ಪ್ರಪಂಚದ ಭೂಪಟದಲ್ಲಿ ಭಾರತಕ್ಕೊಂದು ವಿಶಿಷ್ಟ ಸ್ಥಾನಮಾನ ತಂದುಕೊಟ್ಟದ್ದು ಮಾಹಿತಿ ತಂತ್ರಜ್ಞಾನ. ಕಳೆದ ಕೆಲ ವರ್ಷಗಳಲ್ಲಿ ಈ ಕ್ಷೇತ್ರ ಬೆಳೆದಿರುವ ವೇಗ ಅಗಾಧವಾದದ್ದು.

ಈ ಬೆಳವಣಿಗೆಯ ಜೊತೆಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಉದ್ಯೋಗಾವಕಾಶಗಳೂ ಹೆಚ್ಚುತ್ತಿವೆ. ಬಿಸಿನೆಸ್ ಇಂಟೆಲಿಜೆನ್ಸ್, ಅನಿಮೇಷನ್, ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್, ಗೇಮಿಂಗ್, ಟೆಕ್ನಿಕಲ್ ರೈಟಿಂಗ್ ಮುಂತಾದ ಅನೇಕ ಹೊಸ ಅವಕಾಶಗಳು ಐಟಿ ಕ್ಷೇತ್ರದಲ್ಲಿ ಸೃಷ್ಟಿಯಾಗಿವೆ.

ಇಂತಹ ಅವಕಾಶಗಳನ್ನು ಕನ್ನಡದ ಓದುಗರಿಗೆ ಪರಿಚಯಿಸಲು ನಾನು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಈ ಪುಸ್ತಕ.

ಈ ಅಂಕಣದ ಹುಟ್ಟಿಗೆ ಕಾರಣಕರ್ತರಾದ ಗೆಳೆಯ ಶ್ರೀ ವಿನೋದ್ ಕುಮಾರ್ ನಾಯ್ಕ್, ಈ ಅಂಕಣದ ಮೂಲಕ ಓದುಗರನ್ನು ತಲುಪಲು ಅವಕಾಶ ಕೊಟ್ಟ ವಿಜಯ ಕರ್ನಾಟಕ ಪತ್ರಿಕೆ, ಅಂಕಣವನ್ನು ಓದಿ ಮೆಚ್ಚಿಕೊಂಡು ಬೆನ್ನುತಟ್ಟಿದ ಓದುಗರು, ಈ ಪುಸ್ತಕವನ್ನು ಪ್ರಕಟಿಸು ತ್ತಿರುವ ಭಾರತೀ ಪ್ರಕಾಶನದ ಶ್ರೀ ಬಿ. ಎನ್. ಶ್ರೀನಿವಾಸ್, ಮುನ್ನುಡಿ ಬರೆದುಕೊಟ್ಟ ಡಾ. ಯು. ಬಿ. ಪವನಜ, ಆಕರ್ಷಕ ಮುಖಪುಟ ರಚಿಸಿದ ಅಪಾರ – ಇವರೆಲ್ಲರಿಗೂ ನನ್ನ ಕೃತಜ್ಞತೆಗಳು.

ಟಿ. ಜಿ. ಶ್ರೀನಿಧಿ
srimysore@gmail.com