ಲಂಪಟ = ಒದ್ದಾಟ

ಲಲನೆ = ಸ್ತ್ರೀ

ಲಾಲಿಸು = ಕೇಳು

ಲುಬ್ದ = ಆಸೆಬುರುಕ

ಲೆಂಕ = ಸೇವಕ, ದಾಸ

ಲಗ್ಗ = ಬೇಗ

ಲಗು = ಬೇಗನೆ

ಲಡಾಯಿ = ಜಗಳ, ಯುದ್ಧ

ಲಕ್ಕೂಸ = ಲಕ್ಷ

ಲ್ಯಾಕೇಟು = ಚಿನ್ನದ ಕೊರಳಸರ

 

ವಕ್ಕಳ = ಒಂದು ಕೊಳಗ

ವಂದು = ಒಂದು

ವಂಕಿ = ತಿರುವು, ಕೊಕ್ಕೆ

ವರ = ವರಹ

ವಕ್ಕಳ = ಒಂದು ಕೊಳಗ

ವಂದು = ಒಂದು

ವಂಕಿ = ತಿರುವು, ಕೊಕ್ಕೆ

ವರ = ವರಹ

ವಳಗೆ = ಒಳಗೆ

ವಡ್ಡು = ಬೇಲಿ

ವಲ್ಲಾಟ = ಓಡಾಟ, ಸಂಭ್ರಮ

ವಾಲೆ = ಓಲೆ

ವಾಟಿಬಳ್ಳಿ = ವಾಟೆಬಾಳೆ ಎಲೆ

ವಡವಾಗ್ನಿ = ಲಾವಾರಸ

ವಂದೆ = ಪೂಜಿತ

ವನಿತೆ = ಮಹಿಳೆ

ವರಹ = ಹಂದಿ

ವಲಭೆ = ಹೆಂಡತಿ

ವಾಣಿ = ಸರಸ್ವತಿ

ವಾನರ = ಮಂಗ

ವಾರಚಿಮ್ಮುರಿ = ತೋಳಬಂದಿ, ನಾಗಮುರುಗಿ

ವಾರದಿ = ಸಮುದ್ರ

ವಾಲೆಕಂಠ = ತಾಡೋಲೆ, ಲೆಕ್ಕಣಿಕೆ

ವಿಕಳತೆ = ದುಗುಡ, ದುಃಖ

ವಿಘ್ನೇಶ್ವರ = ಗಣಪತಿ

ವೀರಸ = ವೈಮನಸ್ಸು

ವಿಸ್ಮಯ = ಆಶ್ಚರ್ಯ

ವೃಷಭ = ಬಸವ, ಎತ್ತು

ವಟ್ಟಿ = ಹಠಮರಿ, ಮಾತುಕೇಳದ

ವತ್ತರ = ಬಹಳ ಬೇಗ

ವಾತ = ಈಗ ತೆಗೆದುಕೊಂಡ ಕಾಳಿಗೆ ಪ್ರತಿಯಾಗಿ ಮುಂದೆ ಒಂದು ಒಂದೂವರೆ ಪಟ್ಟು ಕೊಡುವ ಪದ್ಧತಿ

ವಾಯಿ = ಊತ, ಬಾವು

ವಾಳಿ = ಯಾರ ಮಾತು ಕೇಳದ ಬೇಡಾದ

ವಾಲಗ = ಉತ್ಸವದ ಓಲಗ

ವಚು()ನಕೆ = ವಚನಕ್ಕೆ

ವಾರಿಗುಳ್ಳ = ವಾರಿಗೆಯುಳ್ಳ

ವಾಲಿಕಪ್ಪು = ಕಿವಿಯಲ್ಲಿಟ್ಟುಕೊಳ್ಳುವ ಒಂದು ರೀತಿಯ ಆಭರಣ

ವಾಯಿಣಿ = ಸುದ್ದಿ

ವಾರಿಗಿ = ಓರಗೆ, ಸಮಾನ,ಒಂದೇ ವಯಸ್ಸಿನ

ವಾರ = ವರಾಹ

ವಟವಟ = ಕಪ್ಪು

ವೈನಾಗಿ = ಚೆನ್ನಾಗಿ

ವಾರೀಗಿ = ಸಮಾನವಯಸ್ಕರು

ವಸ್ತವ = ಆಭರಣ

ವೈಯರಣ್ಯ = ಅರಣ್ಯ

ವಂಡೀ = ಕೆಸರು

ವಜ್ಜರ = ವಡ್ಯಾಣ

ವಾಲಗ = ಉತ್ಸವದ ಓಲಗ

ವಸ್ತಾ = ಒಡವೆ, ಆಭರಣ

ವರಸು = ವರ್ಷ

 

