ಕದ = ಬಾಗಿಲು

ಕಟ್ಟರು = ಕಟ್ಟಿರುವ

ಕಣೆ = ಬಿದಿರುಪೊದೆಯ ಕಿರಿಯ ರಂಬೆ

ಕಣ್ಣೀರು ಹಾಕು = ಸಗಣಿಯಿಂದ ಅಂಗಳ ಸಾರಿಸುವುದು

ಕವಲಿ = ಕವಲು ಬಣ್ಣದ ಹಸು

ಕವುದು = ಕವಿದು

ಕಪ್ಪು = ಸಾದ

ಕರಿಬಳ್ಳಿ = ಕರಿಬಾಳೆಯ ಎಲೆ

ಕಡದಂಬಿ = ಒಂದು ಕಬ್ಬಿಣದ ಸಾಧನ (ಬಾಣ)

ಕಂಬು = ಶಂಖ

ಕಾಗಡಿ = ಒಂದು ಬಗೆಯ ಒಡವೆ, ಸೆರಗಿನ ಮೇಲಿನ ಕಸೂತಿ ಕೆಲಸ.

ಕುಂದ್ರು = ಕುಳಿತಿಕೋ

ಕೆಂದು = ಕೆಂಪು ಬಣ್ಣದ

ಕೆಲೆ = ಹಸುಗಳ ಕೂಗು

ಕೇಸು = ಅಕ್ಕಿಯ ಕೊನೆಯಲ್ಲಿರುವ ತೌಡು

ಕೊಪ್ಪು = ಕಿವಿಯ ಮೇಲಿನ ತೂತಿನಲ್ಲಿ ತೂರುವ ಒಡವೆ, ಜಡೆಯಲ್ಲಿ ತೊಡುವ ಆಭೆ

ಕಷಪಾಳ = ಯೋಗದಂಡ

ಕಂಜ ಬಾಣ = ಕಾಮ

ಕಂಜರ = ಉಡುದಾರ

ಕರ್ಣ = ಕಿವಿ

ಕಡಲು = ಸಮುದ್ರ

ಕಂತುಹರ = ಶಿವ

ಕಂತೆ = ಕಪನಿ

ಕದರು = ಎಳೆ ತೆಗೆಯುವ ಸಾಧನ

ಕನರಲಿ = ಕೋಪಿಸು

ಕಮ್ಮಟ = ಠಂಕಸಾಲೆ

ಕಮ್ಮಗೋಲ = ಕಾಮ

ಕಬ್ಬುವಿಲ್ಲ = ಮನ್ಮಥ

ಕಲಹ = ಜಗಳ

ಕವಳ = ತುತ್ತು

ಕಸಮಾಡು = ಕಡಿಮೆ ಮಾಡು

ಕೃತಿ = ರಚನೆ

ಕಾಕುದೈವ = ಕೀಳುದೈವ

ಕಾಡಿಕ = ಕಟುಕ

ಕಾಂತೆ = ಹೆಂಡತಿ

ಕಾಮಪಿತ = ವಿಷ್ಣು

ಕಾಮಹರ = ಶಿವ

ಕಿಕ್ಕಿರಿ = ಗುಂಪಾಗು

ಕಿಂಚಿತ್ = ಸ್ವಲ್ಪ, ಹೇಗಾದರು

ಕಿಚ್ಚುಗಣ್ಣ = ಶಿವ

ಕುಕ್ಷಿ = ಹೊಟ್ಟೆ

ಕುಂಟಣಿತನ = ಕುಂಟಲತನ

ಕುತಕ = ವೇಷ

ಕುಂದಣ = ಬಂಗಾರ

ಕುಂಬಿನಿ = ಭೂಮಿ

ಕುಲ್ಲ = ಕ್ಷುಲ್ಲಕ

ಕುಶಲ = ಕ್ಷೇಮ

ಕುಸುಮಶರ = ಕಾಮ

ಕುಳಿ = ತಗ್ಗು

ಕೂರಲಗು = ಚೂಪಾದಕತ್ತಿ

ಕೇರಿ = ಓಣಿ

ಕೇಶ = ಕೂದಲು

ಕೈಗೈ = ಜೋಪಾನು ಮಾಡು

ಕೊನರು = ಚಿಗುರು

ಕೊಳ = ಕೆರೆ

ಕೋಡ್ಗಲ್ಲು = ಶಿಖರ

ಕೋವಿದ = ಕುಶಲ

ಕಾಸಭಾಗ = ಸ್ವಂತಜಾಗೆ

ಕಡ್ಡ = ಒಂದು ತರಹದ ಹುಲ್ಲು

ಕಟಪಟ = ಪ್ರಯತ್ನ

ಕಟವಾಯ = ಬಾಯಿಯ ಇಕ್ಕೆಲ್ಲ

ಕದಲಾತಿ = ಒಪ್ಪಿಗೆ ಪತ್ರ

ಕಂಗ್ರ = ತಕರಾರು

ಕುಸಾಲ = ಬಿತ್ತದೆ ಇರುವ ಬರ

ಕಾಮ್ಯ = ಇಚ್ಚೆ

ಕಾಯುಳ್ಳ = ಒಣಗಿದ ಹೆಂಡಿ, ಸೆಗಣಿ

ಕಾಸಿ = ಕಾಸಿದಾರ, ಪುರವಂತರ ವೇಷ

ಕುರುಳು = ಕುಳ್ಳು, ಹೆಂಡಿಯಿಂದ ದುಂಡಗೆ ಮಾಡಿಸಿ ಒಣಗಿಸಿದ್ದು

ಕುಲ್ಲ = ಕೆಟ್ಟ

ಕುಳ್ಳ = ಕರುಳು

ಕೂನ = ಗುರುತು

ಕೊಕ್ಕಟೆ ಹೂಡಿ = ಸುಮ್ಮನೆ ನಗುತ್ತ ಕಾಲ ಕಳೆಯುವ ಒಂದು ಪ್ರಾಣಿಯ ನಗು

ಕಾಂತೆ = ಹೆಂಡತಿ

ಕೊಳಮಲಿ = ಆಡು, ಕುರಿಗಳ ಕೊರಳಮರಿ

ಕೊಂಬಣಸ = ಹುಲುಗೆಜ್ಜೆ, ಎತ್ತಿನ ಆಭರಣಗಳು

ಕುಂದಲ = ಕುಂದಣ

ಕಿಡಗುಳ್ಳ = ಕಿಚ್ಚನ ಬೆರಣಿ

ಕತ್ತಿಯವರೆಯವರು = ಚರ್ಮದ ಚೀಲದಲ್ಲಿ ಮುಚ್ಚಿದ ಖಡ್ಗವನ್ನು ಧರಿಸಿದ ಅಮಾನುಷರು

ಕಾಯಿಪಲ್ಯೆ = ತರಕಾರಿ

ಕಟ್ಟಡಿಕೆ = ಕಟ್ಟುವಷ್ಟರಲ್ಲಿ

ಕಾಲ್ಮಡಿ = ಮೂತ್ರ

ಕಟ್ಟ್ಯಾರ = ಕಟ್ಟಿಹರು

ಕರಿ = ಕಪ್ಪು

ಕ್ವಾರ್ಮೀಶಿ = ಕೋರೆಮೀಸೆ

ಕಮತಾಳ = ಸೊಲ್ಲಾಪುರದ ಒಂದು ಕೆರೆ

ಕಾವಡಿ = ಬಡಿಗೆಯ ಎರಡು ತುದಿಗೆ ಕಟ್ಟಿದ ಬುಟ್ಟಿ

ಕಿಲ್ಯ = ಕೋಟೆ

ಕಲಗಚ್ಚು = ಅಕ್ಕಿ ತೊಳೆದ ನೀರು

ಕನ್ನೆ = ಎಳೆಯ ವಯಸ್ಸಿನ ಮದುವೆಯಾಗದ ಹುಡುಗಿ

ಕನ್ನಾಡಿ = ಕನ್ನಡಿ

ಕುಡುಕೆ = ಮಣ್ಣಿನಿಂದ ಮಾಡಿದ ಮಡಿಕೆ

ಕಿರದಿ = ಜರಿಪಂಚೆ

ಕೆಂಗಣಕು = ಕೆಂಪಾದಕೊಳಕು ನೀರು

ಕೈಸತ್ತಿಗೆ = ಕೈಗೆ ತೊಡುವ ಛತ್ರ ಆಕಾರದ ಆಭರಣ

ಕಾಕೆ = ಕಾಗೆ

ಕೊಪ್ಪು = ಕಿವಿಯ ಮೇಲ್ಬದಿಗೆ ಹಾಕಿಕೊಳ್ಳುವ ಆಭರಣ

ಕೊಪ್ಲು = ತೋಪು, ಅನ್ನಛತ್ರ

ಕೊಂತಮ = ಕುಂತಿ

ಕಟ್ಟಿ = ಕಟ್ಟೆ

ಕಡ್ಡಿ = ಕಡಲೆ

ಕತ್ತಿಗೆ = ಕತ್ತೆಗೆ

ಕರಿಯಬಂದ = ಕರೆಯಲುಬಂದ

ಕಲತೀದ = ಕಲಿತಿದ್ದೇನೆ

ಕಾಯಾರ = ಕಾಯೆಯಾದರೂ, ….

