ಹೊತ್ತರ ಮುಂಚೆದ್ದಿ ಹಿತ್ತಲ್ಲೇ ಒಲಿ ಬಂದಿ
ಎತ್ತು ನಾಲುಗಿಯಾ ಚೋಳೋಚಿಯೇ
ಎತ್ತು ನಾಲುಗಿಯಾ ಚೋಳ್ಚೀಯೆ ಕೊಯ್ತಂದಿ
ಎತ್ತೋವೋ ಹಾಡಾ ಬುಡೋತಂಕೇ

ಹೊತ್ತರ ಮುಂಚೆದ್ದಿ ಹಿತ್ತಲ್ಲೆ ಒಲಿಬಂದಿ
ಹೋರಿ ನಾಲುಗಿಯಾ ಚೋಳಚೀಯೇ |ಕೊಯ್ತಂದಿ
ಹೇಳೂವೋ ಈ ಹಾಡು ತುದೀತಂಕೇ|

ಕರದಾ ಕಾರ್ಯವಿಲ್ಲಾ ಕಿರಿದು ಬೆಸರಿಲ್ಲಾ
ಹೋಗ್ ಬನ್ನಿ ರೋಪತಿಯಾ ಅರಮನೆಗೆ | ಗಿಳಿಗೋಳೆ
ಕರ್ತನ್ನಿ ತನ್ನಾ ಮಡದೀಯಾ |

ಹಾಲಾ ಕುಡಿಬೇಕಿದ್ರೆ ಹಣ್ಣಾ ತಿನ್ಬೇಕಿದ್ರೆ
ಬತ್ತೇನಂಬ್ ಜುತ್ವಾ ನುಡೀದಾರೆ | ಗಿಳಿಗೋಳೆ
ಹಾಲ್ ಕುಡ್ಡಿ ಮನೆಗೆ ಬರೋಬೇಕೇ |

ಅಟ್ಟಂಬಾ ಮಾತಾ ಕೇಳಾರೆ ಗಿಳಿಗೋಳು
ಹಾರಿದವಂಬರಕೇ ಸೆರಿಯಗಿ | ಗಿಳಿಗೋಳು
ಅರಜೀಣ ಪುರವಾ ಗಳೀದಾವೆ | ಗಿಳಿಗೋಳು
ರೋಪತಿ ಪುರಕೇ ಅರಗಾರೆ ಗಿಳಿಗೋಳು
ಹೋಗಿ ಮಿಳಿಮನೆ ಕುಳತಾರೆ

ಹೋಗಿ ಮಿಳಿಮೆನೆ ಕುಳುವುದ್ನು ರೋಪತಿ
ಮಾಳಗ್ಗಿಂದೆರಗೇ ಬರ‍್ವಾಳೆ | ರೋಪತಿ
ಹಾಲ್ತಟ್ಟೀಲ್ ಹಾಲಾ ಎರದಾಳೆ | ರೋಪತಿ
ಬಾಳೀ ಹಣ್ಣೇಳಾ ಸುಲೀದಾಳೆ | ರೋಪತಿ

ಈಳಿ ಹಣ್ಣೇಳಾ ಸುಲೀದಾಳೆ | ರೋಪತಿ
ಹಾಲೊಳಗಣ್ಣ ಇಡೋವಾಳು | ರೋಪತಿ
ಗಿಳಿಗಳೋಡನೋಗಿ ನಿಲೂವಾಳು |

ಗಿಳಿಗೋಳೋಡನೋಗಿ ನಿಲುವುದ್ನು ಗಿಳಿಗೋಳು
ಲಾಗೊಂದು ಮಾತಾ ನುಡೀದಾವೆ |
ಹಾಲಾ ಕುಡಿಬೇಕಿದ್ರೆ ಹಣ್ಣು ತಿನ್ನಬೇಕಿದ್ರೆ
ಬತ್ತೇನೆಂಬು ಜುತ್ವಾ ನುಡಿಬೇಕು |

