ರಾಗ ತಮ್ಮಿಚ್ಛೆ ತಾಳ ರೂಪಕ

ಕೇಳಿಜನ ಸರ್ವವೆಲ್ಲ ಚಿದಾನಂದ ಅವಧೂತ
ಲೋಲ ರಾಜಯೋಗಿ ಚರಿತವಾ        ಪಲ್ಲವಿ

ಹೇಳುವೆನು ಚಿದಾನಂದ ಅವಧೂತ ಚರಿತದಲ್ಲಿ
ಭಾಳಕ್ಷೇತ್ರ ಸಂಚಾರವ
ಲೋಲ ಕಾಮ್ಯವಹವು ಕೇಳೆ ಭಾಗ್ಯಪುತ್ರ ದೊರೆವರೆಂದು
ಬಾಲ ಅಯ್ಯಪ್ಪ ನುಡಿದನು           

ಜನನವಲ್ಲೆನಂಬರಿಗೆ ಜೀವತ್ವ ಕಳೆದವರಿಗೆ
ಇತಿತು ವಾಸನೆಯಿಲ್ಲದವರಿಗೆಯು
ತನುವ ಭ್ರಾಂತಿಯಿಲ್ಲದವರಿಗೆ ಚಿದಾನಂದ ಅವಧೂತ
ಲೋಲಯೋಗಿ ಚರಿತ ಹೇಳ್ವದು      

ಮೂಢರಿಗೆ ಮೂರ್ಖರಿಗೆ ಛಾಡರಿಗೆ ಪರರಿಗೆಯು
ಕೇಡ ಚಿಂತಿಸುವವರಿಗೆ
ಕೂಡಿದವರ ಕೆಡಿಸುವರಿಗೆ ಚಿದಾನಂದ ಅವಧೂತ
ಗೂಢ ಚರಿತ ಹೇಳಲಾಗದು

ಇನ್ನು ನಾನು ಬೇಡಿಕೊಂಬೆ ಕಣ್ಣಮುಚ್ಚಿ ಬಾಯತೆರವು
ತಿನ್ನು ಕೇಳ್ವ ಜಾಣರಿಂಗೆಯು
ಚೆನ್ನಾಗಿಯೇ ಕ್ಷೇತ್ರ ಸಂಚಾರ ವಿವರ ಹೇಳುವೆನು
ಸನ್ನುತದಿ ನೀವು ಕೇಳ್ವದು  

ವಿರಕ್ತಿ [1]ಮುಪ್ಪೆರಗೆ[2] ವಿಷಯವಳಿದು ಗುರವರಾಗೆ
ಮಾರಿ ತನುವ ಮನವನೀಗಳು
ಮೀರಿದ ಕೆಲಸಕೆಲ್ಲ ತನೆ ಶ್ರೇಷ್ಟನಾಗಿ ಕು
ಮಾರನೊಲು ಗುರುಗೆ ತೋರ್ದನು   

ಕಸವ ಬಳಿವ ಸಗಣಿ ಬಳಿವ ಭಕ್ತರ್ಹೇತ ಮಲವ ಬಳಿವ
ಬಿಸಲಿಗ್ಹಾಕ್ವ ಭತ್ತ ಭರಣವ
ಹಸನಮಾಡಿಯಿರಿಸುವನು ಗೋಡೆ ಕಟ್ಟುವನು ಅವರು
ಬೆಸಸಿದಕ್ಕೆ ಹಾಜರಿಹನು    

ಹೋಗುತಿರಲು ಭಿಕ್ಷಕೆಯು ಆಗ ನಡಿದ ಮನಿಯು ಬಿಕ್ಷ
ವೀಗಳಿದು ನಿನ್ನದೆನುತಲಿ
ಹೋಗಗೊಡದೆ ಜೋಳಿಗೆಯನೆಳಿದು ಭಿಕ್ಷವಿಲ್ಲದಿರೆ
ಹೋಗದೆಯು ಶಾಂತಲಿರ್ದನು         

ಸದಾನಂದನಿಹದ ಕಂಡು ಗುರುವು ಕೊಮಡಪ್ಪನೀಗ
ಚಿದಾನಂದನೆಂದು ಹೆಸರನು
ಮುದದಲಿಂದ ಇಡಲಿಕೆಯು ಅದೇ ಮುದ್ರಿಕೆಯನಿಟ್ಟು
ಪದವನೀಗ ಹೇಳುತಿರ್ದನು 

ಗುರುಕರುಣವಾದ ಹಿಂದ ಗುರುವ ಬಿಟ್ಟು ಹೋಹುದಲ್ಲ
ಇರುವ ನಾನಾ ಕ್ಷೇತ್ರ ತೀರ್ಥವ
ಚರಿಸಬಾಹದುತ್ತಮವು ಎಂದು ಗುರುವರಾಜ್ಞೆಯಲಿ
ಹೊರಟಯೋಧ್ಯ ಬಿಟ್ಟು ಆಗಳು     

