ಮಲ್ಲಮ್ಮನ ಹೊಟ್ಟೆಲಿ ಏಳು ಮಂದಿ ಮಕ್ಕಳೆ
ಹೆಣ್ಣಿನಾ ಸಂತಾನ ಮೊದಲಿಲ್ಲಾ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣಿನ ಸಂತಾನ ಮೊದಲಿಲ್ಲಾ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮನ ಹೊಟ್ಟೆಲಿ ಏಳು ಮಂದಿ ಮಕ್ಕಳೆ
ಹೆಣ್ಣಿನಾ ಸಂತಾನ ಮೊದಲಿಲ್ಲಾ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣಿನ ಸಂತಾನ ಮೊದಲಿಲ್ಲಾ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮ ಬೋರಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮ ಬೋರಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮ ಬೋರಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮ ಬೋರಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಮಕ್ಕಳಿದ್ದ ಮನಿಗೆ ಬೆಂಕಿಗೆ ಹೋದಾರೆ
ಗೊಡ್ಡಿ ಬರುತ್ತಾಳೆಂದೆ ಅಂಬುತಾರೆ ಕೋಲು ಕೋಲನ್ನ ಕೋಲೆ ||ಮು||
ಗೊಡ್ಡಿ ಬರುತ್ತಾಳೆಂದೆ ಅಂಬುತಾರೆ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮ ಬೋರಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮ ಬೋರಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಹಿ||
ನನ್ನೇನೆ ಹೊಟ್ಟೇಲಿ ಹೆಣ್ಣು ಮಗಳು ಇದ್ದರೆ,
ಗೌರಿ ಮಗಳಾನ ಮಾಡುತಿದ್ದೆ ಕೋಲು ಕೋಲನ್ನ ಕೋಲೆ ||ಮು||
ಗೌರಿ ಮಗಳಾನ ಮಾಡುತಿದ್ದೆ ಕೋಲು ಕೋಲನ್ನ ಕೋಲೆ ||ಹಿ||
ಬಣ್ಣಾದ ಸೀರೆ ಉಡುಸುತಿದ್ದೆ ಕೋಲು ಕೋಲನ್ನ ಕೋಲೆ ||ಮು||
ಬಣ್ಣಾದ ಸೀರೆ ಉಡುಸುತಿದ್ದೆ ಕೋಲು ಕೋಲನ್ನ ಕೋಲೆ ||ಹಿ||
ಸರಗಾಳಾ ಮುಟ್ಟ ಕಟ್ಟುತಿದ್ದೆ ಕೋಲು ಕೋಲನ್ನ ಕೋಲೆ ||ಮು||
ಸರಗಾಳಾ ಮುಟ್ಟ ಕಟ್ಟುತಿದ್ದೆ ಕೋಲು ಕೋಲನ್ನ ಕೋಲೆ ||ಹಿ||
ಮುಂದೆ ಬಿಟ್ಟು ಹಿಂದೆ ನೋಡುತಿದ್ದೆ ಕೋಲು ಕೋಲನ್ನ ಕೋಲೆ ||ಮು||
ಮುಂದೆ ಬಿಟ್ಟು ಹಿಂದೆ ನೋಡುತಿದ್ದೆ ಕೋಲು ಕೋಲನ್ನ ಕೋಲೆ ||ಹಿ||
ಶಿವರಾಯ ನೋಗಿ ಕೇಳಬೇಕೆ ಕೋಲು ಕೋಲನ್ನ ಕೋಲೆ ||ಮ||
ಶಿವರಾಯ ನೋಗಿ ಕೇಳಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಹೊಲಕ್ಕೊದಾ ಭರಮರೆಡ್ದಿ ಬಂದಾನವ್ವ ಕೋಲು ಕೋಲನ್ನ ಕೋಲೆ ||ಮು||
ಹೊಲಕ್ಕೊದಾ ಭರಮರೆಡ್ದಿ ಬಂದಾನವ್ವ ಕೋಲು ಕೋಲನ್ನ ಕೋಲೆ ||ಹಿ||
ಕಾಲಿಗೆ ನೀರಾ ಕೊಟ್ಟಳವ್ವಾ ಕೋಲು ಕೋಲನ್ನ ಕೋಲೆ ||ಮು||
