೧೯ನೆಯ ಶತಮಾನದಲ್ಲಿ ಅಮೆರಿಕಾ ಕಂಡುಕೊಂಡ ಹೊಸ ಹಾದಿಗಳು

ಯುರೋಪ್ ಖಂಡದ ಬೇರೆ ಬೇರೆ ಪ್ರದೇಶಗಳಲ್ಲಿ ರಾಜಕೀಯ ಹಾಗೂ ಧಾರ್ಮಿಕ ಕಾರಣಗಳಿಗಾಗಿ ತಿರಸ್ಕಾರಕ್ಕೆ ಒಳಗಾದ ಕೆಲವು ಜನರು ಚಿಕ್ಕಗುಂಪುಗಳಲ್ಲಿ ತಮ್ಮನ್ನು ಉಳಿಸಿಕೊಳ್ಳಲು ತಮಗರಿವಿಲ್ಲದ ಹಾಗೂ ದೂರ ಪ್ರದೇಶಗಳಿಗೆ ಒತ್ತಾಯಪೂವರ್ಕ ವಲಸೆ ಹೋದರು. ಈ ಸಮಯದಲ್ಲಿ ಕೆಲವು ಸ್ವಾರ್ಥ ಮನೋಭಾವನೆಯ ವ್ಯಾಪಾರಿಗಳು ತಮ್ಮ ಲಾಭಕ್ಕಾಗಿ ನೂರಾರು ಸಂಖ್ಯೆಯ ಜನರನ್ನು ಕೊಲಂಬಸ್ ಮತ್ತು ಅಮೇರಿಗೊ ವೆಸ್‌ಪುಸಿ ಕಂಡುಹಿಡಿದ (ಹೊಸಜಗತ್ತು) ಭೂಪ್ರದೇಶದಲ್ಲಿ  ಒತ್ತಾಯಪೂರ್ವಕವಾಗಿ ಹಿಡಿದು ತಂದು ಬಿಟ್ಟರು. ದಾರಿತಪ್ಪಿದ ದಾರಿಹೋಕರಾಗಿದ್ದ ಈ ನೂರಾರು ಜನರು ತಮ್ಮ ನವೀನ ಬದುಕನ್ನು ಹೊಸ ಜಗತ್ತಿನಲ್ಲಿಯೇ ಪ್ರಾರಂಭಿಸಿ ನೂರಾರು ವಷರ್ಗಳ ನಂತರ ತಮ್ಮ ರಕ್ಷಣೆಗಾಗಿಯೇ ಸ್ವಯಂ ಒಂದುಗೂಡಿ ತಮ್ಮದೇ ಆದ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ವಲಸೆಗಾರರು ಯಶಸ್ವಿಯಾದರು. ಆಕ್ರಮಣನೀತಿ, ಕೊಲೆಸುಲಿಗೆ ಹಾಗೂ ಬಂದೂಕಿನಿಂದ ಈಗಾಗಲೇ ಸಾವಿರಾರು ವರ್ಷಗಳಿಂದಲೂ ಇಲ್ಲಿದ್ದ ಸ್ಥಳೀಯ ಇಂಡಿಯನ್‌ರನ್ನು ನಿಗರ್ತಿಕ ರನ್ನಾಗಿ ಮಾಡಿ ತಾವು ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು. ಮೊದಲಿನಿಂದಲೂ ಆಕ್ರಮಣ ಪ್ರವೃತ್ತಿಗೆ ಹಾಗೂ ಹಠದ ಮೂಲಕ ಹಿಡಿದದ್ದನ್ನು ಸಾಧಿಸುವ ಛಲಕ್ಕೆ ಬಿದ್ದಿದ್ದ  ಐರೋಪ್ಯದಿಂದ ಬಂದಿದ್ದ ವಲಸೆ ಜನಾಂಗವು ಕೆಟ್ಟ ಸಾಂಪ್ರದಾಯಿಕ ಚೌಕಟ್ಟನ್ನು ಹೊಂದಿದ ಸಮಾಜವನ್ನು ಅಮೆರಿಕಾದ ಭೂಪ್ರದೇಶದಲ್ಲಿ ನಿರ್ಮಾಣ ಮಾಡಿದರು. ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ರಚನೆಗೊಂಡಿದ್ದ ಅಮಾನವೀಯ ಕೃತ್ಯಗಳನ್ನು ತಡೆಗಟ್ಟುವ ಪ್ರತಿರೋಧದ ಕಾರ್ಯಗಳು ಸಹ ವಲಸೆಗಾರರಲ್ಲಿ ಪ್ರಜ್ಞಾವಂತರಾಗಿದ್ದ ಕೆಲವರಿಂದ ನಿರಂತರವಾಗಿ ನಡೆದುಕೊಂಡು ಬಂದಿತು. ಅಬ್ರಹಾಂ ಲಿಂಕನ್‌ನ ಕಾಲದಲ್ಲಿ ಶುರುವಾದ ಸಾಮಾಜಿಕ ಶುದ್ದೀಕರಣ ಚಳವಳಿ ಕಾಲಕಾಲಕ್ಕೆ ಮುಂದುವರೆಯುತ್ತ ಈವರೆಗೂ ಮುಂದುವರೆದು ಬಂದಿದೆ. ಲಿಂಕನ್ ಕಾಲದ ರಾಜಕೀಯದ ಬದಲಾವಣೆಗಳಿಂದ ತಮ್ಮನ್ನು ತಾವು ಪುನರ್ ರೂಪಿಸಿಕೊಳ್ಳುವ ಹಾಗೂ ಸಾಮಾಜಿಕ ಸಮಾನ ಹಕ್ಕುಗಳನ್ನು ಎಲ್ಲ ವಲಯಗಳಲ್ಲೂ ಜಾರಿಗೆ ತರುವ ಹಿನ್ನೆಲೆ ಇಟ್ಟುಕೊಂಡು ಸಾಂಸ್ಕೃತಿಕವಾಗಿ ಭಾರೀ ಬದಲಾವಣೆಗಳಿಗೆ ಅಮೆರಿಕಾದಲ್ಲಿನ ವಲಸೆ ಜನಾಂಗವು ಸಹ ತೆರೆದುಕೊಂಡಿತು. ಸಮಾಜ, ಸಾಹಿತ್ಯ, ಇತಿಹಾಸ, ಕಲೆ, ಶಿಕ್ಷಣ, ಮಾಧ್ಯಮ ಹಾಗೂ ದುಡಿಮೆಯ ಕ್ಷೇತ್ರಗಳಲ್ಲಿ ಪ್ರಗತಿಪರರು ಹೊಸರೂಪದ ಚಳವಳಿಗಳನ್ನು ಹುಟ್ಟು ಹಾಕಿದರು. ಸಂಪ್ರದಾಯಬದ್ಧ ಸಾಮಾಜಿಕ ವ್ಯವಸ್ಥೆಯ ಬದಲಾವಣೆಯ ಹೊರತು ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಹೊಂದಿರುವ ಸಮಾಜವನ್ನು ಹೊಂದುವುದು ವ್ಯಥರ್ವೆಂದು ಪ್ರಗತಿಪರರು ಪ್ರತಿಪಾದಿಸಿದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಮೂಲಕ ಕೈಗೊಂಡ ಬರವಣಿಗೆ ಹಾಗೂ ಭಾಷಣಗಳು ಪ್ರಗತಿಪರರಿಂದ ವ್ಯಕ್ತವಾಗಿ ಅಮೆರಿಕಾದಲ್ಲಿ ದೃಢವಾದ ಆಗಾಧತೆಯಿಂದ    ಕೂಡಿದ ವಿಚಾರಕ್ರಾಂತಿ ಹುಟ್ಟಿಕೊಂಡಿತು.

ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಮಾನ ಅವಕಾಶಗಳ ಸಂಬಂಧವಾಗಿ ಸಾಮಾಜಿಕ ಬದಲಾವಣೆ ಗಳನ್ನು ಸಮಾಜ ವಿಜ್ಞಾನಿಗಳು ಪ್ರತಿಪಾದಿಸಿದರು. ಅವರಲ್ಲಿ ಮುಖ್ಯವಾಗಿ ಲೆಸ್ಟರ್ ಫ್ರಾಂಕ್ ವಾಡ್ರ್ ಹಾಗೂ ಹೆನ್ರಿ ಜಾಜರ್ ಎಂಬ ಸಮಾಜ ವಿಜ್ಞಾನಿಗಳು ಅಮೆರಿಕಾದ ಎಲ್ಲ ರಂಗ ಗಳಲ್ಲಿನ ಮುಂದಿನ ದಿನಗಳ ಬಗೆಗೆ ಚಚೆರ್ ಪ್ರಾರಂಭಿಸಿದರು. ಸಮಾಜ ಹಾಗೂ ಅದರಲ್ಲಿನ ವ್ಯವಸ್ಥೆ ಎಂಬುದು ಚಲನರಹಿತವಾದದಲ್ಲ. ಅದರಲ್ಲಿ ಆಗುವ ಬದಲಾವಣೆಗಳು ಪ್ರಕೃತಿ ಯಲ್ಲಿ ಅದೃಷ್ಟಗಳನ್ನು ಮಾತ್ರ ನಂಬಿ ನಡೆಯುವಂತದ್ದಲ್ಲ ಎಂಬ ಮುಖ್ಯ ವಿಚಾರವನ್ನು ಚಚೆರ್ಗೆ ಅಣಿಗೊಳಿಸಿದರು. ಇದು ಮೂಲತಃ ಚಾಲ್ಸ್ರ್ ಡಾವಿರ್ನ್‌ನ ‘‘ಆಯ್ಕೆ’’ ವಿಧಾನ ವನ್ನು ಪ್ರಶ್ನೆಗೊಳಪಡಿಸಿತು. ಮಾನವನು ತನ್ನ ಬುದ್ದಿಶಕ್ತಿಯಿಂದ ಏನೆಲ್ಲ ಬದಲಾವಣೆಗಳನ್ನು ತರಲು ಸಾಧ್ಯವೆಂಬುದು ಇವರೆಲ್ಲರ  ಪ್ರತಿಪಾದನೆಯ ಒಟ್ಟು ತಿರುಳಾಗಿತ್ತು. ಅನಕ್ಷರತೆ, ಅಸಮಾನತೆ ಹಾಗೂ ಬಡತನಗಳಂತಹ ಕ್ರೂರ ರಚನೆಗಳಿಗೆ ಶಿಕ್ಷಣ ಕೊಡುವುದರ ಮೂಲಕ ಸಮಗ್ರ ಬದಲಾವಣೆಗೆ  ಸಮಾಜವು ಸಿದ್ಧವಾಗಬೇಕೆಂದು ಅಭಿಪ್ರಾಯಿಸಿದರು. ಅಂತಃಕಲಹದ ದಿನಗಳ ನಂತರ ಅಮೆರಿಕಾದಲ್ಲಿ ಸಾಮಾಜಿಕ ಅಸಮಾನತೆಗಳು ಕುದಿಯಲಾರಂಭಿಸಿದವು. ಕಠಿಣ ಕ್ರಮಗಳನ್ನು ಕೈಗೊಂಡರೂ ಸಮಸ್ಯೆಗಳು ತಹಬಂದಿಗೆ ಬರಲಿಲ್ಲ. ‘ಸಾಮಾಜಿಕ ನ್ಯಾಯ’ದ ಪ್ರಶ್ನೆಗಳು ಹುಟ್ಟಿಕೊಂಡವು. ಇವುಗಳಿಗೆಲ್ಲ ಪರಿಹಾರವೆಂದರೆ ಕೆಲವರೇ ಹಿಡಿತದಲ್ಲಿರುವ ಭೂಮಾಲೀಕತ್ವವನ್ನು ಕಸಿದುಕೊಳ್ಳುವುದು ಇಲ್ಲವೇ ಹೆಚ್ಚಿನ ತೆರಿಗೆಗಳನ್ನು ಹಾಕುವುದರ ಮೂಲಕ ತಾರತಮ್ಯವನ್ನು ಹೋಗಲಾಡಿಸುವುದು. ಕೃಷಿ-ಕೂಲಿ-ಕಾಮಿರ್ಕರ ವೇತನಗಳನ್ನು ಹೆಚ್ಚು-ಕಡಿಮೆ ಮಾಡುವುದರ ಮೂಲಕ ಸಾಮಾಜಿಕ ಅಸಮಾನತೆಗಳನ್ನು ಹೆಚ್ಚಿಸುವ ಹಾಗೂ ನಿರುದ್ಯೋಗಕ್ಕೆ ರಾಜಮಾಗರ್ ಕಲ್ಪಿಸುವ ಸರಕಾರಗಳ ಕ್ರಮಗಳನ್ನು ಚಿಂತಕರು ಪ್ರಬಲವಾಗಿ ವಿರೋಧಿಸಿದರು. ಇದೇ ಕಾಲಕ್ಕಿದ್ದ ಇನ್ನೊಬ್ಬ ಸಮಾಜ ಚಿಂತಕ ಬೆಲ್ಲಮಿಯು ‘ಸಮಾನತೆ’ ಎಂಬ ಕಾದಂಬರಿ ಬರೆದು ಪ್ರಕಟಿಸಿದ. ನಿರ್ಬಂಧವಿಲ್ಲದ ಸಮಾಜ ಆದಶರ್ ರಾಜ್ಯವನ್ನು ಕಟ್ಟಿಕೊಡುತ್ತದೆ. ಇದು ವಿಶ್ವಾಸ ಮತ್ತು ನೈತಿಕ ತತ್ವಗಳ ಮೇಲೆ ನಿಂತಿರುತ್ತದೆ ಎಂದು ಪ್ರತಿಪಾದಿಸಿದ. ಅನೈತಿಕ ಮಾಗರ್ಗಳನ್ನು ತೊಡೆದು ಹಾಕಿ ಸಮಾಜ ಸೇವೆ, ಆಥಿರ್ಕ ಸ್ವಾವಲಂಬನೆ ಹಾಗೂ ಯಾವುದೇ ದಂಡು-ದಳಪತಿಗಳಿಲ್ಲದ ಸಮಾಜದ ಕಲ್ಪನೆಯನ್ನು ಪ್ರಚಾರಪಡಿಸಿದ. ‘ಆದಶರ್ ರಾಷ್ಟ್ರೀಯ’ವಾದದ ತತ್ವದಡಿಯಲ್ಲಿನ ಸಮಾಜ ಹಾಗೂ ರಾಷ್ಟ್ರ ಎಲ್ಲರ ಹಿತಚಿಂತನೆ ಮಾಡಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಯಿಸಿದ.

ಅಮೆರಿಕಾದ ಜನತೆಯ ಕನಸಿನ ನಗರ ಚಿಕಾಗೋ ಪಟ್ಟಣದಲ್ಲಿರುವ ಕೈಗಾರಿಕೆಗಳ ಕುರಿತು ವೆಬ್ಲನ್ ಎಂಬ ಚಿಂತಕ ಎರಡು ವಿಮರ್ಶಾ ಕೃತಿಗಳನ್ನು ಬರೆದ. ದಿ ಥಿಯರಿ ಆಫ್ ಲಿಸರ್ ಕ್ಲಾಸ್ ಹಾಗೂ ದಿ ಥಿಯರಿ ಆಫ್ ಬಿಸಿನೆಸ್ ಎಂಟರ್‌ಪ್ರೈಸಸ್ ಎಂಬ ಕೃತಿಗಳು ಅಮೆರಿಕಾ ದಲ್ಲಿ ಹೊಸ ಬಗೆಯ ಚಿಂತನೆಗಳನ್ನು ಹುಟ್ಟು ಹಾಕಿದವು. ಇವು ಚಿಕಾಗೋ ಪಟ್ಟಣದಲ್ಲಿದ್ದ ದನದ ಮಾಂಸದ ಕಾಖಾರ್ನೆಗಳಲ್ಲಿ ನಡೆಯುತ್ತಿದ್ದ ಕಾಮಿರ್ಕರ ಶೋಷಣೆಯ ಕುರಿತು ಆಘಾತಕರವಾದ ಮಾಹಿತಿಗಳನ್ನು ಹೊರಗೆಡವಿದವು. ಯಾವುದೇ ರೀತಿ ಕಷ್ಟಪಡದೇ ವಿಲಾಸಿಗಳಾಗಿ ಮೆರೆಯುತ್ತಿದ್ದ ಮಾಲೀಕ ವಗರ್ ಹಾಗೂ ವ್ಯಾಪಾರಿಗಳನ್ನು ಸಮಾಜದಲ್ಲಿ ಬದುಕಲು ಅನಹರ್ ವ್ಯಕ್ತಿಗಳೆಂದು ಟೀಕಿಸಿ ಸಮಥಿರ್ಸಿಕೊಂಡನು. ಯುರೋಪಿನ ಛಾಯೆ ಯಿಂದ ಹೊರಬರಲು ಪ್ರಗತಿಪರ ಅಮೆರಿಕಾದಲ್ಲಿ ಹಿಂದೆ ಅಸ್ತಿತ್ವದಲ್ಲಿದ್ದ ಮೂಲಸಿದ್ಧಾಂತಗಳ ಬಗೆಗೆ ಚಚೆರ್ಗಳು ಹುಟ್ಟಿಕೊಂಡವು. ಮಾನವಶಾಸ್ತ್ರಜ್ಞರು ಹಾಗೂ ಇತಿಹಾಸಕಾರರು ಇಂಥ ತತ್ವಗಳನ್ನು ಬೆಳೆಸಿದರು. ಜಾನ್ ಫಿಸ್ಕ್ ಎಂಬ ಇತಿಹಾಸಕಾರನೊಬ್ಬ ಅಮೆರಿಕಾನ್ ವಾಸಿಗಳು ಮೂಲದಲ್ಲಿ ಜಮರ್ನಿಯ ಪ್ರದೇಶದಲ್ಲಿನ ‘ಬುಡಕಟ್ಟುಗಳು’ ಎಂದು ಪ್ರತಿಪಾದಿಸಿ ಇವು ಕಾಲಕ್ರಮದಲ್ಲಿ ಅಮೆರಿಕಾ ಖಂಡಗಳ ಕಡೆಗೆ ವಲಸೆ ಬಂದಿರುವ ಬಗೆಗೆ ವಿವರಿಸಿದ. ಇದನ್ನು ಇನ್ನೂ ಸ್ವಲ್ಪ ವಿಸ್ತರಿಸಿದ ಹಬರ್ಟ್ರ್ ಬಾಕ್ಸ್‌ಟರ್ ಆಡಮ್ಸ್‌ನು ಯುರೋಪಿನಿಂದ ಬಂದಿರುವ ಆಂಗ್ಲೋ-ಸಾಕ್ಸನ್ ಜನಾಂಗವು ಸ್ವಾತಂತ್ರ್ಯ ಹಾಗೂ ಸಮಾನತೆಗಳನ್ನು ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುವಂತವುಗಳೆಂದು ಅಭಿಪ್ರಾಯಿಸಿದ. ಹೀಗಾಗಿ  ಅಮೆರಿಕಾದ ಜನಾಂಗವು ಸಮಾನತೆಯ ಸಾಮಾಜಿಕ ಸಂಸ್ಥೆಗಳ ಹುಟ್ಟಿನ ಬಗೆಗೆ ಪ್ರತಿಪಾದಿಸುವುದು ಆಶ್ಚರ್ಯಕರ ವಿಷಯವಲ್ಲವೆಂದು ಹೇಳಿದನು. ಆದರೆ ಫ್ರೆಡರಿಕ್ ಜಾಕ್ಸನ್ ಟನರ್ರ್ ಎಂಬ ವಿದ್ವಾಂಸನು ಜಮರ್ನಿಯ ಮೂಲಸಂಬಂಧದ ಬಗೆಗೆ ಇದ್ದ ಅಭಿಪ್ರಾಯಗಳನ್ನು ಪ್ರಶ್ನಿಸಿ ಅಮೆರಿಕಾ ಸಮಾಜ ರೂಪಿಸುವ ಕ್ರಿಯೆಗಳು ಅಮೆರಿಕಾನ್ ರಿಂದಲೇ ಆಗಿರುವಂತವು ಎಂದು ಮಿಶ್ರಜನಾಂಗವನ್ನು ಸಮಥಿರ್ಸಿಕೊಂಡನು. ಸ್ಥಳೀಯವಾಗಿ ಇದ್ದಂತಹ ಬುಡಕಟ್ಟು ಜನಾಂಗಗಳೇ ಅಮೆರಿಕಾವನ್ನು ಸಹ ರೂಪಿಸಿವೆ ಎಂದು ಪ್ರತಿಪಾದಿಸಿದನು.  ಕೊಲಂಬಿಯಾ ವಿಶ್ವವಿದ್ಯಾಲಯ ಜೇಮ್ಸ್ ಹಾವಿರ್ ರಾಬಿನ್‌ಸನ್ ಇತಿಹಾಸದ ಬಗೆಗೆ ವ್ಯಾಖ್ಯಾನ ನೀಡುತ್ತ ‘ಇತಿಹಾಸ, ಅಂದರೆ ಕೇವಲ ರಾಜ ರಾಣಿಯರ ಹಾಗೂ ದಂಡನಾಯಕರ ಸಾಹಸಗಾಥೆಯ ಕಟ್ಟುಗಳ ಸಂಗ್ರಹಣೆ ಮಾತ್ರವಲ್ಲ. ಅದು ನಿತ್ಯ ಕಷ್ಟಪಡುತ್ತಿರುವ ಜನರ ಇತಿಹಾಸವಾಗಿ ಪರಿವರ್ತನೆಗೊಳ್ಳಬೇಕಾಗಿರುವ ಅವಶ್ಯಕತೆಯ’ ಬಗೆಗೆ ಅಭಿಪ್ರಾಯಿಸಿದ. ಜನಸಾಮಾನ್ಯ ವರ್ಗವೇ ಸಾಮಾಜಿಕ ಬದಲಾವಣೆಗೆ ನಾಂದಿಗೀತೆ ಹಾಡುವುದು. ಅದು ಕೇವಲ ಇಂಥ ವರ್ಗಗಳಿಂದ ಮಾತ್ರ ಸಾಧ್ಯವೆಂದು ವಿವರಿಸಿದ. ೨೦ನೆಯ ಶತಮಾನದಲ್ಲಿದ್ದ ಅಮೆರಿಕಾದ ಪ್ರಸಿದ್ಧ ಇತಿಹಾಸಕಾರರಾದ ಚಾಲ್ಸ್ರ್ ಬಿಯಡ್ರ್ ಹಾಗೂ ಕಾಲ್ರ್ಬೆಕರ್ ಅವರು ಸಮಕಾಲೀನ ಸಮಾಜದ ಅಗತ್ಯಗಳನ್ನು ಅರಿತುಕೊಳ್ಳಲು ನಮಗೆ ಇತಿಹಾಸದ ಜ್ಞಾನ ಹಾಗೂ ತಿಳುವಳಿಕೆ ಅವಶ್ಯಕವೆಂದು ಪ್ರತಿಪಾದಿಸಿದರು. ಕಾರಣ ಪ್ರತಿ ವಿಚಾರವನ್ನು ಜಾರಿಗೆ ತರಲು ನಮಗೆ ಇತಿಹಾಸದ ಪಾಠ ಅವಶ್ಯಕವೆಂದು ಮನಗಂಡರು. ಪ್ರಕೃತಿ ಹಾಗೂ ಮನುಷ್ಯರು ಪರಸ್ಪರ ಬೆರೆತು ಮಾಪಾರ್ಡುತ್ತ ಹೋಗುವ ಕ್ರಿಯೆ ಇತಿಹಾಸ. ಹೀಗಾಗಿ ಇತಿಹಾಸದ ನಿಮಾರ್ಣವೆನ್ನುವುದು ವತರ್ಮಾನದ ಘಟನೆಗಳ ಹಿನ್ನೆಲೆಯಲ್ಲಿ ಚರಿತ್ರೆಕಾರನಿಂದ ರಚನೆಯಾಗುತ್ತ ಹೋಗುವ ಒಂದು ದೀರ್ಘಕಾಲೀನ ಪ್ರಕ್ರಿಯೆ ಎಂದು ಪ್ರತಿಪಾದಿಸಿದರು. ಒಟ್ಟಾರೆ ಅಮೆರಿಕಾದ ವತರ್ಮಾನವು ಇತಿಹಾಸವನ್ನು ಪರಿಗಣಿಸುವ ಅಥವಾ ತಿಳಿಯುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಿಸಿದರು. ಇತಿಹಾಸವೆನ್ನುವುದು ಆಯಾ ಕಾಲದ ನೋವು-ನಲಿವುಗಳನ್ನು ಹೇಳಿರುವಂಥದ್ದು. ಹೀಗಾಗಿ ನಾವು ನಮ್ಮ ವತರ್ಮಾನಕ್ಕೆ ಜವಾಬ್ದಾರರು. ಅಮೆರಿಕಾದ ಪ್ರಸ್ತುತ ಸಮಾಜ ಅನೇಕ ಶೋಷಣೆಗಳಿಂದ ತುಂಬಿದ್ದು ಅದರ ಶುದ್ದೀಕರಣದ ಅವಶ್ಯಕತೆಯ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಘಟಿಸುವ ಕ್ರಿಯೆಗಳನ್ನು ಪರಿಗಣಿಸಿ ಇತಿಹಾಸದ ವ್ಯಾಖ್ಯಾನಗಳನ್ನು ನೀಡಿದರು.

