ಕೊಲ್ಲೇನೆ ಡೋಣಿಗೆ ಸುರುವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಕೊಲ್ಲೇನೆ ಡೋಣಿಗೆ ಸುರುವ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಹಾಲು ತುಪ್ಪ ನೀಡೆ ಹಡದವ್ವಾ ಕೋಲು ಕೋಲನ್ನ ಕೋಲೆ ||ಮು||
ಹಾಲು ತುಪ್ಪ ನೀಡೆ ಹಡದವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸತ್ಯುಳ್ಳ ಧರ್ಮರನ ನೆನೆಯೆ ಮಗನೆ ಕೋಲು ಕೋಲನ್ನ ಕೋಲೆ ||ಮು||
ಸತ್ಯುಳ್ಳ ಧರ್ಮರನ ನೆನೆಯೆ ಮಗನೆ ಕೋಲು ಕೋಲನ್ನ ಕೋಲೆ ||ಹಿ||

ಹಾಲಿನ ಕಾಲೇವು ತಿರುಗಬಾರದೆ ಕೋಲು ಕೋಲನ್ನ ಕೋಲೆ ||ಮು||
ಹಾಲಿನ ಕಾಲೇವು ತಿರುಗಬಾರದೆ ಕೋಲು ಕೋಲನ್ನ ಕೋಲೆ ||ಹಿ||

ಹಾಲಿನ ಕಾಲೇವು ತಿರುಗಬಾರದೆ ಕೋಲು ಕೋಲನ್ನ ಕೋಲೆ ||ಮು||
ಹಾಲಿನ ಕಾಲೇವು ತಿರುಗಬಾರದೆ ಕೋಲು ಕೋಲನ್ನ ಕೋಲೆ ||ಹಿ||

ಗ್ಯಾನದ ಧರ್ಮರ ಗ್ಯಾನದಾರದರೆ
ತುಪ್ಪದ ಕಾಲೇವು ತಿರುಗಬಾರದೆ ಕೋಲು ಕೋಲನ್ನ ಕೋಲೆ ||ಮು||
ತುಪ್ಪದ ಕಾಲೇವು ತಿರುಗಬಾರದೆ ಕೋಲು ಕೋಲನ್ನ ಕೋಲೆ ||ಹಿ||

ಬಾಯಿಯಾಗಳ ಮಾತು ಬಾಯಾಗ ಇರಲಿಕ್ಕೆ
ತುಪ್ಪದ ಕಾಲೇವು ತಿರುಗ್ಯಾವವ್ವಾ ಕೋಲು ಕೋಲನ್ನ ಕೋಲೆ ||ಮು||
ತುಪ್ಪದ ಕಾಲೇವು ತಿರುಗ್ಯಾವವ್ವಾ ಕೋಲು ಕೋಲನ್ನ ಕೋಲೆ ||ಹಿ||

ತುಪ್ಪದ ಕಾಲೇವು ತಿರುಗ್ಯಾವವ್ವಾ ಕೋಲು ಕೋಲನ್ನ ಕೋಲೆ ||ಮು||
ತುಪ್ಪದ ಕಾಲೇವು ತಿರುಗ್ಯಾವವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸವರೇನೆ ಮೂರು ತುತ್ತಿಗೆ ಉಂಡಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಸವರೇನೆ ಮೂರು ತುತ್ತಿಗೆ ಉಂಡಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಇರುಮಂಡಿ ಭೀಮಣ್ಣ ಹಚ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಇರುಮಂಡಿ ಭೀಮಣ್ಣ ಹಚ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕೊಪ್ಪರಿಕಿ ನೀರು ಕುಡಿದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಕೊಪ್ಪರಿಕಿ ನೀರು ಕುಡಿದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮೂಗೀಲಿ ಉಸುರು ಬಿಟ್ಟನವ್ವಾ ಕೋಲು ಕೋಲನ್ನ ಕೋಲೆ ||ಮು||
ಮೂಗೀಲಿ ಉಸುರು ಬಿಟ್ಟನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಅಡಿಕೆ ಎಲೆ ಕೊಡೆs…..  ಹಡದವ್ವಾ ಕೋಲು ಕೋಲನ್ನ ಕೋಲೆ ||ಮು||
ಅಡಿಕೆ ಎಲೆ ಕೊಡೆs…..  ಹಡದವ್ವಾ ಕೋಲು ಕೋಲನ್ನ ಕೋಲೆ ||ಹಿ||

