ವಿಮುಕ್ತಿ ಘೋಷಣೆ

ಅಮೆರಿಕಾದ ಅಂತರ್‌ಯುದ್ಧದ ಸಮಯದಲ್ಲಿ ಅಧ್ಯಕ್ಷ ಅಬ್ರಹಾಂ ಲಿಂಕನ್  ೧೮೬೩ರ ಜನವರಿ ೧ರಂದು ಅಮೆರಿಕಾದ ಯಾವುದೇ ರಾಜ್ಯ ಅಥವಾ ಭಾಗದಲ್ಲಿರುವ ಗುಲಾಮರು ಮುಕ್ತರಾಗುತ್ತರೆಂದು ಘೋಷಿಸಿದರು. ಲಿಂಕನ್ನರ ಈ ಕ್ರಮವು ತೀವ್ರ ಸ್ವರೂಪದ ನೀತಿಯಾಗಿತ್ತು. ಇತಿಹಾಸಕಾರರು ಇದನ್ನು ರಾಜ್ಯದ ಅತ್ಯಂತ ಬೃಹತ್ ದಾಖಲೆಯೆಂದು ಪರಿಗಣಿಸಿದ್ದಾರೆ. ಅಂತರ್ಯುದ್ಧ ಪ್ರಾರಂಭವಾದ ಮೇಲೆ ಗುಲಾಮ ಪದ್ಧತಿಯ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತು. ಲಿಂಕನ್ ಕ್ರಮಗಳಿಂದ ಪ್ರೇರಣೆಗೊಂಡ ಗುಲಾಮರು ತಮ್ಮ ಸ್ವಾತಂತ್ರ್ಯಕ್ಕಾಗಿ ಮತ್ತು ಇತರ ಗುಲಾಮರನ್ನು ಮುಕ್ತಗೊಳಿಸುವುದಕ್ಕಾಗಿ ಹೋರಾಟ ಮಾಡಲಾರಂಭಿಸಿದರು.

ನಿರ್ಮೂಲನಾ ಸಂಘಟನೆಯವರು ಬಹು ದಿನಗಳಿಂದ ಲಿಂಕನ್ನರನ್ನು ಗುಲಾಮ ಪದ್ಧತಿಯನ್ನು ತೆಗೆದುಹಾಕಿ ಅವರನ್ನು ಸ್ವತಂತ್ರ ಪ್ರಜೆಗಳನ್ನಾಗಿ ಮಾಡುವಂತೆ ಒತ್ತಾಯಿಸುತ್ತಿದ್ದರು. ಇದಕ್ಕೆ ಲಿಂಕನ್ನರು ನಿಧಾನವಾಗಿ ಮತ್ತು ಜಾಗರೂಕತೆಯಿಂದ ಕ್ರಮ ವಹಿಸುತ್ತಿದ್ದರು. ೧೮೬೨ರ ಮಾರ್ಚ್ ೧೩ರಂದು ಸಂಯುಕ್ತ ಸರ್ಕಾರವು ತನ್ನ ಸೈನ್ಯಕ್ಕೆ ಬಂಧಿತ ಗುಲಾಮರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿತು. ಇದಲ್ಲದೇ ಗುಲಾಮರ ಮಾಲೀಕರಿಗೆ ಗುಲಾಮರ ಬಿಡುಗಡೆಯಿಂದ ಉಂಟಾಗುವ ನಷ್ಟವನ್ನು ಭರಿಸು ವುದಕ್ಕೂ ಸಹ ಮುಂದಾಯಿತು. ಕೊಲಂಬಿಯಾ ಜಿಲ್ಲೆಯಲ್ಲಿ ೧೮೬೨ರ ಏಪ್ರಿಲ್ ೧೬ರಂದು ಎಲ್ಲಾ ಗುಲಾಮರನ್ನು ಮುಕ್ತಗೊಳಿಸಲಾಯಿತು. ಕಾಂಗ್ರೆಸ್ ಇಡೀ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಗುಲಾಮಗಿರಿಯನ್ನು ನಿಷೇಧಿಸುವ ಕ್ರಮವನ್ನು ೧೮೬೨ರ ಜೂನ್ ೧೯ರಂದು ತೆಗೆದುಕೊಂಡಿತು. ಈ ಕ್ರಮದಿಂದಾಗಿ ಶ್ರೇಷ್ಠ ನ್ಯಾಯಾಲಯವು ಡ್ರೆಡ್ ಸ್ಟಾಟ್ ಕೇಸಿಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿಗೆ ಗುಲಾಮಗಿರಿಯನ್ನು ನಿಯಂತ್ರಿಸುವ ಹಕ್ಕಿಲ್ಲ ಎಂಬ ಆದೇಶವನ್ನು ಉಲ್ಲಂಘನೆ ಮಾಡಿದಂತಾಯಿತು.

೧೮೬೨ರ ಸೆಪ್ಟೆಂಬರ್ ೧೭ರ ಆಂಟಿಯೇಟಮ್ ಯುದ್ಧದಲ್ಲಿ ಜಯಗೊಂಡ ನಂತರ ಲಿಂಕನ್ ೧೮೬೩ರ ಜನವರಿ ೨೨ರಂದು ವಿಮುಕ್ತಿ ಘೋಷಣೆಯನ್ನು ಹೊರಡಿಸಿ ಸುಮಾರು ೩೧,೨೦,೦೦೦ ಗುಲಾಮರನ್ನು ಮುಕ್ತಿಗೊಳಿಸಿದರು. ಇದಲ್ಲದೇ ಇನ್ನು ೧೦೦ ದಿನಗಳೊಳ ಗಾಗಿ ಎಲ್ಲಾ ಗುಲಾಮರನ್ನು ಬಿಡುಗಡೆಗೊಳಿಸಲಾಗುವುದೆಂದು ಸಹ ಘೋಷಿಸಿದರು. ಸಂವಿಧಾನಕ್ಕೆ ೧೩ನೆಯ ತಿದ್ದುಪಡಿಯನ್ನು ಮಾಡುವುದರೊಂದಿಗೆ ೧೮೬೫ರಲ್ಲಿ ಗುಲಾಮಗಿರಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಈ ಕ್ರಮವು ಹಲವಾರು ಪ್ರಮುಖ ಪರಿಣಾಮಗಳನ್ನುಂಟುಮಾಡಿತು. ಅವುಗಳೆಂದರೆ:

೧. ಅಂದಿನಿಂದ ಒಕ್ಕೂಟದ ಮೇಲಿದ್ದ ಕರುಣೆಯನ್ನು ಗುಲಾಮಗಿರಿಯೊಂದಿಗೆ ಗುರುತಿಸ ಲಾಯಿತು.