ಕಾಲಿಗೆ ನೀರಾ ಕೊಟ್ಟಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕೈ ಕಾಲು ಮಾರಿ ತೊಳದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಕೈ ಕಾಲು ಮಾರಿ ತೊಳದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಗಂಡಾಗೆ ಊಟ ನೀಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಗಂಡಾಗೆ ಊಟ ನೀಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಉಂಡನೆ ಉಟಾನೆ ಅಂಗೈ ತೊಳದಾನೆ
ಕುರ್ಚಿಯ ಮ್ಯಾಲೆ ಕುಂತಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಕುರ್ಚಿಯ ಮ್ಯಾಲೆ ಕುಂತಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಗಂಧದ ಇಳೇವೆ ಮೆಲುದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಗಂಧದ ಇಳೇವೆ ಮೆಲುದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಮಲಮ್ಮ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಮಲಮ್ಮ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||
ನನ್ನೇನೆ ಹೊಟ್ಟೇಲಿ ಏಳು ಮಂದಿ ಗಣ ಮಕ್ಕಳು
ಹೆಣ್ಣಿನ ಸಂತಾನ ಮೊದಲಿಲ್ಲ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣಿನ ಸಂತಾನ ಮೊದಲಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ನನ್ನೇನೆ ಹೊಟ್ಟೇಲಿ ಏಳು ಮಂದಿ ಗಣ ಮಕ್ಕಳು
ಹೆಣ್ಣಿನ ಸಂತಾನ ಮೊದಲಿಲ್ಲ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣಿನ ಸಂತಾನ ಮೊದಲಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ಶಿವರಾಯ ನೋಗಿ ಬೇಡತೀನಿ ಕೋಲು ಕೋಲನ್ನ ಕೋಲೆ ||ಮು||
ಶಿವರಾಯ ನೋಗಿ ಬೇಡತೀನಿ ಕೋಲು ಕೋಲನ್ನ ಕೋಲೆ ||ಹಿ||
ಭರಮರೆಡ್ಡಿ ನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ಭರಮರೆಡ್ಡಿ ನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||
ಹತ್ತಿಯ ಹೂವಿನಂಗೆ ಕೆನ್ನೆಗೆ ನೆರೆಬಂದು
ಇನ್ನೇನೆ ಬಗಸಿ ಫಲಗಳಾ ಕೋಲು ಕೋಲನ್ನ ಕೋಲೆ ||ಮು||
ಇನ್ನೇನೆ ಬಗಸಿ ಫಲಗಳಾ ಕೋಲು ಕೋಲನ್ನ ಕೋಲೆ ||ಹಿ||
ಸೊಸ್ತೀರಾ ಕಂಡಾರೆ ನಗರೇನೆ ಕೋಲು ಕೋಲನ್ನ ಕೋಲೆ ||ಮು||
ಸೊಸ್ತೀರಾ ಕಂಡಾರೆ ನಗರೇನೆ ಕೋಲು ಕೋಲನ್ನ ಕೋಲೆ ||ಹಿ||
ಕಂಡ ಕಂಡವರು ನಗರೇನೆ ಕೋಲು ಕೋಲನ್ನ ಕೋಲೆ ||ಮು||
ಕಂಡ ಕಂಡವರು ನಗರೇನೆ ಕೋಲು ಕೋಲನ್ನ ಕೋಲೆ ||ಹಿ||
ಹತ್ತಿಯ ಹೂವಿನಂಗೆ ನೆತ್ತೀಗೆ ನೆರೆಬಂದು
ಮತ್ತೇನೆ ಬಗಸಿ ಫಲಗಳಾ ಕೋಲು ಕೋಲನ್ನ ಕೋಲೆ ||ಮು||
