ದಕ್ಷಿಣ ಅಮೆರಿಕಾ, ಮಧ್ಯ ಅಮೆರಿಕಾ, ಮೆಕ್ಸಿಕೊ ಮತ್ತು ಕ್ಯಾರಿಬಿಯನ್ ದ್ವೀಪವನ್ನು ಲ್ಯಾಟಿನ್ ಅಮೆರಿಕಾವು ಒಳಗೊಂಡಿದೆ. ಸ್ಪೇನ್ ಮತ್ತು ಪೋರ್ಚ್‌ಗೀಸರ ಪರಂಪರೆಯನ್ನು ಶಿಷ್ಟವಾಗಿ ಪ್ರತಿಬಿಂಬಿಸುವುದರಿಂದ ಈ ಭಾಗವನ್ನು ‘ಹಿಸ್‌ಪಾನಿಕ್ ಅಮೆರಿಕಾ’ ಎಂದು ಕರೆಯುವುದು ಹೆಚ್ಚು ಸೂಕ್ತವೆಂದು ತೋರುತ್ತದೆ. ಪ್ರಾದೇಶಿಕವಾಗಿ ಅಕ್ಕಪಕ್ಕದಲ್ಲೇ ಇರುವ ಈ ಭಾಗಗಳು ಸಮಾನ ಸಂಸ್ಕೃತಿ, ಇತಿಹಾಸ, ಭವಿಷ್ಯದ ಬಗೆಗಿನ ಕನಸುಗಳು, ಭೌತಿಕ, ಆರ್ಥಿಕ, ಸಾಮಾಜಿಕ, ಪ್ರಾಕೃತಿಕ ಹಾಗೂ ರಾಜಕೀಯವಾಗಿ ಸಮಾನತೆಯನ್ನು ಹೊಂದಿವೆ. ಭಾಷಿಕ ಭಿನ್ನತೆ ಇದ್ದರೂ ಅನೇಕ ಅಂಶಗಳಲ್ಲಿ ಸಮಾನತೆ ಯಿಂದಾಗಿ ಮತ್ತು ಹೆಚ್ಚು ಪ್ರಚಲಿತ ಪದ ಇದಾದುದರಿಂದ ‘ಲ್ಯಾಟಿನ್ ಅಮೆರಿಕಾ’ ಎಂಬ ಹೆಸರೇ ಶಾಶ್ವತವಾಗಿ ಉಳಿದಿದೆ. ಈ ಅಧ್ಯಯನದ ದೃಷ್ಟಿಯಿಂದ ಕೆಳಕಂಡಂತೆ ವಿಂಗಡನೆ ಮಾಡಿಕೊಳ್ಳಲಾಗಿದೆ.

. ಕೊಲಂಬಿಯನ್ ಪೂರ್ವ ಅವಧಿ : ಅಲಾಸ್ಕಾದ ಮೂಲಕ ಸೈಬೀರಿಯಾದಿಂದ ಬಹುಶಃ ೨೦,೦೦೦ ವರ್ಷಗಳ ಹಿಂದೆ ಮೊಂಗಾಲಾಯ್ದ ಜನ ಅಮೆರಿಕಾವನ್ನು ಪ್ರವೇಶಿಸಿದ್ದಿರಬಹುದು. ಇವರು ನಂತರ ಉತ್ತರ ಮತ್ತು ಮಧ್ಯ ಅಮೆರಿಕಾದವರೆಗೂ ಹರಡಿ ಪನಾಮದ ಮೂಲಕ ದಕ್ಷಿಣ ಅಮೆರಿಕಾಕ್ಕೆ ಆಗಮಿಸಿದರು. ೫೦೦೦ ರಿಂದ ೩೦೦೦ ಅನಂತರದ ವರ್ಷಗಳ ಹಿಂದೆಯೇ ದಕ್ಷಿಣ ಅಮೆರಿಕಾದ ಮೇಲ್ಭಾಗದಲ್ಲಿ ನೆಲೆಸಿದರು. ಇಷ್ಟೇ ಅಲ್ಲದೆ ಬ್ರಿಟಿಷ್ ಕೊಲಂಬಿಯಾ ಪೆರುಗೆ ನೇರವಾಗಿ ಏಷಿಯಾದಿಂದ ಟ್ರಾನ್ಸ್ ಪೆಸಿಫಿಕ್ ಮೂಲಕ ಜನರು ವಲಸೆ ಬಂದಿರಬಹುದೆನ್ನಲಾಗಿದೆ. ಅದರೂ ಕೆಲವು ಅಭಿಜಾತಮಯ ಜನಾಂಗದ ಅಡ್ಡ ಕಾಲುಗಳು ಕುಳಿತ ಚಿತ್ರಕಲೆಗಳು ಇಂಥ ಘಟನೆಗಳಿಗೆ ಸಾಧ್ಯತೆಗಳಿಗೆ ಸುಳಿವುಗಳನ್ನು ನೀಡುತ್ತವೆ. ರಸ್ತೆ ಮೇಲಿನ ಸೇತುವೆಗಳು ಮತ್ತು ಕಳೆದುಹೋದ ಖಂಡಗಳಿಗೆ ಸಂಬಂಧಿಸಿದ ಹಳೆಯ ನಂಬಿಕೆಗಳು ಈಗ ತಿರಸ್ಕೃತಗೊಂಡಿವೆ.

ಇತ್ತೀಚಿನವರೆಗೂ ಕೊಲಂಬಸ್ ಪೂರ್ವದ ಇಂಡಿಯನ್ ಜನಸಂಖ್ಯೆ ಸುಮಾರು ೧೫,೫೦೦,೦೦೦ ಎಂದು ಅಂದಾಜಿಸಲಾಗಿತ್ತು. ಅದರೂ ಇತ್ತೀಚಿನ ಸಂಶೋಧಕರು ಮಧ್ಯ ಮೆಕ್ಸಿಕೋದಲ್ಲಿಯೇ ಇವರ ಜನಸಂಖ್ಯಾ ಸಾಂದ್ರತೆ ಹೆಚ್ಚಾಗಿತ್ತು ಎಂದು ತಮ್ಮ ವಾದವನ್ನು ಮಂಡಿಸುತ್ತಾರೆ. ಇದು ಮುಂದೆ ನಡೆಯಬಹುದಾದ ಸಂಶೋಧನೆಗಳಿಂದ ಖಚಿತಪಡಬೇಕಾಗಿದೆ. ಇಂಡಿಯನ್ ಸಂಸ್ಕೃತಿಯು ಅತ್ಯಂತ ಪ್ರಾಚೀನತೆಯಿಂದ ಉನ್ನತ ಮಟ್ಟದ ಸುಧಾರಿತವಾದುದಾಗಿದೆ. ಅವರನ್ನು ಆರು ಪ್ರಮುಖ ಸಾಂಸ್ಕೃತಿಕ ವರ್ಗಗಳಾಗಿ ವಿಂಗಡಿಸಬಹುದಾಗಿದೆ. ಇವುಗಳಲ್ಲಿ ಪ್ರತಿಯೊಂದು ಅನೇಕ ಭಾಷೆಗಳಿಂದ, ರಾಜಕೀಯ ಗುಂಪುಗಳಿಂದ ಕೂಡಿದೆ. ಅವು ಈ ಕೆಳಕಂಡಂತೆ ಇವೆ.

೧. ಪಿಮಾಪಿಯೋಬ್ಲೂ ನೈರುತ್ಯ ಯುನೈಟೆಡ್ ಸ್ಟೇಟ್ಸ್ ಮತ್ತು ಉತ್ತರ ಮೆಕ್ಸಿಕೊ.

೨. ನಹೊವಾ-ಮಾಯಾ(ಕೇಂದ್ರಮೆಕ್ಸಿಕೊ, ಯುಕಾಟನ್ ಮತ್ತು ಗ್ವಾಟೆಮಾಲಾ).

೩. ಸರ್ ಕಮ್ -ಕ್ಯಾರಿಬಿಯನ್ ಮತ್ತು ಸೆಮಿಮಾರ್ಜಿನಲ್ (ಕೇಂದ್ರ ಅಮೆರಿಕಾ, ದಕ್ಷಿಣ ಗ್ವಾಟೆಮಾಲಾ, ಪನಾಮಾ, ಉತ್ತರ ಮತ್ತು ಪಶ್ಚಿಮ ಕೊಲಂಬಿಯಾ, ವೆನಿಜುಲಾ, ಪಶ್ಚಿಮ ಬರಿನುಕೋದ ಮಹಾ ಅಂಟೇಲಿಸ್, ಮತ್ತು ಅಮೆಜಾನಿನ ಪಶ್ಚಿಮ ಮೇಲ್ಭಾಗ(ನದಿಯ ಮೂಲದಲ್ಲಿ).

ಮೇಲೆ ಹೇಳಿರುವ ಸಾಮಾನ್ಯ ಸಾಂಸ್ಕೃತಿಕ ಗುಂಪುಗಳಲ್ಲಿ ಅನೇಕ ಬುಡಕಟ್ಟುಗಳಲ್ಲಿರುವ ಇಂಡಿಯನ್‌ರು ಉತ್ತಮ ಭೂಮಿಗಾಗಿ, ಭೂಮಿಯ ಒಡೆತನಕ್ಕಾಗಿ ನಿರಂತರ ಹೋರಾಟ ಮಾಡಿದ್ದಾರೆ.