ಜಾನ್ ಡ್ಯೂಯಿ ಹಾಗೂ ಆತನ ಪತ್ನಿ ಚಿಕಾಗೋ ನಗರದಲ್ಲಿ ಸ್ಥಾಪಿಸಿದ ಹೊಸ ಶಿಕ್ಷಣ ಪದ್ಧತಿ ಅಮೆರಿಕಾದಲ್ಲಿ ಹೊಸ ಬದಲಾವಣೆಗಳನ್ನು ತಂದಿತು. ಡ್ಯೂಯಿಯು ತನ್ನ ‘ದಿ ಸ್ಕೂಲ್ ಆ್ಯಂಡ್ ದ ಸೊಸೈಟಿ’ ಎಂಬ ಪುಸ್ತಕದಲ್ಲಿ  ಆ ಕಾಲದ ಅಮೆರಿಕಾದಲ್ಲಿದ್ದ ಶಿಕ್ಷಣ ಪದ್ಧತಿಯ ಬಗೆಗೆ ವಿವರಿಸಿದ್ದಾನೆ. ಶಿಕ್ಷಣವು ಬದಲಾಗುತ್ತಿರುವ ಸಮಾಜ ಹಾಗೂ ಪ್ರಕ್ರಿಯೆಗಳನ್ನು ತಿಳಿದುಕೊಳ್ಳಲು ಅವಶ್ಯಕವಾಗಿ ಬೇಕೆ ಬೇಕಾಗುತ್ತದೆ ಎಂದು ಪ್ರತಿಪಾದಿಸಿದ. ಎಲ್ಲ ಜೀವಿಗಳಂತೆ ಮನುಷ್ಯನ ಮನಸ್ಸು ವಿಕಾಸ ಗೊಳ್ಳುತ್ತ ಹೋಗುತ್ತಿರುತ್ತದೆ. ಹೀಗಾಗಿ ಯಾವುದು ಒಳ್ಳೆಯದು/ಕೆಡಕು ಎಂಬುದನ್ನು ಅರಿತುಕೊಳ್ಳಲು ಸರಿಯಾದ ಶಿಕ್ಷಣ ಬೇಕಾಗುತ್ತದೆ. ಆಯ್ಕೆ ಮಾಡಿಕೊಳ್ಳು ವುದು ಅವಕಾಶವನ್ನು ಸೃಷ್ಟಿಸಿಕೊಳ್ಳುವುದು ಗೊತ್ತುಗುರಿಗಳನ್ನು ನಿದಿರ್ಷ್ಟಪಡಿಸುವುದು ಹಾಗು ಮೌಲಿಕತೆಯನ್ನು ಪಡೆದುಕೊಳ್ಳುವುದಕ್ಕೆ ಸಹಾಯಕವಾಗುವ ಏಕೈಕ ಮಾಗರ್ವೆಂದರೆ ನಾವು ಪಡೆದುಕೊಳ್ಳುವ ಶಿಕ್ಷಣ. ಹೀಗಾಗಿ ಶಿಕ್ಷಣದ ಬೋಧನಾ ಕ್ರಮದಲ್ಲಿಯೂ ಬದಲಾವಣೆಯಾಗ ಬೇಕಾಗಿರುವುದು ಅವಶ್ಯ ಎಂದು ಡ್ಯೂಯಿ ಅಭಿಪ್ರಾಯಿಸಿದ. ಶಿಕ್ಷಣ ಎನ್ನುವುದು ಕೇವಲ ಹೇಳುವುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮಾತ್ರವಲ್ಲ ಶಿಕ್ಷಾಥಿರ್ಯು ತನ್ನ ಅನುಭವಗಳ ಮೂಲಕ ಹೊಸದನ್ನು ಪಡೆದುಕೊಳ್ಳುವುದು ಮಹತ್ವವಾದುದು ಎಂದು ಪ್ರಸ್ತುತ ಪದ್ಧತಿಯ ಬಗೆಗೆ ವಿಮಶೆರ್ ಮಾಡಿದ. ಅಂತಃಕಲಹದ ನಂತರ ಅಮೆರಿಕಾ ಆಡಳಿತ ಎಚ್ಚೆತ್ತು ಸಾವರ್ಜನಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರೋ ನೀಡಿತು. ಸಾವಿರಾರು ಸಂಖ್ಯೆಯಲ್ಲಿ ಶಾಲೆಗಳನ್ನು ತೆರೆಯ ಲಾಯಿತು. ಕಾರಣ ವಲಸೆಗಾರರನ್ನು ಹೇಗಾದರೂ ಮಾಡಿ ಅಮೆರಿಕಾಕ್ಕೆ ನಿಷ್ಠರಾಗಿರಬೇಕೆಂಬ ಮಾನಸಿಕ ಸಿದ್ಧತೆಗಳನ್ನು ಮಾಡಬೇಕಾಗಿತ್ತು. ಹೀಗಾಗಿ ಶಿಕ್ಷಣವನ್ನು ಕಡ್ಡಾಯಗೊಳಿಸಿದರು. ಆದರೆ ಕರಿಯರ ಬಗೆಗೆ ಮಾತ್ರ ತಾರತಮ್ಯಗಳು ಮುಂದುವರೆದೇ ಇದ್ದವು. ಡ್ಯೂಯಿಯ ಪ್ರಯೋಗಶಾಲೆಯ ಶಿಕ್ಷಣ ಹಾಗೂ ಯೋಹಾನ್ ಪೆಸ್ಟಲೋಜ ವಿವರಿಸಿದ ‘ಆಬ್ಜೆಕ್ಟ್ ಶಿಕ್ಷಣ’(ವಿಷಾಯಾಧಾರಿತ) ಕ್ರಮಗಳ ಬಗೆಗೆ ಸರಕಾರಗಳು ಹೆಚ್ಚಿನ ಕಾಳಜಿ ವಹಿಸಿದವು. ಇದರಲ್ಲಿ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಯಿತು. ಅದರಂತೆ ಉನ್ನತ ಶಿಕ್ಷಣಕ್ಕೂ ವಿಶೇಷ ಕಾಳಜಿ ವಹಿಸಲಾಯಿತು.

