಳ್ತಾಳೆ | ನಾರ್ಣದೆವ
ನೆತ್ತೀಯ ಕಿಟ್ಟಿ ಎಳಗಾನೆ |

ಪಟ್ಟೀಯ ಉಡಕೂಸೆ ದಟ್ಟೀಯೆ ಬಿಡಕೂಸೆ
ಕಾಜಿನ ಬಳಿನೂರ ಜರಿಕೂಸೆ | ನಿನ್ನಾಲಾ
ಗಂಡ ಕಾಳಗ್ಲೆ ಮಡ್ದಾನೆ |
ಪಟ್ಟೀಯ ಉಡುವಾಕೆ ದಟ್ಟೀಯ ಬಿಚ್ಚುವಾಕೆ
ಏಸು ಸಿರಿಗಂಧ ಅರುವಾಕೆ | ಅಪ್ಪಾ ಕೇಳೋ
ಹೇಳ್ಕೊಡೋ ಅಯ್ವರ‍್ರ ಮಡದಿರ್ಗೆ |
ಗೊಕನ್ಕೆ ಹೋಗಕೂಸೆ ಗುಡಿಸಲ್ ಕಟ್ಟೇ ಕೂಸೇ
ವಬೋಳಾ ಮನ್ ಅರವಿ  ಇಡಕೂಸೇ | ನಮ್ಮನಿಯ
ಕಾಳೀಗೆ ಹುಲ್ಲ ಹೊರಕೂಸೆ ನಿನ್ನಾಲ
ಗಂಡ ಕಾಳಗ್ಲೇ ಮಡದಾನೆ |

ಗೋಕನೋಗೂಕೆ ಗುಡ್ಸಲ್ ಕಟ್ಟೂವಾಕೆ
ಬೋಳಮೆನರ್ವಿ ಇಡ್ವಾಕೆ | ಅಪ್ಪಾ ಕೇಳೋ
ಹೇಳ್ಕೊಡಯ್ವರ‍್ರ ಮಡದೀರ್ಗೆ | ಅಂದ್ ಮುಂದೂ
ತೋಡಿಗಿಂದು ಕೆಳಗೆ ಇಳದಾಳೆ | ಮಂದೂರಿ
ಬಿದ್ದ ಬಿದ್ದಲ್ಲೇ ಮರ್ಗಾಳೆ | ಮಂದೂರಿಯ
ಕಾಲುಂಗಲ್ ಸೀರಿದವೆ ಒಳತಂಕೆ | ಮಂದುರಿಯ
ಕುಂಕುಮ ಸೀರಿದವೆ ಹೆರತಂಕೆ | ಮಂದುರಿಯ

ಅತ್ತಗದೀರ್ ಹೆರಗೆ ಬರುವಾರು |
ಆಗೇಕತ್ತೀಗೆ ಕಲ್ಲಿನಂಗೆಯ್ದೀದೆ
ಈಗೆಕತ್ತೀಗೆ ಮರ್ಗೀತೆ | ಹಾದಿಲೋಗು
ದೊಂಬಗಿನ್ನೇನು ಮರ್ಗೂವೆ | ಅಂದೇಳಿ
ಅತ್ತಗದೀರ್ ಒಳಗೆ ಬರುವಾರೆ |
ಅತ್ತಗದೀರ ಒಳಗೆ ಬರುವುದ್ನು ಮಂದುರಿಯ
ತಾಯವ್ವಿ ಹೆರಗೆ ಬರುವಾಳು |
ಎಲ್ಲೋರಳದೀರು ದಂಡ್ ಕಾದಿ ಮನೆಗೆ ಬಂದ್ರು

ನಮ್ಮಳಿಯಾನೆತ್ತ ನೆಡದಾನೆ | ಅಂದ್ ಮಂದುರಿ ತಾಯಿ
ಮುತ್ತನ ಕಣ್ಣೀರ ಸೆಡದಾಳೆ |
ಮುತ್ತನ ಕಣ್ಣಿರ ಸೆಡವದ್ನು ನಾರ್ಣದೆವ್ನ
ಕಿರಿ ಹೆಂಡರೆರ್ಗೆ ಬರುವಾರು
ಎಲ್ಲಾರಿದ್ದಮಲ್ಲಿ ಈ ನಾರಿಮುದ್ದಂದಿ
ಈ ನಾರಿನಮ್ಮ ಇರ್ಗೊಡ | ನಲ್ಲಾರೆ
ಸುರಲೋಕಕ್ಕೀವಳಾ ಇಟ್ಬನ್ನಿ |

