ಪಲ್ಲವಿ : ಅರ್ಜುನಗೆ ಗುರುವಾದ ಕೃಷ್ಣಾ ! ಕೃಷ್ಣಾ !
ಧರ್ಮಜಗೆ ದೇವನಾದ ಕೃಷ್ಣಾ ! ಕೃಷ್ಣಾ !
ಚರಣ : ರುಕ್ಮಿಣಿಗೆ ಪ್ರಿಯನಾದೆ ದ್ರೌಪದಿಗೆ ಅಣ್ಣನಾದೆ
ಬಲರಾಮಗೆ ತಮ್ಮನಾದೆ ಕೃಷ್ಣಾ ! ಕೃಷ್ಣಾ !
ಯದುವಂಶ ತಿಲಕನಾದೆ ನಂದಕುಲವ ಉದ್ಧರಿಸಿದೆ
ಸಂದೀಪನ ಶಿಷ್ಯನಾದೆ – ಕೃಷ್ಣಾ ! ಕೃಷ್ಣಾ !
ಸುದಾಮನ ಮಿತ್ರನಾದೆ ನೀನು ಕೃಷ್ಣಾ !
ಸುಧಾಕುಂಭ ಹಿಡಿದೆ ಕೃಷ್ಣಾ ! ಕೃಷ್ಣಾ !
ಬೃಂದೆ ಮನವ ಗೆದ್ದೆ ನೀನು ಕೃಷ್ಣಾ ! ಕೃಷ್ಣಾ !
ಬೃಂದಾವನ ಸಂಚಾರೀ ಕೃಷ್ಣಾ ! ಕೃಷ್ಣಾ !
ದೂರ್ವಾಸನ ಗರ್ವ ಮುರಿದೆ ಕೃಷ್ಣಾ ! ಕೃಷ್ಣಾ !
ಏಕಾದಶೀ ಫಲವ ಕೊಟ್ಟೆ ಕೃಷ್ಣಾ ! ಕೃಷ್ಣಾ !
ಜಯಕೊಟ್ಟೆ ಪಾಂಡವರಿಗೆ ಕೃಷ್ಣಾ ! ಕೃಷ್ಣಾ !
ಜಯಲಕ್ಷ್ಮೀ ಸಹಿತನಾದ ಕೃಷ್ಣಾ ! ಕೃಷ್ಣಾ !
Leave A Comment