ಅವ್ವಣೆವ್ವಗೆ ಈಬುತ್ತಿ ಹಚ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವಗೆ ಈಬುತ್ತಿ ಹಚ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ದಿಗೆ ಕುಂಕುಮ ಹಚ್ಯಾರೆ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ದಿಗೆ ಕುಂಕುಮ ಹಚ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವಗೆ ಕುಂಕುಮ ಹಚ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವಗೆ ಕುಂಕುಮ ಹಚ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಹೂವಿನ ಸರ ಹಾಕ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಹೂವಿನ ಸರ ಹಾಕ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ತಲೆಮ್ಯಾಲೆ ದಂಡೆ ಹಾಕ್ಯಾರೆ ಕೋಲು ಕೋಲನ್ನ ಕೋಲೆ ||ಮು||
ತಲೆಮ್ಯಾಲೆ ದಂಡೆ ಹಾಕ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಅಡಿಕೆಯಾ ಎಲೆಯ ಕೊಟ್ಟಾರೆ ಕೋಲು ಕೋಲನ್ನ ಕೋಲೆ ||ಮು||
ಅಡಿಕೆಯಾ ಎಲೆಯ ಕೊಟ್ಟಾರೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವಗೆ ಓಕುಳಿನೀರು ಎತ್ತ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವಗೆ ಓಕುಳಿನೀರು ಎತ್ತ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಸಾಸಿ ಅಕ್ಕಿ ಅವರೆ ಇಟ್ಟಾರೆ ಕೋಲು ಕೋಲನ್ನ ಕೋಲೆ ||ಮು||
ಸಾಸಿ ಅಕ್ಕಿ ಅವರೆ ಇಟ್ಟಾರೆ ಕೋಲು ಕೋಲನ್ನ ಕೋಲೆ ||ಹಿ||
ಕಳಸ ಅವರಿs…..ನ್ನಾ ಬೆಳಗ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಕಳಸ ಅವರಿs…..ನ್ನಾ ಬೆಳೆಗ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಸುರಗಿs…..ಯಾದರೆ ಎತ್ತ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಸುರಗಿs…..ಯಾದರೆ ಎತ್ತ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಸುರಗಿs…..ಯಾದರೆ ಎತ್ತ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಸುರಗಿs….. ಯಾದರೆ ಎತ್ತ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಸೂರ್ಯದೇವಗಾ ಕೈಯ ಮುಗಿದಾರೆ ಕೋಲು ಕೋಲನ್ನ ಕೋಲೆ ||ಮು||
ಸೂರ್ಯದೇವಗಾ ಕೈಯ ಮುಗಿದಾರೆ ಕೋಲು ಕೋಲನ್ನ ಕೋಲೆ ||ಹಿ||
ದೇವರ ಮನಿಯಾಕೆ ಹೋಗುತಾರೆ ಕೋಲು ಕೋಲನ್ನ ಕೋಲೆ ||ಮು||
