ಐ-ಫ್ಲೆಕ್ಸ್‌ಎಂಬುದು ಭಾರತದ ನವೋದಿತ ಐಟಿ ಕಂಪನಿ. ಇದು ಸಹ ಬೆಂಗಳೂರಿನದೇ. ಇನ್‌ಫೋಸಿಸ್ ಮತ್ತು ವಿಫ್ರೋ ನಂತರದ ಅತಿ ಪ್ರವರ್ಧಮಾನ ಕಂಪೆನಿ ಇದು.

ನೆದರ್‌ಲ್ಯಾಂಡ್‌ನಲ್ಲಿ ಇದರದೊಂದು ಸ್ಥಳೀಯ ಐ-ಫ್ಲೆಕ್ಸ್‌ಕಂಪೆನಿ ಇದೆ. ಇದರ ಸಿಇಓ, ಅಂದರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೆಂತಿಲ್‌ಕುಮಾರ್‌. ಇವರು ಕಾರ್ಯ ನಿಮಿತ್ತ ಲಂಡನ್‌ಗೆ ಬಂದರು. ವಾಸ್ತವವಾಗಿ ಇವರ ಕುಟುಂಬ ಇರುವುದೇ ಲಂಡನ್‌ನಲ್ಲಿ. ನೆದರ್‌ಲ್ಯಾಂಡ್‌ನಿಂದ ಲಂಡನ್‌ಗೆ ಬಂದಂತೆ ಎರಡು ವಾರದ ಹಿಂದೆ ಬುಧವಾರ ಬಂಧನಕ್ಕೆ ಒಳಗಾಗಬೇಕಾಯಿತು. ಕಾರಣವೆಂದರೆ ಇಂಟರ್‌ ಪೋಲ್ (ಅಂತರಾಷ್ಟ್ರೀಯ ಪೊಲೀಸ್) ಸೂಚನೆ ಬಂತು. ಅವರನ್ನು ಬಂಧಿಸಬೇಕು ಎಂದು. ನೆದರ್‌ಲ್ಯಾಂಡ್‌ಮತ್ತು ಬ್ರಿಟನ್‌ಗಳು ಪರಸ್ಪರ ಬೇಕಾದವರನ್ನು ಬಂಧಿಸಿ ಕಳುಹಿಸಬೇಕೆನ್ನುವ ಪ್ರಸಂಗಗಳಲ್ಲಿ ಸಹಕರಿಸಬೇಕೆಂಬ ಒಪ್ಪಂದ ಮಾಡಿಕೊಂಡಿವೆ. ಅದರೆ ಅನ್ವಯ ಕೋರಿಕೆ ಬಂದರೆ ಬಂಧಿಸಬೇಕು ಬಂಧಿಸಿ ಆಯಿತು. ಸೆಂತಿಲ್ ಕುಮಾರ್‌ ಅವರು ಮಾಡಿದ ಮಹಾಪರಾಧವಾದರೂ ಏನು? ಇವರು ಆಂಸ್ಟರ್‌ಡ್ಯಾಂನ ತಮ್ಮ ಕಂಪೆನಿಯಲ್ಲಿ ೧೪ ಜನ ಭಾರತೀಯ ಉದ್ಯೋಗಿಗಳಿಗೆ, ಅಂದರೆ ಐಟಿ ತಜ್ಞರಿಗೆ ಅಕ್ರಮವಾಗಿ ಕೆಲಸ ಮಾಡಿಕೊಂಡಿರಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಹಾಗೆ ಕೆಲಸ ಮಾಡುತ್ತಿದ್ದರೆನ್ನಲಾದ ೧೨ ಜನರಿಗೆ ಸಹಾ ಅಲ್ಲಿಂದ ದೇಶ ಬಿಡಲು ಸೂಚಿಸಲಾಯಿತು.

ಈ ಪ್ರಕರಣವು ನಿಬ್ಬೆರಗಾಗುವಂತೆ ಮಾಡಿತು ಅಂತರಾಷ್ಟ್ರೀಯ ವ್ಯಾಪ್ತಿಯ ಐಟಿ ರಂಗದಲ್ಲಿ.