೨. ಗುಲಾಮಗಿರಿ ವಿರೋಧಿ ಭಾವನೆಗಳು ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ಹೆಚ್ಚು ಬಲಿಷ್ಠಗೊಳ್ಳತೊಡಗಿದವು ಮತ್ತು

೩. ರಿಪಬ್ಲಿಕನ್ ಪಕ್ಷವು ತಾತ್ವಿಕವಾಗಿ ಒಗ್ಗಟ್ಟಾಗಿ ಸಂಘಟನೆಯಾಗತೊಡಗಿತು.

ಎರಡನೆಯ ಮಹಾಯುದ್ಧದ ಪೂರ್ವದಲ್ಲಿ ಪ್ರತ್ಯೇಕತಾ ನೀತಿಗೆ ಕರಿಯರ ವಿರೋ

ದಕ್ಷಿಣ ರಾಜ್ಯಗಳ ಅಧಿಕಾರ ಮತ್ತು ಹಿಂಸೆಗಳಿಂದಾಗಿ ಪ್ರತ್ಯೇಕತೆಗೆ ವಿರೋಧ ಮಾಡಲು ದುಸ್ತರವಾಗಿತ್ತು. ಆದಾಗ್ಯೂ ಕರಿಯರು ಮತಗಟ್ಟೆಗಳಲ್ಲಿ, ನ್ಯಾಯಾಲಯಗಳಲ್ಲಿ ಪ್ರತ್ಯೇಕತೆಯ ವಿರುದ್ಧ ಹೋರಾಟವನ್ನು ಆರಂಭಿಸಿದರು. ೧೯೦೯ರಲ್ಲಿ ‘ನ್ಯಾಷನಲ್ ಅಸೋಷಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಕಲರ್ಡ್ ಪೀಪಲ್’ ಎಂಬ ಸಂಘಟನೆಯು ಅಸ್ತಿತ್ವಕ್ಕೆ ಬಂದಿದ್ದು ಕರಿಯರಿಗೆ ವರದಾನವಾಗಿತ್ತು. ೧೮೮೩ರ ಶ್ರೇಷ್ಠ ನ್ಯಾಯಾಲಯವು ನಾಗರಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ನೀಡಿದ ತೀರ್ಪಿನ ವಿರುದ್ಧ ಕರಿಯರು ಸಾರ್ವಜನಿಕ ಸಭೆಗಳಲ್ಲಿ ಅದರ ಬಗ್ಗೆ ಸಾಕಷ್ಟು ಪ್ರಮಾಣದಲ್ಲಿ ಚರ್ಚಿಸಿ ವಿರೋಧಿಸಲಾರಂಭಿಸಿದರು. ಉದಾಹರಣೆಗೆ ಕರಿಯ ನಿರ್ಮೂಲನವಾದಿಗಳಾದ ಫೆಡರಿಕ್ ಡಗ್ಲಸ್ ವಾಷಿಂಗ್‌ಟನ್ ಡಿ.ಸಿ.ಯ ಲಿಂಕನ್ ಸಭಾಂಗಣದಲ್ಲಿ ಆ ತೀರ್ಪಿನ ವಿರುದ್ಧ ಸುದೀರ್ಘವಾದ ಭಾಷಣ ಮಾಡುವುದರ ಜೊತೆಗೆ ಅದನ್ನು ತೀವ್ರವಾಗಿ ಖಂಡಿಸಲಾಯಿತು. ಕರಿಯರು ಖಂಡನಾ ಸಭೆಗಳ ಜೊತೆಗೆ ಪ್ರತ್ಯೇಕತೆಯ ವಿರುದ್ಧ ಸ್ವಾತಂತ್ರ್ಯ ಮತ್ತು ಸಹೋದರತ್ವಕ್ಕಾಗಿ ಕಾನೂನು ಮತ್ತು ರಾಜಕೀಯ ಕ್ರಮಗಳನ್ನು ಕೈಗೊಂಡರು. ಇದರ ಫಲವಾಗಿ ೧೮೮೯ರಲ್ಲಿ ಸಹೋದರತ್ವವು ಪ್ರತ್ಯೇಕತಾವಾದವನ್ನು ೫೦೦ ಪುಟಗಳಿದ್ದ ಕಾನೂನಿನ ವಿಶ್ಲೇಷಣೆಯನ್ನು ಪ್ರಕಟಿಸಲು ಅನುಮತಿ ನೀಡಿತು. ಅದನ್ನು ಜಸ್ಟಿನ್ ಮತ್ತು ಜುರಿಸ್‌ಪ್ರುಡೆನ್ಸ್: ಆನ್ ಎನ್‌ಕ್ವೈರಿ ಕನ್ಸರ್ನಿಂಗ್ ದಿ ಕಾನ್‌ಸ್ಟಿಟ್ಯೂಶನಲ್ ಲಿಮಿಟೇಷನ್ ಆಫ್ ದಿ ತರ್ಟಿನ್ತ್, ಪೋರ್ಟೀನ್ತ್ ಮತ್ತು ಫಿಫ್ಟೀನ್ತ್ ಅಮೆಂಡ್‌ಮೆಂಟ್ಸ್ ಎಂದು ಪ್ರಸಿದ್ಧವಾಯಿತು.

