ಥ
ಥಡಿ = ನೆಲೆ
ಥಳುಸತಿ = ಕುಟ್ಟಲೆ, ಕುಟ್ಟಲೇನು
ಥುಂಬುತ = ತುಂಬುತ್ತ
ಥಂಬ್ಯಾರೆ = ತುಂಬಿದ್ದಾರೆ
ಥುಂಬಿ = ತುಂಬಿ
ಥೈಲಿ = ಕೈಚೀಲ
ಥೆಮ್ಮಿಗಿ = ತಂಬಿಗೆ
ದ
ದಂಡಿಗೆ = ತಕ್ಕಡಿಯ ಕೋಲು
ದಬ್ಬಣ = ದೊಡ್ಡ ಸೂಜಿ
ದರಿಸು = ಧರಿಸು
ದಸಲೆ = ಒಂದು ಬಗೆಯ ಮರಮುಟ್ಟು
ದಳಿ = ಎಲೆ
ದಂತಿ = ಆನೆ
ದಂತಿ ಗಮನ = ಆನೆಯ ನಡಿಗೆ
ದಬ್ಬೆ (ದರ್ಭೆ) = ಹುಲ್ಲು
ದ್ರವಿಸು = ಸೋರು
ದಾನವ = ರಾಕ್ಷಸ
ದಿಟ್ಟಿಸು = ನೋಡು
ದುಮ್ಮಾನ = ದುಗುಡ
ದೋಸಿಕ್ಯಾರು = ಹಳೆ ಅರಿವೆ ವ್ಯಾಪಾರಿ
ದಿಕ್ಕ = ಆಘಾತ
ದಗದ = ಹೊಲಮನೆ ಕೆಲಸ
ದರ್ಜ = ಯಾವುದೇ ಅಂಜಿಕೆ ಇಲ್ಲದ
ದವಡು = ಬೇಗ
ದಸಮಿ = ಹಾಲಿನಲ್ಲಿ ಹಿಟ್ಟು ಕಲಿಸಿ ಮಾಡಿದ ರೊಟ್ಟಿ
ದಸೀಂದ = ಸಲುವಾಗಿ
ದಾಗ = ಕಲೆ
ದಾರು = ಯಾರು
ದಿಂಡ = ಹರಿದಸೀರೆ
ದೋತರ = ಅಡ್ಡ ಕತ್ತರಿಸಿ ಹೊಲೆಯುವುದು
ದೂನಿರ = ಸಲುವಾಗಿ
ದಣಗಿ = ಗುಂಪಿನ ಉದ್ದೇಶ ಪೂರ್ಣ ಆಕ್ರಮಣ ಗದ್ದಲ
ದಿಕ್ಕಪಾಲ = ಚಲ್ಲಾಪಿಲ್ಲಿ
ದೋರಿಪೂಜೆ = ವೈಭವದ ಪೂಜೆ
ದುರುಳ = ದುಷ್ಟ
ದುಸಮಾನ = ವೈರಿ
ದೋನಸೋರ = ಎರಡು ಸೇರು
ದೌಡು = ಬೇಗ
ದಾಸಕಬ್ಬು = ಕಪ್ಪು ಬಿಳಿ ಮಿಶ್ರಿತ ಕಬ್ಬಿನ ಒಂದು ಬಗೆ.
