ರಾಗ ತಮ್ಮಿಚ್ಛೆ ತಾಳ ರೂಪಕ

ಕೇಳಿಜನ ಸರ್ವವೆಲ್ಲ ಚಿದಾನಂದ ಅವಧೂತ
ಲೋಲ ರಾಜಯೋಗಿ ಚರಿತವಾ        ಪಲ್ಲವಿ

ಗುರುಕಟಾಕ್ಷ ಚಿದಾನಂದ ಅವಧೂತ ಚರಿತದಲ್ಲಿ
ಒರೆವನೀಗ ಸಾಂಗವಾಗಿಯೇ
ಹಿರಿಯರಿಗೆ ಕಿರಿಯರಿಗೆ ತಿಳಿಯಲಂದು ಭಕ್ತಿಲಿಂದು
ತರುಳ ಅಯ್ಯಪ್ಪ ನುಡಿದನು          

ಬೇಡಿಕೊಂಬೆ ನಿಮಗೆ ಈಗ ಮಾಡಿದಿರಿ ನಿದ್ರೆಯನು
ಆಡಬೇಡಿ ಆವ ಮಾತನು
ಗೋಡೆಕಂಭಕೊರಗದಲೆ ಚಿತ್ತವಿಟ್ಟು ಕೇಳಿದರೆ
ಮಾಡಿಯಿಹ ಪಾಪ ಹೋಹವು        

ಸಾರರೀಗೆ ಮುಕ್ತಿಬೀರ್ವ ಶೂರರಿಗೆ ಕಡಿಯಹಾಯ್ವ
ವೀರರರಿಗೆ ತನುಗೆ ಸಾಕ್ಷಿಹಾ
ಧೀರರರಿಗೆ ಆತ್ಮ ವೊಚಾರರಿಗೆ ತತ್ವಜಾಲ
ಗಾರರಿಗೆಯು ಹೇಳುವುದಿದನು         

ಕಾಸುಕಾಸು ಕೂಡಿಪಗೆ ಏಸುಬ್ಯಾರೆ ನೋಡಿಪಗೆ
ವೇಶಿಯರಲಿ ಮಗ್ನನಾದಗೆ
ಕ್ಲೇಶದಲ್ಲಿ ಕುದಿವನಿಗೆ ರೋಷದಲ್ಲಿ ಈಹನಿಗೆ
ಈಸು ಹೇಳಬಾರದಿದನನು  

ಯಾತ್ರೆ ಮಾಡ್ದ ವಿವರಯೋಧ್ಯ ಭಕ್ತರುಗಳ ಕೇಳಲಾಗದು
ಮತ್ತೆ ಹೇಳ್ದಕೇಳ್ದ ಪರಿಯಲಿ
ನಿತ್ಯ ಗುರುವ ಸೇವೆಯಲ್ಲಿ ವೀರಮ್ಮನ ನೆನೆಸುತ
ಅತ್ಯಂತ ಭಕುತಲಿರ್ದನು    

ಪಾದವನ್ನೆ ಹಿಡಿವನೊಮ್ಮೆ ಮೈಯ್ಯ ಹಿಸುಕುವ ಗುರುವರನ
ಕಾದುಕೊಂಡು ಇರುತಲಿಹನು
ಓದುತಿರೆ ತತ್ವವನು ಗುರುಬದಿಯ ಭಕ್ತರುಗಳು
ಭೇದಿಸಿಯೆ ತಿಳಿವ ದೂರದಿ  

ಗುರುವ ವಾಕ್ಯ ಮುಂಚದಲೆ ಹೋಹ ಹೇಳಿದಲ್ಲಿಗೆಯು
ತರುವ ಏನಾದ ಭಿಕ್ಷುವ
ಅರಿಯದಂಥ ಗುಪ್ತಕೆಲಸಕ್ಹಾಜೀರು ಇರುತಲಿಹನು
ಹಿರಿಯ ಕಿರಿಯ ಕೆಲಸಕೆಲ್ಲಕೆ

ದೂರದಲಿ ನಿಂತು ಯವೆಯ ಬಡಿಯದಲೆ ದೃಷ್ಟಿಸಿಯೆ
ಪೂರ ಆನಂದವುದಕದೀ
ಧಾರೆ ಇಳಿಯೆ ಮೈಮರೆತು ಕರದರೆಚ್ಚರರಿಯದಾತ್ಮ
ವೀರನಿರುತಲಿರ್ದಯೀತ್ಯೆರಾ           

ಈಹ ಅಯೋಧ್ಯ ಗ್ರಾಮದೊಳಗೆ ವಿರೂಪಕ್ಷಗುಡಿಯು ಇರೆ
ಬಹಳ ತತ್ವ ಕೀರ್ತನೆಗಳನು
ಮಹಾ ಅನುಭವಗಳಿಂದ ಹೇಳ್ವ ಗುರುವಗೊಪ್ಪಿಸುವ
ಬಹು ಜನವು ಮುತ್ತಿಹುದು

