ಜೇನುಕಲ್ ಸಿದ್ದೇಶ್ವರ ಸ್ವಾಮಿ ಕ್ಷೇತ್ರ :- ಯಾದಾಪುರ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೦ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೫ ಕಿ.ಮೀ

ಅರಸೀಕೆರೆ ಯಿಂದ ಸುಮಾರು ೫ ಕಿ.ಮೀ ದೂರವಿರುವ ಯಾದಾಪುರ ಗ್ರಾಮದಲ್ಲಿರುವ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯ ಪುಣ್ಯಕ್ಷೇತ್ರವಿದೆ. ಇಲ್ಲಿ ಇನ್ನೂರಕ್ಕೂ ಹೆಚ್ಚು ಜೇನುಗೂಡುಗಳಿವೆ. ಈ ಬೆಟ್ಟಕ್ಕೆ ಹತ್ತಲು, ಉತ್ತರ ದಕ್ಷಿಣವಾಗಿ ಎರಡೂ ಕಡೆಯಿಂದಲೂ ಮೆಟ್ಟಿಲುಗಳಿವೆ. ಹಾಗೂ ೧೨೦೦ ಮೆಟ್ಟಿಲುಗಳಿದ್ದು, ಪ್ರತಿ ಹುಣಿಮೆಯಲ್ಲಿ ಜಾತ್ರೆಯ ವಾತಾವರಣವನ್ನು ನೋಡಬಹುದು. ಎಲ್ಲ ಭಕ್ತಾಧಿಗಳಿಗೆ, ದಾಸೋಹವಿರುತ್ತದೆ.

ಬೆಟ್ಟದ ಮೇಲೆ ಬರಿ ಪಾದಗಳಿವೆ ಅಲ್ಲಿ ತುಂಬೆ ಹೂವುಗಳಿಂದ ಪೂಜಿಸುತ್ತಾರೆ. ಹಾಗೂ ಕೈ ಅಪ್ಪಣೆ ಕೇಳುವ ವಾಡಿಕೆಯಿದೆ. ಜೇನುನೊಣಗಳ ಕಥೆ ಹಾಗೂ ಉಪಕಥೆಗಳಿಂದ ಕೂಡಿದೆ.

 

ಅರಸೀಕೆರೆಯಲ್ಲೂ ಹೊಯ್ಸಳ ವೈಭವ :- ಈಶ್ವರ ದೇವಾಲಯ ಶಿವಾಲಯ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೪೫ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೧ ಕಿ.ಮೀ

ಇದು ಅರಸೀಕೆರೆಯಿಂದ ಹುಳಿಯೂರು ರಸ್ತೆಯಲ್ಲಿರುವ ಶಿವಾಲಯ, ಹೊಯ್ಸಳ ಕಾಲ-(೧೦೯೮-೧೧೦೦) ವಿಷ್ಣುವರ್ಧನನ ತಂದೆ ಎರೆಯಂಗನ ಆಳ್ವಿಕೆ ಕಾಲ. ಇಲ್ಲಿ ಹಾರ‍್ನಹಳ್ಳಿಯಿಂದ ಬಾಣವಾರದ ತನಕ ಆಳ್ವಿಕೆ ಇತ್ತು. ಮುಂದೆ ಇಮ್ಮಡಿ ಬಲ್ಲಾಳನ (೧೧೭೩-೧೨೨೦) ಕಾಲದಲ್ಲಿ ಅರಸೀಕೆರೆ ತುಂಬ ಅಭ್ಯುದಯ ಹೊಂದಿತು. ಹೊಯ್ಸಳ  ಸಾಮ್ರಾಜ್ಯದ ಹೆಸರಾಂತ ಕಲಾಕೃತಿಗಳನ್ನು ಒಳಗೊಂಡಿರುವ ಶಿವಾಲಯ. ಇದು ನಕ್ಷತ್ರ ಆಕಾರದಲ್ಲಿರುವ ತಳಮಟ್ಟದಲ್ಲಿ ಮೂರು ಅಡಿ ಎತ್ತರದವರೆಗೆ ಆನೆ, ಕುದುರೆ, ಯಕ್ಷ ಹಂಸ, ಗೋಪುರಗಳ ಕಳಸವಿದೆ. ಸೂಕ್ಷ್ಮ ಕಸುರಿ ಕೆತ್ತನೆಗಳಿದ್ದು, ಕಣ್ಮನ ಸೆಳೆಯುತ್ತದೆ. ೧೬೯೦ರಲ್ಲಿ ಮೈಸೂರು ಅರಸರಿಗೆ ಸೇರಿತು. ನವರಂಗ, ಸುಕನಾಸಿ, ಅಂತರಾಳ, ನಕನಾಸಿ, ಗರ್ಭಗುಡಿ, ನಾಟ್ಯರಂಗ, ಪ್ರಾರಂಭದ್ವಾರ, ಅಂತರಾಳದರ್ಶನ ಮಂಟಪ ನಂದಿ ಪ್ರತಿಷ್ಠಾಪನೆ ಮಾಡಲಾಗಿದೆ. ಗರ್ಭಗುಡಿಯಲ್ಲಿ ಶಿವಲಿಂಗ ಸ್ಥಾಪನೆ, ೪೬ ಕಂಬ ವಿಭಿನ್ನ ರೀತಿಯಿಂದ ಕೆತ್ತಲಾಗಿದೆ. ನವರಂಗದಲ್ಲಿ ಕೆಳಭಾಗದಲ್ಲಿ ಆನೆಗಳ ಸಾಲು ಮೇಲ್ಛಾವಣಿಯಲ್ಲಿ ಕೂರಲಿಕ್ಕೆ ಕಲ್ಲಿನ ಆಸನ ಮಾಡಲಾಗಿದೆ. ಗರ್ಭಗುಡಿಯಲ್ಲಿ ಆಕರ್ಷಕ ಶಿವಲಿಂಗವಿದೆ. ಇದು ಚಂದ್ರ ಮೌಳೇಶ್ವರ ಎಂದು ಪ್ರಸಿದ್ಧಿ ಪಡೆದಿದೆ.

 

ಮಾಡಾಳು ಗೌರಮ್ಮ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೧ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೬ ಕಿ.ಮೀ

 

ಅರಸೀಕೆರೆ ತಾಲ್ಲೂಕು ದೊಡ್ಡ ಮೇಟಿ ಕುರ್ಕೆ ಗ್ರಾಮದ ಮುಂದೆ ಬರುವ ಗ್ರಾಮವೇ ಮಾಡಾಳು ಗ್ರಾಮ. ಈ ಗ್ರಾಮದಲ್ಲಿ ಬರುವ ಬಸವಕುಮಾರ ಆಶ್ರಮ ಎಂಬ ಮಠವಿದೆ. ಶ್ರಾವಣ ಮಾಸ ಮುಗಿದ ಕೂಡಲೇ ಬರುವುದು ಸ್ವರ್ಣ ಗೌರಿವ್ರತ ಈ ವ್ರತವನ್ನು ಆರಾಧಿಸುವವರು ಶ್ರೀ ಗೌರಮ್ಮನನ್ನು ಮಣ್ಣಿನಿಂದ, ಬೆಳ್ಳಿಯಿಂದ ಮಾಡಿದ, ಮೂರ್ತಿಯನ್ನು ಪೂಜಿಸುವುದು. ಸಂಪ್ರಾದಾಯ. ಇಲ್ಲಿಯ ವಿಶೇಷ ಅರಿಶಿನದಿಂದ ಮಾಡಿ ಅದಕ್ಕೆ ವಜ್ರದ ಮೂಗುತಿಯನ್ನು ಅಂದೇ ಮೂಗಿಗೆ ಹಾಕುತ್ತಾರೆ. ಆಗ ಆ ದೇವರಲ್ಲಿ ಒಂದು ಶಕ್ತಿ ಬರುತ್ತದೆ.

ಸ್ಥಾಪಿಸಿದ ೯ನೇ ದಿನಕ್ಕೆ ವಿಸರ್ಜನ ಮಹೋತ್ಸವವಿರುತ್ತದೆ. ಈ ದೇವಿಗೆ ಕರ್ಪೂರದಲ್ಲಿ ಪೂಜೆ ಮಾಡುತ್ತಾರೆ. ಕರ್ನಾಟಕ ರಾಜ್ಯದ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮ ಸುಪ್ರಸಿದ್ದವಾಗಿದೆ.

