೧೯೯೦ರ ದಶಕದ ಅಮೆರಿಕದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳು

೧೯೮೦ರ ದಶಕದಲ್ಲಿ ರಿಪಬ್ಲಿಕನ್ ಪಕ್ಷದ ರೋನಾಲ್ಡ್ ರೇಗನ್ ಹಾಗೂ ಜಾರ್ಜ್ ಬುಷ್ ಸೀನಿಯರ್ ಅವರ ನೇತೃತ್ವದಲ್ಲಿ ಅಮೆರಿಕಾ ಆರ್ಥಿಕವಾಗಿ ಸ್ಥಿರತೆಯನ್ನು ಸಾಧಿಸಿತು. ಆದರೆ ಮೊದಲಿನಿಂದಲೂ ಸಾಂಪ್ರದಾಯಿಕ ತತ್ವಗಳಲ್ಲಿ ನಂಬಿಕೆ ಹೊಂದಿದ್ದ ರಿಪಬ್ಲಿಕನ್ ಪಕ್ಷವು ತಾನು ಅನುಸರಿಸಿಕೊಂಡು ಬಂದ ರೀತಿ ರಿವಾಜುಗಳಿಗೆ ತೆರೆ ಎಳೆಯಲು ಪ್ರಾರಂಭಿಸಿತು. ಮೊದಲ ಪ್ರಯೋಗವಾಗಿ ಮದುವೆ ಪೂರ್ವದ ಲೈಂಗಿಕ ಸಂಬಂಧಗಳಿಗೆ ಬೆಂಬಲ ನೀಡಿತ್ತಲ್ಲದೆ ಇಂಥ ಸಂಬಂಧಗಳಿಂದ ಹುಟ್ಟಬಹುದಾದ ಮಕ್ಕಳನ್ನು ತಡೆಯಲು ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡಿದ್ದು, ಅಮೆರಿಕಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಅಲ್ಲದೇ ಸಾರ್ವಜನಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಹಾಡಬೇಕಾಗಿದ್ದ ಪ್ರಾರ್ಥನೆಯ ಆದೇಶವನ್ನು ರದ್ದುಪಡಿಸಲಾಯಿತು. ಆದರೆ ಇದರ ಪರಿಣಾಮದಿಂದ ಸಾಂಪ್ರದಾಯಿಕ ತತ್ವಗಳಲ್ಲಿ ನಂಬಿಕೆ ಇಟ್ಟಿದ್ದ ಇವ್ಯಾಂಜೆಲಿಕಲ್ ಕ್ರಿಶ್ಚಿಯನ್‌ರು ರಿಪಬ್ಲಿಕನ್‌ರ ಆಡಳಿತವನ್ನು ವಿರೋಧಿಸಲಾ ರಂಭಿಸಿದರು. ಧರ್ಮದ ಆಧಾರದ ಮೇಲೆ ಸಮೂಹ ಕಟ್ಟಿಕೊಂಡು ತಮ್ಮ ನೀತಿಗಳನ್ನು ಬೆಂಬಲಿಸುವ ರಾಜಕಾರಣಿಗಳಿಗೆ ಮಾತ್ರ ಮತ ನೀಡುವ ಉದ್ದೇಶವನ್ನು ಅವರು  ಪ್ರಚಾರಪಡಿಸಿದರು. ಅಲ್ಲದೇ ಪ್ರಾರ್ಥನೆಯನ್ನು ಸಮ್ಮತಿಸುವ ಪ್ರತಿನಿಧಿಗಳಿಗೆ ಮಾತ್ರ ಬೆಂಬಲಿಸುವ ದೃಢ ನಿರ್ಧಾರ ಕೈಗೊಳ್ಳಲಾಯಿತು. ಮೊದಮೊದಲು ಇಂಥ ಸಂಘಟನೆಗಳನ್ನು ಅವುಗಳ ಪ್ರಚುರಪಡಿಸುತ್ತಿದ್ದ ಕಾರ್ಯಗಳನ್ನು ಅನಾದರದಿಂದ ಬುಷ್ ಆಡಳಿತ ಕಂಡಿತು. ಆದರೆ ಅನಂತರದ ದಿನಗಳಲ್ಲಿ ಅವು ಹೆಚ್ಚಿನ ಮಹತ್ವ ಪಡೆದು ಅಮೆರಿಕಾ ಆಡಳಿತದ ಮೇಲೆ ದುಷ್ಪರಿಣಾಮ ಬೀರಲಾರಂಭಿಸಿದವು. ಹೀಗಾಗಿ ನಂತರ ಬಂದ ಕ್ಲಿಂಟನ್ ಆಡಳಿತಕ್ಕೆ ಇವ್ಯಾಂಜಿಲಿಕಲ್ ಸಂಘಟನೆಯ ಬೇಡಿಕೆಗಳು ಬಹಳ ದೊಡ್ಡ ಮಟ್ಟದ ಸಮಸ್ಯೆಯಾಗಿ ಕಾಡಿದವು.

೧೯೯೦ಈ ದಶಕದ ಅಮೆರಿಕಾದಲ್ಲಿನ ಆಡಳಿತಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ಪರಿಣಾಮಕಾರಿ ಬದಲಾವಣೆಗಳನ್ನು ಅಮೆರಿಕಾದ ಮಹಾಸಮಾಜದಲ್ಲಿ ತರುವಲ್ಲಿ ಯಶಸ್ವಿಯಾದವು. ಪ್ರಗತಿಪರ ಆಡಳಿತ ಧೋರಣೆಗಳನ್ನು ಇಟ್ಟುಕೊಂಡಿದ್ದ ಡೆಮೊಕ್ರಾಟಿಕ್ ಪಕ್ಷದ ಬಿಲ್ ಕ್ಲಿಂಟನ್ ಅಮೆರಿಕಾದ ಇತಿಹಾಸದಲ್ಲಿ ಮೊಟ್ಟಮೊದಲಿಗೆ ಎಂಬಂತೆ ಮೆಡಲಿನ್ ಆಲ್‌ಬ್ರೈಟ್ ಎಂಬ ಮಹಿಳೆಯನ್ನು ಸಂಪುಟ ದರ್ಜೆಯ ಮುಖ್ಯ ಸಚಿವೆಯನ್ನಾಗಿ ನೇಮಕ ಮಾಡಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ. ೧೯೯೦ರ ಹೊತ್ತಿಗೆ ಅಮೆರಿಕಾದಲ್ಲಿ ತೀವ್ರತರವಾದ ಆರ್ಥಿಕ ಬದಲಾವಣೆಗಳಾದವು. ಹಣದುಬ್ಬರ ದರ ಕಡಿಮೆಯಾಯಿತು. ಉದ್ಯೋಗಾವಕಾಶಗಳು ಮಿಲಿಯನ್ ಸಂಖ್ಯೆಯಲ್ಲಿ ಹೆಚ್ಚಾದವು. ಬಜೆಟ್‌ನಲ್ಲಿ ತಲೆದೋರುತ್ತಿದ್ದ ಭಾರಿ ಪ್ರಮಾಣದ ಕೊರತೆ ನಿವಾರಣೆಯಾಯಿತು. ಕಾರ್ಖಾನೆಗಳು ಹೆಚ್ಚಿನ ಲಾಭವನ್ನು ಹರಿಸಿದವು. ಅಮೆರಿಕಾದ ಇಚ್ಛಾಶಕ್ತಿಯಿಂದಲೇ ಹುಟ್ಟಿಕೊಂಡಿದ್ದ ಜಾಗತೀಕರಣ ಪ್ರಭಾವವು ಅಮೆರಿಕಾದ ಆರ್ಥಿಕ ವ್ಯವಸ್ಥೆಗೆ ನಿರೀಕ್ಷಿಸಲಾರದ ಲಾಭ ತಂದುಕೊಟ್ಟಿತು. ೧೯೯೩ರಲ್ಲಿ ೩,೫೦೦ ಸೂಚ್ಯಂಕಗಳಿಗೆ ಏರಿ ನಿಂತಿದ್ದ ಸ್ಟಾಕ್ ಮಾರುಕಟ್ಟೆಯ ದರ ೧೯೯೮ರ ಹೊತ್ತಿಗೆ ೯,೦೦೦ ಗುಣಾಂಕಗಳಿಗೆ ಏರಿಕೆ ಕಂಡಿತು. ಇದು ಷೇರು ಮಾರುಕಟ್ಟೆಯ ಸಾರ್ವಕಾಲಿಕ ವಿಶ್ವ ದಾಖಲೆಯಾಯಿತು. ನಿರುದ್ಯೋಗದ ಪ್ರಮಾಣ ಶೇಕಡ ೪.೩ಕ್ಕೆ ಸೀಮಿತಗೊಂಡಿತು. ಅಮೆರಿಕಾದ ನೂರು ವರ್ಷಗಳ ಇತಿಹಾಸದಲ್ಲಿ ಇಷ್ಟೊಂದು ಆರ್ಥಿಕ ಪ್ರಗತಿ ಸಾಧಿಸಲು ಯಾವ ಆಡಳಿತಗಾರರಿಗೆ ಸಾಧ್ಯವಾಗಿರಲಿಲ್ಲ. ಇಂಥ ಪರಿಣಾಮಗಳಿಂದ ೨೧ನೆಯ ಶತಮಾನಕ್ಕೆ ಅಮೆರಿಕಾ ಅದ್ಭುತವಾದ ಪ್ರವೇಶವನ್ನು ಪಡೆಯಿತು. ತಂತ್ರಜ್ಞಾನದಲ್ಲಾದ ಬೆಳವಣಿಗೆಯಿಂದ ಜಗತ್ತಿನ ಎಲ್ಲ ದೇಶಗಳ ಜನ ಅಮೆರಿಕಾದ ಸೇವೆಗೆ ನಿಲ್ಲುವ ಸಂದರ್ಭಗಳು ಹುಟ್ಟಿಕೊಂಡವು. ಭಾರತ ಮತ್ತು ಚೀನ ದೇಶಗಳು ಹೊರಗುತ್ತಿಗೆಯ ಪೂರೈಕೆಯ ಪ್ರಾತಿನಿಧಿಕ ದೇಶಗಳಾದವು. ಈವರೆಗೂ ಮುಂಚೂಣಿಯಲ್ಲಿದ್ದ ಅಮೆರಿಕಾದ ಕೃಷಿಯ ಕ್ಷೇತ್ರದ ಲಾಭವು ೧೯೯೦ರ ದಶಕದಲ್ಲಿ ಹಿಂದೆ ಸರಿಯಿತು. ವೈಟ್ ಕಾಲರ್‌ನ ತಂತ್ರಜ್ಞಾನ-ವಿಜ್ಞಾನಗಳ ಉದ್ಯೋಗಾವಕಾಶಗಳು ಅಗಾಧ ಪ್ರಮಾಣದಲ್ಲಿ ದ್ವಿಗುಣಗೊಂಡು ಜಾರಿಗೆ ಬಂದವು. ಅತ್ಯದ್ಭುತವಾದ ಆರ್ಥಿಕ ಬೆಳವಣಿಗೆಯಿಂದ ಅಮೆರಿಕಾದ ವರಮಾನ ಹೆಚ್ಚಾಗುತ್ತ ಹೋಗುವ ಈ ಸಂದರ್ಭದಲ್ಲಿ ಜನಾಂಗೀಯ ವಾದದ ವಿಚಾರಗಳು ಸಹ ಗಟ್ಟಿಗೊಂಡದ್ದು ಖೇದಕರವಾದ ಸಂಗತಿ. ಅಧ್ಯಕ್ಷನಿಂದ ಹಿಡಿದು ಸಾಮಾನ್ಯ ಅಮೆರಿಕಾನ್ ಪ್ರಜೆಯನ್ನು ಒಳಗೊಂಡಂತೆ ವಿವಾದಗಳು, ಗಾಳಿಸುದ್ದಿಗಳು ಹಾಗೂ ಅಧಿಕಾರದ ದುರುಪಯೋಗದ ಪ್ರಕರಣಗಳು ಈ ಅವಧಿಯಲ್ಲಿ ಹೆಚ್ಚಾಗಿ ದಾಖಲುಗೊಂಡವು ಎಂಬುದು ಮುಖ್ಯವಾದ ಚರ್ಚಾರ್ಹವಾದ ಸಂಗತಿ.