ದೇವರ ಮನಿಯಾಕೆ ಹೋಗುತಾರೆ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ದಿ ಮುಂದೆ ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ದಿ ಮುಂದೆ ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಹಿಂದೆ ಹೋಗುತಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಹಿಂದೆ ಹೋಗುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಬಲಗಾಲ ವಸ್ತಿಲ್ಯಾಕ ಇಟ್ಟಾನೆ ಕೋಲು ಕೋಲನ್ನ ಕೋಲೆ ||ಮು||
ಬರಗಾಲ ವಸ್ತಿಲ್ಯಾಕ ಇಟ್ಟಾನೆ ಕೋಲು ಕೋಲನ್ನ ಕೋಲೆ ||ಹಿ||
ಸರ್ಪ ರಾಕಿರೆಡ್ದಿ ಬೊಟ್ಟು ಕಚೈತೆ ಕೋಲು ಕೋಲನ್ನ ಕೋಲೆ ||ಮು||
ಸರ್ಪ ರಾಕಿರೆಡ್ಡಿ ಬೊಟ್ಟು ಕಚೈತೆ ಕೋಲು ಕೋಲನ್ನ ಕೋಲೆ ||ಹಿ||
ಸರ್ಪ ಬಾದಾಳದಾಗೆ ಹೋಗೈತೆ ಕೋಲು ಕೋಲನ್ನ ಕೋಲೆ ||ಮು||
ಸರ್ಪ ಬಾದಾಳದಾಗೆ ಹೋಗೈತೆ ಕೋಲು ಕೋಲನ್ನ ಕೋಲೆ ||ಹಿ||
ಸರ್ಪ ಭೀಮನ ಮುಂದೆ ಹೇಳುತೈತೆ ಕೋಲು ಕೋಲನ್ನ ಕೋಲೆ ||ಮು||
ಸರ್ಪ ಭೀಮನ ಮುಂದೆ ಹೇಳುತೈತೆ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ದಿ ಬೊಟ್ಟು ಕಚ್ಚೀನಿ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿ ಬೊಟ್ಟು ಕಚ್ಚೀನಿ ಕೋಲು ಕೋಲನ್ನ ಕೋಲೆ ||ಹಿ||
ಅಪ್ಪಣೆ ಕೊಡು ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಅಪ್ಪಣೆ ಕೊಡು ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಕೈಲಾಸಕಾ ಹಾವ ಹೋಗೈತೆ ಕೋಲು ಕೋಲನ್ನ ಕೋಲೆ ||ಮು||
ಕೈಲಾಸಕಾ ಹಾವ ಹೋಗೈತೆ ಕೋಲು ಕೋಲನ್ನ ಕೋಲೆ ||ಹಿ||
ಶಿವರಾಯನ ಕೊರಳಿಗೆ ಸುತೈತೆ ಕೋಲು ಕೋಲನ್ನ ಕೋಲೆ ||ಮು||
ಶಿವರಾಯನ ಕೊರಳಿಗೆ ಸುತೈತೆ ಕೋಲು ಕೋಲನ್ನ ಕೋಲೆ ||ಹಿ||
ರಾಮರಾಮನೆಂದು ಬಿದ್ದಾನೆ ಕೋಲು ಕೋಲನ್ನ ಕೋಲೆ ||ಮು||
ರಾಮರಾಮನೆಂದು ಬಿದ್ದಾನೆ ಕೋಲು ಕೋಲನ್ನ ಕೋಲೆ ||ಹಿ||
ಜಲ್ಮ ಬಿಟ್ಟಾನೆ ರಾಕಿರೆಡ್ಡಿ ಕೋಲು ಕೋಲನ್ನ ಕೋಲೆ ||ಮು||
ಜಲ್ಮ ಬಿಟ್ಟಾನೆ ರಾಕಿರೆಡ್ಡಿ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಬೋರ್ಯಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಬೋರ್ಯಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಅನ್ನ ತಿಂಅಬಲಿಲ್ಲ ಕಾಯಿ ಜೀಕಲಿಲ್ಲ ಕೋಲು ಕೋಲನ್ನ ಕೋಲೆ ||ಮು||
ಅನ್ನ ತಿಂಬಲಿಲ್ಲ ಕಾಯ ಜೀಕಲಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ನನ್ನ ಋಣ ನಿನಗೆ ಅರಿಯಲಿಲ್ಲ ಕೋಲು ಕೋಲನ್ನ ಕೋಲೆ ||ಮು||