ಸೆಂತಿಲ್‌ಕುಮಾರ್‌ಅವರು ಕುಟುಂಬಸ್ಥ. ಬಹಳ ಹಿರಿಯ ಅಧಿಕಾರಿ. ಬೇಕಾದರೆ ೧೦ ಲಕ್ಷ ಪೌಂಡ್ ಭದ್ರತಾ ಠೇವಣಿ ಇಡಲು ಸಿದ್ಧ. ಐವರು ಪ್ರತಿಷ್ಠಿತರಿಂದ ಜಾಮೀನು ಕೊಡಿಸಲು ಸಹಾ ತಯಾರು. ಹೀಗೆಂದು ಅವರ ವಕೀಲರು ವಾದಿಸಿದರೂ ಪ್ರಯೋಜನವಾಗಲಿಲ್ಲ. ತಮ್ಮ ಹಾಗೂ ನೆದರ್‌ಲ್ಯಾಂಡ್‌ನಡುವಣ ಒಪ್ಪಂದವು ಜಾಮೀನಿಗೆ ಅವಕಾಶ ಇಲ್ಲ ಎಂದೇ ಬ್ರಿಟನ್ನಿನ ಪೊಲೀಸರು ಹೇಳಿದರು. ಲಂಡನ್‌ನ ಬ್ರಿಕ್ಸ್‌ಟನ್‌ಜೈಲಿಗೆ ದೂಡಿಯೇ ದೂಡಿದರು.

ಭಾರತ ಸರಕಾರದ ವಿದೇಶಾಂಗ ಸಚಿವ ಖಾತೆ, ಮಾಹಿತಿ ತಂತ್ರಜ್ಞಾನ ಸಚಿವ ಖಾತೆ ಭಾರತದ ಐಟಿ ಉದ್ಯಮ ಸಂಗ ನಾಸ್ಕಾಂ ಎಲ್ಲ ಸೇರಿ ಕಾನೂನು ತೊಡಕನ್ನು ನಿವಾರಿಸಿದ ಮೇಲೆ ಬುಧವಾರ ಜಾಮೀನು ಮೇಲೆ ಹೊರಕ್ಕೆ ಬಂದರು. ಪಾಸ್‌ಪೋರ್ಟ್‌‌ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಏ. ೧೧ರಂದು ವಿಚಾರಣೆ ನಡೆಸಲಾಗುವುದು.

ಸೆಂತಿಲ್‌ಕುಮಾರ್‌ಅವರು ಮಾಡಿದ ಮಹಾಪರಾಧವಾದರು ಇಷ್ಟೆ. ತಮ್ಮ ಸಹೋದ್ಯೋಗಿಗಳಿಗೆ ಬಿಸಿನೆಸ್ ವೀಸಾ ಕೊಡಿಸಿ ನೆದರ್‌ಲ್ಯಾಂಡ್‌ಗೆ ಕರೆಸಿಕೊಂಡರು. ಸಾಮಾನ್ಯವಾಗಿ ಬಹಳ ಅಲ್ಪ ಅವಧಿಗೆ ತಂತ್ರಜ್ಞರು ಇನ್ನೊಂದು ದೇಶಕ್ಕೆ ಹೋಗಬೇಕೆಂದರೆ ಬಿಸಿನೆಸ್ ವೀಸಾ ಪಡೆಯುತ್ತಾರೆ. ಇದೇ ರೂಢಿ. ಆದರೆ ವಲಸೆ ನಿಯಮಗಳ ಪ್ರಕಾರ ದುಡಿಮೆ ಪರವಾನಗಿ ಪಡೆದವರು ಮಾತ್ರ ಇನ್ನೊಂದು ದೇಶದಲ್ಲಿ ದುಡಿಮೆಯಲ್ಲಿ ನಿರತರಾಗಲು ಸಾಧ್ಯ. ಆದರೆ ದುಡಿಮೆ ಪರವಾನಗಿ ಅರ್ಜೀ ಸಲ್ಲಿಸಿದರೆ ಯಾವುದೇ ದೇಶದಲ್ಲಿ ಎರಡು ವಾರದಿಂದ ಆರು ತಿಂಗಳವರೆಗೆ ಕಾಲಾವಧಿ ಬೇಕೆನ್ನುತ್ತಾರೆ. ಹೀಗಾಗಿ ಜರೂರು ಎಂಜನೀಯರೋ, ತಜ್ಞರನ್ನೋ ಕಳುಹಿಸಬೇಕೆಂದಾಗ ಕಂಪೆನಿಗಳವರು ಅಲ್ಪಾವಧಿಯ ಅಂದರೆ ಕೆಲವು ತಿಂಗಳ ಬಿಸಿನೆಸ್ ವೀಸಾ ಪಡೆಯುತ್ತಾರೆ. ಅಷ್ಟರಲ್ಲಿ ಅದೇ ಉದ್ಯೋಗಿಗೆ ದುಡಿಮೆ ಪರವಾನಗಿ ಪಡೆಯುತ್ತಾರೆ. ಇದು ವಾಡಿಕೆ.