ದನಿತಿಂದು = ಸ್ವರ ಕುಗ್ಗಿ
ದಸರೀಪ = ಮಣಿಗಳಲ್ಲಿ ಮಾಡಿದ ಶಾಲು
ದಂಡಿಗೆ = ಯುದ್ಧಕ್ಕೆ
ದಂಡಿಗ್ಹೋದರ = ಯುದ್ಧಕ್ಕೆ ಹೋದರೆ
ದಸರಿ = ವಿಜಯದಸಮಿ (ಹಬ್ಬ)
ದುಕಾನ = ಅಂಗಡಿ
ದೀವಟಿಗೆ = ದೀಪ
ದವದವಡಿ = ದವಡೆಗೆ
ದಣಿಸಲಿ = ಆಯಾಸ ಮಾಡಲು
ದಾಸೆವ್ವಾ = ದಾಸಿ
ದೌಡಾ = ಬೇಗ
ದರಕಾರ = ಚಿಂತೆ, ತಿಳುವಳಿಕೆ
ದುಪ್ಪಟ್ಟ = ವಸ್ತ್ರ
ದಸಿವಂತ = ಭಾಗ್ಯವಂತ
ದುಕಾನ = ಅಂಗಡಿ
ದಂಡು = ಸೈನ್ಯ, ಗುಂಪು
ದಡಿ = ನಿರಿಗೆ
ದಣಿವು = ಆಯಾಸ
ದಾದ = ರಕ್ಷಣೆ, ಕಾಳಜಿ
ದಾರಂಗ = ಹೀರೆಕಾಯಿ ಮೇಲಿನ ದಾರ
ದೀವಿಗೆ = ಜ್ಯೋತಿ
ದುಗುಳು = ಧೂಳು
ದೈಸು = ದಹಿಸು
ದೊಡಲಿ = ಒಂದು ಮರ, ಹುಳಿಹಣ್ಣು
ದೊಂದಕ = ವಾಗ, ಮಾತುಕತೆ, ವ್ಯವಹಾರ
ಧ
ಧಸನಿ = ಹಣೆ
ಧರಣಿ ಸೇಬಿನ ಮರಿ = ಬಣ್ಣದ ಹುಲಿ
ಧವಳ = ಶುಭ್ರ
ಧಾರುಣಿ = ಭೂಮಿ
ಧಾವತಿ = ಕಳವಳ, ಸಂಕಟ
ಧರಿಮಗ = ಅರಸನ ಮಗ
ಧಡ್ಡಿಲಿ = ದರಡಿಯಲ್ಲಿ, ದಡದಲ್ಲಿ
ಧೂಪ = ಧೂಳು
ಧೂಳಿನಿಲ್ಲ = ಧೂಳುಇಲ್ಲ
ಧಗಿ = ಬಿಸಿಲಿನ ತಾಪ, ಶಕೆ
ಧಡಗಿಯಕಟ್ಟಿ =
ಧರಿತಕ್ಕ = ಧರಿನಾಡಿಗೆ ತಕ್ಕ
ಧಟ್ಟಿ = ವಸ್ತ್ರ
ಧೂಲಾ = ಎತ್ತಿನ ಶೃಂಗಾರ
ನ
ನಲ್ಲ = ಗಂಡ
ನಡಾಡಿ = ಶ್ರೀಸಾಮಾನ್ಯ
ನಿಟ್ಟು = ಸಾಲು
ನಿತ್ತು = ನಿಂತು
ನಿಸ್ತ್ರೀ = ಸ್ತ್ರೀ
ನೀಲಂಗಿ = ನಿಲುವಂಗಿ
ನಿಕ್ಕರಿಸು = ತಿರಸ್ಕಾರ ಮಾಡು
ನಿಗಮ = ವೇದಸಮೂಹ
ನಿರ್ಮಾಯ = ಮಾಯರಹಿತ
ನಿರೋಧ = ಬಂಧನ
ನೀಕರಿಸು = ದೂರಮಾಡು
ನೀರೆ = ಸ್ತ್ರೀ