ನನ್ನ ಋಣ ನಿನಗೆ ಅರಿಯಲಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಬೋರ್ಯಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಬೋರ್ಯಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಸಿದಿಗಿಯಾ ಅವರಿನ್ನಾ ಕಟ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಸಿದಿಗಿಯಾ ಅವರಿನ್ನಾ ಕಟ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ಡಿನಾ ಅದರ ಮ್ಯಾಲೆ ಇಟ್ಟರವ್ವಾ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿನಾ ಅದರ ಮ್ಯಾಲೆ ಇಟ್ಟರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಹೂವಿನ ಸರ ಹಾಕ್ಯರವ್ವಾ ಕೋಲು ಕೋಲನ್ನ ಕೋಲೆ ||ಮು||
ಹೂವಿನ ಸರ ಹಾಕ್ಯರವ್ವಾ ಕೋಲು ಕೋಲನ್ನ ಕೋಲೆ ||ಹಿ||
ನಾಲಾರ ಅವರು ಹೊತ್ತರವ್ವಾ ಕೋಲು ಕೋಲನ್ನ ಕೋಲೆ ||ಮು||
ನಾಲಾರ ಅವರು ಹೊತ್ತರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಬೋರ್ಯಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಬೋರ್ಯಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಹಿ||
ನಡುಗಡ ಅವರಿನ್ನ ಮಾಡ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ನಡುಗಡ ಅವರಿನ್ನ ಮಾಡ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ತಲೆಮ್ಮಾಗಳ ದಂಡೆ ವಗದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ತಲೆಮ್ಮಾಗಳ ದಂಡೆ ವಗದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕೈಯಾಗಳ ಕಂಕಣ ಹರಿದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಕೈಯಾಗಳ ಕಂಕಣ ಹರಿದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಉಡಿಯಾಗಳ ಉಡಿಯಕ್ಕಿ ಸಲ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಉಡಿಯಾಗಳ ಉಡಿಯಕ್ಕಿ ಸಲ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಮೂಗಿನ್ಯಾಗಳ ಮೂಗುತಿ ತಗದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಮೂಗಿನ್ಯಾಗಳ ಮೂಗುತಿ ತಗದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಬಣ್ಣದ ಐರಾಣಿ ಒಡದಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಬಣ್ಣದ ಐರಾಣಿ ಒಡದಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಬೋರ್ಯಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಬೋರ್ಯಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಸಿರಿಗಂಧದ ಚಕ್ಕೆ ತಂದರವ್ವಾ ಕೋಲು ಕೋಲನ್ನ ಕೋಲೆ ||ಮು||