 

ಮಾಲೆಕಲ್ಲು (ಅಮರಗಿರಿ) ತಿರುಪತಿ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೪೫ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೨ ಕಿ.ಮೀ

ಮಾಲೆಕಲ್ಲು ತಿರುಪತಿಯು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಒಂದು ಪ್ರಸಿದ್ದವಾದ ಯಾತ್ರಾಸ್ಥಳವಾಗಿದೆ. ಅರಸೀಕೆರೆ ಯಿಂದ ೨ ಕಿ.ಮಿ ಹಾಗೂ ಹಾಸನ ಜಿಲ್ಲಾ ಕೇಂದ್ರದಿಂದ ೪೫ ಕಿ.ಮೀ ದೂರವಿದೆ. ಪ್ರಕೃತಿ ದೇವಿಯ ಮಡಿಲಲ್ಲಿ  ಮಲಗಿರುವ ಮುದ್ದು ಕಂದನಂತೆ ರಮಣೀಯ ನಿಸರ್ಗ ಹಾಗೂ ಆದ್ಯಾತ್ಮಿಕ ಪವಿತ್ರ ತಾಣ ಇದಾಗಿದೆ. ಇಲ್ಲಿ ಶ್ರೀ ವೆಂಕಟರಮಣ ದೇವಾಲಯಕ್ಕೆ ಸುದೀರ್ಘ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ವಶಿಷ್ಟ~ ಮಹಾ ಋಷಿಗಳು ಸುಮಾರು ೧೨೦೦ ಮೆಟ್ಟಿಲುಗಳನ್ನು ಹೊಂದಿರುವ ಈ ಬೆಟ್ಟದ ಮೇಲೆ ಆಶ್ರಯ ಮಾಡಿಕೊಂಡು ಶ್ರೀ ವೆಂಕಟೇಶ್ವರ ಸ್ವಾಮಿ ವಿಗ್ರಹವನ್ನು ಸ್ಥಾಪಿಸಿ ತಪಸ್ಸು ಮಾಡುತ್ತಿದ್ದರು. ಕಾಲಕ್ರಮೇಣ ತಪಸ್ಸು ಸಿದ್ದಿಯಾದ ನಂತರ ಅಲ್ಲಿಂದ ಪ್ರಯಾಣ ಬೆಳಸಿದರು ಎಂಬ ಕಥೆಯೂ ಇದೆ.

ಈ ಪ್ರಾಂತ್ಯವನ್ನು ಆಳಿದ್ದ ಚಿತ್ರದುರ್ಗದ ಅರಸು ಪಾಳ್ಯಗಾರನಾದ ತಿಮ್ಮಪ್ಪ ನಾಯ್ಕ ಪ್ರತಿ ವರ್ಷ ಸ್ವಾಮಿಯ ದರ್ಶನಕ್ಕಾಗಿ ದೊಡ್ಡ ತಿರುಪತಿ ಯಾತ್ರೆಗಾಗಿ ಹೋಗುತ್ತಿದ್ದ. ಯಾತ್ರೆ ಸಾದ್ಯವಾಗದೆ ಚಿಂತೆಯಲ್ಲಿ ಇರುವಾಗ ಒಂದು ರಾತ್ರಿ ಕನಸಿನಲ್ಲಿ ತುಳಸಿ ಮಾಲೆಯನ್ನು ಹಾಕಿಕೊಂಡು ಬೆಟ್ಟಕ್ಕೆ ಹೋಗಿರುವ ಜಾಗದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸು ಎಂದು ಹೇಳಿ ಬೆಟ್ಟದ ಮೇಲೆ ಅಂತ್ಯಗೊಂಡ ಜಾಗದಲ್ಲಿ ನನ್ನನ್ನು ಪ್ರತಿಷ್ಠಾಪಿಸು ಎಂದು ಹೇಳಲಾಗಿ ಅದರಂತೆ ಈ ದೇವಾಲಯವನ್ನು ನಿರ್ಮಿಸಿದ. ಇಲ್ಲಿರುವ ಬೆಟ್ಟಗಳು ಮಾಲೆಯ ಆಕಾರದಲ್ಲಿರುವುದರಿಂದ ಇದನ್ನು ಮಾಲೆಕಲ್ಲು ತಿರುಪತಿ ಎಂದು ಕಥೆ ಪ್ರಚಲಿತದಲ್ಲಿದೆ. ಈ ದೇವಾಲಯದ ಬುಡದಲ್ಲಿ ಸುಂದರ ಹಾಗೂ ನಿರ್ಮಲವಾದ ಪುಷ್ಕರಣಿಯು ಎಲ್ಲರ ಗಮನ ಸೆಳೆಯುತ್ತದೆ.

