ಶ್ರೀ ರಾಮೇಶ್ವರ ಕ್ಷೇತ್ರ
ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೨ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೦ ಕಿ.ಮೀ
ಶ್ರೀಕ್ಷೇತ್ರ ರಾಮನಾಥಪುರ ಹೋಬಳಿ ಕೇಂದ್ರ. ಶ್ರೀರಾಮೇಶ್ವರ ಕ್ಷೇತ್ರ ಅಧಿಪತಿ ದೇವಾಲಯ. ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹೆಚ್ಚು ಭಕ್ತಾಧಿಗಳಿಂದ ಕೂಡಿರುತ್ತದೆ. ಶ್ರೀ ಪಟ್ಟಾಭಿರಾಮ ದೇವಸ್ಥಾನ – ಪ್ರತಿ ತಿಂಗಳು ಡಿಸೆಂಬರ್ ಮಾಹೆಯಲ್ಲಿ ರಥೋತ್ಸವ ನಡೆಯುತ್ತಿದ್ದು, ಉತ್ತಮ ರಾಸುಗಳ (ಜಾತ್ರೆ) ಪ್ರದರ್ಶನವಾಗುತ್ತದೆ. ಶ್ರೀಕ್ಷೇತ್ರ ರಾಮನಾಥಪುರದಲ್ಲಿ ಮೀನಿನ ಪುಷ್ಕರಣೆ ಇದ್ದು ಇಲ್ಲಿ ಸಾವಿರಾರು ಮೀನುಗಳಿವೆ. ನೋಡಲು ನಯನಮನೋಹರವಾಗಿದೆ. ಇಲ್ಲಿಯ ರೈತರ ವಾಣಿಜ್ಯ ಬೆಳೆ ತಂಬಾಕು. ಇಲ್ಲಿ ತಂಬಾಕು ಮಾರುಕಟ್ಟೆಯೂ ಇದೆ
ಶ್ರೀ ಸಪ್ತಸ್ವರ ದೇವತಾ ಧ್ಯಾನಮಂದಿರ – ರುದ್ರಪಟ್ಟಣ
ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೯ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೭ ಕಿ.ಮೀ
ಕರ್ನಾಟಕದಲ್ಲೇ “ಸಂಗೀತ ಗ್ರಾಮ”ವೆಂದೂ ಹೆಸರಾದ ಊರಿದು, ೨೦೦೮ರಲ್ಲಿ ಶ್ರೀ ಸಪ್ತಸ್ವರ ದೇವತಾ ಧ್ಯಾನ ಮಂದಿರ ನಿರ್ಮಾಣವಾಗಿದೆ. ಇದರ ರುವಾರಿಗಳು ವಿದ್ವಾನ್ ಶ್ರೀ ಆರ್.ಕೆ. ಪದ್ಮನಾಭರರು. ೫೫ ಅಡಿ ಎತ್ತರ ಉಳ್ಳ ಸಂಗೀತದ ಸ್ವರಗಳನ್ನು ಪ್ರತಿನಿಧಿಸುವಂತಹ ಸಂಗೀತಾಚಾರ್ಯರುಗಳಾದ ಪುರಂದರ, ಕನಕ, ವಾದಿರಾಜ, ತ್ಯಾಗರಾಜ ಮತ್ತು ಸ್ವಾಮಿ ದೀಕ್ಷಿತರು ಶ್ಯಾಮಾಶಾಸ್ತ್ರಿಗಳು ಮತ್ತು ವಿದ್ಯಾ ಅಧಿ ದೇವತೆಯಾದ ಸರಸ್ವತಿ ದೇವಿಯ ವಿಗ್ರಹಗಳಿವೆ. ವಿಶ್ವದಲ್ಲೇ, ಈ ನಾದ ಮಂಟಪ ಮೊದಲನೆಯದ್ದಾಗಿರುತ್ತದೆ. ಪ್ರತಿವರ್ಷ ಇಲ್ಲಿ ಮೇ ಮಾಹೆಯಲ್ಲಿ ೦೩ ದಿನಗಳ ಉತ್ತರದ ವಿಶ್ವಾಸ ಆರ್.ಕೆ ಪದ್ಮನಾಭನ್ರವರ ನೇತೃತ್ವದಲ್ಲಿ ನಡೆಯುತ್ತದೆ.
ಕಟ್ಟೆಪುರ
ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೭ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೫ ಕಿ.ಮೀ
ಕಾವೇರಿನದಿಗೆ ಅಡ್ಡಲಾಗಿ ಕ್ರಿ.ಶ. ೧೯೩೬ನೇ ಇಸವಿಯಲ್ಲಿ ನಿರ್ಮಿಸಿದ್ದು, ಕಾವೇರಿ ನದಿ ಎತ್ತರದ ಬಂಡೆಗಳ ಮೇಲೆ ಹರಿದು ನೊರೆಯಾಗಿ ಧುಮುಕುತ್ತಿದ್ದು ನೋಡಲು ನಯನ ಮನೋಹರವಾಗಿದೆ.ಸಾವಿರಾರು ಎಕರೆ ಜಮೀನಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ .
ತೂಗುಸೇತುವೆ
ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೬ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೪ ಕಿ.ಮೀ
ತೂಗು ಸೇತುವೆ ಕೊಣನೂರಿನಿಂದ ಮಟ್ಟದಿಂದ ೦೧ ಕಿ.ಮೀ ಅಂತರದಲ್ಲಿದೆ ಈ ಸೇತುವೆಯ ತಾಂತ್ರಿಕತೆ ಪುತ್ತೂರು ಎಂಜಿನಿಯರಿಂಗ್ ಸಂಸ್ಥೆಯದಾಗಿದ್ದು, ಜಿಲ್ಲಾ ಪಂಚಾಯತ್ ಹಾಸನ ಕಾಮಗಾರಿಯಾಗಿದೆ. ಕಟ್ಟೇಪುರ, ಮಾದಾಪುರ, ಗೊಬ್ಬಳಿ, ಗೊಬ್ಬಳಿ ಕಾವಲ್ ಗ್ರಾಮಗಳಿಗೆ ಸಂಪರ್ಕ ಸೇತುವಾಗಿದೆ. ಇದು ಕರ್ನಾಟಕದಲ್ಲಿ ಅತಿ ಉದ್ದದ ೨ನೇ ತೂಗು ಸೇತುವೆ ಇದು ೧೯೯೭-೯೮ನೇ ಸಾಲಿನಲ್ಲಿ ನಿರ್ಮಾಣವಾಗಿದೆ. ಇದರ ಅಂದಾಜು ವೆಚ್ಚ ೩೫ ಲಕ್ಷ ರೂ. ಇದರ ಉದ್ದ ೧೮೦ಮೀಟರ್ಗಳು.
ಚತುರ್ಯುಗ ದೇವಾಲಯ
ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೨ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೦ ಕಿ.ಮೀ
‘ದಕ್ಷಿಣ ಕಾಶಿ’ ಎಂದು ಹೆಸರುವಾಸಿಯಾಗಿರುವ ರಾಮನಾಥಪುರ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿದ್ದು, ಕಾವೇರಿ ಮಡಿಲಿನಲ್ಲಿರುವ ಕ್ಷೇತ್ರವಾಗಿದೆ. ಇಲ್ಲಿರುವ ಚತುರ್ಯುಗ ಮೂರ್ತಿ ಶ್ರೀ ರಾಮೇಶ್ವರ ಸ್ವಾಮಿ ದೇವಾಲಯವು ಹೊಯ್ಸಳ ಕಾಲದ ೨ನೇ ಸೋಮೇಶ್ವರನ ಕಾಲದಲ್ಲಿ ನಿರ್ಮಿಸಲಾಗಿರುತ್ತದೆ. ಇಲ್ಲಿರುವ ಇತರೆ ಪ್ರಮುಖ ದೇವಾಲಯಗಳು.
ಶ್ರೀ ಅಗಸ್ತ್ರೇಶ್ವರ ಸ್ವಾಮಿ ದೇವಾಲಯ, ಪ್ರಸನ್ನ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯವರ ದೇವಾಲಯ, ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯ, ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯವರ ದೇವಾಲಯ ರಾಮೇಶ್ವರ ಸ್ವಾಮಿಯವರ ಪುಷ್ಕರಣಿಯಲ್ಲಿರುವ ಸಾವಿರಾರು ಮೀನುಗಳು ನೋಡಲು ನಯನ ಮನೋಹರವಾಗಿವೆ.
ವೈಶಾಖ ಶುದ್ಧ ತೃತೀಯಾ ದಿವಸ ಉದ್ಭವ ಮೂರ್ತಿಯಾದ ರಾಮೇಶ್ವರ ಸ್ವಾಮಿಗೂ ವೈಶಾಖ ಶುದ್ಧ ಮೃಗಶೀರಾ ನಕ್ಷತ್ರ ಯುಕ್ತವಾದ ತಿಥಿಯಲ್ಲಿ ಪಟ್ಟಾಭಿರಾಮ ಸ್ವಾಮಿಗೂ ಮಾರ್ಗಶಿರ ಶುದ್ದ ಷಷ್ಠಿಯ ದಿನ ಪ್ರಸನ್ನ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಗೂ ಮಾಘ ಬಹುಳ ಅಮಾವಾಸ್ಯೆಯ ದಿನ ಅಣಸ್ತ್ಯೇಶ್ವರ ಸ್ವಾಮಿಗೂ ರಥೋತ್ಸವಗಳು ನಡೆಯುತ್ತವೆ. ಇಲ್ಲಿ ರಾಸುಗಳ ಜಾತ್ರೆಯು ನಡೆಯುತ್ತದೆ
ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ
ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೪೦ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೮ ಕಿ.ಮೀ
ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹುಲಿಕಲ್ಲು ಗ್ರಾಮದಲ್ಲಿರುವ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯವು ಸುಮಾರು ೭೦೦ ವರ್ಷಗಳ ಹಳೆಯ ದೇವಾಲಯ ಇದನ್ನು ೧೯೮೬ನೇ ಸಾಲಿನಲ್ಲಿ ಪ್ರತಿಷ್ಠಾಪಿಸಿ ಶ್ರೀಯುತ ಕಸ್ತೂರಿ ರಂಗನ್ರವರ ಮೇಲ್ವಿಚಾರಣೆಯಲ್ಲಿ ಉಸ್ತುವಾರಿ ಕೈಗೊಳ್ಳಲ್ಪಡುತ್ತಿದೆ. ಈ ದೇವಾಲಯದಲ್ಲಿ ರಥೋತ್ಸವ ಪ್ರತಿ ವರ್ಷ ಯುಗಾದಿ ಹಬ್ಬ ಕಳೆದು ೨೦ನೇ ದಿನಕ್ಕೆ ನಡೆಯುತ್ತದೆ. ಈ ಗ್ರಾಮದ ಸುತ್ತಮುತ್ತಲಿನ ಸಹಸ್ರಾರು ಜನರು ಭಕ್ತಾದಿಗಳು ದೇವರ ದರ್ಶನ ಪಡೆಯುತ್ತಿದ್ದಾರೆ ಶ್ರೀಯುತ ಐ.ಜಿ.ಪಿ. ಕಸ್ತೂರಿ ರಂಗನ್ರವರ ಜನ್ಮಸ್ಥಳ ಇದಾಗಿರುತ್ತದೆ.
Leave A Comment