ಸಿರಿಗಂಧದ ಚಕ್ಕೆ ತಂದರವ್ವಾ ಕೋಲು ಕೋಲನ್ನ ಕೋಲೆ ||ಹಿ||
ರಾಕಿರೆಡ್ಡಿನ ಅದರಾಗ ಇಟ್ಟರವ್ವಾ ಕೋಲು ಕೋಲನ್ನ ಕೋಲೆ ||ಮು||
ರಾಕಿರೆಡ್ಡಿನ ಅದರಾಗ ಇಟ್ಟರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಡಬ್ಬಿ ಚಿಮಣಿ ಎಣ್ಣೆ ಸುರಿವ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಡಬ್ಬಿ ಚಿಮಣಿ ಎಣ್ಣೆ ಸುರಿವ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕಿಚ್ಚು ಮಾಡ್ಯಾರೆ ರಾಕಿರೆಡ್ಡಿ ಕೋಲು ಕೋಲನ್ನ ಕೋಲೆ ||ಮು||
ಕಿಚ್ಚು ಮಾಡ್ಯಾರೆ ರಾಕಿರೆಡ್ಡಿ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಬೋರ್ಯಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಬೋರ್ಯಾಡಿ ಅಳುತಾಳೆ ಕೋಲು ಕೋಲನ್ನ ಕೋಲೆ ||ಹಿ||
ಮಲ್ಲಮ್ಮ ಏನೊಂದ ನುಡಿದಾಳೆ ಕೋಲು ಕೋಲನ್ನ ಕೋಲೆ ||ಮು||
ಮಲ್ಲಮ್ಮ ಏನೊಂದ ನುಡಿದಾಳೆ ಕೋಲು ಕೋಲನ್ನ ಕೋಲೆ ||ಹಿ||
ಸಾದಿರಿಕಿ ಬಾಳ್ಯವೆ ಆಗೋದಿಲ್ಲ ಕೋಲು ಕೋಲನ್ನ ಕೋಲೆ ||ಮು||
ಸಾದಿರಿಕಿ ಬಾಳ್ಯವೆ ಆಗೋದಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ನಿಮ್ಮಿಗಿ ನಾನೆ ಕೊಡದಿಲ್ಲ ಕೋಲು ಕೋಲನ್ನ ಕೋಲೆ ||ಮು||
ನಿಮ್ಮಿಗಿ ನಾನೆ ಕೊಡದಿಲ್ಲ ಕೋಲು ಕೋಲನ್ನ ಕೋಲೆ ||ಹಿ||
ನನ್ನ ಮಗಳೇನೆ ರಂಡೆ ಆಗ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ನನ್ನ ಮಗಳೇನೆ ರಂಡೆ ಆಗ್ಯಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕಿಚ್ಚುಮಾಡಿ ಮನಿಗೆ ಬಂದರವ್ವಾ ಕೋಲು ಕೋಲನ್ನ ಕೋಲೆ ||ಮು||
ಕಿಚ್ಚುಮಾಡಿ ಮನಿಗೆ ಬಂದರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವಗೆ ಏನೊಂದೆ ನುಡಿದಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವಗೆ ಏನೊಂದೆ ನುಡಿದಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಏಳುಮಂದಿ ಅಣ್ಣಾರೆ ಏನೇ ನುಡಿದೆ ಕೋಲು ಕೋಲನ್ನ ಕೋಲೆ ||ಮು||
ಏಳುಮಂದಿ ಅಣ್ಣಾರೆ ಏನೇ ನುಡಿದೆ ಕೋಲು ಕೋಲನ್ನ ಕೋಲೆ ||ಹಿ||
ನಮ್ಮ ತಂಗಿನಾದರೆ ತೂಗಬೇಕೆ ಕೋಲು ಕೋಲನ್ನ ಕೋಲೆ ||ಮು||
ನಮ್ಮ ತಂಗಿನಾದರೆ ತೂಗಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಎಲೆ ಅಡಿಕೆ ಹೂವ ತರಿಸ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಎಲೆ ಅಡಿಕೆ ಹೂವ ತರಿಸ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಮಂಚದ ಮ್ಯಾಲೆ ಹಾಕ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಮಂಚದ ಮ್ಯಾಲೆ ಹಾಕ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವಗಾದರೆ ತೂಗ್ಯಾರವ್ವಾ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವಗಾದರೆ ತೂಗ್ಯಾರವ್ವಾ ಕೋಲು ಕೋಲನ್ನ ಕೋಲೆ ||ಹಿ||
ಯಾಕ ಬಂದಾರೆ ಅಣ್ಣನವ್ರಾ ಕೋಲು ಕೋಲನ್ನ ಕೋಲೆ ||ಮು||
ಯಾಕ ಬಂದಾರೆ ಅಣ್ಣನವ್ರಾ ಕೋಲು ಕೋಲನ್ನ ಕೋಲೆ ||ಹಿ||
ಹೆಂಡರಿಗೆನಂತ ನುಡಿದಾರೆ ಕೋಲು ಕೋಲನ್ನ ಕೋಲೆ ||ಮು||
ಹೆಂಡರಿಗೆನಂತ ನುಡಿದಾರೆ ಕೋಲು ಕೋಲನ್ನ ಕೋಲೆ ||ಹಿ||
ದಿನವು ತಂಗೀನಾ ತೂಗಬೇಕೆ ಕೋಲು ಕೋಲನ್ನ ಕೋಲೆ ||ಮು||
ದಿನವು ತಂಗೀನಾ ತೂಗಬೇಕೆ ಕೋಲು ಕೋಲನ್ನ ಕೋಲೆ ||ಹಿ||
ಒಂದು ದಿನ ತೂಗ್ಯಾರೆ ಎರಡು ದಿನ ತೂಗ್ಯಾರೆ ಕೋಲು ಕೋಲನ್ನ ಕೋಲೆ ||ಮು||
ಒಂದು ದಿನ ತೂಗ್ಯಾರೆ ಎರಡು ದಿನ ತೂಗ್ಯಾರೆ ಕೋಲು ಕೋಲನ್ನ ಕೋಲೆ ||ಹಿ||
ಮೂರು ದಿನದಾಗ ಏನು ನುಡಿದೆ ಕೋಲು ಕೋಲನ್ನ ಕೋಲೆ ||ಮು||
ಮೂರು ದಿನದಾಗ ಏನು ನುಡಿದೆ ಕೋಲು ಕೋಲನ್ನ ಕೋಲೆ ||ಹಿ||
ಮೂರು ದಿನದಾಗ ಏನು ನುಡಿದೆ ಕೋಲು ಕೋಲನ್ನ ಕೋಲೆ ||ಮು||
ಮೂರು ದಿನದಾಗ ಏನು ನುಡಿದೆ ಕೋಲು ಕೋಲನ್ನ ಕೋಲೆ ||ಹಿ||
ಬಟ್ಟನೆ ಮಾರಿಗೆs….. ನೆಟ್ಟನೆ ಮೂಗಿಗೆs…..
ರಂಡಿತನ ಅವ್ವಣೆವ್ವಗೆ ತರವಲ್ಲ ಕೋಲು ಕೋಲನ್ನ ಕೋಲೆ ||ಮು||
ರಂಡಿತನ ಅವ್ವಣೆವ್ವಗೆ ತರವಲ್ಲ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವನs….. ಕಿವ್ಯಾಕೆ ಬಿದ್ದಾವೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವನs….. ಕಿವ್ಯಾಕೆ ಬಿದ್ದಾವೆ ಕೋಲು ಕೋಲನ್ನ ಕೋಲೆ ||ಹಿ||
ಮಂಚ ಇಳಿದಾಳೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಮು||
ಮಂಚ ಇಳಿದಾಳೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಹಿ||
ಮಂಚ ಇಳಿದಾಳೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಮು||
ಮಂಚ ಇಳಿದಾಳೆ ಅವ್ವಣೆವ್ವ ಕೋಲು ಕೋಲನ್ನ ಕೋಲೆ ||ಹಿ||
