ಅರ್ಥಕೋಶ

ಅಂಕಿ = ಅಳಿದುಳಿದ ಕಾಳಿರುವ ತೆನೆ

ಅಂದಣ = ತವರು ಮನೆಯವರು ಎತ್ತು, ಕುದುರೆ ಇತ್ಯಾದಿಗಳ ರೂಪದಲ್ಲಿ ಮಗಳಿಗೆ ಕೊಡುವ ಕಾಣಿಕೆ

ಅನುಗಾಲ = ಬಹಳಷ್ಟು ಕಾಲ, ಯಾವಾಗಲೂ

ಅಂಬಲಿ = ಜೋಳದ ಅನ್ನ

ಅಕ್ರ = ಹನ್ನೊಂದು

ಅಕೀನ = ಆಕೇಯ

ಅಗಳ್ಯಾರೆ = ಕೆದರಿದ್ದಾರೆ

ಅತ್ತಿಮಣೆ =ಅತ್ತಿ ಎಂಬ ಹಾಲುಜಾತಿ ಮರದಿಂದ ಮಾಡಿದ ಕೂರುವ ಸಾಧನ

ಅರಿವೆ = ಬಟ್ಟೆ ಅಥವಾ ಸೀರೆಯ ತುಂಡು

ಅಚ್ಚೆ, ಅಚ್ಚು = ಸನ್ನಡತೆ, ಪಾವಿತ್ರೆ

ಅಸವಲ್ದೇವರ್ = ಉಗ್ರದೇವತೆ

ಆಸುಪಾಯರ್ = ಅಂಬಿಗರು

ಅಗಚು = ಬೇರ್ಪಡಿಸು

ಅಗಸೆ = ಹೆಬ್ಬಾಗಿಲು, ಬೇಲಿ

ಅಡಲಿಕ್ಕು = ಸೆಗಣೆ ಹಾಕು

ಅಡೆಗೋಲು = ಅಡಿಗಲ್ಲು

ಅತಿರಸ = ಒಂದು ಬಗೆಯ ಸಿಹಿ ತಿಂಡಿ

ಅರಿಕೋಲು = ಬಾರಿಕೋಲು

ಅರುತರು = ಅರಿತವರು

ಅಲ್ಲಾಡು = ಅಲುಗಾಡು

ಅಳುಲಾಗಿ = ಒಟ್ಟಾಗಿ

ಅಳಿಗೆ = ಒಂದು ಬಗೆಯ ಅಡಿಗೆ

ಅಂಬು = ಬಾಣ

ಅಂಬಾಡೆ = ಅಂಬೋಡೆ (ತಿಂಡಿ)

