(ರಸ್ತೆ. ಮರ್ಜೀನಾ ದಾಟುತ್ತಿರಬೇಕಾದರೆ ಸಲೀಂ ಬೆನ್ನು ಹತ್ತುತ್ತಾನೆ. ಸ್ವಲ್ಪ ಹೊತ್ತು ಓಡಾಡಿದ ಮೇಲೆ ತರುಬುತ್ತಾನೆ.)
ಸಲೀಂ : ಈ ದಿನ ನೀನು ಖಡಾಖಂಡಿತವಾಗಿ ನಿನ್ನ ನಿರ್ಧಾರವನ್ನು ಹೇಳಲೇಬೇಕು.ಹೇಳೋತನಕ ನಾ ಬಿಡೋದೇ ಇಲ್ಲ.
ಮರ್ಜೀನಾ : ಹೇಳಿಯಾಗಿದೆಯಲ್ಲ-ಇಲ್ಲಾ ಇಲ್ಲಾ ಇಲ್ಲಾ ಅಂತ.
ಸಲೀಂ : ನೀ ಹೇಳಬೇಕಾದ್ದು ಇಲ್ಲಾ ಅಂತಲ್ಲ; ಆಗಲಿ ಅಂತ.
ಮರ್ಜೀನಾ : ಅದು ಸಾಧ್ಯವಿಲ್ಲ.
ಸಲೀಂ : ಯಾಕಿಲ್ಲ? ಮನುಷ್ಯ ಮನಸ್ಸು ಮಾಡಿದರೆ ಏನೂ ಮಾಡಬಹುದು.
ಮರ್ಜೀನಾ : ನಾ ಮನಸ್ಸು ಮಾಡೋದಿಲ್ಲ.
ಸಲೀಂ : ನೀನು ಮನಸ್ಸು ಮಾಡದಿದ್ದರೆ ನಾ ನೇಣು ಹಾಕ್ಕೋತೀನಿ.
ಮರ್ಜೀನಾ : ಹಾಕ್ಕೊ.
ಸಲೀಂ : ವಿಷ ತಗೋತೀನಿ.
ಮರ್ಜೀನಾ : ತಗೊ.
ಸಲೀಂ : ಚೂರಿಯಿಂದ ಇರಿದುಕೊಳ್ಳತೀನಿ.
ಮರ್ಜೀನಾ : ನಿನ್ನಿಷ್ಟ.
ಸಲೀಂ : ಹಾಯಲ್ಲಾ! ಎಂಥಾ ಕಲ್ಲೆದೆಯವಳು ನೀನು! ತಗೋ. ತಗೋ ಈ ಚೂರಿ. ನಾ ಸಾಯ್ತಾ ಇರೋದು ನಿನಗಾಗಿ. ನೀನೇ ಕೊಲ್ಲು. (ಅವನ ಒತ್ತಾಯದಿಂದ ಚೂರಿ ಕೈಯಲ್ಲಿ ಹಿಡಿದುಕೊಳ್ಳುವಳು.) ತಾಳು, ತಾಳು; ಒಂದು ಪ್ರೇಮಗೀತೆ
ರಚನೆ ಮಾಡಿದೀನಿ; ಅದನ್ನ ಕೇಳಿಯಾದ ಮೇಲೆ ಕೊಲ್ಲು, (ಜೇಬಿನಿಂದ ಕಾಗದ ತೆಗೆದು ಅದರಲ್ಲಿಯ ಪದ್ಯ ಓದುವನು.)
ಓ! ಪ್ಯಾರೇ ಮರ್ಜೀನಾ! ಪ್ಯಾರ ಕರತಾ ಹೂ ಮೈ ನಿನ್ನಾ||
ಮರ್ಜೀನಾ : (ಒಳಗೊಳಗೆ ನಗುತ್ತ) ಛೀ!
ಸಲೀಂ : ಯಾಕೆ. ಚೆನ್ನಾಗಿಲ್ಲವಾ? ಹಾಗಿದ್ದರೆ ಈಗ ಕೇಳು;
ಮೈ ಪ್ಯಾರೇಹೂ ಕರತಾ ನಿನ್ನ ಪ್ಯಾರ ಮರ್ಜೀನಾ ಓ! ||
ಮರ್ಜೀನಾ : (ಮೆಚ್ಚುಗೆಯಿಂದ ಆದರೆ ಹೊರಗೆ ಅಸಹ್ಯಭಾವನೆ ಪ್ರಕಟಿಸುತ್ತ) ಛೀ ಛೀ!