ಕರಿಯರ ಪ್ರತ್ಯೇಕತಾ ನೀತಿಯ ವಿರೋಧಕ್ಕೆ ಮತ್ತೊಂದು ಉದಾಹರಣೆಯೆಂದರೆ ೧೮೯೬ರ ಪ್ಲೆಸ್ಸಿ ಮತ್ತು ಫರ್ಗುಸನ್ನರ ನಡುವಿನ ವ್ಯಾಜ್ಯ. ೧೮೯೧ರಲ್ಲಿ ನ್ಯೂ ಆರ್ಲಿನ್ಸ್ ನಲ್ಲಿ ಆಫ್ರಿಕಾ ಮೂಲದ ಮತ್ತು ಯುರೋಪಿನ ಜನಾಂಗದ ಒಂದು ಗುಂಪು ಮತ್ತು ವರ್ಣದ ವ್ಯಕ್ತಿಗಳು ಒಗ್ಗಟ್ಟಾಗಿ ಪ್ರತ್ಯೇಕತಾ ನೀತಿಯನ್ನು ಲೌಸಿಯಾನದ ರೈಲುಗಳಲ್ಲಿ ವಿರೋಧಿಸಿದರು. ಅವರು ಪೌರರ ಸಭೆಯನ್ನು ರಚಿಸಿ ರೈಲಿನಲ್ಲಿ ಅನುಸರಿಸುತ್ತಿದ್ದ ಪ್ರತ್ಯೇಕತಾ ನೀತಿಯನ್ನು ವಿರೋಧಿಸಲು ಮತ್ತು ಪರೀಕ್ಷಿಸಲು ಮುಂದಾ ದರು. ಅವರು ೩೦೦೦ ಡಾಲರ್‌ಗಳನ್ನು ವ್ಯಾಜ್ಯದ ವೆಚ್ಚಕ್ಕಾಗಿ ಸಂಗ್ರಹಿಸಿದ್ದರು. ಅಲ್ಟಿಯೋನ್ ಟೌರ್ಗಿ ಎಂಬ ಬಿಳಿಯ ನ್ಯಾಯವಾದಿ ಕರಿಯರ ಪರವಾಗಿ ಪುಕ್ಕಟೆಯಾಗಿ ವಾದಿಸಲು ಒಪ್ಪಿಕೊಂಡರು. ೧೮೯೨ರ ಜೂನ್‌ನಲ್ಲಿ ಬಿಳಿಯರಿಗೆ ಕಾದಿರಿಸಿದ್ದ ರೈಲು ಕಾರಿನಲ್ಲಿ ಹೋಮರ್ ಎ ಪ್ಲೆಸಿ ಎಂಬ ಕರಿಯನು ಟಿಕೇಟನ್ನು ಖರೀದಿಸಿ ಪ್ರಯಾಣಿಸಲು ಪ್ರಯತ್ನಿಸಿದ್ದನು. ತಕ್ಷಣ ಆ ರೈಲುಕಾರಿನ ನಿರ್ವಾಹಕನು ಬಿಳಿಯರಿಗೆ ಮೀಸಲಾಗಿದ್ದ ಕಾರಿನಲ್ಲಿ ಪ್ಲೆಸ್ಸಿಯು ಪ್ರಯಾಣಿಸುವುದನ್ನು ಪ್ರಶ್ನಿಸಿ ವಿರೋಧಿಸಿದನು. ಪ್ಲೆಸ್ಸಿಯು ಆ ಕಾರಿನಿಂದ ಇಳಿಯಲು ನಿರಾಕರಿಸಿದಾಗ ಅವನನ್ನು ಬಂಧಿಸಿ ಫರ್ಗುಸನ್ ಎಂಬ ನ್ಯಾಯಾವಾದಿಯ ಮುಂದೆ ವಿಚಾರಣೆಗಾಗಿ ಹಾಜರುಪಡಿಸಿದನು. ಪ್ಲೆಸ್ಸಿ ಅವನ ವಿರುದ್ಧ ಮತ್ತೆ ಯಾವುದೇ ವಿಚಾರಣೆ ಮಾಡದಂತೆ ಕ್ರಮಗಳನ್ನು ಕೈಗೊಂಡನು. ಇದರ ಫಲವಾಗಿ ಅವನ ಕೇಸು ಅಮೆರಿಕಾದ ಶ್ರೇಷ್ಠ ನ್ಯಾಯಾಲಯಕ್ಕೆ ಹೋಗಿ ಕರಿಯರ ವಿರುದ್ಧ ತೀರ್ಪು ಹೊರಬಂದಿತು.