ಶಾಲೆ = ಸೀರೆ

ಗಪ್ತ = ಶಪಥ

ಶೇರು = ಸೇಲ, ಹೆಚ್ಚು, ಮೇಲು

ಶಾವುಗಿ = ಚಿಗುಳಿ

ಶರಣ ಬಂದು = ನಮಿಸಿಬಂದು

ಶಹರ = ಪಟ್ಟಣ

ಶಣ್ಣ = ಚಿಕ್ಕ

ಶಲ್ಯ = ಉತ್ತರೀಯ, ಮೇಲು ಹೊದಿಕೆ

ಶಾಯ = ಸೇವೆ

ಶಾರಗೊಡಿ = ಸೆರಗುಒಡ್ಡಿ, ಸೆರಗುಚಾಚಿ

ಶಾವಕನಾ = ಸೇವಕನ

ಶಿವಾರ = ಶಿವಪೂಜೆ

ಶಹಿರ = ಪಟ್ಟಣ

ಶಿಶುಬಾಳ = ಶಿಶು, ಮಗು

 

ಸಡಿಗರ = ಶೆಟ್ಟಿಗರ

ಸಟ್ಟಿ = ಮೂಟೆಯ ರಾಶಿ

ಸಣ್ಣೆ = ಸಾರಣಿಗೆ

ಸತ್ತಿವಂತ = ಸತ್ಯವಂತ

ಸಬರ = ಸವಾರಿ ಚೇಲ

ಸಲಗವರೆ = ಸಾಕಿದ್ದಾರೆ

ಸಲ್ಲು = ಸೊಲ್ಲು

ಸಾಲೆ = ಶಾಲೆ, ಸೀರೆ

ಸಾಲುಕ್ಕೆ = ಮೋಕ್ಷ

ಸಾರಂಗ = ಹತ್ತಿರ ?

ಸಿದ್ದೆ = ಕಾಲುಸೇರು (ಅಳತೆ)

ಸಿಬ್ಲ = ಹೂಬುಟ್ಟಿ, ತಕ್ಕಡಿಯ ತಟ್ಟೆ

ಸಿರಬಂದು = ಊದಿಕೊಂಡು

ಸೀತೆ = ಪರಿಮಳವಿಲ್ಲದ

ಸುಕಿನುಂಡೆ = ಸುಕ್ಕಿನುಂಡೆ (ಭಷ್ಯ)