ಯುರೋಪಿನಲ್ಲಿನ ವಿಚಾರ ಕ್ರಾಂತಿಯಿಂದ ರೂಪಿತಗೊಂಡ ಶಿಕ್ಷಣವು ಅಮೆರಿಕಾದಲ್ಲಿ ಬದಲಾವಣೆಯ ಹೊಸ ಗಾಳಿಯನ್ನು ತಂದಿತು. ‘‘ಮೊರ್ರಿಲ್‌ಲ್’’ ಎಂಬ ಕಾಯ್ದೆ ಮೂಲಕ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ೧೮೫೦ರ ವೇಳೆಗೆ ಚಿಕಾಗೋ, ಕಾನೆರ್ಲ್, ವ್ಯಾಂಡರ್ ಬಿಲ್ಟ್, ಸ್ಟ್ಯಾನ್ ಫೋಡ್ರ್, ಜಾನ್ ಹಾಪ್ಕಿನ್ಸ್ ಎಂಬ ಖಾಸಗಿ ಒಡೆತನದ ವಿಶ್ವವಿದ್ಯಾಲಯಗಳು ಪ್ರಾರಂಭವಾದವು. ಆವರೆಗೂ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾದ ಜನತೆ ಜರ್ಮನಿ, ಇಂಗ್ಲೆಂಡ್ ಹಾಗೂ ಫ್ರಾನ್ಸ್ ದೇಶಗಳಿಗೆ ಹೋಗಬೇಕಾಗಿತ್ತು. ೧೮೭೬ರಲ್ಲಿ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿಭಾಗ ಪ್ರಾರಂಭವಾಯಿತು. ಪ್ರಕೃತಿ ವಿಜ್ಞಾನಗಳು, ಇತಿಹಾಸ, ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ, ತತ್ವಶಾಸ್ತ್ರ, ಮನಶ್ಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿಷಯಗಳ ಬೋಧನೆಯು ಪ್ರಾರಂಭವಾಯಿತು. ಇವುಗಳಲ್ಲಿ ಹೆಚ್ಚಾಗಿ ವಿಜ್ಞಾನಗಳ ವಿಷಯಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಕೆಲವೇ ವರ್ಷಗಳಲ್ಲಿ ಯುರೋಪಿನಲ್ಲಿ ಬೋಧಿಸುತ್ತಿದ್ದ ಸರಿಸಮಾನ ಶಿಕ್ಷಣವು ಅಮೆರಿಕಾದಲ್ಲಿರುವ ವಿಶ್ವವಿದ್ಯಾಲಯ ಗಳಲ್ಲಿ ಸಿಗಲಾರಂಭಿಸಿತು. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡ ಸಾವರ್ಜನಿಕ ಪುಸ್ತಕ ಭಂಡಾರಗಳನ್ನು ಸ್ಥಾಪಿಸುವ ಚಳವಳಿಗಳು ಹುಟ್ಟಿಕೊಂಡವು. ಈ ಮೂಲಕ ಸಮಾಜ/ವಿಜ್ಞಾನ/ಕಲೆ ಹಾಗೂ ಸಂಸ್ಕೃತಿ ವಿಷಯಗಳ ಕುರಿತಂತೆ ಹೆಚ್ಚಿನ ಜನರು ವಿದ್ಯಾ ವಂತರಾದರು.

ಅಮೆರಿಕಾ ದೇಶದಲ್ಲಿ ಹೊಸ ಮಾಗರ್ಗಳು ಹುಟ್ಟಲು ಪತ್ರಿಕಾರಂಗವು ವಿಶೇಷವಾಗಿ ದುಡಿಯಿತು. ಬದಲಾದ ವೈಜ್ಞಾನಿಕ ಪ್ರಗತಿಗಳಿಂದ ಏಕರೂಪದ ಸುದ್ದಿಗಳು ದೇಶಾದ್ಯಂತ ಪ್ರಕಟಗೊಳ್ಳುತ್ತಿದ್ದವು. ಜೋಸೆಫ್ ಪ್ಯುಲಿಟ್ಟರ್‌ನ ನೇತೃತ್ವದ ‘ವರ್ಲ್ಡ್’ ಪತ್ರಿಕೆ ಹಾಗೂ ರಾನ್‌ಡಾಲ್ಫ್ ಹಸ್ಟ್ರ್ನ ನ್ಯೂಯಾಕಿರ್ನ ‘ಜರ್ನಲ್’ ಪತ್ರಿಕೆ  ಹೊಸ ಬಗೆಯ ವಿಚಾರ ಕ್ರಾಂತಿಯನ್ನು ಹುಟ್ಟು ಹಾಕಿದವು. ಅಧ್ಯಕ್ಷನಿಂದ ಹಿಡಿದು ಜವಾಬ್ದಾರಿಯುತ ಎಲ್ಲ ನಾಗರಿಕರ ಬಗೆಗಿರುವ ಭ್ರಷ್ಟಾಚಾರ ಹಾಗೂ ಅನೈತಿಕ ವ್ಯವಹಾರಗಳನ್ನು ಜನರಿಗೆ ವಸ್ತುನಿಷ್ಠವಾಗಿ ವರದಿ ಮಾಡಲು ಪ್ರಾರಂಭಿಸಿ ಸಾವರ್ಜನಿಕ ಬದುಕಿನಲ್ಲಿ ಶುದ್ದೀಕರಣ ಕಾಯರ್ ಕೈಗೊಂಡವು. ದ ನೇಷನ್  ದ ಲೇಡಿಸ್ ಹೋಂ ಜರ್ನಲ್, ಗುಡ್ ಹೌಸ್ ಆ್ಯಂಡ್ ಕಾಸ್ಮೊಪೊಲಿಟನ್ ಪತ್ರಿಕೆಗಳು ಜನರಲ್ಲಿ ತೀವ್ರವಾದ ವಿಚಾರಕ್ರಾಂತಿಯನ್ನು ಹುಟ್ಟು ಹಾಕಿದವು. ಜೊತೆಗೆ ಗಾಳಿ ಸುದ್ದಿಗಳನ್ನು ಹರಡುವ, ಅಪನಿಂದನೆಗಳನ್ನು ಮಾಡುವ ಹಾಗೂ ಜನರನ್ನು ದಾರಿತಪ್ಪಿಸುವ ಸುದ್ದಿ ಪತ್ರಿಕೆಗಳು ಸಹ ಹತ್ತಾರು ಸಂಖ್ಯೆಯಲ್ಲಿ ಅಷ್ಟೇ ವೇಗದಲ್ಲಿ ಅಮೆರಿಕಾದಲ್ಲಿ ಹುಟ್ಟಿಕೊಂಡವು.

ಸಾಹಿತ್ಯ ಕ್ಷೇತ್ರದಲ್ಲೂ ಅದ್ಭುತವಾದ ಬೆಳವಣಿಗೆಗಳಾದವು. ಭಾವನಾ ಸ್ವಾತಂತ್ರ್ಯದಿಂದ ವಾಸ್ತವಿಕ ಸ್ವಾತಂತ್ರ್ಯದ ಕಡೆಗೆ ಸಾಹಿತ್ಯಾಸಕ್ತರು ಗಮನ ಹರಿಸಿದರು. ಮಾಕ್ರ್ ಟ್ವೇನ್ ಎಂಬ ಸಾಹಿತಿಯು ಸಮಾಜದ ನಿಜಚಿತ್ರಣಗಳ ಬಗೆಗೆ ಕಾದಂಬರಿಗಳನ್ನು ಬರೆದನು. ಶೋಷಣೆ, ಶ್ರೀಮಂತರ ಅಟ್ಟಹಾಸ ಹಾಗೂ ಬಡವರು ಪಡುತ್ತಿದ್ದ ತೊಂದರೆಗಳ ಬಗೆಗೆ ವಿಡಂಬನಾತ್ಮಕ ವಾಗಿ ವಿಶ್ಲೇಷಿಸಿದ. ವಿಲಿಯಂ ಡೀನ್ ಹಾವೆಲ್ಸ್, ಹೆನ್ರಿ ಜೇಮ್ಸ್ ಹಾಗೂ ವಿಲಿಯಂ ಜೇಮ್ಸ್ ಎಂಬ ಚಿಂತಕರು ಜನಜಾಗೃತಿಯ ಸಾಹಿತ್ಯಕ್ಕೆ ಒಲವು ನೀಡಿದರು. ಇನ್ನು ‘ಕೆಲವು ವಿದ್ವಾಂಸರು ವಾಸ್ತವಿಕ ವಿಚಾರಗಳಾಚೆ ನೈಸರ್ಗಿಕತ್ವದ ಬಗೆಗೆ ಕಾಳಜಿ ವಹಿಸಿ ಬರೆದರು. ಒಟ್ಟಿನಲ್ಲಿ ೨೦ನೆಯ ಶತಮಾನದ ಪ್ರಥಮಾರ್ಧ ಅವಧಿಯಲ್ಲಿ ಅಮೆರಿಕಾದ ಜನತೆ ವಿಚಾರ ಸಾಹಿತ್ಯದ ಕಡೆಗೆ ಹೆಚ್ಚಿನ ಒಲವು ತೋರಿದರು. ಕಲಾಕಾರರು ತಮ್ಮ ಕುಂಚಗಳಿಂದ ಅಮೆರಿಕಾದ ನೈಜಚಿತ್ರಣವನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾದರು. ಪ್ರಗತಿಪರ ಚಟುವಟಿಕೆಗಳಿಂದ ಉತ್ತೇಜಿತರಾದ ಕೆಲವು ಸಾಮಾಜಿಕ ಕಾಯರ್ಕತರ್ರು ಅನೇಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಜನರ ನೋವುಗಳಿಗೆ ಸ್ಪಂದಿಸಿದರು.

