ಬರುತೀಯೆನಪ್ಪಾ ಹೋಗಾನ ಕೋಲು ಕೋಲನ್ನ ಕೋಲೆ ||ಮು||
ಬರುತೀಯೆನಪ್ಪಾ ಹೋಗಾನ ಕೋಲು ಕೋಲನ್ನ ಕೋಲೆ ||ಹಿ||

ಬರುತೀನಿ ನಡೆಯೋ ನಮ್ಮ ತಾತ ಕೋಲು ಕೋಲನ್ನ ಕೋಲೆ ||ಮು||
ಬರುತೀನಿ ನಡೆಯೋ ನಮ್ಮ ತಾತ ಕೋಲು ಕೋಲನ್ನ ಕೋಲೆ ||ಹಿ||

ಗರುಡ ಗಂಭಕ್ಕೆ ಹೋಯ್ದಾನೆ ಕೋಲು ಕೋಲನ್ನ ಕೋಲೆ ||ಮು||
ಗರುಡ ಗಂಭಕ್ಕೆ ಹೋಯ್ದಾನೆ ಕೋಲು ಕೋಲನ್ನ ಕೋಲೆ ||ಹಿ||

ಶಕುನಿ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ಶಕುನಿ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||

ಎರಡು ಕಣ್ಣು ನಿನ್ನವೇ ಕಟ್ಟಬೇಕೆ ಕೋಲು ಕೋಲನ್ನ ಕೋಲೆ ||ಮು||
ಎರಡು ಕಣ್ಣು ನಿನ್ನವೇ ಕಟ್ಟಬೇಕೆ ಕೋಲು ಕೋಲನ್ನ ಕೋಲೆ ||ಹಿ||

ಗರುಡ ಗಂಭಕ್ಕೆ ಮ್ಯಾಲೆ ಹತ್ತಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಗರುಡ ಗಂಭಕ್ಕೆ ಮ್ಯಾಲೆ ಹತ್ತಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಓಡೋಡಿ ಅವನಾ ಬಂದಾನೆ ಕೋಲು ಕೋಲನ್ನ ಕೋಲೆ ||ಮು||
ಓಡೋಡಿ ಅವನಾ ಬಂದಾನೆ ಕೋಲು ಕೋಲನ್ನ ಕೋಲೆ ||ಹಿ||

ಗರಡಿ ಮನಿಯಾಗೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಗರಡಿ ಮನಿಯಾಗೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಭೀಮಾನ ಹೋಗಿ ಎಬ್ಬಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಭೀಮಾನ ಹೋಗಿ ಎಬ್ಬಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ನಿನ್ನ ಮ್ಯಾಲೆ ವೈರಿ ಬಂದಾವೆ ಕೋಲು ಕೋಲನ್ನ ಕೋಲೆ ||ಮು||
ನಿನ್ನ ಮ್ಯಾಲೆ ವೈರಿ ಬಂದಾವೆ ಕೋಲು ಕೋಲನ್ನ ಕೋಲೆ ||ಹಿ||

ಹೋಗಾನ ಬಾರೋ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಹೋಗಾನ ಬಾರೋ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಹೇಡಿ ಧರ್ಮರ ನೀವೇನಾ ಕೋಲು ಕೋಲನ್ನ ಕೋಲೆ ||ಮು||
ಹೇಡಿ ಧರ್ಮರ ನೀವೇನಾ ಕೋಲು ಕೋಲನ್ನ ಕೋಲೆ ||ಹಿ||

ಭಂಡ ಧರ್ಮರ ನೀವೇನಾ ಕೋಲು ಕೋಲನ್ನ ಕೋಲೆ ||ಮು||
ಭಂಡ ಧರ್ಮರ ನೀವೇನಾ ಕೋಲು ಕೋಲನ್ನ ಕೋಲೆ ||ಹಿ||

ಭೀಮಾಗೆ ಸಿಟ್ಟು ಬಂದಾವೆ ಕೋಲು ಕೋಲನ್ನ ಕೋಲೆ ||ಮು||
ಭೀಮಾಗೆ ಸಿಟ್ಟು ಬಂದಾವೆ ಕೋಲು ಕೋಲನ್ನ ಕೋಲೆ ||ಹಿ||

