ಘ
ಘೂಸಿ = ಗುದ್ದಲಿ
ಘಂಟೆ = ಗಂಟೆ
ಘೌಳಿ = ಗಾಳಿ
ಘೆಜ್ಜೆ = ಗೆಜ್ಜೆ
ಘೋಧಿ = ಗೋಧಿ
ಘಾಲಗಡರ =
ಚ
ಚಾಜ = ಹೊಡೆಯುವ ತೆಳ್ಳನೆ ಕೋಲು, ನಿಯಮ ಆಚರಣೆ
ಚಾಯ = ಛಾಯೆ
ಚಾಂಜೂಲಿ = ಕ್ವಿಂಟಾಲು
ಚೊಂಜೆ = ಚೀಲ
ಚಳಕ = ಹೊಡೆಯುವ ತೆಳ್ಳನೆ ಕೋಲು
ಚಂಚರು = ಕಾಡುಜನರು
ಚಂಚುಹೆಣ್ಣ = ಬೇಡತಿ
ಚಲದಂತೆ = ಸಹಾಸಿ
ಚಲ್ಲಣ = ಚಡ್ಡಿ
ಚಿಟ್ಟಿಗ = ಸಣ್ಣವ
ಚಿಂತಾಯಕ = ಚಿಂತಾದಾಯಕ
ಚಿಂಚಿತಾರ್ಥ = ಮನದ ಬೇಡಿಕೆ
ಚಿನ್ಮಯ = ಜ್ಞಾನ
ಚುನ್ನ = ಚುಚ್ಚು
ಚೋದ್ಯ = ಆಶ್ಚರ್ಯ
ಚಡತಿ = ಏರಿಕೆ, ಮೇಲ್ಮೆ
ಚರಕಿ = ಕೊಬ್ಬು
ಚವಕಾಸಿ = ಚೌಕಾಸಿ, ಚರ್ಚಿಸು
ಚೌಟ = ಗಾಳಿ ಮಳೆಯಿಂದ ಮರೆ
ಚ್ಯಾಲುರಿ = ಒತ್ತಾಯದಿಂದಬೇಡು
ಚಿಣಿ = ಆಡಲು ಮಾಡಿದ ಚೌಕ್ಕಟ್ಟಿಗೆಯ ಚೋಟುದ್ದ ತುಂಡು
ಚೌನ್ನ = ಕಳೆ (ಚೋಟುದ್ದದ ತುಂಡು)
ಚಿಂಗ = ಗಬ್ಬುವಾಸನೆ
ಚಾಲಕಿನತೆನೆ = ಹಿಡಿದೆನೆ, ಆಯ್ದ ದೊಡ್ಡತೆನೆ
ಚೂಕ = ತಪ್ಪು
ಚಾವುಕಿ = ಪೀಟ
ಚೌಗಳಿ = ಎಳ್ಳುಬೆಲ್ಲದ ಮುದ್ದೆ
ಚೌಟ್ಟ = ಚಿಕ್ಕ
ಚೌಳ್ಯುಂಗರ = ಕಾಲುಬೆರಳಿನ ಒಂದು ಬಗೆಯಉಂಗುರ
ಚಕಾರಿ = ಸೇವೆ
ಚಂಜೀಕೆ = ಸಾಯಂಕಾಲ
ಛಡಿ = ಸಿಡಿ
ಚರ್ಚರ = ಜಾಗರ
ಚಳಿಮಂಚ = ಅಗ್ಗದ ಮಂಚ
ಚಳ್ಳುಗುರಿ = ಉಗುರಿನ ತುಂಡು
ಚಂಬು = ಜೊಂಬು
ಚಾಜೆ = ನಡಾವಳಿ, ಪದ್ಧತಿ
ಚೊಚ್ಚಲು = ಮೊದಲ ಹೆರಿಗೆ, ಕೂಸು
ಚುಕ್ಕ = ಚಿಕ್ಕ
ಚಣಗಿ = ಚಣಗೆ
