ಮಾರ = ಅಳತೆ

ಮೆರೆಸು = ಪ್ರದರ್ಶಿಸು

ಮೊಕ = ಮುಖ

ಮ್ಯಾಳಿಯ ಮನೆ = ಮೇಣದ ಮನೆ

ಮೈದುನ = ಗಂಡನ ತಮ್ಮ

ಮಾರಾಯ = ಒಡೆಯ, ಗಂಡ

ಮಾವ = ಪ್ರೀತಿ

ಮಂದೀಲ = ಮುಂಡಾಸು

ಮಾಳಿ = ಮಾಲೆ

ಮಾಳಿಗಿ = ಕಲ್ಲು-ಮಣ್ಣಿನ ಮನೆ

ಮಾಯಿ = ಪ್ರೀತಿ, ದಯೆ

ಮುಡಚಟ್ಟು = ಮೈಲಿಗಿ

ಮನಗು = ಮಂದು

ಮಕ = ಮುಖ

ಮ್ಯಾಳ = ಮೇಳ, ಗುಂಪು

ಮುಟ್ಟಾಗು = ರಜಸ್ವಾಲೆಯಾಗು

ಮುಡಚಾಟ = ಮುಡಚಟ್ಟು

ಮಗುಟ = ರೇಷ್ಮೆ ಪಂಚೆ

ಮರುತ = ಮರ್ತ್ಯ, ಭೂಮಿ

ಮಾಜಾಣ = ಮಹಾಜಾಣ

ಮೀಟಿಂಗ = ಬಾಳೆಕಾಯಿಯ ಸಿಪ್ಪೆ

ಮುಚ್ಚೋರೆ = ಒಂದು ಬಗೆಯ ಭಕ್ಷ್ಯ

ಮುರ = ಹಸುಗಳಿಗಾಗಿ ಹುಲ್ಲು ಬೇಯಿಸಿ, ತಯಾರಿಸುವ ತಿನಿಸು

ಮುಸುಗು = ಸೆರಗಿನ ಮರೆ

ಮೂಗಳ = ಮೂರುಕ್ಕೊಳಗ

ಮೂಡು = ಪೂರ್ವದಿಕ್ಕು

ಮಟ್ಲು = ಮೆಟ್ಟಿಲು

ಮಗಾಯಿ = ಮಾವಿನಕಾಯಿ

ಮಾಜು = ಮರೆಮಾಡು

ಮಾಣು = ಬಿಡು

ಮಾದಿಗ = ಹೊಲೆಯ

ಮಾರ್ಬಲ = ವೈರಿಸೈನ್ಯ

ಮಾರಹರ = ಶಿವ

ಮುಕ್ತಿದರ = ಶಿವ

ಮುಕ್ತಿಸಿಂಧು = ಮೋಕ್ಷನದಿ

ಮುಂಗಾಣು = ಮುಂದೆಕಾಣು

ಮುಂಡಾಣು = ಮುದ್ದಿಸು

ಮೂಕೊರೆಯ = ಮೂಗುಹರಿದು

ವೇಗ = ಮುಕ

ವೇನೆ = ತುದಿ

ಮೋನ = ಮೌನ, ಶಾಂತಿ

ಮಿತ್ತು = ಮೃತ್ಯು, ಸಾಯು

ಮಿಸುಣಿ = ಬಂಗಾರ

ಮಿಸುಣಿಗಪ್ಪರ = ಬಂಗಾರದ ಟೊಪ್ಪಿಗೆ

ಮಗಡ = ಎತ್ತುಗಳ ಮುಖ ಸಿಂಗಾರಕ್ಕೆ ಹಾಕಿದ ತೊಗಲಿನ ವಸ್ತು (ಮುಖವಾಡ)