ಸಣ್ಣನೆ ಕಣಕಕ್ಕೆ ತಣ್ಣೀರ ಹದಮಾಡಿ
ಸಣ್ಣ ಯಾಲಕ್ಕಿ ಪುಡಿ ಮಾಡಿ ಸಾಗಿನವಲೆ ಸೊ ||
ಎಣ್ಣೆ ಹೋಳಿಗೆ ಬೇಗ ಅತಿಮಾಡಿ ಸಾಗಿನವಲೆ ಸೊ ||
ಕಾದ ಹೆಸರಿನಾಕೆ ಅಕ್ಕಿಯ ಸುರಿವ್ಯಾಳೆ ಸಕ್ಕರೆ ತುಪ್ಪ ತಾ ಹಾಕ್ಯಾಳೆ ಸಾಗಿನವಲೆ ಸೊ||
ತಂಗೆವ್ವಾ ಮಾಡಿ ತಾ ಇಳಿವ್ಯಾಳೆ ಸಾಗಿನವಲೆ ಸೊ ||
ಸುಡ ಎಸರಿನಾಕೆ ಶಾವಿಗೆ ಸುರಿವ್ಯಾಳೆ
ನೀಲ ಸಕ್ಕರೆ ತಾ ಇಳುವ್ಯಾಳೆ ಸಾಗಿನವಲೆ ಸೊ ||
ತಾಯವ್ವಾ ಮಾಡಿ ತಾ ಇಳುವ್ಯಾಳೆ ಸಾಗಿನವಲೆ ಸೊ ||
ದಾರ್ಯಾಗ ಇರುವಳೆ ದಾರ್ಯಾಗ
ತಾಯವ್ವ ಕಾಸಿ ತಾ ಇಳಿವ್ಯಾಳೆ ಸಾಗಿನವಲೆ ಸೊ ||
ಕುಂಬಳ ಕಾಯಿ ತುಂಬ ಸೋಸಿದಂಗ
ಇಂಗಿ ಎಣ್ಣೆ ತಾ ಇಟ್ಟು ಇಳಿಸ್ಯಾಳೆ ಸಾಗಿನವಲೆ ಸೊ ||
ತಂಗೆವ್ವಾ ಮಾಡಿತಾ ಇಳಿವ್ಯಾಳೆ ಸಾಗಿನವಲೆ ಸೊ ||
ಆಗಲಕಾಯಿ ಬೇಗಿನ ಬದನೆಕಾಯಿ
ತಾಯವ್ವಾ ಮಾಡಿ ತಾ ಇಳಿವ್ಯಾಳೆ ಸಾಗಿನವಲೆ ಸೊ ||
ಕಂಚಿಕಾರ ಎಮ್ಮೆ ಮಿಂಚಿಕಾರ ಎಮ್ಮೆ
ಎಮ್ಮೆ ಹಾಲು ಕರೆದು ತಾ ಕಾಸಿ ಇಳಿವ್ಯಾಳೆ ಸಾಗಿನವಲೆ ಸೊ ||
ತಂಗೆವ್ವಾ ಕಾಸಿ ತಾ ಇಳಿವ್ಯಾಳೆ ಸಾಗಿನವಲೆ ಸೊ ||
ತಂಗೆವ್ವಾ ಕಾಸಿ ತಾ ಇಳಿವ್ಯಾಳೆ ಸಾಗಿನವಲೆ ಸೊ ||
ತಾಯಿ ಮಂಚಕಾ ತಾ ಇಳಿವ್ಯಾಳೆ ಸಾಗಿನವಲೆ ಸೊ ||
ತಾಯಿ ಹೋಗಿ ತಾ ಎಬ್ಬಿಸ್ಯಾಳೆ ಸಾಗಿನವಲೆ ಸೊ ||
ಯಾರೆನಂದಾರೆ ಮಗಳೆ ಯಾರೆ ನಾಡ್ಯಾರೆ ಮಗಳೆ
ಹತ್ತಿದಾ ಮಂಚ ನೀ ನಿಳಿದವ್ವಾ ಸಾಗಿನವಲೆ ಸೊ ||
ಯಾರೇನೆ ಅಂದಿಲ್ಲ ಯಾರೇನೆ ಆಡಿಲ್ಲ
ಹತ್ತಿದಾ ಮಂಚ ನಾ ಇಳಿದೀನಿ ಸಾಗಿನವಲೆ ಸೊ ||
ತಂದೆ ಮಂಚಕಾ ತಾ ಹೋಗ್ಯಾಳೆ ಸಾಗಿನವಲೆ ಸೊ ||
ತಂದಿನಾ ಹೋಗಿ ಎಬ್ಬಿಸ್ಯಾಳೆ ಸಾಗಿನವಲೆ ಸೊ ||
ಯಾರೆನಂದಾರೆ ಮಗಳೆ ಯಾರೆ ನಾಡ್ಯಾರೆ ಮಗಳೆ
ನೀನೆಚ್ಚಿದಾ ಮಂಚ ನೀ ನಿಳಿದವ್ವಾ ಸಾಗಿನವಲೆ ಸೊ ||
ಯಾರೇನೆ ಅಂದಿಲ್ಲ ಯಾರೇನೆ ಆಡಿಲ್ಲ
ನಾ ಹತ್ತಿದಾ ಮಂಚ ನಾ ಇಳಿದೀನಿ ಸಾಗಿನವಲೆ ಸೊ ||
ತಾಯಿ ಮಕ್ಕಳಾ ತಾ ಒಳಗುಟ್ಟು ಸಾಗಿನವಲೆ ಸೊ ||
ತಾಯಿ ಮಕ್ಕಳಾ ತಾ ಒಳಗುಟ್ಟು ಸಾಗಿನವಲೆ ಸೊ ||
ಕಟ್ಟಿದ ಕರುವಾ ತಾ ಬಿಟ್ಟಾಳೆ ಸಾಗಿನವಲೆ ಸೊ ||
ಕಟ್ಟಿದ ಕರುವಾ ತಾ ಬಿಟ್ಟಾಳೆ ಸಾಗಿನವಲೆ ಸೊ ||
ಕರ ಹೋಗಿತೆಂದು ತಾ ಹೋಗುತಾಳೆ ಸಾಗಿನವಲೆ ಸೊ ||
ಕರ ಹೋಗಿತೆಂದು ತಾ ಹೋಗುತಾಳೆ ಸಾಗಿನವಲೆ ಸೊ ||
ಪಂಚೇನ ಪಾಂಡವರ ಬಾಳೆವನವಾ ಕೋಲು ಕೋಲನ್ನ ಕೋಲೆ ||ಮು||
ಪಂಚೇನ ಪಾಂಡವರ ಬಾಳೆವನವಾ ಕೋಲು ಕೋಲನ್ನ ಕೋಲೆ ||ಹಿ||
ಧರ್ಮರಾಯರ ಪಗಡೆ ನೋಡೆ ಕೋಲು ಕೋಲನ್ನ ಕೋಲೆ ||ಮು||
ಧರ್ಮರಾಯರ ಪಗಡೆ ನೋಡೆ ಕೋಲು ಕೋಲನ್ನ ಕೋಲೆ ||ಹಿ||
