ಅನುಭವದಡಿಗೆಯ ಮಾಡಿ ಅದಕ್ಕೇನು ಭವಿಗಳ |
ಬಂದು ನೀವೆಲ್ಲಾ ಕೂಡಿ || ಅನು ||

ತನುವೆಂಬೊ ಬಾಂಡವ ತೊಳೆದು | ಕೆಟ್ಟ |
ಮನದ ಜಂಜಡವೆಂಬೊ ಮುಸುರೆಯ
ತೊಳೆದು ಘನವೆಂಬೊ ಮನೆಯನ್ನೇ ಬಳಿದು
ಅಲ್ಲಿ ಮೀನುಗುತ್ತಿಗುಣವೆಂಬೊ ಬೆಲೆಗಂಡ
ತ್ರಿಗುಣವೆಂಬ ಬಲೆಗುಂಡ ತುಳಿದು || ಅನು ||

ವಿರತಿಯಂಬುವ ಮಡಿಯುಟ್ಟು ಪೂರ್ಣ ಹರಭಕ್ತಿಯೆಂಬ
ನೀರನೆಯ ಹೆಸರಿಟ್ಟು ಅರಿವೆಂಬ ಬೆಂಕಿಯ
ಕೊಟ್ಟು ಮಾಯ ಮರವೇ ಎಂಬುವ ಕಷ್ಟಗಳನೆಲ್ಲಾ
ಸುಟ್ಟು || ಅನು ||

ಅರಿವೆಂಬ ಸಾಮಾಗ್ರಿಗೂಡಿ ಸಾರಮೋಕ್ಷವೆಂದರೆಂಬ
ಪಾಕವ ಮಾಡಿ ಹರಶರಣರು ಸವಿದಾಡಿ
ನಮ್ಮ ಗುರುಸಿದ್ಧ ದೇವನ ಚರಣವ ಪಾಡಿ || ಅನು ||