ಅಲೆಮಾರಿಗಳ ಸಾಮಾಜಿಕ ಪರಂಪರೆಯನ್ನು ಕುರಿತು ಪ್ರೊ. ಕುರುವ ಬಸವರಾಜು ಅವರು ಸ್ಥೂಲವಾಗಿ ತಮ್ಮ ಪ್ರಬಂಧವನ್ನು ಮಂಡಿಸಿದರು. ಪ್ರೊ. ಬಸವರಾಜ ಮಲಶೆಟ್ಟಿರವರು ಕಾಲ ಬದಲಾವಣೆಯಿಂದ ಕಲೆಗಳು ಕೈಬಿಟ್ಟು ಹೋಗುತ್ತಲಿವೆ / ಹೋಗಿವೆ ಎಂದು ಬಹಳ ದುಃಖದಿಂದಲೂ, ಸಂತಾಪದಿಂದಲೂ ಹೇಳಿದರು. ನಿಜವಾಗಿ ಬದಲಾವಣೆಯು ನಿಸರ್ಗದ ನಿಯಮ. ಸಮಾಜ ಬಯಸದಿದ್ದರೂ ಅದು ಕಾಲಕ್ಕೆ ತಕ್ಕ ಹಾಗೆ ಬದಲಾವಣೆ ಆಗುತ್ತಲೇ ಇರುತ್ತದೆ. ನಿಸರ್ಗ ನಿಯಮದಂತೆ ಸಮಾಜವು ಬದಲಾಗುತ್ತ ಬಂದು ಬೇರೆ ಬೇರೆ ಮೌಲ್ಯಗಳನ್ನು ಪಡೆದುಕೊಂಡು ತನ್ನಷ್ಟಕ್ಕೆ ತಾನೆ ಅದು ರೂಪುಗೊಳ್ಳುತ್ತದೆ.

ದೇಶಕ್ಕೆ ಸ್ವಾತಂತ್ರ ಬಂದ ಮೇಲೆ ಎಂದು ಕಾಣದ ಬದಲಾವಣೆ ಸಮಾಜ ಕಂಡು ಕೊಂಡಿದೆ. ಧಾರ್ಮಿಕ, ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕವಾಗಿ ನಾಗಲೋಟದಿಂದ ಮುನ್ನಡೆದು ಹೊಸ ಆಯಾಮದತ್ತ ಮುಖಮಾಡಿ ಕಾಲ ಪರಿವರ್ತನೆಯಾದದ್ದನ್ನು ಇಂದು ನಾವು ನೀವು ನೋಡುತ್ತಿದ್ದೇವೆ. ಇದಕ್ಕೆ ದೇಸಿಯ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಹೊರತಾಗಿಲ್ಲ. ಇಂದು ವಿಜ್ಞಾನ ಎಲ್ಲದರ ಮೇಲೆಯೂ ತನ್ನ ಕ್ಷಕಿರಣ ಬೀರಿ, ಹೊಸ ಆಯಾಮಾದತ್ತ ಕೈ ಮಾಡಿ ಕರೆಯುತ್ತಲಿದೆ, ಸಮಾಜ ಅದಕ್ಕೆ ಹೂಗುಡುತ್ತಲಿದೆ, ಸ್ಪಂದಿಸುತ್ತಲಿದೆ. ಕಾಲ ಕ್ರಮೇಣದಲ್ಲಿ ಅನಕ್ಷರಸ್ಥರಾಗಿದ್ದ ಅಲೆಮಾರಿಗಳು ಇಂದು