(ಊಟದ ತಟ್ಟೆಯ ಮುಂದೆ ಕೂತು ಸಲೀಂ ಗೊಣಗುತ್ತ ಒಂದು ಕವಿತೆ ಬರೆಯುತ್ತಿದ್ದಾನೆ. ತಾಯಿ ಅಂದರೆ ಅಲೀಬಾಬಾನ ಬೇಗಂ ಮುಂದೆ ಕೂತಿದ್ದಾಳೆ.)

ಸಲೀಂ : ಮರ್ಜೀನಾ! ನಿನ್ನ ಮರೆಯಲಾರೆ ನಾ
ನೀ ಎನ್ನ ಹೃದಯ ಕವನಾ| ಹೇಳಬೇಡ ನನನಾ
ಮುಗುಳು ನಗು ನೀನಾ| ಧನ್ಯನು ನಾನಾ…..

ಬೇಗಂ : ಲೋ ಬಾಯ್ಮುಚ್ಚೊ,

ಸಲೀಂ : ಅಪ್ಪನ ಕತ್ತೆ ಕಿರಿಚಿದರೆ ಕೇಳಿಸಿಕೊಳ್ಳುತ್ತ; ನಾ ಹಾಡಿದರೆ ಬಾಯ್ಮುಚ್ಚು ಅಂತೀಯಲ್ಲಮ್ಮಾ……..

ಬೇಗಂ :  ಕತ್ತೆ ದುಡಿಯುತ್ತವೆ. ದುಡಿಯೋರು ಏನು ಹಾಡಿದರೂ ಚಂದ. ನೀನಿದ್ದೀ ನೋಡು, ಬೆಳಿಗ್ಗೆ ಊಟ ಮಾಡಿದವನೇ ಫರಾರಿ. ಮತ್ತೆ ಊಟಕ್ಕೇ ಹಾಜರಿ. ಎಲ್ಲೋ ಹಾಳಾಗಿ ಹೋಗಿದ್ದೆ ಅಂದರೆ……

ಸಲೀಂ : ಕೆಲಸ ಹುಡುಕಲಿಕ್ಕೆ-

ಬೇಗಂ : ಅಂತಿ. ಯಾಕೋ ಸುಳ್ಳು ಹೇಳ್ತಿ? ಆ ಗುಲಾಮಳು ಅಡ್ಡಾಡೋ ರಸ್ತೇಲಿ ಬಾಯಿ ತರಕೊಂಡು ನಿಂತಿದ್ದೇ-ಅನ್ನು.

ಸಲೀಂ : ಬಾಯಿ ತೆರಕೊಂಡ ನಿಂತಿದ್ದೆ.

ಬೇಗಂ : ಪಾಪ, ನಿನ್ನ ತಂದೆ ಬೆಳಿಗ್ಗೆ ಹೋದವರು ಇನ್ನೂ ಬರಲಿಲ್ಲ, ನಿನಗೇನಾದರೂ ಕಾಳಜಿ ಇದೆಯಾ? ಒಂದಿಷ್ಟಾದರೂ ಮನೇ ಜವಾಬ್ದಾರಿ ಇದೆಯೇನೋ ನಿನಗೆ?

ಸಲೀಂ : ಇದೆ.

ಬೇಗಂ : ಏನಿದೆಯೋ?

ಸಲೀಂ : ನಿನಗೆ ವಯಸ್ಸಾಯ್ತು. ದುಡಿದು ದುಡಿದು ಹಣ್ಣಾದೆ. ನಿನಗೆ ಒಬ್ಬ ಸೊಸೆ ಬೇಕು. ಸೊಸೇನ ತರೋದಕ್ಕೆ ಪ್ಯಾರ ಮಾಡ್ತಾ ಇದೀನಮ್ಮ. ಜವಾಬ್ದಾರಿ ಇಲ್ಲದೇ ಇಷ್ಟೆಲ್ಲ ಮಾಡ್ತೀನಾ?

ಬೇಗಂ : ಆಹಾಹಾ ಮಗರಾಯಾ! ಪ್ಯಾರ್ ಪ್ಯಾರಂದರೆ ಹೊಟ್ಟೆ ತುಂಬುತ್ತೇನೊ?

ಸಲೀಂ : ಅವಳನ್ನ ನೋಡ್ತಾ ಇದ್ದರೆ ಹಸಿವೇ ಆಗೋದಿಲ್ಲವಮ್ಮಾ!

ಬೇಗಂ : ಮತ್ತ್ಯಾಕೊ ಊಟಾ ಮಾಡ್ತಿ?

ಸಲೀಂ : ಈಗವಳು ಎದುರಿಗಿಲ್ಲವಲ್ಲ, ಹಸಿವಾಯ್ತು.

ಬೇಗಂ : ಅವಳನ್ನ ಕರೆತಂದು ಏನೋ ಹೊಟ್ಟಗ್ಹಾಕ್ತಿ?

ಸಲೀಂ : ಅವಳು ಎದುರಿಗಿದ್ದರೆ ನನಗಂತೂ ಹಸಿವಾಗೋದಿಲ್ಲ, ನನ್ನ ಪಾಲಿನ ಅನ್ನ ಅವಳಿಗೇ ಹಾಕು.

ಬೇಗಂ : ದಡ್ಡ ನನ ಮಗನೆ.

ಸಲೀಂ : ನಿಜ.

ಬೇಗಂ : ಅವಳೊ ಗುಲಾಮಳು. ಆ ಗುಲಾಮಳ ಗುಲಾಮ ಆಗೀಯಲ್ಲೋ ಆಗಲೇ.

ಸಲೀಂ : ಗುಲಾಮಳಲ್ಲಮ್ಮ ಅವಳು, ಯಾವುದೋ ಮಂತ್ರೀ ಮಗಳಂತೆ! ಅವರಪ್ಪ ಬದುಕಿದ್ದರೆ ನಾನು ಮಂತ್ರೀ ಅಳಿಯ ಆಗಿರ್ತಿದ್ದೆ.

ಬೇಗಂ : ಅಂಥವಳು ನಿನ್ನನ್ನ ಮದುವೆ ಆಗ್ತಾಳೇನೋ ಬೇಕೂಫಾ?

ಸಲೀಂ : ಆಗದೇನಮ್ಮಾ? ಮದುವ್ಯಾಗತೀನಂತ ನಿನ್ನೆ ಮಾತು ಕೊಟ್ಟಿದ್ದಾಳೆ-ಕನಸಿನಲ್ಲಿ.

ಬೇಗಂ : ಥೂ ಹಾಳಾದವನೇ!
(ಹೊರಗಿನಿಂದ ಬಾಗಿಲು ಬಡಿದ ಸದ್ದು. ಬೇಗಂಎಂಬ ಕರೆ ಕೇಳಿಸುತ್ತದೆ.)
ಹೋಗೋ, ನಿಮ್ಮ ತಂದೆ ಬಂದರೂಂತ ಕಾಣಸತ್ತೆ. ಬಾಗಿಲ ತಗೀ ಹೋಗು.

ಸಲೀಂ : (ಓಡಿಹೋಗಿ ತಿರುಗಿ ಬಂದು) ಅಮ್ಮಾ ಅಪ್ಪನಿಗೆ ಹೇಳಮ್ಮಾ……..

ಬೇಗಂ : ಹೋಗಿ ಬಾಗಿಲು ತಗೀಯೋ……..

ಸಲೀಂ : ತಗೀತೀನಮ್ಮಾ. ಹ್ಯಾಗೂ ಖಾಸೀಂ ಚಾಚ್ಯಾ ಹತ್ತಿರ ಅವಳಿರೋದು. ನಾಳೆ
ನೀನು, ಅಪ್ಪಾ ಹೋಗಿಬಿಟ್ಟು………….

ಅಲೀಬಾಬಾ : (ಹೊರಗಿನಿಂದ) ಬೇಗಂ ಬಾಗಿಲು ತಗಿ.

ಬೇಗಂ : ಬೇಗ ಹೋಗೊ.

ಸಲೀಂ : ಹೋಗತೀನಮ್ಮಾ, ನಾಳೆ ನೀವಿಬ್ಬರೂ ಹೋಗಿ ನಮ್ಮ ಮದುವೇ ವಿಚಾರಾನ
……….

ಅಲೀಬಾಬಾ : (ಹೊರಗಿನಿಂದ) ಬೇಗಂ ಏನಾಗಿದೆ ನಿನಗೆ? ಬೇಗ ಬಾಗಿಲು ತಗಿ.

ಬೇಗಂ : ಹಾಳಾದವನೇ………………..

