ಫ
ಫೋಜು = ಸೈನ್ಯ
ಫೌಜು = ಸೈನ್ಯ
ಫಳಾರ = ಫಲಹಾರ
ಬ
ಬೀದರ ಕ್ವಾಟಿ = ಬೀದರಿನ ಕೋಟೆ
ಬುಕ್ಕು = ಮುಕ್ಕು, ತಿನ್ನು
ಬಿಜಲೂಟ =
ಬಂಗೂಲಾಕ = ಬಂಗ್ಲೆ, ಕಛೇರಿ
ಬಾಗೀನ =
ಬನ್ನಿಹಬ್ಬ =
ಬೆಳಸಿಗೆ =
ಬೆರಿ = ಸೇರು
ಬೆಳ್ಳಿಯ ತಬಕ =
ಬಗಲಾಗ = ಬಾಗಿಲುದಾಗ
ಬೆಲ್ಲಪತ್ತೂರಿ = ಬಿಲ್ವಪತ್ರೆ
ಬೌದ್ಧ್ಯರೂಪ = ವಿರೋಧಿಸು, ಬೌದ್ಧವತಾರನೆಂದು ಜನರೂಢಿ
ಬುಕ್ಕಿಟ್ಟು = ಕಪ್ಪು ಗಂಧದ ಪುಡಿ
ಬೆಲ್ಲದಚ್ಚು =
ಬರಕು = ಸುರಿ
ಬ್ಯಾನಿ = ಬೇನೆ
ಬತಾಗಿರಿ =
ಬೆಲ್ಲಪತ್ತೂರಿ = ಬಿಲ್ವಪತ್ರೆ
ಬಾಜಿ = ವಾದಾ
ಬಗಸೆ = ಬೇಗಸೆ
ಬಟ್ಟಂಗ = ತೊಂಡೆಕಾಯಿ ತುದಿಯ ತೊಟ್ಟು
ಬಡಗಲು = ಉತ್ತರದಿಕ್ಕು
ಬಣ್ಣ = ಸೀರೆ
ಬಲಗು = ಮರಮುಟ್ಟು
ಬಲಕೊಂದು = ಬಲಕ್ಕೆ ಬಾಗಿನಿಲ್ಲು
ಬಲಗೊಳ್ಳು = ಸುತ್ತು ಹಾಕು
ಬಾರಿ = ರಾಜಾಸ್ಥಾನ ರಾಯಭಾರಿ
ಬಾಲ = ಗಂಡುಮಗು
ಬಾಲೆ = ಹೆಣ್ಣುಮಗು, ಹೆಂಗಸು
ಬಾಣ್ತಿ = ಬಾಣಂತಿ
ಬಿಳಿಯೊಲೆ = ಬಿಳಿ ವೀಳ್ಯೆದೆಲೆ
ಬೆಟ್ಟು = ಬೆರಳು
ಬೆನವ = ಗಣಪತಿ (ಸೆಗಣಿ ಗಣಪ)
ಬೆರಕೋಲು = ಒಕ್ಕಲು ಮಾಡುವಾಗ ಬಳಸುವ ಬಿದಿರಿನ ಒಂಟಿಹಲ್ಲಿನ ಕೋಲು
ಬೇಗ = ಭೋಗ
ಬಂದಿ = ಒಂದು ಒಡವೆ
ಬಣಗು = ಕೀಳು
ಬಣ್ಣನೆ = ವರ್ಣನೆ
ಬಲುಮೆ = ಬಲ್ಮೆ, ಬಲ
ಭಾಷೆ = ಭಾಷೆ, ವಚನ
ಬಾಳಲಿಖಿತ = ಹಣೆಬರಹ
ಬಿಂಕ = ಸೊಕ್ಕು
ಬೀಜೆಮಾಡು = ಬರಮಾಡು
ಬಿತ್ತು = ಬೀಜ
ಬಿದರಕ್ಕಿ = ಬಿದರಿನಬೀಜ
ಬಿನದ = ವಿನೋದ
ಬಿನ್ನಪ = ವಿಜ್ಞಾಪನೆ
ಬೀಸುಗಣ್ಣ = ಶಿವ
ಬೆಡಗು = ವೈಯಾರ
ಬೆದಕು = ಹುಡುಕು
ಬೆಸಸು = ಹೇಳು
ಬೇಂಟೆ = ಬೇಟೆ
ಬೊಂಬೆ = ಗೊಂಬೆ
ಬೊಬ್ಬೆ = ಚೀರಾಟ
ಬೋಕಿ = ತುಂಡು
ಬೋನ = ಅನ್ನ
ಬಗಸು = ಬಯಸು
ಬಗಳಿ = ಪೊಳ್ಳು, ಜೊಳ್ಳು
ಬಚಾವ = ಉಳಿಸು, ರಕ್ಷಿಸು
ಬಣ್ಣದಗಿಣಿ = ಸೂಳೆ
ಬದ್ದು = ಕೆಟ್ಟ ಪರಿಣಾಮ
ಬರಗೆಡು = ಎದುರು ಕಾಣುವವನಂತೆ ವರ್ತಿಸು
ಬರಷಣ = ದುಷ್ಟಪರಿಣಾಮಬೀರಬಲ್ಲದ,ಬೇಡಾದ
ಬರ್ಕತ್ತು = ಶಕ್ತಿ
ಬಳಸಾಲ = ಬಿತ್ತಿಗೆ ಬೀಜ ಮುಚ್ಚಲು ಹಿಂದಿನಿಂದ ಹಾಯಿಸುವ ಕಂಬಿ
ಬ್ಯಾರಿಗೆ = ಕಸಪೊರಕೆ
ಬಿದ್ದೋಡಿ = ಓಡಿಬಂದುಬಿದ್ದವಳು, ನಿರುಪಯೋಗಿ
ಬಿಡೆ = ಉಪಕಾರ
ಬಿರಾಡ = ಹೊಲದ ಕರ
ಬಿಂಗಬಿಡಸು = ಮುಂಗಾಣದಂತೆ ಮಾಡು
ಬುಗುಡಿ = ಕಿವಿಯ ಆಭರಣ
ಬೇತು = ತಂತ್ರ
ಬೈಮಂಗ = ಶೇಂಗ
ಬೋಕ್ = ದೊಡ್ಡತೂತು
ಬರಕ್ಕಾದ = ಸುರುವಿದೆ
ಭೋಗಿ = ಸಂಕ್ರಾಂತಿಯ ಮುನ್ನ ದಿನ
ಬಂದಬಂದಿ = ಬಂದು ಬಂದು
ಬಂದಾನೆ = ಬಂದಿದ್ದಾನೆ
ಬಂದಾವಕ್ಕ = ಬಂದಿವೆ ಅಕ್ಕ
ಬಟುಲಾಗ = ಬಟ್ಟಲಲ್ಲಿ
ಬನಗೊಂಟ = ಬನಬನಕ್ಕೆ
ಬರಲಾಕ = ಬರಲಿಕ್ಕೆ
ಬಲ್ಲೆ = ಬಳಿ, ಹತ್ತಿರ
ಬಸರು = ಬಸಿರು, ಗರ್ಭ
ಬಾಗಲೆಲ್ಯಾವೊ = ಬಾಗಿಲ ಎಲ್ಲಿವೆಯೊ
ಬಾನಾ = ಅನ್ನ, ನುಚ್ಚು
ಬಾರಕ = ಹನ್ನೆರಡಕ್ಕೆ
ಭರತ = ಶಪಥ
ಭವ = ಹುಟ್ಟು, ಸಂಸಾರ
ಭಗ್ನ = ಚೂರು
ಭಾಂಡ = ಪಾತ್ರೆ
ಭಾನು = ಸೂರ್ಯ
ಭಾಳನೇತ್ರ = ಶಿವ
ಭಾಳಾಕ್ಷ = ಶಿವ
ಭುವನ = ಭೂಮಿ
ಭಕರಿ = ರೊಟ್ಟಿ
ಭಂಗಿ = ಅಮಲುಭರಿಸುವ ವಸ್ತು
ಭರ್ತಿ = ಪೂರ್ಣ ತುಂಬಿದ
ಭಾರತ = ವಯಸ್ಸಿಗೆ ಬರು
ಭೋಗಿ = ಹಾವು
ಭಣವಿ = ಸೊಪ್ಪಿನ ಭಣವೆ, ಹೊಟ್ಟಲು
ಭಂಗರ = ಬಂಗಾರ
ಭಂಗಾರ = ಬಂಗಾರ
ಭಂಗಾರ್ಹೇರಿಕೊಂಡು = ಬಂಗಾರ ಹೇರಿಕೊಂಡು ಹೊತ್ತುಕೊಂಡು
ಭಾರಂಭಾಯಿ = ಆಳವಾದ ಬಾವಿ
ಭಾರುಸಿದ್ಹಂಗ = ಬಾರುಸಿದ ಹಾಗೆ, ಬಾರಿಸಿದ ಹಾಗೆ
ಭಾವ = ಭಾವನೆ (ಅಕ್ಕ ಅಥವಾ ತಂಗಿಯ ಗಂಡ ಅಥವಾ ಗಂಡನ ಅಣ್ಣ)
ಭಾಳ = ಬಹಳ
ಬಾವನಿ = ಭವಾನಿ, ಅಂಬಾಬಾಯಿ, ದೇವಿ
ಭಂಡಿ = ಚಕ್ಕಡಿ
ಬೆದಕು = ಹುಡುಕು
ಭಾಂಞ = ಬಾವಿ
ಭಾರಿಭಾರಿ = ಸರಸರ
ಭಾನಾ = ಸೂರ್ಯ
ಭ್ಯಾಡೇ = ಬೇಡ
ಭಾವಯ್ಯ = ಭಾವ
ಭಾಳ = ಬಹಳ
ಭೋಗಿ = ಸಂಕ್ರಾಂತಿಯ ಮುನ್ನಾದಿನ
ಭಾಂವ = ಸ್ಥಾನ
ಭಾಷ್ಯ = ಮಾತು, ಪ್ರತಿಜ್ಞೆ
ಬಾರಾ = ಹನ್ನೆರಡು
ಬ್ಯಾಟಕಾರನ = ಬೇಟೆಗಾರನ
ಬಿತ್ತು = ಬಿತ್ತಿ (ಕ್ರಿ) ಬಿತ್ತಲು ಪ್ರಾರಂಭಿಸು
ಬಿತ್ತುತಾ = ಬಿತ್ತುತ್ತೇನೆ
ಬಿಸುತಿ = ಬಿಸಿಲು
ಬಿಳೆ = ಬಿಳಿ, ಬಿಳಿಯ
ಬುಟ್ಟ್ಯಾಗ = ಬುಟ್ಟಿಯಲ್ಲಿ
ಬುಡುಕ = ಬಡುದಲ್ಲಿ, ಕೆಳಗೆ
ಬೆಯಲದ್ಹಂಗ = ಬೈಯಲಾರದ ಹಾಗೆ
ಬಣವಿ = ದಂಟಿನ ರಾಶಿ
ಬಣ್ಣಿ = ಮೊಗಲರ ಕಾಲದ ನಾಣ್ಯ ನಾಲ್ಕು ದುಡ್ಡಿಗೆ ಸಮ
ಬ್ಯಾನಿ = ಬೇನೆ
ಬಾರಹರಿ = ಹನ್ನೆರಡುರಹದಾರಿ
ಬರುಲಿ = ಒಂದು ಜಾತಿಯ ಹಕ್ಕಿ
ಬೋರಾಡಿ = ಹೊರಳಾಡಿ
ಭಾಡೇರು = ಒಂದು ಬಯ್ಯುವ ಪದ
ಬದ್ದ = ನಿಜ
ಬಹ್ನಕಡೆ = ಸಾಯಂಕಾಲ
ಬಂದಿ = ಒಂದು ಆಭರಣ
ಬಳ್ಳೆ = ಬಾಳೆಎಲೆ
ಬ್ಯಾಸರಕಿ = ಬೇಜಾರು
ಬಹಳೆ = ಬಹಳ
ಬುರಜಗಲಿ = ಒಡವೆ
ಭಂಗಿಬೈರೂಪ = ಬೇರೆರೂಪ
ಬದಕ = ಸಂಪತ್ತು
ಬೆತ್ತಾಸು = ಸಕ್ಕರೆಯ ಪದಾರ್ಥ
ಬುಕ್ಕದು = ತಿನ್ನುವುದು
Leave A Comment