ಆಂತರಿಕವಾಗಿ ಹಲವಾರು ಸಮಸ್ಯೆಗಳಿಂದ ಪುಟಿದೆದ್ದು ಗಟ್ಟಿಗೊಳ್ಳುತ್ತಿದ್ದ ಅಮೆರಿಕಾ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತನ್ನನ್ನು ಸ್ಥಾಪಿಸಿಕೊಳ್ಳುವ ಅವಶ್ಯಕತೆ ಇತ್ತು. ೨೦ನೆಯ ಶತಮಾನದ ಎಲ್ಲ ರಾಷ್ಟ್ರಗಳ ಬದುಕಿಗೆ ಏಕಮೇವ ಶಕ್ತಿಯೆಂದರೆ ವ್ಯಾಪಾರದಲ್ಲಿ ಲಾಭ ಗಳಿಸುವುದು. ಹಿಂದಿನಿಂದಲೂ ಯುರೋಪಿನ ಎಲ್ಲ ರಾಷ್ಟ್ರಗಳು ಈ ತಂತ್ರವನ್ನೇ ಅನುಸರಿಸಿ ಮೇಲೆದ್ದು ಬಂದಿದ್ದವು. ಇಂಗ್ಲೆಂಡಿನಿಂದ ಬಿಡಿಸಿಕೊಂಡ ಅಮೆರಿಕಾ ಅದರ ಕುತಂತ್ರಗಳನ್ನು ಚೆನ್ನಾಗಿ ಅರಿತಿದ್ದು ಯಾವುದೇ ಕಾರಣಕ್ಕೂ ಅದರ ಜೊತೆಗೆ ಸಂಬಂಧಗಳನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಅಮೆರಿಕಾದ ಯಾವ ರಾಜಕಾರಣಿಯೂ ಉತ್ಸುಕನಾಗಿರಲಿಲ್ಲ. ಆಂತರಿಕವಾಗಿದ್ದ ಎಲ್ಲ ಸಮಸ್ಯೆಗಳ ನಡುವೆಯು ಸಹ ಅಮೆರಿಕಾದ ಕೈಗಾರಿಕೆ ಹಾಗೂ ವ್ಯವಸಾಯೋತ್ಪನ್ನಗಳು ಅಗಾಧ ಪ್ರಮಾಣದಲ್ಲಿ ನಿಮಾರ್ಣವಾಗಿದ್ದವು. ಆದ್ದರಿಂದ ಅವುಗಳನ್ನು ವಿಕ್ರಯಿಸಲು ಅದಕ್ಕೊಂದು ವಿಶಾಲ ಮಾರುಕಟ್ಟೆಯು ಬೇಕಾಗಿತ್ತು. ಅಲ್ಲದೇ ಅಮೆರಿಕಾ ಒಂದು ಬಲಾಢ್ಯ ಶಕ್ತಿಯಾಗಿ ಬೆಳೆಯಲು ಲಾಭದಾಯಕ ವ್ಯಾಪಾರ ಮಾಡುವುದು ಅವಶ್ಯಕವಾಗಿತ್ತು. ಈ ಹಿನ್ನೆಲೆಯಲ್ಲಿ ಏಷ್ಯಾದ ಹಾಗೂ ದಕ್ಷಿಣ ಅಮೆರಿಕಾ ಖಂಡಗಳಲ್ಲಿರುವ ದೇಶಗಳ ವಿಶಾಲ ಕ್ಷೇತ್ರಗಳನ್ನು ಅದು ಗಮನಿಸಿ ತನ್ನ ವ್ಯಾಪಾರಿ ಚಟವಟಿಕೆಗಳಿಗೆ ಶಾಶ್ವತ ರಂಗಭೂಮಿಯ ನಿರ್ಮಾಣದ ಪ್ರಯತ್ನ ಮಾಡಿತು. ಏಷ್ಯಾ ರಾಷ್ಟ್ರಗಳಾದ ವಿಶಾಲ ಚೀನ ಹಾಗೂ ಜಪಾನ್ ದೇಶಗಳ ಜೊತೆಗೆ ತನಗೆ ಇಷ್ಟವಿಲ್ಲದಿದ್ದರೂ ವ್ಯಾಪಾರದ ಸಂಬಂಧಗಳನ್ನು ಕುದುರಿಸಿತು. ತಮ್ಮನ್ನು ಶೋಷಣೆ ಮಾಡಿದ ಇಂಗ್ಲೆಂಡ್ ಹಾಗೂ ಯುರೋಪಿನ ಇತರ ರಾಷ್ಟ್ರಗಳಿಗೆ ಪ್ರತಿಯಾಗಿ ತಾನು ಸಹ ಬಲಿಷ್ಠವಾಗಿ ರೂಪುಗೊಳ್ಳುವುದು ಅನಿವಾಯರ್ವಾಗಿತ್ತು. ಅಂತರ್ ಕಲಹದ ಸಂದರ್ಭದಲ್ಲಿ  ಇಂಗ್ಲೆಂಡ್ ಹಾಗೂ ಫ್ರಾನ್ಸ್  ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವಿರುದ್ಧ ಮಾಡಿರುವ ಕುತಂತ್ರಗಳಿಗೆ ಪರಿಹಾರ ರೂಪದಲ್ಲಿ ಇಂಗ್ಲೆಂಡ್ ರಾಷ್ಟ್ರವು ಅಮೆರಿಕಾ ದೇಶಕ್ಕೆ ಅಪಾರವಾದ ಹಣ (೧೫ ಮಿಲಿಯನ್ ಡಾಲರ್) ನೀಡುವ ಒಪ್ಪಂದದೊಂದಿಗೆ ಪುನಃ ಸ್ನೇಹ ಸಂಪಾದಿಸಿಕೊಂಡಿತು. ಯುರೋಪ್ ಖಂಡದಲ್ಲಿದ್ದ ಇನ್ನೊಂದು ವ್ಯಾಪಾರಿ ಪ್ರಬಲಶಕ್ತಿಯಾದ ಫ್ರೆಂಚರು ಸಹ ಮೆಕ್ಸಿಕನ್ ರಾಜಕೀಯದಿಂದ ಹಿಂದೆ ಸರಿಯುವುದರ ಅಮೆರಿಕಾ ಮೂಲಕ ಬೆಳೆಯುವುದಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟರು.

ಅಧ್ಯಕ್ಷ ಗ್ರಾಂಟ್ ಹಾಗೂ ವಿದೇಶಾಂಗ ಕಾಯರ್ದಶಿರ್ ವಿಲಿಯಂ ಹೆನ್ರಿ ಸೇವಾಡ್ರ್ ಅಮೆರಿಕಾವನ್ನು ಆಥಿರ್ಕ ಶಕ್ತಿಯಾಗಿ ರೂಪಿಸುವಲ್ಲಿ ಯೋಜನೆಗಳನ್ನು ತಯಾರಿಸಿದರು. ಜನರ ಅಸಮಾಧಾನದ ನಡುವೆಯೂ ರಷ್ಯದಿಂದ ಅಲಾಸ್ಕ ಪ್ರದೇಶವನ್ನು ಹಲವು ಮಿಲಿಯನ್ ಡಾಲರ್‌ಗೆ ಕೊಳ್ಳಲಾಯಿತು. ಅಲಾಸ್ಕವು ನೈಸಗಿಕರ್ ಸಂಪನ್ಮೂಲಗಳಿಂದ ಕೂಡಿದ ಅದ್ಭುತ ಪ್ರದೇಶ ಇದಾಗಿತ್ತು. ಇದರಿಂದ ಉತ್ತೇಜನಗೊಂಡ ಕಾಯರ್ದಶಿರ್ ಸೇವಾಡ್ರ್ ಕೆರಿಬಿಯನ್ ದ್ವೀಪಗಳ ಆಕ್ರಮಣಕ್ಕೂ ಮುಂದಾದ. ಆದರೆ ಅಮೆರಿಕಾದ ಸೆನೆಟ್ ಅದಕ್ಕೆ ಅನುಮತಿ ಸಲಿಲ್ಲ. ತನ್ನ ಶಕ್ತಿಯನ್ನು ವೃದ್ದಿಸಿ ಕಾಯ್ದುಕೊಳ್ಳಲು ಅಮೆರಿಕಾ ಮೊದಲು ತನ್ನ ಸುತ್ತ ಮುತ್ತಲಿನ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಅದರ ಅನಿವಾಯರ್ತೆಯನ್ನು ಮನಗಂಡ ವಿದೇಶಾಂಗ ಕಾಯರ್ದಶಿರ್ ಜೇಮ್ಸ್ ಬ್ಲೇಯ್ನನು ೧೮೮೯ರಲ್ಲಿ ಪಶ್ಚಿಮ ಗೋಳಾಧರ್ದ ಎಲ್ಲ ದೇಶಗಳನ್ನೊಳಗೊಂಡ ಒಕ್ಕೂಟ ರಚಿಸಲು ಪ್ರಯತ್ನಿಸಿದನು. ಅದರ ಪ್ರಯುಕ್ತ ವಿಶಾಲ ಅಮೆರಿಕಾ ಒಕ್ಕೂಟ ರಚನೆಯಾಯಿತು. ಇದರ ಮುಖ್ಯ ಉದ್ದೇಶಗಳೆಂದರೆ ಪರಸ್ಪರ ವಿಶ್ವಾಸದಿಂದ ಇರುವುದು ಹಾಗೂ ಆಂತರಿಕ ವ್ಯಾಪಾರ ವಹಿವಾಟುಗಳನ್ನು ವೃದ್ದಿಸಿಕೊಳ್ಳುವುದು.