ಕ್ಯಾದಿಗೆ = ಕ್ಯಾದಗೆ

ಕಾಲಶೆಣ್ಣ = ಚಿಕ್ಕ ಕಾಲು

ಕ್ವಾಟಿ = ಕೊಡೆ

ಕುಡಲಾಕ = ಕೊಡಲಿಕ್ಕೆ

ಕುಟನಿದರಿ = ಒಂದು ರೀತಿಯ ಸಿಯಿಗೆ

ಕುಡಂತ = ಕೂಡುವಂತೆ

ಕೂಡಲ್ಲಿ = ಕೂಡುವಲ್ಲಿ, ಕೂಡಲಿಕ್ಕೆ

ಕೆಂಪ = ಕೆಂಪು

ಕರ್ಕ = ದೊಡ್ಡದು, ಅರವು

ಕಮಾಲ್ = ಕಬೀರನ ಮಗ

ಕೊಳಕಮಲ್ಲ = ಯುದ್ಧವೀರ

ಕಾಮ = ಹೆಣ್ಣು ಬೆಕ್ಕು

ಕೂನ = ಪರಿಚಯ

ಕುಕ್ಕೆ = ಕುಕ್ಕೆಹೂವು

ಕುವರ = ಕುಮಾರ

ಕುಂಡರಸಾಗ = ಕೂಡಿಸುವಾಗ

ಕಂಬಾರ = ಕುಂಬಾರ

ಕನ್ನೋಡಿ = ಕನ್ನಡಿ

ಕುಡಿಲಾಕ = ಕುಡಿಯಲು

ಕುಡುತಾಳ = ಕೂಡುತ್ತಾಳೆ

ಕೋಮಟಗಿತ್ತಿ = ಕೋಮಟೆಗರವಳು ?

ಕುಳ್ಳಿ = ಗಿಡ್ವ

ಕಳಕೊಡರಿ = ಕಳುಹಿಸಿಕೊಡಿರಿ

ಕಬ್ಜಾ = ವಶಕ್ಕೆ ತೆಗೆದುಕೊಳ್ಳು

ಕಳವೆ = ಕವಳಿ, ಭತ್ತ

ಕಾಂಜಿನ = ಗಾಜಿನ

ಕಿಲ್ಯ್ನಾದರ = ಕೋಟೆಯನ್ನಾದರೂ

ಕರ್ಕಿ = ಬೇರಿನ ಹುಲ್ಲು

ಕಟಕಟಿ = ಉಪಟಳ, ತೊಂದರೆ

ಕ್ವಾಟಿ = ಕೋಟೆ

ಕೋಡ = ಕೊಂಬು

ಕಿಸೆ = ಜೇಬು

ಕೊಡವಳ್ಳ = ಕೊಡಲಾರಳು

ಕೋಮರ = ಕುಮಾರ

ಕುದಿ = ಚಿಂತೆ

ಕಮರತಳಿ = ಸೊಲ್ಲಾಪುರದ ಒಂದು ಕೆರೆ

ಕಾರ್ಭಾರ = ಕಾರುಬಾರು

ಕುಂಡರಸು = ಕೂಡಿಸು

ಕಿಚಗುಳ್ಳ = ಕಿಚ್ಚು, ಬೆಂಕಿ

ಕರಬಿಡುವುದು = ಹಾಲು ಕರೆಯುವುದು

ಕಾಯಿಪಲ್ಯೆ = ತರಕಾರಿ

ಕರಿ = ಸಂಕ್ರಾಂತಿ ಮರುದಿನ

 