ಸಾಕ್ಷರರಾಗಿದ್ದಾರೆ. ಅಲ್ಪಸ್ವಲ್ಪ ಜನರು ಹಿಂದೆ ಅವರಿಂದಲೇ ಈ ನೆಲದ ಮೇಲೆ ಪ್ರದರ್ಶನಗೊಳ್ಳುತ್ತಿದ್ದು ದೇಸಿಯ ಕಲೆ, ಸಾಹಿತಯ್ ಇಂದು ಸುಸಂಸ್ಕೃತದ ಮಡಿಲಲ್ಲಿ ಬಿದ್ದು ದೂರದರ್ಶನ, ಆಕಾಶವಾಣಿಗಳಂತಹ ಸಮೂಹ ಮಾಧ್ಯಮಗಳಲ್ಲಿ ಅತ್ಯಂತ ರಮ್ಯವಾಗಿ ಪ್ರದರ್ಶನಗೊಳ್ಳುತ್ತಲಿವೆ. ಜನ ಈ ಪ್ರದರ್ಶನಗಳನ್ನು ತಮ್ಮ ತಮ್ಮ ಮನೆಯ ಪಡಸಾಲೆಯಲ್ಲಿಯೇ ದೂರದರ್ಶನದ ಮುಂದೆ ಕುಳಿತು ನೋಡುತ್ತಿದ್ದಾರೆ. ಕೇಳುತ್ತಿದ್ದಾರೆ. ದೇಸಿಯ ಕರಕುಶಲ ಪರಂಪರೆ ಇಂದಿಗೂ ಉಳಿದುಕೊಂಡು ಬಂದಿರುವುದು ಗಮನಾರ್ಹ ವಾದ ಸಂಗತಿ. ಅದನ್ನು ಬಸವರಾಜ ಮಲಶೆಟ್ಟಿರವರು ಲಂಬಾಣಿರವರ ಬಾಳು, ಬದುಕು, ಅವರ ಒಂದು ಮೋರಂಜನೆಯೊಂದಿಗೆ ತಾಳ ಹಾಕುತ್ತ ತುಂಬಾ ಸೊಗಸಾಗಿ ಹೇಳಿದರು. ನಿಜವಾಗಿ ಲಂಬಾಣಿ ಜನರು ತಮ್ಮತನವನ್ನು ಕಳೆದುಕೊಂಡಿಲ್ಲ. ಅವರಲ್ಲಿ ಕಲಿತವರು ತಮ್ಮ ವೇಷಭೂಷಣದಲ್ಲಿ ಸ್ವಲ್ಪ ಬದಲಾಗಿರಬೇಕು. ಆದರೆ ಕಲಾವಿದರ ಅದೇ ಬಟ್ಟೆ, ಅದೇ ಭಾಷೆ, ಅದೇ ಸಂಸ್ಕೃತಿಯನ್ನ ಬೆಳೆಸಿಕೊಂಡು ಬರುತ್ತಿದ್ದಾರೆ. ಇವತ್ತು ಮಾರಾಟದ ಮಳಿಗೆಯಲ್ಲಿಯೂ ಲಂಬಾಣಿ ಜನಾಂಗ ಹಾಕಿದಂತಹ ಕಸೂತಿಗಳನ್ನು ಪ್ರದರ್ಶನಕ್ಕೆ ಇಟ್ಟಾಗ ನೋಡುತ್ತೇವೆ ನಾವು, ಅಲ್ಲಿ ಉತ್ತಮವಾದಂತಹ ರೀತಿಯಲ್ಲಿ ಕನ್ನಡಿಯನ್ನು ಹಚ್ಚಿದ್ದು, ಅದರ ಸುತ್ತಮುತ್ತಲು ಅದನ್ನು ಚೆನ್ನಾಗಿ ಹೆಣೆದಿದ್ದು, ಅಲ್ಲಿ ಅಚ್ಚಿದ ಗೊಂಡೆ ರಮ್ಯವಾಗಿರುವಂತದ್ದು ಇವತ್ತಿಗೂ ಆ ಕಲೆ ಬೇಕಾಗಿದೆ.