೪. ಕೇಂದ್ರ ಆನ್ ಡೇನ್ (ಪಶ್ಚಿಮ ಇಕ್ವಡರ್, ಪೆರು ಮತ್ತು ವಾಯವ್ಯ ಬೊಲಿವಿಯಾ

೫. ದಕ್ಷಿಣ ಅಮೆರಿಕಾ ಅಂಚಿನಲ್ಲಿ ಬುಡಕಟ್ಟುಗಳು (ದಕ್ಷಿಣ ಚಿಲಿ ಅರ್ಜೆಂಟೈನಾದ ಬಹುಭಾಗ, ಪೂರ್ವ ಬೊಲಿವಿಯಾ, ಉರುಗ್ವೆ ಈಸ್ಟ್ ಸೆಂಟ್ರಲ್ ಬ್ರೆಜಿಲ್‌ನ ಉತ್ತರಭಾಗ) ಮತ್ತು

೬. ಉಷ್ಣವಲಯದ ಕಾಡುಗಳು ಮತ್ತು ದಕ್ಷಿಣದ ಆನಡೆನ್ ಬುಡಕಟ್ಟು ಪೆರು ಭಾಗವನ್ನು ಆಕ್ರಮಿಸಿದ್ದಾರೆ.

೭. ಈ ಬುಡಕಟ್ಟುಗಳು ಕೇಂದ್ರ ಮೆಕ್ಸಿಕೊ, ಮಾಯಾ, ಬೆಬೆಹಾ ಮತ್ತು ಅಂಡೇನಾ ಇಂಡಿಯನ್ನರ ಉತ್ಕೃಷ್ಟ ಸಂಸ್ಕೃತಿಯನ್ನು ಹೊಂದಿದ್ದರು. ಉಳಿದವರು ಪ್ರಾಚೀನ ಶಿಲಾಯುಗದಿಂದ ಹಿಡಿದು ಪೂರ್ವ ನವಶಿಲಾಯುಗದ ಸಂಸ್ಕೃತಿಯನ್ನು ಹೊಂದಿದವರಾಗಿದ್ದರು.

ಸೋತಂತಹ ಬುಡಕಟ್ಟುಗಳಿಗೆ ಕಡಿಮೆ ಸೌಲಭ್ಯವಿರುವ ಭೂಮಿಯನ್ನು ನೀಡಲಾಗುತ್ತಿತ್ತು. ನಂತರ ಕ್ರಮೇಣ ಅವರನ್ನು ನಾಶಮಾಡುತ್ತಿದ್ದರು ಅಥವಾ ಅವರು ಗೆದ್ದವರಿಗೆ ಕಪ್ಪ ಕಾಣಿಕೆಗಳನ್ನು ನೀಡಬೇಕಾಗಿತ್ತು. ಇಂಡಿಯನ್ ಬುಡಕಟ್ಟುಗಳು ಶ್ರೇಣಿಗಳಾಗಿ ವಿಂಗಡನೆ ಗೊಂಡಿದ್ದವು. ಅವುಗಳೆಂದರೆ : ಮುಖ್ಯಸ್ಥ, ಶ್ರೀಮಂತ ಕುಲೀನ, ಪುರೋಹಿತರು ಮತ್ತು ಸಾಮಾನ್ಯ ಜನರು, ಸೇವೆ ಮಾಡುವ ಕೆಲಸಗಾರರು (ಜೀತದಾಳುಗಳು ಮತ್ತು ಗುಲಾಮರು).

ಇಂಡಿಯನ್ನರ ಜೀವನದಲ್ಲಿ ವೈವಿಧ್ಯತೆ ಇತ್ತು. ಇದರಲ್ಲಿ ದೈಹಿಕ ಮತ್ತು ಭಾಷಿಕವಾಗಿಯೂ ಬಹಳ ವ್ಯತ್ಯಾಸಗಳಿದ್ದವು. ಭಾಷೆಗಳು ಅನೇಕ ಮೂಲ ಬೇರುಗಳಿಂದ ರೂಪುಗೊಂಡಿದ್ದವು. ಭಾಷಿಕ ನುಡಿಗಟ್ಟುಗಳ ಸಂಖ್ಯೆಯನ್ನು ಸುಮಾರು ೨೦೦೦ ಅಥವಾ ಅದಕ್ಕಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿತ್ತು. ದೊಡ್ಡ ಸಾಮ್ರಾಜ್ಯಗಳು ಕೂಡ ಭಾಷಿಕವಾಗಿ ಏಕತೆಯನ್ನು ಹೊಂದಿರಲಿಲ್ಲ. ಇಂಕಾಸ್ ತಮ್ಮ ಸ್ವಾಧೀನದಲ್ಲಿ ಕ್ವೆಚ್ಚಾರ ಮೇಲೆ ತಮ್ಮ ಭಾಷಿಕ ಪ್ರಭುತ್ವವನ್ನು ಹೇರಿದ್ದರು. ಇಲ್ಲಿ ಅಜೆಟಿಕ್ಸ್ ನುಡಿಗಟ್ಟಿನ ಬೆರೆಕೆ (ಮಿಶ್ರಣ) ಭಾಷೆಯಿಂದ ವ್ಯವಹರಿಸಲ್ಪಡುತ್ತಿದ್ದರು. ೭೫ರಿಂದ ೧೦೦ ಅಂತರದಲ್ಲಿ ವಾಸವಾಗಿದ್ದ ಬುಡಕಟ್ಟುಗಳು ಒಂದೇ ಭಾಷೆಯ ಬೇರೆ ಬೇರೆ ನುಡಿಗಟ್ಟುಗಳನ್ನು ಮಾತನಾಡುತ್ತಿದ್ದರು. ಹುಲ್ಲಿನ ಜೋಪಡಿಗಳಿಂದ ಹಿಡಿದು ಇಂಕಾ ಜನರು ಬೃಹತ್ ಕಲ್ಲಿನ ಕಟ್ಟಡಗಳನ್ನು, ಮಾಯಾ ಜನಾಂಗದ ದೇವಸ್ಥಾನದ ಗೋಪುರ ಮಾದರಿ ಕಟ್ಟಡಗಳಲ್ಲಿ ವಾಸಿಸುತ್ತಿದ್ದರು. ಪ್ರಾಚೀನ ಬುಡಕಟ್ಟುಗಳು ತಮ್ಮ ನಗ್ನತೆಯನ್ನು ಮುಚ್ಚಿಕೊಳ್ಳಲು ತುಂಡುಬಟ್ಟೆಯನ್ನು ಧರಿಸುತ್ತಿದ್ದರು. ಮೇಲ್ಮಟ್ಟ ನಾಗರಿಕತೆಯ ಉನ್ನತ ವರ್ಗದ ಜನರು ವೈವಿಧ್ಯಮಯ ಉಡುಪುಗಳನ್ನು ಧರಿಸುತ್ತಿದ್ದರು. ಕೆಲವು ಬಾರಿ ಅಂದವಾದ ಗರಿಗಳಿಂದ ಕಲಾತ್ಮಕವಾಗಿ ರಚಿಸಿದ ಉಡುಪುಗಳನ್ನು ಧರಿಸುತ್ತಿದ್ದರು. ಮುಂದುವರಿದ ಗುಂಪುಗಳು ಉತ್ತಮ ಗುಣಮಟ್ಟದ ಹತ್ತಿ ಮತ್ತು ಉಣ್ಣೆ ಬಟ್ಟೆಗಳನ್ನು ಧರಿಸುತ್ತಿದ್ದರು. ಬೇರೆಯವರು ಚಮ್ ಮತ್ತು ತೊಗಟೆಗಳಿಂದ ಮಾನ ಮುಚ್ಚಿಕೊಂಡು ಸಂತುಷ್ಟರಾಗಿರುತ್ತಿದ್ದರು. ಆಭರಣಗಳು ಮಡಿಕೆ ಕುಡಿಕೆಗಳ ತಯಾರಿಕೆ, ಶಿಲ್ಪಗಳ ತಯಾರಿಕೆ ಪ್ರತಿಯೊಂದು ಗುಂಪುಗಳ ಶೈಲಿ ಬೇರೆಯೇ ಆಗಿ ತುಂಬಾ ವೈವಿಧ್ಯತೆಯಿಂದ ಕೂಡಿದೆ. ಮಾಯಾ ಜನಾಂಗದವರಿಗೆ ಬರವಣಿಗೆ ಗೊತ್ತಿತ್ತು. ಸಂಖ್ಯೆ ವ್ಯವಸ್ಥೆ ಅವರಿಗೆ ತಿಳಿದಿತ್ತು ಮತ್ತು ಬಳಕೆಯಲ್ಲಿತ್ತು. ಯುರೋಪಿಯನ್ನರು ಇವತ್ತು ಬಳಸುತ್ತಿರುವ ಕ್ಯಾಲೆಂಡರ್‌ಗಿಂತಲೂ ಮಿಗಿಲಾದ, ಹೆಚ್ಚು ನಿಖರವಾದ ಕ್ಯಾಲೆಂಡರನ್ನು ಅವರು ಹೊಂದಿದ್ದರು. ಇಂಕಾ ಜನಾಂಗದವರು ಜ್ಞಾಪಕದಲ್ಲಿ ಉಳಿಯುವ ಸಾಧನಗಳನ್ನು ಅವಲಂಬಿಸಿದ್ದರು(ಐತಿಹಾಸಿಕ ಮತ್ತು ಅಂಕಿ ಅಂಶಗಳ ಲೆಕ್ಕಾಚಾರವನ್ನು ತಿಳಿಯಲು). ಉಳಿದ ಗುಂಪಿನವರು ಕೇವಲ ಜ್ಞಾಪಕಶಕ್ತಿಯನ್ನು ಅಥವಾ ಚಿತ್ರರೂಪದ ಸಂಕೇತಗಳನ್ನು ಅವಲಂಬಿಸಿ ಕಾಲವನ್ನು ತಿಳಿಯುತ್ತಿದ್ದರು.

ವ್ಯವಸಾಯ/ಕೃಷಿ ತಂತ್ರಗಳು ಮತ್ತು ಮೂಲ ಬೆಳೆಗಳು ಭಿನ್ನವಾಗಿದ್ದವು. ಕೇವಲ ಜೋಳವನ್ನು ಸಹಜವಾಗಿ ಮೊದಲು ಮೆಕ್ಸಿಕೋದಲ್ಲಿ ಬೆಳೆಯುತ್ತಿದ್ದರು. ನಂತರ ಹೊಸಜಗತ್ತಿನಲ್ಲಿ ಎಲ್ಲರೂ ಅದನ್ನು ಬೆಳೆಯುವಂತಾಯಿತು. ಇದರ ಜೊತೆಗೆ ಬೀನ್ಸ್ ಮತ್ತು ಸ್ಕ್ಟಾಷ್ ಬೆಳೆ ಕೂಡ ಎಲ್ಲಾ ಕಡೆ ಬೆಳೆಯುತ್ತಿದ್ದರು. ಉತ್ತರ ಅಮೆರಿಕಾದವರು ಮುಖ್ಯವಾಗಿ ದ್ವಿದಳ ಧಾನ್ಯಗಳಾದ ಜೋಳ, ಬೀನ್ಸ್ ಮತ್ತು ಸ್ಕ್ಟಾಷ್ ಅನ್ನು ಬೆಳೆದರೆ ದಕ್ಷಿಣ ಅಮೆರಿಕಾದವರು ಮತ್ತು ವೆಸ್ಟ್ ಇಂಡಿಯನ್ನರು ಗೆಡ್ಡೆಗೆಣಸುಗಳಿಗೆ ಆದ್ಯತೆ ನೀಡುತ್ತಿದ್ದರು. ಅವುಗಳೆಂದರೆ ಗೆಣಸು ಮತ್ತು ಸಿಹಿ ಆಲೂಗೆಡ್ಡೆ. ಈ ಕಾರಣದಿಂದಾಗಿ ಗೆಣಸನ್ನು(ಕಾಸೊಅ ಅಥವಾ ಮಾನಿಕ) ಗೆದ್ದ ನಾಯಕರು ಬಳಸುತ್ತಿದ್ದರಿಂದ ಇದನ್ನು ಗೆಲುವಿನ ತಳಿಯೆಂದು ಕರೆಯಲಾಗುತ್ತಿತ್ತು. ಬಿಳಿಬಣ್ಣದ ಆಲೂಗಡ್ಡೆಯನ್ನು ಸ್ಥಳೀಯ ಆಹಾರವಾದ ಜೋಳ ಬೆಳೆಯಲಾಗದ ಎತ್ತರದ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಅಂಡೇನ್ ಪ್ರದೇಶದಲ್ಲಿ ಲ್ಲಾಮ ಮತ್ತು ಅಲ್ವೇಕಾ ಎಂಬ ರೀತಿಯ ಕುರಿಗಳು ದೊರೆಯುತ್ತಿದ್ದವು. ಉಳಿದಂತೆ ಹಂದಿ, ನಾಯಿಗಳೇ ಅವರಿಗೆ ಆಹಾರವಾಗಿದ್ದವು. ಇವಿಷ್ಟೆ ಮಾಂಸಕ್ಕೆ ದೊರೆಯುತ್ತಿದ್ದ ಅತ್ಯಲ್ಪ ಮೂಲಗಳು. ಕ್ರೂರ ಮೃಗಗಳ ಬೇಟೆ ಮತ್ತು ಆಟ ಕೆಲವು ಭಾಗಗಳಲ್ಲಿ ಸರ್ವೇಸಾಮಾನ್ಯವಾಗಿತ್ತು. ನರಭಕ್ಷಕ ಆಚರಣೆ ಎಲ್ಲ ಕಡೆ ವ್ಯಾಪಿಸಿತ್ತು. ಕೃಷಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೀರಾವರಿ ಭೂಮಿಯನ್ನು ಉಳುಮೆ ಮಾಡಿ ಗೊಬ್ಬರ ಹಾಕಿ ಬೆಳೆಯುವ ಪದ್ಧತಿಯಿಂದ ಹಿಡಿದು ಸುಟ್ಟ ಭೂಮಿಯನ್ನು ಕಟ್ಟಿಗೆಗಳಿಂದ ಅಗೆದು ಬೀಜ ನೆಡುವ ಪದ್ಧತಿಯವರೆಗೂ ಆಚರಣೆಯಲ್ಲಿತ್ತು. ಇವುಗಳಲ್ಲಿ ಉತ್ತಮವಾದ ಕೃಷಿ ಪದ್ಧತಿ ಎಂದರೆ ಸಲಿಕೆ ಸಹಾಯದಿಂದ ಭೂಮಿ ಅಗೆದು ಕೃಷಿ ಮಾಡುತ್ತಿದ್ದರು. ನೇಗಿಲು ಸಲಿಕೆ ಎಳೆಯಲು ಆಗಿನ್ನೂ ಪ್ರಾಣಿಗಳನ್ನು ಬಳಸುತ್ತಿರಲಿಲ್ಲ. ಇಂಡಿಯನ್ನರಿಗೆ ಫಲವತ್ತಾದ ಹೆಚ್ಚು ಉತ್ಪತ್ತಿಯಿದ್ದ ಭೂಮಿಯೂ ಇತ್ತು. ಇದರಿಂದಾಗಿ ಅವರು ಜನಪ್ರಿಯ ಪ್ರಾಂತ್ಯಗಳನ್ನು ಅಭಿವೃದ್ದಿಪಡಿಸಿಕೊಂಡರು.

ಇದರ ಜೊತೆಗೆ ತುಂಬಾ ಮುಂದುವರಿದ ಸಮುದಾಯಗಳ ಮತ್ತು ಪ್ರಾಚೀನ ಕೆಳಸಂಸ್ಕೃತಿಯ ಜನರನ್ನು ಇಲ್ಲಿ ಪ್ರಸ್ತಾಪಿಸುವುದು ಉಚಿತವೆಂದು ತೋರುತ್ತದೆ. ಚಿಲಿಯ ಅರೇಕಲಿಯನ್ನರು ಒಂದು ಕೃಷಿ ಪ್ರಧಾನವಾದ ಗುಂಪು. ಇವರಲ್ಲಿ ಕೆಲವು ಭಾಗ ಇಂಕಾ ಜನರ ಅಧೀನದಲ್ಲಿದ್ದರು. ಸ್ಪಾನಿಶ್ ಅವರ ಆಕ್ರಮಣ ಶುರುವಾದಾಗ ಇವರು ಕುದುರೆಗಳನ್ನು ತರಿಸಿ, ಅವನ್ನು ಬಿಳಿ ಆಕ್ರಮಣಕಾರರನ್ನು ತಡೆಗಟ್ಟುವಂಥ ಕೆಲಸಕ್ಕಾಗಿ ಬಳಸುತ್ತಿದ್ದರು. ಅರೇಕಲಿಯನ್ ಕುದುರೆ ಸವಾರರು ಅಂಡೆನ್‌ನನ್ನು ದಾಟಿ ದಕ್ಷಿಣದ ಹುಲ್ಲುಗಾವಲಿಗೆ ಸಾಗಿ ಈಗಾಗಲೇ ಯುರೋಪಿನಿಂದ ಬಂದ ಸ್ಪಾನಿಯಾಡ್‌ಗಳಿಂದ ಭಾರಿ ಪ್ರಮಾಣದ ಸುಂಕವನ್ನು ಬಲವಂತವಾಗಿ ಸುಲಿಯುತ್ತಿದ್ದರು. ೧೯ನೆಯ ಶತಮಾನದವರೆಗೂ ಇವರ ಈ ಕೃತ್ಯ ನಿಲ್ಲಲೇ ಇಲ್ಲ. ಉತ್ತರ ಮೆಕ್ಸಿಕೋದಲ್ಲಿ ಅಪಾಕ್ ಮತ್ತು ಮಾಂಡುಗಳು ಇಂಥದ್ದೇ ಸಮಸ್ಯೆಯನ್ನು ಸೃಷ್ಟಿಸಿದ್ದರು. ಆದರೆ ಪಕ್ಕದ ಪ್ಯೂಬ್ಲೋಗಳ ವಿರೋಧಗಳನ್ನು ಬಿಟ್ಟರೆ ಉಳಿದಂತೆ ತುಂಬಾ ತುಂಬಾ ನೆಮ್ಮದಿಯಿಂದ ಇದ್ದರು. ದಕ್ಷಿಣ ಅಮೆರಿಕಾದ ಮಧ್ಯ ಭಾಗದಲ್ಲಿದ್ದ ಗುರಾನಿಗಳು ಕೃಷಿಯನ್ನು ಅವಲಂಬಿಸಿ ಬಹಳ ವಿಧೇಯವಾಗಿ ಬದುಕುತ್ತಿದ್ದರು. ಸ್ಪಾನಿಷ್ ಮತ್ತು ಪೋರ್ಚುಗೀಸರು ಇವರನ್ನು ಕೂಲಿ ಕಾರ್ಮಿಕರಾಗಿ, ಮತ್ತು ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ಕ್ರೈಸ್ತ ಮಿಷನರಿಗಳು ಇವರನ್ನು ಸಂಘಟಿಸುವ ಪ್ರಯತ್ನ ಮಾಡುತ್ತಿದ್ದರು. ಈ ಹೊಸಜಗತ್ತಿನಲ್ಲಿ ಬ್ರೆಜಿಲ್‌ನ ಇಂಡಿಯನ್ನರು ಸಾಂಸ್ಕೃತಿಕವಾಗಿ ಬಹಳ ಹಿಂದುಳಿದಿದ್ದರು. ಇವರ ಕಬ್ಬಿನ ತೋಟಗಳಲ್ಲಿ ಶ್ರಮದಾಯಕ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಅನೇಕ ಬ್ರೆಜಿಲಿಯನ್ ಇಂಡಿಯನ್‌ರು ಪೋರ್ಚುಗೀಸರೊಂದಿಗೆ ಸೆಣಸಾಡಿದರು. ಉಳಿದವರು ಯುರೋಪಿಯನ್ನರ ವಸಾಹತು ನೆಲೆಗಳಿಂದ ನೆರವು ನೀಡಿದರು. ಒಟ್ಟಾರೆ ಹೇಳುವುದಾದರೆ, ಅನೇಕ ಇಂಡಿಯನ್ನರು ಹೋರಾಟ ಮಾಡಿ ಶರಣಾಗತರಾದರು. ಇವರ ಸಂತತಿಯವರೇ (ಇವರ ರಕ್ತ ಸಂಬಂಧಿಗಳು ಅಥವಾ ಬೆರಕೆ ಸಂತತಿ) ಲ್ಯಾಟಿನ್ ಅಮೆರಿಕಾದ ಉದ್ದಗಲಕ್ಕೂ ಹರಡಿ ವಾಸಿಸುತ್ತಿದ್ದಾರೆ.