ಅಡಿಕೆ ಕೊಟ್ಟಾಳೆs…..  ಹಡದವ್ವಾ ಕೋಲು ಕೋಲನ್ನ ಕೋಲೆ ||ಮು||
ಅಡಿಕೆ ಕೊಟ್ಟಾಳೆs…..  ಹಡದವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮುಡುಗಿ ಎಲೆ ಜಮಡ್ಯಾನವ್ವಾ ಭೀಮಣ್ಣ ಕೋಲು ಕೋಲನ್ನ ಕೋಲೆ ||ಮು||
ಮುಡುಗಿ ಎಲೆ ಜಮಡ್ಯಾನವ್ವಾ ಭೀಮಣ್ಣ ಕೋಲು ಕೋಲನ್ನ ಕೋಲೆ ||ಹಿ||

ಚೀಲ ತಂಬಾಕs…..  ಜಮಡ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಚೀಲ ತಂಬಾಕs…..  ಜಮಡ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಚಲಕೀಲಿ ಸುಣ್ಣ ಏಳದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಚಲಕೀಲಿ ಸುಣ್ಣ ಏಳದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕಚಿ ಪಿಸಿ ಭೀಮ ಜಮಡ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಕಚಿ ಪಿಸಿ ಭೀಮ ಜಮಡ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಪಿಸಿ ಪಿಸಿ ಭೀಮ ಉಗುಳ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಪಿಸಿ ಪಿಸಿ ಭೀಮ ಉಗುಳ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಭೀಮನ ಉಗುಳು ಕಾಲೇವಾಗಿ ಕೋಲು ಕೋಲನ್ನ ಕೋಲೆ ||ಮು||
ಭೀಮನ ಉಗುಳು ಕಾಲೇವಾಗಿ ಕೋಲು ಕೋಲನ್ನ ಕೋಲೆ ||ಹಿ||

ಸಣ್ಣ ಹಳ್ಳಾಗಿ ಹರದಾವೆ ಕೋಲು ಕೋಲನ್ನ ಕೋಲೆ ||ಮು||
ಸಣ್ಣ ಹಳ್ಳಾಗಿ ಹರದಾವೆ ಕೋಲು ಕೋಲನ್ನ ಕೋಲೆ ||ಹಿ||

ಏಳೂರು ಎಮ್ಮೆ ಗುಡ್ಡು ಸಿಕ್ಕಂದಾವೆ ಕೋಲು ಕೋಲನ್ನ ಕೋಲೆ ||ಮು||
ಏಳೂರು ಎಮ್ಮೆ ಗುಡ್ಡು ಸಿಕ್ಕಂದಾವೆ ಕೋಲು ಕೋಲನ್ನ ಕೋಲೆ ||ಹಿ||

ಏಳೂರು ಎಮ್ಮೆ ಗುಡ್ಡು ಸಿಕ್ಕಂದಾವೆ ಕೋಲು ಕೋಲನ್ನ ಕೋಲೆ ||ಮು||
ಏಳೂರು ಎಮ್ಮೆ ಗುಡ್ಡು ಸಿಕ್ಕಂದಾವೆ ಕೋಲು ಕೋಲನ್ನ ಕೋಲೆ ||ಹಿ||

ಹಲ್ಲಾಕ ಕಡ್ಡಿ ಕೊಡೆ ಹಡದವ್ವಾ ಕೋಲು ಕೋಲನ್ನ ಕೋಲೆ ||ಮು||
ಹಲ್ಲಾಕ ಕಡ್ಡಿ ಕೊಡೆ ಹಡದವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮುಂಡೋಣಕಿ ಕೊಟ್ಟಾಳೆ ಕೊಂತೆಮ್ಮ ಕೋಲು ಕೋಲನ್ನ ಕೋಲೆ ||ಮು||
ಮುಂಡೋಣಕಿ ಕೊಟ್ಟಾಳೆ ಕೊಂತೆಮ್ಮ ಕೋಲು ಕೋಲನ್ನ ಕೋಲೆ ||ಹಿ||

ಆ ಕಡೆ ಸ್ವಾಟ್ಯಾಕ ತಿವಿಕೊಂಡೆ ಈ ಕಡೆ ಸ್ವಾಟ್ಯಾಕ ತಿವಿಕೊಂಡೆ
ಹಲ್ಲಾಕ ಕಡ್ಡಿ ಭೀಮ ತಿವಿಕೊಂಡ ಕೋಲು ಕೋಲನ್ನ ಕೋಲೆ ||ಮು||
ಹಲ್ಲಾಕ ಕಡ್ಡಿ ಭೀಮ ತಿವಿಕೊಂಡ ಕೋಲು ಕೋಲನ್ನ ಕೋಲೆ ||ಹಿ||

ಹಲ್ಲಾಕ ಕಡ್ಡಿ ಭೀಮ ತಿವಿಕೊಂಡ ಕೋಲು ಕೋಲನ್ನ ಕೋಲೆ ||ಮು||
ಹಲ್ಲಾಕ ಕಡ್ಡಿ ಭೀಮ ತಿವಿಕೊಂಡ ಕೋಲು ಕೋಲನ್ನ ಕೋಲೆ ||ಹಿ||