ಖಂಗ = ಕುಣಿಸು

ಖಜೀಲ = ಅಸಹ್ಯ, ಅಪಮಾನ

ಖಾತ್ರಿ = ಮನದಟ್ಟು

ಖುಬಿ = ತೃಪ್ತಿಯ ಸಂತೋಷ

ಖಳ = ತೆನೆಯ ತುಳಿಸುವ ಸ್ಥಳ

ಖಿಲ್ಯ = ಕೋಟೆ

ಖೂನ್ = ಗುರ್ತಿ

ಖೊಲ್ಲಿ = ಕೋಣೆ

ಖಂಡುಗ = ಇದೊಂದು ಅಳತೆ, 16 ಮಣ ಆದರೆ ಒಂದು ಖಂಡುಗ

ಖಳಕೂಡಲೆ = ಕಳುಹಿಸಿಕೊಡಲೆ

ಖಾನ = ಊಟ

ಖಾನನ = ಊಟದೊಡೆಯ, ಜಗತ್ತಿಗೆ ಅನ್ನ ನೀಡುವ

ಖಿನ = ಕಿಂತ

ಖೂರನ = ಚೂಪಾದ

ಖಬುರಿ = ಕಬೂಲ್

ಖೇಲ = ಖೇಲ್- ಆಟ

ಖಟಗಿ = ಕಟ್ಟಿಗೆ

ಖಂಡಾಗ = ಖಂಡುಗ

ಖಳವು = ಕುಳುಹಿಸು

ಖೂನ = ಗುರುತು

ಖಮ್ಮಗ = ಸರಿ, ಯೋಗ್ಯ, ಉತ್ತಮ, ರುಚಿಕರ

ಖೂರಿ = ಚೂಪಾದ

ಖಳುಬೇಕು = ಕಳುಹಿಸಬೇಕು

ಖಂಡಿ = ಕಿಡಕಿ

ಖಳ = ದುಷ್ಟ

ಖೊಟ್ಟಿ = ಸುಳ್ಳು

ಖಬರು = ಅರಿವು, ತಿಳುವಳಿಕೆ

ಖುಸಿ = ಖುಷಿ, ಸಂತೋಷ, ಸುಖ

ಖೂನ = ಗುರುತು

ಖೊಂಬಾ = ಊದುಕೊಳವೆ

ಖೋಡು = ಕೊಂಬು

ಖಾರೀಕ = ಉತ್ತತ್ತಿ

 

ಗಣಿಹಡಪ = ಹಜಾಮನ ಪೆಟ್ಟಿಗೆ

ಗುದೆ = ಗಂಧ

ಗರುಡ ಸೇಬಿನ ಮರಿ = ಬಣ್ಣದ ಹುಲಿ

ಗವಾಳಿತನ = ಅನುಮಾನ, ಹಠ

ಗವಾಗಲ್ಲು = ಹಾಸುಬಂಡೆ ?