ಅಲಂಪುರಿ ಜೋಗಳಾಂಬ ದರುಶನವ ಮಾಡಿಕೊಂಡು
ಮಲಹರಾದನೀ ವೃತ್ತಿಯ
ಚೆಲುವ ನೋಡಿ ಪರ್ವತದ ಮಲ್ಲಿಕಾರ್ಜುನನ ಕಂಡು
ಒಲವಿಲಿಳಿದ ಮಹಾನಂದಿಗೆ೧೦

ಅಹೋಬಲದ ನಾರಸಿಂಹನ ಭೆಟ್ಟಿಯನ್ನೆಕೊಡು
ಮಹಾಚಲುವ ಭದ್ರಚಲುವನು
ವಿಹಿತವಾದ ವೇಮುಲವಾಡ ರಾಜೇಶ್ವರನ ಮೂರ್ತಿ
ಬಹು ವಿಚಿತ್ರವನ್ನೆ ನೋಡಿದ            ೧೧

ತಿರುಗ ಹಾಕಿ ರಾಚೋಟಿ ವೀರಭದ್ರನನ್ನು ಕಂಡು
ಗಿರಿಯನೇರಿ ವೆಂಕಟೇಶನ
ಚರ್ಯ ತಿಳಿದು ಕಾಳಹಸ್ತಿ ಈಶ್ವರೆನಿಪ ವಾಯುಲಿಂಗ
ದಿರವ ನೋಡಿದನು ಪರೀಕ್ಷಿಸಿ            ೧೨

ಮತ್ತೆ ಕಂಚಿಕಾಮಾಕ್ಷಿ ನೋಡಿ ಏಕಾಂಬರೀಶನ ಸಹಿತ
ಪೃಥ್ವಿಲಿಂಗ ಭೆಟ್ಟಿ ಮಾಡಿಯೆ
ಹತ್ತಿಲಿರೆ ವಿಷ್ಣುಕಂಚಿ ವರದರಾಜನನ್ನು ನೋಡಿ
ಮತ್ತೆ ಹೋದ ಬಿಜವಾಡಿಗೆ  ೧೩

ಆಕಾಶಲಿಂಗವಾದ ದೇವ ಚಿದಾಂಬರೀಶನ ನಿ
ರಾಕಾರವನ್ನೆ ಕಂಡೆಯು
ನೂಕಿ ನಡೆದ ಶಂಖಮುಖಿಗೆ ಮುಂದೆ ನಡೆದ ಕುಂಭಕೋಣಿ
ಗೇಕ ಚಿತ್ತನಾಗಿ ಬಂದನು     ೧೪

ಕುಂಭೇಶ್ವರನ ದರುಶನವ ಮಾಡಿ ಚಕ್ರಪಾಣಿ
ಯೆಂಬಾತನ ಲೀಲೆ ನೋಡಿಯೇ
ಮುಂಬುವರಿದ ಅರುಣಾಚಲಕೆ ಜ್ಯೋತಿರ್ಲಿಂಗವನ್ನೆ ಕಂಡು
ಸಂಭ್ರಮದ ದೀಪ ನೋಡಿಯೆ           ೧೫

ಬಂದ ಮಧ್ಯಾರ್ಜುನಕ್ಕೆ ಚೋಳಬ್ರಹ್ಮನ ಕಥೆಯ
ನಂದು ಕೇಳಿ ಮತ್ತೆ ನಡೆದೆಯು
ಮುಂದೆ ಮನ್ನಾರ ಗುಡಿಯ ಕೃಷ್ಣನನ್ನೆ ನೋಡಿ ಸೇತು
ಬಂಧರಾಮೇಶಗೈದಿದ        ೧೬

ಸೇತು ಸ್ನಾನವನ್ನೆ ಮಾಡಿ ಹೊರಟನೀಗ ದರ್ಭಶಯನ
ನಾತನನ್ನು ನೋಡಿ ಮುಂದಕ್ಕೆ
ಖ್ಯಾತಗಿರ್ದನಂತಶಯನನ್ನ ಕಂಡು ಶ್ರೀರಾಜ್ಯ
ಕಾತ ಹೋಗದಲೆ ತೆರಳಿದ    ೧೭

ಮಧುರೆ ಮೀನಾಕ್ಷಿ ದರುಶನವಕೊಂಡು ಆಳಗಿರಿಯ
ಸದನನಾದ ವೆಂಕಟೇಶನ
[3]ಪಾದಕೆರಗಿ[4] ತಿರುಚನಾಪಲ್ಲಿಗೆಯು ಬಂದು ಕಂಡು
ಸದಮಲ ರಂಗನಾಯಕನ     ೧೮

ಆಪುಲಿಂಗವಾದ ಜಂಭುಕೇಶ್ವರನ ನೋಡಿ ಮತ್ತೆ
ಹೋಪಣಾದ ಪಶ್ಚಿಮಕೆಯು
ಅಪರಿಯನೇನೆಂಬೆ ಸುಬ್ರಹ್ಮಣ್ಯವನ್ನೆ ನೋಡಿ
ಸ್ಥಾಪಿತದ ಲೀಲೆ ಕಂಡನು   ೧೯