ಅಮೆರಿಕಾದಲ್ಲಿ ಜಾರಿಗೆ ಬಂದ ಕೃಷಿ ನೀತಿಗಳಿಂದ ರೈತರಲ್ಲಿ ಹೊಸ ಬಗೆಯ ಅವಕಾಶಗಳು ಹುಟ್ಟಿಕೊಂಡವು. ಹೀಗಾಗಿ ಕೈಗಾರಿಕೆಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟ ಕೃಷಿ ಮಾರುಕಟ್ಟೆಗಳು ತಮ್ಮ ಉತ್ಪನ್ನಗಳ ವಿಕ್ರಯಗಳಿಗೆ ಹೊಸ ಮಾರುಕಟ್ಟೆಗಳನ್ನು ಹುಡುಕಲಾರಂಭಿಸಿದವು. ಅಮೆರಿಕಾ ಸಂಯುಕ್ತ ಸಂಸ್ಥಾನಗಳನ್ನು ಹೊರತುಪಡಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ಅಮೆರಿಕಾದ ಕೃಷಿ ಉತ್ಪನ್ನಗಳು ರಭಸವಾಗಿ ರಫ್ತುಗೊಂಡವು. ಅಲ್ಲದೇ ತಮ್ಮ ಕೃಷಿ ಮಾರುಕಟ್ಟೆಯ ವಿಸ್ತರಣೆಯ ಹಿನ್ನೆಲೆಯಲ್ಲಿ ಅಮೆರಿಕಾದ ರೈತರು ಸಹ ಅಮೆರಿಕಾದ ಆಡಳಿತವು ಬೇರೆ ಬೇರೆ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಂಥ ನೀತಿಗಳನ್ನು ಪ್ರೋ ಇದನ್ನೇ ಗಮನಿಸುತ್ತಿದ್ದ ಅಮೆರಿಕಾದ ಕೈಗಾರಿಕಾ ಮಾರುಕಟ್ಟೆಗಳು ಸಹ ಹಿಂದೆ ಬೀಳಲಿಲ್ಲ. ಅವು ಸಹ ಅಮೆರಿಕಾವು ಬಂಡವಾಳಶಾಹಿ ಭೌಗೋಳಿಕ ವಿಸ್ತರಣೆ ಮಾಡುವುದು ಅನಿವಾಯರ್ವೆಂದು ಪ್ರತಿಪಾದಿಸಿದವು. ಇದಕ್ಕಾಗಿ ಹೊಸ ಭೂಭಾಗಗಳನ್ನು ಒತ್ತಾಯದಿಂದ ತೆಗೆದುಕೊಂಡರೂ ಸರಿ ತಾವು ಉತ್ಪಾದಿಸಿದ ವಸ್ತುಗಳನ್ನು ವಿಕ್ರಯಿಸುವ ಕಾರ್ಯಯೋಜನೆಗಳು ಸುಗಮವಾಗಿ ಜಾರಿಯಾಗಬೇಕೆಂಬ ಧೋರಣೆಯನ್ನು ತಾಳಿದವು. ಅಂದರೆ ೧೮೯೦-೧೯೦೦ರ ಹೊತ್ತಿಗೆ ಅಮೆರಿಕಾವು ಬಲಾಢ್ಯವಾದ ಸಾಮ್ರಾಜ್ಯಶಾಹಿ ರಾಷ್ಟ್ರವಾಗಿ ಎಲ್ಲ ರಂಗಗಳಲ್ಲಿ ರೂಪುಗೊಳ್ಳುವ ಪ್ರಯತ್ನದಲ್ಲಿ ಭಾರೀ ಯಶಸ್ಸು ಕಂಡಿತು. ಇಂಥ ಅಮೆರಿಕಾದ ಇತಿಹಾಸಕಾರರು, ಸಮಾಜಶಾಸ್ತ್ರಜ್ಞರು ಹಾಗೂ ಧಾಮಿರ್ಕ ನೀತಿ-ನಿಯಮಗಳ-ನಿರೂಪಕ(ಥಿಯೋಲಾಜಿಸ್ಟರು) ತಜ್ಞರು ಎಲ್ಲ ಬಗೆಯಲ್ಲಿ ಆಧಾರವಾಗಿ ನಿಂತರು. ಅಮೆರಿಕಾದ ಜನತೆ(ಆಂಗ್ಲೋ-ಸಾಕ್ಸನರು) ಜಗತ್ತಿನಲ್ಲಿರುವ ಅನಾಗರಿಕ ದೇಶಗಳನ್ನು ಹಾಗೂ ಅಲ್ಲಿರುವ ಜನತೆಯನ್ನು ನಾಗರಿಕತೆ ಹೊಂದಿದ ಸಂಸ್ಕೃತಿಗಳು ಅನುಸರಿಸುತ್ತಿದ್ದ ಮಾರ್ಗಗಳಿಗೆ ತರುವ ಜವಾಬ್ದಾರಿಯನ್ನು ನಿವರ್ಹಿಸುವುದು ಅನಿವಾಯರ್ ವೆಂದು ವಿದ್ವಾಂಸರು ಪ್ರತಿಪಾದಿಸಿದರು. ಅಮೆರಿಕಾ ಒಂದು ಸಾಮ್ರಾಜ್ಯಶಾಹಿ ರಾಷ್ಟ್ರವಾಗಿ ಪುನರ್ ರೂಪುಗೊಳ್ಳಲು ತಮ್ಮ ಅನುಭವವನ್ನು ಧಾರೆ ಎರೆದರು. ಇದಕ್ಕೆ ಬೆಂಬಲವಾಗಿ ಅಮೆರಿಕಾದ ರಾಜಕಾರಣಿಗಳು ಹಾಗೂ ಸಾಹಿತ್ಯ ಚಿಂತಕರು ಕಾರ್ಯ ಪ್ರವೃತ್ತರಾದರು. ಇಂಥ ಯೋಜನೆಯನ್ನು ಜಾರಿಗೊಳಿಸಲು ಅಮೆರಿಕಾ ಆಕ್ರಮಣಕಾರಿ ನೀತಿಗಳನ್ನು ಅನುಸರಿಸ ಲಾರಂಭಿಸಿತು. ಇದೇ ಪರಿಣಾಮದಿಂದ ತಟ್ಟನೆ ಹವಾಯಿ ದ್ವೀಪ ಸಮೂಹಗಳು ಅಮೆರಿಕಾ ಕೈಗೊಂಡ ಸೈನಿಕ ದಾಳಿಗಳಿಂದ ಯಾವುದೇ ಬಗೆಯ ಸಣ್ಣ ಪ್ರತಿರೋಧವನ್ನು ಒಡ್ಡದೇ ಅಮೆರಿಕಾದ ಪಾಲಾದವು.

