ಮೂರುವರಾ ಕೊಟ್ಟಾ ತರಿಸ್ಯಾನೆ ಕೈಯಲ್ಲಿ ಕೊಟ್ಟು
ನಾರಿ ನಿನ್ನ ಬಯಕೆ ತೀರ್ಯಾವ್ಯಾನೆ ಕೋಲು ಕೋಲನ್ನ ಕೋಲೆ ||ಮು||
ನಾರಿ ನಿನ್ನ ಬಯಕೆ ತೀರ್ಯಾವ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ನಾಕೇನೆ ತಿಂಗಳಿಗೆ  ನಾಕೊಂದ ಬಗಿಸ್ಯಾಳೆ
ಕಾಕೀ ಮಾವ ಹಣ್ಣಾ ಕೈಯಾ ತುಂಬಾ ಕೋಲು ಕೋಲನ್ನ ಕೋಲೆ ||ಮು||
ಕಾಕೀ ಮಾವ ಹಣ್ಣಾ ಕೈಯಾ ತುಂಬಾ ಕೋಲು ಕೋಲನ್ನ ಕೋಲೆ ||ಹಿ||

ಕಾಕೀಯ ಹಣ್ಣಾ ಕೈ ತುಂಬಾ ಮಾರೆಡ್ಡಿ
ನಾಕುವರಾ ಕೊಟ್ಟು ತರಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ನಾಕುವರಾ ಕೊಟ್ಟು ತರಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||

ನಾಕುವರಾ ಕೊಟ್ಟು ತರಿಸ್ಯಾನೆ ಕೊಟ್ಟು
ನಾರಿ ನಿನ್ನ ಬಯಕೆ ತೀರ್ಯಾವೇನೆ ಕೋಲು ಕೋಲನ್ನ ಕೋಲೆ ||ಮು||
ನಾರಿ ನಿನ್ನ ಬಯಕೆ ತೀರ್ಯಾವೇನೆ ಕೋಲು ಕೋಲನ್ನ ಕೋಲೆ ||ಹಿ||

ಐದೇನೆ ತಿಂಗಳಿಗೆ ಐದೇನೆ ಬಗಿಸ್ಯಾಳೆ
ಕೊಯಿದೇನೆ ಮಲ್ಲಿಗೆ ನನದಂಡೆ ಕೋಲು ಕೋಲನ್ನ ಕೋಲೆ ||ಮು||
ಕೊಯಿದೇನೆ ಮಲ್ಲಿಗೆ ನನದಂಡೆ ಕೋಲು ಕೋಲನ್ನ ಕೋಲೆ ||ಹಿ||

ಕೊಯಿದೇನೆ ಮಲ್ಲಿಗೆ ನನದಂಡೆ ಮಾರೆಡ್ಡಿ
ಐದುವರಾ ಕೊಟ್ಟು ತರೀಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಐದುವರಾ ಕೊಟ್ಟು ತರೀಸ್ಯಾನೆ ಕೋಲು ಕೋಲನ್ನ ಕೋಲೆ ||ಮು||

ಐದುವರಾ ಕೊಟ್ಟು ತರೀಸ್ಯಾನೆ ಕೈ ಕೊಟ್ಟು
ನಾರಿ ನಿನ್ನ ಬಯಕೆ ತೀರ್ಯಾವ್ಯಾನೆ ಕೋಲು ಕೋಲನ್ನ ಕೋಲೆ ||ಮು||
ನಾರಿ ನಿನ್ನ ಬಯಕೆ ತೀರ್ಯಾವ್ಯಾನೆ ಕೋಲು ಕೋಲನ್ನ ಕೋಲೆ ||ಮು||

ಆರೇನೆ ತಿಂಗಳಿಗೆ ಆರೇನೆ ಬಗಿಸ್ಯಾಳೆ
ಆರೀದಾ ಅನ್ನ ಕೆನೆ ಮೊಸರೆ ಕೋಲು ಕೋಲನ್ನ ಕೋಲೆ ||ಮು||
ಆರೀದಾ ಅನ್ನ ಕೆನೆ ಮೊಸರೆ ಕೋಲು ಕೋಲನ್ನ ಕೋಲೆ ||ಹಿ||

ಆರೀದಾ ಅನ್ನಕೆನೆ ಮೊಸರೆ ಮಾರೆಡ್ದಿ
ಆರುವರಾ ಕೊಟ್ಟು ತರೀಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಆರುವರಾ ಕೊಟ್ಟು ತರೀಸ್ಯಾನ  ಕೋಲು ಕೋಲನ್ನ ಕೋಲೆ ||ಹಿ||