ಕೇತಕಿಯ ಪುಷ್ಪಸರವ ವಿರೂಪಾಕ್ಷನರ್ಚಕರು
ಆತಗೆಯು ತಂದು ಮುಡಿಪರು
ಈತ ಶಿವನು ಎಂದು ಹರುಷಾತಿಶಯದಲಿಂದ ನಾನಾ
ಜಾತಿಗಳು ನೋಡುತಿಹರು   ೧೦

ಬಗೆಬಗೆಯ ವೈರಾಗ್ಯ ಪದನು ಮಾಡಿ ಬರಲುರಟ್ಟ
ಣಗಳು ಇಟ್ಟಿಹವು ಓಣೀಲಿ
ಸುಗಮ ಪ್ರಾಯದ ಸ್ತ್ರೀಯರುಗಳು ತೆಕ್ಕೆಲಿಂದ ಹಿಡಿಯೆ
ನಗುತಲವರ ಕುಡುರ ಹಾಕ್ವನು        ೧೧

ಶಾಪಿಸುವರು ಚಿಟುಕ ಮುರಿವರು ಸೀರೆ ಉಡುವದೆಂದು
ಕೋಪಿಸುವರು ಮತ್ತೆ ಈಗಲೀ
ಓಪಿ ಬಾಳು ಎಂದು ಅಲಬಲಾಯಕೊಂಡು ನಿನ
ರೂಪು ಸಾಕು ನೋಡ್ವದೆಂಬರು        ೧೧೨

ಇಂಥ ಸುದ್ದಿಗಳು ಗುರುವುಗಂತು ಮುಟ್ಟಿ ಕೇಳೆ ತನ್ನೊ
ಳಂತು ನಗುತ ಮಾಡ್ವ ಚರ್ಯಕ್ಕೆ
ಸಂತೋಷವಾಗಿ ಕೀರ್ತನೆಗಳ ನಿತ್ಯ ಲಾಲಿಸುತ ವೇ
ದಾಂತ ಅನುಭವೀವು ಎಂದನು          ೧೩

ಗುರುವಿನ ಭಕ್ತರೆಲ್ಲ ಆತನಾ ಸುತ್ತಲಿಹರು
ಪರಮ ಭಕ್ತಿಗಳನೆ ಮಾಡ್ವರು
ಇರುವ ವಿವರ ಕಂಡು ಗುರುವಿನ ಮನೆಯೊಳಿರುವರೆಲ್ಲ
ಹುರಿಗುಕೊಂಬರೀಗ ಹೊಟ್ಟೆಯ       ೧೪

ಈತನಿಗೆ ನಡೆವರೆಲ್ಲ ಮಕ್ಕಳಿಗೆ ವಿಷವು ಕೊಟ್ಟು
ಈತನಲ್ಲಿ ಇರಲು ಹಾನಿಯು
ಪಾತಕೆನದೆ ಹೊತ್ತು ಕೆನೆಯ ಉಂಡಿಂದ ನಿಡೇ ಹರು
ಷಾತಿಶಯದೊಳಿರುತಲಿರ್ದನು          ೧೫

ನುಚ್ಚುಕಾರು ಹೊತ್ತಿಗೆನ್ನ ಇಕ್ಕದಿರಿತಿರಲು ಕಲ
ಗಚ್ಚಿನೊಳಗೆ ಇದ್ದ ಆಗಳನು
ಬಿಚ್ಚಿ ಬಿಚ್ಚಿ ಆರಿಸಿಯೆ ಎರಡುಮೂರು ತುತ್ತುಕೊಂಡು
ಸ್ಚಚ್ಛವಾಗಿ ಇರುತಲಿಹನು೧೬

ಪುಟ್ಟಪ್ಪ ಲಿಂಗಮ್ಮ ಯೆಂಬ ಸತಿಪತಿಗಳು ಬಹಳ
ದುಷ್ಟಭಕ್ತರವರು ಈಗಲೀ
ಕೊಟ್ಟಿಹರು ಇನ್ನೂರು ವರಹ ತಾ ಎಂದು ಮುನಿಸು
ಗುಟ್ಟುವರು ಘಳಿಗೆ ಘಳಿಗೆ  ೧೭

ಸಾಧುಗಳಿಗೆ ಒಮ್ಮೆ ಅಷ್ಟು ತಾಯೆನಲು ಬಾಹದೆಲ್ಲಿ
ಕ್ರೋಧ ಮಾಡುತಿಹರು ಒಬ್ಬರ
ಬೋಧೆ ಕೇಳದಂತವರ ಬಳಿಯ ಸಾಲಮಾಡಿರಲು
ಬಾಧೆ ಬಹಳವಾಗಿ ಈಹುದು            ೧೮

ಹಡಿಯಲಿಕ್ಕೆ ಆದಳಲ್ಲಿ ಹಡವಣಿಗೆ ಮಾಡ್ವರಿಲ್ಲ
ನಡದು ಒಬ್ಬರಲ್ಲಿಗ್ಹೋಗರು
ನಡುಗತಿತ್ತು ಅವರ ಬಿರುನುಡಿಗೆ ಸಕಲ ಭಕ್ತರೆಲ್ಲ
ಅಡಸಿ ಬಯ್ವುತ್ತಿತ್ತು ಜನವದು        ೧೯

