ರಾಕಿರೆಡ್ಡಿ ಏನೊಂದು ನುಡಿದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿ ಏನೊಂದು ನುಡಿದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಆಕಳ ಕೊಟ್ಟೀವಿ ಕರವ್ಯಾಕೆ ಕೊಡುದಿಲ್ಲ
ನಮಗೆ ಆಕಿಯಾಕ ಕೊಡುದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಮಗೆ ಆಕಿಯಾಕ ಕೊಡುದಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ಹೋಗಿ ಬರ್ರೆವ್ವ ಅವರ ಮನಿಗೆ ಕೋಲು ಕೋಲನ್ನ ಕೋಲೆ ||ಮು||
ಹೋಗಿ ಬರ್ರೆವ್ವ ಅವರ ಮನಿಗೆ ಕೋಲು ಕೋಲನ್ನ ಕೋಲೆ ||ಹಿ||
ಕೇಳಿಸಿ ಬರಬೇಕು ರಾಕಿರೆಡ್ಡಿ ಕೋಲು ಕೋಲನ್ನ ಕೋಲೆ ||ಮು||
ಕೇಳಿಸಿ ಬರಬೇಕು ರಾಕಿರೆಡ್ಡಿ ಕೋಲು ಕೋಲನ್ನ ಕೋಲೆ ||ಹಿ||
ಊದಿನ ಕಡ್ಡಿ ತಗಂದಾರೆ ಕೋಲು ಕೋಲನ್ನ ಕೋಲೆ ||ಮು||
ಊದಿನ ಕಡ್ಡಿ ತಗಂದಾರೆ ಕೋಲು ಕೋಲನ್ನ ಕೋಲೆ ||ಹಿ||
ಅಡಿಕೆಯ ಎಲೆಯ ತಗಂದಾರೆ ಕೋಲು ಕೋಲನ್ನ ಕೋಲೆ ||ಮು||
ಅಡಿಕೆಯ ಎಲೆ ತಗಂದಾರೆ ಕೋಲು ಕೋಲನ್ನ ಕೋಲೆ ||ಹಿ||
ಕರಿಯ ಸಿಪ್ಪಿನಾ ಕಾಯಿ ತಗಂದಾರೆ ಕೋಲು ಕೋಲನ್ನ ಕೋಲೆ ||ಮು||
ಕರಿಯ ಸಿಪ್ಪಿನಾ ಕಾಯಿ ತಗಂದಾರೆ ಕೋಲು ಕೋಲನ್ನ ಕೋಲೆ ||ಹಿ||
ಧರ್ಮಣ್ಣನ ಮನಿಗೆ ಬಂದಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಧರ್ಮಣ್ಣನ ಮನಿಗೆ ಬಂದಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಸಿಂಹಾಸನದ ಮ್ಯಾಲೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಸಿಂಹಾಸನದ ಮ್ಯಾಲೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||
ರೆಡ್ಡೇರಾ ಮಾರಿ ನೋಡ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ರೆಡ್ಡೇರಾ ಮಾರಿ ನೀಡ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಯಾಕೆ ಬಂದೀರಿ ರೆಡ್ಡೇರೇ ಕೋಲು ಕೋಲನ್ನ ಕೋಲೆ ||ಮು||
ಯಾಕೆ ಬಂದೀರಿ ರೆಡ್ಡೇರೇ ಕೋಲು ಕೋಲನ್ನ ಕೋಲೆ ||ಹಿ||
ಹೊತ್ತಿಗಿ ತಗಿಯಪ್ಪ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಹೊತ್ತಿಗಿ ತಗಿಯಪ್ಪ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||
ಹೊತ್ತಿಗೆ ದುಡ್ಡು ಇಟ್ಟಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಹೊತ್ತಿಗೆ ದುಡ್ಡು ಇಟ್ಟಾರವ್ವಾ ಕೋಲು ಕೋಲನ್ನ ಕೋಲೆಠಿ||ಹಿ||
ಅಡಿಕೆಯ ಎಲೆಯ ಇಟ್ಟಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಅಡಿಕೆಯ ಎಲೆಯ ಇಟ್ಟಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಊದಿನಕಡ್ಡಿ ಇಟ್ಟಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಊದಿನಕಡ್ಡಿ ಇಟ್ಟಾರವ್ವಾ ಕೋಲು ಕೋಲನ್ನ ಕೋಲೆ||ಹಿ|||