ಪಿಸಿ ಪಿಸಿ ಭೀಮ ಉಗುಳ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಪಿಸಿ ಪಿಸಿ ಭೀಮ ಉಗುಳ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಭೀಮ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಮು||
ಭೀಮ ಏನೊಂದೆ ನುಡಿದಾನೆ ಕೋಲು ಕೋಲನ್ನ ಕೋಲೆ ||ಹಿ||

ಬ್ಯಾಟಿಗಾದರೆ ನಾ ಹೋಗುತೀನಿ ಕೋಲು ಕೋಲನ್ನ ಕೋಲೆ ||ಮು||
ಬ್ಯಾಟಿಗಾದರೆ ನಾ ಹೋಗುತೀನಿ ಕೋಲು ಕೋಲನ್ನ ಕೋಲೆ ||ಹಿ||

ಅಣ್ಣನಾ ಮುಂದೆ ಹೇಳಬ್ಯಾಡ ಕೋಲು ಕೋಲನ್ನ ಕೋಲೆ ||ಮು||
ಅಣ್ಣನಾ ಮುಂದೆ ಹೇಳಬ್ಯಾಡ ಕೋಲು ಕೋಲನ್ನ ಕೋಲೆ ||ಹಿ||

ಕಿವಿ ಕೇಳಿಸದಾಕಿ ಕೊಂತೆವ್ವಾ ಕೋಲು ಕೋಲನ್ನ ಕೋಲೆ ||ಮು||
ಕಿವಿ ಕೇಳಿಸದಾಕಿ ಕೊಂತೆವ್ವಾ ಕೋಲು ಕೋಲನ್ನ ಕೋಲೆ ||ಹಿ||

ಪಂಚ ಪಾಂಡವರ ಬಾಳೆವನವಾ ಕೋಲು ಕೋಲನ್ನ ಕೋಲೆ ||ಮು||
ಪಂಚ ಪಾಂಡವರ ಬಾಳೆವನವಾ ಕೋಲು ಕೋಲನ್ನ ಕೋಲೆ ||ಹಿ||

ಕಂಡ ಹಣ್ಣು ತಿನುಕಂತ ಕವಲೇನೆ ಹೋಗಿಕಂತ
ಸೀಗರ ಫಳ್ಯಾಕ ಹೋಗ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಸೀಗರ ಫಳ್ಯಾಕ ಹೋಗ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಸೀಗರ ಫಳ್ಯಾಕ ಹೋಗ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಸೀಗರ ಫಳ್ಯಾಕ ಹೋಗ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಆರುಗಾವುದಾ ಮಾಡಿ ಕಣ್ಣು ಕೆಂಪಗೆ ಮಾಡಿ
ಕುಪ್ಪಳಿಸಿ ಭೀಮ ಎಗರ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಕುಪ್ಪಳಿಸಿ ಭೀಮ ಎಗರ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಕುಪ್ಪಳಿಸಿ ಭೀಮ ಎಗರ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಕುಪ್ಪಳಿಸಿ ಭೀಮ ಎಗರ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಸಿಳ್ಳು ಇಟ್ಟು ಹಾವನ ಕರದಾನೆ ಕೋಲು ಕೋಲನ್ನ ಕೋಲೆ ||ಮು||
ಸಿಳ್ಳು ಇಟ್ಟು ಹಾವನ ಕರದಾನೆ ಕೋಲು ಕೋಲನ್ನ ಕೋಲೆ ||ಹಿ||

ಹಾವಿಗೆ ಹಾಲು ಕುಡಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಹಾವಿಗೆ ಹಾಲು ಕುಡಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ನಮ್ಮನ್ಯಾಕೆ ಕರೆಸಿದೆ ನಮ್ಮ ತಂದೆ ಕೋಲು ಕೋಲನ್ನ ಕೋಲೆ ||ಮು||
ನಮ್ಮನ್ಯಾಕೆ ಕರೆಸಿದೆ ನಮ್ಮ ತಂದೆ ಕೋಲು ಕೋಲನ್ನ ಕೋಲೆ ||ಹಿ||

ಸೀಗರ ಫಳ್ಯಾಗ ನಿಮ್ಮ ತಾಯಿ ಕುಂತಾಳೆ ಕೋಲು ಕೋಲನ್ನ ಕೋಲೆ ||ಮು||
ಸೀಗರ ಫಳ್ಯಾಗ ನಿಮ್ಮ ತಾಯಿ ಕುಂತಾಳೆ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮ ತಾಯಿ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಮು||
ನಿಮ್ಮ ತಾಯಿ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮ ತಾಯಿ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಮು||
ನಿಮ್ಮ ತಾಯಿ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವನ ಮೈಮೇಲೆ ಹಾಡ್ಯಾವೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವನ ಮೈಮೇಲೆ ಹಾಡ್ಯಾವೆ ಕೋಲು ಕೋಲನ್ನ ಕೋಲೆ ||ಹಿ||