ನಡೆಯಪ್ಪ ಮಾವ ಹೋಗೋಣ ಕೋಲು ಕೋಲನ್ನ ಕೋಲೆ ||ಮು||
ನಡೆಯಪ್ಪ ಮಾವ ಹೋಗೋಣ ಕೋಲು ಕೋಲನ್ನ ಕೋಲೆ ||ಹಿ||

ನಡೆಯಪ್ಪ ಮಾವ ಹೋಗೋಣ ಕೋಲು ಕೋಲನ್ನ ಕೋಲೆ ||ಮು||
ನಡೆಯಪ್ಪ ಮಾವ ಹೋಗೋಣ ಕೋಲು ಕೋಲನ್ನ ಕೋಲೆ ||ಹಿ||

ಭೀಮಾನ ಕೊಣ್ಣು ಬಂಡಿಗಾಲಿ ಕೋಲು ಕೋಲನ್ನ ಕೋಲೆ ||ಮು||
ಭೀಮಾನ ಕೊಣ್ಣು ಬಂಡಿಗಾಲಿ ಕೋಲು ಕೋಲನ್ನ ಕೋಲೆ ||ಹಿ||

ನಿನ್ನ ಕೊಣ್ಣು ನೋಡಿದರೆ ಹೆದರುತಾರೆ ಕೋಲು ಕೋಲನ್ನ ಕೋಲೆ ||ಮು||
ನಿನ್ನ ಕೊಣ್ಣು ನೋಡಿದರೆ ಹೆದರುತಾರೆ ಕೋಲು ಕೋಲನ್ನ ಕೋಲೆ ||ಹಿ||

ಕೊಣ್ಣಿಗೆ ಧೂಳ ಬೀಳತಾವೆ ಕೋಲು ಕೋಲನ್ನ ಕೋಲೆ ||ಮು||
ಕೊಣ್ಣಿಗೆ ಧೂಳ ಬೀಳತಾವೆ ಕೋಲು ಕೋಲನ್ನ ಕೋಲೆ ||ಹಿ||

ಎಲ್ಡು ಕೊಣ್ಣುಗಳಾ ಕಟ್ಟುತೀನಿ ಕೋಲು ಕೋಲನ್ನ ಕೋಲೆ ||ಮು||
ಎಲ್ಡು ಕೊಣ್ಣುಗಳಾ ಕಟ್ಟುತೀನಿ ಕೋಲು ಕೋಲನ್ನ ಕೋಲೆ ||ಹಿ||

ರಣಗಂಭದ ಮುಂದೆ ಹೋಯ್ದಾನೆ ಕೋಲು ಕೋಲನ್ನ ಕೋಲೆ ||ಮು||
ರಣಗಂಭದ ಮುಂದೆ ಹೋಯ್ದಾನೆ ಕೋಲು ಕೋಲನ್ನ ಕೋಲೆ ||ಹಿ||

ಸೇದಿಯಾs. . . . .  ಬಾಣ ಬಿಟ್ಟಾನೆ ಕೋಲು ಕೋಲನ್ನ ಕೋಲೆ ||ಮು||
ಸೇದಿಯಾs. . . . .  ಬಾಣ ಬಿಟ್ಟಾನೆ ಕೋಲು ಕೋಲನ್ನ ಕೋಲೆ ||ಹಿ||

ದಿಂಬಾ ಕೆಳಕ್ಕೆ ಬಿದೈತೆ ಕೋಲು ಕೋಲನ್ನ ಕೋಲೆ ||ಮು||
ದಿಂಬಾ ಕೆಳಕ್ಕೆ ಬಿದೈತೆ ಕೋಲು ಕೋಲನ್ನ ಕೋಲೆ ||ಹಿ||

ಕಂಭದ ಮ್ಯಾಲೆ ರುಂಡ ಐತೆ ಕೋಲು ಕೋಲನ್ನ ಕೋಲೆ ||ಮು||
ಕಂಭದ ಮ್ಯಾಲೆ ರುಂಡ ಐತೆ ಕೋಲು ಕೋಲನ್ನ ಕೋಲೆ ||ಹಿ||

ಎಂತಾಟ ಹೊಡೆದೆ ನಮ್ಮಪ್ಪಾ ಕೋಲು ಕೋಲನ್ನ ಕೋಲೆ ||ಮು||
ಎಂತಾಟ ಹೊಡೆದೆ ನಮ್ಮಪ್ಪಾ ಕೋಲು ಕೋಲನ್ನ ಕೋಲೆ ||ಹಿ||