ನಬ = ಬೆಳಕು ಕತ್ತಲು ಅಲ್ಲದ ಸ್ಥಿತಿ
ನದರ = ನೆದರ್, ದೃಷ್ಠಿ
ನ್ಯಾರಿ = ಮುಂಜಾನೆ ಉಪಹಾರ
ನೀಲ = ನಿಲುವು, ಬೆಳೆ ಎತ್ತರ
ನೀಲಿ = ನೀರಿಗೆ, ನಿಲನೆ
ನಿವಳ = ಶುದ್ಧ, ಒಳ್ಳೆಯ
ನೆಂಬಿಗೆ = ನಂಬಿಗೆ
ನಣ = ನೊಣ
ನಿಬ್ಬಣ = ಲಗ್ನಕ್ಕೆ ಬಂದ ಬೀಗರ ಗುಂಪು
ನೇವುದಿ = ನೈವೇದ್ಯ
ನಾಚ = ನೃತ್ಯ
ನೆನೆದಾನ = ತಳವೂರಿನಿಂತಿದ್ದಾನೆ
ನೆಪೇರಿ = ತೂತುರಿ
ನ್ಯಾಯ = ನಿಯಮ, ಧರ್ಮ
ನುಸಿ = ನುಸುಳು
ನೇವಾಳ = ಉಡುದಾರ
ನೇಮ = ಕನ್ನಡಿ, ಒಂದು ಭಾಗ
ನೈಮದ್ದ = ನೈವೇದ್ಯ
ನೀಲರತ್ನಮಣಿ = ನೀಲಮಣಿ ವೇಣಿ
ನೆಚ್ಚು = ನಂಬು
ನೇವರಿಸು = ತಿದ್ದು, ತೀಡು
ನೊಸಲು = ಹಣೆ
ನೋತನಂಪಿ = ವ್ರತಾಚರಣೆ
ನೋಂಪಿ = ವ್ರತ
ನಟ್ಟವೊ = ನೆಟ್ಟಿವೆಯೊ, ಚುಚ್ಚಿವೆಯೋ
ನಡದಾವೊ = ನಡೆದಿವೆಯೊ
ನಡುದಳ = ನಡೆದಿದ್ದಾಳೆ
ನಾಕ = ನಾಲಕ್ಕು, ನಾಲ್ಕು
ನಾಕಡಾಬು = ಟೊಂಕಕ್ಕೆ ಬಿಗಿಯುವ (ಕಟ್ಟುವ) (ಹೆಣ್ಣು ಮಕ್ಕಳ) ಒಂದು ರೀತಿಯ ಒಡವೆ.
ನಿಂಗ = ನಿನಗೆ
ನಿಟ್ಟನ = ನೆಟ್ಟಗಿಗ
ನಿನುಗ = ನಿನಗೆ
ನೀಡಕಿಲ್ಲ = ನೀರಡಿಕೆ ಇಲ್ಲ
ನುಣ್ಣನ = ನುಣ್ಣಗಿನ
ನೆಲವು = ನೆಲು
ನೆಳ್ಳ(ಳು) = ನೆರಳು
ನೋಡಲದ್ಹಂಗ = ನೋಡಲಾರದ ಹಾಗೆ
ನೋಡುತಾ = ನೋಡುತ್ತೇನೆ
ನಗಿಯಣ್ಣೆ = ನೆಗೆಣ್ಣೆ-ಅಣ್ಣತಮ್ಮಂದಿರ ಹೆಂಡತಿಯರ ಪರಸ್ಪರ ಸಂಬಂಧ
ನಿಸ್ತ್ರಿ = ಕನ್ಯೆ (?) ಸ್ತ್ರೀ
ನಿಸ್ತ್ರೇರು = ಸ್ತ್ರೀಯರು
ನೆಸೆ = ಹಾರು
ನಳ್ಳಿ = ನರಳಿ
ನೆಲ್ಲು = ಬತ್ತ
ನಿಟ್ಟು = ಸಾಲು