೧೯೦೫ರಲ್ಲಿ ಹಾವರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಪ್ರಥಮ ಕರಿಯ ಡು ಬಾಯ್ಸ ಮುಂದಾಳತ್ವದಲ್ಲಿ ಹಲವಾರು ಕರಿಯರು ಕೆನಡಾದ ಓಂಟಾರಿ ಯೋದಲ್ಲಿರುವ ನೈಯಗಾರ ಜಲಪಾತದ ಬಳಿ ಸೇರಿ ಜನಾಂಗೀಯ ಅಸಮಾನತೆಯ ವಿರುದ್ಧ ಹೋರಾಡಲು ಯೋಜನೆ ರಚಿಸಿದರು. ೧೯೦೯ರ ಹೊತ್ತಿಗೆ ನಯಾಗಾರ ಚಳವಳಿ ಎಂದು ಆ ಗುಂಪಿಗೆ ಕರೆಯಲಾಗಿ ಕರಿಯರ ಅಭಿವೃದ್ದಿಗಾಗಿ ರಾಷ್ಟ್ರೀಯ ಸಂಘಗಳನ್ನು ರಚಿಸಿದರು. ಇದರ ಮುಖ್ಯ ಉದ್ದೇಶವು ಪ್ರತ್ಯೇಕತಾ ನೀತಿ ಮತ್ತು ಅಸಮಾನತೆಯನ್ನು ಹೋಗಲಾಡಿಸು ವುದಾಗಿತ್ತು. ಡು ಬಾಯ್ಸ ಜೊತೆಗಿದ್ದ ಇತರ ಪ್ರಮುಖರೆಂದರೆ ಬಿಳಿಯ ಉದಾರ ದಾನಿಗಳಾದ ಜೋಯಲ್ ಮತ್ತು ಆರ್ಥರ್ ಸ್ಪಿನ್‌ಗಾರ್ನ್, ಜೇನ್ ಆಡಮ್ಸ್, ಶಿಕ್ಷಣ ಸುಧಾರಕ ಜಾನ್ ದೇವೆ ಮತ್ತು ಓಸ್ವಾಲ್ಡ್ ಗ್ಯಾರಿಸನ್ ವಿಲ್ಲಾರ್ಡ್. ಕರಿಯರ ಪ್ರಮುಖರೆಂದರೆ ನಿರ್ಮೂಲನಾವಾದದ ವಿಲಿಯಂ ಲಾಯ್ಡ ಗ್ಯಾರಿಸನ್ನರ ಮೊಮ್ಮಗ ಇಡಾ ಬಿ.ವೆಲ್ಸ್. ಈ ಸಂಘಟನೆಯ ಪ್ರತ್ಯೇಕತಾ ಪದ್ಧತಿಯನ್ನು ನಿರ್ಮೂಲನೆ ಮಾಡಲು ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡುವುದರ ಮುಖಾಂತರ ಮಾಡಿತು. ಎರಡನೆಯ ಮಹಾಯುದ್ಧಕ್ಕೆ ಮುಂಚೆ ಕೆಲವು ಮಹತ್ವದ ತೀರ್ಪುಗಳು ಕರಿಯರ ಪರವಾಗಿ ಶ್ರೇಷ್ಠ ನ್ಯಾಯಾಲಯದಿಂದ ಬಂದವು. ೧೯೧೫ರ ಗಿನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ನಡುವಿನ ವ್ಯಾಜ್ಯದಲ್ಲಿ ಶ್ರೇಷ್ಠ ನ್ಯಾಯಾಲಯವು ಓಕ್ಲಹಾಮ ಸಂವಿಧಾನದ ಅಜ್ಜರ ವಾಕ್ಯಾಂಗವು ಸಂವಿಧಾನಾತ್ಮಕವಾದದ್ದು ಎಂದು ತೀರ್ಪು ನೀಡಿತು. ಇದರಿಂದಾಗಿ ಅಕ್ಷರಸ್ತ ಕರಿಯರು ಅವರ ಅಜ್ಜಂದಿರು ಮತ ಚಲಾಯಿಸುತ್ತಿದ್ದರೆ ಅವರು ಸಹ ಚುನಾವಣೆಗಳಲ್ಲಿ ಮತ ಚಲಾಯಿಸಬಹುದಾಗಿತ್ತು. ಇದರ ಜೊತೆಗೆ ಅನಕ್ಷರಸ್ಥ ಬಿಳಿಯರು ಮಾತ್ರ ಮತ ಹಾಕಬಹುದಾಗಿತ್ತು. ಆದರೆ ಅನಕ್ಷರಸ್ಥ ಕರಿಯರು ಮತ ಹಾಕುವಂತಿರಲಿಲ್ಲ. ಈ ಸಂಘಟನೆಯು ಇತರ ಪ್ರಾಂತ್ಯಗಳಲ್ಲಿಯೂ ಸಹ ಪ್ರತ್ಯೇಕತಾ ನೀತಿಯನ್ನು ವಿರೋಧಿಸ ಲಾರಂಭಿಸಿತು. ೧೯೧೭ರ ಬುಕನಾನಾ ಮತ್ತು ವಾರ್ಲೆ ವ್ಯಾಜ್ಯ ಮತ್ತು ೧೯೩೮ರ ಗೈನ್ಸ್ ಮತ್ತು ಕೆನಡಾದ ವ್ಯಾಜ್ಯಗಳಲ್ಲಿ ಕರಿಯರ ಪರವಾಗಿ ತೀರ್ಪುಗಳು ಬಂದಿದ್ದರಿಂದ ಕರಿಯರು ಮತ್ತು ಬಿಳಿಯರು ಒಟ್ಟಿಗೆ ನೆಲೆಸುವಂತೆ, ಶಾಲಾ ಕಾಲೇಜುಗಳಲ್ಲಿ ಒಟ್ಟಿಗೆ ಕಲಿಯಲು ಅವಕಾಶ ಮಾಡಿಕೊಟ್ಟಂತಾಯಿತು. ಇದರಿಂದಾಗಿ ೧೯೫೦ ಮತ್ತು ೧೯೬೦ರಲ್ಲಿ ಪ್ರತ್ಯೇಕತಾ ನೀತಿಯ ವಿರುದ್ಧ ಹೋರಾಡಲು ದಾರಿ ಮಾಡಿಕೊಟ್ಟಿತು.

ಅಬ್ರಹಾಂ ಲಿಂಕನ್ ಮತ್ತು ಗುಲಾಮಗಿರಿ ಸಮಸ್ಯೆ

ಅಬ್ರಹಾಂ ಲಿಂಕನ್ ಸಂಯುಕ್ತ ಸಂಸ್ಥಾನಗಳ ೧೬ನೆಯ ಅಧ್ಯಕ್ಷರಾಗಿ ೧೮೬೧ರಿಂದ ೧೮೬೫ರವರೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಆಡಳಿತ ನಡೆಸಿದ್ದರು. ಇವರು ಅಮೆರಿಕಾದ ಇತಿಹಾಸದಲ್ಲಿ ಪ್ರಮುಖ ನಾಯಕರಾಗಿದ್ದು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಲಿನಾಯ್ಸ ಶಾಸಕಾಂಗದಲ್ಲಿ ನಿರ್ಮೂಲನಾ ಸಂಘಗಳು ಗುಲಾಮಗಿರಿ ಯನ್ನು ಹತ್ತಿಕ್ಕಲು ಕ್ರಮ ಕೈಗೊಂಡಾಗ ಲಿಂಕನ್ನರು ತಮ್ಮ ವಿರೋಧವನ್ನು ೧೮೩೭ರಲ್ಲಿ ಪ್ರಥಮ ಬಾರಿಗೆ ವ್ಯಕ್ತಪಡಿಸಿದ್ದರು. ಲಿಂಕನ್ನರ ಪ್ರಕಾರ ಗುಲಾಮಗಿರಿಯು ಕೆಟ್ಟ ರಾಜಕೀಯ ಮತ್ತು ಅನ್ಯಾಯದ ನೆಲೆಯಲ್ಲಿ ಸ್ಥಾಪಿತವಾದದ್ದು. ಆದ್ದರಿಂದ ಅದನ್ನು ನಿರ್ಮೂಲನೆ ಮಾಡಲು ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ವಾದಿಸಿದ್ದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಗುಲಾಮಗಿರಿಯನ್ನು ಕೇವಲ ನಿರ್ಮೂಲನಾವಾದಿಗಳ ತತ್ವಗಳಿಂದ ಕೊನೆಗಳಿಸಲು ಸಾಧ್ಯವಿಲ್ಲವೆಂದು ಭಾವಿಸಿದ್ದರು.