ಕರಿಸಿಪ್ಪಿನಾ ಕಾಯಿ ಹೊಡೆದಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಕರಿಸಿಪ್ಪಿನಾ ಕಾಯಿ ಹೊಡೆದಾರವ್ವಾ ಕೋಲು ಕೋಲನ್ನ ಕೋಲೆ||ಹಿ||
ಹೊತ್ತಿಗೆ ತಗೀತಾನೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಹೊತ್ತಿಗೆ ತಗೀತಾನೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||
ಮುಸಿನಗು ಧರ್ಮಣ್ಣ ನಗುತಾನೆ ಕೋಲು ಕೋಲನ್ನ ಕೋಲೆ ||ಮು||ಮು
ಮುಸಿನಗು ಧರ್ಮಣ್ಣ ನಗುತಾನೆ ಕೋಲು ಕೋಲನ್ನ ಕೋಲೆ ||ಹಿ||
ಬಂದದ್ದು ಹೇಳೋ ನಮ್ಮ ತಂದೆ ಕೋಲು ಕೋಲನ್ನ ಕೋಲೆ ||ಮು||
ಬಂದದ್ದು ಹೇಳೋ ನಮ್ಮ ತಂದೆ ಕೋಲು ಕೋಲನ್ನ ಕೋಲೆ ||ಹಿ||
ಆಸೆಕಟ್ಟಿಗೆ ಮಳೆ ಮುಂಡೆ ಕೋಲು ಕೋಲನ್ನ ಕೋಲೆ ||ಮು||
ಆಸೆಕಟ್ಟಿಗೆ ಮಳೆ ಮುಂಡೆ ಕೋಲು ಕೋಲನ್ನ ಕೋಲೆ ||ಹಿ||
ಹದಿನಾರು ದಿನದಾಗ ಲಗ್ಗಾನ ಕೋಲು ಕೋಲನ್ನ ಕೋಲೆ ||ಮು||
ಹದಿನಾರು ದಿನದಾಗ ಲಗ್ಗಾನ ಕೋಲು ಕೋಲನ್ನ ಕೋಲೆ ||ಹಿ||
ಬಂದದ್ದು ಹೇಳ್ಯಾನೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಬಂದದ್ದು ಹೇಳ್ಯಾನೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||
ಬಂದದ್ದು ಹೇಳ್ಯಾನೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಬಂದದ್ದು ಹೇಳ್ಯಾನೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||
ತಾಳಿ ಹೊತ್ತು ಮೀರಿದರೆ ಆಗ್ಯಾತೋ ಕೋಲು ಕೋಲನ್ನ ಕೋಲೆ ||ಮು||
ತಾಳಿಹೊತ್ತು ಮೀರಿದರೆ ಆಗ್ಯಾತೋ ಕೋಲು ಕೋಲನ್ನ ಕೋಲೆ ||ಹಿ||
ಆಸೆ ಕಟ್ಟಿಗೆ ಮಳೆ ಮುಂಡೆ ಕೋಲು ಕೋಲನ್ನ ಕೋಲೆ ||ಮು||
ಆಸೆಕಟ್ಟಿಗೆ ಮಳೆ ಮುಂಡೆ ಕೋಲು ಕೋಲನ್ನ ಕೋಲೆ ||ಹಿ||
ತಮ್ಮ ಅರಮನಿಗೆ ಬಂದಾರೆ ಕೋಲು ಕೋಲನ್ನ ಕೋಲೆ ||ಮು||
ತಮ್ಮ ಅರಮನಿಗೆ ಬಂದಾರೆ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮನ ಅರಮನಿಗೆ ಹೋಗ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮನ ಅರಮನಿಗೆ ಹೋಗ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಪಡಸಾಲೆ ಮ್ಯಾಲೆ ಕುಂತಾರೆ ಕೋಲು ಕೋಲನ್ನ ಕೋಲೆ ||ಮು||
ಪದಸಾಲೆ ಮ್ಯಾಲೆ ಕುಂತಾರೆ ಕೋಲು ಕೋಲನ್ನ ಕೋಲೆ ||ಹಿ||
ಭರಮರೆಡ್ಡಿ ಮಾರಿ ನೋಡ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಭರಮರೆಡ್ಡಿ ಮಾರಿ ನೋಡ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ತುಪ್ಪಬಾನ ಉಣ್ಣಾಕೆ ಬಂದೀವಿ ಕೋಲು ಕೋಲನ್ನ ಕೋಲೆ ||ಮು||
