ಎಂಥಾ ಮಾನವ ಜನ್ಮ ಏನು ಕೆಡಸಿ ಬಿಟ್ಟಿರದ
ಇಂಥ ಮಾನವ ಜನ್ಮವನೆತ್ತವನೇ ಪುಣ್ಯ
ಶಾಂತರ ಸಂಘವಿಲ್ಲ ಕಂತು ಹರನ ಧ್ಯಾನವಿಲ್ಲ
ಭ್ರಾಂತಿ ಸಂಸಾರಕ್ಕೆ ಕೆಡತಿರಯ್ಯ   || ಎಂಥಾ ||

ಅರಬರೆ ಮೋಹಕ್ಕಾಗಿ ಹರಭಜನೆ
ಮಾಡೋದು ಬಿಟ್ಟು ಬರಿದೆ ನಿದ್ರೆ ಮಾಡಿ
ನೀವು ಕೆಡತಿರಪ್ಪಯ್ಯ ||
ಅರುಣೋದಯವಾಗುವ ಮುನ್ನ ಗುರುಧ್ಯಾನವ
ಮಾಡಿದರೆ ಪರಮಾನಂದ ಪ್ರಾಪ್ತಿ
ನಿಮಗೆ ಆಗ್ರಿದ್ರಪ್ಪಯ್ಯ      || ಎಂಥಾ ||

ಕಾಲು ಕೈ ಕಣ್ಣು ಮೂಗು ಮೇಲೆ ನಾರಿಗಿರಲಿಕ್ಕಾಗಿ
ಕಾಲಹರನ ಪೂಜೆ ನೀವು
ಬಿಟ್ಟಿರಪ್ಪಯ್ಯ
ಕಾಲಯಮನ ಧೂತರು ಬಂಧು ಕಾಲು
ಹಿಡಿದು ಎಳೆಯುವಾಗ ತಾಳು ತಾಳು
ಎಂದರೆ ತಾಳಿರಪ್ಪಯ್ಯ    || ಎಂಥಾ ||

ಹಣವೀಗಲೇ ಭಕ್ತಿ ಗುಣದೊಳಗೆ ಯುಕ್ತಿ
ನೆನಪಿದ್ದಾಗಲೇ ಮುಕ್ತಿ ಪಡೆದಿರಪ್ಪಯ್ಯ
ಹಣಕೊಟ್ಟು ಹೋಗುವಾಗ ಗುಣ ಕೆಟ್ಟು ಹೋಗುವಾಗ
ಘನವಿಲ್ಲದ ಯಮನ ಬಾವಿಗೆ ಬೀಳಲಪ್ಪಯ್ಯ  || ಎಂಥಾ ||

ಹಿಂದಿನ ಜನ್ಮದಲ್ಲಿ ಒಂದೇ ಭಾವದ
ಪುಟ ಮಾಡಿ ಇಂದು ನರ ಜನ್ಮಕ್ಕೆ ನೀವು ಬರಿದಪ್ಪಯ್ಯ
ಇಂದಿನ ಜನ್ಮದಲ್ಲಿ ಮಿಂದನೆಯ
ಕುಹವಾಡಿ ಹಂದಿಯ
ಜನ್ಮಕ್ಕೆ ನೀವು ಹೋಗಿರಪ್ಪಯ್ಯ     || ಎಂಥಾ ||

ಇರುವೇ ಎಂಬಂತಾಯ್ತು ಲಕ್ಷಯೋನೀ
ತಿರುಗಿ ತಿರುಗಿ ಹರವಿನ ಜನ್ಮಕ್ಕೆ ನೀವು ಹೋಗ್ತಿರಪ್ಪಯ್ಯ
ಮರೆಯೊಳು ಇರುತ್ತೀರಿ ಒಡೆಯ ಪಂಚಾಕ್ಷರಿ
ಕರುಣ ಕಟಾಕ್ಷ ನಿಮಗೆ ಆಗಿರಲಪ್ಪಯ್ಯ        || ಎಂಥಾ ||