ಉಡುಪಿ ಕೃಷ್ಣನನ್ನು ನೋಡಿ ಶಂಕರ ನಾರಾಯಣನ
ಕಡು ಚರಿಯ ಕಂಡು ಮತ್ತೆಯು
ನಡೆದ ಕೋಟೇಶ್ವರನ ನದಿಯ ಕಂಡು ಗೋಕರ್ಣ
ದಡಕೆ ಬಂದು ಹೊಕ್ಕ ಕ್ಷೇತ್ರವ           ೨೦

ಮೃಡನೆನಿಪ ಮಹಾಬಲೇಶನನ್ನೆ ಕಂಡು ಕೋಟಿತೀರ್ಥ
ಬಿಡದೆ ನೋಡಿ ಕೋಟಿಶಾದ್ರಿಗೆ
ನಡದ ಕೊಲ್ಲೂರ ಮೂಕಾಂಬಿಕೆಯ ಚರಣಕೆಯು
ಹೊಡೆಗೆಡದ ಭಕ್ತಿಭಾವದಿ   ೨೧

ಶೃಂಗೇರಿ ಶಾರದಾಂಬನ ದರುಶನವಕೊಂಡು
ಸಂಗಡಲೆ ಕಳಸಭಂಡೆವಾ
ಹಿಂಗದಲೆ ನೋಡಿ ಮಾರ್ಕಂಡ್ಯಲಿಂಗವನೆ ಕಂಡು
ಮಂಗಳನು ಹರಹರೆಂದನು  ೨೨

ಹರಿಹರಕೆ ಬಂದನಲ್ಲಿಂದ ಗುಹಾರಣ್ಯಕೆಯು
ತಿರುಗಿದನು ಪಾಂಡುರಂಗಕೆಯು
ಪರಮ ವಿಠಲನ ನೋಡಿ ಭೀಮಶಂಕರನನ್ನೆ ಕಂಡು
ತೆರಳಿದನು ಕೊಲ್ಲಾಪುರಿಗೆಯು         ೨೩

ನೋಡಿದನು ಮಹಾಮಾಯಿ ಪೂಜೆಪುನಸ್ಕಾರಗಳನು
ನೋಡಿ ಬಂದ ಮೈಲಾರಕೆ
ಕೇಡ ಕೋಟಿಮಣಿ ಮಲ್ಲಾರಿಗೆ ಮಾರ್ತಾಂಡ ಭೈರ
ವಾಡೆಯಾತನನ್ನು ನೋಡ್ದನು         ೨೪

ನಾಶಿಕಾತ್ರಿಯಂಬಕ್ಹೋಗಿ ಸ್ನಾನವನ್ನೆ ಮಾಡಿಯೆ
ಈಶಳಾದ ಹಿರಿಯ ಮಾಹುರ
ವಾಸಳಾದ ರೇಣುಕಿಯ ಕಂಡು ಶಂಭು ಮಹಾದೇವ
ದೋಷಹರನ ಹೋಗಿ ನೋಡಿದಾ      ೨೫

ಅಂಬಘಾಟಿಕೆಯು ಹೋಗಿ ಅಂಬನ ಅಖಂಡವಾಗಿ
ಸಂಭ್ರಮದಿ ಉಜ್ಜನಿಗಿಯು
ಶಂಭುವಿಗೆ ವರವು ಆದ ಮಹಂಕಾಳಿಗ್ಹೋಗಿ ಕಂಡು
ಮುಂಬುವರಿದ ಜ್ವಾಲಾಮುಖಿಗೆಯು            ೨೬

ಕಂಡ ಜ್ವಾಲಾಮುಖಿಯ ಮೂರು ಖಂಡುಗದ ಮೂರು ಬೆಳಸು
ಗೊಂಡು ಜಾಪರಾದ ಅಂಬಗೆ
ದಿಂಡುಗೆಡದು ಚಿತ್ರಕೂಟ ನೋಡಿ ಪ್ರಯಾಗ ಸ್ನಾನ
ಗೊಂಡು ಕಾಶಿಯನ್ನೆ ಹೊಕ್ಕನು        ೨೭

ಕಾಶಿಸ್ನಾನ ಮಾಡಿ ಮಧುರೆಗೈದಿದನು ಕುರುಕ್ಷೇತ್ರ
ವಾಸಮಾಡುತಾಗಯೋಧ್ಯಕೆ
ಬೀಸುತಿಹ ವಾಯುಯೊಲು ಹರಿದ್ವಾಗಕೆಯು ಹೋಗಿ
ಆಸು ಗಂಗೆಯೊಳು ಮುಳುಗಿದಾ        ೨೮

ಇಂದ್ರದ್ಯುಮ್ನ ತೀರ್ಥಸ್ನಾನ ಮಾಡಿ ಗಂಡಿಕೆಯಲಿ ಮುಳುಗಿ
ಮುಂದೆ ಕೇತಾರಕ್ಹೋಗಿಯೆ
ಅಂದು ತಣ್ಣೀರ ಬಿಸಿನೀರ ಸ್ನಾನವನ್ನೆ ಮಾಡಿ
ಬಂದ ಪರಳಿ ವೈಜನಾಥಗೆ   ೨೯