ಎಂತಾಟ ಹೊಡೆದೆ ನಮ್ಮಪ್ಪಾ ಕೋಲು ಕೋಲನ್ನ ಕೋಲೆ ||ಮು||
ಎಂತಾಟ ಹೊಡೆದೆ ನಮ್ಮಪ್ಪಾ ಕೋಲು ಕೋಲನ್ನ ಕೋಲೆ ||ಹಿ||

ಎಲ್ಡು ಕೊಣ್ಣುಗಳಾ ಬಿಚ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಎಲ್ಡು ಕೊಣ್ಣುಗಳಾ ಬಿಚ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಭೀಮ ಬೋರ್ಯಾಡಿ ಅಳುತಾನೆ ಕೋಲು ಕೋಲನ್ನ ಕೋಲೆ ||ಮು||
ಭೀಮ ಬೋರ್ಯಾಡಿ ಅಳುತಾನೆ ಕೋಲು ಕೋಲನ್ನ ಕೋಲೆ ||ಹಿ||

ನಿನ್ನ ಉರಿಗಳಾ ನಾನೇನೇ ಕೊಯ್ದಿದ್ದೆ ಕೋಲು ಕೋಲನ್ನ ಕೋಲೆ ||ಮು||
ನಿನ್ನ ಉರಿಗಳಾ ನಾನೇನೇ ಕೊಯ್ದಿದ್ದೆ ಕೋಲು ಕೋಲನ್ನ ಕೋಲೆ ||ಹಿ||

ನನ್ನ ಹಾದ್ಯಾಕೆ ಮುಡಿ ಮಗನೆ ಕೋಲು ಕೋಲನ್ನ ಕೋಲೆ ||ಮು||
ನನ್ನ ಹಾದ್ಯಾಕೆ ಮುಡಿ ಮಗನೆ ಕೋಲು ಕೋಲನ್ನ ಕೋಲೆ ||ಹಿ||

ನನ್ನೇನೇ ಉಡಿಯಾಕೆ ಬೀಳಮಗನೆ ಕೋಲು ಕೋಲನ್ನ ಕೋಲೆ ||ಮು||
ನನ್ನೇನೇ ಉಡಿಯಾಕೆ ಬೀಳಮಗನೆ ಕೋಲು ಕೋಲನ್ನ ಕೋಲೆ ||ಹಿ||

ನಿನ್ನೇನೇ ಉಡಿಯಾಕೆ ಬೀಳಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿನ್ನೇನೇ ಉಡಿಯಾಕೆ ಬೀಳಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ನಕುಲ ಸಹದೇವ ಬಂದರವ್ವಾ ಕೋಲು ಕೋಲನ್ನ ಕೋಲೆ ||ಮು||
ನಕುಲ ಸಹದೇವ ಬಂದರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಉಡಿಗಳಾ ಅವರಿನ್ನಾ ಒಡ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಉಡಿಗಳಾ ಅವರಿನ್ನಾ ಒಡ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ನಮ್ಮೇನಾ ಉಡಿಯಾಕೆ ಬೀಳಮಗನೆ ಕೋಲು ಕೋಲನ್ನ ಕೋಲೆ ||ಮು||
ನಮ್ಮೇನಾ ಉಡಿಯಾಕೆ ಬೀಳಮಗನೆ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮೇನಾ ಉಡಿಯಾಕೆ ಬೀಳಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿಮ್ಮೇನಾ ಉಡಿಯಾಕೆ ಬೀಳಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಅರ್ಜುನನಾದರೆ ಬಂದನವ್ವಾ ಕೋಲು ಕೋಲನ್ನ ಕೋಲೆ ||ಮು||
ಅರ್ಜುನನಾದರೆ ಬಂದನವ್ವಾ ಕೋಲು ಕೋಲನ್ನ ಕೋಲೆ ||ಹಿ||