ಇಲ್ಲಿ ನೆದರ್‌ಲ್ಯಾಂಡ್‌ವಾಸ್ತವಾಗಿ ವೀಸಾ ನಿಡಿಕೆಯ ತಾಂತ್ರಿಕತೆಯನ್ನಷ್ಟೇ ದೊಡ್ಡದು ಮಾಡಿ ಸೆಂತಿಲ್‌ಕುಮಾರ್‌ ಅವರನ್ನು ಜೈಲಿಗೆ ತಳ್ಳಿತು.

ಆತಂಕಕಾರಿಯಾದ ವಿಷಯವೆಂದರೆ ಐಟಿ ತಂತ್ರಜ್ಞರನ್ನು ಹೀಗೆ ಕಾಡುವ ಪ್ರವೃತ್ತಿ ಅಮೆರಿಕ ಮತ್ತು ಯುರೋಪ್ ಮಾತ್ರವಲ್ಲದೆ ಏಷ್ಯಾದ ದೇಶಗಳಲ್ಲೂ ಹೆಚ್ಚಾಗಿದೆ.

ಪೊಲಾರಿಸ್ ಎನ್ನುವ ಹೆಸರಿನ ಸಾಫ್ಟ್‌ವೇರ್‌ಸೇವಾ ಕಂಪೆನಿಯ ಅಧ್ಯಕ್ಷ ಅರುಣ್ ಜೈನ್ ಅವರನ್ನು ಯಾವುದೋ ಇಂಥದೇ ತಾಂತ್ರಿಕ ದೋಷ ಹಿಡಿದು ಬಂಧಿಸಿದ್ದರು. ಮಲೇಷ್ಯದಲ್ಲಿ ಸಹಾ ವೀಸಾ ಕಾರಣಗಳನ್ನು ಮುಂದೊಡ್ಡಿ ಭಾರತೀಯ ತಂತ್ರಜ್ಞರನ್ನು ಈಚೆಗೆ ಗೋಳು ಹುಯ್ದುಕೊಂಡಿದ್ದರು. ಜರ್ಮನಿಯಲ್ಲಂತೂ ಭಾರತೀಯರನ್ನು ಕಂಡರೆ ಸಾಕು; ಸ್ಥಳೀಯರು ಸಿಡಿಮಿಡಿಗೊಳ್ಳುತ್ತಾರೆ. ೭೫ ಸಹಸ್ರ ಸಂಖ್ಯೆಯ ಭಾರತೀಯರಿಗೆ ವೀಸಾ ಕೊಡಲೊಪ್ಪಿದ ಆ ಕಾರ್ಯವನ್ನು ಜುಲೈ ೧ ರಿಂದ ಆರಂಭಿಸುವುದಾಗಿ ತಿಳಿಸಿತ್ತು. ಈಗ ಅದಕ್ಕೆ ನಕಾರ ಸೂಚಿಸುತ್ತಿದೆ.

