ಎತ್ತು ಬಂಡಿಗೆ ಸುಂಕಾ ಮೂಲಿ ಮುಕಟಿಗೆ ಸುಂಕಾ
ಅಡವ್ಯಾಳ ಹಣ್ಣಿಗೆ ಯಾತರ ಸುಂಕಾ ಜಾಣ ಕೋಲು ಕೋಲನ್ನ ಕೋಲೆ ||ಮು||
ಅಡವ್ಯಾಳ ಹಣ್ಣಿಗೆ ಯಾತರ ಸುಂಕಾ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಕಿವಿಯಾಗಳ ವಾಲಿ ಬಿಚ್ಚಿ ಹೋಗದ್ಲು ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕಿವಿಯಾಗಳ ವಾಲಿ ಬಿಚ್ಚಿ ಹೋಗದ್ಲು ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ನಿನ್ನಂತ ಮಡದಿ ನನಗೆ ಇದ್ದರೆ ಆ ವಾಲಿ ವೈದು ಇಡುತ್ತಿದೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ನಿನ್ನಂತ ಮಡದಿ ನನಗೆ ಇದ್ದರೆ ಆ ಪಟ್ಟಿ ವೈದು ಇಡುತ್ತಿದೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಹಣ್ಣಿನ ಸುಂಕಾ ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಹಣ್ಣಿನ ಸುಂಕಾ ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಅಡವ್ಯಾಗಳಾ ಹಣ್ಣಿಗೆ ಯಾತರ ಸುಂಕಾ ಜಾಣ ಕೋಲು ಕೋಲನ್ನ ಕೋಲೆ ||ಮು||
ಅಡವ್ಯಾಗಳಾ ಹಣ್ಣಿಗೆ ಯಾತರ ಸುಂಕಾಜಾಣ ಕೋಲು ಕೋಲನ್ನ ಕೋಲೆ ||ಹಿ||
ಅಡವ್ಯಾಗ ಯಾರಿಲ್ಲವೆಂದು ಅಡವಿಗೆ ನಾ ಬಂದೆ,
ಅಡವ್ಯಾಗ ನೀನೆಲ್ಲಿ ಕುಂತಿದ್ದೆ ಗಜಭೀಮ ಕೋಲು ಕೋಲನ್ನ ಕೋಲೆ ||ಮು||
ಅಡವ್ಯಾಗ ನೀನೆಲ್ಲಿ ಕುಂತಿದ್ದೆ ಗಜಭೀಮ ಕೋಲು ಕೋಲನ್ನ ಕೋಲೆ ||ಹಿ||
ಗ್ಯಾನ ಮೂಳಾ ಗಜ ಭೀಮ ಕೋಲು ಕೋಲನ್ನ ಕೋಲೆ ||ಮು||
ಗ್ಯಾನ ಮೂಳಾ ಗಜ ಭೀಮ ಕೋಲು ಕೋಲನ್ನ ಕೋಲೆ ||ಹಿ||
ನೀನೇನೆ ಕುಂತಿದ್ದೆ ಮುಳಾ ಗಜ ಭೀಮ ಕೋಲು ಕೋಲನ್ನ ಕೋಲೆ ||ಮು||
ನೀನೇನೆ ಕುಂತಿದ್ದೆ ಮುಳಾ ಗಜ ಭೀಮ ಕೋಲು ಕೋಲನ್ನ ಕೋಲೆ ||ಹಿ||
ಜಾಣ ಮೂಳಾ ಗಜ ಭೀಮ ಕೋಲು ಕೋಲನ್ನ ಕೋಲೆ ||ಮು||
ಜಾಣ ಮೂಳಾ ಗಜ ಭೀಮ ಕೋಲು ಕೋಲನ್ನ ಕೋಲೆ ||ಹಿ||
ನಿನ್ನ ಬೆನ್ನಟ್ಟಿ ಬಂದೀನೆ ನಾನೇ ಜಾಣೆ ಕೋಲು ಕೋಲನ್ನ ಕೋಲೆ ||ಮು||
ನಿನ್ನ ಬೆನ್ನಟ್ಟಿ ಬಂದೀನೆ ನಾನೇಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಬಂದೀನಿ ನಾನೇ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಬಂದೀನಿ ನಾನೇ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಭೀಮಗೆ ಸಿಟ್ಟು ಬಂದಾವವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಭೀಮಗೆ ಸಿಟ್ಟು ಬಂದಾವವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಬಂದವವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಬಂದವವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಮೆಲ್ಲ ಮೆಲ್ಲಕೆ ಹೆಜ್ಜೆ ಇಡುವುತಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಮೆಲ್ಲ ಮೆಲ್ಲಕೆ ಹೆಜ್ಜೆ ಇಡುವುತಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಇಡುವುತಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಇಡುವುತಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಮೆಲ್ಲ ಮೆಲ್ಲಕ್ಕೆ ಹೆಜ್ಜೆ ಇಡಬ್ಯಾಡೆ ಎಲೆ ಹೆಣ್ಣೆ