ತುಪ್ಪಬಾನ ಉಣ್ಣಾಕೆ ಬಂದೀವಿ ಕೋಲು ಕೋಲನ್ನ ಕೋಲೆ ||ಹಿ||
ತುಪ್ಪಬಾನ ಉಣ್ಣಾಕೆ ಬಂದೀವಿ ಕೋಲು ಕೋಲನ್ನ ಕೋಲೆ ||ಮು||
ತುಪ್ಪಬಾನ ಉಣ್ಣಾಕೆ ಬಂದೀವಿ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮ ಏನೊಂದು ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮ ಏನೊಂದು ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||
ನಿಮಗೆ ಹೆಣ್ಣು ಕೊಡಾದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿಮಗೆ ಹೆಣ್ಣು ಕೊಡಾದಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ಭಾಗ್ಯಕ್ಕೆ ಹೆಣ್ಣು ಮಗಳ ಹಡದೀನಿ ಕೋಲು ಕೋಲನ್ನ ಕೋಲೆ ||ಮು||
ಭಾಗ್ಯಕ್ಕೆ ಹೆಣ್ಣು ಮಗಳ ಹಡದೀನಿ ಕೋಲು ಕೋಲನ್ನ ಕೋಲೆ ||ಹಿ||
ಸಾದರಕಿ ಬಾಳ್ಯವು ಆಗೋದಿಲ್ಲ ಕೋಲು ಕೋಲನ್ನ ಕೋಲೆ ||ಮು||
ಸಾದರಕಿ ಬಾಳ್ಯವು ಆಗೋದಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ಕೊಟ್ಟು ಕಣ್ಣೀಲಿ ನೋಡೊದಿಲ್ಲ ಕೋಲು ಕೋಲನ್ನ ಕೋಲೆ ||ಮು||
ಕೊಟ್ಟು ಕಣ್ಣೀಲಿ ನೋಡೊದಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ನಿಮಗೆ ಮಗಳನ್ನು ಕೊಡೋದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿಮಗೆ ಮಗಳನ್ನು ಕೊಡೋದಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ಒಳಗಿದ್ದ ಭರಮರೆಡ್ಡಿ ಬಂದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಒಳಗಿದ್ದ ಭರಮರೆಡ್ಡಿ ಬಂದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಭರಮರೆಡ್ದಿ ಏನೊಂದೆ ನುಡಿದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಭರಮರೆಡ್ಡಿ ಏನೊಂದೆ ನುಡಿದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಅಳಿಯರಿಗೆ ಕೊಡದೆ ಇನ್ಯಾರಿಗೆ ಕೊಡಬೇಕೆ ಕೋಲು ಕೋಲನ್ನ ಕೋಲೆ ||ಮು||
ಅಳಿಯರಿಗೆ ಕೊಡದೆ ಇನ್ಯಾರಿಗೆ ಕೊಡಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಆಕಳು ಕೊಟ್ಟವರಿಗೆ ಕರಗಳ ಕೊಡಬೇಕು ಕೋಲು ಕೋಲನ್ನ ಕೋಲೆ ||ಮು||
ಆಕಳು ಕೊಟ್ಟವರಿಗೆ ಕರಗಳ ಕೊಡಬೇಕು ಕೋಲು ಕೋಲನ್ನ ಕೋಲೆ ||ಹಿ||
ಕರುಗಳ ನಾವು ಕೊಡಬೇಕೆ ಕೋಲು ಕೋಲನ್ನ ಕೋಲೆ ||ಮು||
ಕರುಗಳ ನಾವು ಕೊಡಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಕೊಡತಿನಿ ಹೋಗು ರೆಡ್ಡೆರೇ ಕೋಲು ಕೋಲನ್ನ ಕೋಲೆ ||ಮು||
ಕೊಡತಿನಿ ಹೋಗು ರೆಡ್ಡೆರೇ ಕೋಲು ಕೋಲನ್ನ ಕೋಲೆ ||ಹಿ||