ಅಟ್ಟಂಬು ಮಾತಾ ಹೇಳೀರು ಅವ್ನ ಹಿಂಡ್ರು
ಮಾಳೂಗಿ ಒಳೂಗೆ ನೆಡದಾರೆ |
ಅಟ್ಟಂಬು ಮಾತನೇ ಕೇಳಾನೇ ನಾರ್ಣದೆವ
ಮಂದೂರಿ ಎತ್ತೀನಿಲ್ಸಾನೆ | ನಾರ್ಣದೆವ
ಮಂದೂರಿ ಎತ್ತೀ ಹೊಗಲೀಗೆ | ಏರಿಸಿಕಂಡಿ
ಮಾಳಗ್ಗಿಂದೆರಗೆ ಬರುವಾನೆ | ನಾರ್ಣದೆವ
ರಾಜಂಗ್ಳ ಮೆಟ್ಟ ಇಳದಾನೆ | ನಾರ್ಣದೆವ

ತೆಂಗಿನ ಬನವ ಇಳದಾನೆ | ನಾರ್ಣದೆವ
ತೆಂಗೀನೊಂದೂಲೀ ಒಗದಾನೆ | ನಾರ್ಣದೆವ
ಮಂದೂರಿ ಕೆಮಿಗೇ ಇಡುವಾನೆ | ನಾರ್ಣದೇವ
ಚಂದಣದ ಬನವಾ ಇಳದಾನೆ | ನಾರ್ಣದೆವ
ಚಂದಣದ ಪಟ್ಟೀ ಒಗದಾನೆ | ನಾರ್ಣದೆವ
ಮಂದೂರಿ ಮುಕಕೆ ಇಡುವಾನೆ | ನಾರ್ಣದೆವ
ನಾರಿಯೋರೆ ಕೇರಿಗಾಗಿ ನೆಡದಾನೆ | ನಾರ್ಣದೆವ

ನಾರಿಯೋರೆಲ್ಲ ಎದ್ರಾಗಿ
ನಾರಿಯೋರೆಲ್ಲ ಎದ್ರಾಗಿ ಏನಂಬಾರು
ದೆವರಿಂಡರಂಬೋರು ದೊಡ್ಡೋರ ಮಕ್ಕಳಂಬೋರು
ವಾಲಿಲ್ಲ ವಾಲೀ ಕಳ್ಳಿಲ್ಲ| ಅಂದೇಳಿ
ನಾರ್ಣದೆವ್ನ ಅವರು ಜರದಾರೆ |

ಅಟ್ಟಂಬು ಮಾತನ್ನೇ ಕೆಳಾನೇ ನಾರ್ಣದೆವ
ಚಿನ್ನದ ಕೋಟೀಗಾಗೆ ನೆಡದಾನೆ | ನಾರ್ಣದೆವ
ರನ್ನದ ಕೊಟೀಗಾಗಿ ನೆಡದಾನೆ | ನಾರ್ಣದೆವ
ಸಿಗ್ರೋರೆಡೆಗಾಗೇ ನೆಡದಾನೆ |
ವಾಲಿಲ್ಲದತ್ತೀಗೆ ಬರ್ತದೆ ಸೀಗ್ರರೇ
ಕೊಡ್ಕಂಬ್ರ ನಿಮ್ಮ ಒಡ್ನಲ್ಲಿ |
ಅಟಂಬು ಮಾತಾ ಹೇಳಿ ಕೇಳೂರಾಗೇ ನಾರ್ಣದೆವ
ಕೆಂಡದ ಕೋಟೀಗಾಗೆ ನೆಡದಾನೆ | ನಾರ್ಣದೆವ
ಮಂದೂರಿ ಎತ್ತಿ ಇಳುಕೀಸಿ
ಮಂದೂರಿ ಎತ್ತಿ ಇಳುಗಿಸುದ್ನು ಮಂದೂರಿ
ಆಗಮಂಜು ಒಡನೋಗಿ ನಿಲುವಾಳು | ಅಗಮಂಜು
ಆಗೊಂದು ಮಾತ ನುಡಿದಾನೆ |