ಮತ್ತೇನೆ ಬಗಸಿ ಫಲಗಳಾ ಕೋಲು ಕೋಲನ್ನ ಕೋಲೆ ||ಹಿ||
ಸೊಸ್ತೀರಾ ಕಂಡಾರೆ ನಗರೇನೆ ಕೋಲು ಕೋಲನ್ನ ಕೋಲೆ ||ಮು||
ಸೊಸ್ತೀರಾ ಕಂಡಾರೆ ನಗರೇನೆ ಕೋಲು ಕೋಲನ್ನ ಕೋಲೆ ||ಹಿ||
ಸೊಸ್ತೀರಾ ಕಂಡಾರೆ ನಗರೇನೆ ಕೋಲು ಕೋಲನ್ನ ಕೋಲೆ ||ಮು||
ಸೊಸ್ತೀರಾ ಕಂಡಾರೆ ನಗರೇನೆ ಕೋಲು ಕೋಲನ್ನ ಕೋಲೆ ||ಹಿ||
ಬಜಾರಕೆ ಮಲ್ಲಮ್ಮ ಹೋಗುತಾಳೆ ಕೋಲು ಕೋಲನ್ನ ಕೋಲೆ ||ಮು||
ಬಜಾರಕೆ ಮಲ್ಲಮ್ಮ ಹೋಗುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಮುನ್ನೂರು ಸೂಜಿ ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮುನ್ನೂರು ಸೂಜಿ ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಮುನ್ನೂರು ಡಬ್ಬಣ ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮುನ್ನೂರು ಡಬ್ಬಣ ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಈ ಬತ್ತಿ ಉಂಡೆ ಕೊಂಡಾಳವ್ವಾ ಕೋಲು ಕೋಲನ್ನಾ ಕೋಲೆ ||ಮು||
ಈ ಬತ್ತಿ ಉಂಡೆ ಕೊಂಡಾಳವ್ವಾ ಕೋಲು ಕೋಲನ್ನಾ ಕೋಲೆ ||ಹಿ||
ನಿಂಬಿಯ ಹಣ್ಣು ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ನಿಂಬಿಯ ಹಣ್ಣು ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಉತ್ತುತ್ತಿ ಹಣ್ಣು ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಉತ್ತುತ್ತಿ ಹಣ್ಣು ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಗೊನೆ ಮುರಿದಾ ಬಾಳೆಹಣ್ಣು ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಗೊನೆ ಮುರಿದಾ ಬಾಳೆಹಣ್ಣು ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಚಂದಿರಾ ಬುಕ್ಕಿಟ್ಟು ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಚಂದಿರಾ ಬುಕ್ಕಿಟ್ಟು ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಸುಡುವೇನೆ ಲೋಬಾನ ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಸುಡುವೇನೆ ಲೋಬಾನ ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಉದ್ದಿನಕಡ್ಡಿ ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಉದ್ದಿನಕಡ್ಡಿ ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಹೂವಿನಾ ಸರ ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಹೂವಿನಾ ಸರ ಕೊಂಡಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕರಿಯ ಸಿಪ್ಪಿನ ಕಾಯಿ ತಗಂಡಾಳೆ ಕೋಲು ಕೋಲನ್ನ ಕೋಲೆ ||ಮು||