ಮಾತು ಕೊಟ್ಟಾನೆ ಭರಮರೆಡ್ಡಿ ಕೋಲು ಕೋಲನ್ನ ಕೋಲೆ ||ಮು||
ಮಾತು ಕೊಟ್ಟಾನೆ ಭರಮರೆಡ್ಡಿ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮ ಬೋರ್ಯಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮ ಬೋರ್ಯಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಆಸರಾ ಇಳೇವು ತರುತೀವಿ ಕೋಲು ಕೋಲನ್ನ ಕೋಲೆ ||ಮು||
ಅಸರಾ ಇಳೇವು ತರುತೀವಿ ಕೋಲು ಕೋಲನ್ನ ಕೋಲೆ ||ಹಿ||
ಆಸರಾ ಇಳೇವು ತರುತೀವಿ ಕೋಲು ಕೋಲನ್ನ ಕೋಲೆ ||ಮು||
ಅಸರಾ ಇಳೇವು ತರುತೀವಿ ಕೋಲು ಕೋಲನ್ನ ಕೋಲೆ ||ಹಿ||
ಆಸರಾ ಇಳೇವೆ ನಡೆಸ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಅಸರಾ ಇಳೇವೆ ನಡೆಸ್ಯಾರವ್ವಾ ಕೋಲು ಕೋಲನ್ನ ಕೋಲೆ||ಹಿ||
ಹದಿನಾರು ದಿನದಾಗೆ ಲಗ್ನನೋಡೆ ಕೋಲು ಕೋಲನ್ನ ಕೋಲೆ ||ಮು||
ಹದಿನಾರು ದಿನದಾಗೆ ಲಗ್ನ ನೋಡೆ ಕೋಲು ಕೋಲನ್ನ ಕೋಲೆ ||ಹಿ||
ಭೀಮಗಾ ಸುದ್ದಿ ಮುಟ್ಯಾವವ್ವಾ ಕೋಲು ಕೋಲನ್ನ ಕೋಲೆ ||ಮು||
ಭೀಮಗಾ ಸುದ್ದಿ ಮುಟ್ಯಾವವ್ವಾ ಕೋಲು ಕೋಲನ್ನ ಕೋಲೆ||ಹಿ||
ಗರಡಿ ಮನಿಯಾಗೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಗರಡಿ ಮನಿಯಾಗೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಎದ್ದು ಬಂದಾನ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಎದ್ದು ಬಂದಾನ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಸಿಟ್ಟಿಗಿ ಬಂದಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಸಿಟ್ಟಿಗಿ ಬಂದಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಹೆಗಲ ಮ್ಯಾಲ ಗಜ ಹೊತ್ತು ಕೋಲು ಕೋಲನ್ನ ಕೋಲೆ ||ಮು||
ಹೆಗಲ ಮ್ಯಾಲ ಗಜ ಹೊತ್ತು ಕೋಲು ಕೋಲನ್ನ ಕೋಲೆ ||ಹಿ||
ಕೈಲಾಸಕಾ ಹೋಗ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಕೈಲಾಸಕಾ ಹೋಗ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಗಜ ತಿರುಗಿಸ್ಯಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಗಜ ತಿರುಗಿಸ್ಯಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಯಾಕ ಬಂದೀಯಾ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಯಾಕ ಬಂದೀಯಾ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಕೊರಳಾ ಸರ್ಪ ಕೊಡಬೇಕೆ ಕೋಲು ಕೋಲನ್ನ ಕೋಲೆ ||ಮು||
ಕೊರಳಾ ಸರ್ಪ ಕೊಡಬೇಕೆ ಕೋಲು ಕೋಲನ್ನ ಕೋಲೆ ||ಹಿ||