ಭಾರತೀಯ ತಂತ್ರಜ್ಞರು ಕೆಲಸವನ್ನು ಅರಸಿ ವಿದೇಶಗಳಿಗೆ ಹೋಗುವುದಾದರೂ ಏಕೆ? ಅವರು ವಿಶ್ವಮಟ್ಟದ ಕಂಪ್ಯೂಟರ್‌ ಕೆಲಸ ಮಾಡಿಕೊಡಬಲ್ಲರು. ಮುಂದುವರೆದ ದೇಶಗಳ ಪಾಲಿಗೆ ಇವರಿಂದ ಸಿಗುವ ಸೇವೆ ಅಗ್ಗ. ಆಯಾ ದೇಶೀಯ ತಂತ್ರಜ್ಞರೇ ಇವರು ಒದಗಿಸುವ ಸೇವೆಗೆ ಸರಿಸಮವಾದ ಗುಣಮಟ್ಟದ ಕೆಲಸವನ್ನು ಇವರಷ್ಟು ಅಗ್ಗಕ್ಕೆ ಮಾಡಿಕೊಡಲಾರರು. ಆದ್ದರಿಂದಲೇ ಭಾರತದ ಕಂಪೆನಿಗಳಿಗೆ ಅಲ್ಲಿನ ಕಂಪೆನಿಗಳು ಕೆಲಸದ ಗುತ್ತಿಗೆ ನೀಡುತ್ತಾರೆ. ಆ ಕೆಲಸವನ್ನು ಗ್ರಾಹಕ ಕಂಪೆನಿಯವರಿಗಾಗಿ ಭಾರತದಲ್ಲೇ ಮಾಡಿಕೊಡುವುದೇ ಅಲ್ಲದೆ ಗ್ರಾಹಕ ಕಂಪೆನಿಯ ರಾಷ್ಟ್ರಕ್ಕೆ ಕೆಲಸಗಾರರನ್ನು ಕಳುಹಿಸಿ ಅಲ್ಲಿಯೂ ಕೆಲಸ ಪೂರೈಸಿ ಕೊಡುತ್ತವೆ. ಭಾರತದ ಕಂಪೆನಿಗಳು.

ಹೀಗೆ ಸಾಫ್ಟ್‌ವೇರ್‌ನ್ನು ರಫ್ತು ಮಾಡುವುದೇ ಅಲ್ಲದೆ ತಜ್ಞರ ಸೇವೆಯನ್ನು ಸಹಾ ಭಾರತ ಹೀಗೆ ರಫ್ತು ಮಾಡುತ್ತದೆ. ಒಂದು ಕಾಲಕ್ಕೆ ಹೀಗೆ ದುಡಿಮೆಯನ್ನು ಮಾರುವುದನ್ನು ಪ್ರತಿಭಾ ಪಲಾಯನ ಎಂದು ಕರೆಯುತ್ತಿದ್ದರು. ಈಗ ಭಾರತವು ವಿಶ್ವ ವ್ಯಾಪಾರ ಸಂಸ್ಥೆ ವ್ಯವಸ್ಥೆಗೆ ಒಳಪಟ್ಟು ಹೊರ ಪ್ರಪಂಚಕ್ಕೆ ತೆರೆದುಕೊಂಡಿದೆ. ಇದರ ಲಾಭವನ್ನು ಇತರ ರಾಷ್ಟ್ರಗಳು ಪಡೆದುಕೊಳ್ಳುತ್ತಿವೆ.

ಆದರೆ ಸ್ಥಳೀಯರು ಇದರಿಂದ ಕುಪಿತರಾಗುತ್ತಿದ್ದಾರೆ. ಸ್ವಂತ ಆರ್ಥಿಕ ಸ್ಥಿತಿಗತಿ ಹದಗೆಡುತ್ತಿರುವುದರಿಂದ ಅಮೆರಿಕ ಮತ್ತು ಯುರೋಪಿನಲ್ಲಿ ಹೊರಗಿನವರಿಗೆ ಸಿಗುವ ಉದ್ಯೋಗಾವಕಾಶಗಳಿಂದ ಸ್ಥಳೀಯರು ಕೆಂಗಣ್ಣು ಮಾಡಿಕೊಂಡಿದ್ದಾರೆ. ಅದರಲ್ಲೂ ಐತಿಹಾಸಿಕ ಸಪ್ಟಂಬರ್‌ ೧೧ರ ಘಟನೆ ನಂತರ ಇದ್ದಕ್ಕಿಂದ್ದಂತೆ ಬಿಳಿಯ ಜನಾಂಗಗಳಲ್ಲಿ ಸ್ವಹಿತ ಚಿಂತನೆ ಬಹಳ ಮುಖ್ಯವಾಗುತ್ತಿದೆ. ಇಲ್ಲೆಲ್ಲ ಕಾರ್ಮಿಕ ಸಂಘಗಳು ತಮ್ಮ ಸ್ಥಳೀಯರಿಗೆ ಕೆಲಸವನ್ನು ಕೊಡಬೇಕೆಂದು ಅಹವಾಲು.