ಮುಚ್ಚಿದ ಕಣ್ಣು ತಗಿವಲ್ಲ ಕೋಲು ಕೋಲನ್ನ ಕೋಲೆ ||ಮು||
ಮುಚ್ಚಿದ ಕಣ್ಣು ತಗಿವಲ್ಲ ಕೋಲು ಕೋಲನ್ನ ಕೋಲೆ ||ಹಿ||

ಕೈ ಮುಗಿದು ಹಿಂದಕ್ಕೆ ತಿರುಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಕೈ ಮುಗಿದು ಹಿಂದಕ್ಕೆ ತಿರುಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ನಮ್ಮವ್ವ ಶರಣೆ ಕುಂತಾಳೆ ಕೋಲು ಕೋಲನ್ನ ಕೋಲೆ ||ಮು||
ನಮ್ಮವ್ವ ಶರಣೆ ಕುಂತಾಳೆ ಕೋಲು ಕೋಲನ್ನ ಕೋಲೆ ||ಹಿ||

ಮುಚ್ಚಿದಾ ಕಣ್ಣು ತಗಿವಲ್ಲ ಕೋಲು ಕೋಲನ್ನ ಕೋಲೆ ||ಮು||
ಮುಚ್ಚಿದಾ ಕಣ್ಣು ತಗಿವಲ್ಲ ಕೋಲು ಕೋಲನ್ನ ಕೋಲೆ ||ಹಿ||

ಕೈ ಮುಗಿದು ಹಿಂದಕೆ ತಿರುಗೀನಿ ಕೋಲು ಕೋಲನ್ನ ಕೋಲೆ ||ಮು||
ಕೈ ಮುಗಿದು ಹಿಂದಕೆ ತಿರುಗೀನಿ ಕೋಲು ಕೋಲನ್ನ ಕೋಲೆ ||ಹಿ||

ಹುಲಿರಾಜನ ಆತ ಕರಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಹುಲಿರಾಜನ ಆತ ಕರಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಹುಲಿರಾಜನ ಆತ ಕರಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಹುಲಿರಾಜನ ಆತ ಕರಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಯಾಕ ಕರೆಸಿದೆ ನಮ್ಮ ತಂದೆ ಕೋಲು ಕೋಲನ್ನ ಕೋಲೆ ||ಮು||
ಯಾಕ ಕರೆಸಿದೆ ನಮ್ಮ ತಂದೆ ಕೋಲು ಕೋಲನ್ನ ಕೋಲೆ ||ಹಿ||

ಯಾಕ ಕರೆಸಿದೆ ನಮ್ಮ ತಂದೆ ಕೋಲು ಕೋಲನ್ನ ಕೋಲೆ ||ಮು||
ಯಾಕ ಕರೆಸಿದೆ ನಮ್ಮ ತಂದೆ ಕೋಲು ಕೋಲನ್ನ ಕೋಲೆ ||ಹಿ||

ಸೀಗರ ಫಳ್ಯಾಗ ನಿಮ್ಮ ತಾಯಿ ಕುಂತಾಳೆ ಕೋಲು ಕೋಲನ್ನ ಕೋಲೆ ||ಮು||
ಸೀಗರ ಫಳ್ಯಾಗ ನಿಮ್ಮ ತಾಯಿ ಕುಂತಾಳೆ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮ ತಾಯಿ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಮು||
ನಿಮ್ಮ ತಾಯಿ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮ ತಾಯಿ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಮು||
ನಿಮ್ಮ ತಾಯಿ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಹಿ||

ಹುಲಿರಾಜ ಕೈ ಮುಗಿದು ಜಿಗಿದಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಹುಲಿರಾಜ ಕೈ ಮುಗಿದು ಜಿಗಿದಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮುಚ್ಚಿದಾ ಕಣ್ಣು ತಗಿವಲ್ಲ ಕೋಲು ಕೋಲನ್ನ ಕೋಲೆ ||ಮು||
ಮುಚ್ಚಿದಾ ಕಣ್ಣು ತಗಿವಲ್ಲ ಕೋಲು ಕೋಲನ್ನ ಕೋಲೆ ||ಹಿ||

