ಸುಮಾರು ಮೂವತ್ತು ದಿನಗಳ ಕಾಲ ಈ ಕಾದಂಬರಿ ನನ್ನಿಂದ ಬರೆಸಿಕೊಂಡಿದೆ. ಪ್ರತಿ ದಿನದ ಕಂತನ್ನೂ ದಾನವೆಂಬಂತೆ ಪಡೆಯುತ್ತ ನಾನು ಬರೆದ ಕ್ರಿಯೆ ನನಗೆ ಕೊಟ್ಟ ಸುಖದಲ್ಲಿ ಸ್ವಲ್ಪವಾದರೂ ನಿಮಗೆ ಸಿಕ್ಕರೆ ನಾನು ಕೃತಾರ್ಥನಾದಂತೆ. ನನ್ನ ಪ್ರಿಯ ಮಿತ್ರ ಕೆ. ವಿ. ಸುಬ್ಬಣ್ಣ ಈ ಕೃತಿಯನ್ನು ತಮ್ಮ ಅಕ್ಷರ ಮಾಲೆಯಲ್ಲಿ ಪ್ರಕಟಿಸುತ್ತಿದ್ದಾರೆ. ಅವರಿಗೆ ನಾನು ಕೃತಜ್ಞ.

ಯು. ಆರ್. ಅನಂತಮೂರ್ತಿ