ಒಂದು ವಾಲಿಯಿಟ್ಟು ಬಂದಿಯೇನೆ ಮಂದೂರಿ
ಇನ್ನೊಂದಲಿಯಾರ್ಗೆ ಕಳ್ದೀಯೆ | ನಾರ್ಣದೆವ
ನಿನ್ನಪ್ಪ ಗೋಲೀಯ ಕಳ್ದೀಯೆ |
ಲಳಿಯ ಮಾವಗೆ ಹೇಮಸ ಮಾತಾಡುದ್ನು
ಮಂದೂರಿ ಎತ್ತೀ ಹೊಗಲೀಗೆ | ಇಟ್ಟಕಂಡಿ
ರಾಜಬೀದಿಗಾಗಿ ಬರುವಾನೆ | ನಾರ್ಣದೆವ
ತನ್ನಲರಮನೆಗೆ ಬರುವಾನೆ | ನಾರ್ಣದೆವ

ಮಂದೂರಿ ಎತ್ತಿ ಇಳುಗೀಸಿ
ಮಂದೂರಿ ಎತ್ತಿ ಇಳುಸುದ್ನು | ಮಂದೂರಿ
ತಾಯವ್ವಿ ಕರೆದು ನುಡಿಮಾತು | ಏನಂದಿ
ದಂಡೀನೂಟಕೆ ಅನುಮಾಡು |
ದಂದೀನೂಟಕೆ ಅನುಮಾಡು ಅಂಬುದ್ನು ತಾಯವ್ಳ
ಮಾಳೂಗಿ ಒಳಗೆ ನೆಡದಾಳೆ |

ಕಾಯ್ ಮೆರ್ ಒಂಬತ್ ಬಗೆ ಎಲಿಮೆರ್ ಒಂಬತ್ ಬಗೆ
ನೂರೊಂದು ಬಗೆಯ ಅಡಗೀಯ | ಕಜ್ಜಾಯ
ಅನುಮಾಡಾಳೊಂದು ಗಳಿಗೇಲಿ| ಮಂದೂರಿ
ಹೊಂಗಿನ ಚಬ್ಬಿ ತಡದಾಳೇ | ಮಂದೂರಿ
ಹೊಂಗಿನಕ್ಕಲ್ಕೆ ನೆಡದಾಳು | ಮಂದೂರಿ
ಮೊಲೆ ಮಲ್ಲಗಿಯ ಕೊಯ್ದಾಳೆ | ಮಂದೂರಿ
ಸುರಕೆ ಸಾವಂತೂಗೆ ಕೊಯ್ದಾಳೆ | ಮಂದೂರಿ

ಹೂಂಗಂಬ್ ಹೊಂಗೆಲ್ಲ ಕೊಯ್ದಾಳೆ | ಮಂದೂರಿ
ಹೂಂಗಿನ್ ಚಬ್ಬೀಲಿ ಮಡಗಾಳೆ | ಮಂದೂರಿ
ಹೊಂಗ್ನಹಕ್ಕಲೆರುಗೆ ಬರುವಾಳು | ಮಂದೂರಿ
ತನ್ನಲರಮನಿಗೆ ಬರುವಾಳು | ಮಂದೂರಿ
ಹೂಂಗಿನ ಚಬ್ಬೀ ಮಡುಗಾಳೆ | ಮಂದೂರಿ
ಬಚ್ಚಲರಮನ್ಗೆ ನೆಡದಾಳೆ |

