ಮಿಷನರಿಗಳು

ಕ್ರೈಸ್ತಪಾದ್ರಿಗಳು ಇಂಡೀಸ್‌ನ ದಿಕ್ಕಿಗೆ ಕೊಲಂಬಸ್‌ನ ಎರಡನೆಯ ಸಮುದ್ರಯಾನ ದೊಂದಿಗೆ ಜೊತೆಗಾದರು. ಬರುಬರುತ್ತಾ ಆಕ್ರಮಿಸಲಾದ ಜಾಗಕ್ಕೆ ಅವರ ಪ್ರವೇಶ ಹೆಚ್ಚಾಯಿತು. ಆಕ್ರಮಣಗಳು ಸಾಮಾನ್ಯವಾದ ಒಂದು ದಶಕದಲ್ಲಿ ಕ್ರೈಸ್ತಪಾದ್ರಿಗಳು ಅಮೆರಿಕಾಕ್ಕೆ ಆಗಮಿಸಿದರು. ಅವರು ತುಂಬಾ ಸುಸ್ಥಿತಿಯಲ್ಲಿದ್ದವರು. ಇವರು ಮಧ್ಯಯುಗೀನ ಚರ್ಚುಗಳಲ್ಲಿ ಶಿಸ್ತುಪಾಲನೆ, ವೈರಾಗ್ಯ ಪುನರುತ್ಥಾನಕ್ಕೆ ಸಂಬಂಧಿಸಿದಂತೆ ಅದರಲ್ಲೂ ಸುಧಾರಣೆಯ ಚಳುವಳಿಗಳಿಗೆ ಸಂಬಂಧಿಸಿದಂತೆ ಈ ಸೇನೆ/ತಂಡ ಮಿಷನರಿಗಳೊಂದಿಗೆ ಸೇರಿ ಸೂಕ್ಷ್ಮ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡರು ಮತ್ತು ಕಲಿಕೆಯ ಬಗ್ಗೆ ಆಸಕ್ತಿ ತಳೆದರು.

ಈ ಕ್ರೈಸ್ತಪಾದ್ರಿಗಳು ಸ್ಥಳೀಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರನ್ನಾಗಿ ಪರಿವರ್ತಿ ಸಿದರು. ಮೆಕ್ಸಿಕೋದಲ್ಲಿ ಫ್ರಾನ್ಸಿಸ್ಕಾನಾ ಹೇಳುವಂತೆ ೧೫೩೧ರಲ್ಲಿ ೧,೦೦೦,೦೦೦ಕ್ಕಿಂತಲೂ ಹೆಚ್ಚಿನವರನ್ನು ಕ್ರೈಸ್ತರನ್ನಾಗಿ ಮತಾಂತರಿಸಲಾಯಿತು. ಮತಾಂತರಕ್ಕೆ ಮನವೊಲಿಸಲು ಸಾಧ್ಯವಾಗದೇ ಹೋದಾಗ ಅನೇಕ ತರಹ ಒತ್ತಡಗಳನ್ನು ಹೇರಲಾಯಿತು. ತಮ್ಮ ಪ್ರಯತ್ನ ಫಲಪ್ರದವಾಗಲು ಈ ಪಾದ್ರಿಗಳು ಸ್ಥಳೀಯ ಭಾಷೆಗಳನ್ನು ಕಲಿತರು. ವ್ಯಾಕರಣಗಳನ್ನು ಬರೆದರು. ಪದಕೋಶಗಳನ್ನು ಸಿದ್ಧಪಡಿಸಿದರು. ಪಂಡಿತರು ಪ್ರಾಚೀನ ಇಂಡಿಯನ್‌ರ ಇತಿಹಾಸ, ಧರ್ಮ ಮತ್ತು ಆಚರಣೆಗಳನ್ನು ಸಂಗ್ರಹಿಸಿ ದಾಖಲಿಸುವ ಕಾರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಪರಿವರ್ತನೆ ಕೆಲಸ ಸಾಕಷ್ಟು ಯಶಸ್ವಿಯಾಗಿ ನಡೆಯಿತು. ಇದರ ಫಲವಾಗಿ ಮಿಷನರಿ ಪ್ರಯತ್ನಗಳ ಫಲವಾಗಿ ಧರ್ಮ ಆರಾಧಕರು ಮತ್ತು ಕ್ರೈಸ್ತಧರ್ಮದ ವಿಚಾರಗಳು ಸಂಕರವಾಗಲಿಕ್ಕೆ ಕಾರಣವಾಯಿತು. ಅಲ್ಲಿಯವರೆಗೆ ಗ್ವಾಟೆಮಾಲಾ ಮತ್ತು ಪೆರುವಿನಲ್ಲಿದ್ದ ಇಂಡಿಯನ್ನರು ಮಾಯಾ ಮತ್ತು ಇಂಕಾ ಕಾಲದಲ್ಲಿದ್ದ ಆಚರಣೆಯನ್ನೇ ಮುಂದುವರಿಸಿಕೊಂಡು ಬರುತ್ತಿದ್ದರು.

೧೬ನೆಯ ಶತಮಾನದ ಕೊನೆಯ ಹೊತ್ತಿಗೆ ಪಾದ್ರಿಗಳ ಬುದ್ದಿವಂತಿಕೆ, ನೈತಿಕ ಹೊಣೆಗಾರಿಕೆ ಕ್ಷೀಣಿಸುತ್ತಾ ಬಂತು. ಅವರ ಮೇಲೆ ಅನೇಕ ಆರೋಪಗಳು ಬರಲಾರಂಭಿಸಿ ದವು. ಶ್ರೀಮಂತ ದಾನಿಗಳಿಂದ ಕೊಡುಗೆಗಳನ್ನು ಅಪಾರ ಹಣವನ್ನು ಸ್ವೀಕರಿಸಲಾರಂಭಿಸಿ, ಅದನ್ನು ಭೂಮಿಯ ಮೇಲೆ ತೊಡಗಿಸಿ ಮತ್ತಷ್ಟು ಹಣ ಸಂಪಾದಿಸಿ, ಶ್ರೀಮಂತರಾದರು. ಅನಿವಾರ್ಯವಾಗಿ ಈ ಭೌತಿಕ ಲೋಭ ಪ್ರವೃತ್ತಿಯಿಂದಾಗಿ ಪಾದ್ರಿಗಳ ಮತ್ತು ಇಂಡಿಯನ್ ಸಮುದಾಯಗಳ ನಡುವಿನ ಸಂಬಂಧ ದುರ್ಬಲವಾಯಿತು.

ಕನಿಷ್ಠ ಆರ್ಥಿಕ ದೃಷ್ಟಿಯಿಂದಲಾದರೂ ಸ್ವಲ್ಪ ಯಶಸ್ವಿಯಾದ ಮಿಷನರಿ ಪ್ರಯತ್ನ ಎಂದರೆ ಪೆರುಗ್ವೆನಲ್ಲಿ ಸ್ಥಾಪನೆಗೊಂಡ ಕ್ರೈಸ್ತಮಂಡಲಿ. ಇದು ಸುಮಾರು ೩೦ ಮಿಷನರಿಗಳನ್ನೊಳಗೊಂಡಿತ್ತು ಹಾಗೂ ಅಮೆರಿಕಾದಲ್ಲಿ ಕ್ರೈಸ್ತ ಧರ್ಮೀಯ ಚಟುವಟಿಕೆ ಗಳನ್ನು ಹಮ್ಮಿಕೊಳ್ಳುತ್ತಿತ್ತು. ಇದರ ಶಿಸ್ತುಬದ್ಧ ಕಾರ್ಯವೈಖರಿ, ಕೇಂದ್ರೀಕೃತ ಸಂಘಟನೆ ಹಾಗೂ ಹತ್ತಿ ತಯಾರಿಕೆ, ತಂಬಾಕು ತಯಾರಿಕೆ ಹಾಗೂ ಚರ್ಮ ಹದ ಮಾಡುವಿಕೆ ಮತ್ತು ತುಂಬಾ ಲಾಭದಾಯಕ ಉದ್ಯಮಗಳನ್ನು ನಡೆಸಲು ಬೇಕಾದ ಮೃದು ಇಂಡಿಯನ್‌ಗಳ ಮೇಲೆ ಸ್ಪಷ್ಟ ನಿಯಂತ್ರಣ ಹೊಂದಿದ್ದರು.

ಚರ್ಚುಗಳು ವಿಚಾರಣಾ ಘಟಕಗಳನ್ನು ಹೊಂದಿದ್ದವು. ಈ ವಿಚಾರಣಾ ಘಟಕ ಔಪಚಾರಿಕವಾಗಿ ಇಂಡೀಸನ್ನ ಪ್ರವೇಶಿಸಿದ್ದು ಎರಡನೆ ಫಿಲಿಪ್‌ನ ಕಾಲದಲ್ಲಿ. ಈ ಘಟಕಗಳು ೧೫೬೯ರಲ್ಲಿ ಮೆಕ್ಸಿಕೊ ಮತ್ತು ಲಿಮಾ ಕಚೇರಿಗಳಲ್ಲಿ ಆರಂಭವಾಯಿತು. ಇದಕ್ಕೆ ಪೂರ್ವದಲ್ಲಿ ವಿಚಾರಣಾ ಅಧಿಕಾರವನ್ನು ಹೊಂದಿದ್ದ ಪಾದ್ರಿಗಳೇ ಈ ಕೆಲಸವನ್ನು ನಿರ್ವಹಿಸುತ್ತಿದ್ದರು.