ಹಣ್ಣೀನ ಸುಂಕಾ ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಹಣ್ಣೀನ ಸುಂಕಾ ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಹಣ್ಣೀನ ಸುಂಕಾ ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಹಣ್ಣೀನ ಸುಂಕಾ ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕೊಟ್ಟು ಹೋಗೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಭೀಮಗೆ ರೋಷ ತುಂಬ್ಯಾವವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಭೀಮಗೆ ರೋಷ ತುಂಬ್ಯಾವವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ತುಂಬ್ಯಾವವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಮು||
ತುಂಬ್ಯಾವವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಹೊಕ್ಕು ಮುಂಗೈ ಇಡದಾನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಮು||
ಹೊಕ್ಕು ಮುಂಗೈ ಇಡದಾನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಇಡದಾನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಮು||
ಇಡದಾನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಹೊಕ್ಕು ಒಳದೆಡೆ ಕಚ್ಯಾನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಮು||
ಹೊಕ್ಕು ಒಳದೆಡೆ ಕಚ್ಯಾನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಕಚ್ಯಾನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಮು||
ಕಚ್ಯಾನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಹೊಕ್ಕಳ ತಡಿಯ ಕಚ್ಯಾನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಮು||
ಹೊಕ್ಕಳ ತಡಿಯ ಕಚ್ಯಾನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಕಚ್ಯಾನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಮು||
ಕಚ್ಯಾನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಒಂದು ದಿನ ಅಂಬೋದು ಒಂದು ತಿಂಗಳಾಗಿ
ಎರಡೆ ದಿನ ಅಂಬೋದು ಎರಡೆ ತಿಂಗಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಎರಡೆ ದಿನ ಅಂಬೋದು ಎರಡೆ ತಿಂಗಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಎರಡೆ ತಿಂಗಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಎರಡೆ ತಿಂಗಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಮೂರು ದಿನ ಅಂಬೋದು ನಾಕು ತಿಂಗಳೆ ಜಾಣ ಕೋಲು ಕೋಲನ್ನ ಕೋಲೆ ||ಮು||
ಮೂರು ದಿನ ಅಂಬೋದು ನಾಕು ತಿಂಗಳೆ ಜಾಣ ಕೋಲು ಕೋಲನ್ನ ಕೋಲೆ ||ಹಿ||
ನಾಕು ತಿಂಗಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ನಾಕು ತಿಂಗಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ನಾಕು ದಿನ ಅಂಬೋದು ಐದು ತಿಂಗಳು ಜಾಣ ಕೋಲು ಕೋಲನ್ನ ಕೋಲೆ ||ಮು||
ನಾಕು ದಿನ ಅಂಬೋದು ಐದು ತಿಂಗಳು ಜಾಣ ಕೋಲು ಕೋಲನ್ನ ಕೋಲೆ ||ಹಿ||
ಐದು ತಿಂಗಳು ಜಾಣ ಕೋಲು ಕೋಲನ್ನ ಕೋಲೆ ||ಮು||
ಐದು ತಿಂಗಳು ಜಾಣ ಕೋಲು ಕೋಲನ್ನ ಕೋಲೆ ||ಹಿ||
ಐದು ದಿನ ಅಂಬೋದು ಆರು ತಿಂಗಳು ಜಾಣ ಕೋಲು ಕೋಲನ್ನ ಕೋಲೆ ||ಮು||
ಐದು ದಿನ ಅಂಬೋದು ಆರು ತಿಂಗಳು ಜಾಣ ಕೋಲು ಕೋಲನ್ನ ಕೋಲೆ ||ಹಿ||
ಆರು ತಿಂಗಳು ಜಾಣ ಕೋಲು ಕೋಲನ್ನ ಕೋಲೆ ||ಮು||
ಆರು ತಿಂಗಳು ಜಾಣ ಕೋಲು ಕೋಲನ್ನ ಕೋಲೆ ||ಹಿ||
ಏಳು ದಿನ ಅಂಬೋದು ಎಂಟು ತಿಂಗಳು ಜಾಣೆ ಕೋಲು ಕೋಲನ್ನ ಕೋಲೆ ||ಮು||
ಏಳು ದಿನ ಅಂಬೋದು ಎಂಟು ತಿಂಗಳು ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಎಂಟು ತಿಂಗಳು ಜಾಣೆ ಕೋಲು ಕೋಲನ್ನ ಕೋಲೆ ||ಮು||
