(ಹಸನ್ ಎಣ್ಣೆ ವ್ಯಾಪಾರಿಯ ಹಾಗೆ ಉಡುಪು ಧರಿಸಿದ್ದಾನೆ. ರಸ್ತೆಯಲ್ಲಿ ಸಲೀಮನನ್ನು ಸಂಧಿಸುತ್ತಾನೆ.)
ಹಸನ್ : ಅರೇ ಭಾಯೀ, ಕ್ಯಾ ಆಪಕಾ ನಾಂ ಸಲೀಂ ಹೈ?
ಸಲೀಂ : ಹೌದು.
ಹಸನ್ : ಕ್ಯಾ ಆಪ್ಕಾ ಬಾಪಕಾ ನಾಂ ಅಲೀಬಾಬಾ ಹೈ?
ಸಲೀಂ : ಹೌದು.
ಹಸನ್ : ಹಾಗಿದ್ದರೆ ಹಾಥ್ ಮಿಲಾವ್ಭಾಯಿ.
ಸಲೀಂ : ನಿಮಗೆ ನಾ ಸಲೀಮಂತ ಹ್ಯಾಗೆ ಗೊತ್ತಾಯ್ತು?
ಹಸನ್ : ಊರಿನ, ಬಡಾ ವ್ಯಾಪಾರೀ ಹೆಸರು ಗೊತ್ತಾಗೋದು ಕಷ್ಟಾನಾ? ನಾ ಯಾರೂಂತ ನೀವು ಕೇಳಿ, ಕೇಳಿ.
ಸಲೀಂ : ನೀವು ಯಾರು?
ಹಸನ್ : ಹಹ್ಹಾ! ನನ್ಹೆಸರು ಆಯಿಲ್ಶಾ! ಯಾನೇ ಎಣ್ಣೇ ರಾಜ, ಅಂತ. ಎಣ್ಣೇ? ತೇಲ್ಜೋ ಹೋತಾ ಹೈ ನ?-ಆ ಎಣ್ಣೇನ ಇಧರ್ ಸೆ ಉಧರ್; ಉಧರ ಸೆ ಇಧರ್-ಸಾಗಿಸೋದು ಹಮಾರಾ ದಂಧಾ. ಇರಾನೀ ಶಾ ಹೈ ನ?-ಓ ಹಮಾರಾ ದೋಸ್ತ್ ಹೈ. ಅವನ ಮದುವೇಗೆ ಎಣ್ಣೆ ಒಯ್ತಾ ಇದ್ದೆ. ಕ್ಯಾ ಕರನಾ? ರಸ್ತೇಮೆ ಕುಚ್ ಗಡಬಡ್ ಹುವಾ. ಬಿರುಗಾಳಿ ಬೀಸಿ ನಮ್ದು ಕುದುರೇಗೆ ನಡೀಲೇ ಇಲ್ಲ. ಈ ಹೊತ್ತು ಇಲ್ಲಿದ್ದು ನಾಳೆ ಹೊರಡಬೇಕು. ಕ್ಯಾ ಹಂ ದೋನೋ ದೋಸ್ತ್ ಬನೆ?
ಸಲೀಂ : ಓಹೋ!
ಹಸನ್ : ಹಾಥ್ ಮಿಲಾವ್ಭಾಯೀ.
ಸಲೀಂ : ಈ ಎಣ್ಣೇ ವ್ಯಾಪಾರದಿಂದ ನಿಮಗೆ ತಿಂಗಳಿಗೆ ಎಷ್ಟುಲಾಭ ಸಿಗುತ್ತೆ ಆಯಿಲ್ ಶಾ ಭಾಯಿ? ಹಜಾರ್ ದೋ ಹಜಾರ್?
ಹಸನ್ : ಹಜಾರ್ ದೋ ಹಜಾರ್? ಹೆ ಹ್ಹೆ ಹ್ಹೆ………….ಆಪ್ಲೋಗ್ ಲಾಭಾನ್ನ ಗಿನತಾ ಹೈ? ಮಗರ್ ಹಂ ನಹೀ. ಪಿಕಾಸಿ ಜೋಹೋತಾ ಹೈನ-ಪಿಕಾಸೀಸೆ ಎಳೀತಾ ಹೈ! ಗಿನನೇಕಾ ವಖ್ತ್ ಕಹಾ ಹೈ? ಲಾಖ್ ದೋ ಲಾಖ್ ಹೋತಾ ತೊ ಗಿನ್ಸಕತೇ. ದೋ ಚಾರ್ ಕರೋಡ್ ಹೋ ತೊ?
ಸಲೀಂ : ತಿಂಗಳಿಗೆ ಕರೋಡಗಟ್ಲೆ ಸಿಗುತ್ತಾ?
ಹಸನ್ : ಕೆಂವ್ ನಹೀ? ಕೆಂವ್ ನಹೀ? ನಮ್ದು ಠೋಕ್ ವ್ಯಾಪಾರ, ಕಿರುಕುಳ ನಹೀ. ಅರೇ ಭಾಯೀ ತುಮ್ ಭೀ ಹಮಾರಾ ಪಾರ್ಟನರ್ ಬನೋ, ತುಮ್ ಭೀ ಕಮಾಯೇಗಾ.
ಸಲೀಂ : ನಿಜವಾಗ್ಲೂ?
ಹಸನ್ : ಇಸಮೆ ಕ್ಯಾ ಶಕ್ ಹೈ? ಈ ಹೊತ್ತು ರಾತ್ರಿ ನಮ್ದೂಗೆ ಎಣ್ಣೇಗೆ ಕುದುರೇಗೆ ರಹನೇಕೋ ಠಿಕಾಣ ಯಾನೆ ಆಶ್ರಯ ಬೇಕಿಲ್ಲ. ಹ್ಯಾಗೆ ಮಾಡೋದು?
ಸಲೀಂ : ನಮ್ಮ ಮನೇಲೇ ಇರಿ.
ಹಸನ್ : ದೋಸ್ತಿ ಹೋ ತೋ ಐಸಾ. ಹಾಗಿದ್ದರೆ ನಮ್ದು ಎಣ್ಣೆ ಹರವಿ ಎಲ್ಲಿಡೋಣ?
ಸಲೀಂ : ಏನೊ ಯೋಚನೆ ಮಾಡಬೇಡಿ. ನಿಮ್ಮಂಥವರ ಗೆಳೆತನ ಸಿಕ್ಕೋದು ನಮ್ಮ ಸೌಭಾಗ್ಯ. ಮನೇ ದೊಡ್ಡದು. ಅಲ್ಲೇ ಹರವಿ ಇಳಿಸಬಹುದು. ಈ ದಿನ ನೀವು ನನ್ನ ಮೆಹಮಾನ್! ಬನ್ನಿ, ಊಟ ಮಾಡಿದ ಮೇಲೆ ಇನ್ನಷ್ಟು ಮಾತಾಡೋಣ. (ಹೊರಡುವರು.)
Leave A Comment