ದರುಶನವ ಮಾಡಿಕೊಂಡು ಗಯಕೆ ಈಗ ನಡೆದನಾಗ
ಮರಳಿ ಫಲ್ಗುಣಿಯ ನದಿಯೊಳು
ಶಿರದ ಸ್ನಾನವನ್ನೆ ಮಾಡಿ ಗಧಾಧರನ ಬೆಟ್ಟಿಗೊಂಡು
ತೆರಳಿದನು ಜಗನ್ನಾಥಗೆ      ೩೦

ಸಪ್ತಗೋದಾವರಿಗೆ ಬಂದು ಸ್ನಾನ ಮಾಡಿ ನದಿಯ ಹಿಡಿದು
ಮತ್ತೆ ಪಶ್ಚಿಮಕ್ಕೆ ಏರಿಯೇ
ಸತ್ಯಕ್ಷೇತ್ರವೆನಿಪ ವಾಲಗೊಂಡೇಶ ಮಹಸ್ಥಳಕೆ
ಚಿತ್ತವಿಟ್ಟು ಬಂದನಾಗಳು   ೩೧

ಅದುವೆ ವಾಲ್ಮೀಕಿ ಆಶ್ರಮವು ಮಂಗಳದ ಕ್ಷೇತ್ರ
ಅದೇ ಸ್ಥಳದಿ ಸ್ನಾನ ಮಾಡಿಯೆ
ವಿಧವು ಶೇಖರಾದ ವಾಲಗೊಂಡೇಶ ದರುಶನವ
ಸದುಭಕ್ತಿಯಲ್ಲಿ ಕಂಡನು    ೩೨

ಆ ಮಹಾಕ್ಷೇತ್ರಕೆಯು ಪಶ್ಚಿಮದ ನದಿಯ ತಟದಿ
ರಾಮಚಂದ್ರಗೋಸಾಮೀಹನು
ಭ್ರಮೆಯನೆಲ್ಲ ಅಳಿದಾತ ಬ್ರಹ್ಮಚಾರಿ ಆಶ್ರಮೀಹ
ತ ಮತ್ತೆ ಬ್ರಹ್ಮವಾಗಿಯೆ     ೩೩

ಇಪ್ಪನೀಗ ಗುರುಸಮಾಧಿ ಒಬ್ಬನೇ ಕಾಯ್ದುಕೊಂಡು
ತಪ್ಪಲನೆ ತೊಡಿಮೆ ತಿಂದೆಯು
ತಪ್ಪದಿರಲು ಅಲ್ಲಿಗೊಬ್ಬ ವಿರಕ್ತಿ ವೀರಮ್ಮ ತಾನು
ವೊಪ್ಪಿ ಸೇವೆಗೆಯು ಬಂದಳು           ೩೪

ಕೇಳುಳು ಆಧ್ಯಾತ್ಮ ಕೇಳದಂತೆ ಬ್ರಹ್ಮದಲ್ಲಿ
ಆಲಿ ನಿಲ್ಲಿಸಿಯೆ ನಿತ್ಯದೀ
ಭಾಳಮಯ್ಯ ಮರದಿಹಳು ನಿಂತೆ ನಿಂತು ಕುಳಿತೆ ಕುಳಿತು
ಮೇಲೆ ಸೇವೆ ಮಾಡುತಿಹಳು            ೩೫

ವಾಲಗೊಂಡ ಕ್ಷೇತ್ರದಲ್ಲಿ ಬ್ರಹ್ಮರಗ್ರಹಾರದಲ್ಲಿ
ಬಾಲೆ ಈಗ ಭಿಕ್ಷಧಾನ್ಯವ
ತಾಳಿಜೋಳಿಗೆಯಲಿಂದ ತಂದು ಅಡಿಗೆಯನ್ನೆ ಮಾಡಿ
ಲೋಲ ಗುರುವಿಗುಣಲಿಗಿಕ್ಕೊಳು      ೩೬

ಪರ್ನಹಾರಗಳನೀಗ ಬಿಡಿಸಿದಳು ವೀರಮ್ಮ
ಪರ್ನವರ್ನ ಅಡಿಗೆ ಮಾಡಿಯೆ
ಪರ್ನಗಳ ತಾನೆ ತಂದು ಪತ್ರವಳಿಯ ತಾನೆ ಹಚ್ಚಿ
ಪೂರ್ಣನೀಗ ಉಣಲಿಬಡಿಪಳು          ೩೭

ಬಳಿವಳೀಗ ಸಾರಸುವಳು ರಂಗವಲಿಯಿಕ್ಕುವಳು
ತಳಿಯ ಹಾಕೋಳಂಗಳಕ್ಕೆಯು
ಹೋಳಿಯ ನೀರು ತಂದು ಕಾಸಿ ಗುರುವಿಗೆ ಎರೆಯುತಿಹಳು
ಕಳಿಯಕಣ್ಣು ಒಳಗೆ ಕುಕ್ಕುತ            ೩೮