ನಾನು ಬರುವಂಗೆ ಮೂರು ವರುಸಿನ ಬಾಲಿ
ಅರಜಿಣಗೆ ಕಯ್ದಾರಿ ಎರದಾರೆ |
ಕಾನಾಗೆ ಮನೆಕಟ್ಟಿ ಉಳಿದಾರೆ ಅರಜೀಣ
ನಾಗಾಣಿಯೊಡನೆ ಅಡಗೂಟ | ಗಿಳಿಗೋಳೆ
ಏನ್ಲ್ ಹೇಳ್ಲೆ ನನ್ನಾ ಒಡಲುರಿ | ಮಲಡಲುರಿ
ಗೋಳ್ಹೋಗಿ ನಗಾಣಿಗೆ ಅರಗಲೋ| ಗಿಳಿಗೋಳೆ

ಬತ್ತೆನಂಬ್ ಜುತವಾ ನುಡೀಹೋಗಿ | ಅಂದೇಳಿ
ಹೊಂಗಿನ ಚಬ್ಬಿ ಬಲಗಯ್ಲಿ ತಡಕಂಡಿ
ಹೂಂಗ್ನ ಹಕ್ಕಲ್ಲೇ ನೆಡದಾಳೆ | ರೋಪತಿ
ಹೂಂಗಂಬು ಹೊಂಗೆಲ್ಲ ಕೋಯಿದಾಳೆ.
ಹೂಂಗಂಬು ಹೊಂಗೆಲ್ಲ ಕೊಯ್ದಿ ದಂಡೀಕಟ್ಟಿ

ಕೆನ್ನೀಗಿಂಬಾಗೇ ಮುಡೀದಾಳೆ | ರೋಪತಿ
ತನ್ನಾ ಪಟ್ಟೀಯಾ ನೆರ್ದುಟ್ಟಿ | ರೋಪತಿ
ತನ್ಡೆ ಚಿನ್ನೆಲ್ಲಾ ಕೆಮಿದುಂಬಿ ರೋಪತಿ
ರಾಜಂಗ್ಳ ಮೆಟ್ಟಿ ಇಳಳೀ| ರೋಪತಿ
ಬಂದೀ ಬಾಗ್ಲಲ್ಲೇ ನಿಲೋವಾಳು | ರೋಪತಿ

ಮಾಳೂಗಿ ಒಳುಗೆ ನೆಡದಾಳೆ| ರೋಪತಿ
ಸುತ್ತೇಳು ಮಾಳುಗಿಯ ಅರಸಾಳೆ | ರೋಪತಿ
ಅರ್ಜಿಣ್ನ ಹೊಳಲು ತನಗಿಲ್ಲ | ಅಂದೇಳೇ
ಮಾಳಗ್ಗಿಂದೆರಗೇ ಬರೋವಾಳೆ |
ಬರುವಾದಿಲ್ಲಂದಾರು ವಾಲಿಯ ಕಳಗಾರೆ
ಜೂತರ ತಾವೆತ್ತ ನೆಡದಾರೆ | ಅಂದೇಳೇ
ಸಿಟ್ಟಿನಲ್ಲೆದ್ದೇ ಮನೆಗೊಯ್ತೇ |
ಸಿಟ್ಟಿನಲ್ಲೆದ್ದೇ ಮನಗೋಗ್ವದ್ನು ನಾಗಾಣಿ
ಅರ್ಜಣ್ಗೆ ಸಾಪಾ ಇಡೋವಾಳೆ | ಏನಂದಿ
ಅರ್ಜಿಣ್ನ ಸುಮ ನಿದ್ರಿ ಹುರಿಯಲಿ | ಅಂಬುದ್ನ
ಅರ್ಜಿಣ ಮಯ್ಮುರದೆ ಕುಳತಾನೆ | ಅರ್ಜೀಣ
ಪಟ್ಟೀ ನೆರಿಹೊಯ್ದೇ ಉಡೋವಾರೆ |

ಪಟ್ಟೀಗೇರಿಹೊಯ್ದೇ ಉಡುವಾನೇ ಅರ್ಜೀಣ
ಬೆರಳೀಗುಂಗಲವ ಇಡೋವಾನೆ | ಅರ್ಜೀಣ
ಮುತ್ನ ಮುಂಡಾಸ್ನ ತಲಗ್ ಸುತ್ತಿ | ಅರ್ಜೀಣ
ಮಾಳಗ್ಗಿಂದ್ಹೆರಗೇ ಬರೋವಾನೆ | ಅರ್ಜೀಣ
ನಾಗಾಣಿಗೆ ಸಾಪಾ ಇಡೋವಾನೆ |
ನಾಗಾಣಿಗೆ ಸಾಪಾ ಏನಂದಿ ಇಡುವಾನೇ
ಹಗಲಂಬುದ ದಾತ್ರೇ  ನೆನಸಾನೆ | ಅರ್ಜೀಣ
ನಾಗಾಣಿಗ್ ಸುಮನಿದ್ರಿ, ಕಮೀಯಾಲಿ | ಅಂದೇಳಿ

ರಾಜಮಾರ್ಗದಲ್ಲೇ ನೆಡದಾನೆ | ಅರ್ಜೀಣ
ಬಂದೀ ಬೀದ್ಯಲ್ಲಿ ನಿಲೋವಾನೆ | ಅರ್ಜೀಣ
ನಾಗಾಣಿಗೆ ಸಾಪಾ ಇಡೋವಾನೆ| ಏನಂದಿ
ನಾಗಾಣಿಗ್ ಸುಮ್ ನಿದ್ರಿ ಹುರಿಯಾಲಿ | ಅಂಬುದ್ನು
ನಾಗಾಣಿ ಮಯ್ಮುರಿದೆದ್ದು ಕುಳತಾಳೆ | ನಾಗಾಣಿ
ಸುತ್ತೇಳು ಮಾಳೂಗಿಯ ಅರಸಾಳೆ | ನಾಗಾಣಿ
ಅರ್ಜಿಣ್ನ ಹೊಳಲು ತನಗಿಲ್ಲ | ಅಂದೇಳಿ
ಬಿದ್ದ ಮಾರಿಗವ ಹಿಡೀದಾಳೆ | ನಾಗಾಣಿ
ಅರಜಿಣ್ಗೆ ಎದರಾಗೇ ನಿಲೋವಾಳೆ |

ಕೊಮ್ಮಣ್ಣಿ ಗಂಡಾಗೇ ಇನ್ನೆಟ್ಟು ಕೊಮ್ಮಾಣಿ
ಅಂದೇಳಿ ಗಂಡನಾ ಹಿಡಕಂತೇ | ನಾಗಾಣೀ
ಬೆರಳೀ ನುಂಗಲವ ಕಸಗಂತೇ| ನಾಗಾಣಿ
ಉಟ್ಟ ಪಟ್ಟೀಯ ಕಸಗಂತೇ | ನಾಗಾಣಿ
ಜೀವತಾನೊಂದು ಉಳಸದೇ | ನಾಗಾಣೀ
ತನ್ನಲರಮನಗೇ ಬರೋವಾಳೇ |
ತನ್ನಲರಮನೆಗೆ ಬರುವುದ್ನು ಅರಜೀಣ
ತನ್ನ ಮನಿಕೂಸ್ನ ಕರದಾನೆ |

ಕರದಾಕಾರೀಕೇ ಬಂದಾನೇ ಮನಿಕೂಸಾ
ನಿಂದಾನೇ ಅರ್ಜೀಣ್ನ ಒಡನಲ್ಲಿ |
ಏನು ಕರೆದೀರಿ ಸೋಮಿ ಎಂತು ಕರೆದಿರಿಸೋಮಿ
ಕರದಾ ಬೆಸರವಾ ತನಗೇಳಿ |

ಇದ್ದದದ ಬಿದ್ದದ ನಾಗೊಣ್ಹೊಯ್ಕೊಂಡೊಯ್ತು
ಜೀವ ತಾನೊಂದು ಉಳದದೆ | ಮನಿಕೂಸಾ
ಹೋಗ್ ಬಾರೋ ಕುಸುಮಾರಿ ಅರಮನಗೆ |

ಅಟ್ಟಂಬು ಮಾತಾನೇ ಕೇಳಾನೆ ಮನಿಕೂಸಾ
ಕುಸುಮಾಲಿ ಅರಮನಿಗೆ ನೆಡದಾನೆ |ಮನಿಕೂಸಾ
ಹೋಗಿಬಾಗ್ಲಲ್ಲೇ ನಿಲೋವಾನೆ |