(ಎನ್ನುತ್ತ ತಾನೇ ಬಾಗಿಲು ತೆಗೆಯಲಿಕ್ಕೆ ಹೊರಡುತ್ತಾಳೆ. ಸಲೀಂ ತಾನೇ ಮುಂದೆ ಹೋಗಿ ಬಾಗಿಲು ತೆಗೆಯುತ್ತಾನೆ. ಅಲೀಬಾಬಾ ಅವಸರವಾಗಿ ಮೂರೂ ಕತ್ತೆಗಳನ್ನ ದೂಡಿಕೊಂಡೇ ಒಳಬರುತ್ತಾನೆ. ಒಳಬಂದವನೇ ಮೂಟೆ ಇಟ್ಟು ಮತ್ತೆ ಬಾಗಿಲಿಕ್ಕುತ್ತಾನೆ. ಓಡಿ ಬಂದು ಬೇಗಂ ಬೇಗಂ ಎನ್ನುತ್ತ ಮೂಟೆಯೊಳಗಿನ ಬಂಗಾರದ ನಾಣ್ಯಗಳನ್ನು ಸುರಿಯುತ್ತಾನೆ. ಬೇಗಂ ಹುಚ್ಚಿಯ ಹಾಗೆಮಾ ಶಾ ಅಲ್ಲಾ!” ಎನ್ನುತ್ತ ಕುಣಿಯುತ್ತ, ನಾಣ್ಯಗಳನ್ನು ಎತ್ತೆತ್ತಿ ಚೆಲ್ಲುತ್ತ, ಮೈಮೇಲೆ ಸುರಿದುಕೊಳ್ಳುತ್ತಾಳೆ. ಸಲೀಂ ಆಶ್ಚರ್ಯದಿಂದ ತಂದೆಗೆ ಕತ್ತೆಯ ಮೇಲಿನ ಮೂಟೆ  ಇಳಿಸಲು ಸಹಾಯ ಮಾಡುತ್ತಿದ್ದಾನೆ. ಸಂತೋಷದಿಂದ ವಿಚಿತ್ರವಾಗಿ ಅರಳಿದ ಮುಖದೊಂದಿಗೆ ಬೇಗಂ ಅಲೀಬಾಬಾನ ಬಳಿಗೆ ಓಡಿ ಬರುತ್ತಾಳೆ.)

ಬೇಗಂ : ರೀ ರೀ ಇದೆಲ್ಲಾ ಅಸಲಿ ಬಂಗಾರ ತಾನೆ?

ಸಲೀಂ : ನಕಲೀ ಆದರೂ ನಮಗೆಲ್ಲಿ ಸಿಗುತ್ತಿತ್ತಮ್ಮಾ?

ಅಲೀಬಾಬಾ : ಅಸ್ಸಲ್ ಸೋನಾ, ಅಪ್ಪಟ ಬಂಗಾರ!

ಬೇಗಂ : ರೀ ರೀ ಇದೆಲ್ಲಾ ನಿಜ ಏನ್ರಿ? ಕನಸಲ್ಲ ತಾನೆ?

ಅಲೀಬಾಬಾ : ಹುಚ್ಚಿ.

ಬೇಗಂ : ಇದೆಲ್ಲಾ ಎಲ್ಲಿ ಸಿಕ್ಕಿತು?

ಸಲೀಂ : ಹ್ಯಾಗೆ ಸಿಕ್ಕಿತು?

ಬೇಗಂ : ಯಾರು ಕೊಟ್ಟರು?

ಅಲೀಬಾಬಾ : ಅಲ್ಲಾ ಕೊಟ್ಟ, ನಾ ತಂದೆ.

(ಮುಂದಿನ ಹಾಡನ್ನು ಒಬ್ಬೊಬ್ಬರು ಹುಚ್ಚುಚ್ಚಾಗಿ ಕುಣಿಯುತ್ತಾ ಹೇಳುತ್ತಿದ್ದರೆ ಉಳಿದವರು ನಾಣ್ಯ ಸುರಿಸುರಿದು ಖುಶಿಪಡುತ್ತಾರೆ. ಮೇಳದ ಪಲ್ಲವಿಗೆ ಮೂವರೂ ಸೇರಿ ಕುಣಿಯುತ್ತಾರೆ.)