ಸೂಲಗಿತ್ತಿಗ್ಹೋಗಬೇಡ ಎಂದು ಅಜ್ಞೆ ಮಾಡಿದರು
ಲೋಲಗುರುವು ಕೇಳ್ದಶಿಷ್ಯನ
ಹೇಳುಮುಂದೆ ಈಕೆ ಗತಿಯು ಪ್ರಸೂತಿ ಕಾಲಕೆಯು ಎನಲು
ಅನುಕೂಲ ನಾನೆ ಇಹೆನು ಎಂದನು     ೨೦

ಎದ್ದ ಬ್ಯಾನಿಗಳಿಗೆ ತಾನು ನಡುವನೀಗ ಹಿಡಿದನಾಗ
ಹೊತ್ತುಗಳೆದ ಆಕೆ ಸಂಗಡ
ಸಿದ್ಧಪುರುಷರ ಸುದ್ದಿಹೇಳಿ ಧೈರ್ಯ ಕೊಡುತಲಿರಲು
ಪುತ್ರನನ್ನೆ ಹಡೆದಳಾಗಳು    ೨೧

ಹುರಿಯಕೊಯ್ದು ಮಾಸಹೂಳಿ ಮಧುವನೀಗ ಚೀಪಿಸಿಯೆ
ಎರದನಾಗ ತಾಯಿಸುತರಿಗೆ
ಕರದರಗಸರೀಗ ಬಾರದಿರುತಿರಲು ಸೇವೆಯನು
ಗುರುವು ಇತ್ತನೆಂದು ಒಗೆದನು          ೨೨

ಇರುವ ದಡ್ಡಿಯೊಳಗೆ ಚಾರುಚಂಬೆಯು ಇತ್ತು ನರಕ
ಭರಿಯು ಆಗಿ ಸ್ಥಳವು ಇಲ್ಲಿರೆ
ದೊರಕದಿರಲು ಸಲಿಕಕರದಿ ಮುದ್ದೆಮಾಡಿ ಅಗುಳತೆಯೊಳು
ಇರಿಸಿದನು ಸರ್ವವೆಲ್ಲವ    ೨೩

ತೊಲಿಯನೀಗ ಅಡ್ಡಹಾಕಿ ಕುಳ್ಳಿರುವಂತೆ ಪಾಡಮಾಡಿ
ಬಳಿಕತನಿಗೆಂಡ ಮಾಡಿಯೆ
ಕೆಳಗೆ ಅಗ್ಗಿಷ್ಟಿಗೆಯ ತುಂಬಿ ಹೊರಸಿನ ಬುಡದಲಿಟ್ಟು
ಚಲುವನಿಂದ ಕಾಸುತಿಹನು  ೨೪

ಅಡಿಗೆ ಮಾಡಿಕ್ಕುವನು ಖಾರ ಕುಟ್ಟಿಕೊಡುತ್ತಿಹನು
ಹಿಡಿದುಕೊಂಬ ಶಿಸುವನೀಗಲೀ
ಮಡಿಸಿಮಡಿಸಿ ವೀಳ್ಯಗಳ ಘಳಿಗೆಘಳಿಗೆ ಕೊಡುತಿಹನು
ಹಡೆದ ತಾಯಿ ತೆರದಿ ಇರುತಿಹ         ೨೫

ಎದ್ದು ಹಗಲೆ ಇರುಳೆ ದೀಪ ಚಾಚುತಲಿ ಬತ್ತಿಯನ್ನು
ಸಿದ್ಧವಾಗಿ ತಾನೆ ಮಾಡುತ
ಶುದ್ಧವಾಗಿ ಆಕಿಗೆಯು ಕೈಯಮೈಯನೊರಸಿ ಎರೆವ
ಬುದ್ದಿಯೆಂಬ ಮಾತುಮಾತಿಗೆ         ೨೬

ತಾನೆ ಕುಯಿಲು ಮುತ್ತೈದೆ ತಾನೆ ತೊಟ್ಟಲಿಕ್ಕುವನು
ತಾನೆ ಜೋಗುಳವ ಪಾಡ್ವನು
ಏನು ಹೇಳಲಾಕೆ ಗಂಡ ಪುಟ್ಟಯ್ಯನೆಂಬುವನಿಗೆ
ನಾನಾ ಬ್ಯಾನೆ ಬಂದು ಮುಚ್ಚಿತು      ೨೭

ಉಣಿಸುವನು ಬಾಯ ತೊಳಿವ ಮಲಗಿಸುವ [1]ಕೂಡ್ರಿಸುವ[2]
ದಣಿದೆನನಲು ನಿದ್ರೆ ಕಾಣನು
ಗುಣಕತೀತನಾದ ಸದ್ಗುರುವ ಸೇವೆ ದೊರಕಿತೆಂದು
ಮನದಿ ಸಂತೋಷವೀಹನು  ೨೮