ಮಣಕು = ಮನಸಿಗೆ ಬರುವ ಮೊದಲಿನ ತರುಣ ಎಮ್ಮೆ, ಆಕಳು

ಮರಗು = ಸಂಕಟಪಡು

ಮಲಾಕ = ಓಡುವಾಗ ತಟ್ಟನೆ ಹೊರಳುವ ರೀತಿ

ಮಲು = ಹಗ್ಗದ ಒಂದು ರೀತಿಯ ಕಟ್ಟು

ಮಕರ ಧ್ವಜ = ಕಾಮ

ಮಚ್ಚರ = ಮತ್ಸರ

ಮಂಜಿರ = ಹಿಮಪರ್ವತ

ಮಜ್ಜಿನ = ಜಿಳ

ಮಡಗು = ಹಿಡು, ಮಲಗು

ಮಡುವು = ನೀರಿನ ಹೊಂಡ

ಮತಿ = ಬುದ್ಧಿ

ಮದಕರಿ = ಆನೆ

ಮಧ್ಯನಾಳ = ಸುಸುಮ್ನ

ಮಟ್ಟ = ಗಂಟು

ಮೃಗ = ಚಿಗರಿ

ಮೃಡ = ಶಿವ

ಮಸಲತ್ತು = ಕುತಂತ್ರ

ಮುಗ್ಗು = ಎಡವಿ ಬೀಳು

ಮುಟಗಿ = ಬಿಸಿ ರೊಟ್ಟಿಯಲ್ಲಿ ಉಪ್ಪು ಕಾರಹಕಿ ಕುಟ್ಟಿ ಮೆತ್ತಗೆ ಮಾಡಿದ ಉಂಡಿ

ಮುರುಕ = ಪೌಲು, ಆಕರ್ಷಿಸುವಂತೆ ಮಾಡು

ಮುರಗಣ = ಕರ್ಚಿಕಾಯಂತದು ಕುದಿಸಿದ ಖಾದ್ಯ

ಮಸಗು = ಮಲಗು

ಮಂಡಲ = ಬರಿದಾದ ಸ್ಥಳ

ಮಂದಿಲು = ಮುಂಡಾಸು

ಮಡ್ಡಿಯ = ಗುಡ್ಡದ

ಮನಿಮುಂದ = ಮನೆಮುಂದೆ

ಮನ್ಯಾಗಿರೆ = ಮನೆಯಲ್ಲಿರು

ಮಳಕಿ = ಮೊಳಕೆ, ಸಸಿ

ಮಳ್ಯಾಗ = ಮಳೆಯಲ್ಲಿ

ಮಾಡೇ = ಮಾಡುವ

ಮಾರ್ಯವೆ = ಮಾರಿವೆ, ಮಾರಾಟ ಆಗಿವೆ

ಮಣಿಕನಿತ್ತು = ಮಣಿಕ ಕೊಟ್ಟು ಆಕಳಕರು ಕೊಟ್ಟು

ಮಾರೇಕಿ = ಮುಖದವಳು

ಮಾಸ್ಯಾದ = ಮಾಸಿದೆ, ಹೊಸಲಾಗಿದೆ

ಮ್ಯಾಲ = ಮೇಲೆ

ಮ್ಯಾಲೆ = ಮೇಲೆಯ

ಮ್ಯಾಳಿಗೆ = ಮಾಳಿಗೆ

ಮುಂಜಿಲಿ = ಮುಂಜಾನೆಯ ವೇಳೆಯಲ್ಲಿ

ಮುಂದ = ಮುಂದೆ

ಮುತ್ತಿಂದೆ = ಮುತ್ತಿನದೆ

ಮುರಿಲಾಕ = ಮುರಿಯಲಿಕ್ಕೆ

ಮೂಗಿನಕಿ = ಮೂಗಿನವಳು

ಮೂರ = ಮೂರು (ಸಂಖ್ಯೆ)

ಮಡಪತಿ = ಮಠಪತಿ

ಮದ್ದು = ವಿಷ

ಮನಸುಪ = ಮನಸ್ತಾಪ, ಆಲೋಚನೆ

ಮರಿತೇಜ = ಮರಿಗುದುರೆ

ಮಹಲು = ಮಹಡಿಮನೆ, ಮನೆ

ಮಾಲುವ = ವಸ್ತು

ಮುಚ್ಚಳ = ಮಣ್ಣಿನ ಪಾತ್ರೆ

ಮುಂಜಾಳಿ = ಮುಂಜಾನೆ

ಮುಂಡಾಸು = ರುಮಾಲು

ಮುತ್ತಲ ಎಲೆ = ಮುತ್ತುಗದ ಎಲೆ

ಮಂಚಣ್ಣ = ಗುಪ್ತ

ಮಜಬೂರ = ಸರಿ

ಮಖೆಶರಾ = ಮಕ್ಕಾ ನಗರ

ಮದನಗಿತ್ತಿ = ಮದುವಣಗಿತ್ತಿ

ಮಾಚೌಲ = ದೊಡ್ಡ ಚಾಮರ ಅಥವಾ ಬೀಸಣಿಗೆ

ಮನ್ನೆ = ಮೊನ್ನೆ

ಮಿಳ್ಳೆ = ಕಂಚಿನ ಸಣ್ಣ ಬಾಯಿಯ ಪಾತ್ರೆ

ಮುರು = ದನಗಳಿಗೆ ಬೇಯಿಸಿ ಹಾಕುವ ಆಹಾರ

ಮಂಡಿಯನ್ನುರಿ = ಮೊಳಕಾಲನ್ನೂರಿ

ಮೂರುಸಂಜೆಲೆ = ಇಳಿ ಹೊತ್ತಿನಲ್ಲಿ

ಮಾಳಿಗಿ = ಮಣ್ಣಿನ ಮನೆ

ಮಾಲಾ = ಮಾಲು, ವಸ್ತು

ಮರುತ್ಯಾಕೆ = ಮರ್ತಕ್ಕೆ, ಭೂಲೋಕಕ್ಕೆ

ಮದಿ = ಮದುವೆ

ಮಾಣವ = ಮಣ (10ಕಿಲೋ)