ಕೈ ಮುಗಿದು ಹಿಂದಕಾ ತಿರುಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಕೈ ಮುಗಿದು ಹಿಂದಕಾ ತಿರುಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ನಮ್ಮವ್ವ ಶರಣೆ ಕುಂತಾಳೆ ಕೋಲು ಕೋಲನ್ನ ಕೋಲೆ ||ಮು||
ನಮ್ಮವ್ವ ಶರಣೆ ಕುಂತಾಳೆ ಕೋಲು ಕೋಲನ್ನ ಕೋಲೆ ||ಹಿ||

ಮುಚ್ಚಿದಾ ಕಣ್ಣು ತಗಿವಲ್ಲ ಕೋಲು ಕೋಲನ್ನ ಕೋಲೆ ||ಮು||
ಮುಚ್ಚಿದಾ ಕಣ್ಣು ತಗಿವಲ್ಲ ಕೋಲು ಕೋಲನ್ನ ಕೋಲೆ ||ಹಿ||

ಹುಲಿರಾಜ ಗವಿಗೆ ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಹುಲಿರಾಜ ಗವಿಗೆ ಹೋಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ಕರಡಿರಾಜನ ಕರಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಕರಡಿಗೆ ಹೆಂಡ ಕುಡಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ನನ್ನನ್ಯಾಕೆ ಕರೆಸಿದೋ ನಮ್ಮ ತಂದೆ ಕೋಲು ಕೋಲನ್ನ ಕೋಲೆ ||ಮು||
ನನ್ನನ್ಯಾಕೆ ಕರೆಸಿದೋ ನಮ್ಮ ತಂದೆ ಕೋಲು ಕೋಲನ್ನ ಕೋಲೆ ||ಹಿ||

ಸೀಗರ ಫಳ್ಯಾಗ ನಿಮ್ಮ ತಾಯಿ ಕುಂತಾಳೆ ಕೋಲು ಕೋಲನ್ನ ಕೋಲೆ ||ಮು||
ಸೀಗರ ಫಳ್ಯಾಗ ನಿಮ್ಮ ತಾಯಿ ಕುಂತಾಳೆ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮ ತಾಯಿ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಮು||
ನಿಮ್ಮ ತಾಯಿ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮ ತಾಯಿ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಮು||
ನಿಮ್ಮ ತಾಯಿ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಹಿ||

ಗವಿಗೆ ಹೋಗ್ಯಾನೆ ಕರಡಿರಾಜ ಕೋಲು ಕೋಲನ್ನ ಕೋಲೆ ||ಮು||
ಗವಿಗೆ ಹೋಗ್ಯಾನೆ ಕರಡಿರಾಜ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವನ ಮುಂದೆ ನಿಂತಾನೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವನ ಮುಂದೆ ನಿಂತಾನೆ ಕೋಲು ಕೋಲನ್ನ ಕೋಲೆ ||ಹಿ||

ಗದ್ಲಾ ಮಾಡ್ಯಾನೆ ಕರಡಿರಾಜ ಕೋಲು ಕೋಲನ್ನ ಕೋಲೆ ||ಮು||
ಗದ್ಲಾ ಮಾಡ್ಯಾನೆ ಕರಡಿರಾಜ ಕೋಲು ಕೋಲನ್ನ ಕೋಲೆ ||ಹಿ||

ಮುಚ್ಚಿದಾ ಕಣ್ಣು ತಗಿವಲ್ಲಾ ಕೋಲು ಕೋಲನ್ನ ಕೋಲೆ ||ಮು||
ಮುಚ್ಚಿದಾ ಕಣ್ಣು ತಗಿವಲ್ಲಾ ಕೋಲು ಕೋಲನ್ನ ಕೋಲೆ ||ಹಿ||

ಕೈ ಮುಗಿದು ಹಿಂದಕೆ ತಿರುಗ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಕೈ ಮುಗಿದು ಹಿಂದಕೆ ತಿರುಗ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ನಮ್ಮವ್ವ ಶರಣೆ ಕುಂತಾಳೆ ಕೋಲು ಕೋಲನ್ನ ಕೋಲೆ ||ಮು||
ನಮ್ಮವ್ವ ಶರಣೆ ಕುಂತಾಳೆ ಕೋಲು ಕೋಲನ್ನ ಕೋಲೆ ||ಹಿ||

ಮುಚ್ಚಿದಾ ಕಣ್ಣು ತಗಿವಲ್ಲ ಕೋಲು ಕೋಲನ್ನ ಕೋಲೆ ||ಮು||
ಮುಚ್ಚಿದಾ ಕಣ್ಣು ತಗಿವಲ್ಲ ಕೋಲು ಕೋಲನ್ನ ಕೋಲೆ ||ಹಿ||

ಗುಡ್ಡಕ್ಕೆ ಕರಡಿ ಹೋಗೈತೆ ಕೋಲು ಕೋಲನ್ನ ಕೋಲೆ ||ಮು||
ಗುಡ್ಡಕ್ಕೆ ಕರಡಿ ಹೋಗೈತೆ ಕೋಲು ಕೋಲನ್ನ ಕೋಲೆ ||ಹಿ||