ಹತ್ತಿದುದು ಹೇಲಾಟ ಎಡೆದೆರಪು ಇಲ್ಲದಲೆ
ಮತ್ತೆ ಮಂಚ ಇಳಿಯರಾರೆನೆ
ಹತ್ತೆ ಕಟ್ಟಿದನು ನವರಾಗಳನೀಗ ಹೇಲಲಿಕ್ಕೆ
ಅತಿಶಯದಿ ಬಾಯ ಮಾಡಿಯೇ        ೨೯

ಹೆಡಿಗೆ ಮ್ಯಾಲೆ ಹೆಡಿಗೆಯನು ಬೂದಿ ತಂದು ಹಾಕಿಹಾಕಿ
ಕೆಡಗು ದೋಣಿಯಂತೆ ಇಳಿಯಲು
ಹಡಕಿಯನು ಹೇಳಲೇನ ತೆಗೆದು ತೆಗೆದು ಹೊಲಸಿಗೆಯು
ಎಡದೆರಿಲ್ಲುದ್ಹುಳವು ಆದವು          ೩೦

ನೆಲೆಯು ಇಲ್ಲದಲೆ ಹುಳವು ಅಡಕಲಿಯೊಳು ಮಡಕಲಿಯೊಳು
ನೆಲದ ಮ್ಯಾಲೆ ಹಾಕಿಸಿಯೊಳು
ಹಲವು ಹರಿದು ಆಡಲಿಕ್ಕೆ ಬಳಿದ ಬಿಟ್ಟವನು
ಕೆಲಸ ಗುರುವಿನದು ಎನ್ನುತ            ೩೧

ಆರು ತಿಂಗಳೀ ಪರಿಯು ಅವನ ಸೇವೆ ಮಾಡಲಿಕ್ಕೆ
ತೀರ ಬಂತು ಆಯುಷ್ಯೆಂಬುದು
ಘೇರು ಇಕ್ಕೆ ನೆಲವ ಸಾರಿಸಿಯೆ ಹಾಸಿ ತೊಡಿಯ ಕೊಡಲು
ಹಾರೀತು ಪ್ರಾಣವಾಗಲೂ  ೩೯

ಕನಕಗಿರಿಯ ಜೋಗಿ ಆ ವೇಳೆಯಲ್ಲ ಯೋಧ್ಯಕೆಯು
ಘನದ ಮುತ್ತಿಗೆಯಲಿರ್ದನು
ಹೆಣನ ದಹನ ಮಾಡಲಿಕ್ಕೆ ಮಾರ್ಗವಿಲ್ಲ ಹೊರುವರಿಲ್ಲ
ಎನಿತು ಯೋಚನೆಂದ ಗುರುವರ        ೩೩

ಏನು ಘನವು ಗುರುವೆ ನಾನು ಹೆಣನ ಹೊರುವೆ ಬೆಂಕಿ ಹಿಡಿವೆ
ನಾನೆ ಈಗ ಕುರುಳ ಹೊರುವೆನು
ನೀನೆ ನೋಡೆಂದು ನರಸನೆಂಬ ಗುರು ಸೇವಕನ ಕೂಡಿ
ತಾನೆ ಹೊತ್ತು ಕುರುಳ ಹೋಲಿಗೆಯು೩೪

ಹಾರುತಿರಲು ಗುಂಡುನರಸ ತಾನು ಸಹಿತ ಹೆಣನ ಹೊತ್ತು
ತೋರಿಸಿದನು ಶಿಖಿಗೆ ಹೆಣನನು
ಮೂರು ದಿನವು ಆಗೆ ಬೂದಿ ಹೊಳೆಯ ಕಲಸಿ ಅಸ್ತಿಯನ್ನೆ
ಆರಿಸಿಕೊಟ್ಟನೊಂದು ಸ್ಥಳದಲಿ        ೩೫

ಅಣ್ಣಪ್ಪನೆಂಬ ಆನೆಗೊಂದಿ ಸುಭೇದಾರನ ಕರೆಸಿ
ಇನ್ನು ಮದ್ದು ಗುಂಡು ಮಂದಿಯ
ಉನ್ನತಾಗಿ ಕಳುಹುದೆಂದು ರಾತ್ರಿಯು ಹರುಗೋಲ
ನನ್ನು ಏರಿ ವೈದ ಗುರುವಿನ೩೬

ಸಂಗಡಲೆ ಕಳುಹಿದನು ಮಂದಿ ಮದ್ದು ಗುಂಡುಗಳ
ಹಿಂಗದಾಯ್ತ ಯೋಧ್ಯ ಜೋಗಿಗೆ
ಮಂಗಲಿಂಗಮ್ಮ ಗೆಂದ ನಿನ್ನ ಗಂಡನಸ್ತಿ ತಂದು
ಸಂಗಡಂಅಲೆಂದಮಹಳವ   ೩೭

