. ಪೀಠಿಕೆ

ಆದಿವಾದಿ ಕೃತಿಗೆ ಬರೆಯುತ್ತಾ ನೆಹರೂಜಿಯವರು ಹೇಳಿದ ಮಾತಿನ ಬಗ್ಗೆ ಇಂದು ಆಲೋಚಿಸಬೇಕಾಗಿದೆ. ಆದಿವಾಸಿಗಳ ಸಂಸ್ಕೃತಿ ಉಳಿಸುತ್ತಾ ಅವರಿಗೆ ಆಧುನಿಕತೆಗೆ ಸಂಧಿಸುವುದನ್ನು ಹೇಳಲು ಸುಲಭವಾದರೂ ತರುವುದು ತುಂಬ ಶ್ರಮದಾಯಕವಾದ ಕೆಲಸವಾಗಿದೆ. ಇವೆರಡರ ಕೆಲಸ ಆದಿ ಅಂತ್ಯಗಳು ಕೊಡಿಸುವುದಾಗಿದೆ. ಆದರೂ ಇದು ಮುಖ್ಯವಾದ ಕೆಲಸ. ಆಗಲೇಬೇಕಾದದ್ದು, ಮಾಡಲೇಬೇಕಾದದ್ದು.

ಪ್ರಾದಿಮ ಜಗತ್ತು ಅನಾಗರಿಕ ಜಗತ್ತಿನಿಂದ ಕೂಡಿದ್ದು, ಆಧುನಿಕ ಜಗತ್ತು ನಾಗರಿಕ ಜ್ಞಾನ ವಿಜ್ಞಾನ ತಂತ್ರಜ್ಞಾನದಿಂದ ಕೂಡಿದ್ದು. ಇವೆರಡರ ಸಂಗಮ ಪೂರ್ವ-ಪಶ್ಚಿಮಗಳ ಮಿಲನ. ಕಂಬಳಿ ಬಣ್ಣಗಳ ಸಮಿಶ್ರಣ ಅನೇಕತೆಯಲ್ಲಿ ಏಕತೆ ತರುವುದು. ಬೇರಿನಿಂದಲೇ ಮರ ಬೆಳೆದು ಹಣ್ಣು ಹಣ್ಣಾಗುವುದು. ಶ್ರೀಶೈಲ ಮಲ್ಲಿಕಾರ್ಜುನನ ದೇವಾಲಯದ ಶಿಖರ ನಿಲ್ಲುವುದು ತಳೆದ ಅಡಿಪಾಯದ ಕಲ್ಲಿನಿಂದ.

ಜಗತ್ತಿನ ತುಂಬ ಇರುವ ಇಂದಿನ ಆಧುನಿಕ ಜನರ ಮೂಲವಂಶದವರು ಬೇರೆ ಬೇರೆ ಖಂಡಗಳ ಅಲೆಮಾರಿ ಜನಾಂಗಗಳು. ಇವತ್ತಿನ ರೇಶ್ಮೆ ಬಟ್ಟೆ, ಜಮಖಾನಿ, ಕಾಶ್ಮಿರಿ ಉಲನ್‌ಶಾಯಿ, ಪಲ್ಲಂಗ ಮಂಚ ಬರಲು ಅಂದಿನ ರಗಟ, ಕೌದಿ, ಬಾಣನಸಿ ಅಂಗಿ, ಕಂಬಳಿ, ಹೆಣದು ಮೂಲವಾಗಿವೆ. ನಿನ್ನೆಯಿಂದ ಇಂದು, ಇಂದಿನಿಂದ ನಾಳೆ, ನಾಳೆಯಿಂದ ವಾರ, ವಾರದಿಂದ ತಿಂಗಳು, ತಿಂಗಳಿಂದ ವರುಷ, ವರುಷದಿಂದ ಶತಮಾನ, ಶತಮಾನಗಳಿಂದ ಯುಗಯುಗಗಳು.ಅಂದಿನಿಂದ ಇಂದಿನ ತನಕ ಬಂದುದು ಇಂದಿನಿಂದ ಮುಂದಿನ ತನಕ, ಮುಂದಿನಿಂದ ಎಂದೆಂದಿನತನಕ ಕಾಲ, ದೇಶ, ಜನಾಂಗಗಳು ಬರುವುದಾಗಿದೆ.