ಚಂದುಳ = ಚೆಂದದ, ಸುಂದರವಾದ
ಛಂಜೆ = ಸಂಜೆ
ಜೆಗ್ಗು = ತೆಗ್ಗು
ಚಿನಿವಾರ = ಅಕ್ಕಸಾಲಿಗ
ಚಿಲ್ವಂತರು = ಶೀಲವಂತರು, ಚಾರಿತ್ರ್ಯವಂತರು
ಚಬುಕು = ಬಾರುಕೋಲು
ಚಿಗವ್ವ = ಚಿಕ್ಕತಾಯಿ
ಚ್ಯಾಜ = ಸಂಪ್ರದಾಯ, ಆಚರಣೆ
ಚಲುವ = ಅತಿ ಸುಂದರ
ಚೇದ್ಧ್ಯರೂಪ = ವಿರೋಧಿಸು
ಚಿಗುಳಿ = ಎಳ್ಳು ಬೆಲ್ಲದ ಮುದ್ದೆ, ಚಿಗುಳಿಚಿನ್ವಾಲ್ ಬಚ್ಚೇವ
ಚಾಮಕಿ = ಪೀಠ
ಚಾಮಕಿ = ಪೀಠ
ಛ
ಛತ್ತರಿ = ಕೊಡೆ
ಛೀಡಿದೇ = ಸಿಡಿದು
ಛಾವಣಿ = ಸೈನ್ಯದ ಬಿಡಾರ
ಛಿಡಿ = ಸಿಡಿ, ಪಾವಟಿಗೆ
ಛೂಜಿ = ಸೂಜಿ
ಜ
ಜಂಗು = ಬಿಲ್ಲು
ಜಂತ = ದಂತ
ಜಗುಲಿ = ಮನೆಯ ಚಾವಡಿ
ಜರಿ = ಹೀಯಾಳಿಸು
ಜಲ್ಲಿ = ಹೂವಿನ ಕೆತ್ತನೆ,
ಜೊತೆಗ = ಹೂಟಿ ಕಟ್ಟುವಾಗ ಎತ್ತುಗಳ ಕೊರಳಿಗೆ ಕಟ್ಟುವ ನಾರಿನ ಹಣಿಗೆಯ ಸಾಧನ
ಜೋತರ = ದೋತರ, ಪಂಚೆ
ಜಟ್ಟಿ = ಸೂರ
ಜರಿ = ಜಾರು, ಹೀಯಾಳಿಸು
ಜರಜರ = ನೀರನಲ್ಲಿಯ ಪ್ರಾಣಿ
ಜವಳಿಹಸ್ತ = ಜೋಡುಗೈ
ಜಾವ = ಯಾಮ, ಪ್ರಹಾರ
ಜಾಳು = ಪೊಳ್ಳು
ಜಿಬಿನಾಣ್ಯ = ನಾಣ್ಯವಿಶೇಷ
ಜೂಟಗಾರ = ಸುಳ್ಳುಗಾರ
ಜೀವಡೆ = ಝೇಂಕಾರ ಮಾಡೋ
ಜತ್ತಲೆ = ಜೊತೆಯಾಗಿ
ಜಲ್ಲ = ಅಂಜಿಕೆ, ಹೊಟ್ಟೆಬ್ಯಾನಿ
ಜಾಂಬ = ಬಟ್ಟಲು, ಗ್ಲಾಸು
ಜೀರ್ಣ = ತೀರಹಳೆಯ
ಜಟ್ವಂತ = ತಕ್ಷಣ
ಜಲ್ಮ = ಜನ್ಮ
ಜಲೂಮ = ಜನ್ಮ
ಜವಾನ = ಪೋಲಿಸ
ಜ್ವಾಕೆ = ಜೋಕೆ
ಜೋಕಾನಿ = ಶರಮನೆ
ಜಿಡಿಹುಳಿಶಾಲಿ = ಜರತಾರಿ ಸೀರೆ
ಜಗತ್ಯಾಕ = ಜಗತ್ತಿಗೆ
ಜ್ವಾಳ = ಜೋಳಾ
ಜಟಾಕ = ಗ್ರಾಮದ ಒಂದು ಉಪದೇವತೆ
ಜರದರುಮಾಲು = ಜರದ ಅಂಚಿರುವ ತಲೆಗೆ ಸುತ್ತುವ ಪೇಟ
ಜೇಳಿಗಿಲಿ = ಹೊನ್ನು
ಜಮಿಕಿ = ಕಿವಿಯ ಆಭರಣ
ಜಾಮೀನ = ಸಾಕ್ಷಿ
ಜೆಬ್ಬಿಲಿಂದ = ಒತ್ತಾಯದಿಂದ, ಜೋರಿನಿಂದ
ಜೆಂಬ್ಯಾ = ಖಡ್ಗ
ಜೀಕ = ಜೋಕಾಲಿ
ಜತ್ತಾಗಿ = ಜತೆಗೂಡಿ
ಜೇಂದೇಂಸ = ಅವನದೇ ವಂಶ
ಜ್ವಾಕಿ = ಜೋಕೆ
ಜಡಿಯಾಗ = ಜಡೆಯಲ್ಲಿ
ಝ
ಝಟ್ಟಂತ = ಒಮ್ಮೇಲೆ
ಝಳಕ = ಸ್ನಾನ
ಝಡಿಝಡಿಮಳೆ = ತುಂತುರುಮಳೆ
ಝಂಡಾ = ಧ್ವಜ
ಝಗಡ = ಜಗಳ, ಬಡಿದಾಟ
ಝೋಳಿಗೆ = ಜೋಳಿಗೆ
ಝಂಗೀ = ದೊಡ್ಡ
ಝಿಲ = ಹಳ್ಳದ ಹೊಲ
ಟ
ಟೊಂಕ = ಸೊಂಟ
ಠೀಕ್ಹಾಳ = ಚೆಲುವೆ ಇದ್ದಾಳೆ
ಟಿಕಾವ = ಮಣ್ಣು ಅಗೆಯುವ ಕಬ್ಬಿಣದ ಸಾಧನ
ಟೆಳಕಬಟ್ಟಿ = ತಿಲಕದ ಬೊಟ್ಟು
ಟೆಪ್ಪಿಗೀ = ಟೊಪ್ಪಿಗಿ
ಟಿಲಕ = ತಿಲಕ
ಡ
ಡಾಬ = ಸೊಂಟದ ಆಭರಣ
ಡುಮಕಿ ಹೊಡೆ = ಫೇಲಾಗು
ಡಬ್ಬಣ = ಗೋಣಿ ಚೀಲ ಹೊಲೆಯಲು ಉಪಯೋಗಿಸುವ ಚೋಪಾದ ಕಬ್ಬಿಣದ ಸಾಧನ
ತ
ತರಬು = ಒಟ್ಟುಗೂಡಿಸು
ತನುಜೆ = ಮಗಳು
ತಮ್ಮಟ = ವಾದ್ಯವಿಶೇಷ
ತರಗೆಲೆ = ಒಣಗಿದ ಎಲೆ
ತಲ್ಲಣ = ಅಂಜಿಕೆ, ಚಿಂತೆ
ತೆಲೆಯೋಡು = ತಲೆಡವಿಗೆ
ತಿಳಿಸು = ಕುಟ್ಟು
ತಾಣ = ಸ್ಥಾನ
ತಾಡಿದೆ = ತಟ್ಟದೆ
ತಾರಕ = ದಾಟಿಸುವ
ತ್ರಾಹಿ = ರಕ್ಷಿಸು
ತಿಮಿರ = ಕತ್ತಲೆ
ತಿಲಕ = ಕುಂಕುಮ
ತೀವು = ತುಂಬು
ತುಡುಕು = ದುಡುಕು, ನೂಕು
ತುರಗ = ಕುದುರೆ