ಊರಾಳ ದೆವ್ವ ಕರಿಸ್ಯಾನೆ ಕೋಲು ಕೋಲನ್ನ ಕೋಲೆ ||ಮು||
ಊರಾಳ ದೆವ್ವ ಕರಿಸ್ಯಾನೆ ಕೋಲು ಕೋಲನ್ನ ಕೋಲೆ ||ಹಿ||

ದೆವ್ವಗೆ ರೊಟ್ಟಿ ಎಸೆದಾನೆ ಕೋಲು ಕೋಲನ್ನ ಕೋಲೆ ||ಮು||
ದೆವ್ವಗೆ ರೊಟ್ಟಿ ಎಸೆದಾನೆ ಕೋಲು ಕೋಲನ್ನ ಕೋಲೆ ||ಹಿ||

ನಮ್ಮನ್ಯಾಕೆ ಕರೆಸಿದೋ ನಮ್ಮ ತಂದೆ ಕೋಲು ಕೋಲನ್ನ ಕೋಲೆ ||ಮು||
ನಮ್ಮನ್ಯಾಕೆ ಕರೆಸಿದೋ ನಮ್ಮ ತಂದೆ ಕೋಲು ಕೋಲನ್ನ ಕೋಲೆ ||ಹಿ||

ಸೀಗರ ಫಳ್ಯಾಗ ನಿಮ್ಮ ತಾಯಿ ಕುಂತಾಳೆ ಕೋಲು ಕೋಲನ್ನ ಕೋಲೆ ||ಮು||
ಸೀಗರ ಫಳ್ಯಾಗ ನಿಮ್ಮ ತಾಯಿ ಕುಂತಾಳೆ ಕೋಲು ಕೋಲನ್ನ ಕೋಲೆ ||ಹಿ||

ನಿಮ್ಮವ್ವನ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಮು||
ನಿಮ್ಮವ್ವನ ದುಃಖ ಕೇಳಿ ಬರ್ರೋ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವನ ಮುಂದೆ ಕುಣಿಯುತಾವೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವನ ಮುಂದೆ ಕುಣಿಯುತಾವೆ ಕೋಲು ಕೋಲನ್ನ ಕೋಲೆ ||ಹಿ||

ಮುಚ್ಚಿದ ಕಣ್ಣು ತಗಿವಲ್ಲ ಕೋಲು ಕೋಲನ್ನ ಕೋಲೆ ||ಮು||
ಮುಚ್ಚಿದ ಕಣ್ಣು ತಗಿವಲ್ಲ ಕೋಲು ಕೋಲನ್ನ ಕೋಲೆ ||ಹಿ||

ಕೈ ಮುಗಿದು ಹಿಂದಕಾ ತಿರುಗ್ಯಾವೆ ಕೋಲು ಕೋಲನ್ನ ಕೋಲೆ ||ಮು||
ಕೈ ಮುಗಿದು ಹಿಂದಕಾ ತಿರುಗ್ಯಾವೆ ಕೋಲು ಕೋಲನ್ನ ಕೋಲೆ ||ಹಿ||

ನಮ್ಮವ್ವ ಶರಣೆ ಕುಂತಾಳೆ ಕೋಲು ಕೋಲನ್ನ ಕೋಲೆ ||ಮು||
ನಮ್ಮವ್ವ ಶರಣೆ ಕುಂತಾಳೆ ಕೋಲು ಕೋಲನ್ನ ಕೋಲೆ ||ಹಿ||

ಕೈ ಮುಗಿದು ಹಿಂದಕ್ಕೆ ಬಂದೀವಿ ಕೋಲು ಕೋಲನ್ನ ಕೋಲೆ ||ಮು||
ಕೈ ಮುಗಿದು ಹಿಂದಕ್ಕೆ ಬಂದೀವಿ ಕೋಲು ಕೋಲನ್ನ ಕೋಲೆ ||ಹಿ||

ಅಲ್ಲಿಗೆ ಹೋಗ್ಯಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಅಲ್ಲಿಗೆ ಹೋಗ್ಯಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಯೋಚನೆ ಮಾಡ್ಯಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಯೋಚನೆ ಮಾಡ್ಯಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಸತ್ಯುಳ್ಳ ಧರ್ಮರ ಸತ್ಯುಳ್ಳರಾದರೆ
ಜಂಬ ನೀಲದಮರ ಬೆಳೆಯಬಾರದೆ ಕೋಲು ಕೋಲನ್ನ ಕೋಲೆ ||ಮು||
ಜಂಬ ನೀಲದಮರ ಬೆಳೆಯಬಾರದೆ ಕೋಲು ಕೋಲನ್ನ ಕೋಲೆ ||ಹಿ||