ಪಾನ್ ಅಮೆರಿಕಾನ್ ನೀತಿ

ತನ್ನ ನೆರೆ ರಾಷ್ಟ್ರಗಳನ್ನು ಅಮೆರಿಕಾ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡ ಲಾರಂಭಿಸಿತು. ಚಿಲಿ ಹಾಗೂ ಪೆರು ದೇಶಗಳ ನಡುವಿನ ಜಗಳ ಅಮೆರಿಕಾಕ್ಕೆ ಲಾಭ ತಂದುಕೊಟ್ಟಿತು. ಚಿಲಿಯನ್ನು ಬೆದರಿಸಿದ ಅಮೆರಿಕಾ ಸಾವಿರಾರು ಡಾಲರ್‌ಗಳ ಲಾಭ ಮಾಡಿಕೊಂಡಿತು. ಇದರಂತೆಯೇ ವೆನಿಜುಲಾ ವಿಷಯದಲ್ಲೂ ಬ್ರಿಟಿಷರನ್ನು ಕಂಗೆಡಿಸಿ ತಾನು ಹೇಳುವಂತೆ ಆಡಳಿತ ಮಾಡಬೇಕೆಂದು ನಿರ್ಬಂಧ ಹಾಕಿತು. ಅಮೆರಿಕಾದ ಬುಡದಲ್ಲಿಯೇ ಇದ್ದ ಕ್ಯೂಬಾವನ್ನು ಹಲವಾರು ವಷರ್ಗಳಿಂದ ಸ್ಪೇನ್ ತನ್ನ ಕಾಲಿನಡಿಯಲ್ಲಿ ಅದುಮಿಟ್ಟು ಕೊಂಡಿತ್ತು. ಇದೇ ವೇಳೆಗೆ ಸ್ಪೇನ್ ಆಡಳಿತಗಾರರಿಂದಾದ ಕ್ಯೂಬನ್‌ರ ಮಾರಣಹೋಮ ನಡೆದ ಸಂಗತಿಗಳು ಇಡೀ ಪಶ್ಚಿಮಾಧರ್ ಗೋಳವನ್ನೇ ಚಿಂತೆಗೀಡು ಮಾಡಿತ್ತು. ಸ್ಪೇನ್ ವಿರುದ್ಧದ ಕ್ಯೂಬಾದ ಕ್ರಾಂತಿಕಾರಿಗಳು ಅಪಾಯಕಾರಿಯಾದ ಯುದ್ಧವನ್ನು ಪ್ರಾರಂಭಿಸಿದರು. ಸ್ಪೇನ್ ಸೈನ್ಯಕ್ಕೆ ಹೆಚ್ಚಿನ ತೊಂದರೆ ಆಗುವಂತೆ ಕ್ರಾಂತಿಕಾರಿಗಳು ಪ್ರತಿ ಗ್ರಾಮದಲ್ಲಿನ ಎಲ್ಲ ವಸ್ತುಗಳನ್ನು ಸುಟ್ಟು ಬೂದಿ ಮಾಡುತ್ತ ಅತ್ಯಂತ ಪೇಚಿನ ಸ್ಥಿತಿಗೆ ಸಮಸ್ಯೆಯನ್ನು ತಂದು ನಿಲ್ಲಿಸಿದರು. ಇದಕ್ಕೆ  ಪ್ರತಿಯಾಗಿ ಸ್ಪೇನ್ ಸೈನಿಕರು ಅವರು ಬರುವ ಮೊದಲೆ ಇಡೀ ಗ್ರಾಮ ದಲ್ಲಿನ ಎಲ್ಲ ಜನರನ್ನು ಸ್ಥಳಾಂತರಗೊಳಿಸಿ ಕ್ಯೂಬಾದ ಕ್ರಾಂತಿ ಕಾರಿಗಳಿಗೆ ಸಿಗುತ್ತಿದ್ದ ಬೆಂಬಲವನ್ನು ತಡೆ ಹಿಡಿಯುವ ಪ್ರಯತ್ನ ಮಾಡಿದರು. ಹೀಗಾಗಿ ಕ್ರಾಂತಿಕಾರಿಗಳ ಮತ್ತು ಜನತೆಯ ಮಧ್ಯೆ  ಸಂಬಂಧಗಳು ಉಂಟಾಗುವುದು ದುಸ್ತರವಾಯಿತು. ಇಂತಹ ಕಾರ್ಯದ ಮುಖ್ಯ ಉದ್ದೇಶ ಕ್ರಾಂತಿಕಾರಿಗಳನ್ನು ಆಹಾರವಿಲ್ಲದೆ ಸಾಯಿಸುವುದು ಸ್ಪೇನಿನ ಮುಖ್ಯ ಉದ್ದೇಶವಾಗಿತ್ತು. ಆದರೆ ಅವರು ಸ್ಥಾಪಿಸಿದ ಸ್ಥಳಾಂತರ ಶಿಬಿರಗಳಲ್ಲಿನ ಜನರೇ ಆಹಾರ ವಿಲ್ಲದೆ ಸಾಯುವಂತಾದುದು ಎಲ್ಲರ ಟೀಕೆಗೆ ಗುರಿಯಾಯಿತು. ಹವಾನಾ ಪ್ರಾಂತ್ಯದಲ್ಲಿಯೇ ಇಂತಹ ಅವಘಡದಿಂದ ಸುಮಾರು ೫೦ ಸಾವಿರ ಹೆಂಗಸರು ಮತ್ತು ಮಕ್ಕಳು ಹೊಟ್ಟೆಗೆ ಅಹಾರವಿಲ್ಲದೆ ಸತ್ತು ಹೋದರು. ಈ ದುರ್ಘಟನೆಯನ್ನು ಕ್ಯೂಬಾದ ಮಾರಣ ಹೋಮ ಎಂದು ದಾಖಲಿಸಲಾಗಿದೆ. ಕ್ಯೂಬಾದ ಸ್ವಾತಂತ್ರ್ಯ ವೀರರು ತಮ್ಮ ಬಿಡುಗಡೆಗಾಗಿ ಅಮೆರಿಕಾದ ಸಹಾಯ ಬೇಡಿದರು. ಅಮೆರಿಕಾದ ಮಧ್ಯಸ್ಥಿಕೆಯನ್ನು ಒಪ್ಪದ ಸ್ಪೇನ್ ಆಂತರಿಕವಾಗಿ ಹಗೆತನ ಸಾಧಿಸುತ್ತಿತ್ತು. ಆದರೆ ಅಶಿಸ್ತು ಹಾಗೂ ಅದಕ್ಷತೆಯಿಂದ ಕೂಡಿದ ಸ್ಪೇನ್ ದೇಶದ ಸೈನ್ಯ ಅಮೆರಿಕಾದ ಬಲಿಷ್ಠ ಸೈನ್ಯ ಹಾಗೂ ತಂತ್ರಗಳ ಮುಂದೆ ಅಸಹಾಯಕತೆಯಿಂದ ತಲೆಬಾಗಬೇಕಾಯಿತು. ಇದೇ ನೆಪದಲ್ಲಿ ಅಮೆರಿಕಾವು ಪೋಟೊರ್ ರಿಕೋ, ಗುವಾಮ್ ಹಾಗೂ ಫಿಲಿಫೈನ್ಸ್ ಪ್ರದೇಶಗಳನ್ನು ಸ್ಪೇನ್‌ನಿಂದ ಕಿತ್ತುಕೊಂಡಿತು. ಅಮೆರಿಕಾದ ಒತ್ತಡದಿಂದಾಗಿ ೧೮೯೮ರಲ್ಲಿ ನಡೆದ ಪ್ಯಾರಿಸ್ ಒಪ್ಪಂದದಂತೆ ಕ್ಯೂಬಾ ಸ್ಪೇನ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯವನ್ನು ಪಡೆಯಿತು. ಆದರೆ ಅದು ಪ್ರತಿಯೊಂದು ವಿಷಯಕ್ಕೂ ಅಮೆರಿಕಾದ ಬಾಗಿಲನ್ನು ಸದಾ ಕಾಯುವಂತೆ ಮಾಡುವಲ್ಲಿ ಅಮೆರಿಕಾ ಯಶಸ್ವಿಯಾಯಿತು. ಪ್ಲಾಟ್ ತಿದ್ದುಪಡಿಯ (ಸ್ಪೇನ್‌ನಿಂದ ಬಿಡುಗಡೆಗೊಂಡ ಕ್ಯೂಬಾ ಇನ್ನು ಮುಂದೆ ಬೇರೆ ರಾಷ್ಟ್ರಗಳೊಂದಿಗೆ ಮಾಡಿ ಕೊಳ್ಳುವ ಮಹತ್ವದ ಒಪ್ಪಂದಗಳು ಹಾಗೂ ಪಡೆಯುವ ಸಾಲಗಳು ಅಮೆರಿಕಾದ ಪರವಾನಗಿ ಇಲ್ಲದೇ ಪಡೆಯತಕ್ಕದ್ದಲ್ಲ. ಕ್ಯೂಬಾದ ಸ್ವಾತಂತ್ರ ಹಾಗೂ ರಾಜಕೀಯ ಸ್ಥಿರತೆಗೆ ಧಕ್ಕೆ ಬಂದಾಗ ಅಮೆರಿಕಾ ನೇರವಾಗಿ ಮಧ್ಯ ಪ್ರವೇಶಿಸುವ ಅಧಿಕಾರವನ್ನು ಈ ತಿದ್ದುಪಡಿಯ ಮೂಲಕ ಪಡೆಯಿತು. ಅದಕ್ಕಾಗಿ ಕ್ಯೂಬಾದಲ್ಲಿ ಎರಡು ನೌಕಾ ನೆಲೆಗಳನ್ನು ಅದು ಸ್ಥಾಪಿಸಿತು. ಒಟ್ಟಿನಲ್ಲಿ ಕ್ಯೂಬಾ ಅಮೆರಿಕಾದ ಅಧೀನ ರಾಷ್ಟ್ರವಾಗಿ ಇರುವುದಕ್ಕೆ ಬೇಕಾಗುವ ನಿಯಮಗಳನ್ನು ಪ್ಲಾಟ್ ತಿದ್ದುಪಡಿ ಎಂದು ಕರೆಯುತ್ತಾರೆ) ಮೂಲಕ ಜಾರಿಗೆ ಬಂದ ನೀತಿ ನಿಯಮಗಳಿಂದ ಕ್ಯೂಬಾ ದೇಶವು ಅಮೆರಿಕಾದ ಒಪ್ಪಿಗೆ ಇಲ್ಲದೇ ಏನೂ ಮಾಡದಂತಾಯಿತು. ಇಲ್ಲಿನ ಬಂಡವಾಳ ಅಮೆರಿಕಾದ ನೀತಿಯಂತೆ ಕಾಯರ್ ನಿವರ್ಹಿಸಲಾರಂಭಿಸಿತು. ಪೋಟೋರ್ ರಿಕೊ ಹಾಗೂ ಫಿಲಿಫೈನ್ಸ್ ಪ್ರದೇಶಗಳ ಕಥೆಗಳು ಕ್ಯೂಬಾಕ್ಕಿಂತ ಭಿನ್ನವಾಗಿರಲಿಲ್ಲ. ಆದರೆ ಫಿಲಿಫೈನ್ಸ್‌ನಲ್ಲಿ ಎಮಿಲಿಯೋ ಅಗ್ವಿನಾಲ್ಡೊನ ನೇತೃತ್ವದಲ್ಲಿ ಕೆಲವು ಸೈನಿಕ ಗುಂಪುಗಳು ಅಮೆರಿಕಾದ ವಿರುದ್ಧ ಬಂಡಾಯವೆದ್ದು ರಕ್ತಕ್ರಾಂತಿಗೆ ಮುಂದಾದವು. ಆದರೆ ಜನರಲ್ ಫನ್‌ಸ್ಟನ್‌ನು ಮೋಸದಿಂದ ಅಗ್ವಿನಾಲ್ಡೊನನ್ನು ಸೆರೆ ಹಿಡಿದು ಅಮೆರಿಕಾದ ವಿರುದ್ಧ ಹುಟ್ಟಿಕೊಂಡ ಕ್ರಾಂತಿಯು ಯಶಸ್ಸು ಪಡೆಯದಂತೆ ನೋಡಿಕೊಂಡನು. ಕ್ಯೂಬಾವನ್ನು ಸುಲಭವಾಗಿ ತಲುಪಲು ಇರುವ ಅಡಚಣೆ ಯನ್ನು ನಿವಾರಿಸಲು ಅಮೆರಿಕಾ ಪನಾಮ ಕಡಲ್ಗಾಲುವೆ ನಿಮಾರ್ಣ ಮಾಡಲು ಯೋಜನೆ ರೂಪಿಸಲಾಯಿತು. ಆದರೆ ಪನಾಮ ಪ್ರದೇಶವು ಕೊಲಂಬಿಯಾದ ಹಿಡಿತದಲ್ಲಿತ್ತು. ಈ ಕಾಲುವೆ ನಿಮಾರ್ಣವಾದ ನಂತರ ಅದರಿಂದ ಬರುವ ಲಾಭ ಯಾರಿಗೆ ಸೇರಬೇಕಾದ್ದು ಎಂಬ ಕುತೂಹಲ ಹುಟ್ಟಿಕೊಂಡಿತು. ಕೊಲಂಬಿಯಾವು ಪನಾಮವನ್ನು ಬೆದರಿಸಿ ಯುದ್ಧಕ್ಕಿಳಿಯಿತು. ಪ್ರತಿಯಾಗಿ ಅಮೆರಿಕಾ ಕೊಲಂಬಿಯಾವನ್ನು ಪನಾಮ ಕಾಲುವೆ ಪ್ರದೇಶದ ಹತ್ತಿರಕ್ಕೆ ಬರದಂತೆ ಹೆಡೆಮುರಿಗೆ ಮಾಡಿ ಕಟ್ಟಿಹಾಕಿತು. ಅಲ್ಲದೇ ಪನಾಮದಲ್ಲಿದ್ದ ಕೊಲಂಬಿಯಾ ಬೆಂಬಲಿತ ಸರಕಾರವನ್ನು ಪದಚ್ಯುತಗೊಳಿಸಿ ಹೊಸ ಸರಕಾರವನ್ನು ರಚಿಸಿ ತನ್ನ ಲಾಭದ ಅನುಕೂಲಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿ ಸಂಪೂರ್ಣವಾಗಿ ಕೊಲಂಬಿಯವನ್ನು ನಿಸ್ಸಹಾಯಕ ಸ್ಥಿತಿಗೆ ತಂದು ನಿಲ್ಲಿಸಿತು. ಹೇ-ಬ್ಯೂನ್-ವರಿಲ್ ಒಪ್ಪಂದ ಪ್ರಕಾರ ಪನಾಮ ಭೂಪ್ರದೇಶದ ಸುತ್ತಲಿನ ೧೦ ಕಿ.ಮೀ ಪ್ರದೇಶವನ್ನು ಅನಿಯಮಿತ ಕಾಲದವರೆಗೂ ತನ್ನ ಹಿಡಿತದಲ್ಲಿರಿಸಿಕೊಂಡಿತ್ತು. ಅಲ್ಲದೇ ಪನಾಮದ ರಕ್ಷಣೆ ತನ್ನ ಜವಾಬ್ದಾರಿಯೆಂದು ವಚನ ನೀಡಿತು. ಮುಂದೆ ಅಧ್ಯಕ್ಷ ರೂಸ್‌ವೆಲ್ಟ್ ಕೈಗೊಂಡ ಸೈನಿಕ ಕಾಯಾರ್ಚರಣೆಗಳಿಂದ ೧೯೧೪ರಲ್ಲಿ ಪನಾಮ ಕಾಲುವೆ ಸಮುದ್ರ ಸಾರಿಗೆ ಸಂಪಕರ್ಕ್ಕೆ ತೆರೆದುಕೊಂಡಿತು.