ಕರಿಯ ಸಿಪ್ಪಿನ ಕಾಯಿ ತಗಂಡಾಳೆ ಕೋಲು ಕೋಲನ್ನ ಕೋಲೆ ||ಹಿ||
ತನ್ನೇನೆ ಅರಮನಿಗೆ ಬಂದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ತನ್ನೇನೆ ಅರಮನಿಗೆ ಬಂದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮ ಜಳಕವಾ ಮಾಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮ ಜಳಕವಾ ಮಾಡ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಉಡುಲಾಗೆ ಮಲ್ಲಮ್ಮ ಕಟ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಉಡುಲಾಗೆ ಮಲ್ಲಮ್ಮ ಕಟ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕರಿಯಾನೆ ಕಂಬಳಿ ಬಗಲಾಗೆ ಕೋಲು ಕೋಲನ್ನ ಕೋಲೆ ||ಮು||
ಕರಿಯಾನೆ ಕಂಬಳಿ ಬಗಲಾಗೆ ಕೋಲು ಕೋಲನ್ನ ಕೋಲೆ ||ಹಿ||
ಒಂದು ತಂಬಿಗೆ ನೀರು ಇಡದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಒಂದು ತಂಬಿಗೆ ನೀರು ಇಡದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಅಡವೀಯಾ ದಾರಿ ಇಡದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಅಡವೀಯಾ ದಾರಿ ಇಡದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಆರ್ಯಾಣದಾಕೆ ಹೋಗ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಆರ್ಯಾಣದಾಕೆ ಹೋಗ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕರಿಯೇನಾ ಕಂಬಳಿ ಮುರಿದು ಗದ್ದಿಗೆ ಮಾಡಿ
ಮುನ್ನೂರು ಸೂಜಿ ಜಡದಾಳೆ ಕೋಲು ಕೋಲನ್ನ ಕೋಲೆ ||ಮು||
ಮುನ್ನೂರು ಸೂಜಿ ಜಡದಾಳೆ ಕೋಲು ಕೋಲನ್ನ ಕೋಲೆ ||ಹಿ||
ಮುನ್ನೂರು ಡಬ್ಬಣ ಬಡದಾಳೆ ಕೋಲು ಕೋಲನ್ನ ಕೋಲೆ ||ಮು||
ಮುನ್ನೂರು ಡಬ್ಬಣ ಬಡದಾಳೆ ಕೋಲು ಕೋಲನ್ನ ಕೋಲೆ ||ಹಿ||
ನಿಂಬಿಯ ಹಣ್ಣು ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ನಿಂಬಿಯ ಹಣ್ಣು ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಉತ್ತುತ್ತಿ ಹಣ್ಣು ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಉತ್ತುತ್ತಿ ಹಣ್ಣು ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಗೊನೆ ಮುರಿದಾ ಬಾಳೆಹಣ್ಣು ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಗೊನೆ ಮುರಿದಾ ಬಾಳೆಹಣ್ಣು ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಚಂದ್ರ ಬುಕ್ಕಿಟ್ಟು ಹಚ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಚಂದ್ರ ಬುಕ್ಕಿಟ್ಟು ಹಚ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಸುಡುವಾ ಲೋಬಾನ ಸುಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಸುಡುವಾ ಲೋಬಾನ ಸುಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಅಡಿಕೀಯಾ ಎಲೆಯಾ ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಅಡಿಕೀಯಾ ಎಲೆಯಾ ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕರಿಸಿಪ್ಪಿನಾ ಕಾಯಿ ಒಡದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಕರಿಸಿಪ್ಪಿನಾ ಕಾಯಿ ಒಡದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ನೇಮಿಸಿ ಕೈಯ ಮುಗಿದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ನೇಮಿಸಿ ಕೈಯ ಮುಗಿದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಉದ್ದಿನ ಕಡ್ಡಿ ಹಚ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಉದ್ದಿನ ಕಡ್ಡಿ ಹಚ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಒಂಟಿಗಾಲಲಿ ತಪಸಾ ನಿಂತಾಳವ್ವಾ ಕೋಲು ಕೋಲನ್ನಾ ಕೋಲೆ ||ಮು||
ಒಂಟಿಗಾಲಲಿ ತಪಸಾ ನಿಂತಾಳವ್ವಾ ಕೋಲು ಕೋಲನ್ನಾ ಕೋಲೆ ||ಹಿ||
ಮುಚ್ಚಿವೀದಾ ಕಣ್ಣ ತಗಿವಲ್ಲಾ ಕೋಲು ಕೋಲನ್ನ ಕೋಲೆ ||ಮು||
ಮುಚ್ಚಿವೀದಾ ಕಣ್ಣ ತಗಿವಲ್ಲಾ ಕೋಲು ಕೋಲನ್ನ ಕೋಲೆ ||ಹಿ||
ಕೈಲಾಸ ಮ್ಯಾಲೆ ಶಿವರಾಯ ಕೋಲು ಕೋಲನ್ನ ಕೋಲೆ ||ಮು||
ಕೈಲಾಸ ಮ್ಯಾಲೆ ಶಿವರಾಯ ಕೋಲು ಕೋಲನ್ನ ಕೋಲೆ ||ಹಿ||
ನಂದೀಯಾ ಬರುತೈತೆ ಶಿವರಾಯ ಕೋಲು ಕೋಲನ್ನ ಕೋಲೆ ||ಮು||
ನಂದೀಯಾ ಬರುತೈತೆ ಶಿವರಾಯ ಕೋಲು ಕೋಲನ್ನ ಕೋಲೆ ||ಹಿ||
ನಂದೀಯಾ ಏರ್ಯಾನ ಶಿವರಾಯ ಕೋಲು ಕೋಲನ್ನ ಕೋಲೆ ||ಮು||
ನಂದೀಯಾ ಏರ್ಯಾನ ಶಿವರಾಯ ಕೋಲು ಕೋಲನ್ನ ಕೋಲೆ ||ಹಿ||
ಒಂಟಿಗಾಲಲಿ ತಪಸಾ ನಿಂತಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಒಂಟಿಗಾಲಲಿ ತಪಸಾ ನಿಂತಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಪಾರ್ವತಿ ಏನೊಂದು ನುಡಿದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಪಾರ್ವತಿ ಏನೊಂದು ನುಡಿದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ನಂದಿಯನ್ನಾ ಇಳಿಸು ಶಿವರಾಯ ಕೋಲು ಕೋಲನ್ನ ಕೋಲೆ ||ಮು||