೧೯೯೦ರ ದಶಕದಲ್ಲಿ ಯು.ಎಸ್.ಎಸ್.ಆರ್ ಅವನತಿ ಹೊಂದಿದ ನಂತರ ಜಗತ್ತಿಗೆ ಏಕಮೇವ ನಾಯಕನ ಸ್ಥಾನ ಪಡೆದು ಅಮೆರಿಕಾ ಹೆಮ್ಮೆಯಿಂದ ಬೀಗಲಾರಂಭಿಸಿತು. ಆ ದೇಶದ ಸಮಾಜ, ಆಡಳಿತ ವ್ಯವಸ್ಥೆ, ಆರ್ಥಿಕತೆ ನಿರ್ವಹಣೆಯ ಎಲ್ಲ ಚಾಣಾಕ್ಷತನಗಳು ವಿಶ್ವಕ್ಕೆ ಮಾದರಿಯಾದವು. ೧೯೮೦-೧೯೯೦ರ ಈ ದಶಕದಲ್ಲಿ ಅಭೂತಪೂರ್ವವಾದ ಅಭಿವೃದ್ದಿಯನ್ನು ಎಲ್ಲ ರಂಗಗಳಲ್ಲೂ ಹೊಂದಿತು. ಇದೇ ಕಾಲದಲ್ಲಿ ಅಮೆರಿಕಾದ ಶೇಕಡ ಇಪ್ಪತ್ತರಷ್ಟು (೫೦ ಮಿಲಿಯನ್) ಜನಸಂಖ್ಯೆಯು ಸಹ ಅಭಿವೃದ್ದಿಯಾಯಿತು. ಈ ಬಗೆಯ ಎಲ್ಲ ಪ್ರಗತಿಯು ಅಮೆರಿಕಾದ ರಾಜಕೀಯ ಚಿತ್ರಣವನ್ನು ಬದಲಾಯಿಸಿತು. ಒಟ್ಟು ಜನಸಂಖ್ಯೆಯ ಪ್ರತಿಶತ ಮೂವತ್ತರಷ್ಟು ಜನರು ಆಫ್ರಿಕ, ಏಷ್ಯ, ಅಮೆರಿಕಾನ್ ಇಂಡಿಯನ್ (ಹಿಸ್ಪಾನಿಕ್ಸ್) ಹಾಗೂ ಬೇರೆ ಬೇರೆ ದೇಶಗಳಿಂದ ಬಂದ ಇಂಡಿಯನ್ ರಾಗಿದ್ದರು. ಅಲ್ಲದೇ ಮೆಕ್ಸಿಕೊ ಹಾಗೂ ಹೈಟಿಯಿಂದ ಬಂದ ವಲಸೆಗಾರರು ಶೇಕಡಾ ಹತ್ತರಷ್ಟಿದ್ದರು. ಹೀಗಾಗಿ ಈವರೆಗೂ ಯುರೋಪಿನಿಂದ ಬಂದ ಅಮೆರಿಕಾನ್‌ರು  ಏಕಪಕ್ಷೀಯವಾಗಿ ನಿರ್ಧರಿಸುತ್ತಿದ್ದ ನಿರ್ಣಯಗಳು ಸಹ ಪ್ರಶ್ನೆಗೊಳಗಾದವು. ತಾವು ಮೊಟ್ಟ ಮೊದಲು ಇಲ್ಲಿ ಬಂದು ಈ ದೇಶವನ್ನು ಕಟ್ಟಿದೆವು ಎಂಬ ಜಂಭದ ಮಾತುಗಳು ಕ್ಲೀಷೆಗೊಳಗಾದವು. ಇದರಿಂದ ಸಹಜವಾಗಿ ಅವರು ಉದ್ವೇಗಕ್ಕೊಳಗಾದರು. ಅಲ್ಲದೇ ಜಗತ್ತಿನ ಎಲ್ಲ ದೇಶಗಳಿಂದ ವಲಸೆ ಹೋದ ಜನರು ಅಮೆರಿಕಾದ ಸಂಸ್ಕೃತಿಯ ಜೊತೆಗೆ ಅನುರೂಪಗೊಳ್ಳುವ ಸಂಬಂಧವಾಗಿ ದ್ವಂದ್ವಗಳು ಉಂಟಾದವು. ಆದ್ದರಿಂದ ೧೯೮೦-೯೦ರ ದಶಕದಲ್ಲಿ ಅಮೆರಿಕಾದ ನಿಜವಾದ ಹಕ್ಕುದಾರರು ಯಾರು? ಎಂಬ ನೇಟಿವಿಸಮ್‌ನ ಪ್ರಶ್ನೆಯು ಹೆಚ್ಚಿನ ಮಹತ್ವ ಪಡೆಯಿತು.

ಹೊರದೇಶಗಳಿಂದ ಬಂದ ವಲಸೆಗಾರರ ಬಗೆಗೆ ಸ್ಥಳೀಯವಾಗಿ ಪ್ರತಿರೋಧಗಳು ಹುಟ್ಟಿಕೊಂಡವು. ಆದರೆ ಬೇರೆ ಬೇರೆ ಕಡೆಯಿಂದ ಅಮೆರಿಕಾಕ್ಕೆ ಬಂದ ಜನರು ತಮ್ಮ ಅಸ್ತಿತ್ವದ ಶಾಶ್ವತ ಉಳಿವಿಗಾಗಿ ಗಟ್ಟಿಯಾದ ಕಾರ್ಯಗಳನ್ನು ಹೆಚ್ಚಿನ ಶ್ರಮವಹಿಸಿ ಅಮೆರಿಕಾನ್‌ರಿಗಿಂತ ಬಲವಾಗಿ ಮಾಡಲಾರಂಭಿಸಿದರು. ಹೀಗಾಗಿ ಅಮೆರಿಕಾದ ತಂತ್ರಜ್ಞಾನ ಹಾಗೂ ಜೈವಿಕ ವಿಜ್ಞಾನದ ಯುಗವನ್ನು ಬಲಪಡಿಸಿ ಅದನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿದ ಯಶಸ್ಸು ಏಷ್ಯ ಖಂಡದಿಂದ ಹೋದ ವಲಸೆಗರಿಗೆ ಸಲ್ಲತಕ್ಕದ್ದು. ಅದರ ಸಂಪೂರ್ಣ ಹಕ್ಕುದಾರರು ಏಷ್ಯಾದ ವಲಸೆಗಾರರಾದರು. ಕಂಪ್ಯೂಟರ್ ತಂತ್ರಜ್ಞಾನ ಮೊಟ್ಟಮೊದಲು ಅಮೆರಿಕಾದಲ್ಲಿಯೇ ಪ್ರಾರಂಭವಾಗಿದ್ದರೂ ೧೯೮೦-೯೦ರ ದಶಕದಲ್ಲಿ ಅದರ ತಂತ್ರಜ್ಞಾನದ ಪಾರಮ್ಯ ಪಡೆದಿದ್ದು ಏಷ್ಯದವರೇ ಆಗಿದ್ದರು. ಸೆಲ್ಯೂಲರ್ ಫೋನ್‌ಗಳ ಆವಿಷ್ಕಾರ, ಲೇಜರ್ ಪ್ರಿಂಟರ್‌ನ ತೀವ್ರಗತಿಯ ಬಳಕೆ, ಫ್ಯಾಕ್ಸ್ ಯಂತ್ರ ಹಾಗೂ ಪರ್ಸನಲ್ ಕಂಪ್ಯೂಟರ್‌ನ ಬಳಕೆಯು  ಈ ಶತಮಾನದ ಅಮೆರಿಕಾದ ಚಿತ್ರಣವನ್ನೇ ಬದಲಾಯಿಸಿತು. ಇನ್ನೊಂದು ಬಹುಮುಖ್ಯವಾದ ಉಪಕರಣ ಮೈಕ್ರೊಚಿಪ್ಸ್‌ನ ಆವಿಷ್ಕಾರ ಹಾಗೂ ಅದನ್ನು ಪ್ರಾಯೋಗಿಕವಾಗಿ ಬಳಸಿಕೊಂಡ ತಂತ್ರಜ್ಞಾನ ಭಾರೀ ಮಟ್ಟದ ಬದಲಾವಣೆಗೆ ರಹದಾರಿಯನ್ನು ಹುಟ್ಟುಹಾಕಿತು. ೧೯೭೫ರಲ್ಲಿ ಇಡೀ ರಾಬರ್ಟ್ಸ್ ವೈಯಕ್ತಿಕ ಗಣಕಯಂತ್ರಗಳ ಬಳಕೆಯನ್ನು ಮೊಟ್ಟಮೊದಲಿಗೆ ಪ್ರಾರಂಭಿಸಿದ್ದರೂ ಅದನ್ನು ಕ್ರಾಂತಿಯ ಹಾಗೆ ಪರಿವರ್ತಿಸಿದ ಕೀರ್ತಿ ಬಿಲ್‌ಗೇಟ್ಸ್‌ಗೆ ಸಲ್ಲತಕ್ಕದ್ದು. ಮೈಕ್ರೊಸಾಫ್ಟ್ ಕಂಪನಿಯ ಮೂಲಕ ಸಂವಹನ ಕ್ರಾಂತಿಯನ್ನು ಹುಟ್ಟುಹಾಕಿದನು. ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದ ಪದವೀಧರನಾದ ಬಿಲ್‌ಗೇಟ್ಸ್ ತನ್ನ ಚತುರ ವ್ಯವಹಾರದಿಂದ ಅನೇಕ ವರ್ಷಗಳ ಕಾಲ ಜಗತ್ತಿನ ಮೊದಲ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಕಟ್ಟಿಕೊಂಡು ಈಗಲೂ ಮೆರೆಯುತ್ತಿದ್ದಾನೆ. ಇದನ್ನೆಲ್ಲ ಸಾಧಿಸಿದ್ದು ಆತ ಕೇವಲ ತನ್ನ ಮೂವತ್ತೊಂದನೆಯ ವಯಸ್ಸಿ ನಲ್ಲಿ  ಎಂಬುದು ಸೊಜಿಗವಾದ ವಿಷಯ. ಗಣಕಯಂತ್ರಗಳ ವ್ಯವಹಾರದಿಂದ ಟ್ರಿಲಿಯನ್ ಡಾಲರ್ ಮೊತ್ತದ ಒಡೆಯನಾಗಿ ಇಡೀ ಅಮೆರಿಕಾದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತಿರುವುದು ಮುಖ್ಯವಾದ ಸಂಗತಿ.