ಎಂಟು ತಿಂಗಳು ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಒಂಬತ್ತು ತಿಂಗಳು ತುಂಬ್ಯಾವವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಒಂಬತ್ತು ತಿಂಗಳು ತುಂಬ್ಯಾವವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ತುಂಬ್ಯಾವವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಮು||
ತುಂಬ್ಯಾವವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಸಂದು ಸಂದೆಲ್ಲಾ ಸವಾಬ್ಯಾನೆ ಜಾಣ ಕೋಲು ಕೋಲನ್ನ ಕೋಲೆ ||ಮು||
ಸಂದು ಸಂದೆಲ್ಲಾ ಸವಾಬ್ಯಾನೆ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಸವಾಬ್ಯಾನೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಸವಾಬ್ಯಾನೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಹೊತ್ತಿ ಹೊತ್ತಿಗೆ ಬ್ಯಾನಿ ಕತ್ತೀಲಿ ಕಡದಂಗ
ನಿತ್ತರಿಸಲಾರೆ ನಿಲ್ಲಲಾರೆ ಜಾಣ ಕೋಲು ಕೋಲನ್ನ ಕೋಲೆ ||ಮು||
ನಿತ್ತರಿಸಲಾರೆ ನಿಲ್ಲಲಾರೆ ಜಾಣ ಕೋಲು ಕೋಲನ್ನ ಕೋಲೆ ||ಹಿ||
ನಿಲ್ಲಲಾರೆ ಜಾಣ ಕೋಲು ಕೋಲನ್ನ ಕೋಲೆ ||ಮು||
ನಿಲ್ಲಲಾರೆ ಜಾಣ ಕೋಲು ಕೋಲನ್ನ ಕೋಲೆ ||ಹಿ||
ನಿತ್ತರಿಸಲಾರೆ ನಿಲ್ಲಲಾರೆ ಜಾಣ ಕೋಲು ಕೋಲನ್ನ ಕೋಲೆ ||ಮು||
ನಿತ್ತರಿಸಲಾರೆ ನಿಲ್ಲಲಾರೆ ಜಾಣ ಕೋಲು ಕೋಲನ್ನ ಕೋಲೆ ||ಹಿ||
ನಿಲ್ಲಲಾರೆ ಜಾಣ ಕೋಲು ಕೋಲನ್ನ ಕೋಲೆ ||ಮು||
ನಿಲ್ಲಲಾರೆ ಜಾಣ ಕೋಲು ಕೋಲನ್ನ ಕೋಲೆ ||ಹಿ||
ನಿತ್ತರಿಸಲಾರೆ ನಿಲ್ಲಲಾರೆ ಬದಿಯಲ್ಲಿ
ಅಕ್ಕವ್ವ ಇಲ್ಲಲ್ಲೊ ಮರುಗಾಕೋ ಜಾಣ ಕೋಲು ಕೋಲನ್ನ ಕೋಲೆ ||ಮು||
ಅಕ್ಕವ್ವ ಇಲ್ಲಲ್ಲೊ ಮರುಗಾಕೋ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಮರುಗಾಕೋ ಜಾಣ ಕೋಲು ಕೋಲನ್ನ ಕೋಲೆ ||ಮು||
ಮರುಗಾಕೋ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಜಾವ ಜಾವಕೆ ಬ್ಯಾನಿ ತಾಳ ಬಾರಿಸಿದಂಗ
ತಾಳಲಾರೆ ತಡಿಯಲಾರೆ ಜಾಣ ಕೋಲು ಕೋಲನ್ನ ಕೋಲೆ ||ಮು||
ತಾಳಲಾರೆ ತಡಿಯಲಾರೆ ಜಾಣ ಕೋಲು ಕೋಲನ್ನ ಕೋಲೆ ||ಹಿ||
ತಡಿಯಲಾರೆ ಜಾಣ ಕೋಲು ಕೋಲನ್ನ ಕೋಲೆ ||ಮು||
ತಡಿಯಲಾರೆ ಜಾಣ ಕೋಲು ಕೋಲನ್ನ ಕೋಲೆ ||ಹಿ||
ತಾಳಲಾರೆ ತಡಿಲಾರೆ ಬದಿಯಲ್ಲಿ
ತಾಯವ್ವ ಇಲ್ಲಲ್ಲೊ ಮರುಗಾಕೋ ಜಾಣ ಕೋಲು ಕೋಲನ್ನ ಕೋಲೆ ||ಮು||
ತಾಯವ್ವ ಇಲ್ಲಲ್ಲೊ ಮರುಗಾಕೋ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಮರುಗಾಕೋ ಜಾಣ ಕೋಲು ಕೋಲನ್ನ ಕೋಲೆ ||ಮು||
ಮರುಗಾಕೋ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಸತ್ಯ ಧರ್ಮರ ನೆನೆಯ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಸತ್ಯ ಧರ್ಮರ ನೆನೆಯ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ನೆನೆಯ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ನೆನೆಯ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಬಾಯಿಯಾಗಳ ಮಾತು ಬಾಯಾಗ ಇರಲಿಕ್ಕೆ
ಸತ್ಯ ಧರ್ಮರನ ನೆನೆದಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಸತ್ಯ ಧರ್ಮರನ ನೆನೆದಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ನೆನೆದಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ನೆನೆದಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಸತ್ಯಧರ್ಮರ ಸತ್ಯುಳ್ಳರಾದರೆ