ಗಣ = ಸಮೂಹ

ಗದ್ದಣೆ = ಗದ್ದಲ

ಗಬ್ಬು ಮಡಕಿ = ಹೊಲಸು ಪಾತ್ರೆ

ಗಲ್ಲಿಸು = ಅಲುಗಾಡಿಸು

ಗವ್ಹರ = ಗವಿ

ಗಾಡಿಗಾರ್ತಿ = ಬೆಡಗು ಗಾರ್ತಿ

ಗಾರುಡ = ಮೋಡಿ

ಗಾವುದಿ = ಗುಂಪು

ಗುವಿತ = ಗೂಡ

ಗೋಮಾಳ = ಹುಲ್ಲುಗಾವಲು

ಗೌಳ = ಕೆಂಪುಮಣಿ

ಗದಗಮಸು = ಮಾನಸಿಕವಾಗಿ ಒಯ್ದಡದಿರು

ಗಲ್ಲೀಪು = ಕಲ್ಲಿನ ನಂದಿಗೆ ಹಾಕಿದ ಉಡುಪು; ಮುಸ್ಲಿಂ ದರ್ಗಾಕ್ಕೆ ಹಾಕುವ ವಸ್ತ್ರ

ಗಳಗಿ = ಕಾಳು ಸಂಗ್ರಹಣೆಯ ಸಾಧನ

ಗಾರಗಣ್ಣ = ಬೆಕ್ಕಿನ ಕಣ್ಣಿನ ಬಣ್ಣದ ಕಣ್ಣು

ಗಾಲಮೇಲ = ತಟ್ಟನೆ ಆರೋಗ್ಯಕೆಟ್ಟ ಸ್ಥಿತಿ

ಗಿಂಜು = ಬದನೆ ಕಾಯಿಯ ಒಂದು ರೀತಿಯತೊಳೆ

ಗಿಮದಿರುಗು = ಪೆಟ್ಟಿನಿಂದ ತಲೆತಿರುಗಿ ಸುತ್ತುತಿರುಗುವುದು

ಗೀಳ = ಹಾಳಾದ್ದು, ನಿರುಪಯೋಗಿ

ಗುಲ್ಲು = ದನದ ಮೈಮೇಲೆ ಬಣ್ಣದಿಂದ ದುಂಡಗೆ ಹಚ್ಚಾದ ಗುರುತು

ಗುಲ್ಮಡು = ಇಲ್ಲದ ಆರೋಪ ಹೊರಿಸಲು ಕೂಗಾಟ

ಗೇಣಿಸು = ಚಿಂತೆ ಮಾಡು, ಲೆಕ್ಕ ಹಾಕು

ಗಾಂವದ = ಗಾವುದ

ಗಂಗಿ = ಸಿದ್ಧಾರಾಮೇಶ್ವರ ಗುಡಿಯ ಸುತ್ತಮುತ್ತಲಿನ ಕೊಳ

ಗುಗ್ಗುಳ = ಶೃಂಗರಿಸಿದ ಮಣ್ಣಿನ ಪಾತ್ರೆಯಲ್ಲಿ  ಉರಿಯುವ ದೀವಟಗಿ

ಗೋಮ = ಪವಿತ್ರ

ಗಡಬಡ = ಅವಸರ

ಗಿರಣಿ = ಹಿಟ್ಟು ಬೀಸುವ ಯಂತ್ರ

ಗುಂಪ = ಗೋಪುರಾಕಾರದ ಗುಡಿಸಿಲು

ಗೂಡ = ತೆನೆಯಿರುವ ದಂಟಿನ ರಾಗಿ

ಗಲ್ಲಿ = ಗಲ್ಲಿ-ಕೇರಿ

ಗವರ್ಯಾಡಿ = ಗವರಿ ಆಡಿ

ಗಾಳಗಾಳ = ಬರಡು ಬರಡು (ರಾಡಿ ರಾಡಿ)

ಗಿಂಡಿ = ಚಿಕ್ಕ ಬಾಯಿಯುಳ ತಂಬಿಗೆ (ಪಾತ್ರೆ)

ಗುದಳೀಲಿ = ಗದ್ದಲಿ

ಗೊಡ್ಡಿ = ಬಂಜೆ

ಗೌರ = ಗೌರಿ, ಗವರಿ

ಗಂಧ = ಗಂದ

ಗಂಗಾಳ = ಊಟ ಮಾಡುವ ತಟ್ಟೆ

ಗುಮ್ಮಿ = ಹೊಂಡ

ಗದಮದಾಕಿ = ಗಜ ಮದದಾಕೆ

ಗಳಿಗಿ = ಮಡಿಸಿದ ಹೊಸಸೀರೆ

ಗ್ರಾಸ = ಆಹಾರ

ಗದ್ದರಿಸು = ಗರ್ಜಿಸು

ಗಾಲಿ = ಚಕ್ರ

ಗಿಂಡೀ = ನೀರಿನ ಪಾತ್ರೆ

ಗವದಾವರ್ರಿ = ಕವಿದಿವೆ

ಗಾಡಿ = ಚಕ್ಕಡಿ

ಗಣ = ಸಮೂಹ

ಗದ್ದಣೆ = ಗದ್ದಲ

ಗೂಗರಿ = ಗುಗ್ಗರಿ

ಗಕ್ಕನೆ = ಒಮ್ಮೆಲೆ

ಗುಲ್ಲಾ = ಪ್ರಚಾರ

ಗೆಳದೇರು = ಗೆಳತಿಯರು

ಗೊಡ್ಡು = ಬರಡು

ಗಿಣ್ಣ = ಆಕಳ ಹಾಲಿನಿಂದ ತಯಾರಿಸಿದ ಸಿಹಿ ಪದಾರ್ಥ

ಗದ್ದರಿಸಿ = ಗರ್ಜಿಸಿ

ಗುಮಾಸ್ತ = ಕಾರಕೂನ, ಸಹಾಯಕ, ಕೆಲಸಗಾರ

ಗುಗ್ಗಳ =  ಶೃಂಗರಿಸಿದ ಮಣ್ಣಿನ ಪಾತ್ರೆಯಲ್ಲಿ  ಉರಿಯುವ ಗಂಧದ ಕಟ್ಟಿಗೆಯ ದೀವಟಿಗೆ

ಗ್ವಾಳಿ = ಗುಂಪು, ರಾಶಿ

ಗಿಂಡಿ = ನೀರಿನ ಪಾತ್ರೆ