. ಜಗತ್ತಿನ ಪ್ರಮುಖ ಬುಡಕಟ್ಟು (ಸಂಸ್ಕೃತಿಗಳಿಗೆ ಕೆಳಗಿನ ಅಂಶಗಳನ್ನು ಸ್ಥೂಲವಾಗಿ ಗುರುತಿಸಬಹುದಾಗಿದೆ)

. ಮಾನವ ಜನಾಂಗಗಳ ಘಟ್ಟಗಳು

೧. ಗಿಡದ ಬೇರು ಹಣ್ಣಿನಿಂದ : ಆದಿಮಾನವ

೨. ಬೇಟೆಯಿಂದ : ಬುಡಕಟ್ಟಿನ ಮಾನವ

೩. ಹೈನುಗಾರಿಕೆಯಿಂದ : ಪಶುಪಾಲನೆ ಮಾನವ

೪. ಒಕ್ಕಲುತನದಿಂದ : ಗ್ರಾಮೀಣ ಮಾನವ

೫. ಯುದ್ಧ ಕೋಟೆ ಕೊತ್ತಳೆಗಳಿಂದ : ಐತಿಹಾಸಿಕ ಮಾನವ

೬. ಜ್ಞಾನ ವಿಜ್ಞಾನ ತಂತ್ರಜ್ಞಾನದಿಂದ : ಆಧುನಿಕ ಮಾನವ

. ಬುಡಕಟ್ಟುಗಳ ಸಂಸ್ಕೃತಿಗಳು

ದಕ್ಷಿಣ ಆಫ್ರಿಕಾದ ಈಥೋಪಿಯಾದ ಲಲಾನೆ ಎನ್ನಲಾಗಿದೆ. ಜಗತ್ತಿನ ಮಹಾ ತಾಯಿ, ಮೂಲ ತಾಯಿ. ಆಕೆಯಿಂದ ವಿಶ್ವದಾದ್ಯಂತ ಬೆಳೆಯುತ್ತಾ ಹೋದ ಸಂಸ್ಕೃತಿಗಳು ಹೀಗಿವೆ:

೧. ಈಜಿಪ್ತ್ ಸಂಸ್ಕೃತಿ : ಹತ್ತು ಸಾವಿರ ವರುಷದ ಹಿಂದೆ

೨. ಮೆಸಪೊಟೊಮಿಯ ಸಂಸ್ಕೃತಿ : ಆರು ಸಾವಿರ ವರುಷದ ಹಿಂದೆ

೩. ಬೆಬಲೋನಿಯ ಸಂಸ್ಕೃತಿ : ಮೂರು ಸಾವಿರ ವರುಷದ ಹಿಂದೆ

೪. ಗ್ರೀಕ್ ಸಂಸ್ಕೃತಿ : ಮೂರು ಸಾವಿರ ವರುಷದ ಹಿಂದೆ

೫. ಚೈನಾ ಸಂಸ್ಕೃತಿ : ಮೂರು ಸಾವಿರ ವರುಷದ ಹಿಂದೆ

೬. ಸಿಂಧು ಸಂಸ್ಕೃತಿ : ಮೂರು ಸಾವಿರ ವರುಷದ ಹಿಂದೆ

೭. ರೋಮ್ ಮತ್ತಿತರ ಸಂಸ್ಕೃತಿಗಳು : ಎರಡು ಸಾವಿರ ವರುಷದ ಹಿಂದೆ

. ದೇಶಕ್ಕೆ ಹೊರಗಿನಿಂದ ಬಂದ ಬುಡಕಟ್ಟುಗಳು

ಈಗಿನಂತೆ ಭೂಮಿ ಖಂಡ ತುಂಡವಾಗಿರದೆ ಅಖಂಡವಾಗಿದ್ದಾಗ ಆಹಾರಕ್ಕಾಗಿ ಆದಿವಾಸಿ ಜನ ಖಂಡದಿಂದ ಖಂಡಕ್ಕೆ ಹೋಗುತ್ತಿದ್ದರು, ಬರುತ್ತಿದ್ದರು. ಈ ದೇಶಕ್ಕೆ ಹೊರಗಿನಿಂದ ಬಂದವರಲ್ಲಿ ಪ್ರಮುಖರು.

೧. ಆಸ್ಟ್ರೇಲಿಯಾ ಖಂಡದಿಂದ ಕೋಲ್, ಮುಂಡಾ, ಗೂಂಡಾ ಜನಾಂಗಗಳು ಗುಡ್ಡಗವಿ, ಹೊಳೆ ನದಿ ಬದಿಗೆ ನೆಲೆಸಿದರು.