ಕೂಸು ಮಾಸುಗಳ ಬೀಳಬಾರದೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕೂಸು ಮಾಸುಗಳ ಬೀಳಬಾರದೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಬೀಳಬಾರದೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಬೀಳಬಾರದೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಗ್ಯಾನುಳ್ಳಧರ್ಮರು ಗ್ಯಾನಾರಾದರೆ
ಕೂಸು ಮಾಸುಗಳ ಬಿದ್ದಾವಲ್ಲೇ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕೂಸು ಮಾಸುಗಳ ಬಿದ್ದಾವಲ್ಲೇ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಬಿದ್ದಾವಲ್ಲೇ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಬಿದ್ದಾವಲ್ಲೇ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಕೂಸಿನ ಮೈ ತೊಳಿಯಾಕೆ ನೀರು ಇಲ್ಲೊ ಜಾಣ ಕೋಲು ಕೋಲನ್ನ ಕೋಲೆ ||ಮು||
ಕೂಸಿನ ಮೈ ತೊಳಿಯಾಕೆ ನೀರು ಇಲ್ಲೊ ಜಾಣ ಕೋಲು ಕೋಲನ್ನ ಕೋಲೆ ||ಹಿ||
ನೀರು ಇಲ್ಲೊ ಜಾಣ ಕೋಲು ಕೋಲನ್ನ ಕೋಲೆ ||ಮು||
ನೀರು ಇಲ್ಲೊ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಸತ್ಯ ಧರ್ಮರನ ನೆನೆಯ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಸತ್ಯ ಧರ್ಮರನ ನೆನೆಯ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ನೆನೆಯ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ನೆನೆಯ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಸತ್ಯುಳ್ಳ ಧರ್ಮರ ಸತ್ಯುಳ್ಳರಾದರೆ
ಬಿಸಿನೀರಾ ಕಾಲ್ಯಾವು ತಿರುಗಬಾರದೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಬಿಸಿನೀರಾ ಕಾಲ್ಯಾವು ತಿರುಗಬಾರದೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ತಿರುಗಬಾರದೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ತಿರುಗಬಾರದೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಬಾಯಿಯಾಗಳ ಮಾತು ಬಾಯಾಗ ಇರಲಿಕ್ಕೆ
ಬಿಸಿನೀರ ಕಾಲ್ಯಾವು ತಿರುಗ್ಯಾವಲ್ಲೇ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಬಿಸಿನೀರ ಕಾಲ್ಯಾವು ತಿರುಗ್ಯಾವಲ್ಲೇ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ತಿರುಗ್ಯಾವಲ್ಲೇ ಜಾಣೆ ಕೋಲು ಕೋಲನ್ನ ಕೋಲೆ ||ಮು||
ತಿರುಗ್ಯಾವಲ್ಲೇ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಗ್ಯಾನುಳ್ಳ ಧರ್ಮದ ಗ್ಯಾನುಳ್ಳರಾದರೆ
ತಣ್ಣೀರು ಕಾಲೇವು ತಿರುಗಬಾರದೆ ಜಾಣ ಕೋಲು ಕೋಲನ್ನ ಕೋಲೆ ||ಮು||
ತಣ್ಣೀರು ಕಾಲೇವು ತಿರುಗಬಾರದೆ ಜಾಣ ಕೋಲು ಕೋಲನ್ನ ಕೋಲೆ ||ಹಿ||
ತಿರುಗಬಾರದೆ ಜಾಣ ಕೋಲು ಕೋಲನ್ನ ಕೋಲೆ ||ಮು||
ತಿರುಗಬಾರದೆ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಬಾಯಿಯಾಗಳ ಮಾತು ಬಾಯಗ ಇರಲಿಕ್ಕೆ
ತಣ್ಣೀರು ಕಾಲೇವು ತಿರುಗ್ಯಾವಲ್ಲೇ ಜಾಣೆ ಕೋಲು ಕೋಲನ್ನ ಕೋಲೆ ||ಮು||
ತಣ್ಣೀರು ಕಾಲೇವು ತಿರುಗ್ಯಾವಲ್ಲೇ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ತಿರುಗ್ಯಾವಲ್ಲೇ ಜಾಣೆ ಕೋಲು ಕೋಲನ್ನ ಕೋಲೆ ||ಮು||
ತಿರುಗ್ಯಾವಲ್ಲೇ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಕೂಸಿನ ಮೈಯ ತೊಳೆದಾಳಲ್ಲೋ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕೂಸಿನ ಮೈಯ ತೊಳೆದಾಳಲ್ಲೋ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ತೊಳೆದಾಳೋ ಜಾಣೆ ಕೋಲು ಕೋಲನ್ನ ಕೋಲೆ ||ಮು||