ಆರುವರಾ ಕೊಟ್ಟು ತರೀಸಿ ಕೈಯಲ್ಲಿ ಕೊಟ್ಟು
ನಾರಿ ನಿನ್ನ ಬಯಕೆ ತೀರ್ಯಾವೇನೆ ಕೋಲು ಕೋಲನ್ನ ಕೋಲೆ ||ಮು||
ನಾರಿ ನಿನ್ನ ಬಯಕೆ ತೀರ್ಯಾವೇನೆ ಕೋಲು ಕೋಲನ್ನ ಕೋಲೆ ||ಹಿ||

ಏಳೇನೆ ತಿಂಗಳಿಗೆ ಏಳೇನೆ ಬಗಿಸ್ಯಾಳೆ
ಏರೀನಾ ಹಿಂದೆ ಬಿಳಿಜಾಳ ಕೋಲು ಕೋಲನ್ನ ಕೋಲೆ ||ಮು||
ಏರೀನಾ ಹಿಂದೆ ಬಿಳಿಜಾಳ ಕೋಲು ಕೋಲನ್ನ ಕೋಲೆ ||ಹಿ||

ಏರೀನಾ ಹಿಂದೆ ಬಿಳಿಜಾಳ ಮಾರಡ್ಡಿ
ಏಳುವರಾ ಕೊಟ್ಟು ತರೀಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಏಳುವರಾ ಕೊಟ್ಟು ತರೀಸ್ಯಾನೆ ಕೋಲು ಕೋಲನ್ನ ಕೋಲೆ ||ಮು||

ಏಳುವರಾ ಕೊಟ್ಟು ತರೀಸ್ಯಾನೆ ಕೈಕೊಟ್ಟು
ನಾರೀ ನಿನ್ನ ಬಯಕೆ ತೀರ್ಯಾವೇನೆ ಕೋಲು ಕೋಲನ್ನ ಕೋಲೆ ||ಮು||
ನಾರೀ ನಿನ್ನ ಬಯಕೆ ತೀರ್ಯಾವೇನೆ ಕೋಲು ಕೋಲನ್ನ ಕೋಲೆ ||ಹಿ||

ಎಂಟೇನೆ ತಿಂಗಳಿಗೆ ಎಂಟೊಂದಾ ಬಗಿಸ್ಯಾಳೆ
ಎಂಟೇನೆ ಯಾಲಕ್ಕಿ ಕೊಡ ತುಪ್ಪಾ ಮಾರೆಡ್ಡಿ
ಎಂಟುವರಾ ಕೊಟ್ಟು ತರೀಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಎಂಟುವರಾ ಕೊಟ್ಟು ತರೀಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಎಂಟುವರಾ ಕೊಟ್ಟು ತರಿಸಿ ಕೈಯಲ್ಲಿಕೊಟ್ಟು
ನಾರಿ ನಿನ್ನ ಬಯಕೆ ತೀರ್ಯಾವೇನೆ ಕೋಲು ಕೋಲನ್ನ ಕೋಲೆ ||ಮು||
ನಾರಿ ನಿನ್ನ ಬಯಕೆ ತೀರ್ಯಾವೇನೆ ಕೋಲು ಕೋಲನ್ನ ಕೋಲೆ ||ಮು||

ಒಂಬತ್ತು ತಿಂಗಳಿಗೆ ತುಂಬ್ಯಾವೆ ನವಮಾಸ
ಸಂದೀನೇ ಸಂದಲ್ಲಾ ನವಬ್ಯಾನೆ  ಕೋಲು ಕೋಲನ್ನ ಕೋಲೆ ||ಮು||
ಸಂದೀನೇ ಸಂದಲ್ಲಾ ನವಬ್ಯಾನೆ  ಕೋಲು ಕೋಲನ್ನ ಕೋಲೆ ||ಹಿ||

ಮಲ್ಲಮ್ಮ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮ ಏನೊಂದೆ ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||

ಇತ್ತಬಾರೊ ಪರದಾನಿ ಮತ್ತೊಂದು ಹೇಳ್ಯಾನೆ
ಸೂಲಗಿತ್ತಿ ಸಂಗವ್ವನ ಮನಿಗೋಗು ಕೋಲು ಕೋಲನ್ನ ಕೋಲೆ ||ಮು||
ಸೂಲಗಿತ್ತಿ ಸಂಗವ್ವನ ಮನಿಗೋಗು ಕೋಲು ಕೋಲನ್ನ ಕೋಲೆ ||ಹಿ||