ಈ ಬೆಟ್ಟದಲ್ಲಿ ವಶಿಷ್ಠ ಮಹರ್ಷಿಗಳು ಶ್ರೀಮನ್ ನಾರಾಯಣನ್ನು ಕುರಿತು ತಪಸ್ಸುಮಾಡಿದ ಪುಣ್ಯ ಸ್ಥಳ. ಆಶಾಢ ಮಾಸದ ದ್ವಾದಶಿಯಂದು ಶ್ರೀವಿಷ್ಣುವಿನ ದರ್ಶನ ಪಡೆದರೆಂದೆ ಹೇಳಲಾಗುತ್ತೆದೆ. ಅದೇ ರೀತಿ ಅಶ್ವತ್ಥಾಮಾಚಾರ್ಯರು ಬ್ರಹ್ಮ ಹತ್ಯಾ ದೋಷ ನಿವಾರಣೆಗಾಗಿ ವಸಿಷ್ಠ ತೀರ್ಥದಲ್ಲಿ ಮಿಂದು ತಪಸ್ಸು ಮಾಡಿದ. ಆಶಾಢ ದ್ವಾದಶಿ ದಿನ ಶ್ರೀನಿವಾಸನ ದರ್ಶನ ಪಡೆದರೆಂದು ಅದಕ್ಕಾಗಿಯೇ ಆಶಾಢ ಮಾಸದದ್ವಾದಶಿಯಂದು ಮಹಾರಥೋತ್ಸವ ನಡೆಸುವ ಪರಿಪಾಟವಿದ್ದು ಈ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ಸಾವಿರಾರು ಭಕ್ತರು ಆಗಮಿಸಿ ಧನ್ಯರಾಗುತ್ತಿದ್ದಾರೆ.

 

ಹುಲ್ಲೇಕೆರೆ ಕೇಶವ ದೇವಾಲಯ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೪೦ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೫ ಕಿ.ಮೀ

ಹುಲ್ಲೇಕೆರೆ ಗ್ರಾಮವು ಗಂಡಸಿ ಹೋಬಳಿಗೆ ಸೇರಿದ್ದು ಅರಸೀಕೆರೆಯಿಂದ ಸುಮಾರು ೨೫ ಕಿ.ಮೀ ಹಾಗೂ ಜಿಲ್ಲಾ ಕೇಂದ್ರದಿಂದ ೪೦ ಕಿ.ಮೀ ದೂರದಲ್ಲಿದೆ. ಶ್ರೀ ಕೇಶವ ದೇವಾಲಯ ಹೊಯ್ಸಳ ವಾಸ್ತುಪ್ರಕಾರ ನಕ್ಷತ್ರಾಕಾರದ ಎತ್ತರ ಜಗುಲಿಯ ಮೇಲೆ ನಿರ್ಮಾಣವಾಗಿದೆ. ಸುಂದರ ಕಲಾಕೃತಿಗಳನ್ನು ಹೊಂದಿರುವ ಈ ದೇವಾಲಯವು ಅರಸೀಕೆರೆ ತಾಲ್ಲೂಕಿನ ಅತ್ಯಂತ ಆಕರ್ಷಣೀಯ ಐತಿಹಾಸಿಕ ಹಾಗೂ ಸುಂದರ ತಾಣವಾಗಿದೆ.