೨. ಸ್ವಿಟ್ಜರ್‌ಲ್ಯಾಂಡಿನ ಆಲ್ಫಸ್ ಪರ್ವತದಿಂದ ದ್ರಾವಿಡರು ಬಂದು ಸಿಂಧು ನದಿ ತೀರ ಸೇರಿ ಹರಪ್ಪ ಮೆಹೆಂಜೊದಾರೋ ಸಂಸ್ಕೃತಿ ನಿರ್ಮಿಸಿದರು.

೩. ಮಧ್ಯ ಏಷಿಯಾದಿಂದ ಬಿಸಿ ಗಾಳಿಗೆ ಹೆದರಿ ಆರ್ಯರು ನಾಲ್ಕು ಪಂಗಡಗಳಾಗಿ ೧. ಗ್ರೀಕ್‌ಗೆ, ೨. ಇರನ್ ಇರಾಕಿಗೆ, ೩. ಇಂಡಿಯಾಕ್ಕೆ, ೪. ರಷಿಯಾ ಚೈನಾಕ್ಕೆ ಬಂದು ನೆಲೆಸಿದರು. ಇಂಡಿಯಾಕ್ಕೆ ಬಂದ ಆರ್ಯರು ದ್ರಾವಿಡರನ್ನು ಯುದ್ಧದಲ್ಲಿ ಸೋಲಿಸಿ ದಕ್ಷಿಣಕ್ಕೆ ಓಡಿಸಿ ಉತ್ತರ ಭಾರತವನ್ನು ಹಿಡಿದರು.

ಹೀಗೆ ಕ್ರಮೇಣ ಜಗತ್ತಿನ ಬೇರೆ ಬೇರೆ ಖಂಡಗಳ ಬುಡಕಟ್ಟಿನ ಜನ ಬಂದು ಬಂದು ನೆಲೆಸುತ್ತಾ ಭಾರತದ ತುಂಬ ಪಸರಿಸುತ್ತಾ ಹೋಯಿತು.

. ಆಧುನಿಕತೆಗೆ ಸಂಧಿಸುವುದು

೧. ಬುಡಕಟ್ಟು ಜನರು ಮುಂದೆ ಅಲೆಮಾರಿಗಳಾದರು. ಈ ಜನರ ನಡೆನುಡಿ, ರೂಢಿ, ಸಂಪ್ರದಾಯ, ಆಚಾರ-ವಿಚಾರ, ಆಹಾರ-ವಿಹಾರ, ನಂಬುಗೆ, ವಿಶ್ವಾಸ, ಪ್ರೀತಿ, ಪೂರ್ಣಸೌಹಾರ್ದಭಾವ ಮನುಷ್ಯ ಸಂಬಂಧಗಳ ವಿಶ್ಲೇಷಣೆ, ವಿವರಣೆ, ವಿಮರ್ಶೆ, ಸಂಶೋಧನೆ ಮಾಡುವುದು.

೨. ಈ ಅಲೆಮಾರಿ ಜನಾಂಗದಲ್ಲಿದ್ದ ಮೌಢ್ಯ ಸಮಾಜ ಕನಿಷ್ಠ ಅನಾಚಾರಗಳನ್ನು ತೆಗೆದು ಹಾಕುವುದು.

೩. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸುವುದು. ಪ್ರಕೃತಿಯಂತೆ ಮುಕ್ತವಾಗಿ ಬೆಳೆಸುವುದು.
ಉದಾ: ಜಿಫ್ಸಿ ಜನಾಂಗದಂತೆ ತರದ ಹೃದಯದವರಾಗಿ ಇರುವುದು.

೫. ಲಂಬಾಣಿಗಳು ಅಣ್ಣ ಸತ್ತಾಗ ಅಣ್ಣನ ಹೆಂಡತಿಗೆ ವಿಧವೆಯನ್ನಾಗಿ ಮಾಡಿದರೆ ಗೋಳಿನ ಬಾಳು ನೀಡದೆ ತಮ್ಮ ಮಾಡಿಕೊಳ್ಳುವುದು.

೬. ಮುಂಡರು ಆರಂಭದಲ್ಲಿ ಮದುವೆ ಮಾಡಿಕೊಳ್ಳದೆ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಆದ ಮೇಲೆ ಕೊನೆಯಲ್ಲಿ ಮುಪ್ಪಿನ ಕಾಲದಲ್ಲಿ ಗಂಡ ಹೆಂಡತಿಯಾಗಿ ಶುದ್ಧವಾಗಿ ಪ್ರಾಮಾಣಿಕವಾಗಿ ಬಾಳುವೆ ಮಾಡಿದವರು, ಮದುವೆ ಮಾಡಿಕೊಳ್ಳುವುದು.

೭. ಕೋಲ್ ಗೊಂಡರು ವಿಧವಿನಾಂಗ, ಗಂಡ ಬಿಟ್ಟವರಿಗೆ ಮಧ್ಯ ರಾತ್ರಿಯಲ್ಲ ಉಡುಗೆ ಮಾಡಿಕೊಳ್ಳುವುದು.

೮. ಹಣೆಬರೆಹ ಕರ್ಮ, ದೈವ, ಪುನರ್ಜನ್ಮ ಚಾತುರ್ವರ್ಣ್ಯ, ತರತಮ, ಶ್ರೇಣೀಕೃತ ಭಾವನೆ ತಗಣ ಹಾಗೆ ಪ್ರಕೃತಿಯಂತೆ ಸತ್ಯ ಶುದ್ಧರಾಗಿ ಬದುಕುವುದು.

. ಬುಡಕಟ್ಟುಗಳ ಏಳಿಗೆಗಾಗಿ

೧. ನಾಗರಿಕ ಜನರಿಂದ ನಡೆಯುವ ಶೋಷಣೆ ನಿಲ್ಲಿಸುವುದು.

೨. ಶಿಕ್ಷಣ, ಸಂಘಟನೆ, ಹೋರಾಟ, ಅಂಬೇಡ್ಕರ ತತ್ವದಡಿಯಲ್ಲಿ ಬೆಳೆಸುವುದು.

೩. ಇವರ ಕಲೆಗಳಿಗೆ, ಉದ್ಯೋಗಗಳಿಗೆ, ಜನರ ಮಾತೃ ಸರಕಾರದಿಂದ, ವಿಶ್ವವಿದ್ಯಾಲಯ, ಅಕಾಡೆಮಿ, ಶಾಲೆ ಕಾಲೇಜು, ಸಂಘ ಸಂಸ್ಥೆಗಳಿಂದ ನೆರವು, ಧನಸಹಾಯ, ಗೌರವ ಧನ, ಸಾಲ, ಮಾಶಾಸನ, ಪ್ರಶಸ್ತಿ ಪದವಿ ನೀಡುವುದು.

೪. ಇವರ ಬದುಕಿನ ಮೇಲೆ ನಿಂತು ಆಧುನಿಕ ಜೀವನದ ಸಂಬಂಧ ಮಹತ್ವ ಹೊಸ ಹೊಳಹುಗಳ ಸೌಲಭ್ಯಗಳೊಂದಿಗೆ ವಿಶ್ಲೇಷಿಸುವುದು.

೫. ಈ ಜನತೆಯಲ್ಲಿರುವ ಬಡತನ, ದುಶ್ಚಟ ತೆಗೆದು ಹಾಕಿ, ಸಾಕ್ಷರರನ್ನಾಗಿ ಮಾಡಿ ಉದ್ಯೋಗ ನೀಡುವುದು.

೬. ಇವರ ಸಣ್ಣ ಕೈಗಾರಿಕೆಗಳಿಗೆ ಸರಕಾರ ನೆರವು ನೀಡಿ ಕೈಗಾರಿಕೋದ್ಯಮ ಸ್ಥಾಪಿಸುವುದು.

೭. ರಾಜ್ಯ ಮತ್ತು ಕೇಂದ್ರ ಸರಕಾರಗಳು ಇವರ ಏಳಿಗೆಗಾಗಿ ನಿಗಮಗಳು ಸ್ಥಾಪಿಸುವುದು.

೮. ಆಧುನೀಕರಣ ಇವರ ಏಳಿಗಾಗಿ ಮುಕ್ತ ಮನಸ್ಸಿನವರಾಗುವುದು.

೯. ಸರಕಾರ ಇವರ ಸಾಮಾನ್ಯ ಅವಶ್ಯ ಕಲೆಗಳಾದ ಕೋಟಿ ಕಟೆದಾ ಮತ್ತು ವಶಾನದ ವ್ಯವಸ್ಥೆ ಮಾಡುವುದು.

* * *