ನನ್ನೇನಾ ಉಡಿಯಾಕೆ ಬೀಳಮಗನೆ ಕೋಲು ಕೋಲನ್ನ ಕೋಲೆ ||ಮು||
ನನ್ನೇನಾ ಉಡಿಯಾಕೆ ಬೀಳಮಗನೆ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮೇನಾ ಉಡಿಯಾಕೆ ಬೀಳಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿಮ್ಮೇನಾ ಉಡಿಯಾಕೆ ಬೀಳಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಧರ್ಮಣ್ಣ ಉಡಿಯಾ ಒಡ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣ ಉಡಿಯಾ ಒಡ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ನನ್ನೇನೇ ಉಡಿಯಾಕೆ ಬೀಳಮಗನೆ ಕೋಲು ಕೋಲನ್ನ ಕೋಲೆ ||ಮು||
ನನ್ನೇನೇ ಉಡಿಯಾಕೆ ಬೀಳಮಗನೆ ಕೋಲು ಕೋಲನ್ನ ಕೋಲೆ ||ಹಿ||

ನಿನ್ನೇನೇ ಉಡಿಯಾಕೆ ಬೀಳಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿನ್ನೇನೇ ಉಡಿಯಾಕೆ ಬೀಳಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ದ್ರೌಪತಿ ಉಡಿಗಳಾ ಒಡ್ಯಾಳ್ಳವ್ವಾ ಕೋಲು ಕೋಲನ್ನ ಕೋಲೆ ||ಮು||
ದ್ರೌಪತಿ ಉಡಿಗಳಾ ಒಡ್ಯಾಳ್ಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ನನ್ನ ಉಡಿಯಾಕೆ ಬೀಳಮಗನೆ ಕೋಲು ಕೋಲನ್ನ ಕೋಲೆ ||ಮು||
ನನ್ನ ಉಡಿಯಾಕೆ ಬೀಳಮಗನೆ ಕೋಲು ಕೋಲನ್ನ ಕೋಲೆ ||ಹಿ||

ನಿನ್ನ ಉಡಿಯಾಕೆ ಬೀಳಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿನ್ನ ಉಡಿಯಾಕೆ ಬೀಳಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಕೊಂತೆವ್ವಾ ಸೆರಗು ಒಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಕೊಂತೆವ್ವಾ ಸೆರಗು ಒಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ನನ್ನ ಉಡಿಯಾಕೆ ಬೀಳಮಗನೆ ಕೋಲು ಕೋಲನ್ನ ಕೋಲೆ ||ಮು||
ನನ್ನ ಉಡಿಯಾಕೆ ಬೀಳಮಗನೆ ಕೋಲು ಕೋಲನ್ನ ಕೋಲೆ ||ಹಿ||

ನಿನ್ನ ಉಡಿಯಾಕೆ ಬೀಳಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿನ್ನ ಉಡಿಯಾಕೆ ಬೀಳಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||

ಯಾರ ಉಡಿಯಾಕೆ ಬೀಳತೀಯಾ ಕೋಲು ಕೋಲನ್ನ ಕೋಲೆ ||ಮು||
ಯಾರ ಉಡಿಯಾಕೆ ಬೀಳತೀಯಾ ಕೋಲು ಕೋಲನ್ನ ಕೋಲೆ ||ಹಿ||

ರೆಡ್ಡೇರಾ ಮನಿಯಾಗೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಮು||
ರೆಡ್ಡೇರಾ ಮನಿಯಾಗೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಹಿ||

ನಮ್ಮ ತಾಯಿನಾ ಕರಿಸಬೇಕೇ ಕೋಲು ಕೋಲನ್ನ ಕೋಲೆ ||ಮು||
ನಮ್ಮ ತಾಯಿನಾ ಕರಿಸಬೇಕೇ ಕೋಲು ಕೋಲನ್ನ ಕೋಲೆ ||ಹಿ||

ನಮ್ಮ ತಾಯಿಗೆ ಲಗ್ನ ಮಾಡಬೇಕೇ ಕೋಲು ಕೋಲನ್ನ ಕೋಲೆ ||ಮು||
ನಮ್ಮ ತಾಯಿಗೆ ಲಗ್ನ ಮಾಡಬೇಕೇ ಕೋಲು ಕೋಲನ್ನ ಕೋಲೆ ||ಹಿ||

ತಾಯಿ ಉಡಿಯಾಕೆ ಬೀಳತೀನಿ ಕೋಲು ಕೋಲನ್ನ ಕೋಲೆ ||ಮು||
ತಾಯಿ ಉಡಿಯಾಕೆ ಬೀಳತೀನಿ ಕೋಲು ಕೋಲನ್ನ ಕೋಲೆ ||ಹಿ||