ಹತ್ತಿ ಹತ್ತಿದ ಬ್ಯಾನಿ ಕತ್ತಿಲಿ ಕಡದಂಗ
ನಿತ್ತರಸಲಾರೆ ನಿಲ್ಲಲಾರೆ ಕೋಲು ಕೋಲನ್ನ ಕೋಲೆ||ಮು||
ನಿತ್ತರಸಲಾರೆ ನಿಲ್ಲಲಾರೆ ಕೋಲು ಕೋಲನ್ನ ಕೋಲೆ||ಹಿ||

ನಿತ್ತರಸಲಾರೆ ನಿಲ್ಲಲಾರೆ ಬದಿಯಲ್ಲಿ
ಅಕ್ಕವಾ ಇಲ್ಲಲ್ಲೆ ಮರುಗಾಕೆ  ಕೋಲು ಕೋಲನ್ನ ಕೋಲೆ||ಮು||
ಅಕ್ಕವಾ ಇಲ್ಲಲ್ಲೆ ಮೌಗಾಕೆ ಕೋಲು ಕೋಲನ್ನ ಕೋಲೆ||ಹಿ||

ಜಾವ ಜಾವಕ ಬ್ಯಾನೆ ತಾಳಬಾರಿಸದಂಗೆ
ತಾಳಲಾರೆ ತಡೀಲಾರೆ ಕೋಲು ಕೋಲನ್ನ ಕೋಲೆ||ಮು||
ತಾಳಲಾರೆ ತಡೀಲಾರೆ ಕೋಲು ಕೋಲನ್ನ ಕೋಲೆ||ಹಿ||

ತಾಳಲಾರೇನೆ ತಡೀಲಾರೆ ಬದಿಯಲ್ಲಿ
ತಾಯವ್ವ ಇಲ್ಲಲ್ಲೆ ಮರಗಾಕೆ ಕೋಲು ಕೋಲನ್ನ ಕೋಲೆ||ಮು||
ತಾಯವ್ವಾ ಇಲ್ಲಲ್ಲೆ ಮರಗಾಕೆ  ಕೋಲು ಕೋಲನ್ನ ಕೋಲೆ||ಹಿ||

ಬಟ್ಟಲ ಕುದುರೆ ಹತ್ತೆನವ್ವಾ ಕೋಲು ಕೋಲನ್ನ ಕೋಲೆ ||ಮು||
ಬಟ್ಟಲ ಕುದುರೆ ಹತ್ತೆನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಅಡ್ಡ ಅಡ್ಡಾ ಕುದುರೆ ತಿರಿವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಅಡ್ಡ ಅಡ್ಡಾ ಕುದುರೆ ತಿರಿವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಅಡ್ಡ ಅಡ್ಡಾ ಕುದುರೆ ತಿರಿವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಅಡ್ಡ ಅಡ್ಡಾ ಕುದುರೆ ತಿರಿವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಹಟ್ಯಾಗ ಇರುವಾಕೆ ಇಟ್ಟಾಗಿ ಸಗಣಿ ಇಡುವಾಕಿ
ಸಂಗವ್ವನ ಅರಮನೆ ಯಾವಲ್ಲೆವ್ವಾ ಕೋಲು ಕೋಲನ್ನ ಕೋಲೆ ||ಮು||
ಸಂಗವ್ವನ ಅರಮನೆ ಯಾವಲ್ಲೆವ್ವಾ ಕೋಲು ಕೋಲನ್ನ ಕೋಲೆ ||ಹಿ||

ಹುಟ್ಟಿದಾ ಆ ಶಿವನ ಇಟ್ಯಾಡಿ ಇಡಿವ್ಯಾಕಿ
ಕಪ್ಪಿನ ಕಿವಿಯಾಕಿ ಎಲತಂಗಿ ಕೋಲು ಕೋಲನ್ನ ಕೋಲೆ ||ಮು||
ಕಪ್ಪಿನ ಕಿವಿಯಾಕಿ ಎಲತಂಗಿ ಕೋಲು ಕೋಲನ್ನ ಕೋಲೆ ||ಹಿ||

ಕಪ್ಪಿಗೆ ವಜ್ಜರ ಬಿಗಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಕಪ್ಪಿಗೆ ವಜ್ಜರ ಬಿಗಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಸೂಲಗಿತ್ತಿ ಸಂಗವ್ವನಾ ಮನೆದೂರ ಕೋಲು ಕೋಲನ್ನ ಕೋಲೆ ||ಮು||
ಸೂಲಗಿತ್ತಿ ಸಂಗವ್ವನಾ ಮನೆದೂರ ಕೋಲು ಕೋಲನ್ನ ಕೋಲೆ ||ಹಿ||