ಇನ್ನೂ ಹಗಲುವೇಷಗಾರರು ಒಳ್ಳೆಯ ಕಲಾವಂತರು. ಇಡೀ ಕುಟುಂಬವೇ ಒಂದು ನಾಟಕದ ಪ್ರದರ್ಶನವನ್ನು, ಪ್ರಸಂಗವನ್ನು ಅವರು ದಿನಾಲು ಕೂಡಿಮಾಡಿಕೊಂಡು ಅಂದರೆ ಮನೆಯ ಎಲ್ಲಾ ಸದಸ್ಯರು, ಮಕ್ಕಳು ಹೆಣ್ಣು ಮಕ್ಕಳು, ಹಿರಿಯರು ಎಲ್ಲ ಭಾಗಿಯಾಗುತ್ತಾರೆ. ಒಬ್ಬರು ಧ್ವನಿ, ಮತ್ತೊಬ್ಬರು ತಾಳ, ಮಗದೊಬ್ಬರು ವೇಷ, ಇನ್ನೊಬ್ಬರಿಗೆ ಹೆಜ್ಜೆ. ಹೀಗೆ ಅವರ ಪ್ರದರ್ಶನ ಎಷ್ಟು ರಮ್ಯ. ಯಾವುದಾದರೊಂದು ಹಳ್ಳಿಗೆ ಬಂದು ವಿಶಾಲವಾದಂತಹ ಬಯಲಲ್ಲಿ ಅವರು ಪ್ರದರ್ಶನ ಮಾಡುತ್ತಾರೆ. ಅಂದ್ರೆ ಜನರು ಕಣ್ತೆರೆದು ನೋಡುತ್ತಿದ್ದರು. ಅಂತಹ ವೈಶಿಷ್ಟ್ಯಗಳು ಇಂದು ಕಣ್ಮತೆಯಾಗುತ್ತಲಿವೆ. ಈಗ ಮಲಶೆಟ್ಟಿಯಂತಹ ಜಾನಪದ ತಜ್ಞರು ಅದರಲ್ಲಿ ಹೆಚ್ಚು ಆಸಕ್ತಿ ಇರುವಂತವರು. ಅವರು ಸುಮಾರು ೧೪೯೭೫ನೇ ಇಸ್ವಿಯಿಂದ ಇಂತಹ ನೂರಾರು ಕಲೆಗಳನ್ನು ನೋಡಿದಂತವರು,ಅಧ್ಯಯನ ಮಾಡಿದಂತವರು. ಆದರೆ ಈ ಒಂದು ಕಲೆಯನ್ನು ವೈಶಿಷ್ಟ್ಯವಾಗಿ ಹಿಡಿದಿಡುವಂತಹ ಕೆಲಸವನ್ನು ಯಾಕೆ ಮಾಡಲಿಲ್ಲ ಅನ್ನುವುದು ನನ್ನ ಅಭಿಪ್ರಾಯ. ಕಾರಣ ಏನು? ವಿಶ್ವವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ ಇಂತಹ ಅಧ್ಯಯನಕಾರರಿಗೆ, ಇಂತಹ ಕಲೆಗಳನ್ನು ಉಳಿಸಿಕೊಳ್ಳುವುದಕ್ಕೆ ಸ್ವಲ್ಪ ಹಣ ಇರುತ್ತಿತ್ತು.ಇಂತಹ ಕಲೆಗಳನ್ನು ಮಾದರಿಯಾಗಿ ಆದರೂ ಯಾರು ಉಳಿಸಿಕೊಂಡಿಲ್ಲ. ಇವತ್ತು ವೇಷಗಾರರು ನಿಜವಾಗಿಅವರು ಜಗದ್‌ಜ್ಯೋತಿ ಬಸವಣ್ಣನಂತವರು, ಸಮಾಜವನ್ನು ಕಟ್ಟಬೇಕು ಅನ್ನುವಂತಹ ರೀತಿಯಲ್ಲಿ ಅವರೆಲ್ಲ ಬೆಳೆದುಕೊಂಡು ಬಂದಂತವರು ಆ ವೇಷಗಾರರು. ಒಂದು ಊರಿನಲ್ಲಿ ಮೊದಲಿಗೆ ಮೂರು ನಾಲ್ಕು ದಿವಸ ಪ್ರದರ್ಶನ ನೀಡಿ ಆಮೇಲೆ ಭಿಕ್ಷೆಯನ್ನು ಬೇಡುವಂತವರು. ಬೇಡುವಲ್ಲಿ ಜನರು ಕಾಡುತ್ತಿದ್ದುದಲ್ಲ, ಮನೋರಂಜನೆಯನ್ನು ಕಂಡು ಸಂತೋಷಗೊಂಡ ಜನರು ಅವರೇ ಕೊಡುತ್ತಿದ್ದರು. ಅದೇ ರೀತಿಯಾಗಿ ಬುಡಬುಡಕಿಯವರು ಸಹಿತ ಮೂರು ನಾಲ್ಕು ದಿವಸ ಗ್ರಾಮದಾಗ ಇದ್ದು ರಾತ್ರಿಯ ವೇಳೆಯಲ್ಲಿ ಹಕ್ಕಿ ಶಕುನ ಕೇಳಿ, ಬೆಳಿಗ್ಗೆ ಆ ಶಕುನವನ್ನು ಜನರ ಮನೆ ಮುಂದೆ ಬಂದು ಹೇಳುತ್ತಿದ್ದ. ಜನ ಅಂತಿದ್ದರೂ ಬುಡಬುಡಕಿಯವನ ಮಾತು ಬುಡತನಕ ಸುಳ್ಳು ಅಂತ ಹೇಳಿ. ಆದರೂ ಬುಡಬುಡಕಿಯವರು ಅದನ್ನು ಸಂಪೂರ್ಣ ನಂಬಿಕೊಂಡಿದ್ದರು.