ಲಿಂಕನ್ನರ ಆಡಳಿತಾವಧಿಯಲ್ಲಿ ಗುಲಾಮಗಿರಿಯನ್ನು ಬೇರೆ ಪ್ರಾಂತ್ಯಗಳಿಗೆ ವಿಸ್ತರಿಸಿದ್ದುದು ಮುಖ್ಯ ಸಮಸ್ಯೆಯಾಗಿತ್ತು. ವಾಷಿಂಗ್‌ಟನ್ ಡಿ.ಸಿ.ಯಲ್ಲಿ ಗುಲಾಮಗಿರಿ ಯನ್ನು ತೊಡೆದುಹಾಕಲು ಕೆಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಅವುಗಳಲ್ಲಿ ಪ್ರಮುಖವಾದದ್ದೆಂದರೆ ೧೮೫೦ರ ಜನವರಿ ೧ರ ನಂತರ ಗುಲಾಮಗಿರಿಗೆ ಹುಟ್ಟಿದಂತಹ ಮಕ್ಕಳನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುವುದಾಗಿತ್ತು. ಅಂತಹ ಮಕ್ಕಳನ್ನು ವ್ಯಾಪಾರ ವಹಿವಾಟು, ಕರಕುಶಲಗಾರಿಕೆಯ ಶಾಲೆಗಳಲ್ಲಿ ತರಬೇತಿ ನೀಡುವುದು ಮತ್ತು ಗುಲಾಮರ ಮಾಲೀಕರಿಗೆ ಈ ಕ್ರಮಗಳಿಂದ ಉಂಟಾಗುವ ನಷ್ಟವನ್ನು ಭರಿಸಿಕೊಡುವುದು ಇತ್ಯಾದಿ.

ಗುಲಾಮಗಿರಿಯ ವಿರೋಧಿ ನಾಯಕರಾಗಿ ಲಿಂಕನ್

೧೮೫೪ರಲ್ಲಿ ಕಾಂಗ್ರೆಸ್ ಕನ್ಸಾಸ್ ನೆಬ್ರಾಸ್ಕ ಕಾಯಿದೆಯನ್ನು ಜಾರಿಗೊಳಿಸುವುದರೊಂದಿಗೆ ಲಿಂಕನ್ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಳ್ಳಲಾರಂಭಿಸಿದರು. ಈ ಕಾಯಿದೆಯ ಪ್ರಕಾರ ಕನ್ಸಾಸ್ ಮತ್ತು ನೆಬ್ರಾಸ್ಕ ಪ್ರಾಂತ್ಯಗಳು ಗುಲಾಮಗಿರಿ ಸಹಿತ ಮತ್ತು ಗುಲಾಮಗಿರಿರಹಿತ ಒಕ್ಕೂಟವನ್ನು ಸೇರಬಹುದಾಗಿತ್ತು. ಈ ಕಾಯಿದೆಯನ್ನು ರಚಿಸಿದ ಸ್ಟೀಫನ್ ಎ.ಡಗ್ಲಸ್ ಇಲಿನಾಯ್ಸದ ಡೆಮೋಕ್ರಾಟಿಕ್ ಪಕ್ಷದ ಮುಂಚೂಣಿ ನಾಯಕರಾಗಿ ಇದನ್ನು ಜನಪ್ರಿಯ ಸಾರ್ವಭೌಮತ್ವವೆಂದು ಪರಿಗಣಿಸಿದ್ದರು. ಏಕೆಂದರೆ ಗುಲಾಮಗಿರಿಯ ಪದ್ಧತಿಯನ್ನು ಹೊಂದುವ ಅಥವಾ ಬಿಡುವ ಅಧಿಕಾರವನ್ನು ಅಲ್ಲಿಯ ಜನಗಳಿಗೆ ನೀಡಲಾಗಿತ್ತು. ಇದರಿಂದಾಗಿ ೧೮೨೦ರ ಮಿಸ್ಸೌರಿ ರಾಜಿಯನ್ನು ಈ ಕಾಯಿದೆಯು ರದ್ದುಪಡಿಸಿತು.

ಕನ್ಸಾಸ್ ಮತ್ತು ನೆಬ್ರಾಸ್ಕ ಕಾಯಿದೆಯ ಜಾರಿಯೊಂದಿಗೆ ಅಮೆರಿಕಾದ ರಾಜಕೀಯದಲ್ಲಿ ಓರ್ವ ಹೊಸ ಲಿಂಕನ್ ಪಾದಾರ್ಪಣೆ ಮಾಡಿದರು. ಅವರಿಗೆ ರಾಜಕೀಯಕ್ಕಿಂತ ಮತ್ತು ಅಧಿಕಾರಕ್ಕಿಂತ ಗುಲಾಮಗಿರಿ ಸಮಸ್ಯೆಯು ಪ್ರಮುಖವಾಗಿತ್ತು. ಅದನ್ನು ಸಂಯುಕ್ತ ಸಂಸ್ಥಾನಗಳಿಂದ ಹೊಡೆದೋಡಿಸುವುದೇ ಅವರ ಪ್ರಮುಖ ಗುರಿಯಾಗಿತ್ತು. ಇದಕ್ಕಾಗಿ ೧೮೫೪ರಲ್ಲಿ ಈ ಕಾಯಿದೆಯ ವಿರುದ್ಧವೂ ಮತ್ತು ಗುಲಾಮಗಿರಿ ವಿರೋಧಿಯಾದ ವಿಗ್ ಪಕ್ಷದ ರಿಚರ್ಡ್ ಏಟ್ಸ್ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡು ಸ್ಟೀಫನ್‌ಡಗ್ಲಸ್‌ರೊಡನೆ ಹೋರಾಡಬೇಕಾಯಿತು. ಡಗ್ಲಸ್ ಗುಲಾಮಗಿರಿ ವ್ಯವಸ್ಥೆಯ ಪರವಾಗಿ ವಾದಿಸಿದರೆ ಲಿಂಕನ್ ಅದರ ವಿರೋಧಿಯಾಗಿ ವಾದಿಸಿದ್ದರು. ಡಗ್ಲಸ್ ಗುಲಾಮಗಿರಿಯನ್ನು ರಾಜಕೀಯ ವಿಷಯವಾಗಿ ಮಾತ್ರ ವಿಶ್ಲೇಷಿಸಿದರೆ ಲಿಂಕನ್ನರು ಅದನ್ನು ರಾಜಕೀಯ ಮತ್ತು ನೈತಿಕ ವಿಷಯಗಳಾಗಿ ವಿಶ್ಲೇಷಿಸಿದ್ದರು. ಲಿಂಕನ್ನರಿಗೆ ಗುಲಾಮರನ್ನು ಕುದುರೆಗಳಂತೆ  ಮತ್ತಿತರ ವಸ್ತುಗಳಂತೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಒಯ್ಯುವುದು ಅಮಾನವೀಯ ವೆನಿಸಿತ್ತು. ಅಮೆರಿಕಾ ಪ್ರಜಾಪ್ರಭುತ್ವಕ್ಕೆ ಗುಲಾಮಗಿರಿಯು ಸೂಕ್ತವಾದುದಲ್ಲ. ದೇವರು ಎಲ್ಲರನ್ನೂ ಸಮಾನವಾಗಿ ಸೃಷ್ಟಿಸಿರುವಾಗ ಸಮಾನವಾಗಿ ಇರಬೇಕಾದುದು ಪ್ರಕೃತಿ ನಿಯಮ. ಇದಕ್ಕೆ ವಿರುದ್ಧವಾಗಿರುವುದು ಅಮಾನುಷವಾದದ್ದು ಎಂದು ಲಿಂಕನ್ನರು ಪರಿಗಣಿಸಿದ್ದರು.

ಲಿಂಕನ್ನರು ನಿರ್ಮೂಲನಾವಾದದ ತತ್ವಗಳನ್ನು ತೊರೆಯುವುದಕ್ಕೆ ಪ್ರಯತ್ನಿಸುತ್ತಿದ್ದರು. ಏಕೆಂದರೆ ಅವರ ಪ್ರಕಾರ ಗುಲಾಮಗಿರಿಯು ರಾಷ್ಟ್ರೀಯ ಸಮಸ್ಯೆಯಾಗಿತ್ತೇ ಹೊರತು ಕೇವಲ ದಕ್ಷಿಣದ ರಾಜ್ಯಗಳದ್ದಲ್ಲ. ಅವರಿಗೆ ಒಂದು ಭಾಗದಲ್ಲಿ ಗುಲಾಮಗಿರಿ ಇನ್ನೊಂದು ಭಾಗದಲ್ಲಿ ಮುಕ್ತ ವಾತಾವರಣ ಗುಲಾಮಗಿರಿ ಇಲ್ಲದಿರುವುದು ಇಷ್ಟವಿರಲಿಲ್ಲ. ಅಂತಹ ರಾಜ್ಯಗಳನ್ನು ಆಡಳಿತ ಮಾಡುವುದು ಸರಿಯಲ್ಲವೆಂದು ಭಾವಿಸಿದ್ದರು. ವಿಗ್ ಪಕ್ಷವು ದಿನೇ ದಿನೇ ರಾಜಕೀಯವಾಗಿ ಕ್ಷೀಣಿಸತೊಡಗಿದಾಗ ಲಿಂಕನ್ನರು ಡಗ್ಲಸ್ ವಿರೋಧಿ ಬಣವನ್ನು ಸೇರಿ ಅವರ ಪರವಾಗಿ ಪ್ರಚಾರ ಕೈಗೊಂಡರು. ೧೮೫೬ ಮತ್ತು ೧೮೫೭ರಲ್ಲಿ ಗುಲಾಮಗಿರಿ ವಿಷಯದಲ್ಲಿ ಚಳವಳಿಗಳು ತೀವ್ರಗೊಂಡ ರಿಪಬ್ಲಿಕನ್ ಪಕ್ಷದವರಾಗಿ ಸಾರ್ವಜನಿಕವಾಗಿ ಗುರುತಿಸಿಕೊಂಡು ಗುಲಾಮಗಿರಿ ವಿರೋಧ ನೀತಿಯನ್ನು ಪುಷ್ಟೀಕರಿಸಿದರು. ಕನ್ಸಾಸ್ ಮತ್ತು ನೆಬ್ರಾಸ್ಕ ಕಾಯಿದೆಯು ಗುಲಾಮಗಿರಿಯನ್ನು ಮುಂದುವರಿಸುವುದಕ್ಕೆ ಅವಕಾಶ ನೀಡದಿದ್ದರಿಂದ ಅಮೆರಿಕಾದಲ್ಲಿ ಅಂತರ್ಯುದ್ಧಕ್ಕೆ ದಾರಿ ಮಾಡಿಕೊಟ್ಟಿತು. ೧೮೫೮ರಲ್ಲಿ ಡಗ್ಲಸ್ ಮರು ಚುನಾವಣೆಗೆ ನಿಂತಾಗ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಲಿಂಕನ್‌ರನ್ನು ನೇಮಿಸಲಾಯಿತು. ಸ್ಟ್ರಿಂಗ್ ಫೀಲ್ಡ್‌ನ ಸಮಾವೇಶದ ಸಭೆಯಲ್ಲಿ ಗುಲಾಮಗಿರಿ ವಿರೋಧವಾಗಿ ಲಿಂಕನ್‌ರು ಈ ರೀತಿ ಹೇಳಿದ್ದರು. ‘‘ಬಿರುಕು ಬಿಟ್ಟ ಮನೆಯಲ್ಲಿ ನಿಲ್ಲುವುದಕ್ಕಾಗುವುದಿಲ್ಲ. ಈ ಸರ್ಕಾರವು ಅರ್ಧ ಗುಲಾಮಗಿರಿಯ ರಾಜ್ಯಗಳು ಮತ್ತು ಅರ್ಧ ಗುಲಾಮಗಿರಿಯಿಂದ ಮುಕ್ತಗೊಂಡ ರಾಜ್ಯಗಳನ್ನು ಹೆಚ್ಚು ಕಾಲ ಉಳಿಸುವುದಕ್ಕಾಗುವುದಿಲ್ಲ. ಇದರಿಂದಾಗಿ ಒಕ್ಕೂಟವನ್ನು ಒಡೆಯುವುದನ್ನು ನಾನು ಬಯಸುವುದಿಲ್ಲ. ಅದೇ ರೀತಿ ಮನೆಯು ಬೀಳುವುದು ಬೇಡ. ಅದು ಒಡೆಯದಂತೆ ಆಗಬೇಕು. ಎಲ್ಲವೂ ಒಂದಾಗಬೇಕು ಅಥವಾ ಎಲ್ಲವೂ ಬೇರೆಯಾಗಬೇಕು’’.