ಹುಲಿಯ ಚರ್ಮವನ್ನೆ ಹಾಸಿ ಹುಲಿಯ ಚರ್ಮಲೋಡನಿಟ್ಟು
ಬಳಿಕುಲುದಕ ಭಸ್ಮವಿಟ್ಟೆಯು
ತಳರುವಳು ಸಮಾಧಿಯ ಸೇವೆ ಮುಗಿಸಿ ಗುರುವಿಗೆಯು
ಫಲಹರಿಟ್ಟು ಭಿಕ್ಷಕೋಹಳು            ೩೯

ಭಿಕ್ಷಮಾಡಿ ತಂದು ತಾನು ಕುಟ್ಟಿಬೀಸಿ ಅಡಿಗೆ ಮಾಡಿ
ಅಕ್ಷತೆಯು ಗಂಧಪುಷ್ಟದಿ
ಸಾಕ್ತತಾಗಿ ಸಮಾಧಿಗೆಯು ಪೂಜಿಸಿಯೆ ನೈವೇದ್ಯ
ಭಿಕ್ಷದನ್ನ ಮುಂದೆಯಿಡುವಳು          ೪೦

ಮಡಿಯಲಿಂದು ಗುರುವಿಗೆಯು ಎಡಿಯ ಬಡಿಸಿ ಉಣಿಸುತಿಹಳು
ಕಡೆಯಲೀಗ ತಾನು ಉಂಬಳು
ಪಡುವಲಸ್ತವಾಗೆ ಸೂರ್ಯ ವೇದಾಂತ ಗುರುಮುಖದಿ
ಒಡೊಡದು ತತ್ವ ಕೇಳ್ವಳು೪೧

ಎರಡು ರಾತ್ರಿ ಝಾವವಾಗೆ ಮಲಗಿಕೊಂಬಳೊಂದು ಝಾವ
ತೆರವಳು ಕಣ್ಣ ಕುಳತೆಯು
ಗುರಿಯು ನೀಲ ತೋಯ ಮಧ್ಯದಲ್ಲಿ ಬ್ರಹ್ಮ ಕಾಣುತಲಿ
ಅರುಣಕಾಲತತ್ವ ಪಾಡ್ವಳು            ೪೨

ಧಿರಳಿಹಳು ಜ್ಞಾನದಲ್ಲಿ ಶೂರಳಿಹಳು ಸೇವೆಯಲ್ಲಿ
ಕಾರಣಿಹಳು ಮಾತಿನಲ್ಲಿಯು
ಭಾರಿಯಿಹಳು ಬುದ್ಧಿಯಲ್ಲಿ ಪೂರಣಿಹಳು ಬೋಧಗೆಯು
ವೀರಮ್ಮ ಬ್ರಹ್ಮವಾಗಿಯೆ   ೪೩

ಗುರು ಸಮಾಧಿಗಳ ಈಗ ಪರಿಪರಿಯಲಿ ಪೂಜಿಪಳು
ಇರುವಳೀಗ ಮುಹೂರ್ತ ಮಾತ್ರವು
ಗುರುವಿನ ಗುರುವು ಪರಮ ಗುರುವು ಪರಮೇಷ್ಟಿಯು
ಗುರುವು ಗುರುವು ಎನುತಲಿರ್ದಳು     ೪೪

ಅಷ್ಟು ಪೂಜೆ ಮಾಡುವಳು ಗುರುವ ಸ್ಮರಣೆಯಿಂದಲಿ
ಬಟ್ಟೆ ತಪ್ಪಿ ಬಂದವರಿಗೆಯು
ಇಷ್ಟು ಅನ್ನಯೇನ ಕೊಟ್ಟು ಅವರ ಹಸಿವು ಕಳೆವುತಿಹಳು
ನಿಷ್ಟೆ ಗುರುವಿಲಿಟ್ಟು ಇಹಳು           ೪೫

ಇಂತು ಇರಲು ಅಲ್ಲಿಗೊಬ್ಬ ಮುಕ್ತಿ ಹೊಂದೆನಂತ ಬಂದ
ನಿಂತನೀಗ ಗುರುವ ಸೇವೆಗ
ಚಿಂತೆ ಹೋಯ್ತು ಕೆಲವು ವೀರಮ್ಮಗೆಯು ಜೋಡನೀಗ
ಬಂತೆನುತ ಹರುಷವಾದಳು  ೪೬

ಮಾಡುತಿರ್ದ ಜೋಡಾಗಿ ಸೇವೆಯನು ಭೀಕ್ಷವನು
ಮಾಡಿತಿರ್ದ ಸಕಲವವನೆಯು
ಕೂಡೆ ತತ್ವವನು ಕೇಳ್ವ ಹಾಡ್ವ ವೀರಮ್ಮನೊಳು
ಮಾಡಿಸಿದಳನುಗ್ರಹವನು    ೪೭