ಅಮೆರಿಕದಲ್ಲಿ ಆರು ವರ್ಷಗಳವರೆಗೆ ತಂಗಲು ಹೊರಗಿನವರಿಗೆ ಎಚ್‌ಒನ್‌ಬಿ ವೀಸಾ ಕೊಡುವ ಪದ್ಧತಿ ಉಂಟು. ಅದನ್ನು ಕೊನೆಗಾಣಿಸಬೇಕು ಎಂಬ ಒತ್ತಡವು ಸರಕಾರದ ಮೇಲೆ ಬರುತ್ತಿದೆ. ೧೯೯೮ರಲ್ಲಿ ಇಂಥ ವೀಸಾ ನೀಡಿಕೆಯನ್ನು ಹೆಚ್ಚು ಮಾಡಿದಾಗ ತೀವ್ರ ಪ್ರತಿರೋಧ ಬಂದಿತು. ಅಭಿಪ್ರಾಯ ಸಂಗ್ರಹ ಮಾಡಿದಾಗ ಶೇ. ೮೦ ಅಮೆರಿಕನ್ನರು ವಿರೋಧೀಸಿದ್ದು ವ್ಯಕ್ತವಾಯಿತು. ಆದರೆ ಆರು ವರ್ಷದ ಮಟ್ಟಿಗೆ ಮಾತ್ರ ವಿದೇಶಿ ಕೆಲಸಗಾರರನ್ನು ಒಳಕ್ಕೆ ಬಿಟ್ಟುಕೊಂಡಾಗ ಅಗ್ಗದಲ್ಲಿ ಕೆಲಸವಾಗುತ್ತದೆ ಎಂಬುದನ್ನು ಹೆಚ್ಚು ಹೆಚ್ಚು ಮನವರಿಕೆ ಮಾಡಿಕೊಂಡ ಕಂಪೆನಿಗಳು ಹೆಚ್ಚು ಹೆಚ್ಚಾಗಿ ಎಚ್‌ಒನ್‌ಬಿ ವೀಸಾ ನೀಡಿಕೆಗೆ ಕಾರಣವಾದರು.

ವಿಶ್ವ ವಿಖ್ಯಾತ ಸೀಮನ್ಸ್ ಕಂಪೆನಿಯವರು ಈಚೆಗೆ ಅಮೆರಿಕ ತಮ್ಮ ಕಂಪೆನಿಯ ತಂತ್ರಜ್ಞರನ್ನು ತೆಗೆದುಹಾಕಿ ಆ ಜಾಗಕ್ಕೆ ಭಾರತದ ಟಿಸಿಎಸ್ (ಟಾಟಾ ಕನ್ಸಲ್ಟಿಂಗ್ ಸರ್ವಿಸಸ್‌)ನ ತಂತ್ರಜ್ಞರನ್ನು ನೇಮಿಸಿಕೊಂಡರು. ಆದರೆ ಸ್ಥಳೀಯರ ಮೊಕದ್ದಮೆ ಹೂಡಿದರು. ಅದು ವಜಾ ಆಯಿತು.

ಇಂಥ ಪ್ರಸಂಗಗಳು ವಾಸ್ತವವಾಗಿ ಸ್ಥಳೀಯರು ಎಷ್ಟು ಕನಲಿದ್ದಾರೆ ಎಂಬುದನ್ನೇ ಸೂಚಿಸುತ್ತದೆ. ತಾವು ವಿದೇಶಗಳಲ್ಲಿ ಉಳಿಸಿದ ಪ್ರತಿ ಡಾಲರ್‌ ಹಣವು ೪೫ ರೂಪಾಯಿ ಹಣವನ್ನು ಪ್ರತಿ ಪೌಂಡ್ ೭೫ ರೂಪಾಯಿ ಹಣವನ್ನು ಸ್ವದೇಶಕ್ಕೆ ತರಲು ಅವಕಾಶ ಕೊಡುತ್ತದೆ ಎಂಬ ಒಂದೇ ಆಸೆಯಿಂದ ಭಾರತೀಯ ತಂತ್ರಜ್ಞರು ಪರದೇಶದಲ್ಲಿ ನಾನಾ ಬವಣೆ ಅನುಭವಿಸಿ ತಮ್ಮವರನ್ನೆಲ್ಲ ಬಿಟ್ಟು ದೂರವೇ ಉಳಿದು ದುಡಿಯುತ್ತಿದ್ದಾರೆ. ಇದೀಗ ಸ್ಥಳೀಯರ ಪ್ರತಿರೋಧವನ್ನು ಸಹಾ ಲೆಕ್ಕಿಸದೆ ದುಡಿಯಬೇಕಾಗಿ ಬಂದಿದೆ.