ಅಗದಿ = ಬಹಳ

ಆಗರಾಣಿ = ಅರ್ಷ್ಟುವಣಿ

ಅಚ್ಚೆ = ಸಲುಗೆ, ಪ್ರೀತಿ

ಅಡರು = ಅಪ್ಪಿಕೊಳ್ಳು

ಅಡರಸು = ಆರೋಪಿಸು

ಅಡ್ರಸು = ಅತೋರೆ

ಅಡಿ = ಕೆಳಗೆ, ಅಡವಿ

ಅಡ್ಡಿ = ಅಡವಿ, ಧಾನ್ಯ ಅಳೆಯುವ ಸಾಧನ

ಅಡ್ಡಿ = ಜೋಗದ ಬುಟ್ಟಿ

ಅಬರು = ಮಾನ

ಅಮ್ಮಿ = ಮೇಲೆ

ಅರಿವೆ = ಬಟ್ಟೆ ಅಥವಾ ಸೀರೆಯ ತುಂಡು

ಅಲಬತ್ = ಅವಶ್ಯ, ಅದಕ್ಕಾಗಿಯೇ

ಅವಗಾಡು = ಅಸ್ತವ್ಯಸ್ತ, ಸರಳವಲ್ಲದ

ಅವಲ್ = ಗಟ್ಟಿ, ಪ್ರಸಿದ್ಧ

ಅಸವ = ಸಹಿಸದ

ಅಗ್ಗಣಿ = ಆರ್ಘ್ಯಪಾನಿಯ ಸುಜೀಲ

ಅಖಿಲ = ಎಲ್ಲ

ಅಂಡಲೆ = ತಿರುಗಾಡು

ಅಂಡಿ = ಜಗತ್ತು

ಅಜ್ಜು = ಅಡಕವಾಗಲಿ

ಅಂತಕ = ಯಮ

ಅರ್ತಿ = ಪ್ರೀತಿ

ಅಂದಣ = ಪಲ್ಲಕಿ

ಅದರ = ತುಟಿ

ಅನಲ = ಬೆಂಕಿ

ಅಪರಂಜಿ = ಚೊಕ್ಕ ಚಿನ್ನ

ಅಪರಂಪರರು = ಮುನಿಗಳು

ಅಂಬರ = ಆಕಾಶ

ಅಂಬಿಗ = ನಾವಿಕ, ಬೆಸ್ತ

ಅಬ್ದಿ = ಸಮುದ್ರ

ಅಲಗು = ಖಡ್ಗ

ಅವಗಡ = ಕಠಿಣ, ಬಿಕ್ಕಟ್ಟು

ಅಳವಡಿಸು = ಹೊಂದಿಸು

ಅಳಿ = ನಾಶವಾಗು

ಅಳಿ = ಭ್ರಮರ

ಅಂತು = ಬಂಧು

ಅತ್ಮಜ = ಮಗ

ಅತ್ಮಜೆ = ಮಗಳು

ಅಬತಗಿರಿ = ಒಂದು ಬಗೆಯ ಛತ್ತರಿಕೆ

ಅಗಸೀಯ = ಅಗಸೆ, ಊರಿನ ಹೆಬ್ಬಾಗಿಲು

ಅದ್ದುನ = ಅರ್ಧಸೇರು

ಅಪಸಕೋನ = ಅಪಶಕುನ, ಅಶುಭಸೂಚನೆ

ಅತ್ಮತಿ = ಪ್ರೀತಿಯಿಂದ

ಅಬ್ಬರಣಿಗೇರಿ = ಅಬ್ಯಂದಗೇರಿ

ಅಮಾನುಷರು = ಮಾನವೀಯತೆ ಇಲ್ಲದವರು, ರಾಕ್ಷಸರು

ಅಮ್ಮಾಸಿ = ಅಮಾವಾಸ್ಯೆ

ಅಳ್ಳು = ಚುರಮುರಿ

ಅಬತಾಗಿರಿ = ಒಂದು ಬಗೆಯ ಛತ್ರಿ

ಅಬರು = ಅಭಿಮಾನ

ಅಲಗು = ಖಡ್ಗ

 

ಆರ = ನೇಗಿಲು

ಆಕಿನ = ಆಕೇಯ

ಆರ = ಆರು (ಸಂಖ್ಯೆ)

ಆಯ = ಆಕಾರ, ರೀತಿ, ಲಾಭ

ಆಯ್ತ = ಆಹುತಿ

ಆಯೀರ = ಉಡುಗೋರೆ, ಕಾಣಿಕೆ

ಆಲಿಸಿಪ್ಪಿ = ಕಬ್ಬಿನ ಸಿಪ್ಪೆ

ಆವುರಿಗೆ = ಆವರಣದ ಒಂದು ಗೋಡೆ

ಆರಲು = ನಕ್ಷತ್ರ

ಆರು = ನಕ್ಷತ್ರ

ಆರು = ಹೂಟ

ಆಚ್ = ಗರಜು, ಅವಶ್ಯಕತೆ

ಆಟ್ = ಎಂಟು

ಆಲಿ = ದೃಷ್ಟಿ

ಆಲಿಸು = ಕೇಳು

ಆಡ್ಯಾವು = ಆಡಿದವು

ಆಲಿಪರದು = ಆತುರಪಟ್ಟು

ಆಣಿ = ಪ್ರಮಾಣ

ಆಲಪರದು = ಆತುರಪಟ್ಟು

ಆಯಿ = ತಂದೆಯ ತಾಯಿ, ತಾಯಿಯ ತಾಯಿ

 

ಇಂಗ್ರೇಜರು = ಇಂಗ್ಲಿಶರು

ಇಸ್ರಂತಿ = ವಿಶ್ರಾಂತಿ

ಇಗೊತ್ತಿನ = ಈವತ್ತಿನ, ಈದಿನ

ಇಲಾಂಚೆ = ಏಲಕ್ಕಿ (ಯ)