ಕರ್ಮ ಮಾಡೆ ಸುಟ್ಟ ಅಸ್ತಿ ಮುಚ್ಚಿ ಇರಲು ವೈಶ್ಯ ವೀ
ರಮ್ಮನಾ ಮೊಮ್ಮಗನು ಇಹನವಾ
ನಿರ್ಮಳದಿ ಕೊಡುವ ಗಂಟ ಕೊಟ್ಟು ಅಸ್ತಿಯನೆ ತಂದು
ಸಮ್ಮತಾಗಿ ಕರ್ಮ ನಡೆಸಿದಾ            ೩೮

ದುಷ್ಟಶೀಲೆ ಲಿಂಗಮ್ಮನ ಪತಿ ಪುಟ್ಟಣ್ಣ ವೈಶ್ಯನ
ಆಸ್ತಿಯಿಂದ ಕರ್ಮ ನಡೆಸಿದ
ನಶ್ವರವು ಪ್ರಪಂಚವೆಂಬ ಮಹಾತ್ಮರಿಂದ
ವೈಶ್ಯ ಕೃತಾರ್ಥಾಗಿ ಹೋದನು        ೩೯

ಪುಟ್ಟಪ್ಪ ಮಂತ್ರದಿಂದ ವೈಶ್ಯನ ಆಸ್ತಿಯಿಂದ
ಮುಟ್ಟಿ ಕರ್ಮ ಮಾಡೆ ಮಹಿಮನು
ಸುಟ್ಟು ಸಕಲ ಪಾಪವನು ಮುಟ್ಟಿದನು ಮುಕ್ತಿಗೆಯು
ಶಿಷ್ಟರು ಸಾಧುವೆಂದನು     ೪೦

ಲೋಕ ಪಾವನ ಮಾಡ್ವರೇನ ಮಾಡೆದುಕ್ಕುವದು
ಕೂಕ ಮನುಜರಿಗೆ ಸಲಿವುದೇ
ತಾಕವವರಿಗೆಯು ಒಂದು ದೋಷ ನಿಂದ್ಯಕುಂದಗಳು
ಏಕಾತ್ಮವರು ಈಗಳಿ          ೪೧

ಕೇಳು ದೇವ ನಿಮ್ಮ ನುಗ್ರಹವು ಆಗಲಿಲ್ಲ ಎನಗೆ
ಈ ವತನವು ನಿತ್ಯವಲ್ಲವು
ಬಲ್ಲಿರಯ್ಯ ನೀವೆ ಎನಲು ಇನ್ನು ಸಾವಧಾನ ಕಪಿಲ
ಠಾವಿನಲ್ಲಿ ಅಹದೆಂದನು    ೪೨

ದಿವಸದಿವಸ ಮನೆಯೊಳಗೆ ತತ್ವಶ್ರವಣವಾಗುತಿರಲು
ಕಿವಿಯ ಕೊಟ್ಟು ಕಡಿಯ ದ್ವಾರದಿ
ಅವನು ಎಲ್ಲ ಮನಕೆ ತಂದು ಸಮನಿಸಿಯೆ ಶಿವನು ಆಗೆ
ಭವವ ಕಾಳೆದೆನೆನುತಲಿರ್ದನು           ೪೩

ಅಪ್ಪ ವಿರೂಪಾಕ್ಷಗೆಯು ಶ್ರಾವಣ ಪೌರ್ಣಮಿ
ಒಪ್ಪೊ ಸೋಮವಾರ ರಾತ್ರೀಲಿ
ಇಪ್ಪ ಬೆಳದಿಂಗಳೊಳು ವಿಠಲನ ಬಜಾರದಿ
ಬಪ್ಪ ವೇಳ್ಯ ಸರ್ಪ ಕಂಡರು೪೪

ಮೀರಿದಾ ಸರ್ಪವೀಗ ಭೋರೆನುತ ಶಂಖಪಾಳಾ
ದಾರಿಯೊಳಗೆ ಆಡುತಿರಲಿಕೆ
ವೀರ ಗುರುರಾಯನಾಗ ಶಿಷ್ಯಗೆಳೆದು ತಾರೆಂದ
ಧೀರತನವ ನೋಡ್ವೆನೆಂದನು            ೪೫

ಎನ್ನಲಿಕ್ಕೆ ಬುದ್ಧಿಯಂದು ಗುರುವೆ ಸರ್ವರೂಪವೆಂದು
ಇನ್ನು ಹಿಡಿಯ ಹೋಗೆಸರ್ಪವು
ತನ್ನ ಮೋರಿಗೆಯು ನಿಲುವು ಉದ್ದ ಅದು ಅಡರಲಿಕ್ಕೆ
ಇನ್ನು ಟೆಕ್ಕೆಯಿಂದ ಅವಚಿದ            ೪೬

ಮೈಯೊಳಗೆ ನುಣಚಿದುದು ಮತ್ತೆರಗಡಿಸಿಯೆ ಹಿಡಿಯೆ
ಬಾಯಬಿಡುತಲಿತ್ತು ಭಯದಲಿ
ಕೈಯಹಾಕಿ ಹೆಡಕಿಗೆಯು ಎಳೆದು ತರಲು ಗುರುರಾಯ
ಅಯ್ಯ ಬಿಡು ಹೋಗಲೆಂದನು          ೪೭

ಹಂಪೆಹೊಕ್ಕು ಪೊಂಪಾಪತಿಯ ಸೋಂಪಿಲಿಂದ ಸೇವೆ ಮಾಡಿ
ಇಂಪಿನ ಅನುಭವಾಡುತ
ತಂಪು ನೆರಳಿಲಿಂದಯೋಧ್ಯ ಗ್ರಾಮ ಹೊಕ್ಕರಾಗ ಭಕ್ತ
ಗುಂಪಿಲಿಂದ ಗುರುವು ಶಿಷ್ಯರು          ೪೮

ಇರಲು ಗುರುರಾಯಗೆಯು ಎರಕೊಳಲು ತುಪ್ಪಕಂತ
ತೆರಳೆ ತುಂಗಭದ್ರ ಬಂದಿರೆ
ಹರುಗೋಲಲ್ಲಿ ಇಲ್ಲದಿರೆ ಗುರುಸ್ಮರಣೆ ಮಾಡಿ ನದಿಯ
ಶಿರದ ನ್ಯಾಲೆ ಚರಣವಿಟ್ಟನು           ೪೯

ನೆಲದ ಮ್ಯಾಲೆ ನಡೆದಂತೆ ನೀರಮ್ಯಾಲೆ ನಡೆದು ದಾಟಿ ತೆ
ರಳಿದೌ ಕಂಪಲಿಗೆಯು
ಘಳಿಲನೇಯು ತುಪ್ಪತುಂಬಿ ವೈಶ್ಯ ತಿಮ್ಮಪ್ಪನ ಕೂಡಿ
ಬಳಿಕ ಬಂದ ನದಿಯ ದಡಕೆಯು        ೫೦

ಅತ್ತಲಾಗಿ ಪ್ರಜೆಯು ಇರಲು ಇತ್ತಲಾಗಿ ಪ್ರಜೆಯು ಇರಲು
ಜತ್ತಾಗಿ ತಿಮ್ಮಪ್ಪನು
ಮತ್ತೆ ಕರವ ಹಿಡಿದುಕೊಂಡು ಗುರುವು ಮಾಳಿಗ್ಹತ್ತಿ ನೋಡೆ
ಸತ್ಯವಂತ ಬಂದ ಮನಿಗೆಯು            ೫೧

ಬುದ್ದಲಿಯ ತುಪ್ಪವನು ಬಳಿಕ ಮನೆಯವರು ನೋಡೆ
ಸಿದ್ಧವಾಗಿ ಗಂಗೋದಕ
ಇದ್ದಿಹದ ಕಂಡು ತಿಮ್ಮಣ್ಣ ಏನೋ ನೀರು ಎನಲು
ಮುಗ್ಧನಾದ ಮಾತ ಬಿಟ್ಟೆಯು        ೫೨

ನನ್ನ ಮನಿಯೊಳಗೆ ಧಡಿಯ ತುಪ್ಪವನ್ನೆ ತುಂಬಿದೆನು
ಎನ್ನುತಿಹ ಅಷ್ಟರೊಳಗೆಯು
ಇನ್ನು ಗುರುವಿನ ಮಗಳು ಲಕ್ಷ್ಮಿದೇವಿ ಮೈ.ತುಂಬಿ
ಎನ್ನುತಿರ್ದಳಾಗ ಜನರಿಗೆ     ೫೩

ಗಂಗೆ ಈಗ ಬಂದಿಹಳೆ ಸ್ನಾನ ಮಾಡೆ ಬುದ್ಧಲಿಯೊಲು
ಮಂಗಳಿಗೆ ಶಿಷ್ಯ ಭಕ್ತೀಲಿ
ತುಂಗೆ ಉದಕವಲ್ಲೆನಲು ಗಂಗದೊಳಗೆ ಹಾಕಿ
ಕಂಗಳಲಿ ನೋಡ್ಡರೆಲ್ಲರು  ೫೪

ಚಿನ್ಮಯನು ಗುರುವ ಕಂಡು ನನ್ನಗೆಯು ಸ್ನಾನ ಮಾಡೆ
ಇನ್ನು ತಂದ ಭಾಗೀರಥಿಯನು
ಎನ್ನ ಶಿಷ್ಯ ಎಂದು ಹೆಡಸು ಮಿಂಚು ಇಲ್ಲದಿರುತಿರಲು
ಸನ್ನುತಾನಂದವಾದನು       ೫೫

ಭಾಗೀರಥಿಯ ಸ್ನಾನ ಮಾಡ್ದ ಚಿದಾನಂದ ಪೂಜಿಸಿಯೆ
ಆಗಳಿತ್ತ ತೀರ್ಥ ಬುಧರಿಗೆ
ಸಾಗಿದವು ಪಂಕ್ತಿ ಸಮಾರಾಧನೆಯ ಬಹಳ ಮಾಡ್ಡ
ಆಗಳುಂಡಿತು ಸರ್ವವು        ೫೬