ರೆಡ್ಡೇರು ಓಡೋಡಿ ಬಂದರಾವ್ವಾ ಕೋಲು ಕೋಲನ್ನ ಕೋಲೆ ||ಮು||
ರೆಡ್ಡೇರು ಓಡೋಡಿ ಬಂದರಾವ್ವಾ ಕೋಲು ಕೋಲನ್ನ ಕೋಲೆ ||ಹಿ||

ಆಕೇನೆ ಅವ್ವಣೆವ್ವ ಬಂದಳವ್ವಾ ಕೋಲು ಕೋಲನ್ನ ಕೋಲೆ ||ಮು||
ಆಕೇನೆ ಅವ್ವಣೆವ್ವ ಬಂದಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಬೋರ್ಯಾಡಿ ಅವ್ವಣೆವ್ವ ಅಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಬೋರ್ಯಾಡಿ ಅವ್ವಣೆವ್ವ ಅಳುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಕಳವೀಲೆ ನಿನ್ನ ಹಡದಿದ್ದೆ ಕೋಲು ಕೋಲನ್ನ ಕೋಲೆ ||ಮು||
ಕಳವೀಲೆ ನಿನ್ನ ಹಡದಿದ್ದೆ ಕೋಲು ಕೋಲನ್ನ ಕೋಲೆ ||ಹಿ||

ನೀನು ಹುಟ್ಟಿ ಬಯಲಿಗೆ ತಂದಿಯಲ್ಲಾ ಕೋಲು ಕೋಲನ್ನ ಕೋಲೆ ||ಮು||
ನೀನು ಹುಟ್ಟಿ ಬಯಲಿಗೆ ತಂದಿಯಲ್ಲಾ ಕೋಲು ಕೋಲನ್ನ ಕೋಲೆ ||ಹಿ||

ಭೀಮಾಗ ಅವ್ವಣೆವ್ವೆಗೆ ಲಗ್ನ ನೋಡೆ ಕೋಲು ಕೋಲನ್ನ ಕೋಲೆ ||ಮು||
ಭೀಮಾಗ ಅವ್ವಣೆವ್ವೆಗೆ ಲಗ್ನ ನೋಡೆ ಕೋಲು ಕೋಲನ್ನ ಕೋಲೆ ||ಹಿ||

ತಂದೆ ತಾಯಿಗೆ ಲಗ್ನ ನೋಡೆ ಕೋಲು ಕೋಲನ್ನ ಕೋಲೆ ||ಮು||
ತಂದೆ ತಾಯಿಗೆ ಲಗ್ನ ನೋಡೆ ಕೋಲು ಕೋಲನ್ನ ಕೋಲೆ ||ಹಿ||

ತಾಯಿ ಉಡಿಯಾಕೆ ಬಿದ್ದನವ್ವಾ ಕೋಲು ಕೋಲನ್ನ ಕೋಲೆ ||ಮು||
ತಾಯಿ ಉಡಿಯಾಕೆ ಬಿದ್ದನವ್ವಾ ಕೋಲು ಕೋಲನ್ನ ಕೋಲೆ ||ಹಿ||

ದಿಂಬಕ್ಕೆ ರುಂಡ ಹೊಂದಿಸ್ಯಾರೆ ಕೋಲು ಕೋಲನ್ನ ಕೋಲೆ ||ಮು||
ದಿಂಬಕ್ಕೆ ರುಂಡ ಹೊಂದಿಸ್ಯಾರೆ ಕೋಲು ಕೋಲನ್ನ ಕೋಲೆ ||ಹಿ||

ಸಿರಿಗಂಧದ ಕಟ್ಟಿಗೆ ಹೊಂದಿಸ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಸಿರಿಗಂಧದ ಕಟ್ಟಿಗೆ ಹೊಂದಿಸ್ಯಾರೆ ಕೋಲು ಕೋಲನ್ನ ಕೋಲೆ ||ಹಿ||

ಬೊಬ್ಬಲಿನಾ ಅದರಾಗ ಇಟ್ಟರವ್ವಾ ಕೋಲು ಕೋಲನ್ನ ಕೋಲೆ ||ಮು||
ಬೊಬ್ಬಲಿನಾ ಅದರಾಗ ಇಟ್ಟರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಒಂದೊಂದು ಕಟ್ಟಿಗೆ ಹೊಂದಿಸ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಒಂದೊಂದು ಕಟ್ಟಿಗೆ ಹೊಂದಿಸ್ಯಾರೆ ಕೋಲು ಕೋಲನ್ನ ಕೋಲೆ ||ಹಿ||