ಜಾರ್ಜ್ ಬುಷ್ ಆಡಳಿತ (ಜೂನಿಯರ್)

ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ ಎರಡು ಅವಧಿಗಳಲ್ಲಿ ಕ್ಲಿಂಟನ್ ಕೈಗೊಂಡ ಸುಧಾರಣೆಗಳು ಡೆಮೊಕ್ರಾಟಿಕ್ ಪಕ್ಷಕ್ಕೆ ವರವಾಗಿದ್ದವು. ಇದನ್ನು ಸದುಪಯೋಗ ಪಡಿಸಿಕೊಳ್ಳಲು ತನ್ನ ಆಡಳಿತಾವಧಿಯಲ್ಲಿ ಉಪಾಧ್ಯಕ್ಷನಾಗಿ ಸಾಥ್(ಬೆಂಬಲ) ನೀಡಿ ವಿಶ್ವಾಸ ಗಳಿಸಿ ಆತ್ಮೀಯನಾಗಿದ್ದ ಅಲ್-ಗೋರ್ ಮುಂಬರುವ ಅಧ್ಯಕ್ಷ ಹುದ್ದೆಗೆ ಡೆಮೊಕ್ರಾಟಿಕ್ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದ. ಈತನ ಪ್ರತಿಸ್ಪರ್ಧಿಯಾಗಿ ಟೆಕ್ಸಾಸ್ ಪ್ರಾಂತದ ಗವರ್ನರ್ ಜಾರ್ಜ್ ಜೂನಿಯರ್ ಬುಷ್ ರಿಪಬ್ಲಿಕನ್ ಪಕ್ಷದ ಉಮೇದುವಾರಿಕೆ ಯಿಂದ ಸ್ಪರ್ಧೆ ಗಿಳಿದನು. ೨೦೦೦ರಲ್ಲಿ ನಡೆದ ಈ ಚುನಾವಣೆಯ ಫಲಿತಾಂಶ ಸಮಬಲದ ಹೋರಾಟದಲ್ಲಿ ಕೊನೆಗೊಂಡಿತು. ಇದರಿಂದ ಹಲವಾರು ಗೊಂದಲಗಳು ಹುಟ್ಟಿಕೊಂಡವು. ವಿಜಯಿ ಯಾರು ಎಂಬುದನ್ನು ನಿರ್ಣಯಿಸಲು ಈ ಇಬ್ಬರ ರಾಜಕೀಯ ಭವಿಷ್ಯ ಶ್ರೇಷ್ಠ ನ್ಯಾಯಾಲಯದವರೆಗೂ ಹೋಯಿತು. ಸಂವಿಧಾನ ತಜ್ಞರು ನೀಡಿದ ಸಲಹೆ ಮೇರೆಗೆ ಫ್ಲೋರಿಡಾ ಪ್ರಾಂತದ ನಿರ್ಣಾಯಕ ಮತಗಳನ್ನು ಬುಷ್‌ನ ವಿಜಯಕ್ಕೆ ಮೆಟ್ಟಿಲುಗಳಾಗಿ ಬಳಸಿಕೊಳ್ಳಲಾಯಿತು. ಈ ಪರಿಣಾಮದಿಂದ ಅಮೆರಿಕಾದ ೪೪ನೇ ಅಧ್ಯಕ್ಷನಾಗಿ ಜಾರ್ಜ್ ಜೂನಿಯರ್ ಬುಷ್ ಅಧಿಕಾರ ವಹಿಸಿಕೊಂಡ. ತಂದೆಯಂತೆ ಆಕ್ರಮಣಕಾರಿ ಧೋರಣೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದ. ಜಗತ್ತಿನ ಯಾವುದೇ ಮೂಲೆಯಲ್ಲಿ ಅಮೆರಿಕಾದ ನೀತಿಗಳ ವಿರುದ್ಧವಾಗಿ ಶಾಂತಿ ಕದಡುವ ದುಸ್ಸಾಹಸವನ್ನು ಯಾರೇ ಮಾಡಿದರೂ ತಾನು ಸಹಿಸಲಾರೆ ಎಂದು ಜಾಗತಿಕ ಪೊಲೀಸ್ ಕಾರ್ಯಕ್ಕೆ ಅಮೆರಿಕಾವನ್ನು ಸಜ್ಜುಗೊಳಿಸಿದನು. ಅಲ್ಲದೇ ಇಂಥ ಕೃತ್ಯಗಳನ್ನು ಯಾವುದೇ ಬೆಲೆಯನ್ನಾದರೂ ನೀಡಿ ಶತ್ರುಸಂಹಾರ ಮಾಡಲಾ ಗುವುದು ಎಂದು ಪ್ರತಿಪಾದಿಸಿದನು.

ಸಾಂಪ್ರದಾಯಿಕ ತತ್ವದಲ್ಲಿ ಹೆಚ್ಚಿನ ನಂಬಿಕೆ ಇಟ್ಟು ಅಮೆರಿಕಾವನ್ನು ಬಲಾಢ್ಯವಾಗಿ ಕಟ್ಟುತ್ತಿರುವ ರಿಪಬ್ಲಿಕನ್‌ರು ಜಾರ್ಜ್ ಬುಷ್‌ನಿಗೆ ವಿಶೇಷ ಪ್ರೋ ನೀಡುತ್ತಿದ್ದರು. ಅನೇಕ ಸಮಸ್ಯೆಗಳ ನಡುವೆಯೂ ಜಾಗತಿಕ ಏಕಮೇವ ಶಕ್ತಿಯಾಗಿ ಬೆಳೆದು ಬರುತ್ತಿದ್ದ ಅಮೆರಿಕಾವು ೨೦೦೧ ಸೆಪ್ಟೆಂಬರ್ ೯ರಂದು ಎಂದೂ ನಿರೀಕ್ಷಿಸದ ಭಯಾನಕ ಹೊಡೆತಕ್ಕೆ ಸಿಕ್ಕಿ ನಲುಗಿತು. ಜಾಗತಿಕ ವ್ಯಾಪಾರ ವಹಿವಾಟಿನ ನಿಯಂತ್ರಣ ಕೇಂದ್ರವಾದ ನ್ಯೂಯಾರ್ಕ್ ವರ್ಲ್ಡ್ ಟ್ರೇಡ್ ಸೆಂಟರ್‌ನ ಗಗನ ಚುಂಬಿ ಅವಳಿ ಕಟ್ಟಡಗಳು ಕ್ಷಣಾರ್ಧದಲ್ಲಿ ನೆಲಕ್ಕುರುಳಿ ಸಾವಿರಾರು ಸಂಖ್ಯೆಯಲ್ಲಿ ಸಾವು ನೋವುಗಳು ಸಂಭವಿಸಿತು. ಲಕ್ಷಾಂತರ ಡಾಲರ್‌ಗಳ ಆರ್ಥಿಕ ನಷ್ಟವನ್ನು ಅನುಭವಿಸಿದ ಅಮೆರಿಕಾ ಈ ಮರ್ಮಾಘಾತವಾದ ಹೊಡೆತಕ್ಕೆ ತನ್ನ ನೂರಾರು ವರ್ಷಗಳ ನೀತಿಗಳನ್ನು ಪುನರ್ ವಿಮರ್ಶೆ ಮಾಡಿಕೊಳ್ಳುವ ಪ್ರಸಂಗ ಉದ್ಭವವಾಯಿತು. ರಷ್ಯಾದ ನಾಶಕ್ಕೆ ತಾನೇ ಸಾಕಿ ಪ್ರೋ ಅಫ್ಘಾನಿಸ್ತಾನದ ಸಮಸ್ಯೆಯಲ್ಲಿ ಹುಟ್ಟಿಬಂದ ಒಸಾಮ ಬಿನ್ ಲಾಡೆನ್ ಎಂಬ ಅಂತಾರಾಷ್ಟ್ರೀಯ ಭಯೋತ್ಪಾದಕನ ಕುತಂತ್ರದಿಂದ ಕಂಡರಿಯಲಾಗದ ಭಾರೀ ಸಾವು-ನೋವು ನಷ್ಟಗಳನ್ನು ಅಮೆರಿಕಾ ಅನುಭವಿಸುವಂತಾಯಿತು. ಈ ಪರಿಣಾಮ ಇಸ್ಲಾಂ ಜಗತ್ತನ್ನು ಆಮೆರಕ ತಿರಸ್ಕರಿಸುವಂತೆ ಮಾಡಿತು. ಏಷ್ಯ ಮೂಲದ ವಲಸೆಗಾರರ ಕಡಿವಾಣಕ್ಕೆ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಂಡು ‘‘ಅಮೇರಿಕೀಕರಣ’’ದ ಕಡೆಗೆ ಹೆಚ್ಚಿನ ಗಮನ ಬುಷ್ ಆಡಳಿತ ಹರಿಸಿತು. ಈವರೆಗೂ ಅಮೆರಿಕಾ ಬಿಟ್ಟು ಉಳಿದ ಬೇರಾವ ದೇಶಗಳಲ್ಲಿ ನಡೆಯುವ ಹಿಂಸಾಕೃತ್ಯಗಳಿಗೆ ಹಾಗೂ ಅಲ್ಲಿನ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ದಮನ ಮಾಡುವ ಬಗೆಗೆ ಅಷ್ಟೇನೂ ತಲೆಕೆಡಿಸಿಕೊಳ್ಳದ ಅಮೆರಿಕಾದ ಆಡಳಿತ ರಾಗ ಬದಲಿಸಿ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಜೀವವಿರೋಧಿ ಘಟನೆಗಳನ್ನು ಎಷ್ಟೇ ಬೆಲೆಯನ್ನಾದರೂ ಕೊಟ್ಟು ನಾಶಪಡಿಸುವುದು ಅಮೆರಿಕಾದ ಪರಮಗುರಿ ಎಂದು ಘೋಷಿಸಿತು. ಅಲ್ಲದೇ ಜಗತ್ತಿನ ಎಲ್ಲ ರಾಷ್ಟ್ರಗಳ ಗುರಿಗಳು ಸಹ ಇದೇ ಆಗಿರಬೇಕೆಂದು ನೀತಿ ಪಾಠ ಬೋಧಿಸಲಾರಂಭಿಸಿತು. ಆದ್ದರಿಂದ ಅಫ್ಘಾನಿಸ್ತಾನ ದಲ್ಲಿದ್ದ ತಾಲೀಬಾನ್ ಸರಕಾರ, ಇರಾಕ್‌ನ ಸರ್ವಾಧಿಕಾರಿ ಸದ್ದಾಂಹುಸೇನ್, ಚಚೇನಿಯಾದ (ರಷ್ಯಾದಲ್ಲಿನ) ಮುಸ್ಲಿಂ ಬಂಡುಕೋರರ ಉಪಟಳವನ್ನು ಶಾಶ್ವತವಾಗಿ ಇಲ್ಲವಾಗಿಸುವ ಗುರಿ ಇಟ್ಟುಕೊಂಡು ಐರೋಪ್ಯ ಶಕ್ತಿಗಳ ಜೊತೆಗೂಡಿ ಮಿಲಿಟರಿ ದಾಳಿಗಿಳಿಯಿತು. ಇಂಥ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿನ ಯಶ ಕೂಡ ಸಾಧಿಸಿದ ಅಮೆರಿಕಾ ಹಾಗೂ ಮಿತ್ರರಾಷ್ಟ್ರಗಳು ಅಫಘಾನಿಸ್ತಾನ ಹಾಗೂ ಇರಾಕ್‌ನಲ್ಲಿ ತಮ್ಮ ಅನುಕೂಲದ ಸರಕಾರಗಳನ್ನು ಜಾರಿಗೆ ತಂದಿವೆ. ಉತ್ತರ ಕೊರಿಯಾ ಹಾಗೂ ಲಿಬಿಯಾ ದೇಶಗಳಿಗೆ ಅಂತಿಮ ಎಚ್ಚರಿಕೆ ನೀಡಿರುವ ಅಮೆರಿಕಾ ಯಾವುದೇ ಕ್ಷಣದಲ್ಲಾದರೂ ಏನೂ ಬೇಕಾದರೂ ಮಾಡುವ ಶಕ್ತಿಯನ್ನು ಹೊಂದಿದೆ.

ಜಾರ್ಜ್ ವಾಕರ್ ಬುಷ್ ಅಮೆರಿಕಾದ ಅಧ್ಯಕ್ಷನಾಗಿ ಆಯ್ಕೆ ಆದ ಸಂದರ್ಭದಲ್ಲಿ ರಾಜಕೀಯ ವಿಶ್ಲೇಷಕರ ಅನೇಕ ಟೀಕೆಗಳಿಗೆ ಗುರಿಯಾದನು. ಅಂತಾರಾಷ್ಟ್ರೀಯ ಸಂಬಂಧಗಳ ಬಗೆಗೆ ಯಾವ ನಿರ್ದಿಷ್ಟ ನೀತಿ ನಿಯಮಗಳಿಲ್ಲದ ರಾಜಕೀಯ ಧುರೀಣ ಎಂಬ ಕಟು ಟೀಕೆಗೆ ಒಳಗಾದನು. ಅಲ್ಲದೇ ಅತೀ ಕಡಿಮೆ ಮತಗಳಿಂದ ಆಯ್ಕೆ ಆದ ಅಧ್ಯಕ್ಷನ ಬಗೆಗೆ ಅಮೆರಿಕಾನ್‌ರಿಗೆ ಯಾವುದೇ ಗಟ್ಟಿಯಾದ ಭರವಸೆ ಇರಲಿಲ್ಲ. ಅಮೆರಿಕಾದ ಇತಿಹಾಸದಲ್ಲಿ ಮೊಟ್ಟಮೊದಲಿಗೆ ಒಬ್ಬ ಆಫ್ರಿಕನ್-ಅಮೆರಿಕಾನ್‌ನಾದ ಕಾಲಿನ್ ಪಾವೆಲ್ ಎಂಬುವವನನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿಕೊಂಡನು. ಇದು ಸಹ ಸಂಪ್ರದಾಯಸ್ಥರ ಅಸಮಾಧಾನಕ್ಕೆ ತಕ್ಕಮಟ್ಟಿಗೆ ಕಾರಣವಾಗಿತ್ತು.

ಬಿಲ್ ಕ್ಲಿಂಟನ್‌ನ ಕಾಲದಲ್ಲಿ ಅಗಾಧ ಪ್ರಗತಿ ಸಾಧಿಸಿದ್ದ ಅಮೆರಿಕಾದ ಆರ್ಥಿಕ ವ್ಯವಸ್ಥೆ ಇದ್ದಕ್ಕಿದ್ದಂತೆ ಹಿಮ್ಮುಖವಾಗಿ ತಿರುಗಿತು. ಉತ್ಪಾದನ ವ್ಯವಸ್ಥೆಯ ಮೂಲಕ ೨೦೦೧ರಲ್ಲಿ ಸಾಕಷ್ಟು ಬದಲಾವಣೆಗಳಾದವು. ಸ್ಟಾಕ್ ಮಾರುಕಟ್ಟೆ ಕುಸಿದು ಅಮೆರಿಕಾದ ಕಾರ್ಪೋರೇಟ್ ವ್ಯವಸ್ಥೆ ದಿವಾಳಿ ಎದ್ದಿತು. ನಿರುದ್ಯೋಗದ ಸರಳ ರೇಖೆ ಆಡಳಿತಗಾರರ ಕೈಗೆ ಸಿಗದಂತೆ ಓಡಲಾರಂಭಿಸಿತು. ಏರಿಕೆ ಕಂಡಿದ್ದ ಅಮೆರಿಕಾದ ತಂತ್ರಜ್ಞಾನದ ವ್ಯಾಪಾರ ನೈಜಲಾಭವನ್ನು ತೋರಿಸುವ ಮೊದಲೇ ಮಾಯವಾಯಿತು. ಅಲ್ಲದೇ ಇದೇ ಸಂದರ್ಭದಲ್ಲಿ ಆದಾಯದ ಮೇಲಿನ ತೆರಿಗೆಯ ಕಡಿತವನ್ನು ಜಾರಿಗೆ ತಂದಿದ್ದರಿಂದ ಇಡೀ ವ್ಯವಸ್ಥೆಯ ದಿಕ್ಕು ತಪ್ಪಿದಂತಾಯಿತು.

ಅಧ್ಯಕ್ಷ ಬಿಲ್ ಕ್ಲಿಂಟನ್‌ನ ಪ್ರಯತ್ನದಿಂದ ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ದೇಶಗಳು ಮಾಡಿಕೊಂಡಿದ್ದ ಓಸ್ಲೋ ಒಪ್ಪಂದ ಅಕ್ಟೋಬರ್ ೨೦೦೦ರಲ್ಲಿ ಮುರಿದು ಬಿತ್ತು. ಸುಮಾರು ಏಳು ವರ್ಷಗಳ ಕಾಲ ಶಾಂತಿಯಿಂದ ಇದ್ದ ಮಧ್ಯಪ್ರಾಚ್ಯ ಮತ್ತೆ ಉರಿಯಲಾರಂಭಿಸಿತು. ಜೆರುಸಲೇಮ್ ಪಟ್ಟಣ ಈಗ ವಿವಾದದ ಕೇಂದ್ರವಾಯಿತು. ಪ್ಯಾಲೆಸ್ಟೈನ್ ಸರಕಾರವು ಒಪ್ಪಂದವನ್ನು ಧಿಕ್ಕರಿಸಿ ಇಂಟಿಫಡು(ಆಕ್ರಮಣ) ನೀತಿಗೆ ಮುಂದಾಯಿತು. ಪಶ್ಚಿಮ ದಂಡೆ ಹಾಗೂ ಗಾಜಾ ಪಟ್ಟಿಯ ಮೇಲೆ ಪ್ಯಾಲೆಸ್ಟೈನ್ ಮಿಲಿಟರಿಯು ದಾಳಿ ಮಾಡಿ ನೂರಾರು ಇಸ್ರೇಲ್ ನಾಗರಿಕರನ್ನು ಹಾಗೂ ಸೈನಿಕರನ್ನು ಕೊಂದುಹಾಕಿತು. ಈ ಕಾರಣಗಳು ಇಸ್ರೇಲಿನ ಚುನಾವಣೆಯ ಮೇಲೆ ಪರಿಣಾಮ ಬೀರಿ ಬಲಪಂಥೀಯ ಕಟ್ಟರ್‌ವಾದಿ ನಾಯಕ ಏರಿಯಲ್ ಶೆರಾನ್ ಅಧಿಕಾರಕ್ಕೆ ಬರುವಂತೆ ಮಾಡಿದವು. ಅಧಿಕಾರ ವಹಿಸಿಕೊಂಡ ಶೆರಾನ್ ತತ್‌ಕ್ಷಣವೇ ಇಸ್ರೇಲ್ ಸೇನೆಯನ್ನು ಪ್ಯಾಲೆಸ್ಟೈನ್ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲೆ ನುಗ್ಗಿಸಿ ಅಪಾರವಾದ ಜೀವಹಾನಿ ಮಾಡಿದನು. ಅಲ್ಲದೇ ಹಮಾಸ ಹಾಗೂ ಜೆಹಾದಿ ನಾಯಕರನ್ನು ಹುಡುಕಾಡಿ ಇಸ್ರೇಲ್‌ನ ಗುಪ್ತದಳ ಹತ್ಯೆ ಮಾಡಿ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿತು. ಆದರೆ ಈಗಾಗಲೇ ಅಂತಾರಾಷ್ಟ್ರೀಯ ಸಮಸ್ಯೆಗಳಲ್ಲಿ ಪ್ರವೇಶಿಸಿ ಕೈಸುಟ್ಟುಕೊಂಡಿದ್ದ ಅಮೆರಿಕಾದ ಆಡಳಿತ ತನ್ನ ಅರಿವಿಗೆ ಈ ಘಟನೆಗಳು ಇಲ್ಲವೆಂಬಂತೆ ಸುಮ್ಮನಾಗಿ ಇಸ್ರೇಲ್ ಹಾಗೂ ಜಗತ್ತಿನ ಬೇರೆ ರಾಷ್ಟ್ರಗಳ ಮುಂದಿನ ನಡೆಗಳ ಬಗೆಗೆ ಕಾಯುತ್ತ ಕುಳಿತಿತು. ಆದರೆ ಯು.ಎನ್.ಓ.ದ ಕೋರಿಕೆಯ ಮೇರೆಗೆ ಅಮೆರಿಕಾ ಆಡಳಿತವು ಮತ್ತೆ ಮಧ್ಯಪ್ರಾಚ್ಯದ ಶಾಂತಿ ಸಂಧಾನಗಳಿಗೆ ಎರಡು ದೇಶಗಳನ್ನು ಸಜ್ಜುಗೊಳಿಸಲು ಮುಂದಾಯಿತು. ಜಾಗತಿಕ ಮಟ್ಟದಲ್ಲಿ ಆಗುತ್ತಿದ್ದ ತೀವ್ರತರ ಬದಲಾವಣೆಗಳಿಗೆ ಅಮೆರಿಕಾ ಹೊಸ ಹಾದಿಯನ್ನು ಹುಡುಕಲಾರಂಭಿಸಿತು. ಹ್ಯಾರಿ ಟ್ರೂಮನ್‌ನಿಂದ ೧೯೪೭ರಲ್ಲಿ ಪ್ರಾರಂಭವಾದ ಕಮ್ಯುನಿಸ್ಟ್ ಆಡಳಿತದ ವಿರುದ್ಧ ಶೀತಲಯುದ್ಧದ ಮಾದರಿಗಳು ೨೧ನೇ ಶತಮಾನದಲ್ಲಿ ಮಹತ್ವ ಕಳೆದುಕೊಂಡವು. ಚೀನ ದೇಶವು ತನ್ನ ಆಡಳಿತದ ವಿರುದ್ಧ ಪ್ರತಿಭಟಿಸಿದ ಹತ್ತು ಸಾವಿರ ನಾಗರಿಕ ಪ್ರತಿಭಟನಾಕಾರರನ್ನು ನಿರ್ದಯವಾಗಿ ಹೊಸಕಿ ಹಾಕಿತು. ಆದರೆ ಅಮೆರಿಕಾ ಇದಕ್ಕೆ ಯಾವುದೇ ಪ್ರಬಲವಾದ ಪ್ರತಿರೋಧ ತೋರಲಿಲ್ಲ. ತನಗೆ ತನ್ನ ಜನರ ರಕ್ಷಣೆ ಹಾಗೂ ಅಭಿವೃದ್ದಿಯೇ ಮುಖ್ಯ ಸಂಗತಿಗಳಾಗಿ ವ್ಯಕ್ತವಾದವು. ಅಧ್ಯಕ್ಷ ಬುಷ್‌ನು

ಬೆದರಿಕೆಗಳಿಗೆ ಸಂಪೂರ್ಣವಾಗಿ ಮಣಿಯದಿದ್ದರೆ ನಾವು ಇನ್ನಷ್ಟು ದಿನ ಕಾಯುತ್ತಿದ್ದವು. ಪ್ರಸಕ್ತ ಜಗತ್ತಿನಲ್ಲಿ ಕಾರ್ಯಾಚರಣೆಯ ಮೂಲಕ ಮಾತ್ರ ನಮ್ಮ ರಕ್ಷಣೆ ಸಾಧ್ಯ ಎಂದು ನಾವು ತಿಳಿದುಕೊಂಡಿದ್ದೇವೆ. ಅದನ್ನು ಕಾರ್ಯಗತಗೊಳಿಸಲು ರಾಷ್ಟ್ರ ಬದ್ಧವಾಗಿದೆ.

ಎಂದು ಹೇಳಿ ಅಮೆರಿಕಾದ ಮುಂದಿನ ನಡುವಳಿಕೆಯ ಬಗೆಗೆ ತಾನು ಹೊಂದಿದ ಮನೋಭಾವನೆಗಳನ್ನು ಸ್ಪಷ್ಟಪಡಿಸಿದನು.