ವಸಾಹತುವಾಗಿ ಬ್ರೆಜಿಲ್

ಸ್ಪೇನ್ ಮತ್ತು ಪೋರ್ಚುಗಲ್ ನಡುವೆ ೧೪೯೪ರ ಟೊರ್ಡೆಸಿಲ್ಲಾ ಸಂಧಾನ ಆಗುವ ತನಕ ಬ್ರೆಜಿಲ್‌ನ ಅಸ್ತಿತ್ವ ಅಷ್ಟೊಂದು ಸ್ಪಷ್ಟವಾಗಿರಲಿಲ್ಲ. ಅಥವಾ ಈ ಪ್ರದೇಶವು ಯುರೋಪ್, ಏಷ್ಯಾ ಜಗತ್ತಿಗೆ ಗೊತ್ತೇ ಇರಲಿಲ್ಲ. ಇದರ ಪ್ರಕಾರ ದಕ್ಷಿಣ ಅಮೆರಿಕಾದ ತೀರ ಪ್ರದೇಶದ ಸಂಪೂರ್ಣ ಭಾಗ ಪೋರ್ಚುಗೀಸರ ಪಾಲಿಗೆ ಬಂದಿತ್ತು. ೧೫೦೦ರಲ್ಲಿ ಪೆರ್ಡೋ ಆಲ್ವಾರಿಸ್ ಗೇಬ್ರಿಲ್‌ನ ನೇತೃತ್ವದಲ್ಲಿ ಒಂದು ತಂಡವನ್ನು ‘‘ಇಂಡಿಯಾ’’ದ ಪತ್ತೆಗೆ ಕಳುಹಿಸಲಾಗಿತ್ತು. ಆ ತಂಡ ತಮ್ಮ ಹಡಗುಗಳ ಚಲನೆಯನ್ನು ಮುಂದುವರೆಸಿ ಬ್ರೆಜಿಲ್‌ನ ತೀರವನ್ನು ಮುಟ್ಟಿತು. ಮಧ್ಯದ ಭೂಮಿ ಪೋರ್ಚುಗೀಸರಿಗೆ ಸೇರಬೇಕೆಂದು ತನ್ನ ಪತ್ತೆಯನ್ನು ಕುರಿತು ರಾಜರಿಗೆ ತನ್ನ ವರದಿಯನ್ನು ಕಳುಹಿಸಿದ. ಪೋರ್ಚುಗಲ್ ಕಡಿಮೆ ಸಂಪನ್ಮೂಲಗಳಿಂದಾಗಿ, ಹಾಗೂ ಆಫ್ರಿಕಾ ಮತ್ತು ಪೂರ್ವರಾಷ್ಟ್ರಗಳ ಶ್ರೀಮಂತಿಕೆಯ ಶೋಷಣೆಗೊಳಗಾಗಿ ಪೂರ್ಣಪ್ರಮಾಣದ ನೆಲೆಯನ್ನು(ವಸಾಹತನ್ನು) ಬ್ರೆಜಿಲ್‌ನಲ್ಲಿ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ. ಆದರೆ ವರ್ಣದ್ರವ್ಯ ಕೊಡುವ ಡೈ ಉಡ್/ ಬ್ರೆಜಿಲ್ ಉಡ್ ಬೆಲೆಬಾಳುವ ಮರಗಳ ಬೆಳವಣಿಗೆ ವ್ಯಾಪಾರ ಬಂಡವಾಳಗಾರರನ್ನು ಆಕರ್ಷಿಸಿತು. ಇಂಡಿಯನ್‌ರೊಂದಿಗೆ ಬಹಳ ಕಡಿಮೆ ವೆಚ್ಚದ ಕಾರಣಕ್ಕಾಗಿ ಈ ಉದ್ಯಮವನ್ನು ನಡೆಸತೊಡಗಿದರು. ಇದರಿಂದ ಹೆಚ್ಚಿನ ಲಾಭವನ್ನು ಹೊಂದತೊಡಗಿದರು. ಅಲ್ಲಿ ಮೂಲ ನಿವಾಸಿಗಳು, ಸಮಾಜದಿಂದ ಬಹಿಷ್ಕೃತರು, ಗಡಿಪಾರಾದ ಅಪರಾಧಿಗಳನ್ನು ಸ್ಥಳೀಯಕ ಇಂಡಿಯನ್ನರು ಬಹಳ ಆತ್ಮೀಯತೆಯಿಂದ ಸ್ವಾಗತಿಸಿ ತಮ್ಮೊಂದಿಗೆ ಸೇರಿಸಿಕೊಳ್ಳುತ್ತಿದ್ದರು. ೧೬ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಬ್ರೆಜಿಲ್ ಉಡ್ ಜಾಗ ಇದೇ ಸಂದರ್ಭದಲ್ಲಿ ಬ್ರೆಜಿಲಿಯನ್ ಆರ್ಥಿಕತೆಗೆ ಒಂದು ಭದ್ರ ನೆಲೆಯನ್ನು ಒದಗಿಸಿತು. ಕ್ರೈಸ್ತ ಮಿಷನರಿಗಳು ಮೊಟ್ಟಮೊದಲಿಗೆ ಇಂಡಿಯನ್ನರ ಗುಲಾಮಗಿರಿಯ ವಿರುದ್ಧ ಪ್ರತಿಭಟಿಸಿದನ್ನು ನಾವು ಗಮನಿಸಬಹುದು.

ವರ್ಣದ್ರವ್ಯದ ಮರ, ಕಬ್ಬು, ತಂಬಾಕು ವಿದೇಶಿ ಶಕ್ತಿಗಳನ್ನು ಬ್ರೆಜಿಲ್ ಕಡೆಗೆ ಆಕರ್ಷಿಸಿತು. ಫ್ರೆಂಚರು ತೀರ ಪ್ರದೇಶದಲ್ಲಿ ತಮ್ಮ ನೆಲೆಯನ್ನು ವಿಸ್ತರಿಸಲು ಅಲ್ಲಲ್ಲಿ ಪ್ರಯತ್ನ ಮಾಡುತ್ತಿದ್ದರು. ಇವರು ೧೫೫೫ರಲ್ಲಿ ರಿಯೊಡಿ ಜನಿಕೊವನ್ನು ತಮ್ಮ ರಾಜಧಾನಿ ಎಂದು ಗುರುತಿಸಿದರು. ಅದನ್ನೇ ಅವರು ಲಾವಫ್ರಾಂಸ್ ಅಂಟ್ರೋಶಿಕ್‌ದು ಕರೆದರು. ಆದರೆ ಫ್ರೆಂಚರ ವಸಾಹತು/ನೆಲೆ ಬ್ರೆಜಿಲ್‌ನಲ್ಲಿ ಕ್ಯಾಥೋಲಿಕ್ ಪ್ಯೂಗನಟ್ ನಡುವಿನ ಕಚ್ಚಾಟದಿಂದಾಗಿ ದುರ್ಬಲವಾಗುತ್ತಾ ಬಂತು. ೧೫೬೭ರಲ್ಲಿ ಪೋರ್ಚುಗೀಸರು ಫ್ರೆಂಚರನ್ನು ಓಡಿಸಿ ರಿಯೊಡಿ ಜೆನಿಕೊವನ್ನು ಆಕ್ರಮಿಸಿದರು.

ಎರಡನೆಯ ಫಿಲಿಪ್‌ನು ಖಾಲಿ ಇದ್ದ ಗದ್ದಿಗೆ ಏರಿದ ೧೫೮೦ರಲ್ಲಿ ಪೋರ್ಚುಗೀಸರು ಸ್ಪ್ಯಾನಿಶ್ ಕಾನೂನಿಗೆ ಒಳಪಟ್ಟರು. ಬ್ರೆಜಿಲ್ ಎರಡನೇ ಫಿಲಿಪ್‌ನ ಒಂದು ಸಾಮ್ರಾಜ್ಯಕ್ಕೆ ಒಳ್ಳೆಯ ಸೇರ್ಪಡೆಯಾಯಿತು.

ಸಾಮ್ರಾಜ್ಯದ ಸೇನೆ

ಆದಾಯ ಹೆಚ್ಚಿದಂತೆ ವಾಣಿಜ್ಯ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆಗಳು ಉಂಟಾದವು. ಅದರ ಫಲವಾಗಿ ಸಾಮ್ರಾಜ್ಯದ ಸಾಗರ-ಭೂಸೇನೆಯನ್ನು ಬಲಗೊಳಿಸುವ ಅಗತ್ಯತೆ ಕಂಡುಬಂತು. ೧೭೫೫-೬೩ರ ವರೆಗೆ ನಡೆದ ಏಳು ವರ್ಷಗಳ ಯುದ್ಧದಲ್ಲಿ ಸ್ಪೇನ್ ಸಾಕಷ್ಟು ಕಳೆದುಕೊಂಡಿತ್ತು. ೧೭೬೨ರಲ್ಲಿ ಹವನಾ ಮತ್ತು ಮನಿಲಾವನ್ನು ಇಂಗ್ಲಿಷರಿಗೆ ಬಿಟ್ಟುಕೊಡಬೇಕಾಯಿತು. ಇದರ ಫಲವಾಗಿ ವಸಾಹತುಗಳಲ್ಲಿ ಸೇನೆಯ ವ್ಯವಸ್ಥೆಯನ್ನು ಅಭಿವೃದ್ದಿಪಡಿಸುವ ಪ್ರಯತ್ನ ನಡೆಯಿತು. ಹೀಗಾಗಿ ಅವರು ಅಮೆರಿಕನ್ ಬಂದರುಗಳಲ್ಲಿ ಸೇನೆಯನ್ನು ಬಲಪಡಿಸಿದರು ಹಾಗೂ ವಸಹಾತುಗಳಲ್ಲಿ ಸೇನೆಯನ್ನು ಸೃಷ್ಟಿಸಿದರು. ಈಗಾಗಲೇ ಇದ್ದ ತಂಡಗಳನ್ನು ಕಾಲೋನಿಗಳಲ್ಲೇ ಇರಿಸಿದರು. ಕೆಲವೊಮ್ಮೆ ಸಾಗರತೀರಗಳಿಗೂ ಅವರನ್ನು ರವಾನಿಸಲಾಗುತ್ತಿತ್ತು. ಕಾಲೋನಿಯು ಮಿಲಿಟರಿ ಸ್ವಯಂಸೇವಕರಿಂದ ಕೂಡಿತ್ತು. ಮಿಲಿಟರಿ ಸೇವೆಯಲ್ಲಿ ಕ್ರಿಯೋಲ್ ಉನ್ನತ ವರ್ಗದವರು ತಮ್ಮನ್ನು ತೊಡಗಿಸಿಕೊಳ್ಳಲು ಕೆಲವು ಆಕರ್ಷಣೆಗಳನ್ನು ಒಡ್ಡಿದರು. ಅವರಿಗೆ ಸೇನೆಯ ಮುಖ್ಯಸ್ಥರ ಹುದ್ದೆಗಳನ್ನು ನೀಡಲಾಗುತ್ತಿತ್ತು. ಇವರಿಗೆ ಅಲ್ಲಿನ ಅಧಿಕಾರ ಹುದ್ದೆಗಳ ಜೊತೆಗೆ ಅನೇಕ ಸವಲತ್ತುಗಳನ್ನು ರಾಜಾಧಿಕಾರ ವಿಸ್ತರಿಸಿತ್ತು. ಸರಕಾರವು ಅವರಿಗೆ ವಿಶೇಷ ಗೌರವ ಮರ್ಯಾದೆ ನೀಡಿತ್ತು. ಇದರಿಂದಾಗಿ ವಿಶೇಷ ಅಧಿಕಾರಗಳ ವರ್ಗ ಲ್ಯಾಟಿನ್ ಅಮೆರಿಕಾ ರಾಷ್ಟ್ರಗಳಲ್ಲಿ ಅಸ್ತಿತ್ವಕ್ಕೆ ಬಂತು.

ತಿಳುವಳಿಕೆ ಮತ್ತು ಅರಿವು ಹೆಚ್ಚಾದಂತೆ ಕ್ರಿಯೋಲ್‌ಗಳಿಗೆ ನೀಗ್ರೊ ವಿಶ್ರಾಂತಿ ಇಲ್ಲದಂತಾಗಿ ಅತೃಪ್ತಿ ಹೆಚ್ಚಾಯಿತು. ಜಿ.ಟಿ.ರೇನಲ್, ಮಾಂಟೆಸ್ಕೋ, ವಾಲ್ಟೇರ್  ಮತ್ತು ರೂಸ್ಸೋ ಅವರ ‘‘ನಿಷೇಧಿಸಲ್ಪಟ್ಟ’’ ಬರಹಗಳನ್ನು ನಿಸ್ಸಂದೇಹವಾಗಿ ವಿದ್ಯಾವಂತ ಕ್ರಿಯೋಲ್‌ಗಳು ಓದೇ ಇರುತ್ತಾರೆ. ಡಿಕ್ಕಾರ್ಟ್, ಲೇಬಿಜ್ ಮತ್ತು ನ್ಯೂಟನ್ ಇವರ ವೈಜ್ಞಾನಿಕ ಶೋಧಗಳನ್ನು ಉಚಿತವಾಗಿ ವಸಾಹತುಗಳಲ್ಲಿ ಪ್ರಚಾರ ಮಾಡಿ ತಿಳಿಸಲಾಗಿತ್ತು. ಇದು ಇವರ ತಿಳುವಳಿಕೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಅನುವು ಮಾಡಿಕೊಟ್ಟಿತ್ತು. ೧೮೦೦ರ ಹೊತ್ತಿಗೆ ಈ ತೆರನಾದ ಪ್ರಭಾವಗಳು ಸ್ಪ್ಯಾನಿಷ್ ಅಮೆರಿಕಾದ ಬೌದ್ದಿಕ ವಾತಾವರಣಕ್ಕೆ ಭಾಗಶಃ ನವಚೇತನ ನೀಡಿದಂತಾಗಿತ್ತು ಹಾಗೂ ಕ್ರಿಯೋಲ್‌ರ ಚಿಂತನೆಗಳಿಗೆ ಸ್ವಾಭಿಪ್ರಾಯ, ನಿಷ್ಠತೆ ಮತ್ತು ಸ್ವಂತಿಕೆಯ ಛಾಪು ಇತ್ತು.

ಸ್ವಾತಂತ್ರ್ಯ ಚಳವಳಿಯ ಆರಂಭ

೧೮೦೬ರಲ್ಲಿ ಕ್ರಾಂತಿಕಾರಿ ಫ್ರಾನ್ಸಿಸ್ಕೊ ದು ಮಿರಾಂಡ ಸುಮಾರು ೨೦೦ ಜನ ವಿದೇಶಿ ಸ್ವಯಂಸೇವಕರ ತಂಡದೊಂದಿಗೆ ಆತನ ಸ್ವಂತ ಸ್ಥಳವಾದ ವೆನಿಜುಲದ ತೀರದಲ್ಲಿ ನೆಲೆಸಿದ. ಆತ ಜನರ ಉನ್ನತಿಗಾಗಿ ಕರೆ ನೀಡಿ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದಿದ್ದರಿಂದ ಆ ವಿಚಾರವನ್ನು ಕೈಬಿಟ್ಟ. ವಸಾಹತು ಸ್ವಾತಂತ್ರ್ಯ ಚಳುವಳಿ ಯಾವುದೇ ಪ್ರಭಾವ ಬೀರದೆ ಹಾಗೆಯೇ ಉಳಿಯಿತು. ಆದರೆ ಯುರೋಪಿನ ಅಧಿಕಾರದ ನಿರ್ಣಯಗಳು ಮತ್ತು ಕೆಲಸಗಳು ಈ ದೃಷ್ಟಿಯಿಂದ ಒಂದು ಭಿನ್ನ ರೀತಿಯ ಪ್ರಭಾವವನ್ನು ಬೀರಿದವು. ಈ ಕ್ರಾಂತಿಕಾರಿ ಪರಿಸ್ಥಿತಿಗೆ ಪ್ರಮುಖ ಕಾರಣ ಯುರೋಪಿನ ಯುದ್ಧದಲ್ಲಿ ಸ್ಪೈನ್ ದೇಶದ ಪಾಲ್ಗೊಳ್ಳುವಿಕೆ. ನಂತರ ಫ್ರಾನ್ಸ್‌ನ ಕ್ರಾಂತಿ ಇದನ್ನು ಶಮನಗೊಳಿಸಿತು. ಇದರಿಂದಾಗಿ ಫ್ರಾನ್ಸ್ ಮತ್ತು ಸ್ಪೈನ್ ಸ್ನೇಹ ರಾಷ್ಟ್ರಗಳಾದವು.

ಸ್ಪ್ಯಾನಿಷ್ ಅಮೆರಿಕಾ

ಸೈಮನ್ ಬೋಲಿವರ್ ಉತ್ತರ ಭಾಗದ ವೆನಿಜುಲಾದ ಸ್ವಾತಂತ್ರ್ಯ ಹೋರಾಟದ ನಾಯಕನಾಗಿದ್ದ. ೧೮೦೦-೦೭ರ ಅವಧಿಯಲ್ಲಿಯೂ ಯುರೋಪ್‌ಗೆ ಭೇಟಿ ನೀಡಿ, ವೆನಿಜುಲಾಗೆ ಹಿಂತಿರುಗಿದ ತಕ್ಷಣ ಸ್ಪಾನಿಷ್ ಆಡಳಿತದ ವಿರುದ್ಧ ‘‘ಪಿತೂರಿ’’ ಕೆಲಸಗಳನ್ನು ಶುರು ಮಾಡಿದ. ೧೮೧೦ರ ಏಪ್ರಿಲ್‌ನಲ್ಲಿ ಕ್ರಿಯೋಲ್‌ನವರೆಗೆ ಹೆಚ್ಚಾಗಿದ್ದ ಸ್ಪೈನ್‌ನ ಮಂತ್ರಮಂಡಲ ಅಧಿಕಾರಕ್ಕೆ ಬಂತು. ೧೮೧೧ರಲ್ಲಿ ವೆನಿಜುಲಾದ ಕಾಂಗ್ರೆಸ್ ಸ್ವಾತಂತ್ರ್ಯದ ಘೋಷಣೆ ಮಾಡಿ ಗಣರಾಜ್ಯದ ಸಂವಿಧಾನ ರೂಪಿಸಿತು. ಇಂಡಿಯನ್ನರು ನೀಡುತ್ತಿದ್ದ ಕಪ್ಪಕಾಣಿಕೆಗಳನ್ನೆಲ್ಲಾ ನಿಲ್ಲಿಸಿದರು. ಆದರೆ ಕರಿಯರ ದಾಸ್ಯತೆಯನ್ನು ಹಾಗೆಯೇ ಮುಂದುವರೆಸಿಕೊಂಡು ಕ್ಯಾಥೊಲಿಸಮ್ ಅನ್ನು ರಾಜ್ಯದ ಧರ್ಮವೆಂದು ಕರೆದರು.

ರಾಜಕೀಯ ಕ್ಷೇತ್ರದಲ್ಲಿ ಹಿಂಸೆ ಅನ್ನುವುದು ಸರ್ವೇಸಾಮಾನ್ಯವಾಗಿತ್ತು. ಅಂದರೆ ಸುಮಾರು ೧೮೫೦ಕ್ಕೆ ಮುಂಚೆ ರಾಜಕೀಯ ಮೂಲಗಳಲ್ಲೇ ಹಿಂಸೆ ತಲೆಯಾಡುತ್ತಿತ್ತು. ಸ್ವಾತಂತ್ರ್ಯ ಯುದ್ಧದಲ್ಲಿ ಹೋರಾಟ ಮಾಡಿದ ಸೇನೆ ಪ್ರಬಲವಾಗಿತ್ತು. ಯುದ್ಧದಲ್ಲಿ ಜಯ ಎನ್ನುವುದು ಒಂದರ್ಥದಲ್ಲಿ ಹಿಂಸೆಯೇ ಅಲ್ಲವೆ. ಈ ಸೇನೆ ರಾಜಕೀಯ ಕ್ಷೇತ್ರದ ಮೇಲೂ ಪ್ರಭಾವ ಬೀರಿದವು. ರಾಜಕೀಯ ಬಿಕ್ಕಟ್ಟುಗಳಿಗೂ ಪರಿಹಾರ ಸೂಚಿಸುವಂಥ ನಿರ್ಣಾಯಕ ಪಾತ್ರವನ್ನು ಸೇನೆ ನಿರ್ವಹಿಸುತ್ತಿತ್ತು. ರಾಜಕೀಯ ಶೂನ್ಯತೆಯನ್ನು ಸೃಷ್ಟಿಸದೆ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳಿಗೆ ಸ್ಥಿತಿವಂತ ವರ್ಗಗಳ ಹೋರಾಟ ಮಾಡಲು ಅವಕಾಶ ಮಾಡಿಕೊಡುತ್ತಿದ್ದರು. ಇದು ಒಂದು ತೆರನಾದ ಹಿಂಸೆಗೆ ಪರೋಕ್ಷವಾಗಿ ಸಹಕಾರ ವನ್ನು ನೀಡಿದಂತಾಗುತ್ತಿತ್ತು. ಈ ಹಿಂಸೆಯಿಂದಾಗಿ ದುಷ್ಕೃತ್ಯಗಳಲ್ಲೇ ತೊಡಗಿದ ಒಂದು ಗುಂಪು ಬಲಿಷ್ಠವಾಯಿತು. ಅವರು ಯಾವುದೇ ಪಕ್ಷಕ್ಕೆ ಸೇರಿದವರಾಗಲಿ ಅಥವಾ ಯಾವುದೇ ಸಿದ್ಧಾಂತಕ್ಕೆ ಅಂಟಿಕೊಂಡವರಾಗಿರಲಿಲ್ಲ.

ಆಂತರಿಕ ಕಲಹ, ಹಿಂಸೆ, ಹಾನಿಯಿಂದಾಗಿ ಸಮಯ ಮತ್ತು ಹಣ ಎರಡೂ ವ್ಯರ್ಥ ವಾಯಿತು. ಇದರಿಂದಾಗಿ ವಸಾಹತು ಶೈಕ್ಷಣಿಕ ಸಂಸ್ಥೆಗಳು ಕ್ಷೀಣಿಸತೊಡಗಿದವು. ಕಲೆ ಸಾಹಿತ್ಯಕ್ಕೆ ಅವಕಾಶ ಪ್ರೋ ಇಲ್ಲದಂತಾಯ್ತು. ಆದರೂ ೧೮೪೦ರ ಅವಧಿಯಲ್ಲಿ ಸ್ವಲ್ಪ ಆರ್ಥಿಕ ಸ್ಥಿರತೆಯನ್ನು ಹೊಂದಿದ್ದ ಚಿಲಿ ಎಲ್ಲ ಹಂತದ ಕಲಿಕೆಗೆ ಹೆಚ್ಚಿನ ಅವಕಾಶ ಒದಗಿಸಿತ್ತು.

ಸ್ವಾತಂತ್ರ್ಯ ಬಂದ ಸುಮಾರು ೨೫ ವರ್ಷಗಳ ತರುವಾಯ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತಹ ರಾಜಕೀಯ ವ್ಯವಸ್ಥೆಯನ್ನು ರೂಪಿಸುವ ಅಗತ್ಯತೆ ಮನದಟ್ಟಾಯಿತು. ಸಮಾಜದ ಒಂದು ಭಾಗವಾದ ಈ ರಾಜಕೀಯ ವ್ಯವಸ್ಥೆ ಆ ಭಾಗದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥವಾಯಿತು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನ್ಯಾಯಾಂಗ ಮತ್ತು ರಾಜಕಾರಣ ನೀಡಿದ ಬೆಂಬಲದಿಂದ ಕೈಗೊಂಡ ವಿದ್ವಂಸಕ ಕೃತ್ಯಗಳಿಂದಾಗಿ ಅಪಾರ ಆಸ್ತಿಪಾಸ್ತಿ ನಾಶವಾಯಿತು. ಅದಕ್ಕೆ ಗಣರಾಜ್ಯದ ನೇತಾರರು ಬಾರಿ ಬೆಲೆ ತೆರಬೇಕಾಯ್ತು. ಆ ಗಾಯ ಬೇಗನೆ ವಾಸಿಯಾಗುವಂತಿರಲಿಲ್ಲ. ೧೮೬೦ರ ಹೊತ್ತಿಗೆ ಅರ್ಜೆಂಟೈನಾ, ಬ್ರೆಜಿಲ್ ಮತ್ತು ಮೆಕ್ಸಿಕೋ ರಾಷ್ಟ್ರಗಳು ಅವರು ರೂಪಿಸಿಕೊಂಡಿದ್ದ ರಾಜಕೀಯ ವ್ಯವಸ್ಥೆಯೂ ವಿಫಲವಾಗಿತ್ತು. ಆದುದರಿಂದ ಅವರು ಗ್ರೇಟ್‌ಬ್ರಿಟನ್ ಮತ್ತು ಸಂಯುಕ್ತಸಂಸ್ಥಾನದಂತಹ ರಾಷ್ಟ್ರಗಳಲ್ಲಿರುವ ಯಶಸ್ವಿ ಪ್ರಜಾಪ್ರಭುತ್ವ ಸರ್ಕಾರಗಳನ್ನು ಗಮನಿಸಿದರು. ಇದರ ಫಲವಾಗಿ ಲ್ಯಾಟಿನ್ ಅಮೆರಿಕಾದ ಪ್ರಜಾಪ್ರಭುತ್ವವಾದಿಗಳಿಗೆ ಅಂತಿಮ ಗುರಿ ಆರ್ಥಿಕ ಅಭಿವೃದ್ದಿಯೇ ಎಂದು ಗೊತ್ತಾಯಿತು. ಇದು ಅವರನ್ನು ಎಡಬಿಡದೆ ಚಿಂತೆಗೀಡುಮಾಡಿತ್ತು. ಲ್ಯಾಟಿನ್ ಅಮೆರಿಕಾದವರು ಯುರೋಪಿಯನ್ನರ ನೇತೃತ್ವದಲ್ಲಿ ಆರ್ಥಿಕ ಅಭಿವೃದ್ದಿಯನ್ನು ವಿಶ್ವಆರ್ಥಿಕ ವ್ಯವಸ್ಥೆಯ ನೆರವಿನಲ್ಲಿ ಕಂಡುಕೊಂಡರು.

ಆರ್ಥಿಕ ನೀತಿಯ ಸುಧಾರಣೆಯಿಂದಾಗಿ, ಸಾಗರೋತ್ತರ ವ್ಯಾಪಾರಗಳಿಗೆ ಈ ಪ್ರಜಾ ಪ್ರಭುತ್ವವಾದಿಗಳು ಯುರೋಪ್ ಮತ್ತು ಸಂಯುಕ್ತ ಸಂಸ್ಥಾನವನ್ನು ಅವಲಂಬಿಸ ಬೇಕಾಯಿತು. ಪ್ರಧಾನವಾಗಿ ವಾಣಿಜ್ಯ ಕೃಷಿಗೆ ವಿದೇಶಿ ಬ್ಯಾಂಕ್‌ಗಳಿಂದ ಹಣ ಹರಿದು ಬರತೊಡಗಿತು. ಗಣಿಗಾರಿಕೆ ಕೂಡ ಸುಧಾರಿಸಿತ್ತು. ವಿದೇಶಿ ಬಂಡವಾಳಗಾರರು ಹೆಚ್ಚಿನ ಸಂಖ್ಯೆಯಲ್ಲಿ ಹಣ ತೊಡಗಿಸಿದರು. ವಾಣಿಜ್ಯ ಕೃಷಿ ಮತ್ತು ಆಧುನಿಕ ಗಣಿಗಾರಿಕೆ ವಿಸ್ತಾರಗೊಂಡು ವಿದೇಶಿ ಬಂಡವಾಳಶಾಹಿಗಳು ಮತ್ತು ತಂತ್ರಜ್ಞರು ಇದರಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡರು.

ವಲಸೆ

ವಿದೇಶಿ ಬಂಡವಾಳ ಮತ್ತು ತಂತ್ರಜ್ಞರಿಂದ ಉಂಟಾದ ಆರ್ಥಿಕ ಸುಧಾರಣೆಯಿಂದಾಗಿ ಯುರೋಪಿನಿಂದ ಬಂದ ಕೆಲಸಗಾರರಿಗೆ ಕೃಷಿ ಭೂಮಿಯಲ್ಲೆ ಫ್ಯಾಕ್ಟರಿಗಳಲ್ಲಿ ಹುದ್ದೆಗಳು ದೊರೆತವು.

ಲ್ಯಾಟಿನ್ ಅಮೆರಿಕಾದ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಸ್ವಾತಂತ್ರ್ಯ ನಂತರ ಜನಸಂಖ್ಯೆ ಇಳಿಮುಖವಾದದ್ದು. ಇದಕ್ಕಾಗಿ ಅನೇಕ ರಾಷ್ಟ್ರಗಳು ವಲಸೆಗೆ ಸಂಬಂಧಿಸಿದಂತೆ ತಮ್ಮ ಸಂವಿಧಾನವನ್ನು ಪುನರ್ ರಚಿಸಿದವು. ಅರ್ಜೆಂಟೈನಾ ಸರಕಾರ ಯುರೋಪಿಯನ್ನರ ವಲಸೆಗೆ ಅವಕಾಶ ಕಲ್ಪಿಸಿತ್ತು. ಹೀಗೆ ಜನಸಂಖ್ಯಾವೃದ್ದಿಗೆ ಒಂದು ಹೊಸ ಆಯಾಮ ದೊರೆತಂತಾಯ್ತು. ವಲಸೆಗೆ ಸಂಬಂಧಿಸಿದಂತೆ ಲ್ಯಾಟಿನ್ ಅಮೆರಿಕಾದ ಅಂಕಿ ಅಂಶಗಳು ನಂಬಲು ಸಾಧ್ಯವಿಲ್ಲದಷ್ಟು ಏರಿಕೆಯ ಪ್ರಮಾಣದಲ್ಲಿತ್ತು. ಅದರ ಪ್ರಕಾರ ಅರ್ಜೆಂಟೈನಾದ ವಲಸೆಯ ಪ್ರಮಾಣ ೧೮೫೭-೧೯೦೦ರ ಅವಧಿಯಲ್ಲಿ ೧,೨೦೦,೦೦೦ರಷ್ಟಿತ್ತು. ೧೮೫೨ ಮತ್ತು ೧೮೮೮ರ ಅವಧಿಯಲ್ಲಿ ಬ್ರೆಜಿಲ್ ಗೆ ಒಂದು ವರ್ಷಕ್ಕೆ ಸರಾಸರಿ ೧೦,೦೦೦ ಜನ ಬರತೊಡಗಿದರು. ಜನಸಂಖ್ಯೆಯ ಈ ಬೃಹತ್ ಪ್ರಮಾಣದ ಹೆಚ್ಚಳದಿಂದ ಅಲ್ಲಿನ ದಾಸ್ಯತೆ ಆಚರಣೆಯ ನಾಶಕ್ಕೆ ಕಾರಣವಾಯ್ತು. ೧೮೮೮ ಮತ್ತು ೧೯೧೪ ಅವಧಿಯಲ್ಲಿ ಸುಮಾರು ೨,೫೦೦,೦೦೦ ಜನ ವಲಸೆಗಾರರು ಯುರೋಪಿನಿಂದ ಬಂದು ನೆಲೆಸಿದರು.

ತಂತ್ರಜ್ಞಾನದ ಬದಲಾವಣೆ ಮತ್ತು ಆರ್ಥಿಕ ಅಭಿವೃದ್ದಿ

ವಿದೇಶಿ ಬಂಡವಾಳ, ತಂತ್ರಜ್ಞರು, ಕೂಲಿಯವರಿಂದ ಆರ್ಥಿಕವಾಗಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ೧೮೫೦-೧೯೧೪ರ ಅವಧಿಯಲ್ಲಿ ಸುಧಾರಣೆ ಕಂಡುಬಂತು. ವಸಾಹತುಯುಗದಿಂದ, ರಾಜಪ್ರಭುತ್ವಕಾಲ (ಸುಮಾರು ೨೫ ವರ್ಷಗಳು) ನಂತರ ಸ್ವಾತಂತ್ರ್ಯದ ಅವಧಿಯಲ್ಲಿ ಅನೇಕ ಬದಲಾವಣೆಗಳು ಗೋಚರವಾದವು. ಗಣಿಗಳಿಂದ ಬಂದರುಗಳಿಗೆ ರೈಲು ರಸ್ತೆ ಮಾಡಬೇಕಾಯಿತು. ಅರ್ಜೆಂಟೈನಾ, ಮೆಕ್ಸಿಕೋ, ಚಿಲಿ, ಬ್ರೆಜಿಲ್, ಪೆರು ಎಲ್ಲ ಸೇರಿ ೧೯೧೪ರ ಹೊತ್ತಿಗೆ ಸುಮಾರು ೬೦,೦೦೦ ಮೈಲಿ ಗಳಷ್ಟು ರೈಲು ಮಾರ್ಗದ ನಿರ್ಮಾಣವಾಯಿತು.

ಆರ್ಥಿಕ ಸುಧಾರಣೆ/ಬದಲಾವಣೆಯ ಪರಿಣಾಮಗಳು

ಸುಮಾರು ೧೯೧೪ರಲ್ಲಿ ಪ್ರಜಾಪ್ರಭುತ್ವವಾದಿಗಳು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ತಮ್ಮ ನಾಯಕತ್ವವನ್ನು ಸ್ಥಾಪಿಸಿಕೊಂಡರು. ಸುಮಾರು ೧೯೧೪ರ ಹೊತ್ತಿಗೆ ಈ ಆರ್ಥಿಕ ಸುಧಾರಣೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರಗಳಲ್ಲಿ ಸಂಪತ್ತು, ಅಭಿವೃದ್ದಿ, ಆದಾಯ ಮತ್ತು ಜನಸಂಖ್ಯೆ ಒಂದು ನಿಯಂತ್ರಣಕ್ಕೆ ಬಂದಿತ್ತು. ಅದರಲ್ಲೂ ಪ್ರಮುಖವಾಗಿ ಕೃಷಿಯ ವಾಣಿಜ್ಯೀಕರಣದಿಂದಾಗಿ ಆರ್ಥಿಕ ಸುಧಾರಣೆಯ ಪರಿಣಾಮ ಮೊದಲಿಗೆ ನಗರಗಳಿಗಾಯಿತು. ಏಕೆಂದರೆ ಕೈಗಾರಿಕೆ ಮತ್ತು ವಾಣಿಜ್ಯ ಬಂಡವಾಳ ಹಾಗೂ ನಿಪುಣ ಕೆಲಸಗಾರರ ಪ್ರಮಾಣ ನಗರಗಳಲ್ಲಿ ಹೆಚ್ಚಾಗಿತ್ತು. ಆದುದರಿಂದ ಗ್ರಾಮಗಳ ಜನ ಉದ್ಯೋಗವನ್ನು ಅರಸುತ್ತಾ ನಗರಗಳಿಗೆ ಬರತೊಡಗಿದರು. ಈ ಅವಧಿಯಲ್ಲಿ ಲ್ಯಾಟಿನ್ ಅಮೆರಿಕಾ ಶೀಘ್ರ ನಗರೀಕರಣಕ್ಕೆ ಒಳಪಟ್ಟಿತು.

೧೯೧೪ರ ಯುರೋಪಿನ ಯುದ್ಧದ ನಂತರ ಉಂಟಾದ ಆರ್ಥಿಕ ಸುಧಾರಣೆ ಮತ್ತು ನಗರೀಕರಣದಿಂದಾಗಿ ಪ್ರಜಾಪ್ರಭುತ್ವವಾದಿಗಳ ರಾಜಕೀಯ ಜೀವನ ತುಂಬಾ ಪ್ರಭಾವಕ್ಕೆ ಒಳಗಾಯಿತು. ಹಿಂದಿನ ಗಣ್ಯರ ಅಧಿನಾಯಕತ್ವದ ವಿರುದ್ಧವಾಗಿ ಬುದ್ದಿಜೀವಿಗಳು, ವ್ಯಾಪಾರಸ್ಥರು ಹಾಗೂ ಉದ್ಯೋಗಸ್ಥರು ಬಂಡೆದ್ದಿದ್ದರು. ಇವರೆಲ್ಲಾ ಸೇರಿ ಸಮಾಜೋ ಆರ್ಥಿಕ ತಂಡವಾಗಿ ರೂಪುಗೊಂಡು ಹೊಸ ರಾಜಕೀಯ ಬೆಳವಣಿಗೆಗೆ ನಾಂದಿ ಹಾಡಿದರು. ಕಾಲಕ್ರಮೇಣ ಸೇನೆಯನ್ನು ರಾಷ್ಟ್ರೀಯ ನೀತಿಯ ಒಂದು ಪರಿಕರವಾಗಿ ಬೆಳೆಸಲು ಒತ್ತು ನೀಡಿದರು. ಮುಂದುವರಿದು ಇದೊಂದು ಉದ್ಯೋಗದ ರೀತಿಯಲ್ಲಿ ಬದಲಾವಣೆ ಯಾಯಿತು. ಪ್ರಾಂತೀಯ ವಿದ್ವಾಂಸರನ್ನು(ಕೌಡಿಲೊ) ನಾಶ ಮಾಡಲು ಕೂಡ ಈ ಸೇನೆಯನ್ನು ಬಳಸಲಾಯಿತು.

ಕ್ರೈಸ್ತ ಮತೀಯತ್ವ ಮತ್ತು ಪೌರೋಹಿತ್ಯ ನಿಯಮಗಳ ವೈರುಧ್ಯಗಳು

೧೮೫೦ ಮತ್ತು ೧೯೧೪ ನಡುವಿನ ಅವಧಿಯಲ್ಲಿ ಲ್ಯಾಟಿನ್ ಅಮೆರಿಕಾದ ರೋಮನ್ ಕ್ಯಾಥೊಲಿಕ್ ಚರ್ಚ್‌ಗಳ ಸ್ಥಿತಿ ಚಿಂತಾಜನಕವಾಗಿತ್ತು. ಪೌರೋಹಿತ್ಯ ನಿಯಮಗಳಿಗೆ ವಿರುದ್ಧವಾಗಿ ಗಂಭೀರ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಅನೇಕ ರಾಷ್ಟ್ರಗಳಲ್ಲಿ ಚರ್ಚ್ ಮತ್ತು ಸರಕಾರ ಎರಡು ಬೇರೆ ಬೇರೆಯಗಿ ಕಾರ್ಯ ನಿರ್ವಹಿಸುತ್ತಿದ್ದವು. ಅನೇಕ ಸಂದರ್ಭಗಳಲ್ಲಿ ಚರ್ಚ್‌ಗಳು ಸರ್ಕಾರಗಳ ನಿಯಂತ್ರಣದಲ್ಲಿದ್ದವು.

ಮೊದಲನೆಯ ಮಹಾಯುದ್ಧಕ್ಕೆ ಮೊದಲು ಸ್ಪ್ಯಾನಿಷ್ ಮತ್ತು ಪೋರ್ಚುಗೀಸರ ಗತದಿನಗಳೊಂದಿಗೆ ಲ್ಯಾಟಿನ್ ಅಮೆರಿಕಾದ ಸಂಬಂಧ ಶಿಥಿಲಗೊಳ್ಳುತ್ತಿರುವುದರ ಅನೇಕ ಸೂಚನೆಗಳು ಕಂಡುಬರುತ್ತಿದ್ದವು. ಅನೇಕ ಪ್ರಜಾಪ್ರಭುತ್ವವಾದಿಗಳು ಆಧುನಿಕ ರಾಷ್ಟ್ರದ ನಿರ್ಮಾತರಾಗಲು ಮುಂದಾಗುತ್ತಿದ್ದರು. ದಾಸ್ಯತೆ ಪಶ್ಚಿಮದ ಅರ್ಧಭಾಗದಲ್ಲಿ ಏನು ಕಾನೂನುಬದ್ಧವಾಗಿತ್ತೋ ಅದು ೧೮೮೮ರ ಹೊತ್ತಿಗೆ ಸಂಪೂರ್ಣ ಕೊನೆಯಾಯಿತು. ಸುಮಾರು ೮೫೦,೦೦೦ ಜನ ಕರಿಯರನ್ನು ದಾಸ್ಯ ವಿಮೋಚನೆಗೆ ಬ್ರೆಜಿಲ್ ಕ್ರಮ ಕೈಗೊಂಡಿತು. ಈ ಸಮಯದಲ್ಲಿ ಬ್ರೆಜಿಲ್‌ನಲ್ಲಿ ಅರಾಜಕತೆ ಉಂಟಾಗಿ ಪ್ರಜಾಪ್ರಭುತ್ವ ವಾದಿಗಳಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಯಾಗಿತ್ತು. ಉಳಿದರ್ಧ ಭಾಗದ ರಾಷ್ಟ್ರಗಳ ರಾಜಕೀಯ ವ್ಯವಸ್ಥೆಯಲ್ಲಿಯೂ ಸಮಾನತೆಯನ್ನು ಸ್ಥಾಪಿಸುವುದೇ ಇದರ ಉದ್ದೇಶವಾಗಿತ್ತು. ಅರ್ಜೆಂಟೈನಾ, ಉರುಗೈ, ಚಿಲಿಯಲ್ಲಿ ಪ್ರಮುಖವಾಗಿ ರಾಜಕೀಯ ನಾಯಕರುಗಳು ರಾಷ್ಟ್ರದ ಹಿತಾಸಕ್ತಿಗಾಗಿ ದುಡಿಯುತ್ತಿದ್ದ ನಗರಗಳ ಗುಂಪುಗಳೊಂದಿಗೆ ತಮ್ಮನ್ನು ಹೆಚ್ಚೆಚ್ಚು ಗುರುತಿಸಿಕೊಳ್ಳತೊಡಗಿದರು. ೨೦ನೆಯ ಶತಮಾನದೊತ್ತಿಗೆ ಒಂದು ಸತ್ಯ ಸಂಗತಿ ಪ್ರಜಾಪ್ರಭುತ್ವವಾದಿಗಳ ಅರಿವಿಗೆ ಬಂತು. ಅದೇನೆಂದರೆ ರಾಷ್ಟ್ರದ ಭವಿಷ್ಯಕ್ಕೆ ಮುಸುಕಿನ ರೀತಿ ಕವಿದಿರುವ ಸಂಯುಕ್ತ ಸಂಸ್ಥಾನವೆಂಬ ಅಪಶಕುನ, ಮಹಾಯುದ್ಧದ ಕೊನೆಯ ಹೊತ್ತಿಗೆ ಬೊಲಿವಿಯಾ, ಇಕ್ವೆಡಾರ್ ಪರಾಗ್ವೆ, ಪೆರು ವೆನಿಜುಲಾ, ಕ್ಯಾರಿಬಿಯನ್ ಮತ್ತು ಸೆಂಟ್ರಲ್ ಅಮೆರಿಕಾದ ಸುಮಾರು ೨೦ ಪ್ರಜಾಪ್ರಭುತ್ವ ಸರಕಾರಗಳ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿದ್ದವು. ಇವರು ಅಪಾರ ವಿದೇಶಿ ಸಾಲದ ಹೊರೆ ಹೊತ್ತಿದ್ದರು. ೧೯೨೦ರ ಹೊತ್ತಿಗೆ ಅರ್ಜೆಂಟೈನಾ, ಚಿಲಿ, ರಿಕಾ, ಉರುಗ್ವೆ ಮತ್ತು ಮೆಕ್ಸಿಕೊ ಸುಸ್ಥಿತಿಗೆ ಬಂದಿದ್ದವು. ಬ್ರೆಜಿಲ್ ಕೂಡ ೧೯೩೦ರ ಹೊತ್ತಿಗೆ ಒಂದು ಸ್ಥಿರತೆಗೆ ಬಂದಿತ್ತು. ಈ ಆವು ಪ್ರಜಾಪ್ರಭುತ್ವ ಸರಕಾರಗಳು ೨೦ ಸರಕಾರಗಳ ೨/೩ರಷ್ಟು ಭೂಭಾಗ ಒಟ್ಟು ಜನಸಂಖ್ಯೆಯ ೨/೩ ರಷ್ಟನ್ನು ಹೊಂದಿದ್ದು, ವಾರ್ಷಿಕವಾಗಿ ೨/೩ರಷ್ಟು ಉತ್ಪನ್ನವನ್ನು ಕೂಡ ಮಾಡುತ್ತಿದ್ದವು. ೧೯೧೦ ಮತ್ತು ೧೯೬೮ರ ನಡುವೆ ವೆನಿಜುಲಾ ಕೂಡ ಈ ಗುಂಪಿಗೆ ಸೇರಿತು.

ಹೊಸ ರಾಜ್ಯಾಡಳಿತ ವ್ಯವಸ್ಥೆ

ಸ್ವಾತಂತ್ರ್ಯ ಬಂದ ಒಂದು ಶತಮಾನದ ನಂತರ ಲ್ಯಾಟಿನ್ ಅಮೆರಿಕಾದ ನಾಯಕರಿಗೆ, ಸರ್ಕಾರದ ಸಮಸ್ಯೆಗಳಿಗೆ ರಾಜಕೀಯ ಮತ್ತು ಆರ್ಥಿಕ ಪರಿಹಾರ ಕಂಡುಕೊಳ್ಳಬೇಕೆಂಬ ವಿಚಾರ ಮೊಟ್ಟಮೊದಲಿಗೆ ಹೊಳೆಯಿತು. ಮೊದಲ ಮತ್ತು ಎರಡನೆಯ ಮಹಾಯುದ್ಧಗಳ ನಡುವೆ ಪ್ರಗತಿಪರ ಪ್ರಜಾಪ್ರಭುತ್ವ ಸರ್ಕಾರಗಳಲ್ಲಿ ರಾಜಕೀಯ ಮತ್ತು ಆರ್ಥಿಕತೆ ಜೊತೆಗೆ ಸಾಮಾಜಿಕ ಅಂಶಗಳನ್ನು ತಮ್ಮ ವಿಚಾರಗಳಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಸಂಗತಿ ಲ್ಯಾಟಿನ್ ಅಮೆರಿಕಾದ ನಾಯಕತ್ವಗಳಿಗೆ ಮನದಟ್ಟಾಯಿತು. ಸಮಾಜೋಆರ್ಥಿಕ ಸಮಸ್ಯೆಗಳೇ ರಾಜಕೀಯ ಮೂಲಭೂತ ಸಮಸ್ಯೆಗಳಾಗಿ ಪರಿವರ್ತನೆಗೊಂಡವು. ಹಿಂದೆ ಸರ್ಕಾರದ ಒಂದು ನೀತಿ ಆಗಿದ್ದು ಪ್ರಜಾಪ್ರಭುತ್ವ ಈಗ ವಾಸ್ತವ ಆಚರಣೆಗೆ ಬಂತು. ಅದನ್ನು ಅವರು ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವನ್ನಾಗಿ ವಿಸ್ತರಿಸಿದರು. ಕೇವಲ ತೆರಿಗೆ ವಸೂಲಿ ಮಾಡಿ ಆದೇಶ ಪಾಲನೆ ಮಾಡುತ್ತಿದ್ದ ಸರ್ಕಾರ ಆರ್ಥಿಕ ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ಸಕ್ರಿಯ ತೊಡಗಿಸಿಕೊಂಡು ಕಾನೂನನ್ನು ಅವಲಂಬಿಸಿದ ನ್ಯಾಯ ಹೋಗಿ ಸಾಮಾಜಿಕ ನ್ಯಾಯವಾಯಿತು. ರಾಜಕೀಯ ಸಮಾನತೆ ಹೋಗಿ ಸಾಮಾಜಿಕ ಸಮಾನತೆ ಅಸ್ತಿತ್ವಕ್ಕೆ ಬಂತು. ಸಮಾಜ ಸುಧಾರಣೆಯ ಚಳುವಳಿ ಪ್ರಕ್ರಿಯೆ ಈ ರೀತಿ ಆರಂಭವಾಯಿತು.

ಈ ಆಂತರಿಕ ಗೊಂದಲಗಳು ಸಾಮಾಜಿಕ ಜಾಗೃತಿಯನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಉಂಟುಮಾಡಿದ್ದವು. ಕಲಿಕೆಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿದ್ದವು. ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತು ಖಾಸಗಿ ಹಾಗೂ ಸರ್ಕಾರಿ ಅಧಿಕಾರಗಳಲ್ಲಿ ಬುದ್ದಿಜೀವಿಗಳಿಗೆ, ತಾಂತ್ರಿಕ ನಿಪುಣರಿಗೆ ಬೇಡಿಕೆ ಹೆಚ್ಚಾಗತೊಡಗಿತು. ಇದರಿಂದಾಗಿ ಕೆಳವರ್ಗದ ಜನ ಮಧ್ಯಮ ವರ್ಗದ ಸ್ಥಾನಮಾನ ಗಳಿಸಲು ಸಾಧ್ಯವಾಯಿತು. ಕಾರ್ಖಾನೆಗಳಲ್ಲಿ, ವಾಣಿಜ್ಯ ಕೇಂದ್ರಗಳಲ್ಲಿ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಹಾಗೂ ಕಟ್ಟಡ ನಿರ್ಮಾಣದ ಉದ್ಯಮಗಳಲ್ಲಿದ್ದ ಹುದ್ದೆಗಳು ಸಾವಿರಾರು ಗ್ರಾಮೀಣ ಜನರನ್ನು ನಗರಕ್ಕೆ ಆಕರ್ಷಿಸಿತು. ಉರುಗ್ವೆ, ಅರ್ಜೆಂಟೈನಾ, ಚಿಲಿ ಮತ್ತು ಕೋಷ್ಟರಿಕಾದಲ್ಲಿ ಯುರೋಪಿಯನ್ನ ಜನಸಂಖ್ಯೆಯೇ ಅಧಿಕವಾಗಿತ್ತು. ಈ ಕಾರಣದಿಂದಾಗಿ ಸಾಮಾಜಿಕ ಗುಂಪುಗಳ ಹೊಂದಾಣಿಕೆಯಲ್ಲಿ ಜನಾಂಗೀಯ ಬದಲಾವಣೆಗಳಿದ್ದವು. ಅದಕ್ಕೆ ಮೆಕ್ಸಿಕೋದಲ್ಲಿ ಮಧ್ಯಮ ವರ್ಗದ, ನಿಪುಣ ಕೆಲಸಗಾರರ ವರ್ಗದವರೇ ಹೆಚ್ಚಾಗಿದ್ದರು. ಆದರೆ ನಗರಗಳಲ್ಲಿ ಇಂಡಿಯನ್ನರು ಹೆಚ್ಚಾಗಿ ವ್ಯಾಪಿಸಿದರು. ಬ್ರೆಜಿಲ್‌ನ ಕೈಗಾರಿಕೆ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಆಫ್ರಿಕನ್ನರೇ ಹೆಚ್ಚಾಗಿದ್ದರು. ಕೂಲಿ ಕೆಲಸ ಮಾಡುವವರೆಲ್ಲಾ ಮಧ್ಯಮ ವರ್ಗದ ಸದಸ್ಯರಾದರು, ಒಂದು ಸಮಾಜೋಆರ್ಥಿಕ ಗುಂಪಿನಿಂದ ಮತ್ತೊಂದಕ್ಕೆ ಸಾಗಿದ್ದರಿಂದ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ನಿರಾಶೆಯನ್ನು ಅನುಭವಿಸಬೇಕಾಯ್ತು.

ಬದಲಾಗುತ್ತಿದ್ದ ಸಮಾಜದಲ್ಲಿ ಸಂಪ್ರದಾಯಬದ್ಧವಾಗಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಒಂದು ಒಳ್ಳೆಯ ಪಾತ್ರ ವಹಿಸಿದ್ದ ಕೌಟುಂಬಿಕ ವ್ಯವಸ್ಥೆ ಆಧುನಿಕ ಜೀವನ ಶೈಲಿಯ ಒತ್ತಡದಲ್ಲಿ ತುಂಬಾ ದುರ್ಬಲವಾಗತೊಡಗಿತು. ಇಂಥಾ ಸ್ಥಿತಿ ಪ್ರಮುಖವಾಗಿ ನಗರಗಳಲ್ಲಿ ಇತ್ತು. ಏಕೆಂದರೆ ಖಾಸಗಿ ಕಂಪನಿಗಳು ಇಕ್ಕಟ್ಟಾದ ವಸತಿಗಳಲ್ಲಿ ಅನಿವಾರ್ಯ ವಾಗಿ ಬದುಕಬೇಕಾದ ಸ್ಥಿತಿಯನ್ನು ಸೃಷ್ಟಿಸಿದ್ದವು. ಆರ್ಥಿಕ ಒತ್ತಡಗಳು ಮಧ್ಯಮ ವರ್ಗದ ಮಹಿಳೆಯೂ ಕೂಡ ಮನೆಯಿಂದ ಹೊರಗೆ ದುಡಿಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶಗಳು ದೊರೆಯಲಾರಂಭಿಸಿತು. ಆಧುನಿಕ ಸಾರಿಗೆ ವ್ಯವಸ್ಥೆಯಿಂದಾಗಿ ಹೊರಗಿನ ಪ್ರಪಂಚಕ್ಕೆ ಬಂದು ಬೇರೆಕುಟುಂಬಗಳೊಂದಿಗೆ ಸೌಹಾರ್ದಯುತ ಸಂಪರ್ಕ ಹೊಂದಲು, ಬಿಡುವಿನ ವೇಳೆಯಲ್ಲಿ ಕ್ಲಬ್, ಸಿನಿಮಾ, ಉದ್ಯಾನಗಳಲ್ಲಿ ಕಾಲ ಕಳೆಯಲು ಅನುವು ಮಾಡಿಕೊಟ್ಟಿತ್ತು.

ಹೊಸ ಸೇನಾ ವ್ಯವಸ್ಥೆ

ಎರಡು ಮಹಾಯುದ್ಧಗಳ ನಡುವೆ ಮಿಲಿಟರಿ ವ್ಯವಸ್ಥೆ ಕೆಲವು ಮೂಲಭೂತ ಮಾರ್ಪಾಡುಗಳಿಗೆ ಒಳಪಟ್ಟು ಅದರ ಪಾತ್ರ ಕೂಡ ಬದಲಾಗಿತ್ತು. ಈ ಶತಮಾನದ ಕೊನೆಯ ಭಾಗದಲ್ಲಿ ಸೇನೆಗೆ ಸೇರಿದ ಯುವಕರು ಈಗ ಅಧಿಕಾರಿಗಳಾಗಿದ್ದರು. ಅವರು ಅದೇ ಸಮಾಜೋಆರ್ಥಿಕ ಗುಂಪುಗಳಾಗಿ ಹೊಸ ನಾಗರಿಕ ನಾಯಕತ್ವದಿಂದಾಗಿ ಮಧ್ಯಮ ವರ್ಗದವರ ಮೇಲೆ ಉಂಟಾಗುತ್ತಿದ್ದ ಆರ್ಥಿಕ ಮತ್ತು ರಾಜಕೀಯ ಪ್ರಭಾವ ಈ ಅಧಿಕಾರಿಗಳು ಈ ಹಿಂದೆ ಗಣ್ಯರಾಗಿದ್ದು ಈಗ ನಗಣ್ಯರಾಗಿರುವವರೊಂದಿಗೆ ತಮ್ಮ ಸಹಯೋಗ ಏರ್ಪಡಿಸಿಕೊಳ್ಳಲು ಅವಕಾಶ ಸೃಷ್ಟಿಸಿತು. ಇದರ ಜೊತೆಜೊತೆಗೆ ಈ ಅಧಿಕಾರಿಗಳು ದುಡಿಯುವ ವರ್ಗದ ಮೇಲೆ ಅಪಾರ ನಂಬಿಕೆ ಇಲ್ಲದೆ ಇದ್ದರೂ ಅವರನ್ನು ಒಪ್ಪಿಕೊಳ್ಳುವುದನ್ನು ಕಲಿತಿದ್ದರು. ಮಧ್ಯಮ ವರ್ಗದ ನಾಯಕತ್ವದಂತೆ ಸೇನೆಯ ಅಧಿಕಾರಿಗಳು ಕ್ಷಿಪ್ರ ಕೈಗಾರೀಕರಣದ ಸಾಧನೆಗೆ ಮಾರ್ಗವಾದ ರಾಷ್ಟ್ರೀಯತೆಗೆ ಕೈಗಾರಿಕೆಗಳು ರಾಷ್ಟ್ರದ ಸ್ವಾಮ್ಯವಾಗಿರಬೇಕೆಂಬ ನೀತಿಯನ್ನು ಬೆಂಬಲಿಸಿದರು. ಸೇನೆಯನ್ನು ವೃತ್ತಿಪರಗೊಳಿಸಿದರು. ಆದರೆ ಅದನ್ನು ರಾಜಕೀಯ ಕ್ಷೇತ್ರದಿಂದ ದೂರ ಇಡಲು ಸಾಧ್ಯವಾಗಲಿಲ್ಲ. ಹೀಗಾಗಿ ಸರ್ಕಾರ ಮತ್ತು ಸಮಾಜದ ಜೊತೆ ಸೇನೆಯ ಪಾತ್ರ ಒಂದು ಹೊಸ ಪರಿಕಲ್ಪನೆಯನ್ನು ಒದಗಿಸಿತು.

೧೯೨೦ ಮತ್ತು ೧೯೩೦ರ ಆರಂಭದಲ್ಲಿ ಉಂಟಾದ ಆಂತರಿಕ ಮತ್ತು ಬಾಹ್ಯ ಅಭಿವೃದ್ದಿಯ ಫಲವಾಗಿ ಲ್ಯಾಟಿನ್ ಅಮೆರಿಕಾದಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆ ಒಂದು ಪ್ರಮುಖವಾದ ಪಾತ್ರ ವಹಿಸಿತು. ಲ್ಯಾಟಿನ್ ಅಮೆರಿಕಾ ಸಾಂಪ್ರದಾಯಿಕವಾಗಿ ಸಾಂಸ್ಕೃತಿಕ ಪ್ರೇರಣೆಯನ್ನು ಫ್ರಾನ್ಸ್‌ನಿಂದ ಪಡೆದಿದ್ದು ಯುದ್ಧದ ತರುವಾಯ ಈ ಸಂಬಂಧವನ್ನು ಮುಂದುವರಿಸಲು ಸಾಧ್ಯವಾಗದಾಯಿತು. ಫ್ರಾನ್ಸ್‌ನ ಸಾಂಸ್ಕೃತಿಕ ಪ್ರೇರಣೆಯ ಪ್ರಾಬಲ್ಯ ಕಡಿಮೆಯಾಯಿತು. ಇಟಲಿ, ಸ್ಪೇನ್, ಪೋರ್ಚುಗಲ್‌ನಿಂದ ಬಂದ ವಲಸೆಗಾರರ ಪ್ರವಾಹ ನಿರುತ್ಸಾಹದ ಪ್ರಭಾವದಿಂದಾಗಿ ಕುಗ್ಗಿತು. ಈ ಬೆಳವಣಿಗೆಯಿಂದಾಗಿ ಮೆಡಿಟರೇನಿಯನ್ ಭಾಗದ ಸಂಬಂಧ ಕಳಚಿ ಬಿತ್ತು. ಈ ಬೇರ್ಪಡಿಕೆಯಿಂದಾಗಿ ೧೯೨೦ರೊಳಗೆ ವಲಸೆ ಬಂದವರು ಹೊಸ ಪರಿಸರಕ್ಕೆ ಹೊಂದಿಕೊಳ್ಳತೊಡಗಿದರು. ಅಲ್ಲಿನ ಜನರನ್ನು ಅಸಂಸ್ಕೃತರು ಎಂದು ಲ್ಯಾಟಿನ್ ಅಮೆರಿಕಾದ ಗಣ್ಯರು ಪರಿಗಣಿಸಿದ್ದರಿಂದ ಇದರ ಜೊತೆ ಜೊತೆಗೆ ಆರ್ಥಿಕ ನಾಯಕತ್ವ ಗ್ರೇಟ್ ಬ್ರಿಟನ್‌ನಿಂದ ಸಂಯುಕ್ತ ಸಂಸ್ಥಾನಕ್ಕೆ ಬಂದಿತು.

ಎರಡನೆಯ ಜಾಗತಿಕ ಯುದ್ಧದ ಆಹಾರದ ಬೇಡಿಕೆಯಿಂದಾಗಿ ಲ್ಯಾಟಿನ್ ಅಮೆರಿಕಾದ ಎಲ್ಲರಿಗೂ ಸಂಪೂರ್ಣ ಉದ್ಯೋಗ ದೊರೆತಂತಾಯಿತು. ಜೊತೆಗೆ ಆ ಭಾಗದ ಸಂಪೂರ್ಣ ಆಹಾರ ಸಾಮಗ್ರಿ ಖಾಲಿಯಾಯಿತು. ದಿನೋಪಯೋಗಿ ಬಳಕೆಗೆ ಬೇಕಾದ ಸಾಮಗ್ರಿಗಳ ಕೈಗಾರಿಕಾ ಉತ್ಪನ್ನಗಳು ಹೆಚ್ಚಾಯಿತು. ಇವನ್ನು ರಫ್ತು ಮಾಡಲು ಯುದ್ಧದ ಸಂದರ್ಭದಲ್ಲಿ ಸಾಧ್ಯವಾಗದೆ ಇದ್ದುದರಿಂದ ಇದು ತುಂಬಾ ಹೊರೆಯಾಯಿತು. ಇದಕ್ಕಾಗಿ ಮುಷ್ಕರಗಳು ನಡೆದವು. ಕೂಲಿಯವರಿಗೆ ಕೆಲಸ ನೀಡುವ ಸಂಸ್ಥೆಗಳ ಗೊಂದಲಗಳು, ಸಾಮಾಜಿಕ ಕಲ್ಯಾಣ ಸಂಬಂಧಿಸಿದ ಬೇಡಿಕೆಗಳು ಮೆಕ್ಸಿಕೊ, ಚಿಲಿ, ಬ್ರೆಜಿಲ್‌ಗಳಂಥ ರಾಜ್ಯಗಳಿಗೆ ಮುಖ್ಯವಾಗಲಿಲ್ಲ. ಈ ಕಾರಣಗಳಿಗಾಗಿ ದುಡಿಯುವ ವರ್ಗಗಳು ತಮ್ಮ ಸ್ಥಾನಮಾನಗಳ ರಕ್ಷಣೆಗಾಗಿ ಹಾಗೂ ಸಾಮ್ರಾಜ್ಯಶಾಹಿಗಳಿಂದ ಮುಕ್ತಿಗಾಗಿ ಹೋರಾಟಗಳನ್ನು ಆರಂಭಿಸಿದವು.

 

ಪರಾಮರ್ಶನ ಗ್ರಂಥಗಳು

೧. ಚಾರ್ಲ್ಸ್ ಗಿಬ್ಸನ್, ೧೯೬೬. ಜನರಲ್ ವರ್ಕ್ಸ್: ಸ್ಪೇನ್ ಇನ್ ಅಮೆರಿಕಾ.

೨. ಕಾರ್ಲ್‌ಓ ಸವೆರ್, ೧೯೬೬. ಸ್ಪ್ಯಾನಿಶ್ ಕನ್‌ಕ್ವೆಸ್ಟ್ ಆಫ್ ಅಮೆರಿಕಾ: ಆರ‌್ಲಿ ಸ್ಪ್ಯಾನಿಶ್ ಮೇನ್.

೩. ಫಿಲಿಪ್ ಡಬ್ಲ್ಯೂ ಫೊವೆಲ್, ೧೯೫೨. ‘‘ಸ್ಪ್ಯಾನಿಸ್ ಕಲೊನಿಯಲ್ ಎಂಪೈರ್’’, ಸೋಲ್ಜರ್ಸ್‌ಇಂಡಿಯನ್ ಆ್ಯಂಡ್ ಸಿಲ್ವರ್ ದಿ ನಾರ್ತ್ ವರ್ಡ್ ಅಡ್ವಾನ್ಸ್ ಆಫ್ ನ್ಯೂ ಸ್ಪೈನ್ ೧೫೫೦-೧೬೦೦.

೪. ಕಾವೊ ಪ್ರಾಡೊ, ೧೯೪೨. ಕಲೊನಿಯಲ್ ಬ್ರಿಜಿಲ್