ಯುರೋಪಿಯನ್ನರ ಆಕ್ರಮಣ ಮತ್ತು ವಸಾಹತು ಕಾಲ

ಸ್ಪ್ಯಾನಿಷ್ ಮತ್ತು ಪೋರ್ಚ್‌ಗೀಸರು ತಮ್ಮ ಕ್ರಿಯಾತ್ಮಕ ರಾಷ್ಟ್ರೀಯ ಧೋರಣೆಗಳಿಂದಾಗಿ ಈ ಹೊಸ ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ವಿಸ್ತರಿಸಿಕೊಂಡರು. ಆಫ್ರಿಕಾವೂ ಸೇರಿದಂತೆ ಅನೇಕ ಬೃಹತ್ ವಸಾಹತುಗಳಿಂದ ಕೂಡಿದ ಈ ದೇಶಗಳು ಶ್ರೀಮಂತವಾಗಿದ್ದವು. ಇದೇ ಸಂದರ್ಭದಲ್ಲಿ ಅವರಿಗೆ ಲ್ಯಾಟಿನ್ ಅಮೆರಿಕಾ ಪ್ರದೇಶಗಳ ಮೇಲೆ ಕಣ್ಣು ಬಿದ್ದಿತು.

ಚಿನ್ನ, ವೈಭವ ಮತ್ತು ಕ್ರಿಸ್ತ ವಾಕ್ಯ ಇವು ಯುರೋಪಿಯನ್ನರ ಪ್ರಮುಖ ಉದ್ದೇಶ ಗಳಾಗಿದ್ದವು. ಇವೇ ಮುಂದೆ ಅನೇಕ ತಪ್ಪು ಕಲ್ಪನೆಗಳಿಗೆ, ತೊಂದರೆಗಳಿಗೆ ದಾರಿಯಾಯಿತು. ಪರಿಣಾಮವಾಗಿ, ಚಿನ್ನದ ದಾಹದಿಂದ ಕೂಡಿದ ಇವರು ಇಂಡಿಯನ್ನರನ್ನು ಮೋಸಗೊಳಿಸಿ, ಭೂಮಿ ಕಸಿದುಕೊಂಡರು. ಐಬೀರಿಯನ್ನರು (ಸ್ಪೇನ್ ಮತ್ತು ಪೋರ್ಚುಗಲ್) ತಮ್ಮ ೩೫೫ ವರ್ಷ ಪ್ರಭುತ್ವದಲ್ಲಿ ಅಳಿಸಲಾಗದ ಛಾಪನ್ನು ಈ ನೆಲದ ಸಂಸ್ಕೃತಿ ಮತ್ತು ಜೀವನದ ಮೇಲೆ ಒತ್ತಿದ್ದರು. ಅನೇಕ ಸ್ಪೇನ್ ಜನರು ಇಂಡಿಯನ್ ಪತ್ನಿಯನ್ನು ಹೊಂದಿದ್ದರು. ಯುದ್ಧ ಹೋರಾಟಗಳು ಲೂಟಿ, ಮುಂತಾದವುಗಳು ಮುಗಿದ ಬಳಿಕ, ಸ್ಪೈನ್ ಮತ್ತು ಪೋರ್ಚುಗೀಸರು ಉಳಿಮೆಗಾಗಿ/ಕೃಷಿಗಾಗಿ ಭೂಮಿ ಹದ ಮಾಡಿಕೊಂಡರು, ನಗರಗಳನ್ನು ಕಂಡುಕೊಂಡರು, ವ್ಯಾಪಾರಿ ಕೇಂದ್ರಗಳನ್ನು ಸ್ಥಾಪಿಸಿದರು, ಮತ್ತು ಗಣಿಗಾರಿಕೆಯನ್ನು ಆರಂಭಿಸಿದರು. ಹೀಗೆ ತಮ್ಮ ರಾಜ್ಯವನ್ನು ಅಭಿವೃದ್ದಿಪಡಿಸಲು ಅನೇಕ ಕ್ರಮಗಳನ್ನು ಕೈಗೊಂಡರು. ತಮ್ಮ ನಂಬಿಕೆಯ ಚರ್ಚುಗಳನ್ನು ಸ್ಥಾಪಿಸಿದರು ಮತ್ತು ಲಕ್ಷಗಟ್ಟಲೇ ಜನರನ್ನು ಕ್ರೈಸ್ತರನ್ನಾಗಿ ಪರಿವರ್ತಿಸಿದರು.