ಜಾಗತಿಕ ಭಯೋತ್ಪಾದನೆ

ಶೀತಲ ಸಮರ ಕೊನೆಗೊಂಡ ನಂತರ ಏಕಮೇವ ಅದ್ವೀತಿಯ ಶಕ್ತಿಯಾಗಿ ಅಮೆರಿಕಾ ರೂಪುಗೊಂಡಿತು. ಇದುವರೆಗೂ ಗುಪ್ತವಾಗಿ ಹುದುಗಿಕೊಂಡಿದ್ದ ಧರ್ಮರಾಜಕಾರಣ ಹಾಗೂ ಜನಾಂಗಿಯ ವಾದಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡಿಸಲಾರದ ಸಮಸ್ಯೆಗಳಾಗಿ ಪ್ರತಿಬಿಂಬಿತವಾದವು. ಭಯದ ಮೂಲಕ ಜಾಗತಿಕ ಮಟ್ಟದ ತಲ್ಲಣಗಳನ್ನು ಸೃಷ್ಟಿಸಿದ ಸಂಘಟನೆಗಳು ಆರ್ಥಿಕವಾಗಿಯೂ ಸಹ ಬಲಯುತವಾಗಿದ್ದವು. ಸೋವಿಯತ್ ರಷ್ಯಾದ ಪತನಾನಂತರ ಅಮೆರಿಕಾ ಸಹ ಅಂತಾರಾಷ್ಟ್ರೀಯ ಸಮಸ್ಯೆಗಳ ಬಗೆಗೆ ಹೆಚ್ಚಿನ ನಿರಾಸೆ ತೋರಿಸಲಾರಂಭಿಸಿತು. ಇಂಥ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಲಿಬಿಯಾ, ಸುಡಾನ್, ಲೆಬನಾನ್, ಅಫ್ಘಾನಿಸ್ತಾನ್, ಪಾಕಿಸ್ತಾನ, ಸೋಮಾಲಿಯಾ, ಯೆಮನ್ ಹಾಗೂ ಇಂಡೋನೇಷಿಯಾ ದೇಶಗಳಲ್ಲಿನ ಮುಸ್ಲಿಂ ಮೂಲಭೂತವಾದದ ಪ್ರತಿಪಾದಕರು ಮುಂಚೂಣಿಗೆ ಬಂದರು. ಜಾಗತಿಕಮಟ್ಟದಲ್ಲಿ ಕ್ರೈಸ್ತ ಹಾಗೂ ಹಿಂದೂ ಮತಗಳು ಹಾಗೂ ಮತಾವಲಂಬಿಗಳು ಇಸ್ಲಾಂ ಮೂಲಭೂತವಾದದ ಅನುಯಾಯಿಗಳಿಂದ ತೀವ್ರ ಟೀಕೆಗೆ ಒಳಗಾಗಬೇಕಾಯಿತು. ಐರೋಪ್ಯ ರಾಷ್ಟ್ರಗಳಾದ ಇಂಗ್ಲೆಂಡ್, ಫ್ರಾನ್ಸ್, ಸ್ಪೇನ್, ಜರ್ಮನಿ ಹಾಗೂ ಡೆನ್ಮಾರ್ಕ್ ಮತ್ತು ಅಮೆರಿಕಾ ಖಂಡದ ಅಮೆರಿಕಾ ಹಾಗೂ ಕೆನಡಾ ರಾಷ್ಟ್ರಗಳು ಮೂಲಭೂತವಾದಿಗಳ ಕೆಂಗಣ್ಣಿಗೆ ಮುಖ್ಯವಾಗಿ ಗುರಿಯಾದವು.

ಭಯೋತ್ಪಾದನೆಯ ಅಟ್ಟಹಾಸ ೨೦೦೧ನೆಯ ಸೆಪ್ಟೆಂಬರ್ ೧೧ರಂದು ಅಮೆರಿಕಾದಲ್ಲಿ ಕಂಡುಬಂತು. ಇದನ್ನು ೧೧/೯ ಕರಾಳ ದಿನವೆಂದು ಜಾಗತಿಕ ಇತಿಹಾಸದಲ್ಲಿ ಕರೆಯಲಾಗು ತ್ತದೆ. ನ್ಯೂಯಾರ್ಕ್‌ನಲ್ಲಿರುವ ಅವಳಿ ಕಟ್ಟಡಗಳನ್ನು ಜಂಬೋಜೆಟ್(ವಿಮಾನ)ಗಳ ಮೂಲಕ ಭಯೋತ್ಪಾದಕರು ಧ್ವಂಸ ಮಾಡಿದರು.  ೨೦೦೧ನೆಯ ಸೆಪ್ಟೆಂಬರ್ ೧೧ರ ಮುಂಜಾನೆ ೮.೪೫ ನಿಮಿಷಕ್ಕೆ ೧೧೦ ಅಂತಸ್ತಿನ ಗಗನಚುಂಬಿ ಕಟ್ಟಡಗಳಲ್ಲಿ ಪ್ರತಿಗಂಟೆಗೆ ೫೦೦ ಮೈಲುಗಳ ವೇಗದಲ್ಲಿದ್ದ ರಭಸದಿಂದ ಕೂಡಿದ ವಿಮಾನಗಳನ್ನು ಕಟ್ಟಡದಲ್ಲಿ ನುಗ್ಗಿಸಲಾಯಿತು. ಇಂಥ ರಭಸಕ್ಕೆ ಕ್ಷಣಾರ್ಧದಲ್ಲಿ ಅವಳಿ ಕಟ್ಟಡಗಳು ನೆಲಕ್ಕುರುಳಿದವು. ಸಾವಿರಾರು ಸಂಖ್ಯೆಯ ಜನರು ಈ ಅವಘಡದಿಂದ ಪ್ರಾಣ ಕಳೆದುಕೊಂಡರು. ಇದರಿಂದ ಉಂಟಾದ ಜ್ವಾಲೆಯು ಸುತ್ತಲಿನ ಪ್ರದೇಶಗಳನ್ನು ಸಹ ತೀವ್ರ ತರದಲ್ಲಿ ಹಾನಿಗೊಳಿಸಿತು. ಇದೇ ಸಮಯದಲ್ಲಿ ಅಮೆರಿಕಾದ ವೈಟ್‌ಹೌಸ್ (ಅಧ್ಯಕ್ಷರ ಕಚೇರಿ) ಹಾಗೂ ಪೆಂಟಗಾನ್ (ರಕ್ಷಣೆ) ಕಚೇರಿ ಕಟ್ಟಡಗಳನ್ನು ಭಯೋತ್ಪಾದಕರು ಗುರಿಯಾಗಿಟ್ಟುಕೊಂಡಿದ್ದರು. ಆದರೆ ಇವುಗಳ ಮೇಲೆ ಹಾನಿಕಾರಕ ದಾಳಿ ಮಾಡುವಲ್ಲಿ ವಿಮಾನ ಅಪಹರಣಕಾರರು ಸಫಲವಾಗಲಿಲ್ಲ. ಭಯೋತ್ಪಾದಕರು ಈ ಕುಕೃತ್ಯಗಳಲ್ಲಿ ಯಶಸ್ಸು ಪಡೆದಿದ್ದರೆ. ಅಮೆರಿಕಾದ ಚರಿತ್ರೆಯ ಚಿತ್ರಣವೇ ಬದಲಾಗುತ್ತಿತ್ತು ಎಂಬುದರಲ್ಲಿ ಸಂಶಯವಿಲ್ಲ.

ಜೆಹಾದಿ ಹೆಸರಿನಲ್ಲಿ ನಡೆದ ಈ ಘಟನೆಯಲ್ಲಿ ೨೬೬ ಪ್ರಯಾಣಿಕರು, ೧೦೦ ಜನ ನಾಗರಿಕರು ಸೇರಿದಂತೆ ಹೀಗೆ ಒಟ್ಟು ಸುಮಾರು ೨೮೦೦ ಜನರು ಈ ಅವಘಡದಲ್ಲಿ ಪ್ರಾಣ ಕಳೆದುಕೊಂಡರು. ಜಾಗತಿಕ ಬಂಡವಾಳವಾದದ ಮುಖ್ಯ ಕೇಂದ್ರ ಹಾಗೂ ಇಡೀ ದೇಶದ ಆರ್ಥಿಕ ವ್ಯವಸ್ಥೆಯ ನಿಯಂತ್ರಣದ ಮುಖ್ಯ ಸಂಸ್ಥೆಯಾಗಿದ್ದ ಈ ಕಟ್ಟಡದಲ್ಲಿನ ಎಲ್ಲ ಕಚೇರಿಗಳ ನಾಶವು ಅಮೆರಿಕಾನ್‌ರಿಗೆ ದಿಕ್ಕು ತೋಚದ ಹಾಗೆ ಮಾಡಿತು. ಇದರಿಂದ ತೀವ್ರ ಅಸಮಾಧಾನಕ್ಕೆ ಒಳಗಾದ ಹಾಗೂ ಮುಂದಿನ ದಾರಿ ಯಾವುದು ಎಂದು ತೋಚದೆ ಇಲ್ಲಿನ ಆಡಳಿತ ಕೆಲವು ದಿನಗಳ ಕಾಲ ಸ್ತಬ್ಧಗೊಂಡಿತು. ಆದರೆ ಇಡೀ ಅಮೆರಿಕಾ ದೇಶವೇ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಆದ ಗಾಯಕ್ಕೆ ಪರಿಹಾರೋಪಾಯಗಳನ್ನು ತತ್‌ಕ್ಷಣವೇ ಕಾರ್ಯರೂಪಗೊಳಿಸುವಂತೆ ಸರಕಾರವನ್ನು ಜನತೆಯೇ ಹುರಿದುಂಬಿಸಿತು. ತೀವ್ರವಾದ ವಿಚಾರಣೆಗಳನ್ನು ಕೈಗೊಂಡು ಅಲ್‌ಖೈದಾ ಎಂಬ ಅಂತಾರಾಷ್ಟ್ರೀಯ ಭಯತ್ಪೋದನಾ ಸಂಘಟನೆಯ ೧೯ ಜನರು ಈ ಕೃತ್ಯಕ್ಕೆ ಕಾರಣಕರ್ತರು ಎಂದು ಅಮೆರಿಕಾ ಆಡಳಿತ ಕೆಲವೇ ತಿಂಗಳುಗಳಲ್ಲಿ ಇಂಥ ಅಪರಾಧದ ಮರ್ಮವನ್ನು ಭೇದಿಸಿತು. ಸಂಘಟನೆಯ ನಾಯಕ ಒಸಾಮ ಬಿನ್ ಲಾಡೆನ್‌ನ ಜೀವಂತ ಬೇಟೆಯನ್ನು ಅಮೆರಿಕಾ ಆಡಳಿತ ಗುಪ್ತವಾಗಿ ಹೆಣೆಯಿತು. ಇದಕ್ಕೆ ಯಾವ ಬೆಲೆಯನ್ನಾದರೂ ಅಮೆರಿಕಾ ಕೊಡಲು ತೀರ್ಮಾನಿಸಿತು. ಇದೇ ವೇಳೆಗೆ ಜೆಹಾದಿ ಹೆಸರಿನಲ್ಲಿ ಕ್ರೈಸ್ತರ ಹಾಗೂ ಅಮೆರಿಕಾದ ವಿರುದ್ಧ ಪವಿತ್ರ ಯುದ್ಧವನ್ನು ಆಲ್‌ಖೈದಾ ಸಂಘಟನೆ ಘೋಷಿಸಿತ್ತು. ಇಂಥ ಉಪಟಳದ ಮಾತುಗಳು ಇನ್ನುಳಿದ ಕ್ರೈಸ್ತ ಧರ್ಮೀಯ ರಾಷ್ಟ್ರಗಳನ್ನು ಮುಸ್ಲಿಂ ಜಗತ್ತಿನ ವಿರುದ್ಧ ಸಂಶಯಿಸುವಂತೆ ಮಾಡಿತು. ಈ ಮೊದಲು ಮುಸ್ಲಿಂ ಜೆಹಾದಿ ಗುಂಪುಗಳು ಸೌದಿ ಅರೇಬಿಯದಲ್ಲಿನ ಅಮೆರಿಕಾದ ಮಿಲಿಟರಿ ನೆಲೆಗಳ ಮೇಲೆ, ಕೀನ್ಯಾ ಹಾಗೂ ವಿಯಟ್ನಾಂನ ಅಮೆರಿಕಾ ರಾಯಭಾರಿ ಕಚೇರಿ ಹಾಗೂ ಯೆಮನ್ ಬಂದರಿನಲ್ಲಿದ್ದ ಅಮೆರಿಕಾದ ಸೈನಿಕರ ಮೇಲೆ ಅಲ್‌ಖೈದಾ ಮೂಲಭೂತವಾದಿಗಳ ಗುಂಪು ೧೧/೯ರ ನ್ಯೂಯಾರ್ಕ್ ದುರ್ಘಟನೆಯು ನಡೆಯುವ ಕೆಲವು ತಿಂಗಳುಗಳ ಮೊದಲು ಮೇಲೆ ಜೆಹಾದಿ ದಾಳಿಯನ್ನು ಸಂಘಟಿಸಿತ್ತು. ಆದರೆ ಅಮೆರಿಕಾವನ್ನೊಳಗೊಂಡಂತೆ ವಿಶ್ವದ ಯಾವ ದೇಶಗಳು ಈ ಕೃತ್ಯಗಳನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದರ ಪರಿಣಾಮವೇ ಮುಂದಿನ ಕೆಲವೇ ತಿಂಗಳುಗಳಲ್ಲಿ ಗಗನಚುಂಬಿ ಕಟ್ಟಡಗಳನ್ನು ನೆಲಕ್ಕುರುಳಿಸುವುದರ ಮೂಲಕ ತಾನು ಹೇಳಿದ ಮಾತುಗಳನ್ನು ಅಲ್‌ಖೈದಾ ನಿಜಗೊಳಿಸಿತು.