ಜಂಬ ನೀಲದ ಮರ ಹುಟ್ಟಬಾರದೆ ಕೋಲು ಕೋಲನ್ನ ಕೋಲೆ ||ಮು||
ಜಂಬ ನೀಲದ ಮರ ಹುಟ್ಟಬಾರದೆ ಕೋಲು ಕೋಲನ್ನ ಕೋಲೆ ||ಹಿ||

ಬಾಯಿಯಾಗಳ ಮಾತು ಬಾಯಾಗ ಇರಲಿಕ್ಕೆ
ಜಂಬ ನೀಲದ ಮರವಾ ಹುಟ್ಯಾವ್ವಾ ಕೋಲು ಕೋಲನ್ನ ಕೋಲೆ ||ಮು||
ಜಂಬ ನೀಲದ ಮರವಾ ಹುಟ್ಯಾವ್ವಾ ಕೋಲು ಕೋಲನ್ನ ಕೋಲೆ ||ಹಿ||

ಗ್ಯಾನುಳ್ಳ ಧರ್ಮರು ಗ್ಯಾನುಳ್ಳರಾದರೆ
ಹೂವು ಕಾಯಾಗಿ ಜಡಿಯಬಾರದೆ ಕೋಲು ಕೋಲನ್ನ ಕೋಲೆ ||ಮು||
ಹೂವು ಕಾಯಾಗಿ ಜಡಿಯಬಾರದೆ ಕೋಲು ಕೋಲನ್ನ ಕೋಲೆ ||ಹಿ||

ಬಾಯಿಯಾಗಳ ಮಾತು ಬಾಯಾಗ ಇರಲಿಕ್ಕೆ
ಹೂವಾಗಿ ಮಗ್ಯಾಗಿ ಕಾಯಾಗಿ ಜಡೆದವವ್ವಾ ಕೋಲು ಕೋಲನ್ನ ಕೋಲೆ ||ಮು||
ಹೂವಾಗಿ ಮಗ್ಯಾಗಿ ಕಾಯಾಗಿ ಜಡೆದವವ್ವಾ ಕೋಲು ಕೋಲನ್ನ ಕೋಲೆ ||ಹಿ||

ಸತ್ಯುಳ್ಳ ಧರ್ಮರ ಸತ್ಯುಳ್ಳರಾದರೆ
ಕಾಯಿನೆ ಹಣ್ಣಾಗಿ ಜಡೆಯಬಾರದೆ ಕೋಲು ಕೋಲನ್ನ ಕೋಲೆ ||ಮು||
ಕಾಯಿನೆ ಹಣ್ಣಾಗಿ ಜಡೆಯಬಾರದೆ ಕೋಲು ಕೋಲನ್ನ ಕೋಲೆ ||ಹಿ||

ಬಾಯಿಯಾಗಳ ಮಾತು ಬಾಯಾಗ ಇರಲಿಕ್ಕೆ
ಕಾಯಿನೆ ಹಣ್ಣಾಗಿ ಜಡೆದವವ್ವಾ ಕೋಲು ಕೋಲನ್ನ ಕೋಲೆ ||ಮು||
ಕಾಯಿನೆ ಹಣ್ಣಾಗಿ ಜಡೆದವವ್ವಾ ಕೋಲು ಕೋಲನ್ನ ಕೋಲೆ ||ಹಿ||

ಕಾಯಿನೆ ಹಣ್ಣಾಗಿ ಜಡೆದವವ್ವಾ ಕೋಲು ಕೋಲನ್ನ ಕೋಲೆ ||ಮು||
ಕಾಯಿನೆ ಹಣ್ಣಾಗಿ ಜಡೆದವವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮರ ಹತ್ಯಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಮರ ಹತ್ಯಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಮರ ಹತ್ಯಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಮರ ಹತ್ಯಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಮರ ಹತ್ತಿ ಭೀಮ ಉಪ್ಯಾನವ್ವಾ ಕೋಲು ಕೋಲನ್ನ ಕೋಲೆ ||ಮು||
ಮರ ಹತ್ತಿ ಭೀಮ ಉಪ್ಯಾನವ್ವಾ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವನ ಮ್ಯಾಕ ಬಿದ್ದವವ್ವಾ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವನ ಮ್ಯಾಕ ಬಿದ್ದವವ್ವಾ ಕೋಲು ಕೋಲನ್ನ ಕೋಲೆ ||ಹಿ||

ಮುಚ್ಚಿದ ಕಣ್ಣು ತಗದಾಳವ್ವ ಕೋಲು ಕೋಲನ್ನ ಕೋಲೆ ||ಮು||
ಮುಚ್ಚಿದ ಕಣ್ಣು ತಗದಾಳವ್ವ ಕೋಲು ಕೋಲನ್ನ ಕೋಲೆ ||ಹಿ||