ಬೇಗಂ : ಇಲ್ಲಿಲ್ಲಾ ಅಲ್ಲಲ್ಲಾ ನಿನ್ನಂಥೋರಿಲ್ಲಾ
ನಿನ್ನ ಕರುಣೆಗೆ ಇನ್ನು ಸರಿಸಮನಿಲ್ಲಾ||
ದೊಡ್ಡಮನೆ! ಆಸ್ತಪಾಸ್ತಿ!
ಕೈಗೊಂದಾಳು ಮನೇತುಂಬ ಕಾಳು!
ಕತ್ತಿನ ತುಂಬ ಥರಾವರಿ ಸರ
ಮೈತುಂಬೆಲ್ಲಾ ಮಣ ಬಂಗಾರ!
ಚಿನ್ನದ ಬಳೆ ಬಳೆ ಮೊಲಕೈತನಕ
ಕಾಲಿಗೆ ನೂಪುರ ಥೈ ಥೈ ಥಕ ಥಕ
ವಜ್ರದ ಮುಗುತಿ ಮಾಡಿಸ್ಕೊತೀನಿ
ಖಾಸೀಂ ಹೇಂತೀಗೆ ಮೂಗು ಮೂರೀತೀನಿ!

ಮೇಳ : ಇಲ್ಲಿಲ್ಲಾ ಅಲ್ಲಲ್ಲಾ ನಿನ್ನಂಥೋರಿಲ್ಲಾ
ನಿನ್ನ ಕರುಣೆಗೆ ಇನ್ನು ಸರಿಸಮನಿಲ್ಲಾ||
ಸಲೀಂ : ಬಾಜಾ ಬಜಂತ್ರಿಯ ಭಾರೀ ಮೆರವಣಿಗೆ
ತುತ್ತೂರಿ ಢಂ ಡೋಲು ದಿಬ್ಬಣ ಜೊತೆಗೆ
ದಿಬ್ಬಣ ಹೊರಟಿದೆ ಮರ್ಜೀನಾ ಬಳಿಗೆ
ಹುಡಿಗೇರ ಕುಡಿನೋಟ ಬರಿ ನನ್ನ ಕಡೆಗೆ
ಗೆಳೆಯರು ನಗುತಾರೆ ಹೊಟ್ಟೆ ಕಿಚ್ಚೊಳಗೆ
ಹಾ ನಾನೆ ಮದುವಣಿಗ ಕುದುರೆಯ ಮೇಲೆ

ಅಲೀಬಾಬಾ : (ತಿದ್ದುವಂತೆ) ಕುದುರೆ ಮೇಲಲ್ಲ ಮಗು, ಕತ್ತೇ ಮೇಲೆ ಅನ್ನು.

ಸಲೀಂ : ಮದುವೆ ಮೆರವಣಿಗೆ ಕತ್ತೇ ಮೇಲೆ ಹ್ಯಾಗಪ್ಪಾ?

ಅಲೀಬಾಬಾ : ಹ್ಯಾಗೇನು? ದೇವರಂಥಾ ಕತ್ತೆ! ಅವು ಹೊತ್ತು ತಂದದ್ದರಿಂದ ತಾನೇ ನಿನಗಿಂಥಾ ಅದ್ದೂರಿ ಮದುವೆ? ಬೇಕಾದರೆ ಗಂಡು ಕತ್ತೇ ಮೇಲೆ ಕೂತುಕೊ. ಆದರೆ ಮದುವೆ ಮೆರವಣಿಗೆ ಮಾತ್ರ ಕತ್ತೆ ಮೇಲೇನೇ.

ಸಲೀಂ : ಕತ್ತೇ ಮೇಲೆ!

ಬೇಗಂ : ಸುಳ್ಳಲ್ಲ ಮಗಾ, ಒಂದು ಕಣ್ಣು ಮುಚ್ಚಿ ನೋಡಿದರೆ, ನಮ್ಮ ಕತ್ತೆ ಕೂಡ
ಕುದುರೆ ಥರ ಕಾಣುತ್ತೆ ಗೊತ್ತಾ?