ಯಾವಾಗೂ ಅರ್ಜಿಣರಾ ಅರ‍್ಮಲಿರು  ಮನಿಕೂಸಾ
ಏನಂಬದ್ಯೋ ನನ್ನ  ಒಡ್ನಲ್ಲಿ |

ಅಟ್ಟಂಬು ಮಾತಾನೇ ಕೇಳಾನೆ ಮನಿಕೂಸಾ
ಆಗೊಂದು ಮಾತಾ ನುಡೀದಾನೆ |
ಇದ್ದೆದ ಬಿದ್ದದ ನಾಗಾಣ್ಹೋಯ್ಕೊಂಡೋಯ್ತು
ಜೀವತರೊಂದು ಉಳದದೆ | ಕುಸುಮಾಲಿ
ದೆವರ ಮಸ್ತದಿಯಾ ಕೊಡಬೇಕೇ |

ಕುಸ್ಮಾಲಿ ಮುಂದಾಗಿ ಮನಿಕೂಸಾ ಹಿಂದಾಗಿ
ನಾಗಾಣಿ ಅರಮನಗೇ ನಡದಾರೆ | ಕುಸುಮಾಲಿ
ಹೋಗಿ ಬಾಗಲ್ಲೇ ನಿಲ್ವಾಳೇ | ಕುಸ್ಮಾಲಿ
ಆಗೊಂದು ಮಾತಾ ನುಡೀದಾಳೇ

ಯಾವೋರ್ಗೆ ಹೋಗಿದೆಯೇ ಯಾಹೂಂಗಾ ಮುಡದಿದೆಯೇ
ಯಾರ ಕಯ್ಯೊಡವಿ ಕಸದದಿಯೇ| ನಾಗಾಣಿ
ತಂದೊಡವಿ ಬೆ-ಗೇ ಕೊಡಬೇಕೇ |
ತಂದೊಡವೀ  ಬೆ-ಗೇ ಕೊಡದೇಯಿದ್ದಾರೆ
ಮುಂಗುರಿ ಕೊಡ್ ನಿನ್ನಾ ಮುರಿಸೂವೆ | ನಾಗಾಣಿ
ಗಿಡಗನ ಕೂಡ್ ನಿನ್ನಾ ಒದೀಸುವೆ |

ಅಟ್ಟಂಬು ಮಾತಾ ಕೇಳಾಳೇ ನಾಗಾಣಿ
ತಂದೊಡವಿ ಬೇ-ಗೇ ತರೋವಾಳು -ನಾಗಾಣಿ
ಕುಸುಮಾಲಿ ಬಲಗಯ್ಲಿ ಕೊಡೋವಾಳು |

ಕುಸುಮಾಲಿ ಬಲಗಯ್ಲಿ ಕೊಡುವುದ್ನು ಕುಸುಮಾಲಿ
ಎಯ್ಡು ಕಯ್ಯೊಡ್ಡದೆ ತಡದಾಳೆ | ಕುಸ್ಮಾಲಿ
ಮನ್ನಿಕೂಸ್ನ ಬಲಗಯ್ಲೇ ಕೊಡೋವಾಳೇ |

ಕೊಟ್ಟ ಒಡವವೀಯ ತಟ್ಟನೇ ತಡಕಂಡೇ
ಗಾಡಾಗೇ ಓಡೇ ಬರೋವಾನೇ | ಮನಿಕೂಸಾ
ಅರ್ಜಿಣ್ನ ಸಾಯ್ತಿ ಕೊಡೋವಾನೇ |
ಅರ್ಜಿಣ್ನ ಸಾಯ್ತಿ ಕೊಡ್ವದ್ನು ಅರ್ಜೀಣ

ತಮ್ಮಾ ಮಸ್ತದಿಯಾ ಇಡೋವಾನೆ | ಅರ್ಜೀಣ
ರೋಪತಿ ಅರಮನ್ಗೆ ಬರೋವಾನೆ | ಅರ್ಜೀಣ
ಬಂದೀ ಬಾಗಲ್ಲೇ ನಿಲೋವಾನೇ |
ಬಂದೀ ಬಾಗಲ್ಲೇ ನಿಲ್ಲುವುದ್ನು ರೋಪತಿ
ತಡ್ದಳೇ ಚಂಬಗಲೇ ಉದಕವ.