೧೯೦೦ರಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮೆಕಿನ್ಲೆ ರಿಪಬ್ಲಿಕ್ ಪಕ್ಷದ ಅಭ್ಯಥಿರ್ ಯಾಗಿ ಪುನಃ ನಾಮಕರಣಗೊಂಡನು. ತನ್ನ ನೀತಿಗಳಿಂದ ಅಮೆರಿಕಾವನ್ನು ಸಶಕ್ತ ರಾಷ್ಟ್ರವನ್ನಾಗಿ ಮಾಡಿದ ಮೆಕಿನ್ಲೆ ಸಹಜವಾಗಿ ಹೆಚ್ಚಿನ ಮತಗಳಿಂದ ವಿಜಯಗಳಿಸಿದನು. ಉಪಾಧ್ಯಕ್ಷನಾಗಿ ಥಿಯೊಡೊರ್ ರೂಸ್‌ವೆಲ್ಟ್ ಆಯ್ಕೆ ಆದನು. ದುರದೃಷ್ಟವಶಾತ್ ಅಧ್ಯಕ್ಷ ಮೆಕಿನ್ಲೆ ಬಫೆಲೋ ನಗರದಲ್ಲಿ ನಡೆದ ಕಾಯರ್ಕ್ರಮದಲ್ಲಿ ೧೯೦೧ರ ಸೆಪ್ಟೆಂಬರ್ ೬ರಂದು ಅರಾಜಕತೆಯ ಅಂಧಾಭಿಮಾನಿಯೊಬ್ಬನಿಂದ ಹತ್ಯೆಗೀಡಾದನು. ಆ ದಿನ ಮೆಕಿನ್ಲೆಯು ‘‘ಪ್ಯಾನ್ ಅಮೆರಿಕಾನ್ ಎಕ್ಸ್‌ಪೊಜಿಶನ್’’ ಎಂಬ ಕಾಯರ್ಕ್ರಮವನ್ನು ಉದ್ಘಾಟಿಸಿ ಮಾತನಾಡಬೇಕಿತ್ತು. ಈ ಅವಘಡದಿಂದ ಉಪಾಧ್ಯಕ್ಷ ಟಿ. ರೂಸ್‌ವೆಲ್ಟ್ ಅಮೆರಿಕಾದ ಅಧ್ಯಕ್ಷನಾಗಿ ಕಾಯರ್ ನಿವರ್ಹಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕಾಯಿತು. ಇದೊಂದು ಘಟನೆ ಅಮೆರಿಕಾದ ಇತಿಹಾಸದಲ್ಲಿ ಮುಂದಿನ ಪರಿಣಾಮಕಾರಿ ಬದಲಾವಣೆಗಳಿಗೆ ಮಹಾ ಮಾಗರ್ವಾಗಿ ಹೋಯಿತು. ಇದುವರೆಗೂ ಇಷ್ಟೊಂದು ಕಿರಿಯ ವಯಸ್ಸಿನ ವ್ಯಕ್ತಿಯೊಬ್ಬ ಅಮೆರಿಕಾದ ಅಧ್ಯಕ್ಷನಾಗಿರಲಿಲ್ಲ. ತನ್ನ ೪೩ನೇ ವಷರ್ದಲ್ಲಿ ಅಧ್ಯಕ್ಷ ಪದವಿಗೇರಿದ ರೂಸ್‌ವೆಲ್ಟ್ ಉನ್ನತ ವ್ಯಾಸಂಗವನ್ನು ನ್ಯಾಯಶಾಸ್ತ್ರದಲ್ಲಿ ಪೂರೈಸಿದ್ದನು. ವೃತ್ತಿ ಬದುಕಿಗಾಗಿ ದನಕರುಗಳನ್ನು ಸಾಕಿಕೊಂಡು ವ್ಯಾಪಾರ ಮಾಡುತ್ತಿದ್ದ ಶ್ರೀಮಂತ ಕುಟುಂಬದ ಈ ಹುಡುಗ ತನ್ನ ಸ್ವಸಾಮಥ್ಯರ್ದಿಂದ ನ್ಯೂಯಾಕ್ರ್ ನಗರದ ಪೊಲೀಸ್ ಅಧಿಕಾರಿಯಾಗಿ, ನೌಕಾದಳದ ಸಚಿವನಾಗಿ ಹಾಗೂ ಅಮೆರಿಕಾದ ಉಪಾಧ್ಯಕ್ಷನಾಗಿ ಕಾಯರ್ ನಿವರ್ಹಿಸಿದ್ದ. ಈತನು ಮಾಡಿದ ಕಾಯರ್ಗಳಲ್ಲಿ ಅತೀ ಪ್ರಸಿದ್ಧ ಮಾತೆಂದರೆ ‘‘ದೊಡ್ಡ ದೊಣ್ಣೆಯ ನೀತಿ’ ಮಾತಿನಲ್ಲಿ ಮೌನವಾಗಿದ್ದು ಕಾಯರ್ನೀತಿಯಲ್ಲಿ ದಂಡವನ್ನೇ ಪ್ರಧಾನವಾಗಿ ಬಳಸುತ್ತಿದ್ದ. ಥಿಯೋಡರ್ ರೂಸ್‌ವೆಲ್ಟ್‌ನ ಆಡಳಿತಾವಧಿಯನ್ನು ಪ್ರಗತಿಪರಕಾಲ ಎಂತಲೂ ಸಹ ಕರೆಯಲಾಗುತ್ತದೆ.

೧೭೭೬ರಲ್ಲಿ ಕ್ರಾಂತಿಯ ಮೂಲಕ ಅಸ್ತಿತ್ವಕ್ಕೆ ಬಂದ ಅಮೆರಿಕಾ ಸಂಯುಕ್ತ ಸಂಸ್ಥಾನ ತನ್ನ ಉಳಿವಿಗಾಗಿ ಮಾಡಿದ ಹೋರಾಟ ಎಲ್ಲರಿಗೂ ಮಾದರಿಯಾಗಿ ನಿಂತಿದೆ. ವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವ ಹಾಗೂ ಭಾವನಾ ಸ್ವಾತಂತ್ರ್ಯಗಳು ಇದರ ಜೀವ ಸೆಲೆಯಾಗಿದೆ ಎಂಬ ಭಾವನೆ ಬಲವಾಗಿದೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಜೀವಕೊಟ್ಟೆ ಎಂದು ಬಿಂಬಿಸಿಕೊಂಡಿರುವ ಅಮೆರಿಕಾ ಇನ್ನೊಂದು ಬಗೆಯಲ್ಲಿ ತನ್ನ ಸ್ವಾರ್ಥ್ಯಕ್ಕಾಗಿ ಅಭಿವೃದ್ದಿ ಹೊಂದುತ್ತಿರುವ ಹಾಗೂ ಬಡದೇಶಗಳನ್ನು ಗೋಳಾಡಿಸುತ್ತಿದೆ. ಆದರೆ ಅಂತಹ ಕೃತ್ಯಗಳನ್ನು ಪ್ರತಿಭಟಿಸಿ ವಿರೋಧಿಸುವ ಪ್ರಜ್ಞಾವಂತರನ್ನು ಅದೇ ಅಮೆರಿಕಾದಲ್ಲಿ ನಾವು ಕಾಣಬಹುದು.

 

ಪರಾಮರ್ಶನ ಗ್ರಂಥಗಳು

೧. ಜಾರ್ಜ್ ಬ್ರೌನ್ ಟಿಂಡಲ್ ಮತ್ತು ಡೇವಿಡ್ ಇ.ಶೀ., ೨೦೦೪. ಅಮೆರಿಕಾ ಎ ನೆರೆಟಿವ್ ಹಿಸ್ಟರಿ, ನ್ಯೂಯಾರ್ಕ್: ನಾರ್ಟನ್ ಆ್ಯಂಡ್ ಕಂಪನಿ.

೨. ಫಾಸ್ಟ್‌ರ್ ರೈ ಡಲೆಸ್, ೧೯೮೯. ದಿ ಯುನೈಟೆಡ್ ಸ್ಟೇಟ್ಸ್ ಸಿನ್ಸ್ ೧೮೬೫, ದೆಹಲಿ: ಸುರ್ಜಿತ್ ಪಬ್ಲಿಕೇಷನ್ಸ್.

೩. ಹೇನ್ ಡಿ.ಸಿ ಮತ್ತು ಇತರರು, ೧೯೮೫. ದಿ ಗ್ರೇಟ್ ರಿಪಬ್ಲಿಕ್ ಎ ಹಿಸ್ಟರಿ ಆಫ್   ಅಮೆರಿಕನ್ ಪೀಪಲ್, ಎರಡು ಸಂಪುಟಗಳು, ನ್ಯೂಯಾರ್ಕ್.

೪. ಮೋಹನ್ ವೈ.ಆರ್., ೨೦೦೩. ಅಮೆರಿಕಾಯಣ, ಬೆಂಗಳೂರು: ಅಭಿನವ ಪ್ರಕಾಶನ.

೫. ತಂಬಂಡ ವಿಜಯ್ ಪೂಣಚ್ಚ(ಸಂ), ೨೦೦೧. ಚರಿತ್ರೆ ವಿಶ್ವಕೋಶ, ವಿದ್ಯಾರಣ್ಯ: ಕನ್ನಡ ವಿಶ್ವವಿದ್ಯಾಲಯ, ಹಂಪಿ.