ಕಂಚೀನ ತಟ್ಟೀಲಿ ಸಂಪೂಗಿ ಹೂಂಗಿನೆಣ್ಣೆ
ಹೊನ್ನ ಮನಿಯೊಂದ ತಡದಾಳೇ | ಮುಂದುರಿ ತಾಯಿ
ಬಚ್ಚಲರಮನೆಗೆ ನೆಡದಾಳೇ |ಮುಂದುರಿ ತಾಯಿ
ಮಂದುರಿಗ್ ಎಣ್ಣೇ ಇಡೂವಾಳೆ |
ಕಾಲತಿಕ್ಕುವರು ಹದಿನೆಂಟು ಸಾವಿರ ಮಂದಿ
ಬೆನ್ನ ತಿಕ್ಕುವರ್ಗೆ ಅಡ್ಡಿಲ್ಲ | ಮುಂದೂರಿಯ
ಎಣ್ಣೀಯ ಜಳಕ ಮುಗದದೆ | ಮಂದೂರಿ
ಬಚ್ಚಲ ಕಲ್ಮೇಲೆ ಕುಳತಾಳೆ ಮಂದೂರಿ ತಾಯಿ

ಚೆಂಡಿಗೆ ನೀರ ಎರದಾಳೇ |
ಚೆಂಡ ಬಿಡಿಸಿದ್ರೆ ಚೆಲಿದವೋ ಮಲ್ಲೂಗಿ
ಗೋವೀಲೆದ್ದೇಳು ಗಿಳಿ ಬಂದು | ಮುಂದುರಿಗೆ
ಚೆಲ್ಲಿದವೆ ಮಲ್ಲಿಗೆಯ ಕುಸುಮ | ಮಂದೂರಿ
ಮಿಂದೊಗೆದಳೊಂದು ಗಳಿಗೆಲಿ |
ಮಿಂದಾಳೋಗೆದಾಳೆ ಮಿಂದೇ ಮುಡಿಯುಟ್ಟಾಳೆ
ಮಂದಿ ಚಂಡಕಿಯ ಕುಡುಗಾಳೇ | ಮಂದೂರಿ
ತುಳಚಿ ಬುಡಕೋಗಿ ನಿಲ್ವಾಳು | ಮಂದೂರಿ

ತುಳಚೀ ತೀರ್ತವ ಕುಡಿದಾಳೇ | ಮಂದೂರಿ
ದೇವರ್ಗೆ ಕಯ್ಯ ಮುಗದಾಳೇ | ಮಂದೂರಿ
ಮಾಳೂಗಿ ಒಳಗೇ ನೆಡದಾಳೆ | ಮಂದೂರಿ ತಾಯಿ
ಹೊನ್ನ ಮಣಿಯೊಂದ ಮಡಗಾಳೆ | ಮಂದೂರಿ
ಮಣಿಯಾಮೆನೋಗಿ ಕುಳಿತಾಳೆ | ತಾಯವ್ವಿ
ಕಿರುಳು ಬಾಳೆಲಿಯಾ ತೊಳದಾಸಿ | ತಾಯವ್ವಿ
ಅನ್ನ ಮೆಗ್ರವ ಬಡಸಾಳೆ | ತಾಯವ್ವಿ
ಹಾಲು ಪಾಯಸವ ಬಡಸಾಳೆ | ತಾಯವ್ವಿ
ತುಪ್ಪ ಸಕ್ಕರೆಯ ಎರದಾಳೆ | ತಾಯವ್ವಿ
ಉಂಡೆದ್ದಳೊಂದು ಗಳಿಗೇಲ್ಲಿ

ಆಯುಳ್ಳ ಹಣ್ಣಡಕೆ ಸೋದಿಸಿದ ಬೆಳಿಯಲೆ
ಹಾಲಿನಲ್ಲಿ ಬೆಂದ ತೆನಿಸುಣ್ಣ | ತಡಕಂಡಿ
ಮಾಳುಗಿಲಿಂದೆರಗೆ ಬರುವಾಳು – ತಾಯವ್ವಿ
ಮಗಳೀಗೊಂದೀಳ್ಯ ಕೊಡುವಳು |
ಎಲಿಯೊಂದು ತಿಂದಾಳೇ ರಜವೊಂದ ಉಗುಳಾಳೇ
ಕೂತ ಗದ್ದಗಿಯ ಜಡಿದೆದ್ದು ಮಂದೂರಿ
ಮಾಳೂಗಿ ಒಳುಗೆ ನೆಡುದಾಳೇ | ಮಂದೂರಿ
ಸಿಕ್ಕದ ಕಣ್ಣ ಸೆಡುಲಿಸಿ |