ಮಡದೀ ಕೊಟ್ಟುದಕಾ ಬೇಗಾದಲ್ ತಡ್ದಾನೆ
ಕಾಲೂ ಸಿರಿಮೊಕವಾ ತೊಳದಾನೆ | ಅರ್ಜೀಣ
ಮಾಳೂಗಿ ಒಳಗೆ ನೆಡದಾನೆ| ಅರ್ಜೀಣ
ತೂಗು ಮಂಚದ ಮೇ- ನೇ ಕುಳತಾನೆ|
ತೂತು ಮಂಚದ ಮೇ-ನೆ ಕೂಳುವುದ್ನು ರೋಪತಿ
ಬೆಳ್ಳಿ ಸಂಬಳಗಿ ಬೆಳಿಯಲೆ | ಅಡಕೀಬಾಗ
ಹಾಲಿನಲಿ ಬೆಂದ ತೆನಿಸುಣ್ಣ | ತಡಕಂಡಿ
ನಲ್ಲಗೊಂದೀಳ್ಯ ಕೊಡೋವಾಳೆ |

ಎಲಿಯೊಂದ ತಿಂದಾನೇ ರಜವಲ್ಲೇ ಉಗಳಾನೆ
ಆಗೊಂದು ಮಾತಾ ನುಡಿದಾನೆ | ಮಡದೀ ಕೇಳೇ
ಅಡಗೀಲೂಟಿಕೆ ಅನುಮಾಡೇ |

ಅಟ್ಟಂಬಾ ಮಾತಾ ಕೇಳಾಳೆ ರೋಪತಿ
ಹಾಲ್ಗಂಜಿಲೂಟಕೇ ಅನುಮಾಡಿ | ರೋಪತಿ
ಸಣ್ಣ ಗಿಂಡ್ಯಲ್ಲಿ ಉದಕವ ತಡಕಂಡೇ
ಗಂಡನೊಡನೋಗಿ ನಿಲೋವಾಳೆ | ರೋಪತಿ
ಗಂಡಗೆ ಉದಕಾ ಕೋಡೋವಾಳೆ |

ಮಡದೀ ಕೊಟ್ಟುದಕಾ ತಟ್ಟಾನೇ ತಡದಾನೆ
ಕಾಲು ಸಿರಿಮೊಕವಾ ತೊಳದಾನೆ | ಅರ್ಜೀಣ
ಊಟಕರೆ ಹೋಗಿ ಕುಳತಾನೆ |

ಬೆಳ್ಳಿ ಹರವಳ ಬೆಳಗಿರಿಸಿ ರೋಪತಿ
ಹಾಲೂ ಗಂಜೀಯಾ ಬಡಸಾಳೆ | ರೋಪತಿ
ತುಪ್ಪಾ ಸಕ್ಕರಿಯಾ ಎರದಾಳೆ |
ತುಪ್ಪಾ ಸಕ್ಕರಿಯಾ ಎರ್ದಿ ತಿರುಗುರೊಟ್ಗೆ
ಉಂಡೆದ್ದ ನೊಂದು ಗಳಗ್ಯಲ್ಲೇ |

ಉಂಡನೂಟವೇ ತೊಳ್ದಾನೆ ಚಂದ್ರಸ್ತವೇ
ತೂಗುಮಂಚದ ಮೆನೇ ಕುಳತಾನೆ |
ತೂಗು ಮಂಚದ ಮೇ-ನೇ ಕುಳುವುದ್ನು ರೋಪತಿ
ತನ್ನೂಟಕೆ ತಾನು ಎಡಮಾಡೇ | ರೋಪತಿ
ಉಂಡೆದ್ದಳೊಂದು ಗಳಗ್ಯಲ್ಲಿ |