ಮೇಳ : ಅಲ್ಲಲ್ಲಾ ಇಲ್ಲಿಲ್ಲಾ ನಿನಂಥೋರಿಲ್ಲಾ
ನಿನ್ನ ಕರುಣೆಗೆ ಇನ್ನು ಸರಿಸಮನಿಲ್ಲಾ||

ಅಲೀಬಾಬಾ : ಮಕ್ಕಾಕ ಹೋಗತೀನಿ ಮದೀನಾ ನೋಡತೀನಿ
ತಿರುಕರಿಗೆ ಕೈತುಂಬ ದಾನ ಮಾಡತೀನಿ

ಸಲೀಂ : ಕತ್ತೇ ಮೇಲೆ ಮದುವೆ ಮೆರವಣಿಗೆ ಸಾಧ್ಯವಿಲ್ಲಾ ಅಂದೆ!

ಅಲೀಬಾಬಾ : ಹಾಗಿದ್ದರೆ ನಿನಗೆ ಮದುವೇನೇ ಇಲ್ಲಾ ಅಂದೆ.
ಕತ್ತೆಗೆ ಜರತಾರಿ ಹಗ್ಗ ತರತೀನಿ
ಚಿನ್ನದ ಗೂಟಕ್ಕೆ ಕಟ್ಟಿ ಹಾಕ್ತೀನಿ

ಮೇಳ : ಇಲ್ಲಿಲ್ಲಾ ಅಲ್ಲಲ್ಲಾ ನಿನ್ನಂಥೋರಿಲ್ಲಾ
ನಿನ್ನ ಕರುಣೆಗೆ ಇನ್ನು ಸರಿಸಮನಿಲ್ಲಾ||

ಸಲೀಂ : (ನಿರಾಸೆಯಿಂದ) ಸ್ಸssರಿ.

ಅಲೀಬಾಬಾ : ಆಯ್ತಲ್ಲ. ಹೀಗೇ ಕುಣಿದಾಡ್ತೀರೊ? ಒಳಗಡೆ ಇಡ್ತೀರೊ? ಯಾರಾದರೂ ನೋಡಿ ರಾಜರಿಗೆ ಸಿದ್ದಿ ಮುಟ್ಟಿಸಿದರೆ ಮುಗಿದ್ಹೋಯ್ತು ನಮ್ಮ ಕಥೆ.

ಬೇಗಂ : ಹೌದಲ್ಲ! ಬೇಗನೇ ಪೆಟ್ಟಿಗೆ ತರತೀನಿ.

ಸಲಿಂ : ಎಣಿಸಿಡೊಣ.

ಅಲೀಬಾಬಾ : ಎಣಿಸಲಿಕ್ಕಾಗತ್ತಾ? ಎಣಿಸೋವಷ್ಟರಲ್ಲಿ ಯಾರಾದರೂ ಬಂದರೆ?…..

ಬೇಗಂ : ಹಾಗಾದರೆ ಅಳೆದಿಟ್ಟಿರೋಣ.

ಅಲೀಬಾಬಾ : ಅದೇ ಸರಿ. ಪಾವು ತತಾ

ಬೇಗಂ : ನಮ್ಮಲ್ಲಿಲ್ಲ, ಖಾಸೀಮನ ಮನೇಲಿದೆ. ಇಸ್ಕೊಂಬರ್ತೀನಿ.

ಅಲೀಬಾಬಾ : ಬಾಗಿಲು ಹಾಕಿಕೊಂಡು ಹೋಗು. ಬೇಗನೇ ಬಾ. ಕೇಳಿದರೆ ಏನೋ ರಾಗಿ ಅಳೀತೀನಿ ಅಂತ ಹೇಳು.

(ಹೋಗುವಳು. ತಂದೆ ಮಗ ನಾಣ್ಯಗಳನ್ನು ಸುರಿಯುತ್ತ ಕನಸು ಕಾಣುತ್ತ ಕೂರುವರು.)

 


=’f/�Ysz �! font-family:”Times New Roman”,”serif”‘>

 

ಮೇಳ : ಖುಲ್ಜಾ ಸೇಸಮಿ

(ಬಂಡೆ ತೆರೆಯುತ್ತದೆ. ಬಯದಲ್ಲೇ ಒಳಗೆ ಹೋಗುತ್ತಾನೆ. ಕತ್ತೆಗಳೂ ಬೆನ್ನುಹತ್ತಿ ಹೋಗುತ್ತವೆ. ಈಗ ದೃಶ್ಯ ಬದಲಾಗುತ್ತದೆ. ದೊಡ್ಡ ಗವಿ. ಅಲ್ಲಲ್ಲಿ ಕಳ್ಳರು ಕದ್ದಿಟ್ಟ ಶ್ರೀಮಂತಿಕೆ ಯದ್ವಾತದ್ವಾ ಹರಡಿಕೊಂಡು ಬಿದ್ದಿದೆ.)