ಅಮೆರಿಕಾದ ಸ್ಪ್ಯಾನಿಷ್‌ರ ಆಕ್ರಮಣ

ಸುಮಾರು ಕ್ರಿ.ಶ.೧೪೮೪ರಲ್ಲಿ ಲಿಸ್ಬನ್‌ನಲ್ಲಿ ವಾಸವಾಗಿದ್ದ ಕೊಲಂಬಸ್ ಪೋರ್ಚುಗೀಸ್ ದೊರೆ ಎರಡನೇ ಜಾನ್‌ನ ಕರೆಯ ಮೇರೆಗೆ ಸಾಗರ ಮಾರ್ಗದ ಅನ್ವೇಷಣೆಗೆ ಸಮುದ್ರಯಾನ ಕೈಗೊಳ್ಳಬೇಕಾಗಿತ್ತು. ನಂತರ ಅದನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ಸುಮಾರು ಎಂಟು ವರ್ಷಗಳು ಸರಿದವು. ಕೊನೆಗೆ ಇಸ್‌ಬೆಲಾ ರಾಣಿ ಇದಕ್ಕೆ ತನ್ನ ಸಮ್ಮತಿಯನ್ನು ನೀಡಿದಳು. ಈತ ಪಡೆಯುವ ಫಲದಲ್ಲಿ ರಾಣಿಗೆ ಔದಾರ್ಯ ಪಾಲು ನೀಡಬೇಕೆಂದು ಕೊಲಂಬಸ್ ಮತ್ತು ರಾಣಿಯ ನಡುವೆ ಒಪ್ಪಂದವಾಯಿತು. ಸಮರ್ಥ ಅಧಿಕಾರಿಗಳಿಂದ ಕೂಡಿದ ನಾವಿಕರ ತಂಡದೊಂದಿಗೆ ತನ್ನ ಹಡಗುಗಳೊಂದಿಗೆ ೧೪೯೨ನೆಯ ಆಗಸ್ಟ್ ೩ರಲ್ಲಿ ಕೊಲಂಬಸ್ ಸಮುದ್ರಯಾನ ಆರಂಭಿಸಿದ. ಈ ಯಾನ ತುಂಬಾ ಯಶಸ್ವಿ ಪ್ರಯಾಣವಾಗಿತ್ತು. ಇದು ದಾರಿಯುದ್ದಕ್ಕೂ ಯಾವುದೇ ಅಡೆತಡೆಗಳಿಲ್ಲದೆ ಸಾಗಿತ್ತು. ಇವರು ಅಕ್ಟೋಬರ್ ೧೨ರಂದು ಬಹಾಮಸ್ ದ್ವೀಪದಲ್ಲಿ ಇಳಿದರು. ಕೊಲಂಬಸ್ ಅದಕ್ಕೆ ಸ್ಯಾನ್ ಸಾಲ್ವೇಡರ್ ಎಂದು ಹೆಸರಿಸಿದ. ಬಹುಮಾಸನಿಂದ ದಕ್ಷಿಣ ದಿಕ್ಕಿಗೆ ಸಾಗಿ ಕ್ಯೂಬಾದ ಈಶಾನ್ಯ ಕರಾವಳಿಗೆ ಬಂದ ನಂತರ ಚೀನಾ(ಕ್ಯಾಟಿ) ಎಂದು ತಪ್ಪಾಗಿ ಗ್ರಹಿಸಿದ. ನಂತರ ಪೂರ್ವಭಾಗವನ್ನು ಕ್ರಮಿಸಿ, ಉತ್ತರ ಭಾರತದ ಕರಾವಳಿಗೆ ಬಂದು ಅಲ್ಲಿ ಕಂಡ ದ್ವೀಪವನ್ನು ಇಸ್ ಪನೋಲಾ ಎಂದು ಕರೆದ. ಆತ ಇಲ್ಲಿಗೆ ಬಂದಾಗ ಆತ ತನ್ನ ಸ್ವಾಟ ಮರಿಯಾ ಎಂಬ ಹೆಸರಿನ ಹುಡುಗನನ್ನು ಕಳೆದುಕೊಂಡನು. ನಂತರ ಸ್ಪೇನಿಗೆ ಹಿಂತಿರುಗಿ ಇಂಡೀಸ್ ಕಂಡುಹಿಡಿಯುವ ಬಗ್ಗೆ ವರದಿ ಮಾಡಿದ ಹಾಗೂ ಅದಕ್ಕೆ ಸ್ಪೇನ್ ಮತ್ತು ಪೋರ್ಚುಗಲ್ ಅರಸರ ಸಹಾಯವನ್ನು ಕೋರಿದನು. ೧೪೯೩ರ ಕೊನೆಗೆ ಕೊಲಂಬಸ್ ೧೭ ಹಡಗುಗಳೊಂದಿಗೆ ತುಂಬಿದ ಸುಮಾರು ೧೨೦೦೦ ನೆಲೆವಾಸಿಗಳನ್ನು ಕರೆದುಕೊಂಡು ಎಸ್‌ಪನೊಲಾಕ್ಕೆ  ಹಿಂತಿರುಗಿದ. ಈ ಮೊದಲೆರಡು ಸಮುದ್ರಯಾನದಿಂದ ಅಷ್ಟೇನು ಉಪಯೋಗವಾಗದಿದ್ದರೂ ಸ್ಪ್ಯಾನಿಷ್‌ನ ಸಾರ್ವಭೌಮತ್ವ ಕೊಲಂಬಸ್‌ನ ಮೇಲೆ ಇನ್ನೂ ವಿಶ್ವಾಸ/ನಂಬಿಕೆ ಇರಿಸಿ ಕೊಂಡಿತ್ತು. ಇದರ ಫಲವಾಗಿ ೧೪೯೮ ಮೂರನೆಯ ಸುತ್ತಿನ ಸಮುದ್ರಯಾನವನ್ನು ನೌಕಾಬಲದ ತಂಡದೊಂದಿಗೆ ಆರಂಭಿಸಿದ. ಈ ಯಾನದಲ್ಲಿ ಆತ ಟ್ರೈನಿಡಾಡ್ ದ್ವೀಪವನ್ನು ಒರಿನಾರೊ ಪ್ರದೇಶದ ಕೆಲವು ಭಾಗಗಳನ್ನು (ತುದಿ) ಪತ್ತೆಹಚ್ಚಿದ. ಎಸ್ ಪೊನೊಲಾದಲ್ಲಿದ್ದ ಅವ್ಯವಸ್ಥೆ ಅವನ್ನು ಹಿಂತಿರುಗಿದಾಗ ಎದುರುಗೊಂಡಿತು. ದಿಢೀರ್ ಶ್ರೀಮಂತರಾಗಬೇಕೆಂಬ ಹಂಬಲ ಸ್ಪೇನರನ್ನು ನಿರಾಶೆಗೆ ನೂಕಿತ್ತು. ಅವರು ಈ ಸ್ಥಿತಿಗಾಗಿ/ಇದಕ್ಕಾಗಿ ಕೊಲಂಬಸ್‌ನೇ ಕಾರಣ ಎಂದು ದೂರಿದರು. ಇದರಿಂದಾಗಿ ಆತ ಬೇಸತ್ತ. ಆದರೂ ಅವನು ಸ್ಪೇನ್‌ನವರ ಕೋಪವನ್ನು ಶಮನಗೊಳಿಸಲು ಕ್ಷಮೆ ಯಾಚಿಸಿ ಭೂಮಿಯನ್ನು, ಇಂಡಿಯನ್ ಗುಲಾಮರನ್ನು ಅವರಿಗೊಪ್ಪಿಸಬೇಕಾಯಿತು. ಈ ನಡುವೆ ಕೊಲಂಬಸ್‌ನ ಮೇಲೆ ನೀಡಲಾದ ಅನೇಕ ದೂರುಗಳನ್ನು ಪರಿಶೀಲಿಸಿ, ತನಿಖೆಗೆ ಅಲ್ಲಿನ ಒಬ್ಬ ಏಜೆಂಟನೊಬ್ಬನನ್ನು ಸರ್ಕಾರವು ನೇಮಿಸಿತು. ಅಲ್ಲಿಗೆ ಆತನ ಹೊಸ ಜಗತ್ತನ್ನು ಕಂಡುಹಿಡಿಯುವ ಮತ್ತು ಹೊಸ ನೆಲೆಗಳನ್ನು ಗುರುತಿಸುವ ಏಕಸ್ವಾಮ್ಯ ಅವಕಾಶ ತಪ್ಪಿಹೋಯಿತು. ೧೫೦೦-೦೪ರಲ್ಲಿ ನಡುವೆ ಕೊಲಂಬಸ್ ಮತ್ತೊಂದು ಸಮುದ್ರಯಾನವನ್ನು ಕೈಗೊಂಡ. ಅದು ಯಶಸ್ಸು ಕಾಣಲಿಲ್ಲ. ಬದಲಿಗೆ ಎಸ್‌ಪನೊಲಾದಿಂದ ಇಂಡಿಯನ್ ಮಹಾಸಾಗರಕ್ಕೆ ದಾರಿ ಕಂಡುಕೊಂಡಾಯಿತು. ಅಲ್ಲಿ ಅವನಿಗೆ ನೆಲದ ಮೇಲೆ ಇಳಿಯಲು ಅಲ್ಲಿನವರು ಅವಕಾಶ/ಅನುಮತಿ ನೀಡಲಿಲ್ಲ. ಕೆರೇಬಿಯನ್ ದಾಟಿ ಮಧ್ಯ ಅಮೆರಿಕಾದ ಕರಾವಳಿ ಮೂಲಕ ದಕ್ಷಿಣ ದಿಕ್ಕಿಗೆ ಸಾಗಿ, ಪನಾಮ ಇಸ್ತಮಸ್ ತಲುಪಿದ. ಕೊನೆಗೆ ಎಸ್‌ಪೊನೊಲಾ ಕಡೆಗೆ ತನ್ನ ಯಾನವನ್ನು ತಿರುಗಿಸಿದ. ಆದರೆ ಜೈಮೈಕಾದಲ್ಲಿ ಆತ ಉಳಿಯಲೇಬೇಕಾಯಿತು. ಅಲ್ಲಿ ಆತ ಮತ್ತು ಆತನ ಜನ ಕೆಲವು ವರ್ಷಗಳು ನೆಲೆಸಿದ್ದರು.

೧೫೦೨ರಲ್ಲಿ ೨೫೦೦ ಜನರನ್ನು ೭೩ ಕುಟುಂಬಗಳನ್ನು ಒಳಗೊಂಡ ನಿಕಾಲಸ್ ದು ಓವಾಂಡ ದಂಡಯಾತ್ರೆ ಬಂದು ಗವರ್ನರ್ ಆಗಿ ಸೇವೆ ಸಲ್ಲಿಸಿದ. ಸ್ವಲ್ಪ ದಿನಗಳಲ್ಲೇ ಓವಾಂಡಸ್ ಗುಂಪಿನ ಸುಮಾರು ೧೦೦೦ ಜನ ಮರಣವನ್ನಪ್ಪಿದರು. ಈತನ ಆಳ್ವಿಕೆಯ ಆರು ವರ್ಷಗಳಲ್ಲಿ ಒಂದು ಸ್ಥಿರತೆ ಬಂದಿತು. ಹೊಸ ನಗರಗಳ ನಿರ್ಮಾಣವಾಯಿತು. ಚಿನ್ನದ ಗಣಿಗಾರಿಕೆ ಅಭಿವೃದ್ದಿಯಾಯಿತು. ಇಂಡಿಯನ್ ಲೇಬರ್‌ಗಳನ್ನು ಬಳಸಿಕೊಂಡು ಕೃಷಿಯನ್ನು/ಆಹಾರ ಬೆಳವಣಿಗೆಯನ್ನು ಹೆಚ್ಚಿಸಲಾಯಿತು. ಇಂಡಿಯನ್ ಜನಸಂಖ್ಯೆಯಿಂದ ಎಸ್‌ಪೊನೊಲಾದಲ್ಲಿ ಘರ್ಷಣೆಗಳಾದವು. ೧೮ನೆಯ ಶತಮಾನದ ಆರ್ಥಿಕ ಪುನರುತ್ಥಾನ ಆಗುವವರೆಗೂ ಎಸ್‌ಪನೊಲಾ ಕ್ಷೀಣಿಸಿತ್ತು.

ಸ್ಪೇನ್ ವಸಾಹತು ಸಾಮ್ರಾಜ್ಯ

ಅಮೆರಿಕಾದಲ್ಲಿನ ಸ್ಪ್ಯಾನಿಷ್ ಸಾಮ್ರಾಜ್ಯದ ರಾಜಕೀಯ ಸಂಘಟನೆ ಸ್ಪೇನ್‌ನ ಕೇಂದ್ರೀಕೃತ, ನಿಖರತೆಯಂದ ಕೂಡಿದ ಆಳ್ವಿಕೆಯ ಪ್ರತಿಬಿಂಬದಂತೆ ತೋರುತ್ತಿತ್ತು. ಈ ಆಳ್ವಿಕೆಯಡಿ ಸ್ವತಃ ಸ್ಪೈನಿನವರೇ ಇದ್ದರು. ಸ್ಪೇನ್‌ನಲ್ಲಿ ಇದ್ದಂತೆ ಇಂಡೀಸ್‌ನಲ್ಲೂ ರಾಜಮನೆತನದವರ ಕೈಯಲ್ಲಿ ಕೇಂದ್ರೀಕೃತವಾದ ಔಪಚಾರಿಕ ಅಧಿಕಾರ ಮತ್ತು ಭೂಮಾಲೀಕರ ಸ್ಥಳೀಯ ಮಟ್ಟದ ಅಧಿಕಾರದ ಬಳಕೆಯ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯಗಳಿದ್ದವು.

ತನ್ನ ವಸಾಹತುಗಳು ಸ್ಪೇನಿನ ಆಡಳಿತದ ಮಾದರಿ ರೂಪುಗೊಂಡಿದ್ದು ೧೪೯೨ರಿಂದ ೧೫೫೦ರ ನಡುವಿನ ಅವಧಿಯಲ್ಲಿ. ಇದರ ಫಲವಾಗಿ ಕೊನೆಗೆ ಸ್ಪೇನ್‌ನಲ್ಲಿ ಕೇಂದ್ರೀಕೃತ ಆಡಳಿತ ಕ್ರಮ ಜಾರಿಗೆ ಬರಲಾರಂಭಿಸಿತು. ಕೊಲಂಬಸ್, ಕಾರ್ಟಸ್, ಪಿಜಾರೋ  ಮುಂತಾದ ನಾಯಕರಿಗೆ ಸ್ಪೇನ್‌ನ ದೊರೆಗಳು ಅಧಿಕಾರಗಳನ್ನು ನೀಡಿದರು. ನಂತರ ಅವರಲ್ಲೇ ಉಂಟಾದ ಜಗಳಗಳಿಂದಾಗಿ ಅವರ ಅಧಿಕಾರಗಳನ್ನು ಮಿತಿಗೊಳಿಸಿದರು. ೧೬ನೆಯ ಶತಮಾನದ ಮಧ್ಯಭಾಗದೊತ್ತಿಗೆ ಇಂಡೀಸ್ ನ ರಾಜಕೀಯ ಸಂಘಟನೆ ಒಂದು ನಿಖರವಾದ ಆಕಾರ ಪಡೆಯಿತು. ಮುಂದೆ ಅದನ್ನೇ ಕೆಲವು ಬದಲಾವಣೆಗಳೊಂದಿಗೆ ಉಳಿಸಿಕೊಳ್ಳಲಾಯಿತು. ಅದು ೧೮ನೆಯ ಶತಮಾನದವರೆಗೂ ಹಾಗೆಯೇ ಇತ್ತು.

ಇಂಡೀಸ್‌ನ ಪರಿಷತ್ತು (ದ ಕೌನ್ಸಿಲ್ ಆಫ್ ದಿ ಇಂಡೀಸ್)

ಸ್ಥಳೀಯ ಆಡಳಿತಾಂಗವನ್ನು ಇಂಡೀಸ್‌ನ ಪರಿಷತ್ತು ಎಂದು ಕರೆಯಲಾಗುತ್ತಿತ್ತು. ಇಂಡೀಸ್‌ನ ಪರಿಷತ್ತು ೧೫೨೪ರಲ್ಲಿ ಶಾಸನಬದ್ಧವಾಯಿತು. ಸ್ಪೇನ್‌ನ ಅವರ ಸಾರ್ವಭೌಮತ್ವದ ಆಡಳಿತದ ಮುಂಚೂಣಿಯಲ್ಲಿ ಇದು ತಲೆ ಎತ್ತಿತ್ತು. ಇದು ಹೆಚ್ಚು ಕಡಿಮೆ ವಸಾಹತು ಅವಧಿಯ ಅಂತಿಮಕಾಲ ಘಟ್ಟ. ಗಣ್ಯರನ್ನು, ನ್ಯಾಯಾಲಯದ ಪ್ರಮುಖರನ್ನು ಈ ಪರಿಷತ್ತಿಗೆ ನೇಮಿಸಲಾಯಿತು. ಅದರಲ್ಲೂ ೧೭ನೆಯ ಶತಮಾನದೊತ್ತಿಗೆ ಈ ಪರಿಷತ್ತಿನಲ್ಲಿ ನ್ಯಾಯವಾದಿಗಳೇ ಹೆಚ್ಚಾಗಿದ್ದರು. ಒಂದು ರಾಜ್ಯಾಧಿಕಾರಕ್ಕೂ ಮತ್ತೊಂದು ರಾಜ್ಯಾಧಿಕಾರಕ್ಕೂ ವ್ಯತ್ಯಾಸಗಳಿದ್ದವು. ಇವರ ಒಂದು ಪ್ರಮುಖವಾದ ಕಾರ್ಯ ಎಂದರೆ ರಾಜರಿಗೆ ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಿದ್ದು, ೧೬೮೧ರಲ್ಲಿ ಪ್ರಖ್ಯಾತ ಇಂಡೀಸ್ ಕಾನೂನನ್ನು ಜಾರಿಗೆ ತಂದದ್ದು. ಅದರಲ್ಲಿ ಇತಿಹಾಸ, ಭೌಗೋಳಿಕ ವಿಚಾರ ಮತ್ತು ಸಂಪನ್ಮೂಲಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಅಳವಡಿಸಿದ್ದು. ಪ್ಯಾಬ್ಸ್ ಬರ್ಗ್‌ನ ಆರಂಭದ ಅವಧಿ ಪ್ರಜ್ಞಾವಂತ ಮತ್ತು ಸಮರ್ಥ ಅಧಿಕಾರಿಗಳಿಂದ ಕೂಡಿದ್ದ ಪರಿಷತ್ತು ನಂತರದ ಅವಧಿಯಲ್ಲಿ ತನ್ನ ಪ್ರತಿಷ್ಠೆಯನ್ನು ಕಳೆದುಕೊಂಡನು. ಕಾರಣ ೧೭ನೆಯ ಶತಮಾನದ ಅಯೋಗ್ಯ/ಅಸಮರ್ಥ ರಾಜರುಗಳೇ ಇದಕ್ಕೆ ಕಾರಣವಾಗಿದ್ದರು.

ವೈಸ್‌ರಾಯ್, ಮಹಾದಂಡಾಧಿಕಾರಿಗಳು ಮತ್ತು ನ್ಯಾಯಾಧೀಶರು

ಈ ವಸಾಹತುಗಳಲ್ಲಿ ರಾಜನ ಪ್ರಮುಖ ಪ್ರತಿನಿಧಿಗಳೆಂದರೆ ವೈಸ್‌ರಾಯ್, ಮಹಾದಂಡನಾಯಕರು ಮತ್ತು ನ್ಯಾಯಾಂಗದವರು. ವೈಸ್‌ರಾಯ್ ಮತ್ತು ದಂಡನಾಯಕರ ಕೆಲಸಗಳ ಸ್ವರೂಪ ಬಹಳಮಟ್ಟಿಗೆ ಒಂದೇ ಆಗಿರುತ್ತಿತ್ತು. ಅವರು ತಮ್ಮ ತಮ್ಮ ಕ್ಷೇತ್ರಗಳ ಸರ್ವಾಧಿಕಾರಿಗಳಾಗಿರುತ್ತಿದ್ದರು. ಈ ಭಾಗಗಳಲ್ಲಿ ೧೭೦೦ರ ವೇಳೆಗೆ ಎರಡು ಪ್ರಮುಖ ವೈಸರಾಯಲ್ಟಿಗಳಿದ್ದವು. ಅದರಲ್ಲಿ ಒಂದು ಹೊಸ ಸ್ಪೇನ್‌ನ ವೈಸ್‌ರಾಯಲ್ಟಿ ಅದರ ರಾಜಧಾನಿ ಮೆಕ್ಸಿಕೊ ನಗರ.