ನಂದಿಯನ್ನಾ ಇಳಿಸು ಶಿವರಾಯ ಕೋಲು ಕೋಲನ್ನ ಕೋಲೆ ||ಹಿ||
ಅದು ಏನು ಸುದ್ಧಿ ನೋಡಿಬಾರಾ ಕೋಲು ಕೋಲನ್ನ ಕೋಲೆ ||ಮು||
ಅದು ಏನು ಸುದ್ಧಿ ನೋಡಿಬಾರಾ ಕೋಲು ಕೋಲನ್ನ ಕೋಲೆ ||ಹಿ||
ನಂದೀಯಾ ಇಳಿವ್ಯಾನೆ ಶಿವರಾಯ ಕೋಲು ಕೋಲನ್ನ ಕೋಲೆ ||ಮು||
ನಂದೀಯಾ ಇಳಿವ್ಯಾನೆ ಶಿವರಾಯ ಕೋಲು ಕೋಲನ್ನ ಕೋಲೆ ||ಹಿ||
ಮರಕೇನಾ ಬಿಗದಾನ ಶಿವರಾಯ ಕೋಲು ಕೋಲನ್ನ ಕೋಲೆ ||ಮು||
ಮರಕೇನಾ ಬಿಗದಾನ ಶಿವರಾಯ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮನ ತಾಕ ಬಂದಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮನ ತಾಕ ಬಂದಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಮುಚ್ಚಿವಿದಾ ಕಣ್ಣು ತಗಿವಲ್ಲಾ ಕೋಲು ಕೋಲನ್ನ ಕೋಲೆ ||ಮು||
ಮುಚ್ಚಿವಿದಾ ಕಣ್ಣು ತಗಿವಲ್ಲಾ ಕೋಲು ಕೋಲನ್ನ ಕೋಲೆ ||ಹಿ||
ಒಂಟಿಕಾಲಲಿ ತಪಸಾ ನಿಂತಿಯಲ್ಲಾ ಕೋಲು ಕೋಲನ್ನಾ ಕೋಲೆ ||ಮು||
ಒಂಟಿಕಾಲಲಿ ತಪಸಾ ನಿಂತಿಯಲ್ಲಾ ಕೋಲು ಕೋಲನ್ನಾ ಕೋಲೆ ||ಹಿ||
ಅದು ಏನಾ ಸುದ್ಧಿ ಹೇಳ ಮಗಳೆ ಕೋಲು ಕೋಲನ್ನ ಕೋಲೆ ||ಮು||
ಅದು ಏನಾ ಸುದ್ಧಿ ಹೇಳ ಮಗಳೆ ಕೋಲು ಕೋಲನ್ನ ಕೋಲೆ ||ಹಿ||
ನನ್ನೇನೆ ಹೊಟ್ಟೇಲಿ ಏಳು ಮಂದಿ ಗಣ ಮಕ್ಕಳು
ಹೆಣ್ಣೀನ ಸಂತಾನ ಮೊದಲಿಲ್ಲ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣೀನ ಸಂತಾನ ಮೊದಲಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ಹೆಣ್ಣೀನ ಸಂತಾನ ಮೊದಲಿಲ್ಲ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣೀನ ಸಂತಾನ ಮೊದಲಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ಹೆಣ್ಣು ಮಗಳಾ ನನಗೆ ಕೊಡಬೇಕೆ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣು ಮಗಳಾ ನನಗೆ ಕೊಡಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಬಂಜೆತನ ನನ್ನ ಬಿಡಿಸಬೇಕೆ ಕೋಲು ಕೋಲನ್ನ ಕೋಲೆ ||ಮು||
ಬಂಜೆತನ ನನ್ನ ಬಿಡಿಸಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಮಕ್ಕಳ ಫಲಗಳ ಬೇಡುತಾಳೆ ಕೋಲು ಕೋಲನ್ನ ಕೋಲೆ ||ಮು||
ಮಕ್ಕಳ ಫಲಗಳ ಬೇಡುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಕೊಟ್ಟಾರೆ ಕೊಟ್ಯಾನೆ ಕೊಡುವುದು ದೊಡ್ಡದಲ್ಲ
ಆಸೆ ಕಟ್ಟಿಗೆ ಮಳ ಮುಂಡೆ ಕೋಲು ಕೋಲನ್ನ ಕೋಲೆ ||ಮು||