ಅಲೀಬಾಬಾ : ಹಾಯಲ್ಲಾ ಚಿನ್ನ! ಹೇರಳ ರನ್ನ!
ಅಸಲಿ ಆಭರಣ ಹಿಗ್ಗ್ಯಾವು ಕಣ್ಣ
ಹೊಳೇಯುವ ಮುತ್ತ ರಾಶಿ ದೌಲತ್ತ
ಕತ್ತೀನ ಹಾರ ರತ್ನs ಹಾರ||

ಮೇಳ : ಹಾಯಲ್ಲಾ ನಿನ್ನಂಥೋರಿನ್ನೊಬ್ಬರಿಲ್ಲಾ
ಅಲ್ಲಾ ಹೊ ಅಕಬರ ನೀ ಹೌದು ಮೌಲಾ||

ಅಲೀಬಾಬಾ : ನೂರಾರು ಮೂಟೆಯ ನಾಣ್ಯ ಬಂಗಾರ
ಲೆಕ್ಕವಿಲ್ಲದ ಬೆಳ್ಳಿ ಎತ್ತರ ಭಾರ||

ಏನ ನೋಡಲಿ ಕಣ್ಣು ಸಾಲsವು ಮತ್ತೆ
ಎಷ್ಟಂತ ಒಯ್ಯಲಿ ಬರಿ ಮೂರೆ ಕತ್ತೆ||

ಕುಸಿದು ಬಿತ್ತೊ ನಿನ್ನ ಹೆಚ್ಚಿನ ಕರುಣಾ
ಹಾ ಖುದಾ ಧನ್ಯನು ಧನ್ಯನೋ ನಾನಾ||

ಮೇಳ : ಹಾಯಲ್ಲಾ ನಿನ್ನಂಥೋರಿನ್ನೊಬ್ಬರಿಲ್ಲಾ
ಅಲ್ಲಾ ಹೊ ಅಕಬರ ನೀ ಹೌದು ಮೌಲಾ||

ಅಲೀಬಾಬಾ : ಬಾರಮ್ಮಾ ಭೈರವಿ, ಬಾರೊ ರಾಕಣ್ಣಾ
ಬಾ ನನ್ನ ಮರಿಕತ್ತೆ ಬಾ ನನ್ನ ಚಿನ್ನ

ಬೆಳ್ಳಿ ಬೇಡ, ಚಿಲ್ಲರೇನೂ ಬೇಡ, ಭಾರವಾಗುತ್ತದೆ. ಆಭರಣ ಬೇಡ, ಯಾರ್ಯಾರ್ದಿದೆಯೊ! ಆದರೂ ಒಂದೆರಡಿರಲಿ, ಬೇಗಮ್‌ಗೆ, ಭೈರವಿಗೆ. ಈ ಹಾರ ಮಾತ್ರ ಮರಿಕತ್ತೆಗೆ, ಸಾಕು. ಉಳಿದದ್ದೆಲ್ಲ ಚಿನ್ನದ ನಾಣ್ಯದ ಮೂಟೆ!

(ಕತ್ತೆಗಳ ಮೇಲೆ ಅವಸರದಿಂದ ಬಂಗಾರದ ನಾಣ್ಯದ ಮೂಟೆ ಹೇರುವನು)

ಭೈರವಿಗೆ ಎರಡು ಮೂಟೆ, ರಾಕಣ್ಣಂಗೆರಡು, ಮರಿಗೊಂದು, ನನಗೊಂದು ಸಾಕು. ಅತಿಯಾಸೆ ಗತಿಗೇಡು. ಬನ್ನಿ ಬನ್ನಿ………………

(ನಾಣ್ಯದಮೂಟೆಯ ಮೇಲೆ ಸೌದೆ ಹೇರಿ
ಖುದಾ ಕಾ ಕಸಂ
ಹಸನ್ಕಾ ಹುಕುಂ
ಖುಲ್ಜಾ ಸೇಸಮಿ
ಎಂದು ಕೂಗುತ್ತಾನೆ. ಬಂಡೆ ತೆರೆದೊಡನೆ ಹೊರಡುತ್ತಾನೆ.)