ಆರೋಗಣಿಗೆ ಮನಿಯೊಳಗೆ ಪತ್ರಾವಳಿಲ್ಲದಿರಲು ಗುರು
ವೀರ ಶಿಷ್ಯರೀರ್ವರಾಗಳು
ದಾರಿ ಹಿಡಿದು ಚಿಕ್ಕಜಂತಕಲ್ಲ ನದಿ ತಟಾಕಕ್ಕೆ
ಸಾರವೇದಾಂತವಾಡುತ      ೫೭

ನದಿಯ ತಟದಲೊಂದು ವಟವು ಕೆದರಿಕೊಂಡು ಎಲಿಗಳನು
ಅದುಭುತಾಗಿ ಅದುವೆ ಇರುತಿರೆ
ಸದಮಲರು ಕೊಯ್ದರಲ್ಲಿ ಬುಡದ ಕೊಂಗೆಗಳ ಎಲಿಯ
ಸದ್ಗುರುವು ಮಾತನೆಂದನು೫೮

ಹತ್ತು ಮರನ ಕೊನಿಗೆ ಎನಲು ಹತ್ತುವೆನು ಇಳಿಯಲರಿಯೆ
ಮತ್ತೆ ಬುದ್ಧಿಗೊಡುವೆರೇನೆನೆ
ಹತ್ತು ಇಳಿವಗೊಡಿವ್ಯಾಕೆನಲು ಹತ್ತಿದನು ತುದಿಗೆ ಗುರುವು
ಎತ್ತಿ ಮೋರೆ ನೋಡ್ದನಾಗಳು          ೫೯

ಜೋಲು ಕೊಂಬಿಗೆಯು ಬಾ ಜವ್ವಾಲೆ ಆಡು ಎನಲು
ಜೋಲು ಆಡ್ದ ಜೋಲು ಗೊಂಬೆಲಿ
ಬಾಲ ಎರಡು ಕೈಯಬಿಟ್ಟು ಆಡು ಎನಲು ಗುರುವಾಯ
ಕೇಳು ಬಿಟ್ತೆನೆರೆಡು ಕೈಯನು            ೬೦

ಬಿದ್ದಡೊಂಬರಾಗಣಿಯವೂಚದಿಂದ ಬಂಡೆಮ್ಯಾಲೆ
ಭದ್ರಕೈಯ ಹೊರುಯ ಬಿಟ್ಟೆಲು
ಎದ್ದ ಸಂಗಡಲೆ ಗುರುವು ಹ್ಯಾಗಿತ್ತು ಬಿದ್ದು ದೆನಲು
ಇದ್ದ ಮಾತು ಹೇಳತಿರ್ದನು            ೬೧

ಗುರುವೆ ಕೇಳು ಸ್ವಸ್ಥ ಅರಳಿ ಇರವಿನೊಲು ಬಿದ್ದಂತೆ
ಶರೀರಕಾ ಇತ್ತು ಎಂದೆನೆ
ಹರುಷಬಟ್ಟು ಪತ್ರಳೆಲೆಯ ಹೊರಿಸಿಕೊಂಡು ಮನಿಗೆ ಈಗ
ವರ ಚಿದಾನಂದ ಬಂದನು    ೬೨

ಅನ್ನವುದಕ ಗೊಡಿವೆಯಿಲ್ಲ ಮನ್ನಣಿಯು ಎಂಬುದಿಲ್ಲ
ಮುನ್ನ ಹಂಕಾರವಿಲ್ಲು
ಬೆನ್ನ ಛಳಿಯು ಮಳಿಯು ಬಡಿವಾರದೆಂಬುದದುವೆ ಇಲ್ಲ
ತನ್ನೊಳಗೆ ತಾನೆ ಇಹನು     ೬೩

ಒಂದು ದಿವಸ ವಿರೂಪಾಕ್ಷಗೊಂದಿಸಿಯೆ ಹನುಮ ಸರಳ
ನಂದು ದಾಂಟಿ ಅಂಜನಾದ್ರಿಗೆ
ಬಂದು ಹತ್ತಿ ಎಲ್ಲ ನೋಡಿ ಅಸ್ತಮಾದಲಳಿಯೆ ದಾರಿ
ಗಂದಿತ್ತು ಒಂದು ಹೆಬ್ಬುಲಿ  ೬೪

ಅಂದನಾಗ ಚಿದಾನಂದ ಈ ಹುಲಿಯನೀಗ ಎಳೆದು
ತಂದಿಯಾ ಬಲುಹ ನೋಡ್ವೆನು
ಎಂದೆನಲು ಹೋಗೆ ಅದು ನೆಲಕೆ ಹುದಿಗಿತ್ತು ಹಾರೋ
ಲಂದಿತ್ತು ಮ್ಯಾಲೆ ಈಗಳು   ೬೫