ನಿಂದು ಇದ್ದ ಅವನು ವೀರಮ್ಮಗೆಯು ಜೋಡಾಗಿ
ಅಂದು ಸಕಲ ಸೇವೆಯೊಳಗೆಯು
ಬಂದನು ಮತ್ತೊಬ್ಬನೀಗ ಅವನು ಒಂದು ವರುಷಕೆಯು
ಹೊಂದಿಸೆನ್ನ ಮುಕ್ತಿಯನ್ನುತ          ೪೮

ವಿರಮ್ಮಗೆಯು ಹೇಳಿಕೊಂಡು ಮುಕ್ತಿ ಹೊಂದಿಸೆಂದು
ದೂರದಲೆ ಅಡ್ಡ ಬೀಳಲು
ಪೂರ ಕರುಣ ಮಾಡಿ ಮುಕ್ತಿ ಸೇರಿಸೆಂದು ಗುರುವಿಗೆಯು
ವೀರಮ್ಮ ಬೇಡಿಕೊಂಡಳು   ೪೯

ಏಳು ಅಂದ ಗುರುವು ಸುಕೃತ ಕಾಲ ಬರಲು ತಾನೆ ಅಹುದು
ಕೇಳು ವೀರಮ್ಮನೀಗಲೂ
ಹೇಳಿದಂತೆ ನಡಕೋ ಗುರು ಸೇವೆ ಮೀರದಿರಲು ಎನಲು
ಕೇಳಿ ಬುದ್ಧಿಯಂದನಾಗಳು  ೫೦

ಇರುತಿರಲು ಮಾಡಿಸಿದಳು ಗುರು ಅನುಗ್ರಹವನಿಗೆ
ಕರುಣವವನ ಮ್ಯಾಲೆ ಕರಗೊಳ
ಗುರಿಯನಿಡು ಗುರುವು ಹೇಳಿದಲ್ಲಿ ಎಂದು ಭೋಧಿಪಳು
ಪರಮ ತಾಯಿ ಆಗಿಹಳು     ೫೧

ಇಂತು ವರುಷವೀಗ ಇರಲು ಮೊದಲೆ ಬಂದವನಿಗೆ ಅಂದ
ನೀಂ ತಿಳಿಯೂ ಮಾತ ಹೇಳ್ವೆನು
ಅಂತು ಗುರುವು ಬೋಧಿಸಿಯೆ ಬ್ರಹ್ಮ ಮಾಡಿದಿಂದಯೇ
ನಂತ ಸೇವೆ ನಮಗೆಯೆಂದನು            ೫೨

ನೀವೆ ನಾನೆಯೆಂದು ಗುರುವು ನೆತ್ತಿಯಲ್ಲಿ ಕರವನಿಡಲು
ನಾವು ಆದೆವು ಸದ್ಗುರು
ಆವ ಸೇವೆ ಎಮಗೆ ಇಲ್ಲ ಗುರುವೆ ನಾವೇ ಆದ ಹಿಂದೆ
ಭಾವಿಸಿಯೆ ತಿಳಿಯೆಯಂದನು           ೫೩

ನಮ್ಮಗೆಯು ಗುರುವಿಗೆಯು ಹೆಚ್ಚು ಕಡಿಮೆ ಏನು ಅಂದೆ
ಬ್ರಹ್ಮವೀಗ ನಾವು ಆದೆವು
ನಿಮ್ಮಗೆಯು ತಿಳಿವುದಿಲ್ಲ ಅದೇ ಗರುವು ನಾವು ಈಗ
ತಮ್ಮ ಸೇವೆ ಸಲ್ಲವೆಂದನು೫೪

ಕಡೆಯತನಕ ಸೇವೆ ಮಾಡೆ ಗುರುತನೆಂದು ಬರಲಿಬೇಕು
ಬಿಡು ಭಿಕ್ಷ ನಾನು ಬೇಡುವೆನು
ಒಡಲಿಗಿಕ್ಕುವಳು ಅನ್ನ ಆಕೆ ತಂದು ಎಮಗೆ ಎನುತ
ಮುಡದರಾನು ಬೋಧೆ ಮಾಡ್ದನು   ೫೫

ಕೇಳಿದನು ಅವನ ಬೋಧೆ ಮೊದಲೆ ಬಂದವನು ಈಗ
ಹೇಳಿ ಇಬ್ಬರೊಂದಾದರೂ
ಮೂಳಗಳ ಮಾತನಾಡಿ ಗುರುವ ಸೇವೆ ಬಿಟ್ಟರಾಗ
ಮ್ಯಾಲೆ ಬಿತ್ತು ವೀರಮ್ಮಗೆ  ೫೬

ಬಿತ್ತಿದರು ಭಂಗಿಯನು ಹೊಳೆಯ ಬದಿಯು ಮಡಿಯಿರಲು
ಮತ್ತೆ ಹಾಕಿದರು ಖಸಖಸಿ
ಮತ್ತೆ ಕೊಬ್ಬರಿಯು ಬೆಲ್ಲ ಕಲಸಿಕೊಂಡು ತಿಂದು ದೇಹ
ಯಿತ್ತ ಕಾಲೆತ್ತಲಿಹರು        ೫೭