ಉಂದಾಳೂಟವ ತೊಳದಾಳೇ ಚಂದ್ರಸ್ತವ
ಎಂಜಲು ಮಯ್ಲಗಿಯ ಬಳಗಾಳೆ | ರೋಪತಿ
ಬೆಳ್ಳಿ ಸಂಬಳಗಿ ಬೆಳಿಯಲೆ | ಅಡಕೀಬಾಗಾ
ಹಾಲಿನಲ್ಲಿ ಬೆಂದ ತೆನೆಸುಣ್ಣಾ | ತಡಕಂಡಿ
ನಲ್ಲಗೊಂದೀಳ್ಯಾ ಕೊಡೋವಾಳು |

ಎಲಿಯೊಂದು ತಿಂದಾನೇ ರಜವಲ್ಲೇ ಉಗಳಾನೆ
ಆಗೊಂದು ಮಾತಾ ನುಡವಾನೆ |
ಆಗೊಂದು ಮಾತಾ ಏನಂದಿ ನುಡದಾನೆ |
ಮಂಚಕ ಹಾಸಾ ಬಿಡಸೋಗು |

ಆಟೊಂದು ಮಾತಾ ಕೇಳಾಳೇ ರೋಪತಿ
ಮಂಚಕೆ ಹಾಸಾ ಬಿಡಸಾಳೆ |
ಮಂಚಕಕೆ ಹಾಸಾ ಬಿಡಿಸುದ್ನು ಅರ್ಜೀಣ
ಹಾಸನ ಮೆ-ನೋಗಿ ಒರಗಾನೆ |
ಹಾಸನ -ಮೆ-ನೋಗಿ ಒರಗ್ವದ್ನು ನಾಗಾಣಿಗೆ
ಅಲ್ಲಿದ್ದೇ ಸಪನ ಬೀಳ್ವದು |

ಅಲ್ಲಿದ್ದೇ ಸಪನ ಬೀಳ್ವದ್ನು ನಾಗಾಣಿ
ಬಿದ್ದ ಮಾರ್ಗವ ಹಿಡಿದಾಳೆ- ನಾಗಾಣಿ
ರೋಪತಿದ್ದರ ಮನೆಗೆ ಬರೋವಾಳೆ |

ಬಾಗ್ಲದೇ ಹೋದರೆ ಬಾಗ್ಲ ಬಾಗ್ಲ ಹಿಡಿಯಾ ಅಂದಿ
ಹತ್ತಿ ಮಣಿಮಾಡಾ ಇಳದಾಳೆ | ನಾಗಾಣಿ
ಹಾಸಾಮೆನೋಗೆ ಕುಳತಾಳೆ | ನಾಗಾಣಿ
ಅರ್ಜಿಣನ ಮುಸಕಾ ತೆಗೆದಾಳೆ | ನಾಗಾಣಿ
ತನ್ನ ಮುತ್ತಯ್ತನ್ಹೋಕಂದಿ |ನಾಗಾಣಿ
ಅರ್ಜಿಣ್ನ ಮುಸುಕಾ ಮಡಗಾಳೆ | ನಾಗಾಣಿ
ರೋಪತಿ ಮುಸಕಾ ತೆಗ್ದಾಳೆ | ನಾಗಾಣಿ
ರೋಪತಿ ಗಿಟ್ ಇಸವಾ ಉಗಳ್ಳಿಕ್ಕಿ | ನಾಗಾಣಿ
ಹತ್ತಿ ಮಣಿಮಾಡಾ ಇಳದಾಳೆ | ನಾಗಾಣಿ
ತನ್ನಲರಮನಗೇ ಬರೋವಾಳೆ |

ತನ್ನಲರಮನಗೇ ಬರ‍್ವದ್ನು ಅರ್ಜೀಣ
ಮೆಯ್ಯ ಮುರದೆದ್ದಿ ಕುಳತಾನೆ | ಅರ್ಜೀಣ
ಪನ್ನೀರ ಗಿಂಡೀ ಬಲಗಯ್ಲಿ | ತಡಕಂಡಿ
ಪನ್ನೀರಲಿ ಮೊಕವಾ ತೊಳದ್ದಾನೆ | ಅರ್ಜೀಣ
ಆಗೊಂದು ಮಾತಾ ನುಡದಾನೆ |

“ಕೂಡನ್ ಗರತೀರು ಎಸರೆತ್ತ ಮಸರಾ ಕಡದೇ
ಜೋಡಲ ಕೊಡಪನವ ತಡದಾರೆ – ನಮ್ಮನಿಯಾ
ನಿದ್ಗೇಡಿಗೆ ನಿದರೀ ಹುರೀಲಿಲ್ಲ| ಅಂದೇಳೇ
ಮಡದೀಯ ಮುಸಕಾ ತೆಗೆದಾನೆ |
ಮಡದೀಯ ಮುಸಕಾ ತೆಗೆದರೆ ರೋಪತಿಗೆ
ಅಲ್ಲೇ ಜೀವದಲೆ ಮರಣಾವೇ | ಆರ್ಜೀಣ
ಆಗೊಂದು ಮಾತಾನುಡದಾನೆ |

ಕಾನಾನ್ಹೆಣ್ಣಕ್ಳು ಕಾನಾಗೇ ಇರುತಿದ್ರು
ನಾಬಂದ್ ಗೋ- ಬೀಗೆ ಗುರಿಯಾದೆ |
ಬೆಟ್ಟಾದ್ಹೆಣ್ಮಕ್ಳು ಬೆಟ್ದಲ್ಲೇ ಇರುತೀರು
ನಾಬಂದ್- ಗೋ- ಬೀಗೆ ಗುರಿಯಾದೆ |

ನಾಬಂದ್ ಗೋ-ಬೀಗೇ ಗುರಿಯಾದೆ ಅಂದ್ ಅರ್ಜೀಣ
ಬಿದ್ದ ಬಿದ್ದಲ್ಲೇ ಮರಗಾನೆ | ಅರ್ಜೀಣ
ತನ್ನಾ ಮನಿಕೂಸ್ನಾ ದೆನಿದೋರೇ |

ಕರದಾಕಾರೀಕೇ ಬಂದಾನೇ ಮನಿಕೂಸಾ
ನಿಂದಾನೇ ಅರ್ಜಿಣ್ನಾ ಒಡನಲ್ಲಿ |
ಏನು ಕರೆದಿರಿ ಸೊಮಿ ಎಂತು ಕರದಿರಿ ಸೊಮಿ
ಕರದಾ ಬೆ-ಸರವಾ ತನಗೇಳಿ |

ಕರದ ಕಾರಿಲ್ಲ ಕಿರಿದು ಬೆಸರಿಲ್ಲ
ಹೋಗ್ ಬಾರೋ ಕುಸ್ಮಾಲಿ ಅರಮನೆಗೆ | ಮನಿಕೂಸಾ
ಕುಸ್ಮಾಲಿ ಇಲ್ಲಿಗೆ ಬರೋಬೇಕೇ |

ಕುಸ್ಮಾಲಿ ಇಲ್ಲಿಗೆ ಬರ‍್ಬೇಕೋ ಅಂಬುದ್ನು ಮನಿಕೂಸಾ
ಕುಸ್ಮಾಲಿ ಅಗ್ಮನಗೇ ನೆಡದಾನೆ |
ಕುಸ್ಮಾಲಿ ಅರ‍್ಮನೆಗೇ ನೆಡ್ವದ್ನು ಕುಸ್ಮಾಲಿ
ಏನು ಕಾರಣಲಿ ಬರವಿಯೋ ಅಂಬುದ್ನು
ಮನಕೂಸ ಒಂದ್ ಮಾತಾ ನುಡದಾನೆ | ಏನಂದಿ
ನಾಗಾಣಿ ಇಸ್ವಾ ಎರದ್ ಬಂತು | ರೋಪತಿಗೆ
ಅರ್ಜೀಣ ದುಕ್ಕಾದಲ್ಲೇ ಇರೋವಾನೆ | ಅಂದೇಳಿ
ನಿನ್ನಾ ಕರವಕೆ ಕಳಗಾರೆ |