ಇಕ್ಕು = ಉಣಬಡಿಸು

ಇಂಜಾನು = ಕಾಡು

ಇಳೆಹೊತ್ತು = ಸಾಯಂಕಾಲ

ಇಣಿ = ಹೋರಿಯ ಹೆಗಲಿನ ಹಿಂದಿನ ಎತ್ತರದ ಭಾಗ

ಇಸಮ = ಅಭಿಮಾನ

ಇಕ್ಕೆಲ = ಎರಡುಬದಿ

ಇತ್ತಂಡ = ಎರಡು ತಂಡ

ಇಂದುಧರ = ಶಿವ

ಇಂದು = ಚಂದ್ರ

ಇನಿಯ = ಗಂಡ

ಇಸು = ಹೊಡೆ

ಇಟ್ಟಗಿ = ಇಟ್ಟಂಗಿ

ಇಸ = ವಿಷ

ಇಪರೀತ = ವಿಪರೀತ, ಅತಿ ಹೆಚ್ಚು

ಇರಟ್ಟೆ = ಇರುವಿಯಂತೆ

ಇಳಿಹೊತ್ತು = ಸಾಯಂಕಾಲ

ಇದಿ = ವಿಧಿ

 

ಈಡಲ್ಲಿ = ಇಡುವಲ್ಲಿ, ಇಡಲಿಕ್ಕೆ

ಈರೇಶ = ವೀರೇಶ

ಈಲಂಚ = ಏಲಕ್ಕಿ(ಯ)

ಈಳಿಯವ (ಕುಡಲಾಕ) = ವೀಳ್ಯೆಯ, ತಾಂಬೂಲ (ಕೊಡಲಿಕ್ಕೆ) ಆಮಂತ್ರಿಸು

ಈಬತ್ತಿ = ವಿಭೂತಿ

ಈಟಿ = ಬರ್ಚಿ

ಈವಾನೆ = ಈ ವೇಳೆ, ಈ ಸಮಯ

 

ಉಣಕೊಡು = ಊಟಕ್ಕೆ ಕೊಡು

ಉಂಬು = ಊಟಮಾಡು

ಉಸರಿನ ಹರಕಿ = ಸಾಯುವ ಹರಕೆ

ಉಂಬರಿ = ಊಟ ಮಾಡುವ

ಉಣತಿ = (ಇನ್ನೇನು ಉಣುತೆ) ಊಟ ಮಾಡುತ್ತಿ (ಇನ್ನೇನು ಮಾಡು(ವಿ)ತ್ತಿ)

ಉಳ್ಳಾಕ = ಊಟ ಮಾಡಲಿಕ್ಕೆ

ಉಕ್ಕೆ = ಉಳು, ಹೂಡು, ಉಳುಮೆ

ಉತ್ತರಾಣಿ = ಉದ್ದವಾದ ಕಡ್ಡಿಹೊಂದಿರುವ ಗೋದಿಯಾಕಾರದ ಮುಳ್ಳುಗಳಿರುವ ಒಂದು ಜಾತಿಯ ಸಣ್ಣಗಿಡ

ಉಂಬ್ರಿ = ಹೊರೆ, ಕಟ್ಟು

ಉಗುಣೇಸರ = ಮಲೆನಾಡಿನಲ್ಲಿ ದೊರೆಯುವ  ಒಂದು ಬಗೆಯ ಕಾಯಿಗಳಿಂದ ಮಾಡಿದ ಸರ

ಉಗುರಾಡು = ಕೊಯ್ಯು

ಉಡುಗ್ಯಾರೆ = ಉಡುಗೊರೆ

ಉತ್ತಂಗ = ಶ್ರೇಷ್ಠ (ಉತ್ತುಂಗ)

ಉಕ್ಕು = ಕುದಿದು ಹೊರಚೆಲ್ಲುವುದು

ಉಗಡ = ಗುಟ್ಟು

ಉಪರಾಟ = ತಿರುವು ಮುರುವು

ಉರಸ = ಅಂಗಾಲದಲ್ಲಿ ಹುರಿಯುವುದು

ಉಲಿ = ಉಲುಹು, ಸಹಜ ಸಪ್ಪಳ

ಉಂಗುಷ್ಟ = ಹೆಬ್ಬೆರಳು

ಉನ್ಮನಿ = ಸುಷುಮ್ನ

ಉರವಣಿಸು = ಆರ್ಭಟಿಸು

ಉಸವಿನ = ಉಸುಕಿನ, ಮರಳಿನ

 

ಊಡಂಥ = ಉಡುವಂಥ

ಊಡಲ್ಲಿ = ಉಡುವಲ್ಲಿ (ಉಡಲಿಕ್ಕೆ)

ಊನ = ಕೊರತೆ

 

ಎಳೆ = ಎರಳೆ, ಚಿಗುರು

ಎಂಟ = ಎಂಟು

ಎಡ್ಡ = ಎರಡು

ಎಸೆ = ಶೋಭಿಸು

ಎಮ್ಮಿ = ಎಮ್ಮೆ

ಎಬುಸ್ಯಾಳೆ = ಎಬ್ಬಿಸಿದ್ದಾಳೆ

ಎರದಾಳೆ = ಎರದಿದ್ದಾಳೆ (ಸ್ನಾನ ಮಾಡಿಸಿದ್ದಾಳೆ)

ಎಡೆ=ಬಗೆಬಗೆಯ ಅಡಿಗೆ ಮಾಡಿ ಬಾಳೆಯ ಎಲೆಯಲ್ಲಿ ದೇವರ ಎದುರಿಗಿಟ್ಟ ನೈವೇದ್ಯ

ಎಗ್ಗು = ಸುತ್ತಿನಿಂದ ಗಮನಿಸದಿರುವಿಕೆ

ಎರಗು = ಮುತ್ತು

ಎರಳೆ = ಚಿಗರೆ

ಎಕ್ಕಲ ನರಕ = ಹೀನನರಕ

ಎನ್ನಮೇಲಾಡಿ = ನನ್ನ ಮೇಲೆ ಮೇಲಾಟ ಮಾಡಿ ಅಥವಾ ನನಗಿಂತ ಮಿಗಿಲೆಂದ

ಎಡವೂರು = ಬೆಳಗಾವಿ ಜಿಲ್ಲೆಯ ಒಂದು ಊರು.

ಎನ್ನ ಮೇಲಾಡಿ = ನನ್ನ ಮೇಲೆ ಮೇಲಾಟ ಮಾಡಿ ಅಥವಾ ನನಗಿಂತ ಮಿಗಿಲೇಳು

ಎರೆ = ಸ್ನಾನ ಮಾಡಿಸು

 

ಏಳ = ಏಳು (ಸಂಖ್ಯೆ)

ಏಳೆ = ಏಳು (ಎದ್ದೇಳೆ)

ಏಸಿಡು = ಹೊಡಿ, ಕಷ್ಟಕೊಡು

ಏಳಂಬ್ರ = ಏಳು ಮಾರುದ್ದದ ಬಟ್ಟೆ

ಏರಸ್ತ = ಏರಿಸುತ್ತೇನೆ

ಏರ‌್ಯಾವ = ಏರಿದನು

 

ಐಗಳು = ಐದುಕೊಳಗ

 

ಒಳವೀಕೆ = ಒಳಗಡೆಗೆ

ಒಳ್ಳು = ಒರಳು
ಒಬ್ಬುಳಿಮಾಡಿ = ಒಂದು ಗೂಡಿಸು

ಒರೆ = ಏಳು

ಒಲ್ಲಿ = ಧೋತರ

ಒಗತನ = ಬಾಳ್ವೆ, ದಾಂಪತ್ಯ

ಒಂದ = ಒಂದು

ಒಂದಡಿ= ಒಂದು ಅಡ್ಡಿ (ಅಡ್ಡಿ-4 ಸೇರಿಗೆ ಒಂದು ಅಡ್ಡಿ ಒಂದು ಸೇರು-1 ಕಿ.ಗ್ರಾಂ.ಗೆ ಸ್ವಲ್ಪ ಹೆಚ್ಚಿನ ಅಳತೆ)

ಒಂದರತ್ಯಾಗ = ಒಂದು ರೀತಿಯಲ್ಲಿ

ಒಂದಾರ್ತ = ಒಂದು ಆರತಿ

ಒಂದ್ಯಾಲೆಂಬ = ಒಂದು ಎಲೆ ಎಂಬ

ಒಂದೆಡಿ = ಒಂದು ಎಡೆ

ಒಂಬತ್ತು = ಒಂಬತ್ತು (ಸಂಖ್ಯೆ)

ಒರಗುತ = ಮಲಗುತ್ತ

ಒಲಪೆದಿಂದೆ = ವೈಯಾರದಿಂದ (ದೆ)

ಒಡ್ಯಾಣ = ಸೊಂಟಕ್ಕೆ ಹಾಕಿಕೊಳ್ಳುವ ಬೆಳ್ಳಿಯ ಅಥವಾ ಬಂಗಾರದ ಪಟ್ಟಿ, ಡಾಬು

ಒಗೆತನ = ಗಂಡ-ಪತಿ

ಒಣಕೆ = ಕುಟ್ಟುವ ಸಾಧನ

 

ಓಲೈಸು = ಸೇವಿಸು

ಓಪ = ಪ್ರಿಯಕರ

ಓಸು (ಛಿಡಿಅಷ್ಟು) = ಎಲ್ಲ ಮೆಟ್ಟಿಲು

ಓತು = ಪ್ರೀತಿಸು