ಕಾವ್ಯದ ಸಂಪಾದನೆ ಮತ್ತು ಸಂಗ್ರಹಕ್ಕೆ ಸ್ಫೂರ್ತಿ ನೀಡಿ ಪ್ರೇರೇಪಿಸಿದ ಹೆಸರಾಂತ ಜಾನಪದ ವಿದ್ವಾಂಸರೂ ಮಾನ್ಯ ಕುಲಪತಿಗಳೂ ಆದ ಡಾ. ಎಚ್‌. ಜೆ. ಲಕ್ಕಪ್ಪಗೌಡ ಅವರಿಗೆ, ಪುಸ್ತಕ ಪ್ರಕಟಣೆಗೆ ಆಡಳಿತಾತ್ಮಕ ಅನುಮೋದನೆ ನೀಡುವಲ್ಲಿ ನೆರವಾದ ಮಾನ್ಯ ಕುಲಸಚಿವರಾದ ಡಾ. ಕೆ. ವಿ. ನಾರಾಯಣ ಅವರಿಗೆ,

ಈ ಕಾವ್ಯವನ್ನು ಅಚ್ಚುಕಟ್ಟಾಗಿ ಮೂರು ದಿನಗಳವರೆಗೆ ಹಾಡಿ ಅನೇಕ ವಿಷಯಗಳನ್ನು ನನ್ನ ಗಮನಕ್ಕೆ ತಂದು ಅದು ಗ್ರಂಥ ರೂಪದಲ್ಲಿ ಬರಲು ಕಾರಣರಾದ ದೊಡ್ಡನಿಂಗವ್ಯ, ಪರಸವ್ವ, ಸಣ್ಣ ಹುಲುಗವ್ವ, ಕಮಲವ್ವ, ಹನುಮವ್ವ, ದೊಡ್ಡ ಹಲುಗಮ್ಮ, ಹನುಮಂತವ್ವ ಮತ್ತು ಈ ಕಾವ್ಯವನ್ನು ಹಾಡುವಾಗ ಇದ್ದ, ಈಗ ಕಾಲವಾದ ದಿ. ಲಕ್ಷ್ಮೀ ಅವರಿಗೆ,

ಈ ಕಾವ್ಯದ ಸಂಗ್ರಹಣೆಯಿಂದ ಪ್ರಸ್ತಾವನೆ ಸಿದ್ಧಪಡಿಸುವವರೆಗೆ ಅನೇಕ ವಿಚಾರಗಳನ್ನು ನನ್ನ ಗಮನಕ್ಕೆ ತಂದ ಡಾ. ಮಂಜುನಾಥ ಬೇವಿನಕಟ್ಟೆ ಅವರಿಗೆ, ಕಾವ್ಯ ಸಂಪಾದನೆಯಲ್ಲಿ ನನ್ನೊಂದಿಗೆ ಸಹಕರಿಸಿದ ಮಿತ್ರರಾದ ಡಾ. ಗೋವಿಂದ ಅವರಿಗೆ,

ಈ ಪ್ರಕಟಣೆಯನ್ನು ಅಚ್ಚುಕಟ್ಟಾಗಿ ಹೊರತರಲು ಕಾಳಜಿವಹಿಸಿದ ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ. ಚಿ. ಬೋರಲಿಂಗಯ್ಯ ಅವರಿಗೆ, ಮುದ್ರಣ ವಿನ್ಯಾಸದಲ್ಲಿ ನೆರವಾದ ಪ್ರಸಾರಾಂಗದ ಸಹಾಯಕ ನಿದೇರ್ಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ, ಸುಂದರವಾಗಿ ಅಕ್ಷರ ಸಂಯೋಜಿಸಿದ ವಿದ್ಯಾರಣ್ಯ ಗಣಕ ಕೇಂದ್ರದ ಶ್ರೀನಿವಾಸ ಕೆ. ಕಲಾಲ್‌ ಅವರಿಗೆ ಹಾಗೂ ಮುಖಪುಟ ವಿನ್ಯಾಸ ಮಾಡಿದ ಕೆ. ಕೆ. ಮುಕಾಳಿ ಅವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ. ಮಿತ್ರ ವಿಜಯೇಂದ್ರ ಎಸ್‌. ಕೆ. ಅವರಿಗೆ ಕಾವ್ಯ ಸಂಪಾದನೆ ಸಂದರ್ಭದಲ್ಲಿ ಎಲ್ಲ ರೀತಿಯಲ್ಲೂ ಸಹಕರಿಸಿದ ನನ್ನ ಬಂಧುಗಳಿಗೆ, ಕನ್ನಡ ವಿಶ್ವವಿದ್ಯಾಲಯದ ಎಲ್ಲ ಸಹೋದ್ಯೋಗಿ ಮಿತ್ರರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಡಾ. ತಾರಿಹಳ್ಳಿ ಹನುಮಂತಪ್ಪ