 

ಜಾವಗಲ್ ದೇವಾಲಯ ಶಿಲ್ಪವೈಭವ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೪೫ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೩೦ ಕಿ.ಮೀ

ಅರಸೀಕೆರೆ ತಾಲ್ಲೂಕಿನ ಜಾವಗಲ್ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಹೊಯ್ಸಳ ದೇವಾಲಯವಾಗಿದ್ದು ಅತ್ಯಂತ ಪ್ರಸಿದ್ಧಿಯಾಗಿದೆ. ಅಂತರರಾಷ್ಟ್ರೀಯ ಕ್ರಿಕೇಟ್ ತಾರೆ “ಜಾವಗಲ್ ಶ್ರೀನಾಥ್‌ರ ಹೂಟ್ಟುರು. ಇದು ಅರಸೀಕೆರೆ ತಾಲ್ಲೂಕಿನ ಒಂದು ಹೋಬಳಿ ಕೇಂದ್ರ. ಹಳೇಬೀಡಿನಿಂದ ಪೂರ್ವಕ್ಕೆ ೧೪ ಕಿ.ಮೀ. ದೂರದಲ್ಲಿದ್ದರೆ ಬಾಣವಾರದಿಂದ ೧೮ ಕಿ.ಮೀ. ದೂರದಲ್ಲಿದೆ.

ಜಾವಗಲ್‌ನ ಲಕ್ಷ್ಮೀನರಸಿಂಹ  ಸ್ವಾಮಿ ನಿರ್ಮಾಣದ ಕಾಲ ಕ್ರಿ.ಶ. ೧೩ನೇ ಶತಮಾನ ಸೂತ್ತಲೂ ಪ್ರಕಾರ ಗೋಟೆಯನ್ನು ಹೊಂದಿರುವ ಈ ಸುಂದರ ದೇಗುಲ ಹೊಯ್ಸಳ ವಾಸ್ತು ಶೈಲಿಯಂತೆ ನಕ್ಷತ್ರಾಕಾರದ ವೇದಿಕೆಯ ಮೇಲೆ ನಿರ್ಮಿತವಾಗಿದೆ. ಇದೊಂದು ತ್ರಿಕೂಟಚಲ ಅಂದರೆ ಮೂರುಗರ್ಭಗಳನ್ನು ಹೊಂದಿದೆ. ವೇಣುಗೋಪಾಲ, ವೀರನಾರಾಯಣ, ಲಕ್ಷ್ಮೀನರಸಿಂಹಸ್ವಾಮಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.

ಗರ್ಭಗೃಹಗಳ ಎದುರು ಒಂದು ನವರಂಗವಿದೆ ಹಾಗೂ ಮುಂಭಾಗದಲ್ಲಿ ಮುಖಮಂಟಪವಿದೆ. ಮುಖಮಂಟಪದಲ್ಲಿ ಪ್ರೇಕ್ಷಕರಿಗೆ ಕುಳಿತು ಕೊಳ್ಳಲು ಕಲ್ಲಿನ ಅಸನಗಳಿವೆ. ಮುಖಮಂಟಪದ ಕೆಂಕಗಳು ದುಂಡನೆಯಾಗಿದ್ದು ಮೇಲ್ಛಾವಣಿಯಲ್ಲಿ ಅಷ್ಟಾದಿಕ್ಪಾಲಕರನ್ನು ಒಳಗೊಂಡ ಆಕರ್ಷಕ ಭವನೇಶ್ವರಿ ದೇವಿ ಒಂದೊಂದು ರೀತಿ ಇದೆ.

ದೇವಾಲಯದ ಪ್ರವೇಶದ್ವಾರ ಎತ್ತರವಾಗಿದ್ದು ಪ್ರವೇಶದ ಎರಡು ಕಡೆಗಳಲ್ಲೂ ಆನೆ ನಿಲ್ಲಿಸಲಾಗಿದೆ. ದೇವಾಲಯದ ಮುಂಭಾಗ ವಿಜಯನಗರ ಕಾಲದ್ದು ಲಕ್ಷ್ಮೀನರಸಿಂಹ ದೇವಾಲಯದ ಹೊರಗೋಡೆಗಳ ಅತ್ಯಾಕರ್ಷಕವಾಗಿ ಅಲಂಕೃತವಾಗಿವೆ. ಗೋಡೆಯ ತಳಭಾದಲ್ಲಿ ೬ ಚಿತ್ರ ಮತ್ತು ಹಂಸಗಳ ಕೆತ್ತನೆಗಳನ್ನು ಹೊಂದಿದೆ. ಅದರ ಮೇಲೆ ದೊಡ್ಡಗಾತ್ರದ ಶಿಲ್ಪಗಳ ಸಾಲು ಇದೆ. ಈ ಪೈಕಿ ಬಲಮೂರಿ ಗಣೇಶ, ಲಕ್ಷ್ಮೀನರಸಿಂಹ, ಹರಿಹರ, ಪರಶುರಾಮ, ಕಾಳಿಂಗ ಮರ್ದನ ಮುಂತಾದ ಶಿಲ್ಪಗಳ ಪ್ರೇಕ್ಷಕರನ್ನು ಮೂಕ ವಿಸ್ಮತರೆನ್ನಾಗಿಸುತ್ತದೆ.