ಲಿಂಕನ್ ಮತ್ತು ಡಗ್ಲಸ್ ಚರ್ಚೆ

ಗುಲಾಮಗಿರಿ ವಿಷಯದಲ್ಲಿ ಲಿಂಕನ್ ಮತ್ತು ಸ್ಟೀಫನ್ ಡಗ್ಲಸ್ ತೀವ್ರ ತರವಾದ ಚರ್ಚೆಗಳು ನಡೆದವು. ಲಿಂಕನ್ನರ ಗುಲಾಮಗಿರಿ ವ್ಯವಸ್ಥೆಯ ಮೇಲೆ ದೇಶ ವಿಭಜನೆಯ ಮಾತುಗಳನ್ನು ಡಗ್ಲಸ್ ಕಟುವಾಗಿ ಟೀಕಿಸಿದರು. ಇದಕ್ಕೆ ಉತ್ತರವಾಗಿ ಲಿಂಕನ್ನರು ಸ್ವಾತಂತ್ರ್ಯ ಘೋಷಣೆಯ ಸಂದರ್ಭವನ್ನು ನೆನಪಿಸುತ್ತಾ ನಾವೆಲ್ಲಾ ಜನಾಂಗ, ಕಪ್ಪು ಮತ್ತು ಬಿಳಿಯರು ನೀಚರು ಮತ್ತು ಶ್ರೇಷ್ಠರು ಎಂಬುದನ್ನು ಮರೆತು ಒಂದೇ ಮನುಕುಲದ ಆಧಾರದ ಮೇಲೆ ದೇಶವನ್ನು ಕಟ್ಟಬೇಕೆಂದು ಕರೆ ನೀಡಿದರು. ಅವರೀರ್ವರು ಒಬ್ಬರನ್ನೊಬ್ಬರು ಗೌರವಿಸುತ್ತಿದ್ದರು. ಜೊತೆಗೆ ಅಷ್ಟೇ ಕಟುವಾಗಿ ಗುಲಾಮಗಿರಿಯ ಸಂಸ್ಥೆ ಮತ್ತು ಅದರ ನೈತಿಕತೆಯ ಬಗ್ಗೆ ವಾದಿಸುತ್ತಿದ್ದರು. ಗುಲಾಮಗಿರಿಯ ಪರವಾಗಿ ಮತ್ತು ವಿರೋಧವಾಗಿ ನಡೆಯುತ್ತಿದ್ದ ಅವರ ವಾದಗಳನ್ನು ಜನ ಕಿಕ್ಕಿರಿದು ಸುಡುವ ಬಿಸಿಲಿನಲ್ಲಿ, ಸುರಿವ ಮಳೆಯಲ್ಲಿ ನೆರೆದು ಆಲಿಸುತ್ತಿದ್ದರು. ಅವರೀರ್ವರ ವಾದಗಳನ್ನು ವೃತ್ತಪತ್ರಿಕೆಗಳು ದೇಶದಾದ್ಯಂತ ಪ್ರಸಾರ ಮಾಡುತ್ತಿದ್ದವು. ಎರಡನೆಯ ಚರ್ಚೆಯಲ್ಲಿ ಲಿಂಕನ್‌ರು ಡಗ್ಲಸ್‌ರನ್ನು ರಾಜ್ಯದ ಸಂವಿಧಾನ ವನ್ನು ರಚಿಸುವ ಮೊದಲೇ ಗುಲಾಮಗಿರಿಯನ್ನು ಬಿಡುವುದು ಸಾಧ್ಯವೇ ಎಂದು ಪ್ರಶ್ನಿಸಿದಾಗ ಡಗ್ಲಸ್ ಅದಕ್ಕೆ ಉತ್ತರವಾಗಿ ರಾಜ್ಯವನ್ನು ರಚಿಸುವುದಕ್ಕೆ ಮುಂಚೆ ಗುಲಾಮಗಿರಿಯನ್ನು ಬಿಡಬಹುದೆಂದು ಉತ್ತರಿಸಿದರು. ಇದರಿಂದಾಗಿ ದಕ್ಷಿಣದ ಡೆಮೋಕ್ರಾಟಿಕ್ ಪಕ್ಷದವರು ಬೇಸರಗೊಂಡಿದ್ದಲ್ಲದೇ ಡಗ್ಲಸ್ ತಮ್ಮ ಅನುಯಾಯಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕಳೆದುಕೊಳ್ಳಬೇಕಾಯಿತು. ಮೂರನೆಯ ಚರ್ಚೆಯು ಆಲ್ಟನ್ನಿನಲ್ಲಿ ನಡೆದಾಗ ರಿಪಬ್ಲಿಕನ್ ಪಕ್ಷವು ಗುಲಾಮಗಿರಿಯ ಪದ್ಧತಿಯನ್ನು ಕೆಟ್ಟ, ತಪ್ಪಿನ, ಅನೈತಿಕ, ಅಮಾನುಷವಾದದ್ದೆಂದು ಭಾವಿಸಿದೆ. ಆದರೆ ಡೆಮೋಕ್ರಾಟಿಕ್ ಪಕ್ಷವು ಅದು ಸರಿಯಾದ ಹಾಗೂ ನೈತಿಕ ಸಂಸ್ಥೆಯೆಂದು ತಿಳಿದಿದೆಯೆಂದು ವಾದಿಸಿದರು. ಇಂತಹ ವಾದಗಳಿಂದಾಗಿ ಲಿಂಕನ್‌ರು ರಾಷ್ಟ್ರದಾದ್ಯಂತ ಪರಿಚಿತ ಮುಖಂಡರಾಗಿ ಹೊರಹೊಮ್ಮಿದರು.

ಗುಲಾಮಗಿರಿ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಅಥವಾ ಅಳಿಸುವ ವಿಷಯದಲ್ಲಿ ಸಂಯುಕ್ತ ಸಂಸ್ಥಾನಗಳ ಮಧ್ಯೆ ಆಂತರಿಕ ಯುದ್ಧ ಪ್ರಾರಂಭವಾದಾಗ ಅಧ್ಯಕ್ಷ ಲಿಂಕನ್‌ರು ಅಮೆರಿಕಾದ ಯಾವುದೇ ಅಧ್ಯಕ್ಷ ಅನುಭವಿಸದ ಸಂದರ್ಭಗಳನ್ನು ಎದುರಿಸಬೇಕಾಯಿತು. ರಾಷ್ಟ್ರ ವಿಭಜನೆಯಾಗುವ ಹೆದರಿಕೆಯ ವಾತಾವರಣ ಸೃಷ್ಟಿಯಾದಾಗ ಯುದ್ಧವನ್ನು ಮುಂದುವರಿಸುವುದು ಹಾಗೂ ರಾಷ್ಟ್ರದ ಐಕ್ಯತೆಯನ್ನು ಕಾಪಾಡುವುದು ಆದ್ಯ ಕರ್ತವ್ಯ ವಾಗಿತ್ತು. ಇದಲ್ಲದೇ ಸಂಯುಕ್ತ ಸಂಸ್ಥಾನದ ಸಂವಿಧಾನವನ್ನು ಕಾಪಾಡುವುದು, ಸಂರಕ್ಷಿಸುವುದು ಮತ್ತು ಪ್ರೋ ತುರ್ತಾದ ಕೆಲಸವಾಗಿತ್ತು. ಲಿಂಕನ್‌ರೇ ಸೈನ್ಯದ ಸರ್ವಾಧಿಕಾರವನ್ನು ವಹಿಸಿಕೊಂಡು ರಾಷ್ಟ್ರದ ಒಗ್ಗಟ್ಟನ್ನು ಕಾಪಾಡುವುದಕ್ಕೆ ಪಣ ತೊಟ್ಟರು. ಗುಲಾಮಗಿರಿಯ ವಿರುದ್ಧ ಸಾರಿದ್ದ ಧರ್ಮಯುದ್ಧವು ಆನುಷಂಗಿಕ ವಿಷಯವಾಗಿ ಮಾರ್ಪಟ್ಟಿತು. ಲಿಂಕನ್‌ರು ವೃತ್ತಪತ್ರಿಕೆಯ ಸಂಪಾದಕರೊಬ್ಬರಿಗೆ ನಾನೇನೇ ಗುಲಾಮಗಿರಿಗೆ ಮಾಡಿದರೂ ಅದು ಒಕ್ಕೂಟವನ್ನು ಕಾಪಾಡುವುದಕ್ಕಾಗಿಯೇ ಹೊರತು ಅದನ್ನು ಒಡೆಯುವುದಕ್ಕಲ್ಲ ಎಂದು ತಿಳಿಸಿದ್ದರು.

ಯುದ್ಧದ ಆರಂಭದಲ್ಲಿ ರಿಪಬ್ಲಿಕನ್ ಪಕ್ಷದ ತೀವ್ರಗಾಮಿಗಳು ತಮ್ಮನ್ನು ಜಾಗೋಬಿನ್ನರೆಂದು ಗುರುತಿಸಿಕೊಂಡು ಲಿಂಕನ್ನರ ನೀತಿ ನಿಯಮಗಳನ್ನು ವಿರೋಧಿಸ ಲಾರಂಭಿಸಿದರು. ಜಾಕೋಬಿನ್ನರು ಗುಲಾಮರನ್ನು ಮುಕ್ತರನ್ನಾಗಿ ಮಾಡುವುದು ಹಾಗೂ ದಕ್ಷಿಣದ ರಾಜಕೀಯ ಮುಖಂಡರನ್ನು ಶಿಕ್ಷಿಸುವಂತೆ ಒತ್ತಡ ಹೇರುತ್ತಿದ್ದರು. ಅದರಲ್ಲಿ ಕೆಲವರು ಗುಲಾಮಗಿರಿಯು ಅನೈತಿಕ ಸಂಸ್ಥೆಯಾಗಿದ್ದು, ಅದನ್ನು ಬೆಳೆಸುತ್ತಿರುವ ದಕ್ಷಿಣದ ರಾಜ್ಯಗಳನ್ನು ನಾಶ ಮಾಡಬೇಕೆಂದು ಒತ್ತಾಯ ಹೇರಲಾರಂಭಿಸಿದರು. ಇನ್ನೂ ಕೆಲವರು ದಕ್ಷಿಣದ ರಾಜ್ಯಗಳಲ್ಲಿ ರಿಪಬ್ಲಿಕನ್ ಪಕ್ಷದ ಪ್ರಭಾವವನ್ನು ಬೀರಿ, ಅದರ ಮೂಲಕ ಕರಿಯರ ಮತಗಳನ್ನು ಅವರ ಕಡೆಗೆ ಸೆಳೆಯುವಂತೆ ಮಾಡುವುದಕ್ಕೆ ಸಲಹೆ ನೀಡಿದ್ದರು. ಇವರೆಲ್ಲರ ಒತ್ತಡಗಳ ಪರಿಣಾಮವಾಗಿ ಲಿಂಕನ್ನರು ೧೮೬೨ರ ಏಪ್ರಿಲ್ ೧೬ರಂದು ಕಾನೂನಿನ ಮಸೂದೆಗೆ ವಾಷಿಂಗ್‌ಟನ್ ಡಿ.ಸಿ.ಯಲ್ಲಿ ಸಹಿ ಹಾಕಿ ಗುಲಾಮಗಿರಿಯನ್ನು ತೆಗೆದುಹಾಕುವಂತೆ ಮಾಡಲಾಯಿತು. ೧೮೬೨ರ ಸೆಪ್ಟೆಂಬರ್ ೨೨ರಂದು ಮುಕ್ತ ಪ್ರಕಟನೆಯ ಮೂಲಕ ದಂಗೆಯೆದ್ದ ರಾಜ್ಯಗಳಲ್ಲಿರುವ ಗುಲಾಮರನ್ನು  ಮುಕ್ತಗೊಳಿಸಿರು ವುದಾಗಿ ತಿಳಿಸಲಾಯಿತು. ಇದೇ ವಿಷಯಕ್ಕಾಗಿ ದಕ್ಷಿಣದ ರಾಜ್ಯಗಳ ಅನುಯಾಯಿ ಜಾನ್ ವಿಲ್ಕ್ಸ್ ಬೂಲ್ ಎಂಬುವವನಿಂದ ಲಿಂಕನ್‌ರು ಕೊಲ್ಲಲ್ಪಟ್ಟರು.

ಎರಡನೆಯ ಮಹಾಯುದ್ಧದ ಕಾಲದಲ್ಲಿ ಮತ್ತು ನಂತರದ ಕಾಲದಲ್ಲಿ ಪ್ರತ್ಯೇಕತಾ ನೀತಿಯ ವಿರುದ್ಧ ಪ್ರತಿರೋಧಗಳು ಹೆಚ್ಚಾಗುವುದರ ಜೊತೆಗೆ ಹೆಚ್ಚು ಯಶಸ್ವಿಯಾದವು. ಇದಕ್ಕೆ ಪ್ರಮುಖ ಕಾರಣವೆಂದರೆ ಕರಿಯರು ಹೆಚ್ಚು ಪ್ರಮಾಣದಲ್ಲಿ ವಲಸೆ ಹೋಗುವುದು, ಅಮೆರಿಕಾದಲ್ಲಿ ಬದಲಾದ ರಾಜಕೀಯ ಸ್ವರೂಪ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಆದ ಬದಲಾವಣೆಗಳು.