(ಕ್ರಿ.ಶ. ೧೮೪೭-೧೯೨೨) (ಟೆಲಿಫೋನ್)

ಅಲೆಕ್ಯಾಂಡರ್ ಗ್ರಹಾಂ ಬೆಲ್ ೧೮೪೭ರಲ್ಲಿ ಎಡಿನ್ ಬರ್ಗ್‌ನಲ್ಲಿ ಜನಿಸಿದರು. ತಾಯಿ ಕಿವುಡಿ. ತಂದೆ ಕಿವುಡ ಮಕ್ಕಳಿಗೆ ಶಿಕ್ಷಣ ನೀಡುವ ವಿಶೇಷಜ್ಞ. ಅಂತಲೇ ತನ್ನ ಕಿರಿಯ ವಯಸ್ಸಿನಿಂದಲೇ ಬೆಲ್ ಕಿವುಡರಿಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ. ತಾಯಿ-ತಂದೆ ಸಂ. ರಾ. ಅಮೆರಿಕಕ್ಕೆ ಹೋದಾಗ ಅಲೆಕ್ಯಾಂಡರ್ ಗ್ರಹಾಂ ಬೆಲ್ ಕೂಡ ಅವರೊಡನೆ ಹೋಗಬೇಕಾಯಿತು. ಟೆಲಿಫೋನಿನ (ದೂರವಾಣಿ) ಸಂಶೋಧನೆ ಮಾಡಿರುವುದು ಇವರ ಒಂದು ಅದ್ಭುತ ಸಾಧನೆ.

೧೮೭೫ರಲ್ಲಿ ಟೆಲಿಗ್ರಾಫ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಲು ಬೆಲ್ ತಮ್ಮ ಸಹಾಯಕ ವಾಟ್ಸನ್ ರ ಜತೆ ಕಾರ್ಯ ಮಾಡುತ್ತಿದ್ದರು. ಒಂದು ಕೊನೆಯಲ್ಲಿ ಕಾರ್ಯತತ್ಪರರಾಗಿದ್ದ ವಾಟ್ಸ್ ನ್ ಅಕಸ್ಮಾತ್ ತಪ್ಪು ಮಾಡಿದರು. ಕ್ಲ್ಯಾಂಪಿಂಗ್ ಸ್ಕ್ರೂ ತುಂಬ ಬಿಗಿಯಾಗಿತ್ತು. ಅದರ ಸಂಪರ್ಕ ವ್ಯವಸ್ಥೆಯಲ್ಲಿ ಒಂದಿಟ್ಟು ದೋಷ ಉಂಟಾಯಿತು. ತಂತಿಯ ಇನ್ನೊಂದು ಕೊನೆಯಲ್ಲಿದ್ದ ಬೆಲ್ ಗೆ ಸಂಪರ್ಕ ಸಾಧನ ಬೀಳುವ ಸದ್ದು ಕೇಳಿ ಬಂತು. ಒಡನೆಯೆ ಅವರು ಮತ್ತೆ ಮತ್ತೆ ಸದ್ದು ಬರುವ ಹಾಗೆ ಪ್ರಯೋಗಗಳನ್ನು ಮಾಡುವುದರಲ್ಲಿ ತೊಡಗಿದರು. ಕೊನೆಗೂ ಅವರು ೧೮೭೬, ಮಾರ್ಚ್ ೬ ರಂದು ತನ್ನ ಸಹೋದ್ಯೋಗಿಯ ಜತೆ ತಂತಿಯ ಮಾಧ್ಯಮದ ಮೂಲಕ ಮಾತನಾಡುವಲ್ಲಿ ಸಫಲರಾದರು. “ವಾಟ್ಸನ್ ಇಲ್ಲಿ ಬನ್ನಿ. ನಿಮ್ಮ ಅಗತ್ಯವಿದೆ” ಎಂದು ಬೆಲ್ ಹೇಳಿದರು. ಇದೇ ಟೆಲಿಫೋನ್‌ನಲ್ಲಿ ಮಾಡಿದ ಪ್ರಥಮ ಸಂಭಾಷಣೆ.

ಅಲೆಕ್ಯಾಂಡರ್ ಗ್ರಹಾಂ ಬೆಲ್ ತಮ್ಮ ಸಂಶೋಧನೆಗೆ ಪೇಟೆಂಟ್‌ಅನ್ನೂ ಪಡೆದರು. ಇಂದು ಟೆಲಿಫೋನ್ ವ್ಯವಸ್ಥೆಯಲ್ಲಿ ತುಂಬ ಅಭಿವೃದ್ಧಿಯನ್ನು ಸಾಧಿಸಲಾಗಿದೆ. ಸಂಪರ್ಕ ವ್ಯವಸ್ಥೆಯಲ್ಲಿ ಅದು ಮಹತ್ವದ ಪಾತ್ರ ವಹಿಸುತ್ತಿದೆ. ಜಗತ್ತಿನ ಒಂದು ಮೂಲೆಯಲ್ಲಿರುವ ವ್ಯಕ್ತಿ ಇನ್ನೊಂದು ಮೂಲೆಯಲ್ಲಿರುವ ವ್ಯಕ್ತಿಯ ಜತೆ ತಂತಿಯ ಮೂಲಕ ನೇರವಾಗಿ ಮಾತನಾಡುವುದು ಸಾಧ್ಯವಾಗಿರುವುದರ ಖ್ಯಾತಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ರಿಗೆ ಸಲ್ಲುತ್ತದೆ. ಅಲೆಕ್ಯಾಂಡರ್ ಗ್ರಹಾಂ ಬೆಲ್ ೧೯೨೨ರಲ್ಲಿ ನಿಧನ ಹೊಂದಿದರು.