ಸುಳುವು = ಸುಳಿವು

ಸೊನ್ನಾರ = ಚಿನ್ನದ ಮೆರಗು

ಸಡ್ಲ = ಸಡಿಲು, ಪಳ್ಳು

ಸರು = ಸರವು, ಹೊಳೆಯ ಹೊತ್ತು

ಸಂಗ್ರಾಮ = ಸಜ್ಜು, ವೆವಸ್ಥೆ

ಸಂದ್ರಿ = ಎರಡು ಮನೆಯನಡುವಿನ ಹಿಕ್ಕಟಾದ ಹಾದಿ

ಸಳವರಿ = ಅಂಜಿ ಎದೆವಡೆ

ಸ್ಸಾರಿ = ಗಡಿಗೆ, ಹಾಲಿನ ಗಡಿಗೆ

ಸಿಂಪ = ಎಡೆಕುಂಟಿಯ ತಾಳ

ಸುಮಾರು = ಕೆಟ್ಟ

ಸುಪ್ಪಲಿ = ಕಾಳುಕೇರುವ ಚಿಕ್ಕಮರ

ಸೂಸು = ಪೂರ್ತಿ ತುಂಬಿದ

ಸೌಸ = ಸೌರಸು

ಸುಬ್ಬಂಬುಕಾತುರಿ = ಕಟ್ಟಿರುಳು

ಸಗತಿಹೊಡೆ = ಸಾಮುತೆಗೆ

ಸುಳಿಗಾರ = ಸಂಚಾರಿ

ಸಾರಂಗಸರದೂಳಿ = ಸಾರಂಗ, ಶಾರ್ದೂಲ

ಸಾರಂಗದಾರಿ = ಸ್ವರ್ಗದಾರಿ

ಸೈದಾನ = ಸವಿಜೀನಸು

ಸತ್ತದಿನ = ಉತ್ತರಕ್ರಿಯೆ

ಸೋಬಾನ = ಸೋಬನ

ಸಾಜ = ಶೃಂಗಾರ

ಸೆಳೆಮಂಚ = ತೂಗುಮಣೆ

ಸೇಬಸ್ತ = ಶೋಭಿಸುತ್ತ

ಸಮತಿ = ಪುರಾಣ ಹೇಳುವ ಸಮಿತಿ

ಸಂಕರಾತರಿ = ಮಕರ ಸಂಕ್ರಾಂತಿ

ಸಮುದುರದಾನ = ಸಮುದ್ರದೊಳಗಿನ

ಸಟ್ಟಸರವತ್ತು = ನಡುರಾತ್ರಿ

ಸಂಡಿಗೆ = ಹಪ್ಪಳ

 

ಹಕ್ಲು = ಬಯಲು

ಹಚ್ಚು = ಹೊತ್ತಿಸು

ಹಡಪ = ಚೀಲ

ಹಳಕು = ಚೂರು

ಹಿಂದಕ = ಹಿಂದಕ್ಕೆ

ಹರದ್ಯಾರು = ನಾರಿಯರು

ಹಡದಾಳ = ಹೆತ್ತಿದ್ದಾಳೆ

ಹತ್ತ = ಹತ್ತು (ಸಂಖ್ಯೆ)

ಹಲಗಿಸಿಂಗಿ = ಒಂದು ರೀತಿಯ ವಾದ್ಯ

ಹಸವಿಲ್ಲ = ಹಸಿವು ಇಲ್ಲ

ಹಾಕುತ = ಹಾಕುತ್ತೇನೆ

ಹಾಕ್ಯಾದಿಲ್ಲ = ಹಾಕಿದೆ ಇಲ್ಲಿ

ಹಾರರ = ಬ್ರಾಹ್ಮಣರ

ಹಾರುರ = ಬ್ರಾಹ್ಮಣರ

ಹಿಂದ = ಹಿಂದಕ್ಕೆ

ಹಿಂಗೇ = ಹೀಗೇ

ಹಿಡಿನುಚ್ಚು = ಕೈಯಲ್ಲಿ ಹಿಡಿಯುವಷ್ಟು ನುಚ್ಚು

ಹಿರಿ = ಹಿರಿಯ, ದೊಡ್ಡ

ಹೀರೆ = ಹಿರಿಯ, ದೊಡ್ಡ

ಹೂವಾ = ಹೂವು

ಹೆಂಗೆ = ಹೇಗೆ

ಹೆಂಡಿ = ಸಗಣಿ, ಶೆಗಣಿ

ಹೆಣತಿ = ಹೆಂಡತಿ

ಹೇರು ಬಾರ(ಕಿ) = ಹೇರಿಸು (ಭಾರಹೇರು)

ಹೊಂಟಾರ = ಬರುತ್ತಿದ್ದಾರ (ರೆ)

ಹೊಂಟಾರೆ = ಬರುತ್ತಿದ್ದಾರೆ

ಹೊಲ್ದಾಗ = ಹೊಲದಲ್ಲಿ

ಹೊಳಿಯೇ = ಹೊಳೆಯೆ, ನದಿಯೆ (ಯ)