ಅಫ್ಘಾನಿಸ್ತಾನದ ಸಮಸ್ಯೆಯಲ್ಲಿ ಪ್ರಾರಂಭಗೊಂಡು ಎದ್ದು ಬಂದ ಅಲ್‌ಖೈದಾ ಸಂಘಟನೆಯ ನಾಯಕ ಒಸಾಮ ಬಿನ್ ಲಾಡೆನ್‌ನು ತನ್ನಲ್ಲಿರುವ ಧನಬಲದಿಂದ ಇಸ್ಲಾಂ ಮೂಲಭೂತವಾದವನ್ನು ಉಗ್ರವಾಗಿ ಪ್ರತಿಪಾದಿಸುವ ಸಂಘಟನೆಯನ್ನು ಕಟ್ಟಿದನು. ಇದರ ಪ್ರಭಾವಕ್ಕೆ ಜಾಗತಿಕ ಮಟ್ಟದಲ್ಲಿ ಸುಮಾರು ೨೦ ಸಾವಿರಕ್ಕಿಂತ ಹೆಚ್ಚಿನ ಜನರು ಅಲ್‌ಖೈದಾದ ಸಂಘಟನೆಯ ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋವಿಯತ್ ರಷ್ಯಾವು ಅಫ್ಘಾನಿಸ್ತಾನದಿಂದ ಕಾಲಕ್ಕಿಂತ ನಂತರ ನಾರ್ದನ್ ಅಲೈನ್ಸ್ ಸಂಘಟನೆಗಳು ಅಧಿಕಾರಕ್ಕಾಗಿ ಬಡಿದಾಟಕ್ಕಿಳಿದವು. ಇದರ ಲಾಭವನ್ನು ಪಡೆದ ತಾಲಿಬಾನ್ ಸಂಘಟನೆಯು ಸ್ಥಳೀಯ ಸಮಸ್ಯೆಗಳನ್ನು ಇಟ್ಟುಕೊಂಡು ಆಲ್‌ಖೈದಾದ ಬೆಂಬಲದಿಂದ ಇಸ್ಲಾಂ ಮೂಲಭೂತವಾದದ ಪ್ರಬಲ ನಂಬಿಕೆಯ ಹಿನ್ನೆಲೆಯಲ್ಲಿ ಅತ್ಯುಗ್ರವಾದ ಆಡಳಿತವನ್ನು ತೊಂಬತ್ತರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ಪ್ರಾರಂಭಿಸಿತು. ಇದರ ಆಶ್ರಯದಲ್ಲಿ ಜಾಗತಿಕ ಭಯೋತ್ಪಾದನೆ ಹೆಮ್ಮರವಾಗಿ ಬೆಳೆದು ಅಮೆರಿಕಾದಲ್ಲಿನ ಎಲ್ಲ ದುರಂತಕ್ಕೆ ಕಾರಣ ವಾಯಿತು. ೧೧/೯ರ ಘಟನೆ ಅಮೆರಿಕಾದ ಆರ್ಥಿಕ ವ್ಯವಸ್ಥೆಗೆ ಬಲವಾದ ಪೆಟ್ಟು ನೀಡಿತು. ನೂರಾರು ವರ್ಷಗಳಿಂದ ಹೆಚ್ಚಿನ ಲಾಭ ಗಳಿಸಿ ಅಮೆರಿಕಾದ ಆರ್ಥಿಕ ವ್ಯವಸ್ಥೆಗೆ ಮುಖ್ಯ ಅಡಿಪಾಯಗಳಾಗಿದ್ದ ವಿಮಾ ಕಂಪನಿಗಳು ಈ ದುರಂತದಿಂದ ಬುಡಮೇಲಾದವು. ಸುಮಾರು ೩೦ ಬಿಲಿಯನ್ ಡಾಲರ್ ಹಣವನ್ನು ಈ ದುರಂತದಲ್ಲಿ  ಅಮೆರಿಕಾ ಕಳೆದುಕೊಂಡಿತು. ನಷ್ಟವನ್ನು ಅನುಭವಿಸಿದವರಿಗೆ ಇನ್ಶುರೆನ್ಸ್ ಕಂಪನಿಗಳು ಬಿಲಿಯನ್ ಡಾಲರ್‌ಗಳಲ್ಲಿ ಪರಿಹಾರ ರೂಪದಲ್ಲಿ ಸಂದಾಯ ಮಾಡುವ ಸ್ಥಿತಿ ಉಂಟಾಯಿತು.  ವಾಯು ಸಾರಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನರು ಈ ಕಾರಣದಿಂದ ತಮ್ಮ ಉದ್ಯೋಗ ಕಳೆದುಕೊಂಡರು.

ಬುಷ್ ಆಡಳಿತ ೧೧/೯ರ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿತು. ಇದು ವರೆಗೂ ಬಿಲ್ ಕ್ಲಿಂಟನ್ ಆಡಳಿತವು ಪ್ರೋ ಬಂದಿದ್ದ ಬಹುಪಕ್ಷೀಯ ನಿಶ್ಶಸ್ತ್ರೀಕರಣ ಸಿದ್ಧಾಂತಕ್ಕೆ ತಾತ್ಕಾಲಿಕ ತಡೆ ಮಾಡಲಾಯಿತು. ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಭಯೋತ್ಪಾದನೆಯನ್ನು ಜಗತ್ತಿನ ಎಲ್ಲ ರಾಷ್ಟ್ರಗಳು ವಿರೋಧಿಸ ಬೇಕು ಹಾಗೂ ಅಂಥ ಕೃತ್ಯಗಳನ್ನು ನಾಶ ಮಾಡಲೇಬೇಕು ಎಂದು ಅಮೆರಿಕಾ ಪ್ರಬಲವಾಗಿ ಪ್ರತಿಪಾದಿಸಿತು. ವಿಶ್ವವನ್ನು ಉದ್ದೇಶಿಸಿ ಅಮೆರಿಕಾದ ಅಧ್ಯಕ್ಷ ಜಾರ್ಜ್ ವಾಕರ್ ಬುಷ್‌ನು

ಒತ್ತಡಕ್ಕೆ ಮಣಿಯಲಾರೆ, ವಿರಮಿಸಲಾರೆ. ಸ್ವಾತಂತ್ರ್ಯ ಮತ್ತು ರಕ್ಷಣೆಗಾಗಿ ಈ ಯುದ್ಧ ಸಾರಲಾಗಿದೆ. ಇದರಿಂದ ಹಿಂದೆಟನ್ನು ಹಾಕಲಾರೆ

ಎಂದು ಘೋಷಿಸಿದನು. ಅಲ್ಲದೇ ಜಾಗತಿಕ ಭಯೋತ್ಪಾದನೆಯ ಬುಡವನ್ನು ಕಿತ್ತೆಸೆಯಲು ಜಾಗತಿಕ ಸಹಕಾರವನ್ನು ಬಯಸಿದನು. ಎಲ್ಲ ಸಮಸ್ಯೆಗಳಿಗೆ ಮೂಲಕಾರಣವಾಗಿದ್ದ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಜಗತ್ತನ್ನು ಅಣಿಗೊಳಿಸಿದನು. ಇಸ್ಲಾಂ ಮೂಲಭೂತವಾದವನ್ನು ತೆರೆಮರೆಯಲ್ಲಿ ಬೆಂಬಲಿಸುವ ರಾಷ್ಟ್ರಗಳಿಗೆ

ನೀವು ನಮ್ಮ ಜೊತೆಗೆ ಇರಲು ಇಷ್ಟಪಡುತ್ತೀರ ಅಥವಾ ಭಯೋತ್ಪಾದಕರ ಜೊತೆ ಇರಲು ಇಷ್ಟಪಡುತ್ತೀರ ನೀವೇ ನಿರ್ಧರಿಸಿ

ಎಂದು ಗುಡುಗಿದನು. ಇದರಿಂದ ಬೇಸ್ತುಬಿದ್ದ ಪಾಕಿಸ್ತಾನದ ಆಡಳಿತ ಆಮೆರಿಕದ ಒತ್ತಾಯಕ್ಕೆ ಮಣಿಯಿತು. ವಿಶೇಷ ತಂತ್ರಜ್ಞಾನದಿಂದ ಮಾಡಿದ ಅಸ್ತ್ರಗಳು ಹೆಚ್ಚಿನ ಜೀವಹಾನಿಯಿಲ್ಲದೇ ಅಫ್ಘಾನಿಸ್ತಾನದಲ್ಲಿನ ಅಲ್‌ಖೈದಾದ ತರಬೇತಿ ಶಿಬಿರಗಳನ್ನು ಹಾಗೂ ತಾಲಿಬಾನ್ ಆಡಳಿತವನ್ನು ಕೆಲವೇ ದಿನಗಳಲ್ಲಿ ನಾಶ ಮಾಡಿದವು. ಅಮೆರಿಕಾ ಹಾಗೂ ಇಂಗ್ಲೆಂಡ್ ದೇಶಗಳ ಸಂಯುಕ್ತ ಸೇನೆ ಅಫ್ಘಾನಿಸ್ತಾನವನ್ನು ತನ್ನ ಸುಪರ್ದಿಗೆ ಒಳಪಡಿಸಿಕೊಂಡಿತು. ತಾಲಿಬಾನ್ ವಿರುದ್ಧ ಹೋರಾಟಕ್ಕೆ ಸ್ಥಳೀಯ ನಾರ್ದನ್ ಅಲೈನ್ಸ್ ಪಡೆಗಳು ಬೆಂಬಲ ನೀಡಿದವು. ಮೂಲಭೂತವಾದಿ ಆಡಳಿತದ ಕಪಿಮುಷ್ಟಿಯಿಂದ ಸ್ಥಳೀಯ ಜನತೆ ಕಟ್ಟಿಸಿಕೊಂಡಿದ್ದ ಹಗ್ಗವನ್ನು ಬಿಡಿಸಿಕೊಂಡು ಅದನ್ನು ನಾಶಪಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಯಿತು. ಆದರೆ ಅಮೆರಿಕಾ ತಾನು ಅಂದುಕೊಂಡಂತೆ ಯಶಸ್ಸನ್ನು ಸಾಧಿಸಲಾಗಲಿಲ್ಲ. ಅಮೆರಿಕಾ ಅನೇಕ ಬಗೆಯ ಎಚ್ಚರಿಕೆಗಳನ್ನು ನೀಡಿದರೂ ಇದಕ್ಕೆ ಜಗ್ಗದೇ ಅಂತಿಮವಾಗಿ ತಾಲಿಬಾನ್ ನಾಯಕ ಮುಲ್ಲಾ ಮೊಹಮದ್ ಓಮರನು ಲಾಡೆನ್‌ನನ್ನು ಒಪ್ಪಿಸಲು ನಿರಾಕರಿಸಿದನು. ತಾಲಿಬಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಾ ಯಶಸ್ವಿಯಾದರೂ ಇವರಿಬ್ಬರನ್ನು ಹಿಡಿಯುವಲ್ಲಿ ಸಂಯುಕ್ತ ಸೇನೆ ಯಶಸ್ವಿಯಾಗಲಿಲ್ಲ.

ಭವಿಷ್ಯದಲ್ಲಿ ತಲೆದೋರಬಹುದಾದ ಭಯಾನಕ ಅನಾಹುತಗಳಿಗೆ ಅಮೆರಿಕಾ ಮತ್ತೆ ಮತ್ತೆ ಒಳಗಾಗದಂತೆ ಎಚ್ಚರ ವಹಿಸಲು ಹಾಗೂ ಅದನ್ನು ಎದುರಿಸಿ ನಿಲ್ಲುವ ತಾಕತ್ತನ್ನು ಪಡೆಯಲು ಬುಷ್ ಆಡಳಿತ ಭಾರೀ ಪ್ರಮಾಣದ ರಕ್ಷಣಾ ಸೂತ್ರಗಳನ್ನು ಸಿದ್ಧಪಡಿಸಿಕೊಂಡಿತು. ದಿಢೀರನೆ ಉದ್ಭವವಾಗುವ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಹೊಡೆದು ಹಾಕಲು ‘ಫೆಡರಲ್ ಏಜೆನ್ಸಿ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಸಾರ್ವಜನಿಕ ಸ್ಥಳಗಳ ಮೇಲೆ ಸದಾ ನಿಗಾ ಇಡುವ ಪ್ರಮುಖ ಕಾರ್ಯವನ್ನು ದಿನದ ಎಲ್ಲ ಅವಧಿಯಲ್ಲಿ ನಿರ್ವಹಿಸುವ ಜವಾಬ್ದಾರಿಯನ್ನು ಈ ಸಂಸ್ಥೆಗೆ ವಹಿಸಲಾಯಿತು. ದೇಶದ ಭದ್ರತೆಯ ದೃಷ್ಟಿಯಿಂದ ಯು.ಎಸ್.ಎ ಪ್ಯಾಟ್ರಿಯಟ್ ಕಾಯ್ದೆಯನ್ನು ಸರ್ವಾನುಮತದಿಂದ ಜಾರಿಗೆ ತರಲಾಯಿತು. ಇದು ಫೆಡರಲ್ ಏಜೆನ್ಸಿಯು ತನಗೆ ಬೇಕಾದಾಗ ಸಂಶಯಾಸ್ಪದ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆಯನ್ನು ಕಾನೂನಿನ ಯಾವ ಅಡೆತಡೆ ಇಲ್ಲದೇ ವಿಚಾರಿಸುವ ಹಾಗೂ ಬಂಧಿಸುವ ಅವಕಾಶವನ್ನು ಈ ಕಾಯ್ದೆ ಮೂಲಕ ನೀಡಲಾಯಿತು.

ಜಾರ್ಜ್ ಬುಷ್ ಆಡಳಿತಾವಧಿಯಲ್ಲಿ ಅಮೆರಿಕಾವು ಅಂತಾರಾಷ್ಟ್ರೀಯವಾಗಿ ತಲೆದೋರಿದ್ದ ಸಮಸ್ಯೆಗಳನ್ನು ನಿಭಾಯಿಸುವ ಕಾರ್ಯದಲ್ಲಿ ಗಲಿಬಿಲಿಗೊಂಡಿತು. ಇಂಥ ಅವಕಾಶವನ್ನು ದುರುಪಯೋಗಪಡಿಸಿಕೊಂಡ ಭಾರತ ಮತ್ತು ಪಾಕಿಸ್ತಾನಗಳು ತಮ್ಮ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿ ಜಾಗತಿಕ ಮಟ್ಟದಲ್ಲಿ ಆತಂಕವನ್ನು ಸೃಷ್ಟಿಸಿದವು. ಸೋವಿಯತ್ ರಷ್ಯಾದ ಪತನಾನಂತರ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ತನ್ನ ಶಕ್ತಿಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳುವ ಜರೂರಿತ್ತು. ಅಲ್ಲದೇ ತನ್ನ ಮಗ್ಗುಲು ಮುಳ್ಳಾಗಿ ತೊಂದರೆ ಕೊಡುತ್ತಿದ್ದ ಚೀನ ಹಾಗೂ ಪಾಕಿಸ್ತಾನವನ್ನು ಬೆದರಿಸುವ ಇಚ್ಛೆಯನ್ನು ಸಹ ಪರೋಕ್ಷವಾಗಿ ಹೊಂದಿತ್ತು. ಹೀಗಾಗಿ ಇಂಥ ಕಠಿಣ ಕಾರ್ಯಕ್ಕೆ ಭಾರತ ಇಳಿಯಿತು. ಇದರಲ್ಲಿ ಯಶಸ್ಸನ್ನು ಪಡೆದ ಭಾರತ ಎಲ್ಲ ರಾಷ್ಟ್ರಗಳ ಅಸಮಾಧಾನಕ್ಕೆ ಗುರಿಯಾಯಿತು. ಇದರಿಂದ ಬೆದರಿದ ಪಾಕಿಸ್ತಾನ ಚೀನಾದ ಸಹಕಾರದಿಂದ ಕೆಲವೇ ದಿನಗಳಲ್ಲಿ ತಾನು ಸಹ ಅಣ್ವಸ್ತ್ರ ಪರೀಕ್ಷೆ ನಡೆಸಿ ಸಮಸ್ಯೆಯ ಕಾವನ್ನು ಇನ್ನೂ ಹೆಚ್ಚಿಸಿತು. ಹುಚ್ಚಾಟಕ್ಕೆ ಹೆಸರಾಗಿರುವ ಪಾಕಿಸ್ತಾನದ ಈ ಕ್ರಮದಿಂದ ಅಮೆರಿಕಾ ಹಾಗೂ ಇಡೀ ಐರೋಪ್ಯ ಸಮುದಾಯ ಬೆಚ್ಚಿಬಿದ್ದವು. ಅಣ್ವಸ್ತ್ರ ಪರೀಕ್ಷೆ ನಡೆಸಿದ ಏಷ್ಯದ ಎರಡು ಬಲಾಢ್ಯ ರಾಷ್ಟ್ರಗಳನ್ನು ಬೆದರಿಸಲು ಅಮೆರಿಕಾ ಅನೇಕ ದಿಗ್ಬಂಧನ ಕ್ರಮ ಕೈಗೊಂಡಿತು. ಆದರೆ ಆರ್ಥಿಕವಾಗಿ ಬಲಗೊಳ್ಳುತ್ತಿದ್ದ ಭಾರತದ ಮೇಲೆ ಇಂಥ ಯಾವ ದಿಗ್ಭಂಧನಗಳು ಫಲಿಸಲಿಲ್ಲ. ಕೆಲವು ದಿನಗಳ ನಂತರ ಅನಿವಾರ್ಯವಾಗಿ ತಾವೇ ಹೇರಿದ ದಿಗ್ಭಂಧನಗಳನ್ನು ಹಿಂತೆಗೆದುಕೊಂಡವು.

ಇಪ್ಪತ್ತೊಂದನೆಯ ಶತಮಾನದಲ್ಲಿ ಅಮೆರಿಕಾ ಬಂದೂಕಿನ ನಳಿಕೆಯ ಮೂಲಕ ದೊಡ್ಡ ಶಕ್ತಿಯಾಗಿ ನಿರ್ಮಾಣವಾಗಿದ್ದರೇ ಇದೇ ಕಾಲಕ್ಕೆ ಮಾಹಿತಿ ತಂತ್ರಜ್ಞಾನದ ಅದ್ಭುತ ಶಕ್ತಿಯಾಗಿ ಭಾರತ ಅಮೆರಿಕಾಕ್ಕೆ ಸರಿಸಮಾನವಾಗಿ ಸವಾಲೆಸೆದು ನಿಂತಿತು. ಅಲ್ಲದೇ ಅಮೆರಿಕಾದಷ್ಟೇ ಬಲಿಷ್ಠ ಪ್ರಜಾರಾಜ್ಯ ವ್ಯವಸ್ಥೆ ಭಾರತದಲ್ಲಿ ನಡೆದು ಬರುತ್ತಿರುವುದರಿಂದ ಇದೊಂದು ಶಾಶ್ವತ ಜವಾಬ್ದಾರಿ ಹೊಂದಿದ ರಾಷ್ಟ್ರ ಎಂಬುದರಲ್ಲಿ ಅನುಮಾನವಿಲ್ಲ. ಇದನ್ನು  ಪ್ರಬಲವಾಗಿ ಜಾಗತಿಕ ರಾಷ್ಟ್ರಗಳು ನಂಬುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಈ ಕಾರಣದಿಂದ ಅಮೆರಿಕಾ ಭಾರತದೊಂದಿಗೆ ಸೌಹಾರ್ದ ಸಂಬಂಧಗಳನ್ನು ಹೊಂದಲು ಹೆಚ್ಚಿನ ಪ್ರಯತ್ನ ಪಡಲಾರಂಭಿಸಿತು. ಈವರೆಗೂ ಭಾರತದ ಬಗೆಗೆ ತಾನು ಹೊಂದಿರುವ ಧೋರಣೆಗಳನ್ನು ಪುನರ್ ವಿಮರ್ಶಿಸಿಕೊಳ್ಳುವ ಸಾಧ್ಯತೆಗಳನ್ನು ಅಮೆರಿಕಾ ಇತ್ತೀಚೆಗೆ ಮಾಡಿದೆ. ಆದ್ದರಿಂದ ಈ ದೇಶದ ಜಾಗತಿಕ ವಿಷಯಗಳನ್ನು ನಿರ್ವಹಿಸುವ ನಿರ್ಣಯಗಳಲ್ಲಿ ಗಣನೆ ತೆಗೆದುಕೊಂಡಿರುವ ಇಂಗ್ಲೆಂಡ್ ಹಾಗೂ ಅಸ್ಟ್ರೇಲಿಯಾದಷ್ಟೇ ಭಾರತವನ್ನು ಸಹ ಅಮೆರಿಕಾ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದೆ. ಜಿ-೮ರ ಗುಂಪಿನಲ್ಲಿ ಭಾರತವನ್ನು ಅಮೆರಿಕಾ ಯಾವ ಪ್ರತಿರೋಧವಿಲ್ಲದೆ ಸೇರಿಸಿಕೊಂಡಿದ್ದು ಇದಕ್ಕೆ ತಾಜಾ ಉದಾಹರಣೆಯಾಗಿದೆ. ೯/೧೧ರ ಕರಾಳ ಘಟನೆಯ ನಂತರವು ಅಮೆರಿಕಾ ದೇಶವು ಚಮತ್ಕಾರಿಕವಾಗಿ ಪ್ರಗತಿಗೊಂಡು ಮತ್ತೆ ಜಾಗತಿಕ ಬಲಾಢ್ಯ ಶಕ್ತಿಯಾಗಿ ಮೆರೆಯುತ್ತಿದೆ. ವಿಶ್ವಬ್ಯಾಂಕ್ ಹಾಗೂ ಅಂತಾ ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೂಲಕವು ಅಮೆರಿಕಾ ತನ್ನ ವ್ಯಾಪಾರಕ್ಕೆ ಸಂಬಂಧಿಸಿದ ಹಿತಾಸಕ್ತಿಯನ್ನು ನಿರಂತರವಾಗಿ ಕಾಯ್ದುಕೊಂಡು ಬಂದಿದೆ. ಜಿನೀವಾ, ದೋವಾ ಹಾಗೂ ಸಿಯಾಟಲ್‌ನಲ್ಲಿ ನಡೆದ ಆರ್ಥಿಕ ಶೃಂಗಸಭೆಗಳಲ್ಲಿ ತೃತೀಯ ಜಗತ್ತಿನ ರಾಷ್ಟ್ರಗಳ ಹಿತಾಸಕ್ತಿಯನ್ನು ಬಲಿ ಕೊಟ್ಟು ತನ್ನ ಲಾಭವನ್ನು ಕಾಪಾಡಿಕೊಂಡು ಬೆಳೆಸಿಕೊಳ್ಳುವ ಜಾಗತಿಕ ಶಕ್ತಿಯಾಗಿ ಮುಂದುವರಿಯುವ ಪ್ರಯತ್ನದಲ್ಲಿ ತೀವ್ರತರವಾಗಿ ತೊಡಗಿಕೊಂಡಿದೆ.