ಆಸೆ ಕಟ್ಟಿಗೆ ಮಳ ಮುಂಡೆ ಕೋಲು ಕೋಲನ್ನ ಕೋಲೆ ||ಹಿ||
ಈಗಲೇ ಹುಟ್ಟಲಿ ಬೇಗನೆ ಸಾಯಲಿ
ಬಂಜೆಯ ಸೊಲ್ಲಾ ಬಿಡಿಸಯ್ಯಾ ಕೋಲು ಕೋಲನ್ನ ಕೋಲೆ ||ಮು||
ಬಂಜೆಯ ಸೊಲ್ಲಾ ಬಿಡಿಸಯ್ಯಾ ಕೋಲು ಕೋಲನ್ನ ಕೋಲೆ ||ಹಿ||
ಈಗಲೇ ಹುಟ್ಟಲಿ ಬೇಗನೆ ಸಾಯಲಿ
ಬಂಜೆಯ ಸೊಲ್ಲಾ ಬಿಡಿಸಯ್ಯಾ ಕೋಲು ಕೋಲನ್ನ ಕೋಲೆ ||ಮು||
ಬಂಜೆಯ ಸೊಲ್ಲಾ ಬಿಡಿಸಯ್ಯಾ ಕೋಲು ಕೋಲನ್ನ ಕೋಲೆ ||ಹಿ||
ಸಂಜೇಲಿ ಹುಟ್ಟಲಿ ಮುಂಜಾನೆ ಸಾಯಲಿ
ಗೊಡ್ಡೆಂಬ ಸೊಲ್ಲಾ ಬಿಡಿಸಯ್ಯಾ ಕೋಲು ಕೋಲನ್ನ ಕೋಲೆ ||ಮು||
ಗೊಡ್ಡೆಂಬ ಸೊಲ್ಲಾ ಬಿಡಿಸಯ್ಯಾ ಕೋಲು ಕೋಲನ್ನ ಕೋಲೆ ||ಹಿ||
ಸಂಜೇಲಿ ಹುಟ್ಟಲಿ ಮುಂಜಾನೆ ಸಾಯಲಿ
ಗೊಡ್ಡೆಂಬ ಸೊಲ್ಲಾ ಬಿಡಿಸಯ್ಯಾ ಕೋಲು ಕೋಲನ್ನ ಕೋಲೆ ||ಮು||
ಗೊಡ್ಡೆಂಬ ಸೊಲ್ಲಾ ಬಿಡಿಸಯ್ಯಾ ಕೋಲು ಕೋಲನ್ನ ಕೋಲೆ ||ಹಿ||
ಜೋಳಿಗೆಯಾಗಳ ತಾನೊಂದು ಶಿವರಾಯ
ಇಟ್ಟಾನ ಮಲ್ಲಮ್ಮನ ನೊಸಲಿಗೆ ಕೋಲು ಕೋಲನ್ನ ಕೋಲೆ ||ಮು||
ಇಟ್ಟಾನ ಮಲ್ಲಮ್ಮನ ನೊಸಲಿಗೆ ಕೋಲು ಕೋಲನ್ನ ಕೋಲೆ ||ಹಿ||
ಕೊಟ್ಟಿನಿ ಹೋಗೆ ಫಲಗಳಾ ಕೋಲು ಕೋಲನ್ನ ಕೋಲೆ ||ಮು||
ಕೊಟ್ಟಿನಿ ಹೋಗೆ ಫಲಗಳಾ ಕೋಲು ಕೋಲನ್ನ ಕೋಲೆ ||ಹಿ||
ಹಿಂದಕಾ ನೀನು ತಿರುಗಮ್ಮಾ ಕೋಲು ಕೋಲನ್ನ ಕೋಲೆ ||ಮು||
ಹಿಂದಕಾ ನೀನು ತಿರುಗಮ್ಮಾ ಕೋಲು ಕೋಲನ್ನ ಕೋಲೆ ||ಹಿ||
ಅಲ್ಲಿ ಶಿವರಾಯ ಮಾಯವಾದ ಕೋಲು ಕೋಲನ್ನ ಕೋಲೆ ||ಮು||
ಅಲ್ಲಿ ಶಿವರಾಯ ಮಾಯವಾದ ಕೋಲು ಕೋಲನ್ನ ಕೋಲೆ ||ಹಿ||
ತನ್ನ ಅರಮನಿಗೆ ಬಂದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ತನ್ನ ಅರಮನಿಗೆ ಬಂದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ನಡುಮನ್ಯಾಕ ಹೋಗಿ ನಿಂತಳವ್ವಾ ಕೋಲು ಕೋಲನ್ನ ಕೋಲೆ ||ಮು||
ನಡು ಮನ್ಯಾಕ ಹೋಗಿ ನಿಂತಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಭರಮರೆಡ್ಡಿ ಮುಂದೆ ಹೇಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಭರಮರೆಡ್ಡಿ ಮುಂದೆ ಹೇಳುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಮಕ್ಕಳ ಸಂತಾನ ಕೇಳಿ ಬಂದೆ ಕೋಲು ಕೋಲನ್ನ ಕೋಲೆ ||ಮು||
ಮಕ್ಕಳ ಸಂತಾನ ಕೇಳಿ ಬಂದೆ ಕೋಲು ಕೋಲನ್ನ ಕೋಲೆ ||ಹಿ||
ಹೆಣ್ಣ ಮಗಳ ನನಗೆ ಕೊಡುತಾನೆ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣ ಮಗಳ ನನಗೆ ಕೊಡುತಾನೆ ಕೋಲು ಕೋಲನ್ನ ಕೋಲೆ ||ಹಿ||