ಬಲ ಬರುತೈತಿ ತಾಯಿ
ಬಲ ಬರುತೈತಿ ತಾಯಿ ಬಲ ಬಂದಾದ ತಾಯಿ ಅಂದ್ರೆ….’

ಅಂದ್ರೆ ಸಾಕು ನಮ್ಮ ಹಳ್ಳಿ ಜನರು ಹಿಗ್ಗಿ ಸಾಯುತ್ತಿದ್ದರು. ನಿಮ್ಮ ಕಾಡಾಟ ದೂರ ಆಯಿತು ಅಂದ್ರ ಸಾಕು ಅವರು ಸಂತೋಷ ಪಡುತ್ತಿದ್ದರು. ಹೀಗೆ ಹೇಳುವ ಜನ ಇಲ್ಲದ್ದಕ್ಕೆ ಇವತ್ತು ನಮ್ಮ ಹಳ್ಳಿಯ ರೈತರು ಸಾಯುತ್ತಿದ್ದಾರೆ ಅಂತ ನಾನು ಪ್ರಮಾಣ ಮಾಡಿ ಹೇಳುತ್ತೇನೆ. ಅವರಿಗೆ ಧೈರ್ಯ ಕೊಡುವವರು ಯಾರೂ ಇಲ್ಲ, ಅಲ್ಲಿ ಅವರಿಗೆ ಆ ಮೌಲ್ಯವನ್ನು ತಿಳಿಸಿ ಕೊಡುವವರು ಯಾರು ಇಲ್ಲ ಅಲ್ಲಿ. ಅದಕ್ಕಾಗಿ ಇವರೆಲ್ಲರೂ ಏನು ಮಾಡುತ್ತಿದ್ದರು ಅಂದ್ರೆ ಹೊಟ್ಟೆಯ ಹೊರೆಗಾಗಿ ಅಲೆದಾಡುತ್ತಿದ್ದಿಲ್ಲ ಇವರು. ಜ್ಞಾನ ಪ್ರಸಾರಕ್ಕಾಗಿ ಅಲೆದಾಡುತ್ತಿದ್ದರು. ನಮ್ಮ ಕಲೆಯನ್ನು ಜನರು ನೋಡಬೇಕು, ಮೆಚ್ಚಿಕೊಳ್ಳಬೇಕು. ಸಂತೋಷಪಡಬೇಕು ಅನ್ನುವಂತವರು ಇವರು. ನಮ್ಮ ಬುಡಬುಡಕಿಯವರು ಕಾಡಿ ಬೇಡಿದಂತವರಲ್ಲ. ಅವರಿಗೆ ‘ದಶರಿಪ್’ ಅಂತ ಕೊಡುತ್ತಿದ್ದರು.