ಸ್ಥಳೀಯರ ಕನಲಿಕೆಯೇ ಕಿರುಕುಳಕ್ಕೆ ಮೂಲವಾಗುತ್ತದೆ. ಹೀಗಾಗಿ ಭಾರತೀಯರು ಅಲ್ಲೆಲ್ಲ ಅಭದ್ರತೆಯ ನಿರ್ವಿಣ್ಣತೆಗೆ ಗುರಿಯಾದಾಗಲೂ ಧೈರ್ಯ ತೋರಿಸುವಂತಾಗುತ್ತದೆ. ತಾವು ಯಾವ ಕಂಪೆನಿಗಾಗಿ ದುಡಿಯುವುದು ಆಗುತ್ತದೆಯೋ ಆ ಕಂಪೆನಿಯವರು ಆದಷ್ಟು ರಕ್ಷಣೆ ಒದಗಿಸಿದರೂ ನೆದರ್‌ಲ್ಯಾಂಡ್‌ಸರಕಾರದ ವತಿಯಿಂದಲೇ ನಡೆಯುವಂಥ ಕಿರುಕುಳ ತಪ್ಪಿದ್ದಲ್ಲ.

ಅಮೆರಿಕ ಸಂಸ್ಥಾನಗಳಲ್ಲಿ ಒಂದಾದ ನ್ಯೂಜೆರ್ಸಿಯಲ್ಲಿ ವಿದೇಶಿ ಐಟಿ ತಂತ್ರಜ್ಞರ ವಿರುದ್ಧ ಹಾಗೂ ಸ್ಥಳೀಯರ ಪರವಾಗಿ ಒಂದು ಮಸೂದೆಯನ್ನು ತರಲಾಗಿದೆ. ಇತರ ಕೆಲವು ಸಂಸ್ಥಾನಗಳು ಇದೇ ರೀತಿ ಶಾಸನ ಕ್ರಮಕ್ಕೆ ಯೋಚಿಸಿವೆ. ಆದರೆ ಅಮೆರಿಕದ ಐಟಿ ಉದ್ಯಮಗಳ ಸಂಗವು ಲಾಭಿ ನಡೆಸಿ ನ್ಯೂಜೆರ್ಸಿ ಮಸೂದೆಯ ಮಂಡನೆಯಾಗುವುದನ್ನು ತಡೆದಿದೆ.

ಇಂಥ ಶಾಸನ ಕ್ರಮಗಳು ಸಹಾ ರಾಜಕಾರಣಿಗಳ ಕೈವಾಡವೇ ಸರಿ. ಸ್ಥಳೀಯ ಕಾರ್ಮಿಕರೆಂಬ ಓಟು ಬ್ಯಾಂಕುಗಳ ಮೇಲೆ ಕಣ್ಣಿಟ್ಟು ಆ ದಿಕ್ಕಿನಲ್ಲಿ ಶ್ರಮಿಸಲು ಮುಂದಾಗುತ್ತಾರೆ. ಆದರೆ ಐಟಿ ಉದ್ಯಮವು ಅದಕ್ಕೆ ವಿರುದ್ಧವಾಗಿದೆ.

ಭಾರತೀಯರು ಇದರಿಂದ ತೀವ್ರವಾಗಿ ಬಾದೆಗೊಳಗಾದವರು. ಚೀನಾ ಮತ್ತು ಜಪಾನ್‌ಗಳು ಹೀಗೆಲ್ಲಾ ವಿದೇಶಗಳಿಗೆ ತಮ್ಮಜನರನ್ನು ಕಳುಹಿಸುವುದು ಕಡಿಮೆ.

ಇದೇನೇ ಇದ್ದರೂ ಭಾರತೀಯಂಥ ವಿದೇಶಿಯರು ತಮ್ಮಲ್ಲಿಗೆ ಬಂದು ದುಡಿಸುವುದಕ್ಕೆ ಅಡ್ಡಿ ಒದಗಿಸಿದರೆ ತಮ್ಮ ದೇಶದ ಆರ್ಥಿಕತೆಗೆ ನಷ್ಟ ಎಂಬುದನ್ನು ಅಮೆರಿಕ ಮತ್ತು ಯುರೋಪ್ ದೇಶಗಳ ಸರಕಾರಗಳು ಮನಗಾಣಬೇಕು.