ಅಮೆರಿಕಾದ ಆಡಳಿತ ೨೦೦೩ರಲ್ಲಿ ಇರಾಕ್ ಮೇಲೆ ಎರಡನೆಯ ಗಲ್ಫ್ ಕದನಕ್ಕೆ ನಾಂದಿ ಹಾಡಿತು. ಚೀನ, ಜರ್ಮನಿ, ರಷ್ಯಾ ಹಾಗೂ ಫ್ರಾನ್ಸ್ ದೇಶಗಳು ಅಮೆರಿಕಾದ ದುರಾಕ್ರಮಣದ ನೀತಿಯನ್ನು ವಿರೋಧಿಸಿದವು. ಆದರೆ ಇಂಗ್ಲೆಂಡ್ ಹಾಗೂ ಸ್ಪೇನ್ ದೇಶಗಳ ಸಹಾಯದಿಂದ ನಿರಂಕುಶಾಧಿಕಾರಿ ಸದ್ದಾಂ ಹುಸೇನ್‌ನನ್ನು ಹೊಸಕಿ ಹಾಕಿತು. ೨೦೦೦ರಲ್ಲಿ ಅಧಿಕಾರಕ್ಕೆ ಬಂದ ಜಾರ್ಜ್ ವಾಕರ್ ಬುಷ್ ತನ್ನ ಆಡಳಿತಾವಧಿಯ ಮೊದಲ ಹಂತದಲ್ಲಿ ಯುದ್ಧಕ್ಕಾಗಿಯೇ ತನ್ನ ಶಕ್ತಿಯನ್ನು ಮೀಸಲಿಟ್ಟಂತಾಯಿತು. ಆದರೂ ಇಂಥ ಅನಿವಾರ್ಯ ಪ್ರಸಂಗಗಳು ತಲೆದೋರಿದ ಸನ್ನಿವೇಶಗಳನ್ನು ಅರ್ಥೈಸಿಕೊಂಡ ಅಮೆರಿಕಾದ ಜನತೆ ಮತ್ತೊಂದು ಅವಧಿಗೆ ಬುಷ್‌ನನ್ನೇ ಬಹುಮತದಿಂದ ಆಯ್ಕೆ ಮಾಡಿತು. ೨೦೦೪ರಲ್ಲಿ ಎರಡನೆಯ ಅವಧಿಗೆ ಬುಷ್ ಹೊಸ ವಿಚಾರಗಳೊಂದಿಗೆ ಹೊಸ ಆಡಳಿತ ನಿರ್ವಹಿಸುವಲ್ಲಿ ಅಣಿಯಾದನು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಭಯೋತ್ಪಾದನೆಯ ನಿಗ್ರಹವೇ ತನ್ನ ಮುಖ್ಯ ಉದ್ದೇಶವೆಂದು ಸಾರಿದ ಬುಷ್ ಆಡಳಿತಾಂಗ ೨೦೦೪ರಲ್ಲಿ ನಡೆದ ಮಹಾಚುನಾವಣೆಯಲ್ಲಿ ಯಶಸ್ವಿಯನ್ನು ಪಡೆಯಿತು. ಡೆಮಾಕ್ರಾಟಿಕ್ ಪಕ್ಷದ ಅಲ್-ಗೋರ್‌ನನ್ನು ಸೋಲಿಸಿ ಮತ್ತೆ ರಾಷ್ಟ್ರಾಧ್ಯಕ್ಷನಾಗಿ ಜಾರ್ಜ್ ಬುಷ್ ಜಯ ಗಳಿಸಿದನು. ಎರಡನೆಯ ಅವಧಿಗೆ ಅಧ್ಯಕ್ಷನಾಗಿ ಆಯ್ಕೆ ಆದ ಜಾರ್ಜ್ ಬುಷ್ ವಿದೇಶಿ ನೀತಿಗಳಿಗೆ ಹೆಚ್ಚಿನ ಮಹತ್ವ ನೀಡಿದ. ತನ್ನ ಆಡಳಿತಾವಧಿಯಲ್ಲಿ ಮುಸ್ಲಿಂ ಮೂಲಭೂತವಾದ ದೊಡ್ಡ ತಲೆ ನೋವಾಗಿ ಪರಿಣಮಿಸಿತು. ಇರಾಕ್ ದೇಶದ ಸರ್ವಾಧಿಕಾರಿ ಸದ್ದಾಂ ಹುಸೇನ್ ಅಮೆರಿಕಾದ ಕಡು ವೈರಿಯಾಗಿ ಬಿಂಬಿತನಾದ. ಆತನನ್ನು ತೊಲಗಿಸಲು ಅಮೆರಿಕಾ ಹಾಗೂ ಇಂಗ್ಲೆಂಡ್ ಜೊತೆಗೂಡಿ ಇರಾಕ್ ಮೇಲೆ ದಾಳಿಗೈದು ಸದ್ದಾಂನನ್ನು ಪದಚ್ಯುತಿಗಳಿಸಿದವು. ಕೆಲವು ತಿಂಗಳ ನಂತರ ಆತನನ್ನು ಸೆರೆ ಹಿಡಿದು ಗಲ್ಲಿಗೇರಿಸಿ ಆತನ ರಕ್ತಸಿಕ್ತ ಇತಿಹಾಸವನ್ನು ಕೊನೆಗೊಳಿಸಲಾಯಿತು. ೯/೧೧ರ ಘಟನೆಗೆ ಕಾರಣವಾದ ಒಸಾಮ ಬಿನ್ ಲಾಡೆನ್‌ನನ್ನು ಬೇಟೆಯಾಡಲು ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿ ಅಲ್ಲಿದ್ದ ತಾಲೀಬಾನ್ ಸರಕಾರವನ್ನು ಕಿತ್ತೊಗೆಯಲಾಯಿತು. ಆದರೆ ಲಾಡೆನ್ ಈವರೆಗೂ ಅಮೆರಿಕಾಕ್ಕೆ ಸಿಗಲಿಲ್ಲ. ಅಂತಾರಾಷ್ಟ್ರೀಯ ಜಗಳಗಳಿಗೆ ಸ್ವಲ್ಪ ವಿರಾಮ ನೀಡಿದ ಬುಷ್ ಆಡಳಿತ ವೈಜ್ಞಾನಿಕ ಪ್ರಗತಿಯನ್ನು ಮುಂದುವರೆಸಿತು. ಮಂಗಳನ ಅಂಗಳದ ಮೇಲೆ ತನ್ನ ಗಗನಯಾನಿಗಳನ್ನು ಯಶಸ್ವಿಯಾಗಿ ಇಳಿಸಲು ನಾಸಾ ಫಲಪ್ರದವಾಯಿತು. ಅಲ್ಲದೇ ಜಾಗತಿಕ ಮಟ್ಟದಲ್ಲಿ ಏರುತ್ತಿರುವ ಬಿಸಿ ವಾತಾವರಣದ(ಗ್ಲೋಬಲ್ ವಾರ್ಮ್‌) ಬಗೆಗೆ ಎಲ್ಲ ದೇಶಗಳನ್ನು ಅಮೆರಿಕಾ ಗಂಭೀರವಾಗಿ ಎಚ್ಚರಿಸಿತು. ಬುಷ್ ಆಡಳಿತವು ತನ್ನ ಕೊನೆಯ ದಿನಗಳಲ್ಲಿ ಭಾರತದ ಜೊತೆ ಹೈಡ್ ನಿಬಂಧನೆಗೊಳಪಟ್ಟ ಅಣು ಒಪ್ಪಂದವನ್ನು ಮಾಡಿಕೊಂಡಿತು. ಇದಕ್ಕೆ ಭಾರತದಲ್ಲಿ ಭಾರೀ ವಿರೋಧ ಕಂಡುಬಂದರೂ ಒಪ್ಪಂದಕ್ಕೆ ಎರಡು ದೇಶಗಳು ಸಹಿ ಹಾಕಿದವು.

ಇರಾಕ್ ಮೇಲೆ ೨೦೦೬ರಲ್ಲಿ ಅಮೆರಿಕಾ ತನ್ನ ಮಿಲಿಟರಿ ದಾಳಿ ಮಾಡುವುದರ ಮೂಲಕ ಎರಡನೆಯ ಗಲ್ಫ್ ಯುದ್ಧ ಪ್ರಾರಂಭವಾಯಿತು. ಇದರಲ್ಲಿ ಅಮೆರಿಕಾದ ಮೈತ್ರಿ ಪಡೆ ನಿರ್ಣಯಾತ್ಮಕವಾಗಿ ಗೆಲುವು ಪಡೆದು ಸರ್ವಾಧಿಕಾರಿ ಸದ್ದಾಂ ಹುಸೇನ್‌ನನ್ನು ಗಲ್ಲಿಗೇರಿಸಲಾಯಿತು. ಆದರೆ ಯುದ್ಧದ ನಂತರ ಅಮೆರಿಕಾದ ಸೈನ್ಯ ಇರಾಕ್‌ನಲ್ಲಿಯೇ ಉಳಿಯಿತು. ಅರಬ್ ರಾಷ್ಟ್ರಗಳಲ್ಲಿನ ತೈಲ ಭಾವಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಮೆರಿಕಾ ತನ್ನ ಸೈನ್ಯ ನೆಲೆಯನ್ನು ಶಾಶ್ವತವಾಗಿ ಸ್ಥಾಪಿಸುತ್ತಿದೆ ಎಂಬ ತೀವ್ರವಾದ ಟೀಕೆಗೆ ಒಳಗಾಗಬೇಕಾಯಿತು. ಆದ್ದರಿಂದ  ಇಂಥ ಸಂಶಯಗಳಿಗೆ ತೆರೆ ಎಳೆಯಲು ಅಮೆರಿಕಾ ಸಮ್ಮತಿ ಪತ್ರಕ್ಕೊಂದು ಸಹಿ ಹಾಕಿ ೨೦೧೧ರ ವೇಳೆಗೆ ತನ್ನ ಎಲ್ಲ ಸೈನ್ಯಪಡೆಯನ್ನು ವಾಪಸ್ಸು ಕರೆಯಿಸಿಕೊಳ್ಳುವುದಾಗಿ ಘೋಷಣೆ ಮಾಡಿತು.