ಹಯತ್ಪೀರ = ಒಬ್ಬಸಂತ

ಹಳ್ಳು = ಕಲ್ಲು

ಹಗೆ = ವೈರಿ

ಹರಣ = ಶಿವ, ಹರ

ಹರಣಿ = ಹರ, ಶಿವ

ಹ್ವಾಮ = ಹೋಮ, ಕಿಚ್ಚು

ಹೊತ್ತರಳಿ = ಸೂರ್ಯೋದಯ

ಹೊರಕಡಿ = ಬಹಿರ್ದೆಸೆಗೆ

ಹಂದು = ಅಲುಗಾಡಿಸು

ಹನಿಸು = ಹನಿಹನಿಯಾಗಿ ಬಿಡು

ಹರಗು = ಬಿತ್ತಿದ ಸಾಲುಗಳ ನಡುವೆ ಊಳು ಕುಂಟೆಹೊಡೆ

ಹರಗೋಲು = ತೆಪ್ಪ, ಉಕ್ಕಡ

ಹರಿಕಾರ = ಸುದ್ದಿಯನ್ನು ಕೊಂಡೊಯ್ಯುವವನು

ಹೆರಕಂಡಿ = ಹೊರಗಿನ ಬಾಗಿಲು

ಹೊತ್ತುಕತ್ತು = ಸೂರ್ಯಮುಳುಗುವುದು

ಹಿಂಡ್ಲಾಚಿ = ಸೌತೆಕಾಯಿ ರೂಪದ ಚಿಕ್ಕದಾದ ಕಹಿಕಾಯಿ

ಹುಗಿ = ಮಣ್ಣಿನಲ್ಲಿ ಹಾಕುವುದು, ಮುಚ್ಚು

ಹಾರೋರ = ಬ್ರಾಹ್ಮಣರು

ಹರೆಹೊತ್ತು = ಸೂರ್ಯೋದಯದ ಸಮಯ

ಹಂಡಹೋರಿ = ಮದದ ಹೋರಿ

ಹೇಣತಿ = ಹೆಂಡತಿ

ಹೊಚ್ಚು = ಹೊದಿಸು

ಹೆದೆ = ಜಯಿಸಲು

ಹಯಲಾಗೆ = ಕೇಳು

ಹರವ್ಯಾಳ = ಹರವು, ಪಸರಿಸು

ಹೋಯ್ತ = ಹೋಗುತ್ತೇವೆ

ಹೂವ = ಹೂವು

ಹೈವಾನ = ರಾಕ್ಷಸ

ಹಂತಿ = ಎತ್ತಿನಿಂದ ತೆಗೆಗಳನ್ನು ತುಳಿಸುವುದು

ಹಿರ್ಸ = ವೈರತ್ವ

ಹುಕುಂ = ಆದೇಶ

ಹಿಕುಮತಿ = ಯೋಚನೆ

ಹತಿಯಾರ = ಖಡ್ಗ

ಹೊಳ್ಳಿ = ಹೊರಳಿ

ಹುಗ್ಗಿ = ಪೊಗ್ಗಿ, ಗೋಧಿಯ ಪಾಯಸ

ಹಂಡೆ = ನೀರು ಶೇಖರಿಸು ಉಪಯೋಗಿಸುವ ತಾಮ್ರದ ಸಾಧನ

ಹೊಡಿ ಹುಲ್ಲು = ತೆನೆ ಬರುವ ಹುಲ್ಲು

ಹೇಲು = ಹೊಲಸು

ಹಳ್ಳ = ತೊರೆ

ಹದಮಳೆ = ನೆಲ ಹೀರುವ ಮಳೆ

ಹಚ್ಚಡ = ಹೊದ್ದುವ ವಸ್ತ್ರ

ಹೊಂಟ = ಹೊರಟ

ಹ್ಯಾಂವ = ಚಿಂತೆ

ಹಿಂಡು = ರಾಶಿ, ಗುಂಪು

ಹಂಚೀಕಿ = ಯೋಚನೆ, ಉಪಾಯ

ಹರಹೊತ್ತು = ನಸುಕು

ಹೇಣತಿ = ಹೆಂಡತಿ

ಹಾದರ = ಸೂಳೆಗಾರಿಕೆ

ಹಲಗಿ = ಹಲಗೆ

ಹರದ್ಯೇರು = ಹರದೆಯರು, ನಾರಿಯರು ವಾರಗಿತ್ತಿ, ಸುಂದರಿ, ಮನ್ನಣೆಯವಳು

ಹಿಂದಕ = ಮುಂದಕ – ವಾಂತಿ

* * *