ನುಸಿ = ಧಾನ್ಯಗಳಿಗೆ ಬೀಳುವ ಕೀಡೆ
ನಿಚ್ಚಣಿಕೆ = ಏಣಿ, ಶ್ರೇಣಿ
ನಾಟಿವಾರನ ಆಟಿ = ನದರು ದೃಷ್ಟಿ
ನೇಕಿ = ಸತ್ಯ
ನಿಲವ್ಯಾಳ = ನಿಂತಾಳ
ನಾಲ = ಎತ್ತಿನ ಕಾಲಿಗೆ ಹಾಕುವ ಕಬ್ಬಿಣದ ವಸ್ತು
ನೆಪೇರಿ = ತುತ್ತೂರಿ
ಪ
ಪಟ್ಟಿ = ಸೀರೆ
ಪಟ್ಟಿವಾರ = ಬಣ್ಣದ ಹುಲಿ
ಪನ್ನಂಗ = ಪಲ್ಲಕ್ಕಿ ಸವಾರಿ ? ಪಲ್ಯಂಕ,
ಪಳುವಳಿ = ದೇವರ ಮುಂದೆ ಚಪ್ಪರಕೆ ನೇತು ಹಾಕುವ ಹಣ್ಣು ಹೂಗಳ ಗೊಂಚಲ
ಪಂಚೋಳ್ಳಿ = ಒಂದು ತೋಟದ ಬೆಳಸಲಿ
ಪಂಕಜ ನಾಭ = ಬ್ರಹ್ಮ
ಪಂಚಾಲಿಸು = ಹೀಯಾಳಿಸು
ಪಂಟಿಸು = ಹರಟೆ ಹೊಡೆ
ಪಟ್ಟಾಪಟ್ಟಾವಳಿ = ಟೋಪ ಸೆರಗಿನ ಸೀರೆ
ಪಟ್ಟು ಗುಣುಮ = ಹರಟೆಮಲ್ಲ
ಪಣೆ = ಹಣೆ
ಪನ್ನಗಂಧಾರ = ಶಿವ
ಪರವಾದಿ = ಪ್ರತಿವಾದಿ
ಪಲ್ಲಟ = ಬೇರ್ಪಡು
ಪಳಿದೆ = ರಸ, ಪಾಕ
ಪ್ರಳಯ = ನಾಶ
ಪಾಡಿಕ = ಪಡಿಸುವವ
ಪಾಲ್ಗಡಲು = ಕ್ಷೀರಸಾಗರ
ಪಾವಕ = ಬೆಂಕಿ
ಪುಂಡರಿಕ = ಶ್ರೀಹರಿ
ಪುತ್ತಳಿ = ಗೊಂಬೆ
ಪುರುಷ = ಗಂಡ
ಪೂಸು = ಧರಿಸು
ಪಿನಾಕಿ = ಶಿವ
ಪತ್ತ = ಕೇವಲ
ಪಡಿಕಿ = ಹಳೆ ಸೀರೆ
ಪಟಾಲ = ರುಮ್ಮಾಲು (ಅಗಲ ಕಡಿಮೆ, ಉದ್ದ ಜಾಸ್ತಿ)
ಪಂಟ್ = ನ್ಯಾವ, ನೆಪ
ಪಪ್ಪಳಿ = ಅಂಡಬಂಧ (ಬಿಳಿ-ಕರಿ, ಬಿಳಿ-ಕಪ್ಪು)
ಪರಸಿ = ಭಕ್ತರ ದಂಡು ಜಾತ್ರೆ
ಪರ್ಯಾಣ = ಮಣ್ಣಿನ ಪಾತ್ರೆ
ಪಾಸಿ = ಹುಸಿಮೋಸ
ಪಂಜಾಳಿ = ಸವೆದು ನೀರು ನೀರಾದ ಬಟ್ಟೆ
ಪಿಂಪ = ದಪ್ಪ
ಪುರಮಾಸಿ = ಬೇಕಂತುಲೆ
ಪೇರ = ವ್ಯತ್ಯಾಸ
ಫಟಿಂಗ = ಕಾಮುಕ
ಪೇರಿ = ದುಂಡಗೆ ತಿರುಗುವುದು