ಗಜಭೀಮ ನೋಡೆ ನೋಡುತಾನೆ ಕೋಲು ಕೋಲನ್ನ ಕೋಲೆ ||ಮು||
ಗಜಭೀಮ ನೋಡೆ ನೋಡುತಾನೆ ಕೋಲು ಕೋಲನ್ನ ಕೋಲೆ ||ಹಿ||
ಗಜಭೀಮ ನೋಡೆ ನೋಡುತಾನೆ ಕೋಲು ಕೋಲನ್ನ ಕೋಲೆ ||ಮು||
ಗಜಭೀಮ ನೋಡೆ ನೋಡುತಾನೆ ಕೋಲು ಕೋಲನ್ನ ಕೋಲೆ ||ಹಿ||
ಹೊಟ್ಟೆ ಹಸಿದಾವೋ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಹೊಟ್ಟೆ ಹಸಿದಾವೋ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಹೊಟ್ಟೆ ಹಸಿದಾವೋ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಹೊಟ್ಟೆ ಹಸಿದಾವೋ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಅಪ್ಪಣೆ ಕೊಡು ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಅಪ್ಪಣೆ ಕೊಡು ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||
ಅಪ್ಪಣೆ ಕೊಡು ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಅಪ್ಪಣೆ ಕೊಡು ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||
ಮುಸಿನಗು ಧರ್ಮಣ್ಣ ನಗುತಾನೆ ಕೋಲು ಕೋಲನ್ನ ಕೋಲೆ ||ಮು||
ಮುಸಿನಗು ಧರ್ಮಣ್ಣ ನಗುತಾನೆ ಕೋಲು ಕೋಲನ್ನ ಕೋಲೆ ||ಹಿ||
ಇದೊಂದೆ ಆಟ ಆಡೆ ಭೀಮ ಕೋಲು ಕೋಲನ್ನ ಕೋಲೆ ||ಮು||
ಇದೊಂದೆ ಆಟ ಆಡೆ ಭೀಮ ಕೋಲು ಕೋಲನ್ನ ಕೋಲೆ ||ಹಿ||
ಇದೊಂದೆ ಆಟ ಆಡೆ ಭೀಮ ಕೋಲು ಕೋಲನ್ನ ಕೋಲೆ ||ಮು||
ಇದೊಂದೆ ಆಟ ಆಡೆ ಭೀಮ ಕೋಲು ಕೋಲನ್ನ ಕೋಲೆ ||ಹಿ||
ಸಿಟ್ಟುಮಾಡಿ ಕವಡಿ ಒಗೆದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಸಿಟ್ಟುಮಾಡಿ ಕವಡಿ ಒಗೆದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಸಿಟ್ಟುಮಾಡಿ ಕವಡಿ ಒಗೆದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಸಿಟ್ಟುಮಾಡಿ ಕವಡಿ ಒಗೆದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಜಾಡಿಸಿ ಕವಡಿ ಒಗೆದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಜಾಡಿಸಿ ಕವಡಿ ಒಗೆದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವನ ದಾರಿ ನೋಡುತಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವನ ದಾರಿ ನೋಡುತಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಒಬ್ಬಾಳೆ ಹೋಗುತಾಳೆ ಅಟ್ಟಂಬ ಅಡವಿಗೆ ಕೋಲು ಕೋಲನ್ನ ಕೋಲೆ ||ಮು||
ಒಬ್ಬಾಳೆ ಹೋಗುತಾಳೆ ಅಟ್ಟಂಬ ಅಡವಿಗೆ ಕೋಲು ಕೋಲನ್ನ ಕೋಲೆ ||ಹಿ||