ಸಲೀಂ : ಹಾಗಿದ್ದರೆ ಇದನ್ನ ಕೇಳು;
ಓ! ನಿನ್ನಾ ಪ್ಯಾರೇ ಮರ್ಜೀನಾ ||
ಪ್ಯಾರ ಕರತಾ ಹೂ ಮೈ ನಿನ್ನಾ ||
(ಭಾವುಕನಾಗಿ ತನ್ನ ಕಾವ್ಯ ತಾನೇ ಮೆಚ್ಚುತ್ತ ಕಣ್ಣುಮುಚ್ಚಿ ಮತ್ತೆ ಮತ್ತೆ ಹೇಳುತ್ತಾನೆ. ಇದೇ ಸಂದರ್ಭವೆಂದು ಮರ್ಜೀನಾ ನಗುತ್ತಾ ಓಡುತ್ತಾಳೆ. ಕಣ್ದೆರೆದಾಗ ಮರ್ಜೀನಾ ಇಲ್ಲದ್ದನ್ನು ಗಮನಿಸಿ ಹುಡುಕುತ್ತ ಮರೆಯಾಗುತ್ತಾನೆ. ಫಾತಿಮಾ ಪಾವು ಹಿಡಿದುಕೊಂಡು ಬಂದು ಮೇಳದ ನಾಯಕನನ್ನು ಕೇಳುತ್ತಾಳೆ.)
ಫಾತಿಮಾ : ಅಯ್ಯಾ ನನ್ನ ಯಜಮಾನನನ್ನು ನೋಡಿದೀಯಾ?
ಮೇಳದ ನಾಯಕ : ಈಗಷ್ಟೇ ಇಲ್ಲಿ ಯಾರೋ ಒಬ್ಬ ಹುಡುಗೀ ಬೆನ್ನು ಹತ್ತಿ ಓಡಾಡ್ತಿದ್ದ.
ಅಕೋ ಅವನೇ ಇರಬಹುದಾ ನೋಡಿ!
(ಖಾಸೀಂ ಬರುವನು. ಫಾತಿಮಾ ಬಳಿಗೆ ಹೋಗಿ)
ಖಾಸೀಂ : ಅರೇ, ನೀನ್ಯಾಕಿಲ್ಲಿಗೆ ಬಂದೆ ಬೇಗಂ?
ಫಾತಿಮಾ : ಥೂ ಹಲ್ಕಾ!
ಖಾಸೀಂ : ಸುರುವಾಯ್ತೋ! ಲೇ ಲೇ ರಸ್ತೇಲಿದ್ದೇವಿ. ಇಲ್ಲೇನಾದರೂ ಬೈದರೆ ನಿನ್ನ ಮೂಳೆ ಮುರೀತೀನಿ.
ಫಾತಿಮಾ : ನನ್ನ ಮೂಳೆ ಮುರೀತೀಯೇನೊ ಭಡವಾ? ನಿನ್ನ ಚರ್ಮಾ ಸುಲೀತೀನಿ.
ಖಾಸೀಂ : ನಿನ್ನ ಸಿಗದ ಹಾಕ್ತೀನಿ.
ಫಾತಿಮಾ : ನಿನ್ನ ಮಣ್ಣೊಳಗ ಹುಗೀತೀನಿ.
ಖಾಸೀಂ : ಥೂ! ಗಂಡನಿಗೆ ಸಾರ್ವಜನಿಕ ರಸ್ತೆಯೊಳಗೆ ಹೀಗೆಲ್ಲಾ ಬೈತೀಯೇನೇ? ಥೂ ಥೂ ನಮ್ಮ ಮದುವೆ ಮಾಡಿದ ಇಮಾಮ ಸತ್ತುಹೋಗಲಿ.
ಫಾತಿಮಾ : ನಮ್ಮ ಮದುವೆ ನೋಡಿದ ಹಿರೇರೆಲ್ಲಾ ಹಾಳಾಗಿಹೋಗಲಿ.