ಆಕೀಯಾ ಆಸಂದಿ ಓಡಾಡಿ ಇಡಿವ್ಯಾಕಿ
ವಾಲಿಯಾಕೆ ಏಲತಂಗಿ ಕೋಲು ಕೋಲನ್ನ ಕೋಲೆ ||ಮು||
ವಾಲಿಯಾಕೆ ಏಲತಂಗಿ ಕೋಲು ಕೋಲನ್ನ ಕೋಲೆ ||ಹಿ||

ವಾಲಿಯ ಬಂಗಾರ ಬಿಗಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ವಾಲಿಯ ಬಂಗಾರ ಬಿಗಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಸೂಲಗಿತ್ತಿ ಸಂಗವ್ವನಾ ಮನೆದೂರ ಕೋಲು ಕೋಲನ್ನ ಕೋಲೆ ||ಮು||
ಸೂಲಗಿತ್ತಿ ಸಂಗವ್ವನಾ ಮನೆದೂರ ಕೋಲು ಕೋಲನ್ನ ಕೋಲೆ ||ಹಿ||

ಬಾಳಿಯ ಬಲಕೋಗ ನಿಂಬಿಯಾ ಎಡಕೋಗಾ
ನಾಗರ ಸಂಪಿಗಿ ನಡಕೋಗ ಕೋಲು ಕೋಲನ್ನ ಕೋಲೆ ||ಮು||
ನಾಗರ ಸಂಪಿಗಿ ನಡಕೋಗ ಕೋಲು ಕೋಲನ್ನ ಕೋಲೆ ||ಹಿ||

ಬಾಳಿಯ ಬಲಕೋಗ ನಿಂಬಿಯಾ ಎಡಕೋಗಾ
ನಾಗರ ಸಂಪಿಗಿ ನಡಕೋಗ ಕೋಲು ಕೋಲನ್ನ ಕೋಲೆ ||ಮು||
ನಾಗರ ಸಂಪಿಗಿ ನಡಕೋಗ ಕೋಲು ಕೋಲನ್ನ ಕೋಲೆ ||ಹಿ||

ಅನೆಯಾಡುತಾವೆ ಗಾಣ ತಿರುಗುತಾವ
ಸಾಗೆಂಬ ನವಲ ಸರವೈದೆ ಕೋಲು ಕೋಲನ್ನ ಕೋಲೆ ||ಮು||
ಸಾಗೆಂಬ ನವಲ ಸರವೈದೆ ಕೋಲು ಕೋಲನ್ನ ಕೋಲೆ ||ಹಿ||

ಸೂಲಗಿತ್ತಿ ಸಂಗವ್ವನ ಆರಮನೆ ಕೋಲು ಕೋಲನ್ನ ಕೋಲೆ ||ಮು||
ಸೂಲಗಿತ್ತಿ ಸಂಗವ್ವನ ಆರಮನೆ ಕೋಲು ಕೋಲನ್ನ ಕೋಲೆ ||ಮು||

ಕುದುರೆ ಬಿಟ್ಟಾನೆ ಪರದಾನಿ ಕೋಲು ಕೋಲನ್ನ ಕೋಲೆ ||ಮು||
ಕುದುರೆ ಬಿಟ್ಟಾನೆ ಪರದಾನಿ ಕೋಲು ಕೋಲನ್ನ ಕೋಲೆ ||ಹಿ||

ಸಂಗವ್ವನಾ ಅರಮನಿಗೆ ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಸಂಗವ್ವನಾ ಅರಮನಿಗೆ ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಮು||

ಕುದುರೆ ಇಳಿದಾನೆ ಪರದಾನಿ ಕೋಲು ಕೋಲನ್ನ ಕೋಲೆ ||ಮು||
ಕುದುರೆ ಇಳಿದಾನೆ ಪರದಾನಿ ಕೋಲು ಕೋಲನ್ನ ಕೋಲೆ ||ಹಿ||

ಎಂದು ಬಾರದ ಪರದಾನಿ ಬಂದೆಲ್ಲ ಬಾಳದಿನಕಾ
ಕಂದರಗಳ್ಳಾ ಮನಿಗಳ್ಳೆ ಕೋಲು ಕೋಲನ್ನ ಕೋಲೆ ||ಮು||
ಕಂದರಗಳ್ಳಾ ಮನಿಗಳ್ಳೆ ಕೋಲು ಕೋಲನ್ನ ಕೋಲೆ ||ಹಿ||

ಕುಂದರಕ ಬಂದಿಲ್ಲ ಮಿಂದರಕ ಬಂದಿಲ್ಲ
ರೆಡ್ಡೇರ ಮನಿಯಾಗ ಬಾಣಸ್ತಾನ  ಕೋಲು ಕೋಲನ್ನ ಕೋಲೆ ||ಮು||
ರೆಡ್ಡೇರ ಮನಿಯಾಗ ಬಾಣಸ್ತಾನ  ಕೋಲು ಕೋಲನ್ನ ಕೋಲೆ ||ಹಿ||