ತೆತ್ತಿಸು = ಹೊಂದಿಸು, ರಚಿಸು
ತೊಯಜಾಕ್ಷಿ = ಕಮಲಾಕ್ಷಿ
ತ್ರಿಣಯ = ಮೂರು ಕಣ್ಣುಗಳ್ಳವ, ಶಿವ
ತ್ರಿಯಂಬಕ = ಶಿವ
ತಗಲ = ಉದ್ದೇಶ ಪೂರ್ಣಸುಳ್ಳು
ತರಬು = ನಿಲ್ಲಿಸು
ತಳ್ಳಿ = ಗೋಡವೆ
ತ್ರಾಣ = ಶಕ್ತಿ, ಸಾಮರ್ಥ್ಯ
ತಿಪಲ = ವಕ್ರಮಾರ್ಗ, ಗೊಂದಲ ಹುಟ್ಟಿಸುವ
ತುರುಬು = ಕೂದಲಿನ ದುಂಡನೆ ಕಟ್ಟು
ತಾಳಿ = ವಿಶೇಷವಾಗಿ ಹಾಲುಕಾಯಿಸಲು ಒಟ್ಟಿದ ಕುಳ್ಳಿನ ಕಿಚ್ಚು
ತನುಗಾಳಿ = ತನುವುಳ್ಳಿಗಾಳಿ, ತಂಗಾಳಿ
ತರವೋ = ತರಲಿಕ್ಕೆ
ತೇಲಿ = ತಲೆ
ತಳವಾರ = ಅಗಸೆಯ ಕಾವಲುಗಾರ
ತಪನಿದ್ದ = ತಪವಿದ್ದೇನು
ತುಂಗಭದ್ರಕಾಳಿ = ಉಪದೇವತೆಗಳು
ತಕೋಮಾಲ = ತೆಗೆದುಕೊಳ್ಳುವುದಿಲ್ಲ
ತೆಪಸ್ಯಾಯ = ತಪಸ್ಸು
ತೆರಪ್ಯಾ = ಕಂದಾಯ, ಕಪ್ಪಕಾಣಿಕೆ
ತನ್ನೋಟಗಿ = ತನ್ನಷ್ಟಕ್ಕೆ
ಥೆಮಗಿ = ತಂಬಿಗೆ
ತರಳರ = ಎಳೆಯರ
ತೂಬು = ನೀರಹೊರಹೋಗುವ ಸ್ಥಳ
ತಾವು = ಜಾಗ, ಸ್ಥಳ
ತಿಪ್ಪರ = ವೈಯಾರ, ಜಂಭ
ತೆವರು = ದಿಬ್ಬ
ತೋಪೆ = ತೋಪು, ಫಿರಂಗಿ
ತ್ರಪಸ್ ಮೂನಿಗಳು = ತಪಸ್ಸು ಮಾಡುವ
ತಾಳ = ಬಾಗಿಲ ಅಗುಳಿ
ತಿಳಿಗು = ಎಚ್ಚರವಾಗು
ತಿದ್ದಂಬಿ = ಒಂದು ಬಗೆಯ ಬಾಣದಂಥ ಸಾಧನ
ತೆಂಕ = ದಕ್ಷಿಣ
ತೇರು = ರಥ
ತೊಳಸು = ಶುದ್ಧಮಾಡಿ, ಕುಟ್ಟು
ತೇಲಿ = ಮನೆಗೆ ಬಿಳಿಸಿದ ಮರಮುಟ್ಟು
ತೋದು = ನೆನದು
ತೋಪಿ = ಪೇಟ, ಕಿರೀಟ
ತೊಂಡಲು = ಗೊಂಚಲು, ಮುತ್ತಿನ ಆಭರಣ
Leave A Comment