ರಾಜ್ಯದ ಶ್ರೀಮಂತ ಕಲಾ ಸಿರಿಗೆ ಈ ದೇಗುಲ ಒಮ್ಮೆ ನೋಡಿ ಕಲಾಸೌಂದರ‍್ಯ ಕಣ್ಣಾರೇ ಆಶ್ವಾದಿಸುವುದು ಚೆಂದ.

 

ಸೋಮೇಶ್ವರ ಮತ್ತು ಚೆನ್ನಕೇಶವ ದೇವಾಲಯ ಹಾರನಹಳ್ಳಿ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೩೫ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೮ ಕಿ.ಮೀ

ಹೊಯ್ಸಳರ ಕಾಲದಲ್ಲಿ ಸ್ಥಾಪನೆಯಾದ ಹಾರನಹಳ್ಳಿಯ ಶ್ರೀ ಚೆನ್ನಕೇಶವ ಮತ್ತು ಸೋಮೇಶ್ವರ ದೇವಾಲಯಗಳು ಅಪೂರ್ವ ಶಿಲ್ಪಕಲಾ ಕೆತ್ತನೆಯಿಂದ ಪ್ರಸಿದ್ದಿ ಪಡೆದಿದೆ. ಮೂಲತಹ ಹಾರುವನಹಳ್ಳಿ ಎಂಬ ಹೆಸರು ಪಡೆದ ಈ ಗ್ರಾಮ ಹಿಂದೆ ತಾಲ್ಲೂಕು ಕೇಂದ್ರವಾಗಿತ್ತು. ಈ ದೇವಾಲಯವು ನಕ್ಷತ್ರಾಕಾರದ ವೇದಿಕೆಯ ಮೇಲೆ ನಿರ್ಮಾಣವಾಗಿದ್ದು, ಮೊದಲನೆ ಸಾಲಿನಲ್ಲಿ ಗಜಗಳ ಸಾಲುಗಳಿವೆ. ಎರಡನೇ ಸಾಲಿನಲ್ಲಿ ಅಶ್ವ ಸಾಲುಗಳಿವೆ, ಎಲೆ ಬಳ್ಳಿ ಹಂಸವುಳ್ಳ ಇತರ ಸಾಲುಗಳು ನಿರ್ಮಲ ಮತ್ತು ಶಾಂತಿ ಸಂಕೇತವಾಗಿದೆ. ದೇವಾಲಯವನ್ನು ನೋಡುತ್ತಿದ್ದರೆ ಹೊಯ್ಸಳರ ಕಾಲವು ನೆನಪಾಗುತ್ತದೆ. ದೇವಾಲವು ಸುಂದರವಾದ ಚಾವಣಿ ವಿನ್ಯಾಸ ಅಲಂಕೃತ ಕೆತ್ತನೆಯ ದ್ವಾರ ಬಾಗಿಲು ಜಾಲಂದರಗಳು ಕಕ್ಷಾಸನವನ್ನು ಹೊಂದಿದೆ. ದೇವಾಲಯದ ದ್ವಾರದ ಮುಂಬಾಗದಲ್ಲಿ ವಿಜಯ ನಗರ ಶೈಲಿಯ ಗ್ರಾನೈಟ್ ಕಲ್ಲಿನ ಪ್ರವೇಸ ಮಂಟಪವಿದ್ದು ಎತ್ತರವಾದ ಮಂಟಪವನ್ನು ಹೊಂದಿದ್ದು ನೋಡುಗರ ಕಣ್ಮನ ಸೆಳೆಯುವಂತಿದೆ.