ಖಾಸೀಂ : ಲೇ, ಲೇ ನನ್ನ ಮದುವೆ ಮಾಡಿಕೊಳ್ಳಬೇಕಾದರೆ ಪುಣ್ಯ ಮಾಡಿರಬೇಕು ಕಣೇ.
ಫಾತಿಮಾ : ಹೌದು ಹೌದು, ದಿನಾ ನನ್ನ ಪ್ರಾಣ ತಿಂತೀಯಲ್ಲ, ಅದಕ್ಕೆ.
ಖಾಸೀಂ : ತಿಂತೀನಿ, ಕುಡೀತೀನಿ. ನೀ ಯಾರೇ ಕೇಳೋದಕ್ಕೆ?
ಫಾತಿಮಾ : ಅಯೋಗ್ಯ. ಸಾಲದಕ್ಕೆ ಯಾರ್ದೋ ಹುಡುಗೀ ಬೆನ್ನು ಹತ್ತಿದ್ದೆಯಂತೆ!
ಖಾಸೀಂ : ಈ ಸುಳ್ಳಿಗೆ ನೀನು ಹತ್ತೇಟು ತಿನ್ನಬೇಕಾಯ್ತು.
ಫಾತಿಮಾ : ಹೆದರ್ತೀನಂದುಕೊಂಡ್ಯೇನೊ ಬೇಕೂಫಾ? ಹೊಡೆಯೋ ಧೈರ್ಯ ಇದ್ದರೆ ಹೊಡಿ, ನೋಡ್ತೀನಿ.
ಖಾಸೀಂ : ಈ ಮಾತಿಗೆ ಐದು. ಒಟ್ಟು ಹದಿನೈದಾಯ್ತು. ನಿನಗೆ ಶಕ್ತಿ ಇರೋದು ಹದಿನೈದೇಟು ಸಹಿಸಲಿಕ್ಕೆ ಮಾತ್ರ. ಇವತ್ತಿನ ಖೋಟಾ ಇಷ್ಟೆ. ತಯಾರಾಗು. (ಗುರಿ ಹಿಡಿದು ಅವಳ ಬಳಿಗೆ ಹೋಗಿ ಎಣಿಸುತ್ತ ಹೊಡೆಯ ತೊಡಗುವನು) ಕೆಟ್ಟ ಹೆಂಗಸೆ, ಇಷ್ಟು ಆಸ್ತಿ ಕೊಟ್ಟೆ ಒಂದು, ಚಿನ್ನ ಕೊಟ್ಟೆ ಎರಡು, ಬೆಳ್ಳಿ ಕೊಟ್ಟೆ ಮೂರು. ಮತ್ತೆ ಒದರಾಡ್ತೀಯೇನೆ? ನಾಲ್ಕು, ಎಷ್ಟು ಕೊಟ್ಟರೂ ಐದು, ನಿನಗೆ ತೃಪ್ತಿ ಇದೆಯೇನೆ? ಆರು. ಅಯೋಗ್ಯಳೇ ಏಳು…………..
(ಮೇಳದ ನಾಯಕ ನಡುವೆ ಬಂದು ತಡೆಯುವನು.)
ಮೇಳದ ನಾಯಕ : ಏ ಏ ಏ, ದನ ಬಡಿದ ಹಾಗೆ ಹೆಂಡ್ತೀನ್ನ ಬಡೀತೀಯಾ, ಅಯೋಗ್ಯ ನಿನಗೆ ನಾಚ್ಕೆ ಆಗೋದಿಲ್ಲವೇನೊ?
ಫಾತಿಮಾ : ಅವ ಗಂಡ, ನಾ ಹೆಂಡತಿ. ಅವ ಬಡೀತಾರೆ, ನಾ ಬಡಿಸ್ಕೋತೀನಿ. ಮಧ್ಯೆ ನೀ ಯಾರೊ ಕೇಳೊದಕ್ಕೆ?
ಖಾಸೀಂ : ಅವಳಣ್ಣನಾ ತಮ್ಮನಾ?
ಮೇಳದ ನಾಯಕ : ಯಾರೂ ಅಲ್ಲ.
ಫಾತಿಮಾ : ನಾವು ಗಂಡ ಹೆಂಡತಿ ಜಗಳಾಡಿದರೆ ನಿಮ್ಮ ಅಪ್ಪಂದೇನು ಗಂಟು ಹೋಯ್ತು?