ಮೈದುನ = ಗಂಡನ ತಮ್ಮ

ಮ್ಯಾಣ = ಮೇಣ

ಮುತ್ತೈತನ = ಮುತ್ತೈದೆತನ

ಮೌನದ = ಪ್ರೀತಿಯ

ಮೋಜು = ಸಂತೋಷ ಕೂಟ

ಮಿಳಿ = ಮಿಣಿ, ದಪ್ಪನೆಯ ಹಗ್ಗ

ಮಳ = ತೋಟ

ಮುದ್ದತ = ಸಮಯದ ಮಿತಿ

ಮಲ್ಲದಿ = ಮೆಲ್ಲಗೆ

ಮುಂಡಸಿ = ರುಮಾಲು, ಮುಂಡಾಸು

ಮೂಡಲ್ದಾಗ = ಸೂರ್ಯೋದಯದ ಸಮಯ

ಮದ್ದು = ವಿಷ

ಮನಗು = ಮಲಗು

ಮುಂಚಿಗ = ಮೊದಲಿಗೆ

ಮಾಗಿ = ಹದ

ಮುಟ್ಟ = ಬಹಳ

ಮಡಿನೀರು = ಮೀಸಲಾದ ನೀರು

ಮೂಕಳಿ = ತಿಕ

 

ಯಣ್ಣೇ = ಎಣ್ಣೆ

ಯತಗಾಲು = ಒಂದು ಜಾತಿಯಮರ

ಯಾಕ = ಏಕೆ

ಯಾಕೊ = ಏಕೋ, ಏಕೆ

ಯಾವಾಕಿ = ಯಾವಳು

ಯಡಿ = ಪ್ರಸಾದ

ಯಾಳಿ = ಸಮಯ

ಯಾಸ = ವೇಷ

ಯಾಸಿ = ಡೊಂಕ

ಯಾನ = ಏನು

ಯಾಳೆ = ವೇಳೆ, ಸಮಯ

ಯತನ = ಯತ್ನ, ಪ್ರಯತ್ನ

ಯಾಳೆ = ವೇಳೆ, ಸಮಯ

ಯೇಳ್ಯೆ = ವೇಳೆ, ಸಮಯ

 

ರಸಬಳ್ಳಿ = ರಸಬಾಳೆ ಎಲೆ

ರಾಗಡಿ = ಒಂದು ಒಡವೆ

ರುವ್ಹಾರ = ಕೆತ್ತನೆಯ ಕೆಲಸ

ರುಂಡಿಜಾರು = ಎತ್ತಿನ ಎಲುಬು ಜಾರುವುದು, ಮುರಿಯುವುದು

ರಕ್ಕಸ = ರಾಕ್ಷಸ

ರಚ್ಚೆ = ಒದರು, ಕಿರುಚು

ರಜೆ = ಧೂಳು

ರಜತಾದ್ರಿ = ಬೆಳ್ಳಿಬೆಟ್ಟ

ರತ್ನಗಿರಿ = ರತ್ನದ ಪರ್ವತ

ರಾವಳ = ರಾವಣ

ರಿಕ್ಕ = ಬಿಡದಂತೆ ಗಟ್ಟಿಯಾಗಿ ಅಂಟಿಕೊಂಡ

ರುಂಜಿ = ಹಾಕಿದ ಗೆರೆ

ರೊಡ್ಡ = ಎಡಗೈ ಬಳಸುವವ

ರಾಯೇರಾಟಾ = ರಾಯರು-ರಾಜರು ಆಡುವ ಆಟ

ರೊಕ್ಕ = ಹಣ

ರಾಕಾಟ = ಗಂಜಿ

ರಾಜಗಿರಿ = ಒಂದೇ ವಿಧದ ಸೊಪ್ಪು

ರಕತ್ಕಟ್ಟೆ = ನಮಾಜುಕಟ್ಟೆ

ಕಾದಿ(ಉರ್ದು) = ಸೊಪ್ಪು

ರಂಡಿ = ಸೊಳೆ

ರಗಟಿನ = ಉಪಟಳಿನ

ರೇಣ್ಯ = ರೀಣಾ

ರುಳಿ = ಕಾಲಿನ ಆಭರಣ

ರೊಕ್ಕ = ದುಡ್ಡು, ಹಣ

ರೂಳಿ = ಕಾಲಿನ ಆಭರಣ

ರಂಭೆ = ಸುಂದರಿ, ಹೆಂಡತಿ

ರಗಟಿ = ಹರಿದ ಕೌದಿ, ಉಪದ್ರವ, ತೊಂದರೆ,ರಗಳೆ