ತಂಪೀಗ್ ಹೆಳ್ಳೆಣ್ಣೆ ಕಂಪೀಗ್ ಎಳ್ಳೆಣ್ಣೆ
ಎಳ್ಳು ಕಾಳೆಣ್ಣೆ ಹನಿಯೆಣ್ಣ | ಮಂದೂರಿ
ನೆತ್ತೀ ತುಂಬೆಣ್ಣೆ ಎರದಾಳೆ | ಮಂದೂರಿ
ರನ್ನದ ಬಾಚಂಗಿ ತಡದಾಳೆ          |
ಕೆನ್ನೀಯ ನಿಗರ ಎಡಕೋತ್ತಿ ಬಲಕೊತ್ತಿ
ಹಿಕ್ಕಿ ಕಟ್ಟಾಳೆ ಸೆರಮುಡಿಯ |ಬಾಮಕ್ಕೆ
ಎಳಿಯ ಸಿಂಗರವ ಮುಡದಾಳೆ | ಮಂದೂರಿ
ಮೊಲ್ಲೆ ಮಲ್ಲುಗೆಯ ಮುಡದಾಳೆ |  ಮಂದೂರಿ

ಹೂಗಂಬ್ ಹೂಗೆಲ್ಲ ಮುಡದಾಳೆ | ಮಂದೂರಿ
ನುಸುಲೀಗೆ ಸಿರಿಗಂಧ ಇಡುವಾಳು | ಮಂದೂರಿ
ಕಣ್ಣೀಗೆ ಕಪ್ಪ ಇಡುವಾಳು | ಮಂದೂರಿ
ತನ್ನ ಚಿನ್ನೆಲ್ಲ ಕೆಮಿದುಂಬಿ | ಮಂದೂರಿ

ತನ್ನ ಹೂಬಣ್ಣ ಉಟ್ಟಾಳೆ |
ಆನಿ ಕುದುರೀಯೋ ಗಂಟೆ ಕರಗೋಳು
ತನಗಿಂತು ಮುಂದು ಸವನಾಲಿ |
ತನಗಿಂತು ಮುಂದು ಸವ್ನಿ ಸುಂಗಾರಾಗಿ
ಬಂದೀ ಬೀದೀಲೆ ನಿಲ್ಬೇಕು | ಅಂದೇಳಿ
ತನ್ನ ಮನಸಲ್ಲೇ ನೆನಸಾಳೆ -ಮಂದೂರಿ ಅಪ್ಪ

ಹತ್ತು ಹುಯ್ದೆಂಟೆ ಹೊಯ್ದಾನೆ | ಮಂದೂರಿ
ರಾಜ ಮಾರ್ಗದಲ್ಲೇ ನೆಡದಾಳೆ |
ಆನಿ ಕುದರೀಯೋ ಗಂಟೇ ಕರಗೋಳು
ಅವ್ರೆಲ್ಲೋರ್ನೆಲ್ಲ ಒಡಗುಂಡಿ | ಮಂದೂರಿ
ಸುರಲೋಕಕ್ಕಾಗಿ ಹೊಡದಾಳೆ | ಮಂದೂರಿ
ರನ್ನದ ಕೂಟಿಗಾಗಿ ನೆಡದಾಳೆ | ಮಂದೂರಿ

ಚಿನ್ನದ ಕೊಟಿಗಾಗಿ ನೆಡದಾಳೆ | ಮಂದೂರಿ
ಕೆಂಡದ ಕೊಟಿಗಾಗಿ ನೆಡದಾಳೆ | ಮಂದೂರಿ
ಕೆಂಡದ ಕೊಟೀಲೆ ನಿಲುವಾಳು | ಮಂದೂರಿ
ಅಗಮಂಜು ನೋಡನೋಗಿ ನಿಲವಾಳು |

* * *