ಹೆಣ್ಣ ಮಗಳ ನನಗೆ ಕೊಡುತಾನೆ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣ ಮಗಳ ನನಗೆ ಕೊಡುತಾನೆ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮ ಏನೊಂದಾ ನುಡಿದಾಳವ್ವಾ ಕೋಲು ಕೋಲನ್ನ ಕೋಲೆ||ಮು||
ಮಲ್ಲಮ್ಮ ಏನೊಂದಾ ನುಡಿದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಒಂದು ದಿನ ಅಂಬೋದು ಒಂದು ತಿಂಗಳಾಗಿ ಕೋಲು ಕೋಲನ್ನ ಕೋಲೆ ||ಮು||
ಒಂದು ದಿನ ಅಂಬೋದು ಒಂದು ತಿಂಗಳಾಗಿ ಕೋಲು ಕೋಲನ್ನ ಕೋಲೆ ||ಹಿ||
ಎರಡು ದಿನ ಅಂಬೋದು ಎರಡೆ ತಿಂಗಳಾಗಿ ಕೋಲು ಕೋಲನ್ನ ಕೋಲೆ ||ಮು||
ಎರಡು ದಿನ ಅಂಬೋದು ಎರಡೆ ತಿಂಗಳಾಗಿ ಕೋಲು ಕೋಲನ್ನ ಕೋಲೆ ||ಹಿ||
ಮೂರು ದಿನ ಅಂಬೋದು ಮೂರೆ ತಿಂಗಳಾಗಿ ಕೋಲು ಕೋಲನ್ನ ಕೋಲೆ ||ಮು||
ಮೂರು ದಿನ ಅಂಬೋದು ಮೂರೆ ತಿಂಗಳಾಗಿ ಕೋಲು ಕೋಲನ್ನ ಕೋಲೆ ||ಹಿ||
ಐದು ದಿನ ಅಂಬೋದು ಐದೆ ತಿಂಗಳಾಗಿ ಕೋಲು ಕೋಲನ್ನ ಕೋಲೆ ||ಮು||
ಐದು ದಿನ ಅಂಬೋದು ಐದೆ ತಿಂಗಳಾಗಿ ಕೋಲು ಕೋಲನ್ನ ಕೋಲೆ ||ಹಿ||
ಒಂದೇನೆ ತಿಂಗಳಿಗೆ ಒಂದೇನೆ ಬಗಿಸ್ಯಾಳೆ
ಒಂದೇ ಎಲೆ ಅರದಾ ಎಳೆ ಹುಣಸಿ ಕೋಲು ಕೋಲನ್ನ ಕೋಲೆ ||ಮು||
ಒಂದೇ ಎಲೆ ಅರದಾ ಎಳೆ ಹುಣಸಿ ಕೋಲು ಕೋಲನ್ನ ಕೋಲೆ ||ಹಿ||
ಒಂದೆ ಎಲೆ ಅರದಾ ಎಲೆ ಹುಣಸಿ ಕೈಮಾರೆಡ್ದಿ
ಒಂದೆ ಎಲೆ ಕಟ್ಟಿ ತರೀಸ್ಯಾನ ಕೋಲು ಕೋಲನ್ನ ಕೋಲೆ ||ಮು||
ಒಂದೆ ಎಲೆ ಕಟ್ಟಿ ತರೀಸ್ಯಾನ ಕೋಲು ಕೋಲನ್ನ ಕೋಲೆ ||ಹಿ||
ಎರಡೇನೆ ತಿಂಗಳಿಗೆ ಎರಡೇನೆ ಬಗಿಸ್ಯಾಳೆ
ಎರಡು ಎಲೆ ಅರದಾ ಹುಣಸಿ ಕೋಲು ಕೋಲನ್ನ ಕೋಲೆ ||ಮು||
ಎರಡು ಎಲೆ ಅರದಾ ಎಳೆ ಹುಣಸಿ ಕೋಲು ಕೋಲನ್ನ ಕೋಲೆ ||ಹಿ||
ಎರಡು ಎಲೆ ಅರದಾ ಎಳೆ ಹುಣಸಿ ಮಾರೆಡ್ಡಿ
ಎರಡು ಹೊರೆ ಕಟ್ಟ ತರೀಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಎರಡು ಹೊರೆ ಕಟ್ಟ ತರೀಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಎರಡು ಹೊರೆ ಕೊಟ್ಟಾ ತರೀಸ್ಯಾನೆ ಕೈಯಲಿ ಕೊಟ್ಟಾ
ನಾರಿ ನಿನ್ನ ಬಯಕೆ ತೀರ್ಯಾವ್ಯಾನೆ ಕೋಲು ಕೋಲನ್ನ ಕೋಲೆ ||ಮು||
ನಾರಿ ನಿನ್ನ ಬಯಕೆ ತೀರ್ಯಾವ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಮೂರನೇ ತಿಂಗಳಿಗೆ ಮುರೇನಾ ಬಗಿಸ್ಯಾಳ
ಮೂಡುವಲದಾಗ ಮಗಿ ಮಾವಿನ ಹಣ್ಣೆ ಕೋಲು ಕೋಲನ್ನ ಕೋಲೆ ||ಮು||
ಮೂಡುವಲದಾಗ ಮಗಿ ಮಾವಿನ ಹಣ್ಣೆ ಕೋಲು ಕೋಲನ್ನ ಕೋಲೆ ||ಹಿ||
ಮೂಡುವಲದಾಗ ಮಗಿ ಮಾವಿನ ಹಣ್ಣು
ಮೂರುವರಾ ಕೊಟ್ಟ ತರಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಮೂರುವರಾ ಕೊಟ್ಟ ತರಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
Leave A Comment