ನಾನು ಕಣ್ಣು ಇಟ್ಟ ಹೆಣ್ಣು ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಮು||
ನಾನು ಕಣ್ಣು ಇಟ್ಟ ಹೆಣ್ಣು ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಹಿ||
ಕೊರಳಾ ಸರ್ಪ ಕೊಡಬೇಕೆ ಕೋಲು ಕೋಲನ್ನ ಕೋಲೆ ||ಮು||
ಕೊರಳಾ ಸರ್ಪ ಕೊಡಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಶಿವರಾಯ ಏನೊಂದಾ ನುಡಿದಾನೊ ಕೋಲು ಕೋಲನ್ನ ಕೋಲೆ ||ಮು||
ಶಿವರಾಯಏನೊಂದಾ ನುಡದಾನೊ ಕೋಲು ಕೋಲನ್ನ ಕೋಲೆ ||ಹಿ||
ಕಟ್ಟಿರೊ ತಾಳಿ ಹರಿಸಬ್ಯಾಡ ಕೋಲು ಕೋಲನ್ನ ಕೋಲೆ ||ಮು||
ಕಟ್ಟಿರೊ ತಾಳಿ ಹರಿಸಬ್ಯಾಡ ಕೋಲು ಕೋಲನ್ನ ಕೋಲೆ ||ಹಿ||
ಮೂಗಿನ್ಯಾಗಳ ಮೂಗುತಿ ತಗಿಸಬೇಡ ಕೋಲು ಕೋಲನ್ನ ಕೋಲೆ ||ಮು||
ಮೂಗಿನ್ಯಾಗಳ ಮೂಗುತಿ ತಗಿಸಬೇಡ ಕೋಲು ಕೋಲನ್ನ ಕೋಲೆ ||ಹಿ||
ಕೈಯಾಗಳ ಬಳೆಯ ವಡಿಸಬ್ಯಾಡ ಕೋಲು ಕೋಲನ್ನ ಕೋಲೆ ||ಮು||
ಕೈಯಾಗಳ ಬಲೆಯ ವಡಿಸಬ್ಯಾಡ ಕೋಲು ಕೋಲನ್ನ ಕೋಲೆ ||ಹಿ||
ತಲಿಯಾ ಮ್ಯಾಗಳ ದಂಡೆ ತಗಸಬ್ಯಾಡ ಕೋಲು ಕೋಲನ್ನ ಕೋಲೆ ||ಮು||
ತಲಿಯಾ ಮ್ಯಾಗಳ ದಂಡೆ ತಗಸಬ್ಯಾಡ ಕೋಲು ಕೋಲನ್ನ ಕೋಲೆ ||ಹಿ||
ಉಡಿಯಾಗಳ ಉಡಿಯಕ್ಕಿ ತಗಿಸಬ್ಯಾಡ ಕೋಲು ಕೋಲನ್ನ ಕೋಲೆ ||ಮು||
ಉಡಿಯಾಗಳ ಉಡಿಯಕ್ಕಿ ತಗಿಸಬ್ಯಾಡ ಕೋಲು ಕೋಲನ್ನ ಕೋಲೆ ||ಹಿ||
ಕೈಯಾಗಳ ಕಂಕಣ ಹರಿಸಬ್ಯಾಡ ಕೋಲು ಕೋಲನ್ನ ಕೋಲೆ ||ಮು||
ಕೈಯಾಗಳ ಕಂಕಣ ಹರಿಸಬ್ಯಾಡ ಕೋಲು ಕೋಲನ್ನ ಕೋಲೆ ||ಹಿ||
ಬಣ್ಣದ ಐರಾಣಿ ವಡಿಸಬ್ಯಾಡ ಕೋಲು ಕೋಲನ್ನ ಕೋಲೆ ||ಮು||
ಬಣ್ಣದ ಐರಾಣಿ ವಡಿಸಬ್ಯಾಡ ಕೋಲು ಕೋಲನ್ನ ಕೋಲೆ ||ಹಿ||
ಬಣ್ಣದ ಐರಾಣಿ ವಡಿಸಬ್ಯಾಡ ಕೋಲು ಕೋಲನ್ನ ಕೋಲೆ ||ಮು||
ಬಣ್ಣದ ಐರಾಣಿ ವಡಿಸಬ್ಯಾಡ ಕೋಲು ಕೋಲನ್ನ ಕೋಲೆ ||ಹಿ||
ಅಂದಾದ ಆಲುಗಂಬ ತಗಿಸಬ್ಯಾಡ ಕೋಲು ಕೋಲನ್ನ ಕೋಲೆ ||ಮು||
ಅಂದಾದ ಆಲುಗಂಬ ತಗಿಸಬ್ಯಾಡ ಕೋಲು ಕೋಲನ್ನ ಕೋಲೆ ||ಹಿ||
ಅಂದಾದ ಆಲುಗಂಬ ತಗಿಸಬ್ಯಾಡ ಕೋಲು ಕೋಲನ್ನ ಕೋಲೆ ||ಮು||
ಅಂದಾದ ಆಲುಗಂಬ ತಗಿಸಬ್ಯಾಡ ಕೋಲು ಕೋಲನ್ನ ಕೋಲೆ ||ಹಿ||
ಸಿಟ್ಟಿಗಿ ಬಂದಾನ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಸಿಟ್ಟಿಗಿ ಬಂದಾನ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಕೈಲಾಸ ಗದಗದ ನಡುಗಿತವ್ವಾ ಕೋಲು ಕೋಲನ್ನ ಕೋಲೆ ||ಮು||
ಕೈಲಾಸ ಗದಗದ ನಡುಗಿತವ್ವಾ ಕೋಲು ಕೋಲನ್ನ ಕೋಲೆ ||ಹಿ||
ಶಿವರಾಯ ಗದಗಟ್ಟಿ ನಡುಗ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಶಿವರಾಯ ಗದಹಟ್ಟಿ ನಡುಗ್ಯಾನವ್ವಾ ಸ್ ಕೋಲು ಕೋಲನ್ನ ಕೋಲೆ ||ಹಿ||
ಕೊಡುತೀನಿ ಬಾರೋ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಕೊಡುತೀನಿ ಬಾರೋ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಕೊರಳಲ್ಲಿನ ಹಾವ ಕೊಟ್ಟನವ್ವಾ ಕೋಲು ಕೋಲನ್ನ ಕೋಲೆ ||ಮು||
ಕೊರಳಲ್ಲಿನ ಹಾವ ಕೊಟ್ಟನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಹಾವಿಗೆ ಹಾಲು ಕುಡಿಸ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಹಾವಿಗೆ ಹಾಲು ಕುಡಿಸ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಭೀಮ ಹೇಳಿದಂಗೆ ಕೇಳಬೇಕೆ ಕೋಲು ಕೋಲನ್ನ ಕೋಲೆ ||ಮು||
ಭೀಮ ಹೇಳಿದಂಗೆ ಕೇಳಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಭೀಮ ಹೇಳಿದಂಗೆ ಕೇಳಬೇಕೆ ಕೋಲು ಕೋಲನ್ನ ಕೋಲೆ ||ಮು||
ಭೀಮ ಹೇಳಿದಂಗೆ ಕೇಳಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಎಬ್ಬೊಟ್ಟು ಇಟ್ಟು ಹೇಳತಾನೆ ಕೋಲು ಕೋಲನ್ನ ಕೋಲೆ ||ಮು||
ಎಬ್ಬೊಟ್ಟು ಇಟ್ಟು ಹೇಳತಾನೆ ಕೋಲು ಕೋಲನ್ನ ಕೋಲೆ ||ಹಿ||
ಭೀಮನಿಗೆ ಹಾವು ಕೊಟ್ಟನವ್ವಾ ಕೋಲು ಕೋಲನ್ನ ಕೋಲೆ ||ಮು||
ಭೀಮನಿಗೆ ಹಾವು ಕೊಟ್ಟನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಹಾವಿಗೆ ಬುದ್ಧಿ ಹೇಳ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಹಾವಿಗೆ ಬುದ್ಧಿ ಹೇಳ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಭೀಮನ ಹೆಗಲಮ್ಯಾಲೆ ಹಾವುನೋಡೆ ಕೋಲು ಕೋಲನ್ನ ಕೋಲೆ ||ಮು||
ಭೀಮನ ಹೆಗಲಮ್ಯಾಲೆ ಹಾವುನೋಡೆ ಕೋಲು ಕೋಲನ್ನ ಕೋಲೆ ||ಹಿ||
ಆಕಾಶ ಬಿಟ್ಟು ಬಂದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಆಕಾಶ ಬಿಟ್ಟು ಬಂದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಗರಡಿ ಮನಿಯಾಕ ಹೋಗ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಗರಡಿ ಮನಿಯಾಕ ಹೋಗ್ಯಾನವ್ವಾಕೋಲು ಕೋಲನ್ನ ಕೋಲೆ ||ಹಿ||
ಹಾವಿಗೆ ಹಾಲು ಕುಡಿಸ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಹಾವಿಗೆ ಹಾಲು ಕುಡಿಸ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಹಾವಿಗೆ ಬುದ್ಧಿ ಹೇಳತಾನೆ ಕೋಲು ಕೋಲನ್ನ ಕೋಲೆ ||ಮು||
ಹಾವಿಗೆ ಬುದ್ಧಿ ಹೇಳತಾನೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಬೊಟ್ಟು ಕಚ್ಚ ಬ್ಯಾಡೋ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಬೊಟ್ಟು ಕಚ್ಚ ಬ್ಯಾಡೋ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ಡಿ ಬೊಟ್ಟು ಕಚ್ಚಬೇಕೆ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿ ಬೊಟ್ಟು ಕಚ್ಚಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಬಾದಾಳದಾಗೆ ಬಿಟ್ಟನವ್ವಾ ಕೋಲು ಕೋಲನ್ನ ಕೋಲೆ ||ಮು||