ಅಟ್ಟಂಬಾ ಮಾತಾ ಕೇಳಾಳೇ ಕುಸ್ಮಾಲಿ
ನಾಗಾಣಿ ಅರಮನೆಗೆ ನೆಡದಾಳೆ |
ಯಾವೂರಿಗ್ ಹೋಗಿದೆ ಯಾಹೂಂಗಾ ಮುಡದಿದಿಯೇ
ಯಾರಿಗೆ ಇಸವಾ ಉಗಳದೀಯೆ| ನಾಗಾಣಿ
ನೀನಿಟ್ಟ ಇಸವಾ ತೆಗೆ ಬೆ-ಗೆ |
ನೀನಿಟ್ಟ ಇಸವಾ ತೆಗೆಯದೆ ಇದ್ದರೆ
ಗಿಡಗನ ಕೂಡ್ ನಿನ್ನಾ ಒದಿಸೂವೊ |

ನಾಗಾಣಿ ಮುಂದಾಗಿ ಕುಸ್ಮಾಲಿ ಹಿಂದಾಗಿ
ರೋಪತಿ ಅರಮನಗೇ ಬರೋವಾರೆ |
ರೋಪತಿ ಅರಮನ್ಗೆ ಬರುವುದ್ನು ಕುಸ್ಮಾಲಿ
ಹೋಗಿ ಬಾಗಲ್ಲೇ ನಿಲುವಾಳೇ | ಕುಸ್ಮಾಲಿ
ತೂಗು ಮಂಚದ್ಲೇ ಕುಳತಾಳೆ |
ತೂಗು ಮಂಚದ್ಲೇ ಕುಳುವುದ್ನು ನಾಗಾಣಿ
ಹತ್ತಿ ಮಣಿ ಮಾಡ ಇಳದಾಳೆ | ನಾಗಾಣಿ
ತಾನಿಟ್ಟ ಇಸವಾ ತೆಗೆದಾಳೆ | ನಾಗಾಣಿ
ಹತ್ತಿ ಮಣಿ ಮಾಡ ಇಳದಾಳೆ | ನಾಗಾಣಿ
ಮಾಳಗ್ಗಿಂದೆರಗೇ ಬರುವಾಳೆ |

ಮಾಳಗ್ಗಿಂದ್ಹೆರಗಿ ಬರುವುದ್ನು ರೋಪತಿ
ಮಿಯ್ಯಾ ಮುರದದ್ದೇ ಕುಳತಾಳೇ | ರೋಪತಿ
ಕಯ್ಕಾಲು ಸಿರಿ ಮೊಕವಾ ತೊಳದಾಳೆ | ರೋಪತಿ
ಅಕ್ಕಾನೊಡನೋಗೇ ಕುಳತಾಳೆ |
ಅಕ್ಕಾನೊಡನೋಗೆ ಕುಳುವುದ್ನು ಕುಸ್ಮಾಲಿ
ತಂಗೀಗೊಂದೀಳ್ಯಾ ಕೋಡೋವಾಳೆ |

ಅಕ್ಕ ಕೊಟ್ಟೀಳ್ಯ ಬೆ-ಗಾದಲ್ ತಡಕಂಡೇ
ಅಕ್ಕನ ಸಿರಿಪಾದಕೇ ಸರಣಂದೇ ರೋಪತಿ
ಬಿದ್ದ ಬಿದ್ದಲ್ಲೇ ಮರೂಗ್ವಾಳೇ |
ಬಿದ್ದ ಬಿದ್ದಲ್ಲೇ ಮರೂಗ್ವಾಳೇ |
ಬಿದ್ದ ಬಿದ್ದಲ್ಲೇ ಏನಂದೀ ಮರುಗ್ವಾಳೇ
ಹೊಟ್ಟೆಲಿ ಹೆಣ್ಣೊಂದು ಹುಟ್ಟೀರೇ | ಅಕ್ಕಾಕೇಳೇ
ನಿನ್ಹೆಸ್ರು ಅದಕ್ಕೆ ಇಡತೀದೆ |
ನಿನ್ಹೆಸ್ರು ಅದಕೆ ಇಡತೀದೆ ಅಕ್ಕಾಕೇಳು
ಹಣ್ಣ ಸಂತನವೇ ಮೊದಲಿಲ್ಲ |

* * *