ಹೊಟ್ಟೆ ಹಸಿತಾವೊ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಹೊಟ್ಟೆ ಹಸಿತಾವೊ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||
ಅಪ್ಪಣೆ ಕೊಡು ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಅಪ್ಪಣೆ ಕೊಡು ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||
ಅಪ್ಪಣೆ ಕೊಟ್ಟಾನೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಮು||
ಅಪ್ಪಣೆ ಕೊಟ್ಟಾನೆ ಧರ್ಮಣ್ಣ ಕೋಲು ಕೋಲನ್ನ ಕೋಲೆ ||ಹಿ||
ಕೊಂತೆಮ್ಮನತಾಕ ಬಂದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಕೊಂತೆಮ್ಮನತಾಕ ಬಂದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕಿವಿ ಕೇಳಿಸದಾಕೆ ಕೊಂತೆಮ್ಮ ಕೋಲು ಕೋಲನ್ನ ಕೋಲೆ ||ಮು||
ಕಿವಿ ಕೇಳಿಸದಾಕೆ ಕೊಂತೆಮ್ಮ ಕೋಲು ಕೋಲನ್ನ ಕೋಲೆ ||ಹಿ||
ಹೊಟ್ಟೆ ಬಡಕಂಡ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಹೊಟ್ಟೆ ಬಡಕಂಡ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಕೊಪ್ಪರಿಕೀ ಅನ್ನ ಇಡೋ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಕೊಪ್ಪರಿಕೀ ಅನ್ನ ಇಡೋ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಕೊಪ್ಪರಿಕಿ ಇಟ್ಟಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಕೊಪ್ಪರಿಕಿ ಇಟ್ಟಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಕೊಪ್ಪರಿಕಿ ಇಟ್ಟಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಕೊಪ್ಪರಿಕಿ ಇಟ್ಟಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಖಂಡಗದ ಅಕ್ಕಿ ಸುರುವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಖಂಡಗದ ಅಕ್ಕಿ ಸುರುವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಖಂಡಗದ ಅಕ್ಕಿ ಭೀಮ ತಿರುವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಖಂಡಗದ ಅಕ್ಕಿ ಭೀಮ ತಿರುವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||
ಕೊಪ್ಪರಿಕಿ ಇಳಿಸು ಬಾ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಕೊಪ್ಪರಿಕಿ ಇಳಿಸು ಬಾ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
Leave A Comment