ಇದು ಸ್ಪ್ಯಾನಿಷ್‌ನ ಸಮಸ್ತವನ್ನು ಒಳಗೊಂಡಿತ್ತು. ಪನಾಮದ ಉತ್ತರ ಇಸ್ತಮಸ್ ಕೂಡ ಇದರ ವ್ಯಾಪ್ತಿಯಲ್ಲೇ ಬರುತ್ತಿತ್ತು. ಮತ್ತೊಂದು ರಾಜ್ಯವಾದ ಪೆರು ರಾಜಪ್ರತಿನಿಧಿತ್ವ ಹೊಂದಿತ್ತು. ಅದರ ರಾಜಧಾನಿ ಲಿಮಾ. ಇದು ವೆನಿಜುಲಾದ ಕರಾವಳಿಯನ್ನು ಹೊರತುಪಡಿಸಿ ಸ್ಪ್ಯಾನಿಷ್ ದಕ್ಷಿಣ ಅಮೆರಿಕಾವನ್ನು ಸಂಪೂರ್ಣ ಒಳಗೊಂಡಿತ್ತು. ಮಹಾ ದಂಡಾಧಿಕಾರಿಯು ತಾತ್ವಿಕವಾಗಿ ರಾಜಪ್ರತಿನಿಧಿ(ವೈಸರಾಯ್) ಅಧೀನದಲ್ಲಿದ್ದರೂ ವಾಸ್ತವವಾಗಿ ತನ್ನ ಅಧಿಕಾರ ವ್ಯಾಪ್ತಿಯ ಬೃಹತ್ ಉಪಭಾಗಗಳ ಆಡಳಿತವನ್ನು ಇವನು ಸ್ವತಂತ್ರವಾಗಿ ನೋಡಿಕೊಳ್ಳುತ್ತಲಿದ್ದ. ಸಣ್ಣ ಉಪಭಾಗಗಳನ್ನು ಆಧಿಪತ್ಯ/ಪ್ರಾಂತ್ಯ ಎಂದು ಕರೆಯಲಾ ಗುತ್ತಿತ್ತು. ಅದನ್ನು ನ್ಯಾಯಾಂಗದವರು ನೋಡಿಕೊಳ್ಳುತ್ತಿದ್ದರು. ನ್ಯಾಯಾಧ್ಯಕ್ಷರು ರಾಜ್ಯಪಾಲರಂತೆ ವರ್ತಿಸುತ್ತಿದ್ದರು.

ವೈಸರಾಯ್ ಅನೇಕ ಸಂದರ್ಭಗಳಲ್ಲಿ ಶ್ರೀಮಂತ ಅಥವಾ ಗಣ್ಯ ಸ್ಪೇನ್ ಮನೆತನದವನಾಗಿರುತ್ತಿದ್ದ. ವಕೀಲ ಲಾಯರ್ ಅಥವಾ ಪಾದ್ರಿಗಳಾಗಿರುತ್ತಿದ್ದ. ಆತ ಇಂಡೀಸ್‌ನ ಪರಿಷತ್ತಿನ ಕಾನೂನು ಮತ್ತು ಸೂಚನೆಗಳನ್ನು ಪಾಲಿಸುತ್ತಿದ್ದ. ಅನೇಕ ಸಂದರ್ಭಗಳಲ್ಲಿ ಸ್ವಯಂ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವು ಆತನಿಗಿತ್ತು. ೧೬ನೆಯ ಶತಮಾನ ಸಮರ್ಥ ಮತ್ತು ಹೆಸರಾಂತ ವೈಸ್‌ರಾಯ್‌ಗಳು ಆಳಿಹೋದರು. ಅಂಥವರ ಸಂಖ್ಯೆ ಹೊಸ ಜಗತ್ತಿನಲ್ಲಿ ಅಂದರೆ ೧೭ನೆಯ ಶತಮಾನದಲ್ಲಿ ಕ್ಷೀಣಿಸಿತು. ಉದಾಹರಣೆಗೆ ಪೆರು ಮತ್ತು ಮೆಕ್ಸಿಕೋದ ರಾಜಪ್ರತಿನಿಧಿತ್ವವನ್ನು ೧೬೯೫ರಲ್ಲಿ ಅತ್ಯಂತ ಹೆಚ್ಚು ಹಣಕ್ಕೆ ಮಾರಾಟ ಮಾಡಲಾಗುತ್ತಿತ್ತು. ವೈಸ್‌ರಾಯ್‌ಗಳಿಗೆ ಆತನ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ಮಹಾದಂಡನಾಯಕರು ಮತ್ತು ನ್ಯಾಯಾಧೀಶರು ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದರು. ವೈಸ್‌ರಾಯ್‌ಗಳು ತಮ್ಮ ಕಾರ್ಯಚಟುವಟಿಕೆಗೆ ಸಂಬಂಧಿಸಿ ದಂತೆ ಇಂಡೀಸ್ ಪರಿಷತ್ತಿನೊಂದಿಗೆ ನೇರವಾದ ಸಂಪರ್ಕ ಹೊಂದಿರುತ್ತಿದ್ದರು.

ಪ್ರಾಂತೀಯ ಸರ್ಕಾರಗಳು

ಇಂಡೀಸ್ ಪ್ರಾಂತ್ಯಗಳ ಆಡಳಿತವನ್ನು ನೋಡಿಕೊಳ್ಳಲು ರಾಜನ ಅಧಿಕಾರಗಳಿಗೆ ವಹಿಸಲಾಗುತ್ತಿತ್ತು. ಇವರು ವಿವಿಧ ಪ್ರಮುಖ ಪಟ್ಟಣಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾ ಆಡಳಿತ ನಡೆಸುತ್ತಿದ್ದರು. ಇವರನ್ನು ಕಾರಿಜಿಡರ್ ಎಂದು ಕರೆಯುತ್ತಿದ್ದರು. ಇವರಲ್ಲಿ ಕೆಲವರನ್ನು ವೈಸ್‌ರಾಯ್‌ಗಳು ನೇಮಿಸುತ್ತಿದ್ದರು. ಮತ್ತೆ ಕೆಲವರನ್ನು ರಾಜರೇ ನೇರವಾಗಿ ನೇಮಿಸುತ್ತಿದ್ದರು. ಅವರವರ ಜಿಲ್ಲೆಗಳಲ್ಲಿ ನ್ಯಾಯಾಂಗ ಮತ್ತು ರಾಜ್ಯಾಂಗದ ಸಮಸ್ತ ಅಧಿಕಾರವನ್ನು ಅವರು ಹೊಂದಿರುತ್ತಿದ್ದರು. ನಗರ ಪರಿಷತ್ತಿನ(ಕಾಬಿಲ್ಡಸ್) ರಾಜ್ಯಾಧಿಕಾರದ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತಿದ್ದರು. ಅವರು ನ್ಯಾಯವಾದಿಯಾಗಿ ತರಬೇತಿ ಹೊಂದಿಲ್ಲದೇ ಇದ್ದರೆ ನ್ಯಾಯಕ್ಕೆ ಅಂಥ ಕಾರಿಜಿಡರ್‌ಗಳು ಕಾನೂನು ಸಲಹೆಗಾರರ(ಆಸೆಸರ್) ನೆರವನ್ನು ಪಡೆಯುತ್ತಿದ್ದರು. ಕಾರಿಜಿಡರ್‌ನಲ್ಲಿ ಎರಡು ವಿಧಗಳು. ಕೆಲವರು ಸ್ಪ್ಯಾನಿಶ್ ನಗರಗಳಲ್ಲಿದ್ದು ಆಡಳಿತ ನಡೆಸುತ್ತಿದ್ದರೆ, ಇನ್ನೂ ಕೆಲವರು ಇಂಡಿಯನ್ ನಗರಗಳನ್ನು ನೋಡಿಕೊಳ್ಳುತ್ತಿದ್ದರು. ಇವರು ರಾಜನಿಗೆ ಕಪ್ಪಕಾಣಿಕೆಗಳನ್ನು ನೀಡುತ್ತಿದ್ದರು. ಕಾರಿಜಿಡರ್‌ಗಳ ಪ್ರಮುಖವಾದ ಕರ್ತವ್ಯ ಬಿಳಿಯರಿಂದ ಉಂಟಾಗಬಹುದಾದ ಮೋಸ ವಂಚನೆಯಿಂದ ಸ್ಥಳೀಯರನ್ನು ರಕ್ಷಿಸುವುದೇ ಆಗಿತ್ತು. ಆದರೆ ಅವರೇ ನೀತಿ ತಪ್ಪಿ ನಡೆದು ಅಪರಾಧಗಳನ್ನು ಎಸೆಗುತ್ತಿದ್ದರು. ಬಹುಶಃ ಇವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಖರೀದಿ ಸಂಬಂಧಿಸಿದಂತೆ ಮೋಸ ಎಸಗಿ ಸ್ಥಳೀಯ ಹಣ ಕಬಳಿಕೆಯಿಂದ ಬಹಳ ಬೇಗ ಶ್ರೀಮಂತರಾದರು.

ಮುನಿಸಿಪಲ್ ಆಡಳಿತ/ಸರ್ಕಾರ

ಸ್ವಲ್ಪಮಟ್ಟಿಗೆ ಸ್ಥಳೀಯರ ಆಶೋತ್ತರಗಳಿಗೆ ಸ್ಪಂದಿಸಿದ ಆಡಳಿತ ಇದೆಂದರೆ ತಪ್ಪಾಗಲಾರದು. ಇದರ ಆಡಳಿತವನ್ನು ಕಾಲಿರಿಲ್ಡೊ ಎಂಬುವವರು ನೋಡಿಕೊಳ್ಳುತ್ತಿದ್ದರು. ಮೊದಲಿಗೆ ಇವರ ನೇಮಕಾತಿಯನ್ನು ರಾಜರೇ ಮಾಡುತ್ತಿದ್ದರು. ಎರಡನೆಯ ಫಿಲಿಪ್ ಹಾಗೂ ನಂತರದ ರಾಜರು ಈ ಹುದ್ದೆಯನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡಲಾರಂಭಿಸಿದರು. ತತ್ಪರಿಣಾಮವಾಗಿ ಭೂಮಾಲೀಕರು, ಗಣೀ ಮಾಲೀಕರು, ಆಗರ್ಭ ಶ್ರೀಮಂತ ಯಾವುದೇ ಸಂಭಾವನೆ ಪಡೆಯದೇ ಈ ಪದವಿಯನ್ನು ಅನುಭವಿಸತೊಡಗಿದರು. ಸಾರ್ವಜನಿಕ ಭೂಮಿಯನ್ನು ತಮ್ಮ ಹೆಸರಿಗೆ ಹಾಗೂ ತಮಗೆ ಬೇಕಾದವರ ಹೆಸರಿಗೆ ನೀಡತೊಡಗಿದರು. ಇಂಡಿಯನ್ ಕೂಲಿಕಾರರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳ ತೊಡಗಿದರು. ಕ್ರಮೇಣ ಇವರಿಗೆ ಸ್ವಾಯತ್ತತೆ ಕಡಿಮೆಯಾಯಿತು.

ಸ್ಪೇನ್ ಇಂಡಿಯನ್ ಆಡಳಿತ ನೀತಿಗಳು

ಸ್ಪೇನ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಅನೇಕ ಸಮಸ್ಯೆಗಳನ್ನು ಎದುರಿಸ ಬೇಕಾಯಿತು. ಅಮೆರಿಕಾದ ಸ್ಥಳೀಯರ ಮೇಲೆ ಯಾವ ರೀತಿಯ ಧೋರಣೆ ಹೊಂದಬೇಕು, ಆಕ್ರಮಣಕಾರರ ಮತ್ತು ಆಕ್ರಮಣಕ್ಕೆ ಒಳಗಾದವರ ನಡುವೆ ಎಂಥ ಸಂಬಂಧ ಹೊಂದಬೇಕು ಎಂಬುದರ ಬಗ್ಗೆ ಗೊಂದಲಗಳಿದ್ದವು. ಇಂಡಿಯನ್ ಕೆಲಸಗಾರರನ್ನು ಅನೇಕ ದುಷ್ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿತ್ತು.

ಇಷ್ಟೆಲ್ಲಾ ಹಿನ್ನೆಲೆ ಈ ಭಾಗಗಳಾಗಿದ್ದರೂ ಚರ್ಚ್‌ಗಳು ಕೂಡ ಇಂಡಿಯನ್ನರ ಸಮಸ್ಯೆಗಳಿಗೆ ತುಂಬಾ ಕಾಳಜಿಯಿಂದ ಸ್ಪಂದಿಸಿದವು. ಒಂದು ವೇಳೆ ಇಂಡಿಯನ್ನರೆಲ್ಲಾ ಸತ್ತು ಹೋದರೆ ಧರ್ಮದ ಆರಾಧಕರೇ ಇಲ್ಲದಂತಾಗಿ ಚರ್ಚುಗಳಿರುವ ಪ್ರತಿಷ್ಠೆ ನಶಿಸಿ ಹೋಗುತ್ತದೆ ಎಂಬ ಭಯವೂ ವಸಾಹತುಗಾರರಿಗಿತ್ತು. ಅದಕ್ಕೂ ಮಿಗಿಲಾಗಿ ಚರ್ಚ್ ಕಟ್ಟಡಗಳನ್ನು, ಗೋಪುರಗಳನ್ನು ಇಂಡಿಯನ್ ಕೂಲಿಕಾರರೇ ನಿರ್ಮಿಸುತ್ತಿದ್ದರು. ಈ ಕಾರಣಗಳಿಗಾಗಿ ಚರ್ಚುಗಳು ಸಾಮಾನ್ಯವಾಗಿ ಇಂಡಿಯನ್ನರ ಮೇಲೆ ಅನುಕಂಪ ತೋರುತ್ತಿದ್ದರು ಮತ್ತು ಇವರ ಮೇಲಾಗುತ್ತಿದ್ದ ಶೋಷಣೆಗಳನ್ನು ಕಡಿಮೆ ಮಾಡುವಲ್ಲಿನ ರಾಜನ ಪ್ರಯತ್ನಗಳಿಗೆ ಚರ್ಚುಗಳು ನೆರವಾಗುತ್ತಿದ್ದವು.

ಮೊಟ್ಟ ಮೊದಲಿಗೆ ಎಸ್‌ಪನೊಲಾದಲ್ಲಿ ಪ್ರಯೋಗಾತ್ಮಕವಾಗಿ ಸ್ಪೇನ್ನರ ಇಂಡಿಯನ್ ಪಾಲಿಸಿಯನ್ನು ಅಳವಡಿಸಲಾಯಿತು. ಇಂಡಿಯನ್ನರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ನಿಕೊಲಸ್ ಒವೆಂಡೊನ ಆಡಳಿತದಲ್ಲಿ ಒಂದು ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಈತನಿಂದ ನೇಮಿಸಲ್ಪಟ್ಟವರು ಕಪ್ಪಕಾಣಿಕೆಗಳನ್ನು ರಾಜರಿಗೆ ಒದಗಿಸಬೇಕಾಗಿತ್ತು. ಕ್ರಮೇಣವಾಗಿ ಸ್ಪೇನ್‌ಗಳರಸರ ಗೌಪ್ಯವಾದ ಗುಲಾಮಗಿರಿಯಿಂದ ಎಸ್‌ಪೊನೊಲಾದಲ್ಲಿನ ಇಂಡಿಯನ್ ಜನಸಂಖ್ಯೆ ಕ್ಷೀಣಿಸಲು ಕಾರಣವಾಯಿತು. ಇದರ ವಿರುದ್ಧ ಮೊಟ್ಟಮೊದಲ ಪ್ರತಿಭಟನೆಯನ್ನು ಡೊಮಿಂಕನ್ ತಂಡ ಎಸ್‌ಪನೊಲಾನಲ್ಲಿ ೧೫೧೦ರಲ್ಲಿ ಶುರು ಮಾಡಿತು. ರಾಜ ಫರ್ಡಿನ್ಯಾಂಡ್ ಇದಕ್ಕೆ ಸ್ಪಂದಿಸಿ ಸ್ಪ್ಯಾನಿಷ್ -ಇಂಡಿಯನ್ ರ ಸಂಬಂಧ ಸಂಹಿತೆಯನ್ನು ಜಾರಿಗೆ ತಂದ. ಲಾ ಆಫ್ ಬರ್ಗೋಸ್ ಇಂಡಿಯನ್ ಕೂಲಿಕಾರರ ಉತ್ತಮಿಕೆಗೆ ಸಂಬಂಧಿಸಿದ ಕಾನೂನುಗಳನ್ನು ಒಳಗೊಂಡಿತ್ತು. ಆದರೆ ಇದು ಅನುಷ್ಠಾನಕ್ಕೆ ಬರಲಿಲ್ಲ. ಹೀಗಾಗಿ ಇಂಡಿಯನ್ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಅನೇಕ ಹೋರಾಟಗಳು ನಡೆದವು. ಕೊನೆಯ ರಾಜರ ಮಧ್ಯ ಪ್ರವೇಶಿಕೆಯಿಂದ ಇಂಡೀಸ್ ಹೊಸ (ಲಾ) ಕಾನೂನುಗಳು ೧೫೪೨ರಲ್ಲಿ ಘೋಷಣೆಯಾಯಿತು. ಇವು ಇಂಡಿಯನ್ ಗುಲಾಮಗಿರಿಗೆ ನಿಷೇಧ ಏರಿದವು. ಸೆರೆಮನೆಯಲ್ಲಿನ ಅವರ ಆರೋಪಗಳು ಸಾಬೀತಾಗದ್ದರಿಂದ ಇಂಡಿಯನ್ ಅಡಿಯಾಳುಗಳ ಬಿಡುಗಡೆಯಾಯಿತು. ಈ ಹೊಸ ಕಾನೂನುಗಳು ಪೆರುವಿನಲ್ಲಿ ಮತ್ತು ಹೊಸ ಸ್ಪೈನ್‌ನಲ್ಲಿ ಹೊಸ ಅಲೆಯನ್ನು ಎಬ್ಬಿಸಿ ಅನೇಕ ಸುಧಾರಣೆಗೆ ಕಾರಣವಾದವು.