ಬರತೀನಿ ಹೋಗು ಪರದಾನಿ ಕೋಲು ಕೋಲನ್ನ ಕೋಲೆ ||ಮು||
ಬರತೀನಿ ಹೋಗು ಪರದಾನಿ ಕೋಲು ಕೋಲನ್ನ ಕೋಲೆ ||ಹಿ||

ಬರತೀನಿ ಹೋಗು ಪರದಾನಿ ಕೋಲು ಕೋಲನ್ನ ಕೋಲೆ ||ಮು||
ಬರತೀನಿ ಹೋಗು ಪರದಾನಿ ಕೋಲು ಕೋಲನ್ನ ಕೋಲೆ ||ಹಿ||

ಜಳಕ ಮಾಡ್ಯಾಳೆ ಸಂಗವ್ವ ಕೋಲು ಕೋಲನ್ನ ಕೋಲೆ ||ಮು||
ಜಳಕ ಮಾಡ್ಯಾಳೆ ಸಂಗವ್ವ ಕೋಲು ಕೋಲನ್ನ ಕೋಲೆ ||ಹಿ||

ಜಳಕ ಮಾಡ್ಯಾಳೆ ಸಂಗವ್ವ  ಕೋಲು ಕೋಲನ್ನ ಕೋಲೆ ||ಮು||
ಜಳಕ ಮಾಡ್ಯಾಳೆ ಸಂಗವ್ವ  ಕೋಲು ಕೋಲನ್ನ ಕೋಲೆ ||ಹಿ||

ಜರಿ ಸೀರೆ ಉಟ್ಟು ಗಂಧದ ಬೊಟ್ಟ ನಿಟ್ಟು
ಗಂಧಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಮು||
ಗಂಧಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಹಿ||

ಗಂಧಗನ್ನಡಿ ಮುಖನೋಡಿ ಸಂಗವ್ವ
ಸಂದಿಲವೆಂದ ಬಿಡತಾಳೆ ಕೋಲು ಕೋಲನ್ನ ಕೋಲೆ ||ಮು||
ಸಂದಿಲವೆಂದ ಬಿಡುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಸಾದಿನ ಸೀರೆ ಉಟ್ಟೆ ಸಾದಿನ ಬೊಟ್ಟು ಇಟ್ಟು
ಸಾದಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಮು||
ಸಾದಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಹಿ||

ಸಾದೇನೆಗನ್ನಡಿ ಮುಖ ನೋಡಿ ಸಂಗವ್ವ
ಸಂದ ಇಲ್ಲೆಂದು ಬಿಡತಾಳೆ ಕೋಲು ಕೋಲನ್ನ ಕೋಲೆ ||ಮು||
ಸಂದ ಇಲ್ಲೆಂದು ಬಿಡತಾಳೆ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನ ಸೀರೆ ಉಟ್ಟು ಮುತ್ತಿನ ಬೊಟ್ಟ ನಿಟ್ಟು
ಜತ್ತಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಮು||
ಜತ್ತಗನ್ನಡಿ ಮುಖ ನೋಡಿ ಕೋಲು ಕೋಲನ್ನ ಕೋಲೆ ||ಮು||

ಒಪ್ಪೀನೆ ಎಂದೆ ಉಡುತಾಳೆ ಕೋಲು ಕೋಲನ್ನ ಕೋಲೆ ||ಮು||
ಒಪ್ಪೀನೆ ಎಂದೆ ಉಡುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಒಪ್ಪೀನೆ ಎಂದೆ ಉಡುತಾಳೆ ಕೋಲು ಕೋಲನ್ನ ಕೋಲೆ ||ಮು||
ಒಪ್ಪೀನೆ ಎಂದೆ ಉಡುತಾಳೆ ಕೋಲು ಕೋಲನ್ನ ಕೋಲೆ ||ಹಿ||

ಕಣ್ಣಿಗೆ ಕಾಡಿಗೆ ಹಚ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಕಣ್ಣಿಗೆ ಕಾಡಿಗೆ ಹಚ್ಯಾಳೆ ಕೋಲು ಕೋಲನ್ನ ಕೋಲೆ || ಹಿ||

ಗಂಧದ ಇಳೇವೇ ಮೆಲದಾಳೆ ಕೋಲು ಕೋಲನ್ನ ಕೋಲೆ ||ಮು||
ಗಂಧದ ಇಳೇವೇ ಮೆಲದಾಳೆ ಕೋಲು ಕೋಲನ್ನ ಕೋಲೆ ||ಹಿ||

ಸಂಗವ್ವ ಮನಿಗೆ ಬೀಗಾ ಹಾಕ್ಯಳವ್ವಾ ಕೋಲು ಕೋಲನ್ನ ಕೋಲ ||ಮು||
ಸಂಗವ್ವ ಮನಿಗೆ ಬೀಗಾ ಹಾಕ್ಯಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ರೆಡ್ಡೇರ ಅರಮನಿಗೆ ಬಂದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ರೆಡ್ಡೇರ ಅರಮನಿಗೆ ಬಂದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕಾಲಿಗೆ ನೀರು ಕೊಟ್ಟಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಕಾಲಿಗೆ ನೀರು ಕೊಟ್ಟಾರವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕೈಕಾಲು ಮಾರಿ ತೊಳೆದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಕೈಕಾಲು ಮಾರಿ ತೊಳೆದಾಳವ್ವಾ  ಕೋಲು ಕೋಲನ್ನ ಕೋಲೆ ||ಹಿ||

ರೆಡ್ಡೇರಾ ಮನಿಯಾಕಾ ಹೋದಳವ್ವಾ ಕೋಲು ಕೋಲನ್ನ ಕೋಲೆ ||ಮು||
ರೆಡ್ಡೇರಾ ಮನಿಯಾಕಾ ಹೋದಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮಲ್ಲಮ್ಮ ಏನೊಂದೆ ನುಡಿದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮ ಏನೊಂದೆ ನುಡಿದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸಾಯತೀನಿ ಬಾರೆ ಸಂಗವಮ್ಮ ಕೋಲು ಕೋಲನ್ನ ಕೋಲೆ ||ಮು||
ಸಾಯತೀನಿ ಬಾರೆ ಸಂಗವಮ್ಮ  ಕೋಲು ಕೋಲನ್ನ ಕೋಲೆ ||ಹಿ||

ಸಾಯತೀನಿ ಬಾರೆ ಸಂಗಮ್ಮ ಕೋಲು ಕೋಲನ್ನ ಕೋಲೆ ||ಮು||
ಸಾಯತೀನಿ ಬಾರೆ ಸಂಗಮ್ಮ ಕೋಲು ಕೋಲನ್ನ ಕೋಲೆ ||ಹಿ||

ಕೊಟ್ಟಂತಹ ಶಿವರಾಯ ನೆನಸವ್ವಾ  ಕೋಲು ಕೋಲನ್ನ ಕೋಲೆ ||ಮು||
ಕೊಟ್ಟಂತಹ ಶಿವರಾಯ ನೆನಸವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕೊಟ್ಟಂತಹ ಶಿವರಾಯ ನೆನಸವ್ವಾ  ಕೋಲು ಕೋಲನ್ನ ಕೋಲೆ ||ಮು||
ಕೊಟ್ಟಂತಹ ಶಿವರಾಯ ನೆನಸವ್ವಾ ಕೋಲು ಕೋಲನ್ನ ಕೋಲೆ ||ಹಿ||

ಬಂಗಾರದ ಜಂತೆಗೆ ಬೆಳ್ಳಿ ಹಗ್ಗನಾ ಹಾಕಿ
ಮಲ್ಲಮ್ಮನ ಕೈ ಒಳಗೆ ಕೊಟ್ಟಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮನ ಕೈ ಒಳಗೆ ಕೊಟ್ಟಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮೂರೇನೆ ಜೋಲಿಗಳ ಒಡಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮೂರೇನೆ ಜೋಲಿಗಳ ಒಡಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮೂರೇನೆ ಜೋಲಿಗಳ ಒಡಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮೂರೇನೆ ಜೋಲಿಗಳ ಒಡಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಒಕ್ಕಳದ ಹೀಡಾಡಿ ಒಕ್ಕಳಕಾ ಕೈ ಇಟ್ಟು
ಒಕ್ಕಳದಾ ದಾರಿ ತಗದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಒಕ್ಕಳದಾ ದಾರಿ ತಗದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಒಕ್ಕಳದಾ ದಾರಿ ತಗದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಒಕ್ಕಳದಾ ದಾರಿ ತಗದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕೊಟ್ಟಿದ್ದ ಶಿವರಾಯನ ನೆನಯವ್ವಾ ಕೋಲು ಕೋಲನ್ನ ಕೋಲೆ ||ಮು||
ಕೊಟ್ಟಿದ್ದ ಶಿವರಾಯನ ನೆನಯವ್ವಾ ಕೋಲು ಕೋಲನ್ನ ಕೋಲೆ ||ಹಿ||

ಬಾಯಿಯಾಗಳ ಮಾತು ಬಾಯಾಗ ಇರಲಿಕ್ಕೆ
ಕಂದಮ್ಮ ಬಯಲಿಗೆ ಬಿದೈತೆವ್ವಾ ಕೋಲು ಕೋಲನ್ನ ಕೋಲೆ ||ಮು||
ಕಂದಮ್ಮ ಬಯಲಿಗೆ ಬಿದೈತೆವ್ವಾ ಕೋಲು ಕೋಲನ್ನ ಕೋಲೆ ||ಹಿ||

ಹೆಣ್ಣು ಮಗಳ ತಾಯೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣು ಮಗಳ ತಾಯೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಹಿ||

ಹೆಣ್ಣು ಮಗಳ ತಾಯೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಮು||
ಹೆಣ್ಣು ಮಗಳ ತಾಯೆ ಮಲ್ಲಮ್ಮ ಕೋಲು ಕೋಲನ್ನ ಕೋಲೆ ||ಹಿ||

ಬಣ್ಣದ ಕುಡುಗೋಲಿಗೆ ಉರಿಯ ಕೊಯಿದೆ ಕೋಲು ಕೋಲನ್ನ ಕೋಲೆ ||ಮು||
ಬಣ್ಣದ ಕುಡುಗೋಲಿಗೆ ಉರಿಯ ಕೊಯಿದೆ ಕೋಲು ಕೋಲನ್ನ ಕೋಲೆ ||ಹಿ||

ಬಂಗಾರದ ಸೂಜಿಲಿ ಚುಟುಕಿನಾಕಿ ಕೋಲು ಕೋಲನ್ನ ಕೋಲೆ ||ಮು||
ಬಂಗಾರದ ಸೂಜಿಲಿ ಚುಟುಕಿನಾಕಿ ಕೋಲು ಕೋಲನ್ನ ಕೋಲೆ ||ಹಿ||

ಕೂಸಿನಾ ಮೈಯ ತೊಳಿದಾರ ಕೋಲು ಕೋಲನ್ನ ಕೋಲೆ ||ಮು||
ಕೂಸಿನಾ ಮೈಯ ತೊಳಿದಾರ ಕೋಲು ಕೋಲನ್ನ ಕೋಲೆ ||ಹಿ||

ಮಂಚದ ಮ್ಯಾಲೆ ಹಾಕ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮಂಚದ ಮ್ಯಾಲೆ ಹಾಕ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕಂಚಿನ ಬಟ್ಟಲದಾಗ ಮಿಂಚೆನ್ನೆ ತಿಳಿದುಪ್ಪಾ
ಮಲ್ಲಿ ಮಲ್ಲಮ್ಮನ ತಲಿಗೆ ಹಚ್ಚಿ ಕೋಲು ಕೋಲನ್ನ ಕೋಲೆ ||ಮು||
ಮಲ್ಲಿ ಮಲ್ಲಮ್ಮನ ತಲಿಗೆ ಹಚ್ಚಿ ಕೋಲು ಕೋಲನ್ನ ಕೋಲೆ ||ಹಿ||

ಬೆಳ್ಳಿ ಬಟ್ಟಲದಾಗ ಒಳ್ಳೆಣ್ಣೆ ತಿಳಿದುಪ್ಪಾ
ಕೆಂಚಿ ಮಲ್ಲಮ್ಮಗಾ ತಲೆಗಚ್ಚಿ  ಕೋಲು ಕೋಲನ್ನ ಕೋಲೆ ||ಮು||
ಕೆಂಚಿ ಮಲ್ಲಮ್ಮಗಾ ತಲೆಗಚ್ಚಿ ಕೋಲು ಕೋಲನ್ನ ಕೋಲೆ ||ಹಿ||

ಆ ಉರಿಗಳ ನೀರು ಆರುತಾ ತೋರುತಾ
ಯಾಲಕಿನಾಕಿ ಸುಳಿಮಳ್ಳೆ ಕೋಲು ಕೋಲನ್ನ ಕೋಲೆ ||ಮು||
ಯಾಲಕಿನಾಕಿ ಸುಳಿಮಳ್ಳೆ ಕೋಲು ಕೋಲನ್ನ ಕೋಲೆ ||ಹಿ||

ದಾರಿ ಬಚ್ಚಲಕಾ ಇಡದಾರೆ ಕೋಲು ಕೋಲನ್ನ ಕೋಲೆ ||ಮು||
ದಾರಿ ಬಚ್ಚಲಕಾ ಇಡದಾರೆ ಕೋಲು ಕೋಲನ್ನ ಕೋಲೆ ||ಹಿ||