ತೊಳೆದಾಳೋ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಒಳದಡಿ ತೊಳೆದಾಳಲ್ಲೋ ಜಾಣ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಒಳದಡಿ ತೊಳೆದಾಳಲ್ಲೋ ಜಾಣ ಕೋಲು ಕೋಲನ್ನ ಕೋಲೆ ||ಹಿ||
ತೊಳೆದಾಳಲೋ ಜಾಣೆ ಕೋಲು ಕೋಲನ್ನ ಕೋಲೆ ||ಮು||
ತೊಳೆದಾಳಲೋ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಅವ್ವಣೆವ್ವ ಏನೊಂದು ನುಡಿದಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಅವ್ವಣೆವ್ವ ಏನೊಂದು ನುಡಿದಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ನುಡಿದಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ನುಡಿದಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಉರಿಗಳಾ ಕೊಯ್ಯೋ ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ಉರಿಗಳಾ ಕೊಯ್ಯೋ ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಹಿ||
ನೀನು ಕೊಯ್ಯಲೇ ಎಲೆ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ನೀನು ಕೊಯ್ಯಲೇ ಎಲೆ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಎಲೆ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಎಲೆ ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ನೀನು ಕೊಯ್ಯಲೋ ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ನೀನು ಕೊಯ್ಯಲೋ ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ನೀನು ಕೊಯ್ಯಲೋ ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ನೀನು ಕೊಯ್ಯಲೋ ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ಕೊರಕಲ್ಲು ಭೀಮ ತಂದನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಮು||
ಕೊರಕಲ್ಲು ಭೀಮ ತಂದನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಹಿ||
ತಂದನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಮು||
ತಂದನವ್ವಾ ಜಾಣ ಕೋಲು ಕೋಲನ್ನ ಕೋಲೆ ||ಹಿ||
ನಿನ್ನ ಉರಿಗಳ ನಾನೇನೇ ಕೊಯಿದೇನೆ ನನ್ನ ಮಗನೆ
ನನ್ನ ಉಡಿಯಾಕ ಮುಡಿಯೆ ಮಗನೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ನನ್ನ ಉಡಿಯಾಕ ಮುಡಿಯೆ ಮಗನೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಮುಡಿಯೆ ಮಗನೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಮುಡಿಯೆ ಮಗನೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಉರಿಗಳ ಭೀಮ ಕೊಯ್ದಾನವ್ವ ಜಾಣ ಕೋಲು ಕೋಲನ್ನ ಕೋಲೆ ||ಮು||
ಉರಿಗಳ ಭೀಮ ಕೊಯ್ದಾನವ್ವ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಕೊಯ್ದಾನವ್ವ ಜಾಣ ಕೋಲು ಕೋಲನ್ನ ಕೋಲೆ ||ಮು||
ಕೊಯ್ದಾನವ್ವ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಕೂಸಿನ ಕುಂಚ ಕಟ್ಟು ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕೂಸಿನ ಕುಂಚ ಕಟ್ಟು ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಕಟ್ಟು ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕಟ್ಟು ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಕೂಸಿನ ಕುಂಚ ಕಟ್ಟು ಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ಕೂಸಿನ ಕುಂಚ ಕಟ್ಟು ಭೀಮ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಕಟ್ಟು ಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ಕಟ್ಟು ಭೀಮ ಜಾಣ ಕೋಲು ಕೋಲನ್ನ ಕೋಲೆ ||ಹಿ||
ನಾನೇನು ಕಟ್ಟಿದರೆ ಮಂದಿ ನೋಡುತಾರೆ
ನಿನ್ನ ಕುಂಚ ಕಟ್ಟು ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ನಿನ್ನ ಕುಂಚ ಕಟ್ಟು ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಕಟ್ಟು ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕಟ್ಟು ಹೆಣ್ಣೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಕೂಸಿನ ಕುಂಚ ಕಟ್ಯಾಳವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕೂಸಿನ ಕುಂಚ ಕಟ್ಯಾಳವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಎಲ್ಲಿಗೋಗ್ಯಾನ ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ಎಲ್ಲಿಗೋಗ್ಯಾನ ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಹಿ||
ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ಗಜಭೀಮ ಜಾಣ ಕೋಲು ಕೋಲನ್ನ ಕೋಲೆ ||ಮು||
ಕೊಂತೆಮ್ಮ ಮಜ್ಜಿಗೆ ಮಾಡುತಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕೊಂತೆಮ್ಮ ಮಜ್ಜಿಗೆ ಮಾಡುತಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಮಜ್ಜಿಗೆ ಮಾಡುತಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಮಜ್ಜಿಗೆ ಮಾಡುತಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಮಜ್ಜಿಗೆ ಗಡಿಗೆ ಹಿಂದೆ ಕೂಸನ್ನು ಉಳ್ಳಬಿಟ್ಟ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಮಜ್ಜಿಗೆ ಗಡಿಗೆ ಹಿಂದೆ ಕೂಸನ್ನು ಉಳ್ಳಬಿಟ್ಟ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಉಳ್ಳಬಿಟ್ಟ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಉಳ್ಳಬಿಟ್ಟ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಧರ್ಮರಾ ಮನೆಗೆ ಹೋಗ್ಯಾಳವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಧರ್ಮರಾ ಮನೆಗೆ ಹೋಗ್ಯಾಳವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಹೋಗ್ಯಾಳವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಹೋಗ್ಯಾಳವ್ವಾ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಮಜ್ಜಿಗೆ ಗಡಿಗೆಗೆ ಕೂಸ ಉಳ್ಳಬಿಟ್ಲೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಮಜ್ಜಿಗೆ ಗಡಿಗೆಗೆ ಕೂಸ ಉಳ್ಳಬಿಟ್ಲೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಉಳ್ಳ ಬಿಟ್ಲೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಉಳ್ಳ ಬಿಟ್ಲೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ಕೊಂತೆಮ್ಮೆ ಬೆಣ್ಣೆ ತಗುದಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ಕೊಂತೆಮ್ಮೆ ಬೆಣ್ಣೆ ತಗುದಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
ತಗುದಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಮು||
ತಗುದಾಳೆ ಜಾಣೆ ಕೋಲು ಕೋಲನ್ನ ಕೋಲೆ ||ಹಿ||
Leave A Comment