ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವ್ಯಾಸಂಗ ವಿಸ್ತೀರ್ಣವು ಹಮ್ಮಿಕೊಂಡ ೪೭ನೆಯ ಉಪನ್ಯಾಸ ಶಿಬಿರವು ಕಾರವಾರ ಜಿಲ್ಲೆಯ ಕಡತೋಕಾದಲ್ಲಿ ದಿನಾಂಕ ೨೨-೦೧-೨೦೦೫ ರಂದು ಜರುಗಿತು. ಪ್ರಸ್ತುತ ಶಿಬಿರದಲ್ಲಿ ನೀಡಿದ ಉಪನ್ಯಾಸವೇ ಈ ಕಿರುಹೊತ್ತಿಗೆಯಾಗಿದೆ.

ಪದ್ಮಶ್ರೀ ಪಂ.ಬಸವರಾಜ ರಾಜಗುರು ಅವರು ಅಖಿಲ ಭಾರತವು ಕಂಡ ಅದಮ್ಯ ಸಂಗೀತ ಚೇತನವಾಗಿದ್ದರು. ಅವರು ಹಿಂದೂಸ್ತಾನಿ ಸಂಗೀತದ ದಿಗ್ಗಜರು. ಅವರು ಗ್ವಾಲಿಯರ ಮತ್ತು ಕಿರಾಣ್‌ಘರಾಣೆಗಳಲ್ಲಿ ಬಹು ದೊಡ್ಡ ಹೆಸರನ್ನು ಮಾಡಿದ್ದಾರೆ. ಅವರು ಪಾಕಿಸ್ತಾನ ಮತ್ತಿತರ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಂತಹ ಮಹನಿಯರು ಹಿಂದೂಸ್ತಾನಿ ಸಂಗೀತದ ಪರಂಪರೆಯ ಉಳುವಿಗಾಗಿ ಹಲವಾರು ಶಿಷ್ಯರನ್ನು ತಯಾರಿಸಿದ್ದಾರೆ. ಇಂದು ಅವರ ಶಿಷ್ಯರಲ್ಲಿ ಶ್ರೀ ಗಣಪತಿ ಭಟ್ಟ ಹಾಸಣಗಿ, ಪರಮೇಶ್ವರ ಹೆಗಡೆ, ಸೋಮನಾಥ ಮರಡೂರ ಮುಂತಾದವರು ತಮ್ಮ ಗುರುಗಳ ಸಂಗೀತ ಪರಂಪರೆಯನ್ನು ಮುಂದುವರೆಸಿದ್ದು ಸಂತೋಷದ ಸಂಗತಿಯಾಗಿದೆ. ಅಂತವರ ಬಗ್ಗೆ ನಾನು ಒಂದು ಉಪನ್ಯಾಸವನ್ನು ನೀಡಿದು ನನ್ನ ಸೌಭಾಗ್ಯವಾಗಿದೆ.

ನನಗೆ ಈ ಸಂಗೀತ ಉಪನ್ಯಾಸವನ್ನು ನೀಡಲು ಅವಕಾಶವನ್ನು ಕಲ್ಪಿಸಿಕೊಟ್ಟ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಡಾ. ಹರಿಲಾಲ ಪವಾರರಿಗೆ ನನ್ನ ಕೃತಜ್ಞತೆಗಳು. ಈ ಪುಟ್ಟ ಕೃತಿಯನ್ನು ನನ್ನ ಧರ್ಮಪತಿ ಹಾಗೂ ಸಾಹಿತಿ ಡಾ. ಮಲ್ಲಿಕಾರ್ಜುನ ಪಾಟೀಲರು, ನೋಡಿದ್ದು, ಡಾ|| ಸಿದ್ಧಪ್ಪಾ ಎನ್‌.ರವರು ಕರುಡು ಪರಿಶೀಲಿಸಿ ಕೊಟ್ಟಿದ್ದಕ್ಕಾಗಿ ಅವರಿಗೆ ನನ್ನ ಕೃತಜ್ಞತೆಗಳು.

ಈ ಪುಸ್ತಕದ ಮುದ್ರಣ ಕೆಲಸದಲ್ಲಿ ಸಹಕರಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ಮತ್ತು ಮುದ್ರಣಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಾನು ಋಣಿಯಾಗಿದ್ದೇನೆ.

ಡಾ.ನಂದಾ ಪಾಟೀಲ