ಮೇಳದ ನಾಯಕ : ಏನಿಲ್ಲ.
ಫಾತಿಮಾ : ಅವ ನನಗೆ ಏಟು ಹಾಕಿದರೆ ನಿನ್ನ ಮೈ ನೋಯುತ್ತಾ?
ಮೇಳದ ನಾಯಕ : ಇಲ್ಲ.
ಫಾತಿಮಾ : ಮತ್ತ್ಯಾಕೆ ನಮ್ಮಿಬ್ಬರ ಮಧ್ಯೆ ನಿನ್ನ ಹೊಲಸು ಮೂಗು ತೂರಿಸಿದೆ?
ಖಾಸೀಂ : ದಂಪತಿಗಳ ಸುಂದರವಾದ ಜಗಳಕ್ಕೆ ಯಾಕೆ ಭಂಗ ತಂದೆ?
ಫಾತಿಮಾ : (ಮೇಳದ ನಾಯಕನನ್ನ ಹೊಡೆಯುತ್ತ) ದಡ್ಡನ್ನ ತಂದು
ಖಾಸೀಂ : (ಹೊಡೆಯುತ್ತ) ಮೂರ್ಖನ್ನ ತಂದು.
ಫಾತಿಮಾ : (ಹೊಡೆಯುತ್ತ) ದರಿದ್ರನ್ನ ತಂದು.
ಖಾಸೀಂ : (ಹೊಡೆಯುತ್ತ) ಅಯೋಗ್ಯನ್ನ ತಂದು.
ಮೇಳದ ನಾಯಕ : (ಹೊಡೆತ ತಾಳದೆ) ಅಯ್ಯಯ್ಯೋ ತಪ್ಪಾಯ್ತು. ತಪ್ಪಾಯ್ತು. ಕ್ಷಮಿಸಬೇಕು, ದಯಮಾಡಿ ನನ್ನ ಬಿಟ್ಟು ಬಿಡಿ. ಅಯ್ಯಾ ಸ್ವಾಮೀ, ನಿನ್ನ ಹೆಂಡ್ತೀನ್ನ ಮನಸ್ಸು ತೃಪ್ತಿ ಆಗೋತನಕ ಹೊಡೆದು, ಚರ್ಮಾ ಸುಲಿದು, ಸಾಯಿಸು. ನಾ ಕೇಳೋದಿಲ್ಲ. ಯಾರಾದರೂ ಜಗಳ ಬಿಡಿಸಲಿಕ್ಕೆ ಬಂದರೆ, ಅವರನ್ನೂ ದೂರದಲ್ಲೇ ತಡೆಹಿಡೀತೀನಿ. ಸುರುಮಾಡಿ. (ಹೊರಡುವನು.)
ಖಾಸೀಂ : ಏ ಬಾರೋ ಇಲ್ಲಿ.
(ಮೇಳದ ನಾಯಕ ಬರುವನು.)
ಇನ್ನು ಮೇಲೆ ನಾವು ಜಗಳಾಡಿದರೆ ಸುಮ್ಮನೆ ಇರ್ತೀಯಾ?
ಮೇಳದ ನಾಯಕ : ಹೌದು, ದೇವರಾಣೆ.
ಖಾಸೀಂ : ಗಂಡ ಹೆಂಡತಿ ಜಗಳಾಡಿದರೆ ಸುಮ್ಮನೆ ನಿಂತುಕೊಂಡು ನೋಡೋನು ನೀನೊಬ್ಬ ನಾಗರಿಕನೇನೊ?
ಫಾತಿಮಾ : ಹೊಡೆದಾಡ್ರಿ ಅಂತೀಯಲ್ಲಾ, ನೀನೊಬ್ಬ ಸಭ್ಯನೇನೊ?
ಖಾಸೀಂ : ಅಯೋಗ್ಯ (ಹೊಡೆಯುವನು)
ಫಾತಿಮಾ : ಅಸಭ್ಯ (ಹೊಡೆಯುವಳು)
ಖಾಸೀಂ : ದಡ್ಡ (ಹೊಡೆಯುವನು)
ಫಾತಿಮಾ : ದಬಕ (ಹೊಡೆಯುವಳು)
(ಹೊಡೆತ ತಾಳದೆ ಮೇಳದ ನಾಯಕ ಓಡಿಹೋಗುವನು.)