 

ಬಿಳಿಕಲ್ ರಂಗನಾಥ ಸ್ವಾಮಿ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೬೫ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೫ ಕಿ.ಮೀ

ಹಿರೆಕಲ್ಲು ಬೆಟ್ಟ್, ಸಿದ್ದರ ಬೆಟ್ಟ, ಹೀಗೆ ನಾನಾರೀತ್ಯ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನಲೆಯುಳ್ಳ ಬೆಟ್ಟದ ತಪ್ಪಲಿಗೆ ಹೊಂದಿಕೊಂಡಂತೆ ಇರುವ ಶ್ರೀ ಬಿಳಿಕಲ್ಲು ರಂಗನಾಥ ಸ್ವಾಮಿ ದೇವಾಲಯವು ಪುಣ್ಯ ಕ್ಷೇತ್ರವಾಗಿ ಮೆರೆದಿದೆ. ಹೊಯ್ಸಳರ ಕಾಲದಲ್ಲಿ ಈ ತಾಣವು ಹಲಕೂರು ರಾಜ್ಯವಾಗಿತ್ತು. ಹನ್ನೋಂದನೆಯ ಶತಮಾನದಲ್ಲಿ ಹೊಯ್ಸಳರ ಮಾಂಡಲೀಕರು ಆಳುತ್ತಿದ್ದರು.

ಈ ದೇವಾಲಯವು ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದು,ಪ್ರತಿ ವರ್ಷ ಚೈತ್ರ ಮಾಸದಲ್ಲಿ ಹುಣ್ಣಿಮೆ ದಿನದಂದು ಜಾತ್ರ ಬಹಳ ವಿಜೃಂಬಣೆಯಿಂದ ನಡೆಯುತ್ತದೆ. ಭಕ್ತಾದಿಗಳಲ್ಲಿ ಈ ದೇವರ ಬಗ್ಗೆ ನಂಬಿಕೆ ಇದ್ದು, ದೇವರ ಅಪ್ಪಣೆ ಇಲ್ಲದೆ ಯಾವ ಕೆಲಸವನ್ನು ಸಹ ಮಾಡುವುದಿಲ್ಲ. ಈ ದೇವರನ್ನು ಪೂರ್ಣನಂಬಿದವರಿಗೆ ಅವರ ಇಷ್ಟಾರ್ಥಗಳು ಅಂದಿನಿಂಧ ಇಂದಿಗೂ ಮುಂದೆಯೂ ನೆರವೇರುವುದೆಂಬ ನಂಬಿಕೆ ಭಕ್ತಾದಿಗಳಲ್ಲಿ ಅಚಲವಾಗಿದೆ.

 

ಅರಕೆರೆ ಕೇಶವ ದೇವಾಲಯ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೦ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೦ ಕಿ.ಮೀ

 

ಅರಕೆರೆ ಗ್ರಾಮವನ್ನು ಸರ್ವಜ್ಞಪುರ ಎಂದು ಕರೆಯಲಾಗಿದ್ದು, ಕೇರಳದ ಕೋಳೆಮಾಕ ಪಟ್ಟಣ್ಣಕ್ಕೆ ಸೇರಿದ ಗೋವಿಂದ ಎಂಬಾತನು ಈ ಗ್ರಾಮದ ಆಢಳಿತಾಧಿಕಾರಿಯಾಗಿದ್ದನು. ಈತನ ಮಗ ದಾಮೊದರ ಶೆಟ್ಟಿಯು ಈ ದೆವಾಲಯವನ್ನು ಕಟ್ಟಿಸಿ ಆದಿ ಕೇಶವ ನರಸಿಂಹ ಗೋಪಾಲಕೃಷ್ಣ ದೇವರ ಪ್ರತಿಷ್ಠಾಪನೆ ಮಾಡಿರುತ್ತಾನೆ. ಈ ದೇವಾಲಯವು ಸುಂದರವಾಗಿದ್ದು ನೋಡುಗರ ಆಕರ್ಷಕ ಸುಂದರವಾದ ಕೆತ್ತನೆಯಿಂದ ಎಲ್ಲರ ಗಮನ ಸೆಳೆಯುತ್ತದೆ.