ಡಬ್ಬಿ ಸುಮಣಿ ಎಣ್ಣೆ ಸುರಿವ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಡಬ್ಬಿ ಸುಮಣಿ ಎಣ್ಣೆ ಸುರಿವ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಬೆಂಕಿ ಇಟ್ಟಾರೆ ಬೊಬ್ಬಲಿಗೆ ಕೋಲು ಕೋಲನ್ನ ಕೋಲೆ ||ಮು||
ಬೆಂಕಿ ಇಟ್ಟಾರೆ ಬೊಬ್ಬಲಿಗೆ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವ ಬೋರಾಡಿ ಅಳುತ್ತಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಬೋರಾಡಿ ಅಳುತ್ತಾಳೆ ಕೋಲು ಕೋಲನ್ನ ಕೋಲೆ ||ಹಿ||

ಎಲ್ಲರೂ ಬೋರಾಡಿ ಅಳುತ್ತಾರೆ ಕೋಲು ಕೋಲನ್ನ ಕೋಲೆ ||ಮು||
ಎಲ್ಲರೂ ಬೋರಾಡಿ ಅಳುತ್ತಾರೆ ಕೋಲು ಕೋಲನ್ನ ಕೋಲೆ ||ಹಿ||

ಅಂತಮಗ ಹೋದಮ್ಯಾಲೆ
ನಾವ್ಯಾಕೆ ಇರಬೇಕೆಂದೇ ಕಿಚ್ಚಿನಾಕೆ ಹಾರ್ಯಾರಿ ಹೆಗರ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ನಾವ್ಯಾಕೆ ಇರಬೇಕೆಂದೇ ಕಿಚ್ಚಿನಾಕೆ ಹಾರ್ಯಾರಿ ಹೆಗರ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕಿಚ್ಚಿನಾಕೆ ಹಾರ್ಯಾರಿ ಹೆಗರ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಕಿಚ್ಚಿನಾಕೆ ಹಾರ್ಯಾರಿ ಹೆಗರ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ರೆಡ್ಡೇರೂ ಎಲ್ಲರೂ ಹೆಗರ್ಯಾರೆ ಕೋಲು ಕೋಲನ್ನ ಕೋಲೆ ||ಮು||
ರೆಡ್ಡೇರೂ ಎಲ್ಲರೂ ಹೆಗರ್ಯಾರೆ ಕೋಲು ಕೋಲನ್ನ ಕೋಲೆ ||ಹಿ||

ರೆಡ್ಡೇರಾ ವಂಶ ಸುಟ್ಟು ಹೋಯಿತೋ ಕೋಲು ಕೋಲನ್ನ ಕೋಲೆ ||ಮು||
ರೆಡ್ಡೇರಾ ವಂಶ ಸುಟ್ಟು ಹೋಯಿತೋ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವ ಒಬ್ಬಾಕೆ ಉಳಿದಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಒಬ್ಬಾಕೆ ಉಳಿದಾಳೆ ಕೋಲು ಕೋಲನ್ನ ಕೋಲೆ ||ಹಿ||

ಧರ್ಮರ ಕುಲದಾಕೆ ಬಿದ್ದಾಳೆ ಕೋಲು ಕೋಲನ್ನ ಕೋಲೆ ||ಮು||
ಧರ್ಮರ ಕುಲದಾಕೆ ಬಿದ್ದಾಳೆ ಕೋಲು ಕೋಲನ್ನ ಕೋಲೆ ||ಹಿ||

ಧರ್ಮರ ವಂಶ ಉಳಿದೈತೆ ಕೋಲು ಕೋಲನ್ನ ಕೋಲೆ ||ಮು||
ಧರ್ಮರ ವಂಶ ಉಳಿದೈತೆ ಕೋಲು ಕೋಲನ್ನ ಕೋಲೆ ||ಹಿ||

ಇಲ್ಲಿಗೆ ಸಂದಮೂಗಿದಾವೆ ಕೋಲು ಕೋಲನ್ನ ಕೋಲೆ ||ಮು||
ಇಲ್ಲಿಗೆ ಸಂದಮೂಗಿದಾವೆ ಕೋಲು ಕೋಲನ್ನ ಕೋಲೆ ||ಹಿ||