ಬಾದಾಳದಾಗೆ ಬಿಟ್ಟನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಬಾಗಿಲ ಪಕ್ಕದಲಿ ಕುಂತನವ್ವಾ ಕೋಲು ಕೋಲನ್ನ ಕೋಲೆ ||ಮು||
ಬಾಗಿಲ ಪಕ್ಕದಲಿ ಕುಂತನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಮನಿಯ ಮಾರುಗಳ ಬಳಿದಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಮನಿಯ ಮಾರುಗಳ ಬಳಿದಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಬಜಾರಸಾಲು ಬಳಿಸ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಬಜಾರಸಾಲು ಬಳಿಸ್ಯಾರವ್ವಾ ಕೋಲು ಕೋಲನ್ನ ಕೋಲೆ||ಹಿ||
ಅಕ್ಕಿ ಬ್ಯಾಳಿಗಳ ಜೋಡಿಸ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಅಕ್ಕಿ ಬ್ಯಾಳಿಗಳ ಜೋಡಿಸ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಬಟ್ಟೆ ಬರಿಗಳ ಕೊಂಡರವ್ವಾ ಕೋಲು ಕೋಲನ್ನ ಕೋಲೆ ||ಮು||
ಬಟ್ಟೆ ಬರಿಗಳ ಕೊಂಡರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಮನಿಯಾಗ ಹಿರಿಯರನಾ ಮಾಡ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಮನಿಯಾಗ ಹಿರಿಯರನಾ ಮಾಡ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಹಂದರಾಲಗಂಬಾ ಹಾಕ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಹಂದರಾಲಗಂಬಾ ಹಾಕ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಬಣ್ಣದ ಐರ್ಯಾಣಿ ತುಂಬ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಬಣ್ಣದ ಐರ್ಯಾಣಿ ತುಂಬ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಅಂಗಳಕೆ ನೀರೆ ಇಡುದಾರೆ ಕೋಲು ಕೋಲನ್ನ ಕೋಲೆ ||ಮು||
ಅಂಗಳಕೆ ನೀರೆ ಇಡುದಾರೆ ಕೋಲು ಕೋಲನ್ನ ಕೋಲೆ ||ಹಿ||
ಸುರಿಗೀಯ ಅವರೆ ಸುತ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಸುರಗೀಯ ಅವರೆ ಸುತ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಒನಕೆ ಮ್ಯಾಲೆ ರಾಕಿರೆಡ್ಡಿ ಕುಂತಾನೆ ಕೋಲು ಕೋಲನ್ನ ಕೋಲೆ ||ಮು||