ಪಾಟುಣಿಗಿ = ಮೆಟ್ಟಲು, ಪಾವಟಿಗೆ
ಪಾತಾರಮ್ಯಾಳ = ವೇಶ್ಯೆಯರ ಮೇಳ
ಪಾತಾಳ (ಸೀರೆಲ್ಲಿ) = ಪತ್ತಳ (ಸೀರೆಯಲ್ಲಿ)
ಪಾರಾ = ಪೋರ, ಹುಡುಗ
ಪೀಡಿರತುಗೆ = ಪೀಡೆ (ತೊಂದರೆ)ಯನ್ನು ಕಳೆಯುವವ (ರತಿಗೇ ದೇವನಿಗೆ)
ಪೂಜೆಗೆ = ಪೂಜೆಗೆ
ಫಂಟ್ಯಾವ (ನೋಡಿದುರ) = ಟೊಂಗೆಯನ್ನು (ನೋಡಿದರೆ)
ಪಗತಿ = ಊಟದ ಪಂಕ್ತಿ
ಪರಸೇದು = ಪ್ರಸಾದ
ಫಾಲಕಾರ = ಭಾಗಿದಾರ, ಗೇಣಿದಾರ
ಪಾವಡಿ = ಸಲಿಕೆ
ಪುನ್ಯ = ಪುಣ್ಯ
ಫೈತಿ = ಮೊದಲಿಗೆ
ಪಂತೋಟ = ಪಣ್ತೋಟ, ಹಣ್ಣಿನ ತೋಟ
ಪೈಲಾ = ಪೆಹಲಾ, ಮೊದಲು
ಪತ್ತಲ = ಜರಿಪಂಚೆ, ಸೀರೆ
ಪಲ್ಲಣ = ತಡಿ
ಪಚ್ಚೆತೆನೆ = ಸುಗಂಧಯುಕ್ತ ಒಂದು ಸಸ್ಯ (ಅಡಿಕೆ ತೋಟದಲ್ಲಿ ಹೆಚ್ಚಿಗೆ ಬೆಳೆಯುತ್ತದೆ)
ಪಿಟಾರಿ = ಮರದ ಪೆಟ್ಟಿಗೆ
ಪಿಲ್ಲಿ = ಕಾಲು ಬೆರಳಿಗೆ ತೊಡುವ ಬೆಳ್ಳಿ ಆಭರಣ
ಪಟ್ನ = ಪಟ್ಟಣ
ಪೈರು = ಬೆಳೆ
ಪಟ್ಟೋಳಿ =
ಫಾಲಗಡಕಿ =
ಪುರಮಾನಸಿ = ಉದ್ದೇಶಿಸಿ
ಪಡಸಲಿ =
ಪದರು = ಸೆರಗಲಿ
ಪಾವಾಸ = ಪಾಯಾಸ
ಪಾತರಮ್ಯಾಳ = ಪಾತ್ರದವರ ಮೇಳ
ಪುರುಷ = ಪತಿ, ಗಂಡ
ಪೇಣಿಸ್ಯಾರ = ಪೋಣಿಸಿದ್ದಾರೆ
ಪ್ಯಾಟಿ = ಪಟ್ಟಣ
ಪಿಲ್ಯಾ = ಒಡವೆ
ಪಾಸಿ = ಮೋಸ
ಪಟ್ನಾ = ಪಟ್ಟಣ
ಪೀಡಾ = ತೊಂದರೆ
ಪೈಜಣ = ಕಾಲಿನ ಗೆಜ್ಜೆ
ಪಟ್ಟೇರ = ಶೆಟ್ಟರು
ಪಡಸಾಲೆ = ಮನೆಯ ಮುಂದಿನ ವರಾಂಡಾ
ಪತ್ತರ = ಪತ್ರ
ಪಂಚಮ್ಯಾಗ = ನಾಗರಪಂಚಮಿ
ಪಣತೀ = ದೇವರಿಗೆ ಎಣ್ಣೆ ಹಚ್ಚುವ ದೀಪ
ಪರಸಿ = ಪರೀಕ್ಷೆ
Leave A Comment