ಭಂಗಿ ನೀರ ಮಾಡುವರು ಘಳಿಗೆ ಘಳಿಗೆ ಕುಡಿಹುತಿಹರು
ಅಂಗ ಪರವಶವು ಆಗಿಯೆ
ಸಂಗಡಲಿ ಗಾಂಜಿ ತೆಗೆದು ಅರದು ಮುಟ್ಟಿಗೆಯ ಮಾಡಿ
ನುಂಗುವರು ಮುದ್ದೆಮುದ್ದೆಯು     ೫೮

ಗುಡುಗುಡಿಯ ಮಾಡಿಕೊಂಡು ಭಂಗಿತೆನೆಯ ಕೈಯಲುದ್ದಿ
ಕಡಿಗೆ ಬೀಜ ಚಲ್ಲಿ ಅದನನು
ಹಿಡಿದು ಮುಶಿಯೊಳಗೆ ತುಂಬಿಯಡಿಯಡಿಗೆಸೇರಿ ಕಣ್ಣು
ಖಿಡಿಯ ಚೂರಿನಂತೆ ಇದ್ದರು           ೫೯

ಗುಡ್ಡದ ಹಳೆಯ ಮರವು ಬಿದ್ದುಯಿರಲು ಅವನು ಈಗ
ಅಡ್ಡಹಿಡಿದು ಎರಡು ತುಂಡನು
ಒಡ್ಡಿ ಒಂದಕೊಂದು ಬೆಂಕಿ ಹಚ್ಚಿಹಳು ಹರಟೆಯಾದ
ಗೊಡ್ಡು ಮಾತುಗಳನೆ ಬಡಿವರು       ೬೦

ಕರೆದರೆಯು ಮಾತಾಡರೊರಲಿದರೆ ಓಯೆನ್ನ
ರರವುತಿಹರು ಭಂಗಿ ಘುಟಿಕೆಯ
ಸ್ಮರಣೆಗೆಟ್ಟು ಬಗಳುವರು ಮರ್ಯಾದೆ ತಪ್ಪಿವಂದಕೆ
ನೆರವಾಗಾರು ವೀರಮ್ಮಗೆ    ೬೧

ಕಟ್ಟಿಗೆಯ ತರವದ್ಹೋಯ್ತು ಕಾಯಿಪಲ್ಯ ತರವದ್ಹೋಯ್ತು
ಹೊಟ್ಟಿಗೆಯು ದೊರಕಿಸುವುದು
ಬಿಟ್ಟು ಹೋಯ್ತು ತತ್ವ ಹೇಳ್ವ ಗುರುವ ಕಡಿಗೆ ನೋಡದಾಯ್ತು
ನಿಷ್ಠೆ ಸ್ನಾನ ಸಂಧ್ಯಾನ ಹೋಯಿತು   ೬೨

ಕಸವ ಬಳಿವದೆಲ್ಲ ಹೋಯ್ತು ಸಾರಣಿಯು ಥಳಿಯ ಹೋಯ್ತು
ಅಸಮ ಸಮಾಧಿಗಳ ಪೂಜೆಯು
ಬೆಸನಗೊಳ್ಳದಲೆ ಹೋಯ್ತು ಬಿಸಿಯ ಬೂದಿ ಮೈಗೆ ಹೂಸಿ
ರುಷಿಯು ನಾವುಯೆನುತಲೀಹರು      ೬೩

ಮರಕೆ ಹಗ್ಗಗಳ ಕಟ್ಟಿ ಉಯ್ಯಾಲೆ ಆಡುವರು
ಗುರುವುಗಳ ತೋಪು ಹಾಕಿರೆ
ಪರಿಪರಿಯ ಫಲಗಳನು ಏರಿ ತಿನ್ನುವರುವಂದು
ತರರು ಮಠಕೆ ಗುರುಗಳಿಂಗೆಯು        ೬೪

ಬಣ್ಣಬಣ್ಣದ್ಹಾಡುಗಳು ಹಾಡುವರು ಭಂಗಿಗೆಣೆಯ
ರಿನ್ನು ಬರಲು ವೀರಮ್ಮಗೆ
ಅನ್ನವಿಕ್ಕುಯೆಂಬುತಿಹರು ನಾವು ಹಸಿದೆಯೆಂಬುವರು
ತನ್ನಗೆಯು ತಾವೆ ಕುಣಿವರು            ೬೫

ಅನ್ನವಿಕ್ಕಲಿರಲು ವೀರಮ್ಮಗೆಯು ಘರ್ಜಿಸುವರು
ಚೆನ್ನ ಮಹಾತ್ಮರಿಂಗೆಯು
ಅನ್ನವಿಲ್ಲವೆನ್ನುತಿದ್ದಿ ನಿನ್ನ ಜನ್ಮ ವ್ಯರ್ಥವೆಂದು
ಅನ್ಯೊವಿನ್ಯ ಬೊಗಳುತಿಹರು           ೬೬