ಇದೇ ರೀತಿಯಾಗಿ ಈ ಬಹುರೂಪಿದಾರರಲ್ಲಿಯೇ….. ಬಹುರೂಪಿ ಚೌಡಯ್ಯ “ನಾನು ಕಟ್ಟುವ ವೇಷಕ್ಕೆ, ಬಸವಣ್ಣನೆ ಸೂತ್ರದಾರ” ಅಂತ ಹೇಳಿದ ಒಂದು ಕಡೆ. ನೋಡ್ರಿ ಈ ಕಲಾಕಾರರು ಯಾವ ಬಸವಣ್ಣನವರು ಇಡೀ ಪ್ರಪಂಚಕ್ಕೆ ಹೊಸತನವನ್ನು ತಂದು ಕೊಡಬೇಕು ಅಂತ ಮಾಡಿದರಲ್ಲ. ಆ ಧ್ಯೇಯ ಧೋರಣೆಗಳನ್ನು ಅವರು ತಿಳಿದುಕೊಂಡಿದ್ದರು. ಅದಕ್ಕಾಗಿ ಅವರು ಕಲೆ ಪ್ರದರ್ಶನ ಮಾಡುತ್ತಿದ್ದರು ಹೊರತು ಕೈ ಚಾಚುತ್ತಿದ್ದಿಲ್ಲ. ಅವರು ನಿಜವಾಗಿ ಏನು ಆಗಿದ್ದರು ಅಂದ್ರ ನಾವು ಈಗ ಹೇಳುತ್ತಿರುವ ಮಾತು ನಾನು ಹೇಳುವುದಿಲ್ಲ. ದಕ್ಷಿಣದಲ್ಲಿ ಕುಳಿತ ಹಕ್ಕಿ ಹೇಳಿರುವಂತದ್ದು ಆವಾಗ ಜನ ನಂಬಿತ್ತಿದ್ದರು. ಈ ರೀತಿಯಾಗಿ ನಂಬಿಕೆ ಮನುಷ್ಯನಿಗೆ ಧೈರ್ಯ ಕೊಡುತ್ತಿತ್ತು. ಈ ಧೈರ್ಯವೇ ಅರಿವು. ಈ ಅರಿವೇ ಗುರುವಾಗಿ ಇರುತ್ತಿತ್ತು. ಈಗ ಮತ್ತೆ ದುರುಗಮುರುಗಿರವರ ಬಗ್ಗೆ ಮಾತನಾಡುವುದಾದರೆ ದುರುಗಮುರುಗಿಯನ್ನು ಆಡಿಸುವಂತವನು ಒಣಿಯೊಳಿಗೆ ಬಂದ್ರೆ ಸಾಕು ಲಡ್ಡು ಕಟಿಯುತ್ತಿದ್ದ ಅವ. ಆ… ಆ. ಆ…. ಅಂದರೆ ಸಾಕು. ಜನ ಎಲ್ಲಾ ಕೂಡುತ್ತಿತ್ತು. ಆ ಜನರು ಬರಿಗೈಲೆ ಬರುತ್ತಿರಲಿಲ್ಲ. ಕೈಯಲ್ಲಿ ಮರ ಹಿಡಿದುಕೊಂಡು, ಮರದ ಹಕ್ಕಿ, ಬೇಳೆ, ಜೋಳ, ಎಣ್ಣೆ, ಮೆಣಸಿನಕಾಯಿ, ಉಪ್ಪು ಇರುತ್ತಿತ್ತು. ಇವುಗಳನ್ನೆಲ್ಲ ಕೊಡುವ ಉದ್ದೇಶ ಅವನ ನಿತ್ಯ ಜೀವನಕ್ಕೆ ಅನುಕೂಲವಾಗಲಿ ಅಂತ ಹೇಳ ಜನ ಕೊಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಏನು ಮಾಡುತ್ತಿದ್ದರು ಅಂತ ಹೇಳಿದರೆ ಇನ್ನೂ ಜನರಲ್ಲಿ ದಾನದ ಗುಣ ಹೆಚ್ಚಿಸಲಿ ಅಂತ ಹೇಳಿ ಅವರು ಕೊಟ್ಟಿರುವಂತಹ ವಸ್ತುವನ್ನು ಕೈಯಲ್ಲಿ ಹಿಡಿದುಕೊಂಡು ತಾನ ತಂದಾನೆ… ಅಂತ ಹೇಳುತ್ತಾ ಇವರು ಕೊಟ್ಟಿದ್ದು ದಾನ ಅಂತ ಹೇಳುತ್ತಿದ್ದರು. ಈ ಕೊಂಚಿಗೆ ಗೌಡ್ರು ಕೊಟ್ಟಾರ ಅಂತ ಹೇಳಿದಾಗ ಜನರು ಸಂತೋಷಪಡುತ್ತಿದ್ದರು. ಈ ರೀತಿಯ ಮರ್ಮವನ್ನು ಅವರ ಪ್ರದರ್ಶನ ಕಲೆಗಳಲ್ಲಿ ಅಳವಡಿಸಿಕೊಂಡಿದ್ದರು ಅವರು. ಈ ರೀತಿಯಾಗಿ ಮರಗಮ್ಮ ಆಡಿಸುವವರಾಗಲಿ, ಬುಡಬುಡಕಿಯವರಾಗಲಿ, ವೇಷಗಾರರಾಗಲಿ, ಕೊರವಂಜಿಯರಾಗಲಿ, ಕಿನ್ನರಿ ಜೋಗಿಗಳಾಗಲೀ, ಇವರೆಲ್ಲರೂ ನಿಜವಾಗಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿ; ಬಂದಿದ್ದನ್ನು ಅವತ್ತೆ ತಿಂದು ಸಂತೋಷದಿಂದ ಇರುತ್ತಿದ್ದರು. ಏಕೆಂದರೆ ನಾಳೆ ದಿನ ಐತಿ, ನಾಳೆಗೆ ಮತ್ತೊಂದು ಊರ ಐತಿ, ನಮ್ಮ ಹತ್ತಿರ ಮತ್ತೊಂದು ಕಲೆ ಐತಿ, ಪ್ರದರ್ಶನ ಮಾಡಿ ತಿಂದರಾಯ್ತು ಎನ್ನುವ ಮನೋಭಾವನೆ ಗಟ್ಟಿಯಾಗಿತ್ತು. ಅದಕ್ಕಾಗಿ ಅವರು ಬಸವಣ್ಣ ಕಟ್ಟ ಬಯಸಿದ ನಿಜವಾದ ಜೀವಿಗಳು ಕಾಯಕ ಜೀವಿಗಳು ಅಂತ ಹೇಳುತ್ತೇನೆ. ಅವರಲ್ಲಿ ಕಟ್ಟಿ ಇಡಬೇಕು ಅನ್ನುವ ಅಪೇಕ್ಷಣೆ ಇಲ್ಲ. ಅದಕ್ಕಾಗಿ ನಿಜವಾದ ಆತ್ಮಜ್ಞಾನಿಗಳು ಆಗಿದ್ದರು. ಇಂತಹ ಆತ್ಮಜ್ಞಾನಿಗಳು ಮೊಟ್ಟ ಮೊದಲು ನಂಬಿಕೆಯನ್ನು ಮೂಡಿಸುವುದರಲ್ಲಿ ಗುರುವಾದರೂ, ಸತ್ಯವನ್ನು ಪ್ರಕಟಿಸುವುದಲ್ಲಿ ಲಿಮಗವಾದರು. ಎಲ್ಲರನ್ನು ಬದುಕಿಸಬೇಕು, ತಾವು ಬದುಕಬೇಕು ಎನ್ನುವ ನಿಜವಾದ ಜಂಗಮರೆ ಇವರು. ಜಂಗಮರಂತೆ ಸಕಲ ಹಿತವನ್ನು ಬಯಸುತ್ತಾರೆ. ಅದಕ್ಕಾಗಿ ಎಲ್ಲಾ ಕಲಾವಿದರು ಇವತ್ತು ಮೂಲೆ ಗುಂಪಾಗುತ್ತಿರುವುದು ದುರಾದೃಷ್ಟಕರ ಅಂತ ನಾನು ಹೇಳುತ್ತೇನೆ. ವಿಶ್ವವಿದ್ಯಾಲಯಗಳು ಇಂಥವರ ಸಾಹಿತ್ಯವನ್ನು ಸಂಗ್ರಹಿಸಿ ಮುದ್ರಿ ಇಟ್ಟರು. ಅದು ಒಳ್ಳೆಯ ಕೆಲಸ. ಆದರೆ ಕಲಾಕಾರರನ್ನು ಕಣ್ಣೆತ್ತಿ ಸಹ ನೋಡಲಿಲ್ಲ. ಸ್ಥಿತಿಗತಿಗಳನ್ನು ಕಣ್ಣಾರೆ ಕಾಣುವುದಕ್ಕೆ ಹೋಗಲಿಲ್ಲ ಇವರು. ಹಾಗೆ ಕಂಡಿದ್ದೆ, ಆದರೆ ಇವರಿಗೆ ತಕ್ಕ ನೆರವು ನೀಡಬೇಕು, ಈ ಕಲೆಯನ್ನು ಬದುಕಿಸಬೇಕು ಅನ್ನುವ ಅಂತಃಕರಣ ಬರುತ್ತಿತ್ತು. ಇವರು ಆ ಕೆಲಸವನ್ನೇ ಮಡಲಿಲ್ಲ. ದೊಡ್ಡ ದೊಡ್ಡ ಗ್ರಂಥಗಳನ್ನು ತಮ್ಮ ಹೆಸರಿನಲ್ಲಿ ಪ್ರಕಟ ಮಾಡಿಸಿಕೊಂಡರು. ಅವರದೇ ಸಾಹಿತ್ಯ ಅವರಿಂದ ಬಂದಿದ್ದು ಅಂತ ಅವರಿಗೆ ಮನವರಿಕೆಯಾಗಲಿಲ್ಲ. ನಿಜವಾಗಿ ಇವತ್ತು ಬಹಳ ದುಃಖದ ಸಂಗತಿಯನ್ನು ನಿಮಗೆ ಹೇಳುತ್ತೇನೆ. ವಿಜಪುರ ಜಿಲ್ಲೆ ಜಮಖಂಡಿಯಲ್ಲಿ ‘ಅಪ್ಪಲಾಲ’ ಅಂತ್ಹೇಳಿ ಸುಮಾರು ೪೦ ವರ್ಷಗಳಿಂದ ‘ಪಾರಿಜಾತ’ ಆಟ ಕಟ್ಟಿಕೊಂಡು ಕುಣಿದಾಡಿದ, ಇವತ್ತು ೭೫-೮೦ ವರ್ಷದ ಅಪ್ಪಲಾಲ ಇವತ್ತು ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದ್ದಾನೆ. ನಮ್ಮ ವಿದ್ವಾಂಸರು ಕೇಳಿ ತಕ್ಕ ನೆರವು ನೀಡಿ, ಡಾ. ಪಿ.ಕೆ.ಖಂಡೋಬಾ ಅವರಿಗೆ ಹೇಳುತ್ತೇನೆ. ನಾನು ನಮ್ಮಲ್ಲಿ ‘ಉಡುಜಾಣ’ದಲ್ಲಿ ಶಂಕರ ಕಟುಬರ್ ಮತ್ತು ಮಾರುತಿ ಕಟುಬರ್‌ರವರು ಉತ್ತಮವಾದ ಪ್ರದರ್ಶನಕಾರರು ಅವರು ಇವತ್ತು ಯಾವುದೇ ಸಹಾಯ ಸಿಗದೆ ಮೂಲೆಗುಂಪಾಗಿದ್ದಾರೆ. ತಕ್ಕನೆರವು ನೀಡಬೇಕ್ರಿ ಅವರ ನೋವನ್ನು ನನ್ನ ನೋವು ಅಂತ ಹೇಳಿ ಸಹಾಯ ಮಾಡಬೇಕು. ಹಾಗೆ ಮಾಡಿದರೆ ಕಲೆಗಳು ಮೂಲೆ ಸೇರುತ್ತಿರಲಿಲ್ಲ.

ಹಳ್ಳಿಗಳಿಗೆ ಹೋಗಿ ನೀವು ಬೇಕೂ ಅನ್ನುತ್ತಿವೆ. ಹಂತಿಯ ಪದಗಳು, ಕುಣಿತದ ಹಾಡುಗಳು ಕಣ್ಮರೆಯಾಗಿವೆ. ಬದಲಾಗಿ ನಿಜ. ಆದರೆ ಅವುಗಳನ್ನು ಬದುಕಿಸಬೇಕಾಗಿದೆ. ಅದಕ್ಕಾಗಿ ಇನ್ನೂ ಕಾಲ ಮಿಂಚಿಲ್ಲ, ಈಗಾಲಾದರೂ…… ಸಹಾಯ ಮಾಡಿ ಗೌರವವನ್ನು ಕೊಡಿ. ಇಲ್ಲಿ ಕಾಲೆತ್ತಿನ ಚಿತ್ರವನ್ನು ಕಟ್ಟುವುದರ ಬದಲು ಕಾಲೆತ್ತು ತಂದು ನಿಲ್ಲಿಸಿದರೆ ಎಷ್ಟು ಚಲೋ ಅನಿಸುತಿತ್ತಲ್ರಿ. ನಾನು ಕರೆದುಕೊಂಡು ಬರುತ್ತಿದ್ದೆ. ಜೀವಂತ ನಿದರ್ಶನಕ್ಕೆ ಇನ್ನೂ ಅದರ ಅವರು ಯಾಕೆ ಚಿತ್ರ ಹಾಕುತ್ತೀರಿ. ಬುಡಬುಡಕಿಯವರಾಗಲಿ, ಕೊರವಂಜಿಯವರಾಗಲಿ, ವೇಷಗಾರರಾಗಲಿ, ಲಂಬಾಣಿಗಳಾಗಲಿ, ಇವೆಲ್ಲವುಗಳು ಇನ್ನೂ ಮನಸ್ಸು ಮಾಡಿದರೆ ಅವು ಬೆಳೆಯುತ್ತವೆ. ಬೆಳೆಸುವುದರತ್ತ ಮನಸ್ಸು ಮಾಡಬೇಕು. ಜಾನಪದ ಯಕ್ಷಗಾನ ಅಕಾಡೆಮಿ, ಸಂಸ್ಕೃತಿ ಇಲಾಖೆ, ಸಾಹಿತ್ಯ ಪರಿಷತ್ತು ಮತ್ತು ಕನ್ನಡ ವಿಶ್ವವಿದ್ಯಾಲಯಗಳನ್ನು ಅದಕ್ಕಾಗಿ ತೆರೆದು ಬಿಟ್ಟಿದೆ ಯಾಕೆ? ಇವರು ಅವರತ್ತ ಗಮನ ಕೊಡುವುದಿಲ್ಲ. ದಯವಿಟ್ಟು ಇವರಲ್ಲಿ ಒಂದು ಮನವಿ, ಅದು ಅಂಗಾಯ್ತು, ಇಂಗಾಯ್ತು, ಅನ್ನುವುದಕ್ಕಿಂತ ಹಾಡಾಡಿಕೊಂಡು ಅಳುವುದರ ಬದಲಿ ನಗು ನಗುತ್ತ ಅವರನ್ನು ಬೆಳಸಿರಿ ಅಂತ ಹೇಳುತ್ತೇನೆ. ನಮ್ಮ ಶಿಷ್ಟ ಕವಿಗಳಿಗಿಂತ ಜನಪದ ಕವಿಗಳು ಬಹಳ ಶ್ರೇಷ್ಠ ಅನ್ನುವುದಕ್ಕೆ ಸೊಗಸಾದ ಹಾಡಿದೆ.