ಖಾಸೀಂ : ಆಯ್ತಲ್ಲ ಬೇಗಂ. ಇನ್ನು ಒಪ್ಪಂದ ಮಾಡಿಕೊಳ್ಳೋಣ………?
ಫಾತಿಮಾ : ಹೂ ಇಷ್ಟೆಲ್ಲಾ ಏಟು ತಿಂದ ಮೇಲೆ-
ಖಾಸೀಂ : ಛೇ ಛೇ ದಿನಕ್ಕೆ ಹದಿನೈದೇಟು ಹೆಚ್ಚಲ್ಲ. ಗಂಡ ಹೆಂಡತಿ ಮಧ್ಯೆ ಏಟಿನ ವ್ಯವಹಾರ ಇಲ್ಲದಿದ್ದರೆ, ಪ್ರೀತಿ ಸೊರಗಿ ಹೋಗುತ್ತಲ್ಲವಾ? ಹೇಳು, ಹಾಸಿಗೆ ಬಿಟ್ಟು ಯಾಕೆ ಬಂದೆ? ನಾನೇ ಅಲ್ಲಿಗೆ ಬಮದು ಹೊಡೀತಿರಲಿಲ್ಲವಾ?
ಫಾತಿಮಾ : ಯಾವ್ದೋ ಹುಡುಗೀ ಬೆನ್ನು ಹತ್ತಿದ್ದೆಯಂತೆ………….
ಖಾಸೀಂ : ಛೇ ಛೇ. ಮರ್ಜೀನಾಳನ್ನ ನಮ್ಮ ಸಲೀಂ ಬೆನ್ನು ಹತ್ತಿದ್ದನ್ನು ನೋಡಿ ನಾನೇ ಅಂತ ನಿನಗನ್ನಿಸಿದೆ.
ಫಾತಿಮಾ : ನಿನ್ನನ್ನ ಕರಕೊಂಡು ಬರೋದಕ್ಕೆ ಮುರ್ಗೀನ್ನ ಕಳಿಸಿದ್ದೆ. ತಡ ಆಯ್ತು ಅಂತ ನಾನೇ ಬಂದೆ. ನನ್ನ ಕೈಯಲ್ಲೇನಿದೆ ನೋಡು.
ಖಾಸೀಂ : ಪಾವು.
ಫಾತಿಮಾ : ವಾಸನೆ ಬಂತಾ?
ಖಾಸೀಂ : ಇಲ್ಲವಲ್ಲ.
ಫಾತಿಮಾ : ಮತ್ತೆ ಯಾಕೆ ಜಂಬ ಕೊಚ್ಚಿಕೊಳ್ತಿ?-ಚಿನ್ನ ಎಲ್ಲಿದ್ದರೂ ನನಗೆ ವಾಸನೆ ಬರ್ತದೆ-ಅಂತ. ಇಕ್ಕಾ, ನೋಡು:
(ಪಾವಿನ ಬುಡ ತೋರಿಸುವಳು. ಅಲ್ಲಿ ಬಂಗಾರದ ನಾಣ್ಯಗಳು ಅಂಟಿಕೊಂಡಿವೆ.)
ಖಾಸೀಂ : ಮಾ ಶಾ ಅಲ್ಲಾ!
(ಲಬಕ್ಕನೆ ಕಸಿಯುವನು.) ಅಸಲಿ, ಅಸಲಿ ಚಿನ್ನ! ಎಲ್ಲಿ ಸಿಕ್ಕಿತು? ಹ್ಯಾಗೆ ಸಿಕ್ಕಿತು? ಬೇಗ್ಹೇಳು ಬೇಗಂ…….
ಫಾತಿಮಾ : ನಿನ್ನ ತಮ್ಮ ಅಲೀಬಾಬ ತಂದಿದಾನೆ!