ಅವ್ವಣೆವ್ವ ಏನೊಂದೆ ನುಡಿದಾಳವ್ವಾ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಏನೊಂದೆ ನುಡಿದಾಳವ್ವಾ ಕೋಲು ಕೋಲನ್ನ ಕೋಲೆ ||ಹಿ||

ನಮ್ಮಣ್ಣನ ಮಕ್ಕಳಿಗೆ ಕೊಡಬೇಕೆ ಕೋಲು ಕೋಲನ್ನ ಕೋಲೆ ||ಮು||
ನಮ್ಮಣ್ಣನ ಮಕ್ಕಳಿಗೆ ಕೊಡಬೇಕೆ ಕೋಲು ಕೋಲನ್ನ ಕೋಲೆ ||ಹಿ||

ಬಿದ್ದು ಬಿದ್ದು ಹಣ್ಣು ಆರಿಸ್ಯಾಳೆ ಕೋಲು ಕೋಲನ್ನ ಕೋಲೆ ||ಮು||
ಬಿದ್ದು ಬಿದ್ದು ಹಣ್ಣು ಆರಿಸ್ಯಾಳೆ ಕೋಲು ಕೋಲನ್ನ ಕೋಲೆ ||ಹಿ||

ಮರವನ್ನು ಇಳಿದಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಮರವನ್ನು ಇಳಿದಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಮರವನ್ನು ಇಳಿದಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಮರವನ್ನು ಇಳಿದಾನೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||

ಹಣ್ಣಿನ ಸುಂಕಾ ಕೊಟ್ಟು ಹೋಗೆಜಾಣೆ ಕೋಲು ಕೋಲನ್ನ ಕೋಲೆ ||ಮು||
ಹಣ್ಣಿನ ಸುಂಕಾ ಕೊಟ್ಟು ಹೋಗೆಜಾಣೆ ಕೋಲು ಕೋಲನ್ನ ಕೋಲೆ ||ಹಿ||

ಹಣ್ಣಿನ ಸುಂಕಾ ಕೊಟ್ಟು ಹೋಗೆಜಾಣೆ ಕೋಲು ಕೋಲನ್ನ ಕೋಲೆ ||ಮು||
ಹಣ್ಣಿನ ಸುಂಕಾ ಕೊಟ್ಟು ಹೋಗೆಜಾಣೆ ಕೋಲು ಕೋಲನ್ನ ಕೋಲೆ ||ಹಿ||

ಅಡವ್ಯಾಳ ಹಣ್ಣೀಗೆ ಯಾತರ ಸುಂಕ ಜಾಣ ಕೋಲು ಕೋಲನ್ನ ಕೋಲೆ ||ಮು||
ಅಡವ್ಯಾಳ ಹಣ್ಣೀಗೆ ಯಾತರ ಸುಂಕ ಜಾಣ ಕೋಲು ಕೋಲನ್ನ ಕೋಲೆ ||ಹಿ||

ನಡುವಿನ ಪಟ್ಟಿ ಬಿಚ್ಚಿವಗೆದಾಳೋ ಜಾಣೆ ಬಿಚ್ಚಿವಗೆದಾಳೋ ಕೋಲು ಕೋಲನ್ನ ಕೋಲೆ ||ಮು||
ನಡುವಿನ ಪಟ್ಟಿ ಬಿಚ್ಚಿವಗೆದಾಳೋ ಜಾಣೆ ಬಿಚ್ಚಿವಗೆದಾಳೋ ಕೋಲು ಕೋಲನ್ನ ಕೋಲೆ ||ಹಿ||

ನಿನ್ನಂತ ಮಡದಿ ನನಗೆ ಇದ್ದರೆ ಆ ಪಟ್ಟಿ ವೈದು ಇಡುತ್ತಿದೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ನಿನ್ನಂತ ಮಡದಿ ನನಗೆ ಇದ್ದರೆ ಆ ಪಟ್ಟಿ ವೈದು ಇಡುತ್ತಿದೆ ಜಾಣೆ  ಕೋಲು ಕೋಲನ್ನ ಕೋಲೆ ||ಹಿ||

ಹಣ್ಣಿನ ಸುಂಕಾ ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಹಣ್ಣಿನ ಸುಂಕಾ ಕೊಟ್ಟು ಹೋಗೆ ಜಾಣೆ  ಕೋಲು ಕೋಲನ್ನ ಕೋಲೆ ||ಹಿ||

ಹಣ್ಣಿನ ಸುಂಕಾ ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಹಣ್ಣಿನ ಸುಂಕಾ ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಮು||