೧. ಕಾಲದಿಂದ ಉಂಟಾದ ಶರೀರದ ವಿಶೇಷ ಧರ್ಮ; ಬಾಲ್ಯ, ಕೌಮಾರ್ಯ, ಯೌವನ ಮೊದಲಾದ ದೇಹದ ವಿಶೇಷ ಧರ್ಮ.

೨. ಸ್ಥಿತಿ, ಇರುವಿಕೆ.

೩. ಕಾಲಕೃತವಾದ ಪರಿಣಾಮ; ಈ ಅವಸ್ಥೆಯು (ಭಾವ ವಿಕಾರವು) ಜಾಯತೇ, ಅಸ್ತಿ, ವರ್ಧತೇ, ವಿಪರಿಣಮತೇ, ಅಪಕ್ಷೀಯತೇ, ನಶ್ಯತಿ ಎಂದು ಆರು ವಿಧವೆಂಬ ಯಾಸ್ಕರ ಅಭಿಪ್ರಾಯ. ‘ಅವಿದ್ಯಾಸ್ಮಿತಾ ರಾಗದ್ವೇಷಾಭಿನಿವೇಶಾಃ’ ಎಂದು ಐದು ವಿಧವೆಂದು ಯೋಗಶಾಸ್ತ್ರದಲ್ಲಿ ಉಕ್ತವಾಗಿರುವುದು. ‘ಅನಾಗತಾವಸ್ಥಾ, ಅಭಿವ್ಯಕ್ತ್ಯವಸ್ಥಾ, ಅತಿರೋಹಿತಾವಸ್ಥಾ’ ಹೀಗೆ ಮೂರು ವಿಧವೆಂದು ಸಾಂಖ್ಯರ ಅಭಿಪ್ರಾಯ.

(ಸಂಸ್ಕೃತ – ಕನ್ನಡ ಶಬ್ದಕೋಶ: ಪುಟ ೨೩೧ – ಸಾಹಿತ್ಯ ವಿದ್ವಾನ್‌ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯ)