ಓದು ಓದುಂಬೋದೈತಾ
ಇವಾ ಮೂರೆ ಓದು ಬಲ್ಲೋರು ದೈತೋ ಸೊ||

ಅಡು ಅಡೆಂಬದೈತೋ
ಇವ ಮೂರೆ ಆಡು ಬಲ್ಲೋರು ದೈತೋ ಸೊ||

ಬನ್ನಿಯ ಎಲಿಯಾಗ ತಪಸಾವ ಮಾಡಂತಾ
ಸನ್ಯಾಸಿ ಬಲಗೊಂಡಾನೆ ಸೋ||

ಹಾಲದ ಎಲಿಯಾಗ ತಪಸಾವ ಮಾಡಂತಾ
ಋಷಿಗಳಾ ಬಲಗೊಂಡಾನೆ ಸೊ||

ಯಾಕಪ್ಪಾ ಗಣನಾಥನೆ
ಧರ್ಮರಿಗೆ ಯಾಕ ದೈವಾಗುವಲ್ಲೆ ಸೊ||

ಸಾಕಂಬಾ ದೊರೆರಮುರಿಗೆ
ಬೇಕೆಂಬಾ ಕಲಬುರಿಗಿ ಯಾಕ ದೈವಾಗುವಲ್ಲೆ ಸೊ||

ಆರು ಮಂಡಲ ಸೀರೆ
ಕೊಂತೆವ್ವಾ ವಾರದಿಂದೆ ನೈಸ್ಯಾಳೆ ಸೊ||

ಹತ್ತು ಮಂಡಲ ಸೀರೆ
ಕೊಂತೆವ್ವಾ ಉಪದಿಂದ ನೈಸ್ಯಾಳೆ ಸೊ||

ಬನ್ನಿಯಾ ಎಲಿಯಾಗೆ
ತಪಸಾವ ಮಾಡಂತಾ ಸನ್ಯಾಸಿ ಬಲಗೊಂಡಾನೆ ಸೊ||

ಯಾಕಪ್ಪಾ ಗಣನಾಥನೆ
ಧರ್ಮರಿಗೆ ಯಾಕ ದೈವಾಗುವಲ್ಲೆ ಸೊ||

ಸಾಕಂಬಾ ದೊರಮುರಿಗೆ
ಬೇಕೆಂಬಾ ಕಲಬುರಗಿ ಯಾಕ ದೈವಾಗುವಲ್ಲೆ ಸೊ||

ಯಾತು ಯಾತಕೆ ಮಗಳೆ
ಕಾಟಿಯ ಕಮಗಂಡೆ ಸೋತಿಯ ಬಲಗೈಯಾ ತಂದನಾನಾ ಸೊ||

ಸೋತುಕಾ ಬ್ಯಾಲೆ ಇಲ್ಲಿ ಕಂಡೆ
ಕಾಲೆಗಂಗಾನ ಬಲಗಂಡೆ ತಂದನಾನಾ ಸೊ||

ಎಲ್ಲಿ ಎಲ್ಲಿಗೆ ಮೊದಲ ಬಲ್ಲಿದ ನಮಗಿಣಿ
ಎಳ್ಳು ರಾಜ್ಯವಾ ಬೆಳೆಯಲ್ಲ ತಂದನಾನಾ ಸೊ||

ಎಳ್ಳು ರಾಜ್ಯವಾ ಬೆಳೆಯಿಲ್ಲ ಭೂಮ್ಯಾಮ್ಮಾನ
ಬಲ್ಲಿದರ ಮಲಕಾಮಗಂಡೆ ತಂದನಾನಾ ಸೊ||

ಬಾಯಿ ಒಳಗಿರುವ ಬಾನನ್ನ ಸರಸ್ವತಿ
ಬಾನನ್ನ ಭಾಗ್ಯಕ್ಕೆ ತಂದನಾನಾ ಸೊ||

ಬಾರೆ ನನ್ನ ತಾಯಿ ವಸನಕ್ಕೆ ಸರಸ್ವತಿ
ಬಾರದಾ ನುಡಿ ಬರದೇಳೆ ತಂದನಾನಾ ಸೊ||

ಒಲ್ಲೇನೆ ತನಿಯಾಕೆ ಬಂದಾಳೆ ಸರಸ್ವತಿ
ನಿಲ್ಲೆ ತಾಯಿ ವಸನಕ್ಕೆ ತಂದನಾನಾ ಸೊ||

ನಿಲ್ಲೆ ತಾಯಿ ವಸನಕ್ಕೆ ಸರಸ್ವತಿ
ಬಾರದಾ ನುಡಿ ಬರದೇಳೆ ತಂದನಾನಾ ಸೊ||

ಸಜ್ಜೆಯ ಹೊಲದಾಗಾದರೆ ಬಜೆಟ್ಟಿ ದನ ಹೊಯ್ಯಾ
ಸಜ್ಜೇನೆ ಉಂಡಾರೆ ನಾನಾಗಡಲೆ ತಂದನಾನಾ ಸೊ||

ಸಜ್ಜೇನೆ ಉಂಡಾರೆ ನನಗಡಲೆ ತಂದೀನಿ
ತಿದ್ದಯ್ಯ ಮುಖ ಮತಿಗಳಾ ತಂದನಾನಾ ಸೊ||

ಜ್ವಾಳ ಹೊಸದಾಗಿರುವ ಜೊಳ್ಳತೆನೆ ಹೊಯ್ಯಾ
ಜಾಳೇನೆ ಉಂಡರೆ ನಾನಾಗಡಲೆ ತಂದನಾನಾ ಸೊ||

ಜ್ವಾಳೇನೆ ಉಂಡಾರೆ ನನಗಡಲೆ ತಂದೀನಿ
ಚೆಲ್ಲಯ್ಯ ಮುಖ ಮತಿಗಳ ತಂದ ನಾನಾ ಸೊ||

ಒಂಟಿ ಮ್ಯಾಲೆ ಇರುವಾ ಒಂಟಿ ಜನಮುನಿನಗೆ
ಎಂಟೆ ಸೇರಿನ ಅಭಿಷೇಕ ತಂದ ನಾನಾ ಸೊ||

ಎಂಟೆ ಸೇರಿನ ಅಭಿಷೇಕ  ಮಾಡಿಸಬೇಕೆಂಬ
ಪಂಥ ಬಿದ್ದವು ಕೊಡು ಮತಿಗಳ ತಂದನಾನಾ ಸೊ||

ಅನೆ ಮ್ಯಾಲೆ ಇರುವ ಆನೆ ಜನಮುನಿನಗೆ
ಆರು ಸೇರಿನ ಅಭಿಷೇಕ ತಂದ ನಾನಾ ಸೊ||

ಆರೇನ ಸೇರಿನ ಅಭಿಷೇಕ ಮಾಡಿಸಬೇಕೆಂಬಾ
ಜೋಡ ಬಿದ್ದಾವ ಕೊಡು ಮತಿಯೆ ತಂದನಾನಾ ಸೊ||

ಅಂದೊಮ್ಮೆ ನೋಡಿದರೆ ಅಂಗೈಕೆ ಬಂದೈಸುರಿ
ತಿಂಗಳಿಗೊಮ್ಮೆ ಹೊಸ ಮಗನೆ ತಂದನಾನಾ ಸೊ||

ತಿಂಗಳಿಗೊಮ್ಮೆ ಹೊಸಮಗನೆ
ಸೂರ್ಯ ಚಂದ್ರನ ಬಲಗಂಡೆ ತಂದ ನಾನಾ ಸೊ||

ಗದ್ದೆಯಗೆ ನೀರೇತಿದ್ದಿದಂಗಲೆಯಾಗಿ
ರುದ್ರನಾ ಕರವೀರಾ ತಂದನಾನಾ ಸೊ||

ಗದ್ದೆಯಗೆ ನೀರೇತಿದ್ದಿದಂಗಲೆಯಾಗಿ
ರುದ್ರನಾ ಕರವೀರಾ ತಂದನಾನಾ ಸೊ|