ಬಿಟ್ಟು ಕಣ್ಣ ಬಹಳ ಮೀಸೆ ನೆಟ್ಟಗೆಯು ನಿಂತರೋಮ
ಸಿಟ್ಟಿಲಿಂದ ಬಾಲಬಡಿವುತ
ಕಟಕಟನೆ ಹಲ್ಲಕಡಿದು ಬಿಟ್ಟ ಬಾಯಲಿಂದ ಗುಡು
ಗುಟ್ಟುತಿರಲು ಬದಿಗೆ ಹೋದನು      ೬೬

ಗುರು ಚರಣ ನೆನೆದು ಕೈಯ ಕಿವಿಗೆಯು ಹಾಕಲಿಕ್ಕೆ
ಭರದ ಉಗ್ರ ಶಾಂತವಾದದು
ಧರಿಗೆ ಜೋಲು ಬಿತ್ತು ಮುಂದ ಕೆಳದಡೆಯು ಬಾರದದು
ಹೊರಳುತಿತ್ತು ಧರಣಿ ಮ್ಯಾಲೆಯು   ೬೭

ಬಿಡುಬಿಡೆಂದು ನಕು ಗುರುವು ಬಡಬಡನೆ ಹೋಗುವನು
ಪಡುವಲಲಿ ಸೂರ್ಯ ಇಳಿದನು
ಒಡನೆ ತತ್ವಗೋಷ್ಠಿಯಾಡುತಡಿಗಡಿಗಾನಂದ ಬಡುತ
ಒಡಿಯ ಆನಿಗೊಂದಿಗ್ಹೊಕ್ಕನು        ೬೮

ನಾಥರೆಂಬ ಭಕ್ತರಲ್ಲಿ ಪ್ರೀತಿಯಾಗಿ ಇರುತಿಹರು
ಪಾತಕಕ್ಕೆ ಅವರು ದೂರರು
ಖ್ಯಾತಿಯಾಗಿ ಇಹುದು ಸದ್ಗುರುವಿನ ಗೃಹದೊಳಿರೆ
ದಾತನಲ್ಲಿಗೆಯು ಬಂದನು  ೬೯

ಮಂಗಳನು ನುಡಿದ ಸಹಜ ಮಾತನಾಡುತಲಿ ಗವಿಯ
ರಂಗನ ಮೇಲುಗಡಿಯಿಹ
ಪುಂಗವಾದ ಗುಹೆಯು ಇಹುದು ಆರಿಗೂ ಅಳವಡದು ಅದರೋ
ಳಿಂಗಿತಾಗಿ ಗುಂಡು ಇಹುದು೭೦

ಸ್ಪಟಿಕ ವರ್ನದ ಗುಂಡಿನದರ ಮ್ಯಾಲೆ ಹಳದಿ ಬರಹ
ಪಟುತರದಿ ಬರೆದು ಇಹೆನು
ಅಟಣಿಸದು ಏನು ಬರದಿಹೆನು ಎಂಬನೆಪ್ಪು ನೀನು
ಚಟುಳನಿದ್ದಿ ತಿಳಿವುದೆಂದನು            ೭೧

ಹೋದನಲ್ಲಿಗೆಯು ಸೋಮವಾರ ದಿವಸದಲ್ಲಿ
ಭೇದಿಸಿಯೆ ಹೊಕ್ಕ ಗವಿಯನು
ಮೋದಿ ಬಿದ್ದು ಇತ್ತು ಕಣ್ಣುಕಪ್ಪಡಿಗನ ಹುಲಿಯಹೇಲು
ಹಾದಿ ಸಿಕ್ಕದು ತಮದೊಳು೭೨

ಹಿಂದಕೆಯು ಬಂದನಾಗ ಫಣಿ ಆಲದ ಕೊಂಗೆಯನು
ಅಂದು ಕಡಿದ ಕೊರಚಗಲ್ಲಿಲೀ
ಒಂದು ಮಾರು ಒರೆಯನೀಗ ಕಡಿದು ಊರಗೋಲ ಮಾಡಿ
ಅಂದು ಹೊಕ್ಕ ಮತ್ತೆ ಗವಿಯನು       ೭೩

ಊರುಗೋಲೂರುತ ಗವಿಯ ದಾರಿಯ ಮಾಡುತಲಿ
ಆರೈವುತ ಎಡನಬಲನನು
ಮೀರಿದ ಸರಕುಗಳ ತೋರಲಿಕ್ಕೆ ತಪ್ಪಿಸುತ
ವೀರ ಹೋಗುತಿರ್ದನೊಳಿಯಕೆ         ೭೪

ಇಲಿಯ ಹಿಕ್ಕೆ ಒನಿಕೆಮಂಡ ಬಲಿದಸರ್ಪ ಎಮ್ಮೆಚೇಳು
ಜುಳುಜುಳೆಂಬ ಹಿರಿಯ ಝರಿಗಳು
ನೆಲೆಯು ಇಲ್ಲದಲೆ ಅಡ್ಡ ಪಡೆಗಳಿರಲು ಅದರೊಳಗೆ
ತಳರಿದನು ಗುರುವ ನೆನೆವುತ೭೫

 

[1] ಕುಡರಿಸುವ

[2] ಕುಡರಿಸುವ