“ಗಾಮೊಕ್ಕಲ ಮಹಾಭಾರತ”ವೆಂಬ ಈ ಖಂಡಕಾವ್ಯ ಸಂಗ್ರಹವನ್ನು ೧೯೬೯ರಿಂದ ೧೯೭೦ರ ಮಧ್ಯದ ಅವಧಿಯಲ್ಲಿ, ಅದರ ಆಯ್ದ ಕೆಲವು ಭಾಗಗಳನ್ನು ಸಂಪಾದಿಸಿ ಹಸ್ತಪ್ರತಿಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟನಾ ವಿಭಾಗಕ್ಕೆ ಕಳಿಸಿದೆ. ಅಲ್ಲಿ ಹಸ್ತಪ್ರತಿ ಪ್ರಕಟಣೆಗೆ ಸ್ವೀಕೃತವಾದ ನಾಲ್ಕು ವರ್ಷಗಳ ನಂತರ ಈಗ ಪ್ರಕಟವಾಗುತ್ತಿದೆಯೆಂದು ತಿಳಿಸಲು ಸಂತೋಷವೆನಿಸುತ್ತದೆ. ಪ್ರಕಟನೆಗೆ ವಿಶೇಷವಾದ ಮುತುವರ್ಜಿ ವಹಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟನ ವಿಭಾಗದ ಸಲಹಾ ಸಮಿತಿಯ ಸದಸ್ಯರಿಗೆ ಹಾಗೂ ಮಾನ್ಯ ಕುಲಪತಿಯವರಿಗೆ ಅಭಾರಿಯಾಗಿದ್ದೇನೆ. ಈ ಖಂಡ- ಕಾವ್ಯದ ಸಂಗ್ರಹಣೆಯ ಕಾರ್ಯದಲ್ಲಿ ಹೆಚ್ಚಿನ ನೆರವಿತ್ತು ಸಹಕರಿಸಿದ ನನ್ನ ಹೆಂಡತಿ ಶ್ರೀ ಶಾಂತಿ ನಾಯಕ್, ನನ್ನ ವಿದ್ಯಾರ್ಥಿ ಮಿತ್ರ ಶ್ರೀ ಎನ್. ಜಿ.ಗೌಡ ಹಾಗೂ ತಮ್ಮ ಕೆಲಸ ಬೊಗಸೆಗಳನ್ನೆಲ್ಲ ಬದಿಗಿಟ್ಟು ತಮ್ಮ ಹಾಡಿನ ಭಂಡಾರವನ್ನು ಸೂರೆಗೈದ ಹಾಡುಗಾರ್ತಿಯರು, ಇವರಿಗೆಲ್ಲ  ಕೃತಜ್ಞನಾಗಿದ್ದೇನೆ. ಕನ್ನಡ ಜಾನಪದ ಲೋಕಕ್ಕೆ ಅಪೂರ್ವವೆನಿಸಿದ ಈ ಮಹಾ ಕೃತಿಯನ್ನು, ಕನ್ನಡ ಸಾರಸ್ವತ ಲೋಕ ಪ್ರೀತಿಯಿಂದ  ಸ್ವೀಕರಿಸಿದ ಪ್ರೊತ್ಸಾಹಿಸಿದಲ್ಲಿ ನನ್ನ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ.

ಡಾ.ಎನ್. ಆರ್. ನಾಯಕ್
ಪ್ರಾಚಾರ್ಯರು
ಶ್ರೀ ಧರ್ಮ ಸ್ಥಳ ಮಂಜುನಾಥೇಶ್ವರ ಕಾಲೇಜು
ಹೊನ್ನಾವರ, ಉತ್ತರ ಕನ್ನಡ