ಖಾಸೀಂ : ಅಲೀಬಾಬಾ! ಛೇ, ಬಡವ. ಹೊತ್ತು ಹೊತ್ತಿಗೆ ರಾಗೀ ಹಿಟ್ಟಿಲ್ಲ. ಇನ್ನು ಚಿನ್ನದ ನಾಣ್ಯಗಳು!…………
ಫಾತಿಮಾ : ಹುಚ್ಚುಚ್ಚಾರ ಆಡಬೇಡ. ಅವನೇ ತಂದದ್ದು. ಎಲ್ಲಿ ಸಿಕ್ಕಿದೆಯೋ! ಅದೂ ಮೂಟೆಗಟ್ಟಲೆ! ಎಣಿಸಲಾರದೆ ಪಾವಿನಿಂದ ಅಳಿತಾರಂದರೆ ಮಾ ಶಾ ಅಲ್ಲಾ! ಹೋಗಿ ವಿಷಯ ತಿಳ್ಕೋಬೇಕು. ಹೇಳಿದರೆ ಸೈ, ಇಲ್ಲದಿದ್ದರೆ ರಾಜರಿಗೆ ಹೇಳ್ತೀನಿ ಅಂತ ಹೆದರಿಕೆ ಹಾಕು.
ಖಾಸೀಂ : ಹೊರಟೆ, ಹೊರಟೆ ಇಕೋ ಹೊರಟೆ. (ಹೊರಡುವನು.)
?�aoe`) X# ospace:none’>ಏನ ನೋಡಲಿ ಕಣ್ಣು ಸಾಲsವು ಮತ್ತೆ
ಎಷ್ಟಂತ ಒಯ್ಯಲಿ ಬರಿ ಮೂರೆ ಕತ್ತೆ||
ಕುಸಿದು ಬಿತ್ತೊ ನಿನ್ನ ಹೆಚ್ಚಿನ ಕರುಣಾ
ಹಾ ಖುದಾ ಧನ್ಯನು ಧನ್ಯನೋ ನಾನಾ||
ಮೇಳ : ಹಾಯಲ್ಲಾ ನಿನ್ನಂಥೋರಿನ್ನೊಬ್ಬರಿಲ್ಲಾ
ಅಲ್ಲಾ ಹೊ ಅಕಬರ ನೀ ಹೌದು ಮೌಲಾ||
ಅಲೀಬಾಬಾ : ಬಾರಮ್ಮಾ ಭೈರವಿ, ಬಾರೊ ರಾಕಣ್ಣಾ
ಬಾ ನನ್ನ ಮರಿಕತ್ತೆ ಬಾ ನನ್ನ ಚಿನ್ನ
ಬೆಳ್ಳಿ ಬೇಡ, ಚಿಲ್ಲರೇನೂ ಬೇಡ, ಭಾರವಾಗುತ್ತದೆ. ಆಭರಣ ಬೇಡ, ಯಾರ್ಯಾರ್ದಿದೆಯೊ! ಆದರೂ ಒಂದೆರಡಿರಲಿ, ಬೇಗಮ್ಗೆ, ಭೈರವಿಗೆ. ಈ ಹಾರ ಮಾತ್ರ ಮರಿಕತ್ತೆಗೆ, ಸಾಕು. ಉಳಿದದ್ದೆಲ್ಲ ಚಿನ್ನದ ನಾಣ್ಯದ ಮೂಟೆ!
(ಕತ್ತೆಗಳ ಮೇಲೆ ಅವಸರದಿಂದ ಬಂಗಾರದ ನಾಣ್ಯದ ಮೂಟೆ ಹೇರುವನು)
ಭೈರವಿಗೆ ಎರಡು ಮೂಟೆ, ರಾಕಣ್ಣಂಗೆರಡು, ಮರಿಗೊಂದು, ನನಗೊಂದು ಸಾಕು. ಅತಿಯಾಸೆ ಗತಿಗೇಡು. ಬನ್ನಿ ಬನ್ನಿ………………
(ನಾಣ್ಯದಮೂಟೆಯ ಮೇಲೆ ಸೌದೆ ಹೇರಿ
ಖುದಾ ಕಾ ಕಸಂ
ಹಸನ್ಕಾ ಹುಕುಂ
ಖುಲ್ಜಾ ಸೇಸಮಿ
ಎಂದು ಕೂಗುತ್ತಾನೆ. ಬಂಡೆ ತೆರೆದೊಡನೆ ಹೊರಡುತ್ತಾನೆ.)
Leave A Comment