ಇಂಥ ಮಹಾತ್ಮರೊಂದೊಂದು ಘಟಕ ಅಧಿಕಾರಿಗಳು
ಇಂಥವರಿಗೆ ಇಲ್ಲವೆನುವೆಯಾ
ಎಂತು ಜ್ಞಾನ ಕೇಳ್ದಡೇನು ತಿಳಿವಿಕ್ಹುಟ್ಟಲಿಲ್ಲ ನ
ಮ್ಮಂಥ ಮಹಿಮರರಿಯೆ ಎಂದರು     ೬೭

ಅಡವಿ ಪಲ್ಯ ತಿರುಗುತಿಹಳು ಕಟ್ಟಿಗೆಯನೆಳೆದು ತಹಳು
ಅಡರಿ ಮಾವಿನ ಮರಗಳ
ಒಡನೆ ಕೆಡಹಿ ಕಾಯಿಗಳ ಹುಳಿಗೆಯೆಂದು ಬಳಿದು ತರಲಾ
ಕಡಿಗೆ ನೋಡರೀಗಯಿಬ್ಬರೂ           ೬೮

ನಾನಾ ಬಗೆಯ ತಂದ ಭಿಕ್ಷವೇನು ಅವರ ಹೊಟ್ಟಿಗೆಯು
ತಾನು ಸಾಲದಾಗೆ ನಿರಾಹಾರ
ನಾನ ಆಗುವವು ಗುರುವಿಗೆಯು ಸಹಿತ ಅದನು ಕಂಡು
ಜ್ಞಾನ ವೀರಮ್ಮಗೆಂದನು     ೬೯

ಏನು ಕಾರಣಿವರನೀಗ ಇಟ್ಟುಕೊಂಡು ಉಪವಾಸ
ವನು ಬೀಳುವದು ಒಳ್ಳೆದೇ
ಕೋಣನಂತೆ ಅಹರೆ ಎಲ್ಲೆನ್ನಬೇಡಿ ತಿನ್ನತಿಹರು
ನೀನು ಕೊಡು ಅಪ್ಪಣೆಂದನು           ೭೦

ಎನ್ನಲಿಕ್ಕೆ ಗುರುವು ನಾನು ಅಪ್ಪಣಿಯ ಕೊಡಲಿ ಆಹದೇ
ಇನ್ನು ಇದು ಅರಣ್ಯವು
ನನ್ನಗೆಯು ಜೋಡು ಇಲ್ಲ ಇರಲಿ ಅವರ ಹೊಟ್ಟಿಗೆಯು
ಅನ್ನವನ್ನೆ ತಾಹೆನೆಂದಳು    ೭೧

ಎಂದು ತಂದಳಾಗವೊಂದು ಈಸಗಾಯಿ ಘನವೆನಿಪ
ವೊಂದು ಸಣ್ಣ ಕೇಲನೀಗಲೀ
ಅಂದು ಅದರೊಳಗೆ ತನ್ನ ಕಾವಿ ಸೀರೆ ಜೋಳಿಗಿಟ್ಟು
ಮುಂದೆ ಈಸ ಬಿದ್ದಳಾಗಳು೭೨

ಈಸಿ ಗೋದಾವರಿಯನೀಗ ಆಚೆಗ್ಹೋಗಿ ಕಾವಿಯುಟ್ಟು
ಆಸು ಭಕ್ತರಜಕರಲ್ಲಿಯೂ
ವಾಸವಿರಲು ಇಟ್ಟಳಾಗ ಕೇಲನಲ್ಲಿ ಜೋಳಿಗೆಯ
ದೇಶಿಕನ ನೆನೆದುಕೊಂಡಳು   ೭೩

ನದಿಯ ತಟದಿಯಲಗಡ ದೊಡ್ಡ ಗ್ರಾಮವಿರಲು ಭಕ್ತ
ಸದನ ಹೊಕ್ಕು ಭಿಕ್ಷವೆತ್ತಿಯೆ
ಅದನು ಕಾಯಿಪಲ್ಯ ತುಪ್ಪ ಬೆಲ್ಲವೆಲ್ಲ ಕೋಲೊಳಿಟ್ಟು
ಸದಮಲಳು ಈಸಬಿದ್ದಳು   ೭೪

ಈ ಕಡಿಗೆ ದಾಟಿ ವದ್ದಿವಸ್ತ್ರ ಹಿಂಡಿ ಕಾವಿಯುಟ್ಟು
ಪಾಕಮಾಡಿ ಮನಿಯ ಸಾರಿಸಿ
ಏಕಾತ್ಮ ಗುರುವ ನೆನೆದು ಅಡಿಗೆ ಮಾಡಿ ನಿತ್ಯದಂತೆ
ಸ್ವೀಕರವ ಮಾಡಿಸಿದಳು     ೭೫

 

[1] ಮುಪ್ಪುರ್ಯಾಗೆ

[2] ಮುಪ್ಪುರ್ಯಾಗೆ

[3] ಪದಕೆಯರಗಿ

[4] ಪದಕೆಯರಗಿ