ಒನಕೆ ಮ್ಯಾಲೆ ರಾಕಿರೆಡ್ಡಿ ಕುಂತಾನೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಒನಕಿ ಮ್ಯಾಲೆ ಕುಂತಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಒನಕಿ ಮ್ಯಾಲೆ ಕುಂತಾಳೆ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ಡಿಗೆನ್ನೆ ಹಾಕ್ಯಾರೆ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿಗೆನ್ನೆ ಹಾಕ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವಗೆನ್ನೆ ಹಾಕ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವಗೆನ್ನೆ ಹಾಕ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ಡಿಗೆ ಅರಿಶಿಣ ಹಚ್ಯಾರೆ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿಗೆ ಅರಿಶಿಣ ಹಚ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ಡಿಗೆ ನೀರು ಎರದಾರೆ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿಗೆ ನೀರು ಎರದಾರೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವಗೆ ನೀರು ಹಾಕ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವಗೆ ನೀರು ಹಾಕ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ಡಿ ಮದುಮಗ ಆಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿ ಮದುಮಗ ಆಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಮದಲಗಿತ್ತಿ ಆಗ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಮದಲಗಿತ್ತಿ ಆಗ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ಡಿಗೆ ಹೊಸಬಟ್ಟೆ ಕೊಟ್ಟಾರೆ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿಗೆ ಹೊಸಬಟ್ಟೆ ಕೊಟ್ಟಾರೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವಗೆ ಸೀರೆ ಕುಬಸ ಕೊಟ್ಟಾರೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವಗೆ ಸೀರೆ ಕುಬಸ ಕೊಟ್ಟಾರೆ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ಡಿಗೆ ಕಂಕಣ ಕಟ್ಯಾರೆ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿಗೆ ಕಂಕಣ ಕಟ್ಟಾರೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವಗೆ ಕಂಕಣ ಕಟ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವಗೆ ಕಂಕಣ ಕಟ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ದಿಗೆ ಈಬುತ್ತಿ ಹಚ್ಯಾರೆ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ದಿಗೆ ಈಬುತ್ತಿ ಹಚ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
Leave A Comment