ಉಪ್ಪರಿಕ್ಯಾಗಳ ನೀರು ಉಕ್ಕುತಾ ತೋರುತಾ
ಕರ್ಪೂರನಾಕಿ ಸುಳಿಮಳ್ಳೆ ಕೋಲು ಕೋಲನ್ನ ಕೋಲೆ ||ಮು||
ಕರ್ಪೂರನಾಕಿ ಸುಳಿಮಳ್ಳೆ ಕೋಲು ಕೋಲನ್ನ ಕೋಲೆ ||ಹಿ||

ದಾರಿ ಬಚ್ಚಲಕಾ ಹಿಡಿದಾರೆ ಕೋಲು ಕೋಲನ್ನ ಕೋಲೆ ||ಮು||
ದಾರಿ ಬಚ್ಚಲಕಾ ಹಿಡಿದಾರೆ ಕೋಲು ಕೋಲನ್ನ ಕೋಲೆ ||ಹಿ||

ನೀರ ಅರದಾಳೆ ಸಂಗಮ್ಮ ಕೋಲು ಕೋಲನ್ನ ಕೋಲೆ ||ಮು||
ನೀರ ಅರದಾಳೆ ಸಂಗಮ್ಮ  ಕೋಲು ಕೋಲನ್ನ ಕೋಲೆ ||ಹಿ||

ಬಚ್ಚಲದಾಕೆ ಕರಕಂದೆ ಹೋಗಿ ಕೋಲು ಕೋಲನ್ನ ಕೋಲೆ ||ಮು||
ಬಚ್ಚಲದಾಕೆ ಕರಕಂದೆ ಹೋಗಿ ಕೋಲು ಕೋಲನ್ನ ಕೋಲೆ ||ಹಿ||

ಬೇವಿನ ಸಂಗವ್ವ ಹಚ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಬೇವಿನ ಸಂಗವ್ವ ಹಚ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮಲ್ಲಮ್ಮಗೆ ನೀರು ಎರಿದಾಳವ್ವಾ  ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮಗೆ ನೀರು ಎರಿದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಪಟ್ಟದಂಚಿನ ಸೀರೆ ಉಡಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಪಟ್ಟದಂಚಿನ ಸೀರೆ ಉಡಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮುತ್ತಿನ ಕುಬುಸ ತೊಡಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮುತ್ತಿನ ಕುಬುಸ ತೊಡಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ತಲೆಗೇನೆ ಪಟ್ಟು ಬಿಗಿದಾಳವ್ವಾ  ಕೋಲು ಕೋಲನ್ನ ಕೋಲೆ ||ಮು||
ತಲೆಗೇನೆ ಪಟ್ಟು ಬಿಗಿದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ನಡುವಿಗೆ ನಡುಕಟ್ಟು ಬಿಗಿದಾಳವ್ವಾ  ಕೋಲು ಕೋಲನ್ನ ಕೋಲೆ ||ಮು||
ನಡುವಿಗೆ ನಡುಕಟ್ಟು ಬಿಗಿದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕುಡುಗೋಲು ಬೇವಿನ ತಪ್ಲ ಕೈ ಒಳಗೆ  ಕೋಲು ಕೋಲನ್ನ ಕೋಲೆ ||ಮು||
ಕುಡುಗೋಲು ಬೇವಿನ ತಪ್ಲ ಕೈ ಒಳಗೆ  ಕೋಲು ಕೋಲನ್ನ ಕೋಲೆ ||ಹಿ||

ಸೂರ್ಯದೇವಗೆ ಕೈಯ ಮುಗಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಸೂರ್ಯದೇವಗೆ ಕೈಯ ಮುಗಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸೂರ್ಯದೇವಗೆ ಕೈಯ ಮುಗಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಸೂರ್ಯದೇವಗೆ ಕೈಯ ಮುಗಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮಂಚದಾ ಮ್ಯಾಲೆ ಮನಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮಂಚದಾ ಮ್ಯಾಲೆ ಮನಿಸ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಇಲಕಿಯಾ ಸಂಗವ್ವಾ ಹಾಕ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಇಲಕಿಯಾ ಸಂಗವ್ವಾ ಹಾಲ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮಂಚದ ಅಡಿಯಲಿ ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮಂಚದ ಅಡಿಯಲ್ಲಿ ಇಟ್ಟಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ಜಳಕಾ ಮಾಡ್ಯಾಳೆ ಸಂಗವ್ವಾ  ಕೋಲು ಕೋಲನ್ನ ಕೋಲೆ ||ಮು||
ಜಳಕ ಮಾಡ್ಯಾಳೆ ಸಂಗವ್ವಾ ಕೋಲು ಕೋಲನ್ನ ಕೋಲೆ ||ಹಿ||