ಹುವಿನ ಹುದುಗ್ಯಾನ
ಮಾಲ್ಯಾಗ ಮಲಿಗ್ಯಾನ

ಮೊಗ್ಗ್ಯಾ ಕಣ್ಣು ತೆರೆದಾನ ಲಿಂಗಯ್ಯ
ಎದ್ದು ನೋಡುವಷ್ಠಿಗೆ ಬಯಲಾದ

ಏನು ಸಾಹಿತ್ಯ, ಏನು ಸೌಂದರ್ಯ, ಏನು ಇಲ್ಲಿಯ ದೃಷ್ಟಿ, ತಾಯಿ ತನ್ನ ಮಗ ಹೇಗೆ ಇರಬೇಕು ಅನ್ನವುದಕ್ಕೆ

ಆಚಾರಕ್ಕೆ ಅರಸನಾಗು
ನೀತಿಗೆ ಪ್ರಭುವಾಗು

ಮಾತಿನಲ್ಲಿ ಚೂಡಮಣಿಯಾಗು ! ನನ ಕಂದ
ಜ್ಯೋತಿಯಾಗು ಜಗಕೆಲ್ಲ!!

ಹೀಗೆ ಹೇಳುವ ಮಹಿಳೆ ಶಿಷ್ಟ ಕವಿಗಿಂತ ಕಡಿಮೆಯೆನಲ್ಲ. ಡಾಕ್ಟರ್ ಇಲ್ಲ, ಇಂಜಿನಿಯರ್ ಅಲ್ಲ. ಜ್ಯೋತಿಯಾಗು ಜಗಕ್ಕೆಲ್ಲ, ಅಂತ ನಮ್ಮ ಹಳ್ಳಿಯ ಗರತಿ ಹೇಳುತ್ತಾಳೆ. ನಿಜವಾಗಿ ಇಂದು ಸಮಾಜದ ಬದಲಾವಣೆ ಯೊಡನೆ ಅನೇಕ ಮೌಲ್ಯಗಳು ಕಣ್ಮರೆಯಾಗಿವೆ. ಅಕ್ಕ, ತಮ್ಮ, ತಂದೆ, ತಾಯಿ, ಬಂಧು ಬಳಗ ಎಲ್ಲೆಲ್ಲೂ ಆಗಿವೆ. ಹಿಂದೆ ಅದು ಸಾಧ್ಯವಿದ್ದಿಲ್ಲ. ಅಕ್ಕನ ಮನೆಗೆ ತಮ್ಮ ಬಂದಿದ್ದಾನೆ. ಅಕ್ಕನ ಮನೆಯಲ್ಲಿ ಸೊಸೆ ಇದ್ದ ಹಾಗೆ ಕಾಣುತ್ತದೆ. ಬಹುಶಃ ಅವಳ ಮಗಳನ್ನು ಅವನಿಗೆ ಕೊಡುವುದಿಲ್ಲ ಅಂತ ಅವನ ಕಿವಿಗೆ ಬಿದ್ದ ಹಾಗೆ ಕಾಣಿಸುತ್ತದೆ. ಅವ ಹೋಗಿ ಅಕ್ಕನ ಮನೆಯ ಪಡಸಾಲೆಯಲ್ಲಿ ಕುಳಿತುಕೊಂಡಿರುತ್ತಾನೆ. ಅಕ್ಕ ತಮ್ಮನಿಗಾಗಿ ಎಲ್ಲ ತರಹದ ಅಡಿಗೆ ಮಾಡಿರುತ್ತಾಳೆ. ಅದರೆ ಅವನು ಊಟ ಮಾಡುವುದಿಲ್ಲ ಬಹಳ ಸೊಗಸಾಗಿ ಎದೆಯ ನೋವನ್ನು

ಚಿನ್ನಿ ಸಕ್ಕರೆ ವಡ್ಡ ಹೆಣ್ಣೆ ಹೂವಳಗಿವಲ್ಲ
ಹೆಣ್ಣೆಂಬ ಶಬ್ದ ವಿಡುವಲ್ಲ ನನ ತಮ್ಮ
ಹೆಣ್ಣೆ ಕೊಡುತೀನಿ ನಿನಗ

ಈ ಆಸೆ, ಭಾಷೆ, ಈ ಆಕಾಂಕ್ಷೆ, ಮನಸ್ಸು ಕನಸು ಎಲ್ಲಿ ಕಾಣುತ್ತೇವೆ ಇವತ್ತು. ಆ ತಾಯಿ ಅಂದು ತನ್ನ ಮನಸ್ಸಿನ ವೇದನೆಯನ್ನ ಹಾಡಿನಲ್ಲಿ ಕಟ್ಟಿಕೊಟ್ಟಿದ್ದಾಳೆ. ಯಾವ ಕವಿಗೆ ಕಡಿಮೆ ಇಲ್ಲ. ನಮ್ಮ ಜನಪದರು ಯಾವುದೋ ಅಲಕ್ಷ್ಯದಿಂದ ಸುಳಿಯಂತೆ ಸುತ್ತಿಕೊಂಡು ಹೋದರು. ಅದೇನೆ ಇರಲಿ ಇವತ್ತು ಇಂತವರನ್ನು ಗುರುತಿಸುವ ಕೆಲಸ ಆಗಬೇಕು. ತಕ್ಕ ನೆರವು ನೀಡುವ ಕೆಲಸ ಆಗಬೇಕು. ಇವೆಲ್ಲವುಗಳು ಇದ್ದರೆ ಹಳ್ಳಿಗಳು ಬಾಳುತ್ತವೆ. ಭಾರತ ಬದುಕುತ್ತದೆ. ಇವತ್ತು ನಾವು ಎಲ್ಲರೂ Indian ಆಗಿದ್ದೇವೆ. ನಾವು ಭಾರತೀಯರಾಗಿದ್ದರೆ ನಳದ ನೀರು, ಅದೇ ನದಿ ನೀರು ಕುಡಿಯುತ್ತಿದ್ದೇವು. ೧೨ರೂ. ಕೊಟ್ಟು, ಬಾಟಲಿ ನೀರು ಕುಡಿಯುತ್ತಿರಲಿಲ್ಲ. ಬಾಟಲಿ ನೀರು ಕುಡಿದರೆ ಭಾರತೀಯರು ಬಹಳ ದಿವಸ ಬಾಳುವುದಿಲ್ಲ. ಅಂತ ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೇನೆ.

ಜೈ ಹಿಂದ್

ಲಿಪ್ಯಂತರ : ಚಂದ್ರಪ್ಪ ಸೊಬಟಿ

* * *